ಅಭಿಪ್ರಾಯ / ಸಲಹೆಗಳು

Crime Report in  Mangalore East Traffic PS                   

ದಿನಾಂಕ 25-10-2023 ರಂದು ಸಂಜೆ 7.00 ಗಂಟೆಗೆ ಪಿರ್ಯಾದಿದಾರರಾದ ಮೊಹಮ್ಮದ್ ಹಬೀಬ್ ರವರು ಕೆಲಸಕ್ಕೆಂದು ಮನೆಯಿಂದ ತನ್ನ ಬಾಬ್ತು KA-19-HN-1086 ನೊಂದಣಿ ನಂಬ್ರದ ಸ್ಕೂಟರಿನಲ್ಲಿ ಹೋಗಿದ್ದು, ದಿನಾಂಕ 26-10-2023 ರಂದು ಬೆಳಗ್ಗೆ ಕೆಲಸ ಮುಗಿಸಿ ಮನೆಗೆ ಕಡೆಗೆ ಸ್ಕೂಟರನ್ನು ಸವಾರಿ ಮಾಡಿಕೊಂಡು ರಾಷ್ಟ್ರೀಯ ಹೆದ್ದಾರಿ 66 ನೇ ರಸ್ತೆಯಲ್ಲಿ ಪಂಪ್ ವೆಲ್ ಕಡೆಯಿಂದ ನಂತೂರು ಕಡೆಗೆ ಹೋಗುತ್ತಾ ಬೆಳಗ್ಗೆ ಸಮಯ ಸುಮಾರು 3.10 ಗಂಟೆಗೆ ತಾರೇತೋಟ WESTLINE SIGNATURE ಕಟ್ಟಡದ ಬಳಿ ತಲುಪುತ್ತಿದ್ದಂತೆ ಪಂಪ್ ವೆಲ್ ಕಡೆಯಿಂದ ನಂತೂರು ಕಡೆಗೆ ಲಾರಿಯೊಂದನ್ನು ಅದರ ಚಾಲಕ ನಿರ್ಲಕ್ಷ್ಯತನ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಓವರ್ ಟೇಕ್ ಮಾಡುವ ಭರದಲ್ಲಿ ಪಿರ್ಯಾದಿದಾರರ ಸ್ಕೂಟರಿಗೆ ಢಿಕ್ಕಿಪಡಿಸಿದ್ದು, ಢಿಕ್ಕಿಯ ಪರಿಣಾಮ ಪಿರ್ಯಾದಿದಾರರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು, ಬಲ ಕೋಲು ಕೈಗೆ, ಬಲ ಕಾಲಿನ ಮೊಣಗಂಟಿಗೆ, ಬಲ ಕಾಲಿನ ಪಾದಕ್ಕೆ ಹಾಗೂ ಬಲ ಕಾಲಿನ ಮಣಿಗಂಟಿಗೆ ರಕ್ತಗಾಯವಾಗಿದ್ದು,  ಸಾರ್ವಜನಿಕರು ಎಬ್ಬಿಸಿ ಉಪಚರಿಸಿ ಕಾರೊಂದರಲ್ಲಿ ಎ.ಜೆ. ಆಸ್ಪತ್ರೆಗೆ  ಕರೆದುಕೊಂಡು ಹೋಗಿದ್ದು, ಅಲ್ಲಿನ ವೈದ್ಯರು ಚಿಕಿತ್ಸೆ ನೀಡಿ ಮನೆಗೆ ಕಳುಹಿಸಿಕೊಟ್ಟಿರುತ್ತಾರೆ. ಅಪಘಾತಪಡಿಸಿದ ಲಾರಿ ಚಾಲಕ ಲಾರಿಯನ್ನು ಸ್ಥಳದಲ್ಲಿ ನಿಲ್ಲಿಸದೆ, ಪಿರ್ಯಾದಿದಾರರನ್ನು ಆಸ್ಪತ್ರೆಗೂ ದಾಖಲಿಸದೇ ಸ್ಥಳದಿಂದ ಪರಾರಿಯಾಗಿರುತ್ತಾನೆ ಎಂಬಿತ್ಯಾದಿ.

