ಅಭಿಪ್ರಾಯ / ಸಲಹೆಗಳು

Crime Reported in : Traffic South Police Station               

ದಿನಾಂಕ;26-08-2022 ರಂದು ಪಿರ್ಯಾದಿ MUMTHAJ ದಾರರು ಮತ್ತು ಅವರ ಮಗಳಾದ ಸುನೈನಾರೊಂದಿಗೆ ತೊಕ್ಕೊಟ್ಟು ಯುನಿಟಿ ಹಾಲ್ ಎದುರುಗಡೆ ಇರುವ ಹೋಟೆಲ್ ಒಂದಕ್ಕೆ ತಿಂಡಿ ತರಲು ಹೋಗಿ ವಾಪಾಸ್ಸು ಮನೆ ಕಡೆಗೆ ಬರಲು ರಸ್ತೆ ದಾಟುತ್ತಿರುವಾಗ ಸಮಯ ಸುಮಾರು ರಾತ್ರಿ 8-15 ಗಂಟೆಗೆ ತಲಪಾಡಿ ಕಡೆಯಿಂದ ಮಂಗಳೂರು ಕಡೆಗೆ ಹೋಗುವ ರಾ.ಹೆ -66 ರಲ್ಲಿ ಮೋಟಾರ್ ಸೈಕಲ್ ನಂಬ್ರ:KA-19-ET-1426 ನೇದರ ಸವಾರ ಪ್ರಮೀತ್ ಅಪೋಸ್ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಮೋಟಾರ್ ಸೈಕಲ್ ನ್ನು ಸವಾರಿ ಮಾಡಿಕೊಂಡು ಬಂದು ರಸ್ತೆ ದಾಟುತ್ತಿದ್ದ ಪಿರ್ಯಾದಿದಾರರು ಮತ್ತು ಅವರ ಮಗಳು ಸುನೈನಾ ರವರಿಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ಮತ್ತು ಸುನೈಮಾ ಡಾಮಾರು ರಸ್ತೆಗೆ ಬಿದ್ದು ಈ ಅಪಾಘತದಿಂದ ಪಿರ್ಯಾದಿದಾರರಿಗೆ ಎರಡು ಕಾಲಿನ ಮೊಣಕಾಲಿಗೆ ತರಚಿದ ಗಾಯ ಹಾಗೂ ಎಡಕೈ ಭುಜಕ್ಕೆ ಗುದ್ದಿದ ಗಾಯ ಹಾಗೂ ಮುಂದಿನ ಹಲ್ಲು ಮುರಿತದ ಗಾಯವಾಗಿದ್ದು ಮತ್ತು ಸುನೈನಾ ರವರಿಗೆ ಬಲಗೈನ ಮಧ್ಯದ ಬೆರಳು ಹಾಗೂ ಉಂಗುರದ ಬೆರಳಿಗೆ ಮೂಳೆ ಮುರಿತದ ಗಾಯ,ತಲೆಯ ಬಲಭಾಗಕ್ಕೆ ಗುದ್ದಿದ ಗಾಯ,ಬಲಕೋಲು ಕಾಲಿಗೆ ಗುದ್ದಿದ ಗಾಯ ಹಾಗೂ ಬಲಭುಜಕ್ಕೆ ಗುದ್ದಿದ ಗಾಯವಾಗಿದ್ದು ಅಲ್ಲಿ ಸೇರಿದ ಜನರು ಗಾಯಾಳುಗಳನ್ನು ಚಿಕಿತ್ಸೆ ಬಗ್ಗೆ ಆಟೋರಿಕ್ಷಾವೊಂದರಲ್ಲಿ ತೊಕ್ಕೊಟ್ಟು ನೇತಾಜಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಅಲ್ಲಿ ಪ್ರಥಮ ಚಿಕಿತ್ಸೆ ಪಡೆದು ನಂತರ ಸುನೈನಾ ರವರ ಮೈದುನಾ ಅಸ್ಲಾಂ ರವರು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ನಗರದ ಹೈಲ್ಯಾಂಡ್ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿರುತ್ತಾರೆ .ಎಂಬಿತ್ಯಾದಿ.

                           

