ಅಭಿಪ್ರಾಯ / ಸಲಹೆಗಳು

Crime Report in  Barke PS                

ದಿನಾಂಕ 27-09-2023 ರಂದು ಬೆಳಿಗ್ಗೆ 11-30 ಗಂಟೆಗೆ ಮಂಗಳೂರು ನಗರದ ಲೇಡಿಹಿಲ್ ಬಳಿ ಪ್ರತ್ಯಕ್ಷ ಪ್ರಾಯ 26 ವರ್ಷ ವಾಸ: ಶ್ರೀ ನಿತ್ಯಾನಂದ ಪ್ರಸಾದ, ಕೊಪ್ಪಲಕಾಡು, ಯೆಯ್ಯಾಡಿ, ಕೊಂಚಾಡಿ, ಮಂಗಳೂರು ಎಂಬಾತನು ಅಮಲಿನಲ್ಲಿದ್ದಂತೆ ಕಂಡು ಬಂದಿದ್ದು ವಶಕ್ಕೆ ಪಡೆದು ವಿಚಾರಿಸಿದಾಗ ಗಾಂಜಾ ಸೇವನೆ ಮಾಡಿರುವುದಾಗಿ ಒಪ್ಪಿಕೊಂಡಿದ್ದು ಆತನನ್ನು  ಮಂಗಳೂರು ಏ.ಜೆ ಆಸ್ಪತ್ರೆಯ ವೈದ್ಯರ ಮುಂದೆ ವೈದ್ಯಕೀಯ ತಪಾಸಣೆ ಬಗ್ಗೆ ಹಾಜರುಪಡಿಸಿದಲ್ಲಿ  ವೈಧ್ಯರು ಯುವಕನನ್ನು ವೈಧ್ಯಕೀಯ ತಪಾಸಣೆಯನ್ನು ಮಾಡಿ “Tetrahydracannabinoid (Marijuana) POSITIVE”  ಎಂಬುದಾಗಿ ದೃಡಪತ್ರವನ್ನು ನೀಡಿದ್ದು, ಆಪಾದಿತನ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದು ಎಂಬಿತ್ಯಾದಿ.