Mangalore East Traffic PS                                                 

ದಿನಾಂಕ 19-10-2023 ರಂದು ಪಿರ್ಯಾದಿದಾರರಾದ ಶ್ರೀಮತಿ ಶಾಹೀದಾ ಬಾನು ರವರು ತನ್ನ ತಂಗಿ ಮುಬಶಿರಾ ಬಾನು ರವರನ್ನು ಜೊತೆಯಲ್ಲಿ ಕರೆದುಕೊಂಡು KA-19-EY-5747 ನೊಂದಣಿ ನಂಬ್ರದ ಸ್ಕೂಟರನ್ನು ಸವಾರಿ ಮಾಡಿಕೊಂಡು ಎಮ್ಮೆಕೆರೆ ಕಡೆಯಿಂದ ಪಾಂಡೇಶ್ವರ ಕಟ್ಟೆ ಬಳಿ ಇರುವ ತಿಂಡಿ ತಯಾರಿಸುವ ಅಂಗಡಿಗೆಂದು ಹೋಗುತ್ತಾ ಸಂಜೆ ಸಮಯ ಸುಮಾರು 4.00 ಗಂಟೆಗೆ ಪಾಂಡೇಶ್ವರ ಶ್ರೀನಿವಾಸ  ಕಾಲೇಜಿನ ಎದುರುಗಡೆ ಬಂದು ತಲುಪಿದಾಗ ಪಿರ್ಯಾದಿದಾರರ ಎದುರುಗಡೆಯಿಂದ KA-19-EP-5060 ಸ್ಕೂಟರನ್ನು ಅದರ ಸವಾರ ಶ್ರೀನಿವಾಸ ಕಾಲೇಜಿನ ಎದುರುಗಡೆ ಇರುವ ತೆರೆದ ಡಿವೈಡರ್ ಕಡೆಗೆ ಹೋಗಲು ಯಾವುದೇ ಸೂಚನೆಯನ್ನು ನೀಡದೇ ರಸ್ತೆಯ ಎಡಭಾಗದಿಂದ  ಒಮ್ಮೇಲೆ ರಸ್ತೆಯ ಬಲಭಾಗಕ್ಕೆ ಚಲಾಯಿಸಿಕೊಂಡು ಬಂದು ರಸ್ತೆ ಬಲಭಾಗದಲ್ಲಿ ಚಲಾಯಿಸಿಕೊಂಡು ಹೋಗುತ್ತಿದ್ದ ಪಿರ್ಯಾದಿದಾರರ ಸ್ಕೂಟರಿಗೆ ಢಿಕ್ಕಿಪಡಿಸಿದ ಪರಿಣಾಮ ಪಿರ್ಯಾದಿದಾರರು ಮತ್ತು ಮುಬಶಿರಾ ಬಾನು ರವರು ವಾಹನ ಸಮೇತ ರಸ್ತೆ ಮೇಲೆ ಬಿದ್ದು, ಗಾಯಗೊಂಡವರನ್ನು ಸಾರ್ವಜನಿಕರಿ ಆರೈಕೆ ಮಾಡಿರುತ್ತಾರೆ. ಅಪಘಾತಪಡಿಸಿದ ಸ್ಕೂಟರ್ ಸವಾರ ತನ್ನ ವಾಹನದೊಂದಿಗೆ ಪರಾರಿಯಾಗಿದ್ದು, ಮುಬಶಿರಾ ಬಾನು ರವರು ಅಪಘಾತದ ಬಗ್ಗೆ ಝಾಹೀರ್ ಅಬ್ಬಾಸ್ ರವರಿಗೆ ತಿಳಿಸಿದ್ದು, ಅವರು ಸ್ಥಳಕ್ಕೆ ಬಂದು ಗಾಯಾಳು ಶಾಹಿದಾ ಬಾನು ರವರನ್ನು ಹೈಲ್ಯಾಂಡ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ವೈದ್ಯರು ಪರೀಕ್ಷಿಸಿ ಎಡ ಕೈ ಕಾಲಿಗೆ ಗುದ್ದಿದ ಗಾಯವಾಗಿದ್ದು, ಮೊಣ ಕಾಲಿನ ಮೇಲ್ಘಾಗಕ್ಕೆ ಮಾಂಸ ಖಂಡ ಬಿರುಕು ಬಿಟ್ದ ಗಾಯವಾಗಿದ್ದು, ಸಂಪೂರ್ಣ ಬೆಡ್ ರೆಸ್ಟ್ ಮಾಡಬೇಕೆಂದು ಸೂಚಿಸಿರುತ್ತಾರೆ.  ಮತ್ತು ಒಂದು ವೇಳೆ ಗಾಯ ಮಾಗದೇ ಇದ್ದರೆ ಶಸ್ತ್ರಚಿಕಿತ್ಸೆ ಮಾಡಬೇಕಾಗಿ ಬರಬಹುದು ಎಂದು ತಿಳಿಸಿರುತ್ತಾರೆ. ಮುಬಶಿರಾ ಬಾನು ರವರು ತನಗಾದ ಗುದ್ದಿದ ಗಾಯಕ್ಕೆ ಮನೆ ಚಿಕಿತ್ಸೆ ಮಾಡಿಕೊಂಡಿದ್ದು ಈ ಅಪಘಾತಕ್ಕೆ KA-19-EP-5060 ನಂಬ್ರದ ಸ್ಕೂಟರ್ ಸವಾರ ನಿರ್ಲಕ್ಷ್ಯತನದ ಚಾಲನೆಯೇ ಕಾರಣವಾಗಿರುತ್ತದೆ ಎಂಬಿತ್ಯಾಧಿ.

