ಅಭಿಪ್ರಾಯ / ಸಲಹೆಗಳು

Crime Report in  :  Mangalore East Traffic PS                    

ಪಿರ್ಯಾದಿದಾರರಾದ ಮಣಿಕಂಠ, ಪ್ರಾಯ: 29 ವರ್ಷ, ಸಿ.ಪಿ.ಸಿ 2494 ಮಂಗಳೂರು ದಕ್ಷಿಣ ಪೊಲೀಸ್ ಠಾಣೆ ರವರು ನಿನ್ನೆ ದಿನ ದಿನಾಂಕ; 26/11/2023 ರಂದು ರಾತ್ರಿ ಅಬ್ದುಲ್ ಖಾದರ್ ಎಂಬುವರೊಂದಿಗೆ ಮೋಟಾರ್ ಸೈಕಲಿನಲ್ಲಿ ಗಸ್ತು ಕರ್ತವ್ಯಕ್ಕೆ ತೆರಳಿದಾಗ ಸಮಯ ರಾತ್ರಿ 10-10 ಗಂಟೆಗೆ ಮಂಕಿಸ್ಟ್ಯಾಂಡ್ ಬಳಿಯ ಶಿವನಗರದ ಆಲಿಚಾಮುಂಡಿ ದೈವಸ್ಥಾನದ ಸುತ್ತಮುತ್ತ ಗಸ್ತು ಮಾಡಲೆಂದು ದೈವಸ್ಥಾನದ ಎದುರು ಮೋಟಾರ್ ಸೈಕಲ್ ನಿಲ್ಲಿಸಿ ದೈವಸ್ಥಾನದ ಕಡೆಗೆ ನಡೆದುಕೊಂಡು ಹೋಗುತ್ತಿರುವಾಗ ಶ್ರೀನಿವಾಸ್ ಕಾಲೇಜ್ ಕಡೆಯಿಂದ ಮಂಕಿಸ್ಟ್ಯಾಂಡ್ ಕಡೆಗೆ ಇರುವ ಶಿವನಗರ ರಸ್ತೆಯಲ್ಲಿ ಮೋಟಾರ್ ಸೈಕಲ್ ನೊಂದಣಿ ಸಂಖ್ಯೆ; KA-03-JK-5729 ನೇಯದನ್ನು ಅದರ ಸವಾರನು ಮಂಕಿಸ್ಟ್ಯಾಂಡ್ ಕಡೆಗೆ ಹೋಗುವ ಗಡಿಬಿಡಿಯಲ್ಲಿ ಅಡ್ಡಾದಿಡ್ಡಿಯಾಗಿ ಅಪಾಯಕಾರಿಯಾದ ರೀತಿಯಿಲ್ಲಿ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಢಿಕ್ಕಿ ಪಡಿಸಿದ್ದು ಈ ಢಿಕ್ಕಿ ರಭಸಕ್ಕೆ ಪಿರ್ಯಾದಿದಾರರು ರಸ್ತೆಗೆ ಬಿದ್ದು ಗಾಯಗೊಂಡಿದ್ದು ಬೈಕ್ ಸವಾರನು ಬೈಕನ್ನು ರಸ್ತೆಯಲ್ಲಿಯೇ ಬಿಟ್ಟು ಪರಾರಿಯಾಗಿರುತ್ತಾನೆ, ಅತ್ತಾವರ ಕೆ.ಎಂ.ಸಿ ಆಸ್ಪತ್ರೆಗೆ ಚಿಕಿತ್ಸೆಗೆ ಬಂದಾಗ ಪರೀಕ್ಷಿಸಿದ ವೈದ್ಯರು ಪಿರ್ಯಾದಿದಾರರ ಬಲಕೋಲು ಕಾಲಿನಲ್ಲಿ ಮೂಳೆ ಮುರಿತ ಉಂಟಾಗಿರುವುದಾಗಿ ತಿಳಿಸಿರುತ್ತಾರೆ ಎಂಬಿತ್ಯಾದಿ.

