ಅಭಿಪ್ರಾಯ / ಸಲಹೆಗಳು

Crime report in CEN Crime PS

ದಿನಾಂಕ: 03-04-2023 ರಂದು ಪಿರ್ಯಾದಿದಾರರಿಗೆ ಯಾರೋ ಅಪರಿಚಿತ ವ್ಯಕ್ತಿ ಮೊಬೈಲ್ ನಂಬ್ರ 09005920245 ನೇದರಿಂದ ಕರೆಮಾಡಿ ಎಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್  ಆಫೀಸ್ ನಿಂದ   ಕರೆಮಾಡಿರುವುದಾಗಿ ಪರಿಚಯಿಸಿಕೊಂಡು.ನಿಮ್ಮ ಕಾರ್ಡ್ ಆಕ್ಟಿವೇಷೇನ್ ಮಾಡಬೇಕಾಗಿದೆ ಎಂದು ತಿಳಿಸಿ  ಪಿರ್ಯಾದಿದಾರರ ಮೊಬೈಲ್ ನಲ್ಲಿ  ಪ್ಲೇಸ್ಟೋರ್ ನಿಂದ ಎಕ್ಸಿಸ್ ಬ್ಯಾಂಕ್ ಮೊಬೈಲ್ ಆ್ಯಫ್ ಇನ್ಸ್ಟಾಲ್  ಮಾಡಿಸಿ ಅದರಲ್ಲಿ ಬರುವ ಪೂರ್ತಿ ವಿವಿರಗಳನ್ನು ಬರ್ತಿಮಾಡುವಂತೆ ತಿಳಿಸಿ ಪಿರ್ಯಾದಿದಾರರಿಗೆ ಬಂದ ಒಟಿಪಿ ಯನ್ನು ಪಡೆದುಕೊಂಡು ಪಿರ್ಯಾದಿದಾರರ ಎಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ನಂಬ್ರ  ನೇದಿಂದ 91,115.20/- ರೂ ಗಳನ್ನು  ತಮ್ಮ ಖಾತೆಗೆ ಮೋಸದಿದಂದ ಪಾವತಿಸಿಕೊಂಡು ಆನ್ ಲೈನ್ ವಂಚನೆ ಮಾಡಿರುವುದಾಗಿದೆ ಎಂಬಿತ್ಯಾದಿ.

Ullal PS

ದಿನಾಂಕ. 27-06-2023 ರಂದು ಬೆಳಗ್ಗಿನ ಹೊತ್ತಿಗೆ ಉಳ್ಳಾಲ ತಾಲೂಕು ಉಳ್ಳಾಲ ಗ್ರಾಮದ ಮುಕ್ಕಚ್ಚೇರಿ ಕಿಲೇರಿಯ ಪರಿಸರದ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ಯುವಕನು ಯಾವುದೋ ಮಾದಕ ವಸ್ತುವನ್ನು ಸೇವಿಸಿ ನಶೆ ಹೊಂದಿ ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ವರ್ತಿಸುತ್ತಿದ್ದಾನೆ ಎಂಬುದಾಗಿ ಮಾಹಿತಿ ದೊರೆತ ಮೇರೆಗೆ ಬೆಳಿಗ್ಗೆ 11-00 ಗಂಟೆಯ ಸಮಯಕ್ಕೆ ಮಾಹಿತಿ ದೊರೆತ ಸ್ಥಳಕ್ಕೆ ತಲುಪಿದಾಗ ಅಲ್ಲಿನ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ಯುವಕನು ಯಾವುದೋ ನಶೆ ಬರುವ ವಸ್ತುವನ್ನು ಸೇವಿಸಿ ತೂರಾಡಿಕೊಂಡು ಸಾರ್ವಜನಿಕರಿಗೆ ತೊಂದರೆ ಆಗುವ ರೀತಿಯಲ್ಲಿ ವರ್ತಿಸುತ್ತಿರುವುದನ್ನು ಕಂಡು ವಿಚಾರಿಸಲಾಗಿ ಆತನು ನಿಷೇದಿತ ಮಾದಕ ವಸ್ತುವಿನ ತಂಬಾಕು ಸೇವನೆ ಮಾಡಿರುವುದಾಗಿ ತನ್ನ ತಪ್ಪನ್ನು ಒಪ್ಪಿಕೊಂಡಿರುತ್ತಾನೆ. ಸದ್ರಿ ವ್ಯಕಿಯ ಹೆಸರು ವಿಳಾಸ ವಿಚಾರಿಸಲಾಗಿ ಹಾರೀಸ್ (29) ವಾಸ. ಕೈಕೋ ರೋಡ್, ಮುಕ್ಕಚ್ಚೇರಿ, ಉಳ್ಳಾಲ ಗ್ರಾಮ ಮತ್ತು ತಾಲೂಕು ಎಂಬುದಾಗಿ ತಿಳಿಸಿರುತ್ತಾನೆ. ಸದ್ರಿ ಹಾರೀಸ್ ಕಾನೂನು ಬಾಹಿರವಾದ ನಿಷೇದಿತ ಮಾದಕ ದ್ರವ್ಯ ಸೇವನೆ ಸೇವನೆ ಮಾಡಿರುವ ಕಾರಣ ಮುಂದಿನ ಕ್ರಮದ ಬಗ್ಗೆ ದೇರಳಕಟ್ಟೆ ಕೆ.ಎಸ್.ಹೆಗ್ಡೆ ಚಾರಿಟೇಬಲ್ ಆಸ್ಪತ್ರೆಯ ವೈದ್ಯಾಧಿಕಾರಿಯವರ ಮುಂದೆ ಹಾಜರುಪಡಿಸಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿದಂತೆ ಸದ್ರಿ ವ್ಯಕಿಯು ಮಾದಕ ವಸ್ತು ಗಾಂಜಾ ಸೇವನೆ ಮಾಡಿರುವುದಾಗಿ ವೈದ್ಯಾಧಿಕಾರಿಯವರು ದೃಡಪತ್ರ ನೀಡಿರುತ್ತಾರೆ. ಕಾನೂನು ಬಾಹೀರ ನಿಷೇದಿತ ಮಾಧಕ ವಸ್ತು ಗಾಂಜಾ ಸೇವನೆ ಮಾಡಿರುವ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಂಡಿರುವುದಾಗಿದೆ ಎಂಬಿತ್ಯಾದಿ.