Traffic North Police Station               

ದಿನಾಂಕ 27-10-2023 ರಂದು ಪಿರ್ಯಾದಿ Sunil H M ದಾರರ ಭಾವ ವೀರೇಶ್ ರವರು KA-14-ES-2348 ನಂಬ್ರದ ಮೋಟಾರ್ ಸೈಕಲಿನಲ್ಲಿ ಕಾವೂರು ಕಡೆಯಿಂದ ಪಂಜಿಮೊಗರಿನಲ್ಲಿರುವ ರೂಮ್ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಾ ಬೆಳಿಗ್ಗೆ ಸಮಯ ಸುಮಾರು 04:00 ಗಂಟೆಗೆ ಕಾವೂರಿನ ಅಂಬಿಕಾನಗರದ ತಿರುವಿನಲ್ಲಿ ದುಡುಕತನ ಮತ್ತು ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಹೋದ ಪರಿಣಾಮ ವೀರೇಶ್ ತನ್ನ ಮೋಟಾರ್ ಸೈಕಲಿನ ಹತೋಟಿ ತಪ್ಪಿ ರಸ್ತೆಯ ಎಡಭಾಗದಲ್ಲಿರುವ ಮಣ್ಣು ರಸ್ತೆಯಲ್ಲಿ ಚಲಿಸಿ ಮಣ್ಣು ರಸ್ತೆಯ ಬದಿಯಲ್ಲಿದ್ದ ಮರವೊಂದಕ್ಕೆ ಡಿಕ್ಕಿಯಾಗಿ, ಮೋಟಾರ್ ಸೈಕಲ್ ಸಮೇತವಾಗಿ ಬಿದ್ದ ಪರಿಣಾಮ ವೀರೇಶ್ ರವರ ಎಡ ಕಿವಿಯ ಬಳಿ ರಕ್ತ ಬಂದಿದ್ದು, ಎದೆಗೆ ಮತ್ತು ತೊಡೆಗಳಿಗೆ ಗುದ್ದಿದ ಗಾಯವಾಗಿ ಪಿರ್ಯಾದಿದಾರರ ಭಾವ ವೀರೇಶ್ ರವರು ಗಂಭೀರ ಸ್ವರೂಪದ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ ಎಂಬಿತ್ಯಾದಿ.