CEN Crime PS

ಪಿರ್ಯಾದಿದಾರರಿಗೆ ಯಾರೋ ಅಪರಿಚಿತ ವ್ಯಕ್ತಿ ಫೇಸ್ ಬುಕ್ (Jennifer Phillips) ಎಂಬ ಖಾತೆಯ ಮೂಲಕ ಸಂದೇಶ ಕಳುಹಿಸಿ Jennifer Phillips ಎಂಬ ಮಹಿಳೆಯ ಹೆಸರಿನಿಂದ ಪರಿಚಯಿಸಿಕೊಂಡು ತುಂಬಾ ಆತ್ಮೀಯವಾಗಿ ಪಿರ್ಯಾದಿದಾರರಿಗೆ ಮೆಸೆಂಜರ್ ಮೂಲಕ ಸಂದೇಶ ಕಳುಹಿಸಿ ನಂತರ ಪಿರ್ಯಾದಿದಾರರ ವಾಟ್ಸ್ ಆಪ್ ನಂಬ್ರ ಪಡೆದುಕೊಂಡಿರುತ್ತಾರೆ ನಂತರ +44 7443 081421 ನೇದರಿಂದ ಪಿರ್ಯಾದಿದಾರರ ವಾಟ್ಸ್ ಆಪ್ ನಂಬ್ರ  ನೇದಕ್ಕೆ ಸಂದೇಶ ಕಳುಹಿಸಿರುತ್ತಾರೆ. ಅಪರಿಚಿತ ಮಹಿಳೆಯು ಪಿರ್ಯಾದಿದಾರರೊಂದಿಗೆ ಅತ್ಯಂತ ವಿಶ್ವಾಸದಿಂದ ಸಂದೇಶಗಳನ್ನು ಕಳುಹಿಸಿ ಹಾಗೂ ತಾನು ವಿದೇಶದಲ್ಲಿರುವುದಾಗಿಯೂ ಭಾರತಕ್ಕೆ ಬಂದು ಪಿರ್ಯಾದಿದಾರರನ್ನು ಭೇಟಿ ಮಾಡುವುದಾಗಿಯೂ ತಿಳಿಸಿರುತ್ತಾರೆ,ಅಂತೆಯೇ ಸದ್ರಿ ಮಹಿಳೆಯು ದಿನಾಂಕ 21-09-2023 ರಂದು ತಾನು ಭಾರತಕ್ಕೆ ಬಂದಿದ್ದು ನನ್ನ ಬಳಿ 70 ಸಾವಿರ ವಿದೇಶಿ ಕರೆನ್ಸಿ ಇರುವುದಾಗಿ ಏರ್ ಪೋರ್ಟ್ ನ ಕಸ್ಟಂಮ್ ಆಫೀಸರ್ ರವರ ಮೊಬೈಲ್ ನಂಬ್ರ 7627904865 ನೇದರಿಂದ ಪಿರ್ಯಾದಿದಾರರಿಗೆ ಕರೆ ಮಾಡಿಸಿರುತ್ತಾರೆ. ನಂತರ ವಿದೇಶಿ ಕರೆನ್ಸಿ ಯನ್ನು ಬಿಡಿಸುವ ಸಲುವಾಗಿ ಹಣ ಪಾವತಿಸುವಂತೆ ಪಿರ್ಯಾದಿದಾರರಿಗೆ ತಿಳಿಸಿ ಅಪರಿಚಿತ ವ್ಯಕ್ತಿಯು ನೀಡಿದ ವಿವಿದ ಬ್ಯಾಂಕುಗಳ ಖಾತೆಗೆ ಹಂತ ಹಂತವಾಗಿ ದಿನಾಂಕ 21-09-2023 ರಿಂದ 25-09-2023 ರವರೆಗೆ ಪಿರ್ಯಾದಿದಾರರು ತಮ್ಮ ಬಾಬ್ತು ಖಾತೆಯಿಂದ  ಹಂತ ಹಂತವಾಗಿ PUNJAB NATIONAL BANK A/C NO-5952001700008636, IFSC CODE:PUNB0595200, INDIAN BANK A/C NO-7585554677, IFSC CODE:IDIB000K029, INDIAN BANK A/C NO-7584573317, IFSC CODE:IDIB000K029, CANARA BANK A/C NO-110138760285, IFSC CODE:CNRB0002150, STATE BANK OF INDIA BANK A/C NO-42205054848, IFSC CODE:SBIN0010872, STATE BANK OF INDIA BANK A/C NO-42188314873, IFSC CODE:SBIN0061299, CENTRAL BANK A/C NO-5452244414, IFSC CODE:CBIN0281477 ನೇ ಖಾತೆಗಳಿಗೆ ಪಾವತಿಸಿರುತ್ತಾರೆ. ಅದಾಗ್ಯೂ ಇನ್ನು ಹೆಚ್ಚಿನ ಹಣ ಪಾವತಿಸುವಂತೆ ಪಿರ್ಯಾದಿದಾರರಿಗೆ ತಿಳಿಸಿದಾಗ ಪಿರ್ಯಾದಿದಾರರು ಅನುಮಾನ ಬಂದು ತಮ್ಮ ಮನೆಯವರಲ್ಲಿ ವಿಚಾರಿಸಿದಾಗ ಮೋಸ ಹೋಗಿರುವ ವಿಷಯ ಕಂಡು ಬಂದಿರುತ್ತದೆ. ಈ ರೀತಿಯಾಗಿ ಯಾರೋ ಅಪರಿಚಿತ ವ್ಯಕ್ತಿ ಫೇಸ್ ಬುಕ್ ನಲ್ಲಿ Jennifer Phillips ಎಂಬ ಮಹಿಳೆಯ ಹೆಸರಿನಿಂದ ಪರಿಚಯವಾಗಿ ಪಿರ್ಯಾದಿದಾರರಿಂದ  ಹಂತ ಹಂತವಾಗಿ ಒಟ್ಟು 8,42,050/- ರೂಗಳನ್ನು ಆನ್ ಲೈನ್ ಮುಖಾಂತರ ಮೋಸದಿಂದ ವರ್ಗಾಹಿಸಿಕೊಂಡಿರುತ್ತಾರೆ ಎಂಬಿತ್ಯಾದಿ.

