ಅಭಿಪ್ರಾಯ / ಸಲಹೆಗಳು

 

 Crime Report in Mulki PS

ಫಿರ್ಯಾಧಿ Amitha ದಾರರ ಗಂಡ ದೇವದಾಸ,ಪ್ರಾಯ:52 ವರ್ಷ ಎಂಬವರು ದಿನಾಂಕ:25-07-2023 ರಂದು ಬೆಳಿಗ್ಗೆ 9-30 ಗಂಟೆಗೆ ತನ್ನ ಮನೆಯಾದ ಮುಲ್ಕಿ ತಾಲೂಕು  ಹಳೆಯಂಗಡಿ ಗ್ರಾಮದ ಕದ್ರಾತೋಟ ಎಂಬಲ್ಲಿಂದ ಕೆಲಸಕ್ಕೆಂದು ಹೋದವರು ಕೆಲಸಕ್ಕೂ ಹೋಗದೇ ವಾಪಾಸ್ಸು ಮನೆಗೂ ಬಾರದೇ ಕಾಣೆಯಾಗಿರುತ್ತಾರೆ ಎಂಬಿತ್ಯಾದಿಯಾಗಿದೆ.

ಕಾಣೆಯಾದವರ ಚಹರೆ:-

ಹೆಸರು: ದೇವದಾಸ, ಪ್ರಾಯ:52 ವರ್ಷ

ಎತ್ತರ:5”6.

ಮೈಬಣ್ಣ: ಎಣ್ಣೆ ಕಪ್ಪು

ಮುಖ: ಕೋಲು ಮುಖ

    