Bajpe PS

ಪಿರ್ಯಾದಿ Naseer ದಾರರು ದಿನಾಂಕ 26-10-2023 ರಂದು ತನ್ನ ಬಾಬ್ತು ಗೂಡ್ಸ್  ಮಹೇಂದ್ರ ಜಿತೋ ನಂಬ್ರ ಕೆಎ-19-ಎಸಿ-8395 ನೇ ವಾಹನದಲ್ಲಿ ಮದ್ಯಾಹ್ನ 1-00 ಗಂಟೆಗೆ ಆದ್ಯಪಾಡಿ ಕಡೆಯಿಂದ ಕೈಕಂಬ ಕಡೆಗೆ ಬರುತ್ತಿರುವಾಗ ಆದ್ಯಪಾಡಿ ಚರ್ಚ್ ಬಳಿ ತಿರುವಿನಲ್ಲಿ ಎದುರುಗಡೆಯಿಂದ ಖಾಸಗಿ ಬಸ್ ನಂಬ್ರ ಕೆಎ-19-ಎಡಿ-0598 ನೇದರ ಚಾಲಕ ಅಬ್ದುಲ್ ರೆಹಮಾನ ಮಿಯಾಜ್ ಎಂಬಾತನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಪಿರ್ಯಾದಿದಾರರು ಚಲಾಯಿಸುತ್ತಿದ್ದು ಮಹೇಂದ್ರ ಜಿತೋ ಗೂಡ್ಸ್ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರಿಗೆ ತಲೆ ಹಿಂಬದಿ, ಹಣೆಗೆ , ಬಲಗಾಲಿನ ಮೊಣಗಂಟಿಗೆ ರಕ್ತಗಾಯವಾಗಿ  ಎಡಗೈ ಹೆಬ್ಬೆರಳಿಗೆ ಬೆನ್ನಿಗೆ ಗುದ್ದಿದ ನೋವು ಉಂಟಾಗಿದ್ದು ಗೂಡ್ಸ್ ವಾಹನ ಕೂಡ ಜಖಂ ಗೋಡಿದ್ದು , ಪಿರ್ಯಾದಿದಾರರು ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ತೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ ಎಂಬಿತ್ಯಾದಿಯಾಗಿ ಪಿರ್ಯಾದಿದಾರರು ನೀಡಿದ ದೂರಿನ ಸಾರಾಂಶ.