Traffic South Police Station              

ದಿನಾಂಕ:  26-09-2023 ರಂದು ಪಿರ್ಯಾದಿ ABDUL RAZAK ದಾರರು ಅವರ ತಮ್ಮ ಹುಸೈನ್ ಫಾರೂಕ್  ಮತ್ತು  ತಮ್ಮನ ಮಗಳಾದ ನಫೀಝ ಅನಂ ರವರನ್ನು ಸಹ ಪ್ರಯಾಣಿಕರಾಗಿ  ಕರೆದುಕೊಂಡು  ತನ್ನ ಬಾಬ್ತು KA-19-AB-3281ನೇ ಆಟೋರಿಕ್ಷಾವನ್ನು ಚಲಾಯಿಸಿಕೊಂಡು ಮನೆಯಾದ ಕಣ್ಣೂರುನಿಂದ ಮಂಗಳೂರು ಕಡೆಗೆ ಹೋಗುತ್ತಿರುವಾಗ ಸಮಯ ಸುಮಾರು 16.30 ಗಂಟೆಗೆ ಪಡೀಲ್ ರೈಲ್ವೇ ಅಂಡರ್ ಪಾಸ್  ದಾಟಿ ಸುಮಾರು 200 ಮೀಟರ್ ಮುಂದೆ ಸಾರ್ವಜನಿಕ ರಾ.ಹೆದ್ದಾರಿ 73 ತಲಪುತ್ತಿದ್ದಂತೆ    ಪಿರ್ಯಾದಿದಾರರ ಹಿಂಭಾಗದಿಂದ KA-01-G-6733 ನಂಬ್ರದ ಅಂಬ್ಯುಲೇನ್ಸ್ ಚಾಲಕ ಅಂಜನಪ್ಪ ಎಂಬಾತನು ಅಂಬ್ಯುಲೇನ್ಸ್ ನ್ನು  ದುಡುಕುತನ  ಮತ್ತು ನಿರ್ಲಕ್ಷತನದಿಂದ  ಚಲಾಯಿಸಿಕೊಂಡು  ಬಂದು ಪಿರ್ಯಾದಿದಾರರಿದ್ದ  ಆಟೋರಿಕ್ಷಾದ ಹಿಂಭಾಗಕ್ಕೆ  ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ಮತ್ತು  ಪಿರ್ಯಾದಿದಾರರ ತಮ್ಮನ ಮಗಳು   ಆಟೋರಿಕ್ಷಾ ಸಮೇತ ಡಾಮರು ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದಿದಾರರ ಎಡಕಾಲಿನ ತೊಡೆಗೆ ಚರ್ಮ ಕಿತ್ತು ಹೋದ  ತೀವ್ರ  ರಕ್ತ ಗಾಯ  ಎಡಕೈಯಲ್ಲಿ,ಎಡಪಾದದಲ್ಲಿ ತರಚಿದ ಗಾಯ ಬಲಗೈಮನಿಗಂಟಿನಲ್ಲಿ ರಕ್ತಗಾಯ  ಬಲಭಾಗದ ಸೊಂಟಕ್ಕೆ ಗುದ್ದಿದ ಗಾಯವಾಗಿರುತ್ತದೆ.ಪಿರ್ಯಾದಿದಾರರ ತಮ್ಮ ಹುಸೈನ್ ಪಾರೂಕ್ ರವರಿಗೆ ಯಾವುದೇ ಗಾಯಗಳಾಗಿರುವುದಿಲ್ಲ ಮತ್ತು ತಮ್ಮನ ಮಗಳು ನಫೀಝ ಅನಂ ರವರಿಗೆ ಎಡಪಾದದಲ್ಲಿ ರಕ್ತಗಾಯವಾಗಿದ್ದು ಅಲ್ಲಿದ್ದ ಸಾರ್ವಜನಿಕರು ಮತ್ತು  ಪಿರ್ಯಾದಿದಾರರ ತಮ್ಮ ಹುಸೈನ್ ಪಾರೂಕ್ ರವರು  ಗಾಯಾಳುಗಳನ್ನು  ಹೈಲ್ಯಾಂಡ್ ಆಸ್ಪತ್ರೆಗೆ ದಾಖಲಿಸಿದ್ದು ನಫೀಝಾ ಅನಂ ರವರನ್ನು ಹೆಚ್ಚಿನ ಚಿಕಿತ್ಸೆಯ ಬಗ್ಗೆ ತೆಜಸ್ವಿನಿ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಎಂಬಿತ್ಯಾಧಿ

 

2) ಪಿರ್ಯಾದಿ YASHAVANTHA ದಾರರ  ದಿನಾಂಕ:27-09-2023 ರಂದು ಅಡ್ಯಾರ್  ಬಳಿಯಲ್ಲಿ  ಸಮವಸ್ತ್ರದಲ್ಲಿ ಸಂಚಾರನಿಯಂತ್ರಣ ಕರ್ತವ್ಯದಲ್ಲಿದ್ದ ಸಮಯ ಸುಮಾರು 9.25  ಗಂಟೆಗೆ KA-19-D-4505 ನೇ ನಂಬ್ರದ PTC ಹೆಸರಿನ ಬಸ್ ಚಾಲಕ ಭಾಸ್ಕರ್ ಎಂಬಾತನು  ಅಡ್ಯಾರ್ ಜಂಕ್ಷನ್ ನಲ್ಲಿ ಯಾವುದೇ ಸೂಚನೆ ನೀಡದೆ ದುಡುಕುತನ ಹಾಗೂ ನಿರ್ಲಕ್ಷತನದ ಚಾಲನೆ ಮಾಡಿಕೊಂಡು ರಾ.ಹೆದ್ದಾರಿ 73 ರಲ್ಲಿ  ಮಂಗಳುರು ಕಡೆಯಿಂದ ಬಿ ಸಿ ರೊಡ್ ಕಡೆಗೆ ಹೋಗುವ ಏಕ ಮುಖ ರಸ್ತೆಯ ವಿರುದ್ಧ ದಿಕ್ಕಿನಿಂದ ಚಾಲನೆ ಮಾಡಿಕೊಂಡು  ರಸ್ತೆ ನಿಯಮಕ್ಕೆ ವಿರುದ್ದವಾಗಿ  ರಾ.ಹೆ 73 ರಸ್ತೆಯ ಬದಿಯಲ್ಲಿ ಸರ್ವಿಸ್ ಕಡೆಗೆ ಹೋಗಿರುತ್ತಾನೆ ಎಂಬಿತ್ಯಾಧಿಯಾಗಿರುತ್ತದೆ.

ಇತ್ತೀಚಿನ ನವೀಕರಣ​ : 27-09-2023 06:55 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080