 

Mangalore East Traffic PS           

ಪಿರ್ಯಾದಿದಾರರಾದ ಪ್ರದೀಪ್ ಕುಮಾರ್ ಸಿ.ಎಸ್. ಎಂಬುವರು ದಿನಾಂಕ 25-06-2023 ರಂದು ರಾತ್ರಿ ಸಮಯ ಸುಮಾರು 9.50 ಗಂಟೆಗೆ ಬೆಂಗಳೂರಿಗೆ ಹೋಗಲು ಮಂಗಳೂರಿನ ಕರಾವಳಿ ಜಂಕ್ಷನ್ ಬಳಿ KA-20-AB-7850 ನೊಂದಣಿ ನಂಬ್ರದ ಸುಗಮಾ ಎಂಬ ಹೆಸರಿನ ಖಾಸಗಿ ಬಸ್ಸನ್ನು ಹತ್ತಿ ಒಂದೆರೆಡು ಹೆಜ್ಜೆ ಮುಂದೆ ಹೋಗುತ್ತಿದ್ದಂತೆ ಬಸ್ಸಿನ ಚಾಲಕನಾದ ಹರೀಶ್ ಎಂಬಾತನು ಒಮ್ಮೆಲೆ ಏಕಾಏಕಿಯಾಗಿ ಬಸ್ಸನ್ನು ಮುಂದಕ್ಕೆ ಚಲಾಯಿಸಿ ಅಜಾಗರೂಕತೆಯಿಂದ ಒಮ್ಮೆಲೆ ಬ್ರೇಕ್  ಹಾಕಿದ್ದರಿಂದ ಪಿರ್ಯಾದಿದಾರರು ಬಸ್ಸಿನ ಒಳಗಡೆ ಅಳವಡಿಸಿದ ಸಪೋರ್ಟ್ ರಾಡ್ ಮೇಲೆ ಬಿದ್ದಿದ್ದು, ಅವರ ಮೇಲೆ ಇತರೆ ಎರಡು ಜನ ಪ್ರಯಾಣಿಕರು  ಬಿದ್ದಿದ್ದರಿಂದ ಎಡಕೈ ಕೋಲು ಕೈಯಲ್ಲಿ ಒಳಪೆಟ್ಟಾದ ನೋವು ಉಂಟಾಗಿದ್ದು, ಪಿರ್ಯಾದಿದಾರರು  ಅದೇ ಬಸ್ಸಿನಲ್ಲಿ ಪ್ರಯಾಣವನ್ನು ಮುಂದುವರಿಸಿ ಚಿಕಿತ್ಸೆಯ ಬಗ್ಗೆ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ ಹೋಗಿದ್ದು, ಪರೀಕ್ಷಿಸಿದ ಅಲ್ಲಿನ ವೈದ್ಯರು ಪಿರ್ಯಾದಿದಾರರ ಎಡ ಕೈ ಕೋಲು ಕೈಯಲ್ಲಿ ಮೂಳೆ ಮುರಿತವಾದ ಗಾಯವಾಗಿರುವುದಾಗಿ ತಿಳಿಸಿರುತ್ತಾರೆ ಎಂಬಿತ್ಯಾದಿ.