Traffic North Police Station                       

ಪಿರ್ಯಾದಿ Smt Suhasiniದಾರರ ಗಂಡನಾದ ಶೇಖರ್ ಕುಲಾಲ ನಿನ್ನೆ ದಿನಾಂಕ 26/11/2023 ರಂದು ಅಡುಗೆ ಕೆಲಸದ ಬಗ್ಗೆ ತಮ್ಮ ಮನೆಯಾದ ಸರಿಪಳ್ಳ ದಿಂದ ಬೊಂದೆಲ್ ಹತ್ತಿರ ವಿರುವ ಕೃಷ್ಣನಗರದ ಕಡೆಗೆ ಅವರ ಬಾಬ್ತು KA-19-HP-0861 ನಂಬ್ರದ ಸ್ಕೂಟರನ್ನು ಸವಾರಿ ಮಾಡಿಕೊಂಡು ಬರುತ್ತಾ ಬೆಳ್ಳಿಗಿನ ಜಾವ ಸಮಯ ಸುಮಾರು 5.30 ಗಂಟೆಗೆ ಬೊಂದೆಲ್ ಜಂಕ್ಷನ್  ಹತ್ತಿರ ತಲುಪುತ್ತಿದ್ದಂತೆ ಅದೇ ರಸ್ತೆಯಲ್ಲಿ ಹಿಂದಿನಿಂದ KA-04-MT-0809 ನಂಬ್ರದ ಕಾರನ್ನು ಅದರ ಚಾಲಕ Sahil ಎಂಬಾತನು ದುಡುಕುತನ ಮತ್ತು ನಿರ್ಲಕ್ಷ್ಯತನ ದಿಂದ  ಚಾಲಯಿಸಿ ಕೊಂಡು ಬಂದು ಪಿರ್ಯಾದಿದಾರರ ಗಂಡನಾದ ಶೇಖರ್ ಕುಲಾಲ ರವರ ಸ್ಕೂಟರಿಗೆ ಹಿಂದಿನಿಂದ ಡಿಕ್ಕಿ ಪಡಿಸಿದ ಪರಿಣಾಮ ಶೇಖರ್ ಕುಲಾಲ ರವರು ಸ್ಕೂಟರ್ ಸಮೇತ ಕ್ರಾಂಕ್ರೀಟ್ ರಸ್ತೆಗೆ ಬಿದ್ದು ಬಲಕಾಲಿನ ಹೆಬ್ಬೆರಳಿನಲ್ಲಿ ರಕ್ತ ಗಾಯ,ಸೊಂಟಕ್ಕೆ ಗುದ್ದಿದ ಗಾಯ,ಗಲ್ಲದ ಕೆಳಗೆ ಗುದ್ದಿದ ಗಾಯ,ಎಡ ಕಾಲಿನ ಮೊಣಕಾಲಿಗೆ ತರಚಿದ ರೀತಿ ಗಾಯ ಹಾಗೂ ತಲೆಯ ಹಿಂಬಾಗಕ್ಕೆ ಗುದ್ದಿದ ಗಾಯವಾಗಿ  ಚಿಕಿತ್ಸೆಯ ಬಗ್ಗೆ   ಎ.ಜೆ. ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ

Barke PS

ದಿನಾಂಕ:26.11.2023 ರಂದು ಬರ್ಕೆ ಪೊಲೀಸ್ ಠಾಣಾ ವ್ಯಾಪ್ತಿಯ ಸುಲ್ತಾನ್ ಬತ್ತೇರಿ ಬಳಿ  ಇಬ್ಬರು ಅಮಲು ಪದಾರ್ಥ ಸೇವಿಸಿದ ಹಾಗೆ ತೂರಾಡುತ್ತಿದ್ದು ಅವರನ್ನು ವಿಚಾರಿಸಲಾಗಿ ಬಾಯಿಂದ ಗಾಂಜಾ ಸೇವನೆ ಮಾಡಿದ ವಾಸನೆ ಬರುತ್ತಿದ್ದು  ಹೆಸರು 1) ಹರಿಕೃಷ್ಣನ್  ಪ್ರಾಯ: 28 ವರ್ಷ ವಾಸ: ಕ್ಯಾರಿಕಟ್ ಹೌಸ್, ಮಾನಾನ್ನಂ ಪೋಸ್ಟ್, ಕೊಟ್ಟಾಯಂ ಕೇರಳ ಹಾಗೂ 2) ಇಮ್ಯಾನುಯೆಲ್ ಪ್ರಾಯ: 23 ವರ್ಷ ವಾಸ: ತೆರಟ್ಟಿಲ್ ಹೌಸ್, ಮಾರ್ಕೆಟ್ ರೋಡ್,ಎರ್ನಾಕುಲಂ, ಕೇರಳ ಎಂಬುದಾಗಿ ತಿಳಿಸಿದ್ದು  ಸದ್ರಿ ಹರಿಕೃಷ್ಣನ್ ಮತ್ತು ಇಮ್ಯಾನುಯೆಲ್ ರವರನ್ನು  ವೈದ್ಯಕೀಯ ಪರೀಕ್ಷೆ ಬಗ್ಗೆ ಮಂಗಳೂರು ಎ,ಜೆ ಆಸ್ಪತ್ರೆಗೆ ಕಳುಹಿಸಿಕೊಟ್ಟಲ್ಲಿ  “Tetrahydracannabinoid (Marijuana) POSITIVE ಎಂಬ ಮಾದಕ ವಸ್ತು ಸೇವನೆ ಮಾಡಿದ ಬಗ್ಗೆ ವೈದ್ಯಕೀಯ ಪರೀಕ್ಷೆಯಿಂದ ದೃಢಪಟ್ಟಿರುವುದರಿಂದ ಸದ್ರಿ ಆಪಾದಿತರ ವಿರುದ್ದ ಮಾದಕ ದ್ರವ್ಯ ಕಾಯಿದೆ ಅಡಿ ಕಾನೂನು ಕ್ರಮ ಕೈಗೊಳ್ಳವಂತೆ ಎಂಬಿತ್ಯಾದಿಯಾಗಿರುತ್ತದೆ.

Urva PS

ಯಾರೋ ಕಳ್ಳರು ದಿನಾಂಕ 24-11-2023 ರಂದು ರಾತ್ರಿ ಸಮಯ ಸುಮಾರು 11-30 ಗಂಟೆಯಿಂದ ದಿನಾಂಕ 25-11-2023 ರಂದು ಬೆಳಿಗ್ಗೆ ಸಮಯ ಸುಮಾರು 06-00 ಗಂಟೆಯ ನಡುವೆ ಪ್ರಕರಣದ ಪಿರ್ಯಾದಿದಾರರ Sankaigudda, Bejai New Road, ಮನೆಯ ವಾಯುವ್ಯ ದಿಕ್ಕಿನಲ್ಲಿರುವ ಬೆಡ್ ರೂಮಿನ ಕಿಟಕಿಯ ಕಬ್ಬಿಣದ ಗ್ರಿಲ್ಸ್ ಗಳನ್ನು ಯಾವುದೋ ಆಯುಧದಿಂದ ತುಂಡು ಮಾಡಿ ಮನೆಯ ಒಳಗೆ ಪ್ರವೇಶಿಸಿ ಪಿರ್ಯಾದಿದಾರರು ಮಲಗಿದ್ದ ಬೆಡ್ ರೂಮಿನ ಕಪಾಟಿನಲ್ಲಿರಿಸಿದ ಅಂದಾಜು ಸುಮಾರು 16 ಗ್ರಾಂ ತೂಕದ ಒಂದು ಜೊತೆ ಕಿವಿಯ ಓಲೆ, ಅಂದಾಜು ಸುಮಾರು 144 ಗ್ರಾಂ ತೂಕದ 4 ಚಿನ್ನದ ನೆಕ್ಲೆಸ್, ಅಂದಾಜು ಸುಮಾರು 40 ಗ್ರಾಂ ತೂಕದ ಚಿನ್ನದ ಸರ, ಅಂದಾಜು ಸುಮಾರು 48 ಗ್ರಾಂ ತೂಕದ ಚಿನ್ನದ ಹಾರ, ಅಂದಾಜು ಸುಮಾರು 24 ಗ್ರಾಂ ತೂಕದ ಹವಳದ ಸರ, ಅಂದಾಜು 40 ಗ್ರಾಂ ತೂಕದ ಚಿನ್ನದ ಸರ, ಅಂದಾಜು ಸುಮಾರು 36 ಗ್ರಾಂ ತೂಕದ ಚಿನ್ನದ ನೆಕ್ಲೆಸ್ (ಒಟ್ಟು 668 ಗ್ರಾಂ ತೂಕದ ಚಿನ್ನದ ಒಡವೆಗಳ ಅಂದಾಜು ಮೌಲ್ಯ ಸುಮಾರು 30,00,000/- ) ಒಡವೆಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುದಾಗಿ ಸಾರಾಂಶ ಆಗಿರುತ್ತದೆ.