CEN Crime PS

ಪಿರ್ಯಾದಿದಾರರು 2023 ನೇ ಮೇ ತಿಂಗಳಿನಲ್ಲಿ ತನ್ನ ಮೊಬೈಲ್ ನಲ್ಲಿ ಗೂಗಲ್ ಪ್ಲೇಸ್ಟೋರ್ ನಿಂದ AUTO LOAN ಎಂಬ ಆನ್ ಲೈನ್ ಲೋನ್ ಆಪ್ ನ್ನು ಇನ್ಸ್ಟಾಲ್ ಮಾಡಿ ಸದ್ರಿ ಆಪ್ ಮೂಲಕ ರೂ 3,500/- ಸಾಲ ಪಡೆಯಲು ಅರ್ಜಿ ಹಾಕಿದ್ದು ಈ ಬಗ್ಗೆ ಸದ್ರಿ ಆಪ್ ನವರು  ಪಿರ್ಯಾದಿದಾರರ ಕೆನರಾ ಬ್ಯಾಂಕ್ ಖಾತೆ ಸಂಖ್ಯೆ: ನೇಯದಕ್ಕೆ ರೂ 2800/- ಜಮಾ ಮಾಡಿರುತ್ತಾರೆ. ಪಿರ್ಯಾದಿದಾರರು ಸಾಲ ಪಡೆದುಕೊಂಡ ಹಣವನ್ನು ಬಡ್ಡಿ ಸಮೇತ ದಿನಾಂಕ: 26/07/2023 ರ ಒಳಗಾಗಿ ಪಾವತಿ ಮಾಡಬೇಕಾಗಿದ್ದುದರಿಂದ ದಿನಾಂಕ: 19/07/2023 ರಂದು ರೂ 1400/- ಗಳನ್ನು ಸದ್ರಿ ಲೋನ್ ಆಪ್ ನವರು ವಾಟ್ಸ್ ಆಪ್ ಮೂಲಕ ಕಳುಹಿಸಿಕೊಟ್ಟ UPI id: pintu5585@sbi ನೇಯದಕ್ಕೆ ಪಿರ್ಯಾದಿದಾರರ ಕೆನರಾ ಬ್ಯಾಂಕ್ ಖಾತೆಯಿಂದ ಪಾವತಿ ಮಾಡಿರುತ್ತಾರೆ. ತದನಂತೆ ಉಳಿದ ಹಣವನ್ನು ದಿನಾಂಕ: 26/07/2023 ರಂದು ವಾಟ್ಸ್ಆಪ್ ಮೂಲಕ ಕಳುಹಿಸಿಕೊಟ್ಟ UPI ID:koni77@kotak ನೇಯದಕ್ಕೆ ರೂ 1,400/- ಮತ್ತು UPI ID: mdmustafareza1809@ibl ನೇಯದಕ್ಕೆ ರೂ 1,400/-  ಹೀಗೆ ಹಂತ ಹಂತವಾಗಿ ಪಿರ್ಯಾದಿದಾರರು ಪಡೆದುಕೊಂಡ ಲೋನ್ ಗೆ ಒಟ್ಟು ರೂ 4,200/- ಗಳನ್ನು ಪಾವತಿ ಮಾಡಿರುತ್ತಾರೆ. ನಂತರ ದಿನಾಂಕ: 26/07/2023 ರಂದು ಅಪರಿಚಿತ ವ್ಯಕ್ತಿಯು +265880462448 ನೇ ವಾಟ್ಸ್ ಆಪ್ ನಂಬ್ರದಿಂದ ಪಿರ್ಯಾದಿದಾರರ ಮೊಬೈಲ್ ಕೋಂಟಾಕ್ಟ್ ಲಿಸ್ಟ್ ನಲ್ಲಿರುವ ಪಿರ್ಯಾದಿದಾರರ ತಂದೆಯ, ಸಂಬಂಧಿಕರ ಹಾಗೂ ಕಾಲೇಜಿನ ಅಧ್ಯಾಪಕರ ವಾಟ್ಸ್ ಆಪ್ ನಂಬ್ರಗಳಿಗೆ ಪಿರ್ಯಾದಿದಾರರ ಭಾವಚಿತ್ರವನ್ನು ಮತ್ತು ಪಿರ್ಯಾದಿದಾರರ ಸಂಪರ್ಕದಲ್ಲಿರುವ ಇತರರ ಭಾವಚಿತ್ರವನ್ನು ಅಶ್ಲೀಲ ಭಾವಚಿತ್ರದೊಂದಿಗೆ ಎಡಿಟ್ ಮಾಡಿ ಪಿರ್ಯಾದಿದಾರರು ಲೋನ್ ಪಾವತಿ ಮಾಡಿರುವುದಿಲ್ಲವೆಂದು ಅಶ್ಲೀಲ ಸಂದೇಶವನ್ನು ರವಾನೆ ಮಾಡಿರುತ್ತಾರೆ. ಪಿರ್ಯಾದಿದಾರರು ಲೋನ್ ತೆಗೆಯುವ ಬಗ್ಗೆ ಆಪ್ ನ್ನು ಇನ್ಸ್ಟಾಲ್ ಮಾಡುವ ಸಮಯದಲ್ಲಿ ಅಪರಿಚಿತ ವ್ಯಕ್ತಿಗಳು ಪಿರ್ಯಾದಿದಾರರ ಮೊಬೈಲ್ ನಲ್ಲಿ ಶೇಖರಣೆ ಗೊಂಡಿದ್ದ ಮೊಬೈಲ್ ನಂಬ್ರಗಳನ್ನು ಪಿರ್ಯಾದಿದಾರರಿಗೆ ಅರಿವಿಲ್ಲದೇ ಶೇಖರಿಸಿಕೊಂಡು ಪಿರ್ಯಾದಿದಾರರಿಗೆ ತೊಂದರೆ ನೀಡುವ ಉದ್ದೇಶದಿಂದ ಪಿರ್ಯಾದಿದಾರರ ಭಾವಚಿತ್ರವನ್ನು ಹಾಗೂ ಸಂಪರ್ಕದಲ್ಲಿರುವ ಇತರರ ಭಾವಚಿತ್ರಗಳನ್ನು ಅಶ್ಲೀಲ ರೀತಿಯಲ್ಲಿ ಎಡಿಟ್ ಮಾಡಿ ವಾಟ್ಸ್ ಆಪ್ ಮೂಲಕ ಪಿರ್ಯಾದಿದಾರರ ಸಂಬಂಧಿಕರಿಗೆ ಹಾಗೂ ಇತರರಿಗೆ ರವಾನಿಸಿದ ಅಪರಿಚಿತ ವ್ಯಕ್ತಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂಬಿತ್ಯಾದಿ ದೂರಿನ ಸಾರಾಂಶ.

Mulki PS

ಫಿರ್ಯಾಧಿ Mahesh ದಾರರ ಹೆಂಡತಿ ಶ್ರೀಮತಿ ಸುಪ್ರೀತ, ಪ್ರಾಯ:33 ವರ್ಷ ಎಂಬಾಕೆಯು ತಾನು ವಾಸವಾಗಿರುವ ತಾಳಿಪಾಡಿ ಗ್ರಾಮದ ಬಾಡಿಗೆ ಮನೆಯಿಂದ  ದಿನಾಂಕ: 23-07-2023 ರಂದು ಬೆಳಗ್ಗೆ 08-30 ಗಂಟೆಗೆ  ತಾನು ತನ್ನ ಅತ್ತೆಯ ಮನೆಗೆ ಹೋಗಿ ಬರುತ್ತೇನೆಂದು ಹೋದವಳು ಈ ವರೆಗೆ ವಾಪಾಸ್ಸು ಬಾರದೆ ಕಾಣೆಯಾಗಿರುತ್ತಾರೆ ಎಂಬಿತ್ಯಾದಿಯಾಗಿದೆ.