Mangalore East Traffic PS

ಪಿರ್ಯಾದಿದಾರರಾದ  ಮಂಗಳೂರು  ಪೂರ್ವ ಪೊಲೀಸ್ ಠಾಣಾ  ಮ.ಹೆಚ್.ಸಿ ಶ್ರೀಮತಿ ಚಂದ್ರಾವತಿ.ಪಿ.ಎನ್ ಇವರು ದಿನಾಂಕ 26-06-2023 ರಂದು ಮಾನ್ಯ ಪೊಲೀಸ್ ಆಯುಕ್ತರ ಕಚೇರಿ ಹೋಗಿ ನಂತರ ತನ್ನ ಬಾಬ್ತು  ಸ್ಕೂಟರ್ ನಂಬ್ರ  KA-19-HC-7990 ನೇದರಲ್ಲಿ ಸವಾರಳಾಗಿ ನಗರದ  ಕರಂಗಲ್ಪಾಡಿ ಕಡೆಯಿಂದ  ಬಿಜೈ ಜಂಕ್ಷನ್ ಕಡೆಗೆ ಬಿಜೈ ಚರ್ಚ್ ರೋಡ್ ರಸ್ತೆಯಲ್ಲಿ ಚಲಾಯಿಸಿಕೊಂಡು ಬರುತ್ತಾ  ರಾತ್ರಿ ಸಮಯ ಸುಮಾರು 7.30 ಗಂಟೆಗೆ ಬಿಜೈ ಚರ್ಚ್ ಹಾಲ್ ಬಳಿ ಇರುವ ಎಸ್.ಎಲ್.ವಿ ಬುಕ್ ಹೌಸ್ ಎದುರು ತಲುಪಿದಾಗ ಅದೇ ರಸ್ತೆಯಲ್ಲಿ ಮೋಟಾರು ಸೈಕಲ್ ನಂಬ್ರ  KA-19-HL-5274 ನೇದನ್ನು ಅದರ ಸವಾರ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಸ್ಕೂಟರಿನ ಹಿಂದುಗಡೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ಸ್ಕೂಟರ್ ಸಮೇತ ಕಾಂಕ್ರೀಟ್ ರಸ್ತೆಗೆ ಬಿದ್ದು ಬಲ ಕಾಲಿನ ಪಾದದ ಗಂಟಿಗೆ ಮೂಳೆ ಜೋಡಣೆ ಬಿಟ್ಟ ಮತ್ತು  ಮೂಳೆ ಮುರಿತದ  ಗಂಭೀರ ತರಹದ ಗಾಯವಾಗಿರುವುದಾಗಿದೆ ಎಂಬಿತ್ಯಾದಿಯಾಗಿರುತ್ತದೆ.

Traffic North Police Station

ಪಿರ್ಯಾದಿ K. Kalidas ಸ್ನೇಹಿತನಾದ ರಾಜೇಂದ್ರ (30 ವರ್ಷ) ಎಂಬವರು ದಿನಾಂಕ 26.06.2023 ರಂದು ಮದ್ಯಾಹ್ನ ಸಮಯ ಸುಮಾರು 3:30 ಗಂಟೆಗೆ ಮಂಗಳೂರು ತಾಲೂಕು, Near AEGIS Plant ಹತ್ತಿರ ತಣ್ಣಿರುಬಾವಿ ಕಡೆಗೆ ಹೋಗುವ ರಸ್ತೆಯನ್ನು ದಾಟುತ್ತಿರುವಾಗ ತಣ್ಣಿರುಬಾವಿ ಕಡೆಯಿಂದ KIOCL ಕಡೆಗೆ ಕಾರು ನಂಬ್ರ KA-20MB-2243 ನೇಯದನ್ನು ಅದರ ಚಾಲಕ ಸತೀಶ್ ಖಾರ್ವಿ ಎಂಬವರು ತೀರಾ ನಿರ್ಲಕ್ಷತನದಿಂದ ರಸ್ತೆಯ ತೀರಾ ಬಲಬದಿಗೆ ಚಲಾಯಿಸಕೊಂಡು ಬಂದು ರಸ್ತೆ ದಾಟುತ್ತಿದ್ದ ರಾಜೇಂದ್ರರವರಿಗೆ ಢಿಕ್ಕಿ ಪಡಿಸಿದ ಪರಿಣಾಮ ರಾಜೇಂದ್ರರವರ ಬಲಕೈ ಕೋಲುಕೈಗೆ ಮೂಳೆ ಮುರಿತದ ಗಾಯ, ಹಾಗೂ ಬಲ ಕೈ ಉಂಗುರ ಬೆರಳಿಗೆ ರಕ್ತ ಗಾಯವಾಗಿದ್ದು ಗಾಯಾಳು ರಾಜೇಂದ್ರರವರನ್ನು ಅಫಘಾತ ಪಡಿಸಿದ ಕಾರಿನ ಚಾಲಕ ಚಿಕಿತ್ಸೆಯ ಬಗ್ಗೆ ಕುಂಟಿಕಾನ ಎ.ಜೆ. ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ರಾಜೇಂದ್ರರವರಿಗೆ ಚಿಕಿತ್ಸೆ ನೀಡಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ.