Traffic North Police Station                               

ಪಿರ್ಯಾದಿ M Abdul Aziz ದಾರ ತಮ್ಮನಾದ ಉಮ್ಮರ್ ಫಾರೂಕ್ ರವರು ದಿನಾಂಕ: 25-11-2023 ರಂದು ಮುಕ್ಕಾದ Indian Oil ಪೆಟ್ರೋಲ್ ಪಂಪ್ ಕಡೆಯಿಂದ ರಸ್ತೆ ದಾಟುತ್ತಾ ರಸ್ತೆಯ ಮದ್ಯದ ಡಿವೈಡರ್ ದಾಟಿ ರಸ್ತೆಯ ಇನ್ನೊಂದು ಬದಿಗೆ ತಲುಪುತ್ತಿದ್ದಂತೆ ಮಧ್ಯಾಹ್ನ ಸಮಯ ಸುಮಾರು 1:00 ಗಂಟೆಗೆ KA-19-ES-9140 ನಂಬ್ರದ ಮೋಟಾರು ಸೈಕಲನ್ನು ಅದರ ಸವಾರನಾದ ವೈಭವ್ ವಿಶ್ವನಾಥ ಎಂಬಾತನು ಮುಕ್ಕ ಶ್ರೀನಿವಾಸ ಆಸ್ಪತ್ರೆಯ ಕಡೆಯಿಂದ NITK  ಟೋಲ್ ಗೇಟ್ ಕಡೆಗೆ ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಬಂದು ರಸ್ತೆ ದಾಟುತ್ತಿದ್ದ ಉಮ್ಮರ್ ಫಾರೂಕ್ ರವರಿಗೆ ಡಿಕ್ಕಿ ಪಡಿಸಿಕೊಂಡು ಮೋಟಾರ್ ಸೈಕಲ್ ಸವಾರ ಅದೇ ವೇಗದಲ್ಲಿ ಮುಂದಕ್ಕೆ ಚಲಿಸಿ ರಸ್ತೆಯ ಎಡಬದಿಯಲ್ಲಿರುವ ತಗ್ಗು ಜಾಗಕ್ಕೆ ಮೋಟಾರ್ ಸೈಕಲ್ ಸಮೇತ ಬಿದ್ದು ಮೋಟಾರು ಸೈಕಲ್ ಸವಾರನಿಗೆ ಹೊಟ್ಟೆಯ ಎಡಬದಿ, ಎಡಕಾಲಿನ ತೊಡೆಗೆ ಗಂಭೀರ ಸ್ವರೂಪದ ಗಾಯಗೊಂಡಿದ್ದು, ಅಲ್ಲದೇ ಡಿಕ್ಕಿಯ ಪರಿಣಾಮ ಪಾದಾಚಾರಿ ಉಮ್ಮರ್ ಪಾರೂಕ್ ರವರಿಗೆ ಹಣೆಯ ಬಲಬದಿ ಮತ್ತು ಕೆನ್ನೆಯ ಬಲಬದಿ ಚರ್ಮ ತರಚಿ ಹಣೆಯ ಬಲಬದಿ ಊದಿ ಕೊಂಡಿದ್ದು, ಎದೆಯ ಎಡಬದಿ ಹಾಗೂ ಎಡ ಕಾಲರ್ ಬೋನ್ ಬಳಿ ಗುದ್ದಿದ ಒಳಗಾಯ ಹಾಗೂ ಬಲಕಾಲಿನ ಮಣಿಗಂಟಿನ ಬಳಿ ಚರ್ಮ ಹರಿದ ರಕ್ತಗಾಯವಾಗಿದ್ದು, ಗಾಯಾಳುಗಳಿಬ್ಬರೂ ಮುಕ್ಕಾದ ಶ್ರೀನಿವಾಸ ಆಸ್ಪತ್ರೆ ಯಲ್ಲಿ ಪ್ರಥಮ ಚಿಕಿತ್ಸೆ ಪಡಕೊಂಡು ಬಳಿಕ ಹೆಚ್ಚಿನ ಚಿಕಿತ್ಸೆಯ ಬಗ್ಗೆ AJ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಗಾಯಾಳು ವೈಭವ್ ವಿಶ್ವನಾಥ ಎಂಬಾತನು ಮೃತಪಟ್ಟಿದ್ದು, ಗಾಯಾಳು ಉಮ್ಮರ್ ಫಾರೂಕ್ ರವರು ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ.