Surathkal PS

ದಿನಾಂಕ 18-10-2023 ರಂದು ಪಿರ್ಯಾದಿದಾರರು ಅನ್ ಲೈನ್ ಕ್ಲಾಸ್ ಬಗ್ಗೆ ಗೂಗಲ್ ನಲ್ಲಿ ಹುಡುಕುತ್ತಿರುವಾಗ ವ್ಯಾಸ್ + 447541244922 ಎಂಬ ನಂಬರ್ ನಿಂದ ಟೆಲಿಗ್ರಾಮ್ ಅಫ್ಲಿಕೇಷನ್ ಮೂಲಕ ಅನ್ ಲೈನ್ ಕ್ಲಾಸ್ ಬಗ್ಗೆ ಮೇಸೆಜ್ ಬಂದಿದ್ದು ಸದ್ರಿ ಮೆಸೆಜ್ ನ ಪೀಡ್ ಬ್ಯಾಕ್ ಗಳನ್ನು ನೋಡಿದ ಪಿರ್ಯಾದಿಯವರು ಮೊಬೈಲ್ ಗೆ ಬಂದ ಲಿಂಕ್ ನ್ನು ಓಪನ್ ಮಾಡಿ ರಿಜಿಸ್ಟರ್ ಮಾಡಿದ್ದು, ಅದರಲ್ಲಿ ತಿಳಿಸಿದಂತೆ ಪಿರ್ಯಾದಿಯು ಅನ್ ಲೈನ್ ಕ್ಲಾಸ್ ತೆಗೆದುಕೊಳ್ಳಲು ದಿನಾಂಕ 24-10-2023ರ ತನಕ ಒಟ್ಟು 76000 /-ರೂಪಾಯಿಗಳನ್ನು ಪಿರ್ಯಾದಿಯ ಪಂಜಾಬ್ ನ್ಯಾಷನಲ್ ಬ್ಯಾಂಕ್ ಖಾತೆ ನಂ  ಪಾವತಿಸಿದ್ದು, ಸದ್ರಿ ಹಣವನ್ನು ಕ್ಲಾಸ್ ಮುಗಿದ ಬಳಿಕ ವಾಪಸು ನೀಡುತ್ತೇವೆ ಎಂದು ಸಂದೇಶ ಕಳುಹಿಸಿದ್ದು, ಕ್ಲಾಸ್ ಮುಗಿದ ಬಳಿಕ ನೀವು ಪಾವತಿಸಿರುವ ಎಲ್ಲಾ ಹಣವನ್ನು ವಾಪಸ್ಸು Withdraw ಮಾಡಿಕೊಳ್ಳುವಂತೆ ಲಿಂಕ್ ನ್ನು ಕಳುಹಿಸಿದ್ದು ಸದ್ರಿ ಲಿಂಕ್ ನ್ನು ಪಿರ್ಯಾದಿಯು ಓಪನ್ ಮಾಡಿ ಹಣವನ್ನು Withdraw ಮಾಡಲು ಪ್ರಯತ್ನಿಸಿದಾಗ ಅದು ಆಗದೇ ಇರುವುದರಿಂದ ಪಿರ್ಯಾದಿಯ ಖಾತೆಯು ಪ್ರಿಜ್ ಆಗಿರುವುದಾಗಿಯೂ  ಸದ್ರಿ ಖಾತೆಯು ಸಕ್ರಿಯಗೊಳ್ಳಬೇಕಾದರೆ ಹಣವನ್ನು ಪಾವತಿಸಲು ತಿಳಿಸಿ ಲಿಂಕ್ ನ್ನು ಕಳುಹಿಸಿದ್ದು ಅದಕ್ಕೆ ಪಿರ್ಯಾದಿಯು ಒಟ್ಟು 55000/-ಹಣವನ್ನು ಪಾವತಿಸಿ, ಕ್ಲಾಸ್ ಮಾಡಿದಂತಹ ಶಿಕ್ಷಕರಿಗೆ ಪೀಜ್ ಎಂದು ತಿಳಿಸಿ 15000/- ಹಣವನ್ನು ಮತ್ತೆ ಪಾವತಿಸಿಕೊಂಡಿದ್ದು, ಹಣವನ್ನು ವಾಪಸ್ಸು ಪಡೆಯಬೇಕೆಂದರೆ ಖಾತೆಯನ್ನು ಸ್ಯಾಂಡರ್ ಡೈಸ್ ಮಾಡ ಬೇಕು ಎಂದು ಸಂದೇಶ ಕಳುಹಿಸಿ ತಿಳಿಸಿದಂತೆ ಮತ್ತೆ ಪಿರ್ಯಾದಿದಾರರು ರೂ 30000/- ಹಣವನ್ನು ಪಾವತಿಸಿದ್ದು, ಹೀಗೆ ಆರೋಪಿತರು ಪಿರ್ಯಾದಿದಾರರಿಗೆ ವಂಚನೆ ಮಾಡುವ ಉದ್ದೇಶದಿಂದ ಅನ್ ಲೈನ್ ಕ್ಲಾಸ್ ನೆಪದಲ್ಲಿ ಪಿರ್ಯಾದಿದಾರರಿಂದ  ಒಟ್ಟು 1,76,000/- ಹಣವನ್ನು ಪಡೆದು ಪಿರ್ಯಾದಿಗೆ ವಂಚನೆ ಮಾಡುವ ಉದ್ದೇಶದಿಂದ ಪಿರ್ಯಾದಿಗೆ ನಂಬಿಕೆ ದ್ರೋಹ, ಮೋಸ ಮಾಡಿರುವುದಾಗಿದೆ.