Traffic South Police Station

ದಿನಾಂಕ 26-06-2023 ರಂದು ಪಿರ್ಯಾದಿದಾರರಾರ ಸೈಯದ್ ಜಾಫರ್ ರವರ ಅತ್ತೆ ದುಲೈಖಾ ರವರು ಕುತ್ತಾರ್ ಕಡೆಯಿಂದ ತೊಕ್ಕೊಟ್ಟು ಕಡೆಗೆ ಹೋಗುವ ರಸ್ತೆಯ ಎಡಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಸಮಯ ಸುಮಾರು  ಬೆಳಿಗ್ಗೆ 09.45 ಗಂಟೆಗೆ ಪಂಡಿತ್ ಹೌಸ್ ಬಬ್ಬುಕಟ್ಟೆ ಶಾಲೆ ಬಳಿ  ತಲುಪುತ್ತಿದ್ದಂತೆ ಅದೇ ರಸ್ತೆಯಲ್ಲಿ ಅಂದರೆ ಕುತ್ತಾರು ಕಡೆಯಿಂದ ಬರುತ್ತಿದ್ದ ಮೋಟಾರ್ ಸೈಕಲ್ ನೊಂದಣಿ ಸಂಖ್ಯೆ  KA-19-HD-9308  ನೇದನ್ನು ಅದರ ಸವಾರ ವಿಕಾಸ್ ಎಂಬಾತನು  ದುಡುಕುತನ ಮತ್ತು ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಬಂದು ದುಲೈಖಾ ರವರಿಗೆ ಡಿಕ್ಕಿ ಪಡಿಸಿದ ಪರಿಣಾಮ ದುಲೈಖಾ ರವರು ರಸ್ತೆಗೆ ಬಿದ್ದು ಅವರ ತಲೆಯ ಎಡಬದಿಗೆ ಗುದ್ದಿದ ರೀತಿಯ ರಕ್ತಗಾಯ, ಬಲಕಾಲಿಗೆ ಮೂಳೆ ಮುರಿತದ ಗಾಯ, ಎಡಕಾಲಿನ ಗಂಟಿಗೆ ತರಚಿದ ಗಾಯವಾಗಿದ್ದವರನ್ನು ಅಲ್ಲಿ ಸೇರಿದ ಜನರು ಆಟೋರಿಕ್ಷಾವೊಂದರಲ್ಲಿ ಚಿಕಿತ್ಸೆಯ ಬಗ್ಗೆ ದೇರಳಕಟ್ಟೆ ಯೆನಪೊಯಾ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ವೈದ್ಯರು ಅವರನ್ನು ಪರೀಕ್ಷಿಸಿ ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ.  ಎಂಬಿತ್ಯಾದಿ.

Bajpe PS

ದಿನಾಂಕ 26.06.2023 ರಂದು 14.00  ಗಂಟೆಗೆ ಮಂಗಳೂರು ತಾಲೂಕು ಮೂಳೂರು ಗ್ರಾಮದ ಗುರುಪುರ ಕೈಕಂಬದ ಪೊಳಲಿ ದ್ವಾರದ  ಬಳಿ ಬಂದಾಗ ಅಲ್ಲಿ ಒಬ್ಬ ಯುವಕನೊಬ್ಬ ಅಮಲಿನಲ್ಲಿದ್ದಂತೆ ಕಂಡು ಬಂದಿದ್ದು ವಿಚಾರಿಸಿದಾಗ  ಕಿರಣ್ ಕೆ ಎಸ್ ,ಪ್ರಾಯ:19 ವರ್ಷ, ವಾಸ:31 ಎಕೆರೆ ದೇವೆಗೌಡ ಬಡವಾಣೆ ಮುತ್ತುಮಾರಮ್ಮ ದೇವಸ್ಥಾನದ ಬಳಿ 2 ನೇ ಬಿದಿ ಕಡೂರು ತಾಲೂಕು ಚಿಕ್ಕಮಗಳೂರು ಜಿಲ್ಲೆ  ಎಂಬುದಾಗಿ ತಿಳಿಸಿದ್ದು ಆತನನ್ನು ವಿಚಾರಿಸಲಾಗಿ ಸೀಗರೇಟ್ ಒಳಗೆ ಗಾಂಜಾ ತುಂಬಿಸಿ  ಸೇದುತ್ತಿರುವುದಾಗಿ ಒಪ್ಪಿಕೊಂಡಿದ್ದು ತಜ್ಞ ವೈಧ್ಯರಲ್ಲಿ ಕಳುಹಿಸಿಕೊಟ್ಟಲ್ಲಿ ವೈದ್ಯರು ಸದ್ರಿಯವರನ್ನು ಪರೀಕ್ಷೆಗೆ ಒಳಪಡಿಸಿ ಗಾಂಜಾ ಸೇವನೆ ಮಾಡಿರುವ ಬಗ್ಗೆ ದೃಡಪತ್ರ ನೀಡಿರುತ್ತಾರೆ ಎಂಬಿತ್ಯಾದಿ