Crime Report in  :  Barke PS

ಪಿರ್ಯಾದಿ Raghavendra ದಾರರಿಗೆ ದಿನಾಂಕ 24-11-2023 ರಂದು ಪೊಲೀಸ್ ನಿರೀಕ್ಷಕರು ಮಾದಕ ದ್ರವ್ಯ ಸಾಗಾಟ, ಮಾರಾಟ ಮಾಡುವವರನ್ನು ಪತ್ತೆ ಹಚ್ಚಲು  ಮಾಹಿತಿ ಸಂಗ್ರಹಿಸುವಂತೆ ಆದೇಶಿಸಿದ ಮೇರೆಗೆ ಪಿರ್ಯಾದಿದಾರರು ಬೆಳಿಗ್ಗೆ 10: 00 ಗಂಟೆಗೆ ಠಾಣೆಯಿಂದ ಹೊರಟು ಠಾಣಾ ವ್ಯಾಪ್ತಿಯ ಬೋಳೂರು, ಸುಲ್ತಾನ್ ಭತ್ತೇರಿ ಬೊಕ್ಕಪಟ್ಟಣ, ದುರ್ಗ ಮಹಲ್ ಜಂಕ್ಷನ್ ವೇರ್ ಹೌಸ್, ಕಡೆಗಳಲ್ಲಿ ಸಂಚರಿಸುತ್ತಿದ್ದ ಸಮಯದಲ್ಲಿ ಮದ್ಯಾಹ್ನ 1:20 ಗಂಟೆಗೆ ನನ್ನ ಕರಾವಳಿ ಮೈದಾನ ಬಳಿ ಸುಮಾರು 400 ರಿಂದ 500 ಗ್ರಾಂ (ಅರ್ಧ ಕೆ.ಜಿ) ದಷ್ಟು ನಿಷೇಧಿತ ಮಾಧಕ ವಸ್ತುವಾದ  ಗಾಂಜಾವನ್ನು  ಇಬ್ಬರು ಯುವಕರು ತಮ್ಮ ವಶದಲ್ಲಿ ಇಟ್ಟುಕೊಂಡು ಮಾರಾಟ ಮಾಡಲು ಗಿರಾಕಿಗಳು ಕಾಯುತ್ತಿದ್ದಾರೆ  ಅವರುಗಳ ಪೈಕಿ ರೋಶನ್ ಕಿಣಿ ಎಂಬವನು ನೀಲಿ ಬಣ್ಣದ ಶರ್ಟ್ ಹಾಗೂ ಕಪ್ಪು ಬಣ್ಣದ ಜೀನ್ಸ್ ಪ್ಯಾಂಟನ್ನು ಧರಿಸಿದ್ದು ಉದ್ದನೆಯ ಕೂದಲು ಮತ್ತು ಜುಟ್ಟು ಬಿಟ್ಟಿರುವುದಾಗಿ ಖಚಿತವಾದ ಮಾಹಿತಿ ತಿಳಿಸಿರುತ್ತಾರೆ. ನಿಷೇದಿತ ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿದ್ದವರ ವಿರುದ್ದ NDPS ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ಆಪಾದಿತರನ್ನು ವಶಕ್ಕೆ ಪಡೆದು ತಪಾಸಣೆ ನಡೆಸಿ ಸೊತ್ತು ಸಮೇತ ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಳ್ಳಬೇಕೆಂಬಿಯಾಗಿ ಸಾರಾಂಶ.