 

Urva PS

ಪಿರ್ಯಾದಿ PADMANBHA  PRABHU ದಾರರ  ಮನೆಯಲ್ಲಿ  ಮೇ-2023  ರಿಂದ  ಪಿರ್ಯಾದಿದಾರರ  ತಾಯಿಯ  ಆರಯಕೆ  ನಿಮಿತ್ತಾ  ಸ್ವಾತಿ  ಆರ್  ಗೌಡರ್ (23)  ತಂದೆ:  ರವೀಂದ್ರ  ಗೌಡರ್  ವಾಸ:  ನಯದವಳ್ಳಿ  ತೀರ್ಥಹಳ್ಳಿ ಶಿವಮೊಗ್ಗ   ವರನ್ನು  ಹೋಂ  ನರ್ಸ್ ಕೆಲಸಕ್ಕೆ  ನೇಮಿಸಿದ್ದು,  ಆಕೆಯು  ದಿನಾಂಕ  24.07.2023  ರಂದು  ಸಂಜೆ  4:00  ಗಂಟೆಗೆ  ಆಕೆಯ  ಊರಿಗೆ  ಹೋಗಿ  ಬರುವುದಾಗಿ  ತಿಳಿಸಿ  ಮನೆಯಿಮದ  ಹೋದವಳು  ಈ  ವರೆಗೆ  ಆಕೆಯ  ಮನೆಗೂ  ಹೋಗದೆ  ,  ವಾಪಾಸ್ಸು  ಪಿರ್ಯಾದಿದಾರರ  ಮನೆಗೂ  ಬಾರದೆ  ಕಾಣೆಯಾಗಿರುತ್ತಾಳೆ. ಆಕೆಯನ್ನು  ಪತ್ತೆ  ಮಾಡಿಕೊಡಬೇಕಾಗಿ  ನೀಡಿದ ಪಿರ್ಯಾದಿಯ  ಸಾರಾಂಶವಾಗಿದೆ. 

 

 

Panambur PS

ದಿನಾಂಕ 26-07-2023 ರಂದು ಮಂಗಳೂರು ತಾಲೂಕು ಪಣಂಬೂರು ಗ್ರಾಮದ ಕೂರಿಕಟ್ಟ ರಾಮಾಂಜನೇಯ ಸಭಾಭವನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟು ಎಲೆಗಳೊಂದಿಗೆ ಹಣವನ್ನು ಪಣವಾಗಿಟ್ಟು ಆಡುತ್ತಿದ್ದಾರೆಂಬ ಮಾಹಿತಿ ಅನುಸಾರ ಸ್ಥಳಕ್ಕೆ 19-05 ಗಂಟೆಗೆ ದಾಳಿ ನಡೆಸಿ ಅಲ್ಲಿ ಹಣವನ್ನು ಪಣವಾಗಿಟ್ಟು ಇಸ್ಪೀಟು ಎಲೆಗಳಿಂದ ಅಂದರ್ ಬಾಹರ್ ಎಂಬ ಅದೃಷ್ಟದಾಟವಾಡುತ್ತಿದ್ದ 1) ಜಯಶೀಲ 2) ಪುನೀತ್ ಎಂಬವರನ್ನು ವಶಕ್ಕೆ ಪಡೆದು ಅವರುಗಳಿಂದ ಒಟ್ಟು 1350/- ರೂಪಾಯಿ ನಗದು ಹಣ, 52 ಇಸ್ಪೀಟ್ ಎಲೆಗಳನ್ನು ಹಾಗೂ ಹಳೆಯ ನ್ಯೂಸ್ ಪೇಪರನ್ನು ಸ್ವಾಧೀನಪಡಿಸಿಕೊಂಡು, ಆರೋಪಿಗಳ ಮೇಲೆ ಮತ್ತು ಸ್ಥಳದಿಂಧ ಓಡಿ ಹೋದ ಇಬ್ಬರು ಆರೋಪಿಗಳ ಮೇಲೆ ಪ್ರಕರಣ ದಾಖಲಿ ತನಿಖೆ ಕೈಗೊಂಡಿರುವುದು ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 21-08-2023 02:20 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080