 

 

 

Bajpe PS

ದಿನಾಂಕ 26.06.2023 ರಂದು  14.30  ಗಂಟೆಗೆ ಮಂಗಳೂರು ತಾಲೂಕು ಮೂಳೂರು ಗ್ರಾಮದ ಗುರುಪುರ ಬಂಗ್ಲೆಗುಡ್ಡೆ ಎಂಬಲ್ಲಿ    ಅಲ್ಲಿ ಒಬ್ಬ ಯುವಕನೊಬ್ಬ ಅಮಲಿನಲ್ಲಿದ್ದಂತೆ ಕಂಡು ಬಂದಿದ್ದು ಹೆಸರು ಕೇಳಲಾಗಿ ವೆಂಕಟೇಶ್ ಜಿ ,ಪ್ರಾಯ:19 ವರ್ಷ, ವಾಸ:31 ಎಕೆರೆ ದೇವೆಗೌಡ ಬಡವಾಣೆ ಮುತ್ತುಮಾರಮ್ಮ ದೇವಸ್ಥಾನದ ಬಳಿ 2 ನೇ ಬಿದಿ ಕಡೂರು ತಾಲೂಕು ಚಿಕ್ಕಮಗಳೂರು ಜಿಲ್ಲೆ  ಎಂಬುದಾಗಿ ತಿಳಿಸಿದ್ದು  ಆತನು ಸೀಗರೇಟ್ ಒಳಗೆ ಗಾಂಜಾ ತುಂಬಿಸಿ  ಸೇದುತ್ತಿರುವುದಾಗಿ ಒಪ್ಪಿಕೊಂಡಿದ್ದು ತಜ್ಞ ವೈಧ್ಯರಲ್ಲಿ ಕಳುಹಿಸಿಕೊಟ್ಟಲ್ಲಿ ವೈದ್ಯರು ಸದ್ರಿಯವರನ್ನು ಪರೀಕ್ಷೆಗೆ ಒಳಪಡಿಸಿದ ಗಾಂಜಾ ಸೇವನೆ ಮಾಡಿರುವ ಬಗ್ಗೆ ದೃಡಪತ್ರ ನೀಡಿರುತ್ತಾರೆ ಎಂಬಿತ್ಯಾದಿ