Surathkal PS    

ದಿನಾಂಕ 27-10-2023 ರಂದು ಪಿರ್ಯಾದಿ PSI Raghu Nayak ದಾರರು ಠಾಣಾ ವ್ಯಾಪ್ತಿಯ ಸುರತ್ಕಲ್, ಕಾನಾ-ಕೋಡಿಕೆರೆ ಮಾರ್ಗವಾಗಿ ಕಳವಾರು ಪರಿಸರದಲ್ಲಿ ರೌಂಡ್ಸ್ ನಲ್ಲಿರುವ ಸಮಯ ಬಜಪೆ ಕಡೆಯಿಂದ ಕಳವಾರು ಕಡೆಗೆ ಬಜಪೆ ಶಾಂತಿಗುಡ್ಡೆ ಕಡೆಯಿಂದ ಟಿಪ್ಪರ್ ಲಾರಿಯೊಂದು ಬರುತ್ತಿದ್ದನ್ನು ಪಿರ್ಯಾದಿದಾರರು ನೋಡಿ ಕೈಯಿಂದ ಸಿಗ್ನಲ್ ಕೊಟ್ಟು ಬದಿಗೆ ಹಾಕಲು ತಿಳಿಸಿದಂತೆ ಸುಮಾರು 50 ಅಡಿ ದೂರದಲ್ಲಿಯೇ ಚಾಲಕನು ಟಿಪ್ಪರನ್ನು ಬದಿಗೆ ಹಾಕಿ ಟಿಪ್ಪರ್ ನಿಂದ ಇಳಿದು ಓಡಿ ಹೋಗಿತ್ತಿದ್ದವನನ್ನು ಅತನನ್ನು ಬೆನ್ನಟ್ಟಿ ಹಿಡಿಯಲು ಹೋಗಿದ್ದು ಆತನು ಸಿಗದೆ ತಪ್ಪಿಸಿಕೊಂಡು ಹೋಗಿರುತ್ತಾನೆ, ಟಿಪ್ಪರ್ ಲಾರಿಯನ್ನು ಪರಿಶೀಲಿಸಿ ನೋಡಿ ಬಾಡಿಯಲ್ಲಿ ಸಾಮಾನ್ಯ ಮರಳು ತುಂಬಿರುವುದು ಕಂಡು ಬಂದಿದ್ದಾಗಿರುತ್ತದೆ, ಸದ್ರಿ ಟಿಪ್ಪರ್ ಲಾರಿಯ ನೊಂದಾಣಿ ನಂಬ್ರ KA-19-AA-0409 ನೇ ಟಾಟಾ ಕಂಪನಿಯ ಟಿಪ್ಪರ್ ಲಾರಿ ಆಗಿರುತ್ತದೆ, ಸದ್ರಿ ಟಿಪ್ಪರ್ ಲಾರಿಯ ಚಾಲಕ ತಮ್ಮ ಮಾಲೀಕರೊಂದಿಗೆ ಸೇರಿಕೊಂಡು ಟಿಪ್ಪರ್ ಲಾರಿಯಲ್ಲಿ ಮರಳನ್ನು ಸಾಗಿಸಲು ಅಧಿಕೃತ ಪರವಾನಿಗೆಯನ್ನು ಹೊಂದದೇ ಎಲ್ಲಿಂದಲೋ ಸಾರ್ವಜನಿಕ ಖನಿಜ ಸಂಪತ್ತಾದ ಮರಳನ್ನು ಕದ್ದು ಅಕ್ರಮವಾಗಿ ಮರಳನ್ನು ಸಾಗಿಸುತ್ತಿರುವುದು ದೃಡಪಟ್ಟಿರುವುದರಿಂದ ಮರಳು ತುಂಬಿದ ಮೇಲ್ಕಾಣಿಸಿದ ಲಾರಿಯನ್ನು ಸ್ವಾದೀನಪಡಿಸಿಕೊಂಡಿದ್ದಾಗಿರುತ್ತದೆ, ಸದ್ರಿ ಟಿಪ್ಪರ್ ಲಾರಿಯ ಅಂದಾಜು ಮೌಲ್ಯ ಸುಮಾರು ರೂ 4,00,000/- ಹಾಗೂ ಮರಳಿನ ಅಂದಾಜು ಮೌಲ್ಯ ಸುಮಾರು ರೂ 7000/- ಹೀಗೆ ಒಟ್ಟು ಮೌಲ್ಯ 4,07,000/- ಆಗಿರುತ್ತದೆ, ಅದುದರಿಂದ ಅಕ್ರಮವಾಗಿ ಮರಳನ್ನು ಕಳ್ಳತನ ಮಾಡಿ ಸಾಗಾಟ ಮಾಡುತ್ತಿದ್ದ KA-19-AA-0409 ನೇಯದರ ಟಿಪ್ಪರ್ ಲಾರಿ ಚಾಲಕ ಹಾಗೂ ಮಾಲೀಕನ ಮೇಲೆ ಸೂಕ್ತ ಕ್ರಮ ಜರಗಿಸುವರೇ ಎಂಬಿತ್ಯಾದಿ.

       

ಇತ್ತೀಚಿನ ನವೀಕರಣ​ : 27-10-2023 05:59 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080