Crime Reported in : Surathkal PS

ದಿನಾಂಕ 26-08-2022 ರಂದು 18-00 ಗಂಟೆಗೆ  ಮಂಗಳೂರು ತಾಲೂಕು ಕಾಟಿಪಳ್ಳ ಗ್ರಾಮದ ಎಮ್.ಅರ್.ಪಿ.ಎಲ್ ಚರ್ಚ್ ರಸ್ತೆ ಬಳಿ ಚರ್ಚ್ ರಸ್ತೆ ಕಡೆ ದಾರಿ ದೀಪದ ಕೆಳಗಡೆ ಒಬ್ಬಾತ ವ್ಯಕ್ತಿಯು ಕೈಯಲ್ಲಿ ಒಂದು ಪೇಪರನ್ನು ಹಾಗೂ ಕೆಲವು ಚೀಟಿಗಳನ್ನು ಇಟ್ಟುಕೊಂಡು ಪೆನ್ ನಿಂದ ಅಲ್ಲಿಗೆ ಬರುತ್ತಿದ್ದ ಕೂಲಿಯಾಳುಗಳು ಹೇಳಿದ ನಂಬ್ರವನ್ನು ಬರೆದು ಅವರುಗಳ ಕೈಯಿಂದ ಚೀಟಿಯಲ್ಲಿ ಪೆನ್ ನಿಂದ ಅಂಕೆಗಳನ್ನು ಬರೆದು ಕೊಟ್ಟು ಕೂಲಿಯಾಳುಗಳಿಂದ ಹಣವನ್ನು ಸಂಗ್ರಹಿಸಿ ಮಟ್ಕಾ ಎಂಬ ನಸೀಬಿನ ಜೂಜಾಟವನ್ನು ಆಡುತ್ತಿರುವವರನ್ನು ವಶಕ್ಕೆ ಪಡೆದು ಅವರು ಹಾಜರುಪಡಿಸಿದ ಒಟ್ಟು ಸುಮಾರು ಮೊತ್ತ 5230 ಇದ್ದು ಈ ಹಣವನ್ನು ಮಟ್ಕಾ ಎಂಬ ಓ.ಸಿ. ಆಟದಿಂದ ಸಂಪಾದಿಸಿದ ಹಣವಾಗಿರುವುದಾಗಿ ತಿಳಿಸಿದ್ದು.  ಅರೋಪಿತನ ವಶದಲ್ಲಿದ್ದ ಒಟ್ಟು ಮೊತ್ತ 5230 ಹಾಗೂ ಚೀಟಿಗಳನ್ನು, ನಂಬ್ರ ಬರೆದಿರುವ ಪೇಪರ್ ಹಾಗೂ ಇದಕ್ಕೆ ಬಳಸಿರುವ ಪೆನ್ ಮತ್ತು ಕ್ಯಾಲುಕ್ಯಲೇಟರ್ ಗಳನ್ನು ಸ್ವಾದೀನಪಡಿಸಿಕೊಂಡು ಹಾಗೂ ಅರೋಪಿಯನ್ನು ವಶಕ್ಕೆ ಪಡೆದು ಆರೋಪಿ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದು  ಎಂಬಿತ್ಯಾದಿ.

 

Crime Reported in : Mangalore South PS                                 

ಪಿರ್ಯಾದಿದಾರರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಬಟ್ಕಳ ತಾಲೂಕಿನ ನಿವಾಸಿಯಾಗಿದ್ದು, ಮಂಗಳೂರಿಗೆ ಬಂದು ಸುಮಾರು 12 ವರ್ಷಗಳಿಂದ ಬೋಳಾರದ ಮಾರಿಗುಡಿ ದೇವಸ್ಥಾನದಲ್ಲಿ ಅರ್ಚಕನಾಗಿ ಕೆಲಸ ಮಾಡಿಕೊಂಡಿದ್ದು, ಹಾಲಿ ಮಾರಿಗುಡಿ ದೇವಸ್ಥಾನದ ಹತ್ತಿರ, ಬೋಳಾರ, ಮಂಗಳೂರು ವಿಳಾಸದಲ್ಲಿ ತನ್ನ ಹೆಂಡತಿ ಜೊತೆಯಲ್ಲಿ  ವಾಸವಾಗಿರುತ್ತಾರೆ.  ದಿನಾಂಕ: 24.08.2022 ರಂದು ಸಂಜೆ ಸುಮಾರು 07:00 ಗಂಟೆಗೆ ಮಾರಿಗುಡಿ ದೇವಸ್ಥಾನದಲ್ಲಿ ಪೂಜೆ ಮುಗಿಸಿಕೊಂಡು ಮನೆಗೆ ಬಂದಾಗ ಪಿರ್ಯಾದಿದಾರರ ಹೆಂಡತಿ ಮನೆಯಲ್ಲಿ ಕಾಣಿಸದೇ ಇದ್ದು , ಕೂಡಲೇ ಅಕ್ಕ ಪಕ್ಕದ ಮನೆಯವರಲ್ಲಿ ವಿಚಾರಿಸಲಾಗಿ ಯಾವುದೇ ಮಾಹಿತಿ ದೊರೆಯಲಿಲ್ಲ, ಈ ಬಗ್ಗೆ ಸ್ನೇಹಿತರಲ್ಲಿ, ಮತ್ತು ಸಂಬಂಧಿಕರಲ್ಲಿ ವಿಚಾರಿಸಿದಲ್ಲಿ ಯಾವುದೇ ಮಾಹಿತಿಯು ಸಿಕ್ಕಿರುವುದಿಲ್ಲ, ಹಾಗೂ ಅವರು ಎಲ್ಲಿ ಹೋಗಿದ್ದಾರೆಂದು ಪಿರ್ಯಾದಿದಾರರಿಗೆ ತಿಳಿದು ಬರುವುದಿಲ್ಲ, ಆದುದರಿಂದ ಕಾಣೆಯಾದ ಹೆಂಡತಿ ಶ್ರೀಮತಿ ಪ್ರೇಮಾ [20] ರವರನ್ನು ಪತ್ತೆಮಾಡಿಕೊಡಬೇಕಾಗಿ ಈ ಮೂಲಕ ವಿನಂತಿ ಎಂಬಿತ್ಯಾಧಿ ಪ್ರಕರಣದ ಸಾರಾಂಶವಾಗಿದೆ.

ಕಾಣೆಯಾದ ಶ್ರೀಮತಿ ಪ್ರೇಮಾ ರವರ ಚಹರೆ:-                                                                  

 

ಎತ್ತರ: ಸುಮಾರು 5 ಅಡಿ 5 ಇಂಚು

ಬಣ್ಣ : ಎಣ್ಣೆ ಗಪ್ಪು, ಮೈ ಬಣ್ಣ                            

ಬಿಳಿ ಬಣ್ಣದ ಫ್ಯಾಂಟ್ ಮತ್ತು ಕಪ್ಪು ಬಣ್ಣದ ಟೀ ಶರ್ಟ್ ಧರಿಸಿರುತ್ತಾರೆ.

ಭಾಷೆ: ಕನ್ನಡ ಮಾತನಾಡುತ್ತಾರೆ.

 

ಇತ್ತೀಚಿನ ನವೀಕರಣ​ : 27-08-2022 03:20 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080