Bajpe PS

ಪಿರ್ಯಾದಿ Sahul Hameed 2021  ನೇ ಇಸವಿಯಲ್ಲಿ ಬಕ್ರಿದ್ ಹಬ್ಬದ ಪ್ರಯುಕ್ತ ಕುರಿಗಳನ್ನು ಬೇರೆ ಕಡೆಗಳಿಂದ ತಂದು ಮಂಗಳೂರಿನಲ್ಲಿ ಮಾರಾಟ ಮಾಡವ ಬಗ್ಗೆ ಯೋಚನೆ ಮಾಡುತ್ತಾ ಯೂಟ್ಯೂಬ್ ನಲ್ಲಿ ಹುಡುಕುವ ಸಮಯ ರಾಜಸ್ಥಾನ ರಾಜ್ಯದ ಕುರಿ ವ್ಯಾಪಾರಿ ‘LUKEY GOAT FARM’ ಇವರ ಬಗ್ಗೆ ಮಾಹಿತಿಯನ್ನು ತಿಳಿದುಕೊಂಡು Farm ನ ಮಾಲಕರಾದ Ghanshyam Chawla .ಪರಿಚಯ ಮಾಡಿಕೊಂಡು ಸದ್ರಿಯವರ ಜೊತೆ ಪಿರ್ಯಾದಿದಾರರು ಫೋನ್ ನಲ್ಲಿ ಮಾತುಕತೆ ನೆಡೆಸಿ ಕೆಜಿಗೆ 270/- ರೂಪಾಯಿಯಂತೆ ರಾಜಸ್ಥಾನದಿಂದ ಮಂಗಳೂರಿಗೆ ಕುರಿಗಳನ್ನು ತಂದು ತೂಕ ಮಾಡಿಕೊಡುತ್ತೇವೆ ಎಂದು ಹೇಳಿದ್ದು ಅದಕ್ಕೆ ಪಿರ್ಯಾದಿದಾರರು ಒಪ್ಪಿಕೊಂಡಿದ್ದು 300 ಕುರಿಗಳಿಗೆ Ghanshyam Chawla ರವರು ಹೇಳಿದಂತೆ ವಿವಿದ ಖಾತೆಗಳಿಂದ ಸದ್ರಿಯವರ ಖಾತೆಗಳಿಗೆ ಒಟ್ಟು 15 ಲಕ್ಷ ರೂಪಾಯಿ ಹಣವನ್ನು ವರ್ಗಾವಣೆ ಮಾಡಿದ್ದು ಹಣವನ್ನು ಪಡೆದುಕೊಂಡ Ghanshyam Chawla ರವರು ಸುಮಾರು 1 ರಿಂದ 1 ½ ತಿಂಗಳುಗಳ ಕಾಲ ಕುರಿಗಳನ್ನು ಸರಿಯಾದ ಸಮಯಕ್ಕೆ ಕಳಹಿಸಿರುವುದಿಲ್ಲ ನಂತರ ಪಿರ್ಯಾದಿದಾರರ ತಮ್ಮ ಸಂಬಂದಿಕರಾದ ಫಾಜಿಲ್ ರವರ ಜೊತೆ 03/07/2021 ರಂದು ಮಂಗಳೂರಿನಿಂದ ರಾಜಸ್ಥಾನಕ್ಕೆ ಹೋಗಿ ‘Ghanshyam Chawla ರವರನ್ನು ಬೇಟಿ ಮಾಡಿದ್ದು ಅಲ್ಲಿಯೂ ಕೂಡ ಆರೋಪಿಯಾದ Ghanshyam Chawla ರವರು ಪಿರ್ಯಾದಿದಾರರಿಗೆ ಸರಿಯಾದ ಸ್ಪಂದನೆ ನೀಡದೆ ಅವರ ಪಾಲುದಾರನಾದ ಮನೀಷ್ ರವರ ಜೊತೆ ಸೇರಿ ಪಿರ್ಯಾದಿದಾರರಿಗೆ ಮೊದಲು ತಿಳಿಸಿದ ಬೆಲೆಗೆ ಕುರಿಗಳನ್ನು ಕೊಡಲು ಸಾದ್ಯವಿಲ್ಲ ಎಂದು ತಿಳಿಸಿದ್ದು ನಂತರ ಪಿರ್ಯಾದಿದಾರರಿಂದ 300 ಕುರಿಗಳಿಗೆ ಇನ್ನೂ ಹೆಚ್ಚುವರಿಯಾಗಿ 7 ಲಕ್ಷ ರೂಗಳನ್ನು ಅವರ ಖಾತೆಗೆ ವರ್ಗಾಯಿಸಿಕೊಂಡಿದ್ದು 2 ಲಕ್ಷ ರೂಪಾಯಿಯನ್ನು ನಗದು ರೂಪಾಯಿ ಪಡೆದುಕೊಂಡು ನಂತರ Ghanshyam Chawla ಹಾಗೂ ಮನೀಷ ರವರು RJ28GA 0926 ನೇ ನಂಬ್ರದ ಲಾರಿಯಲ್ಲಿ 300 ಕುರಿಗಳನ್ನು ಲೋಡ್ ಮಾಡಿರುವುದಾಗಿ ತಿಳಿಸಿದ್ದು ಬಳಿಕ ಪಿರ್ಯಾದಿದಾರರು ಮಂಗಳೂರಿನಲ್ಲಿ ಕುರಿಗಳನ್ನು ಅನ್ ಲೋಡ್ ಮಾಡಿ ಲೆಕ್ಕ ಮಾಡಿದಾಗ ಅದರಲ್ಲಿ 300 ಕುರಿಗಳ ಬದಲಿಗೆ 120 ಕುರಿಗಳನ್ನು ಮಾತ್ರ ಇರುವುದು ಕಂಡು ಬಂದಿದ್ದು ಇದರಿಂದ ಪಿರ್ಯಾದಿದಾರರಿಗೆ ಸುಮಾರು 12 ಲಕ್ಷ ರೂಪಾಯಿಗಳನ್ನು ಮೋಸ ಮಾಡಿದ್ದು ಪಿರ್ಯಾದಿದಾರರು ಹಣವನ್ನು ಕೇಳಿದಾಗ ಇವತ್ತು ನಾಳೆ ಕೊಡುತ್ತೇವೆ ಎಂದು ಪಿರ್ಯಾದಿದಾರರಿಗೆ ನಂಬಿಸಿದ್ದು ಸದ್ರಿ ಆರೋಪಿಯು ಪಿರ್ಯಾದಿದಾರರ ಹಾಗೆ ಇತರರಿಗೂ ಮೋಸ ಮಾಡಿರುವುರಿಂದ  ಸೂಕ್ತ ಕ್ರಮಕ್ಕಾಗಿ ಪಿರ್ಯಾದಿ ಎಂಬಿತ್ಯಾದಿ

Moodabidre PS

ಮೆಸರ್ಸ್ ಕಾಮತ್ ಇಂಡಸ್ಟ್ರೀಸ್ ನ ಪಾಲುದಾರರಾದ ಎ ಸುರೇಂದ್ರ ಕಾಮತ್ ಎಂಬುವರು ತನ್ನ ಪರಿಚಯದ ಮೂಡಬಿದ್ರೆ ಧನಲಕ್ಷ್ಮಿ ಕ್ಯಾಶ್ಯು ಪ್ರೈ ಲಿ ನ ನಿರ್ದೇಶಕರಾದ ಕೆ. ಶ್ರೀಪತಿಭಟ್ ಇವರೊಂದಿಗೆ ಧನಲಕ್ಷ್ಮಿ ಕ್ಯಾಶ್ಯು ಪ್ರೈ ಲಿ ಸಂಸ್ತೆಗೆ ಸೇರಿದ್ದ ಪುತ್ತೂರು ತಾಲೂಕು ನರಿಮೊಗರು ಗ್ರಾಮದ ಸರ್ವೆ ನಂಬ್ರ 279/1A ರಲ್ಲಿ 0.66 ಸೆನ್ಸ್ ಜಾಗ ಮತ್ತು ಅದರಲ್ಲಿರುವ ಕಟ್ಟಡಗಳನ್ನು ಖರೀದಿ ಮಾಡುವ ಸಲುವಾಗಿ ಶ್ರೀ ಶ್ರೀಪತಿ ಭಟ್ ರವರು ನೀಡಿದ  ಬರವಸೆಯಂತೆ ತಾನು ಸಂಸ್ಥೆಗೆ ಸೇರಿದ ಈ ಮೇಲಿನ ಸ್ಥಿರಾಸ್ತಿಯನ್ನು ಮಾರಾಟ ಮಾಡಲು ಅಧಿಕಾರವನ್ನು ಎಲ್ಲಾ ನಿರ್ದೇಶಕರು ತನಗೆ ನಿಡಿರುತ್ತಾರೆ. ಎಂಬುದಾಗಿ ನಂಬಿಸಿ 90,00,000/- ರೂ ಗಳಿಗೆ ನಾನು ಖರೀದಿ ಮಾಡುವ ಸಲುವಾಗಿ ನಮ್ಮೊಳಗೆ ಮಾತುಕತೆಯಾಗಿ ಖರಾರು ವೇಳೆ 21,60,000/- ಮುಂಗಡ ಹಣವನ್ನು ಬ್ಯಾಂಕ್ ಖಾತೆಯ ಮೂಲಕ ನೀಡಿ ಖರಾರು ಪತ್ರವನ್ನು ದಿನಾಂಕ 13-03-2013 ರಂದು ಮಾಡಿಕೊಂಡಿರುತ್ತೇವೆ. ಬಳಿಕ ಸದ್ರಿ ಶ್ರೀಪತಿ ಭಟ್ ರವರಲ್ಲಿ ಉಳಿಕೆ ಹಣವನ್ನು ಪಡಕೊಂಡು ಸದ್ರಿ ಸ್ಥಿರಾಸ್ತಿಯನ್ನು ಸೇಲ್ ಡೀಡ್ ಮೂಲಕ ನನಗೆ ನೊಂದಾಯಿಸಿಕೊಡುವಂತೆ ಅನೇಕ ಬಾರಿ ಕೇಳಿಕೊಂಡರು ವಿವಿಧ ಕಾರಣಗಳನ್ನು ಹೇಳುತ್ತಾ ಸಮಯ ದೂಡಿದ್ದರು. ಇತ್ತೀಚಿಗೆ ನಾನು ಈ ಜಾಗದ ಬಗ್ಗೆ ಪರಿಶೀಲಿಸುವ ಸಲುವಾಗಿ ವೆಬ್ ಸೈಟ್ ನಲ್ಲಿ ಜಾಗಕ್ಕೆ ಸಂಬಮಧಿಸಿದ ಆರ್.ಟಿ.ಸಿ ನ್ನು ಪರಿಶೀಲಿಸಿದಾಗ ಸದ್ರಿ ಆಸ್ತಿಯನ್ನು 2020 ಜುಲೈ 6 ರಂದು ಶ್ರೀಪತಿ ಭಟ್ ರವರು ಡಿ ಎಸ್ ಕ್ಯಾಶ್ಯು ಸಂಸ್ಥೆಯ ಪಾಲುದಾರರಾದ ಡಿ. ಶೇಖಬ್ಬ ಎಂಬುರಿಗೆ ಮಾರಾಟ ಮಾಡಿರುವುದು ತಿಳಿದು ಬಂತು. ಈ ಬಗ್ಗೆ ನಾನು ಕೂಲಂಕುಶವಾಗಿ ಪರಿಶೀಲಿಸಿದಾಗ ಸದ್ರಿ ಶ್ರೀ ಪತಿ ಭಟ್ ರವರು ನಮ್ಮೊಳಗೆ ಆಗಿರುವ ಖರಾರು ಪತ್ರದ ನಂತರದ ದಿನಗಳಲ್ಲಿ ಸದ್ರಿ ಸ್ಥಿರಾಸ್ತಿಗೆ ಸಂಬಂಧಿಸಿದಂತೆ ಬರವಸೆ ನೀಡಿದ ಯಾವುದೇ ಕೆಲಸಗಳನ್ನು ಮಾಡದೇ ತನ್ನ ಸಂಸ್ಥೆಗೆ ಸಂಬಂಧಿಸಿದ ಶ್ರೀಪತಿ ಬಲರಾಮ್, ವೆಂಕಟೇಶ್ ವಿ. ಆರ್ ಮತ್ತು ಡಿ ಎಸ್ ಕ್ಯಾಶ್ಯು ಸಂಸ್ಥೆಯ ಪಾಲುದಾರರಾದ ಡಿ ಶೇಖಬ್ಬ ರವರೊಂದಿಗೆ ಸೇರಿಕೊಂಡು ನನಗೆ ವಂಚಿಸಿ ಮೋಸ ಮಾಡುವ ಉದ್ದೇಶದಿಂದ ನನಗೆ ಈಗಾಗಲೇ ಮಾರಾಟ ಮಾಡಲು ನಿರ್ದರಿಸಿ ಮುಂಗಡ ಹಣವನ್ನು ಪಡಕೊಂಡು ಖರಾರು ಪತ್ರ ಮಾಡಿಕೊಂಡ ಶರತ್ತುಗಳನ್ನು ಉಲ್ಲಂಗಿಸಿ ಸದ್ರಿ ಸ್ಥಿರಾಸ್ತಿಯನ್ನು ತನ್ನ ಪರಿಚಯದ ಡಿ ಎಸ್ ಕ್ಯಾಶ್ಯು ಸಂಸ್ಥೆಯ ಪಾಲುದಾರರಾದ ಶ್ರೀ ಡಿ ಶೇಖಬ್ಬ ಎಂಬುವರಿಗೆ ಮಾರಾಟ ಮಾಡಿರುತ್ತಾರೆ. ಎಂಬಿತ್ಯಾದಿ.

 

Ullal PS         

ದಿನಾಂಕ.26-06-2023 ರಂದು  13-00 ಗಂಟೆಯ ಸಮಯಕ್ಕೆ ಸೋಮೆಶ್ವರ ಗ್ರಾಮದ ಶಾಂತಿಭಾಗ್ ಯೇನೆಪೋಯ ಆಸ್ಪತ್ರೆಯ ಹಿಂಬದಿ ಪರಿಸರದ ಸಾರ್ವಜನಿಕ ಸ್ಥಳದಲ್ಲಿ ಆರೋಪಿಗಳಾದ  ಮೊಹಮ್ಮದ್ ಇರ್ಫಾನ್ ಮತ್ತು ಅಬ್ದುಲ್ ಸಲ್ಮಾನ್, ನಿಷೇದಿತ ಮಾದಕ ವಸ್ತುವನ್ನು ಗಾಂಜಾ ಸೇವಿಸಿಕೊಂಡು ಸಾರ್ವಜನಿಕರಿಗೆ ತೊಂದರೆ ಆಗುವ ರೀತಿಯಲ್ಲಿ ವರ್ತಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಉಳ್ಳಾಲ ಠಾಣಾ ಪಿಎಸ್ಐ.ಪ್ರದೀಪ್ ಟಿ.ಆರ್ ರವರು ಸಿಬ್ಬಂದಿಯವರ ಜೊತೆಯಲ್ಲಿ ಪತ್ತೆ ಮಾಡಿ ದೇರಳಕಟ್ಟೆ ಜಸ್ಟೀಸ್ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ವೈದ್ಯಾಧಿಕಾರಿಯವರ ಮುಂದೆ ತಪಾಸಣೆಗೊಳಪಡಿಸಿ ಮೊಹಮ್ಮದ್ ಇರ್ಫಾನ್ ಮತ್ತು ಅಬ್ದುಲ್ ಸಲ್ಮಾನ್ ಗಾಂಜಾಸೇವನೆ ಮಾಡಿರುವುದಾಗಿ ಸದ್ರಿ ಆಸ್ಪತ್ರೆಯ ವೈದ್ಯಾಧಿಕಾರಿಯವರು ಅಭಿಪ್ರಾಯದೊಂದಿಗೆ ದೃಢಪತ್ರ ನೀಡಿರುವುದರಿಂದ ಸದ್ರಿ ಮೊಹಮ್ಮದ್ ಇರ್ಫಾನ್ ಮತ್ತು ಅಬ್ದುಲ್ ಸಲ್ಮಾನ್ ರವರು ಗಳ ವಿರುದ್ದ ಸೂಕ್ತ ಕ್ರಮಕ್ಕಾಗಿ ಪಿರ್ಯದಿದಾರರು ನೀಡಿದ ದೂರಿನ ಮೇರೆಗೆ ನೀಡಿದ ಪ್ರಕರಣದ ಸಾರಂಶ

 

 

 

 

 

 

 

ಇತ್ತೀಚಿನ ನವೀಕರಣ​ : 21-08-2023 02:01 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080