Konaje PS

 ದಿನಾಂಕ: 24-11-2023 ರಂದು ಬೆಳಿಗ್ಗೆ 7-15 ಗಂಟೆಗೆ ಮಂಗಳೂರು ನಗರದ ಸಿಸಿಬಿ ಘಟಕದ ಪೊಲೀಸ್ ಉಪ ನಿರೀಕ್ಷಕರಾದ ಪಿರ್ಯಾಧಿ ನರೇಂದ್ರ ರವರಿಗೆ  ಮುಡಿಪುವಿನ ಕೆ.ಐ.ಬಿ.ಬಿ ಯ ಹೊಸದಾಗಿ ನಿರ್ಮಾಣವಾಗು ಜಿಲ್ಲಾ ಕಾರಾಗೃಹಕ್ಕೆ ಹೋಗುವ ರಸ್ತೆಯಲ್ಲಿ ಮಾಳೂರು ಎಂಬಲ್ಲಿ ಇಬ್ಬರು ಆರೋಪಿಗಳು MDMA  ಮಾಧಕ ವಸ್ತುಗನ್ನು ಕಾರು ನಂಬ್ರ ಕೆಎಲ್-60-ಕೆ-8043 ನೇ ಗ್ರೇ ಬಣ್ಣದ ಮಾರುತಿ ಆಲ್ಟೋ 800 ಕಾರಿನಲ್ಲಿ ಬರುವುದಾಗಿ ಬಂದ ಖಚಿತ ಮಾಹಿತಿಯ ಮೇರೆಗೆ ಮುಡಿಪುವಿನ ಕೆ.ಐ.ಬಿ.ಬಿ ಯ ಹೊಸದಾಗಿ ನಿರ್ಮಾಣವಾಗುವ ಜಿಲ್ಲಾ ಕಾರಾಗೃಹಕ್ಕೆ ಹೋಗುವ ರಸ್ತೆಯಲ್ಲಿ ಮಾಳೂರು ಎಂಬಲ್ಲಿ ಬೆಳಿಗ್ಗೆ 08-45 ಗಂಟೆಗೆ ಹೋದಾಗ ರಸ್ತೆಯಲ್ಲಿ ಕೆಎಲ್-60-ಕೆ-8043 ನೇ  ಗ್ರೇ ಬಣ್ಣದ ಮಾರುತಿ ಆಲ್ಟೋ ಕಾರಿನಲ್ಲಿ ಇಬ್ಬರು ವ್ಯಕ್ತಿಗಳು ಇರುವುದನ್ನು ಗಮನಿಸಿ ದಾಳಿ ನಡೆಸಿ ಆರೋಪಿಗಳಾದ ಅಬ್ದುಲ್ ರಹಿಮಾನ್ ಮತ್ತು ಮೊಹಮ್ಮದ್ ಜಿಯಾದ್  ಎಂಬವರನ್ನು ದಸ್ತಗಿರಿ ಮಾಡಿ ಆರೋಪಿಗಳು ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಮಾರಾಟ ಮಾಡುವರೇ ವಿಟ್ಲದ  ಅನ್ವರ್  ಎಂಬವನಿಂದ ರೂಪಾಯಿ 1,75,000/-  ನೀಡಿ ಖರೀದಿ ಮಾಡಿದ 35 ಗ್ರಾಂ MDMA ನ್ನು ಮತ್ತು MDMA ತೂಕ ಮಾಡುವರೇ ಉಪಯೋಗಿಸುವ ಡಿಜಿಟಲ್ ತೂಕ ಮಾಪಕ, ಮೊಬೈಲ್ ಫೋನ್ ಗಳನ್ನು, ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಕೆಎಲ್-60-ಕೆ-8043  ಮಾರುತಿ ಅಲ್ಟೋ 800 ಕಾರನ್ನು ಸ್ವಾಧೀನಪಡಿಸಿಕೊಂಡಿರುವುದಾಗಿ ಎಂಬಿತ್ಯಾದಿ.

Ullal PS

ದಿನಾಂಕ. 24/11/2023 ರಂದು ಬೆಳಿಗ್ಗೆ ಸುಮಾರು 9-45 ಗಂಟೆಗೆ ಉಳ್ಳಾಲ ತಾಲೂಕು ತೊಕ್ಕೊಟ್ಟು ಒಳಪೇಟೆ ಕಡೆಯಿಂದ ಸೋಮೇಶ್ವರ ಗ್ರಾಮದ ಸರಸ್ವತಿ ಕಾಲೋನಿ ಕಡೆಗೆ ಹೋಗುವ ರಸ್ತೆಯ ಹತ್ತಿರ ಇರುವ ಮಾರುತಿ ಆಟೋ ವರ್ಕ್ಸ್ ಅಂಗಡಿಯ ಬಳಿ ಅನಿಲ್ ಕಂಪೌಂಡ್ ಕಡೆಗೆ ಹೋಗುವ ರಸ್ತೆಯ ಬದಿಯ ಸ್ಥಳಕ್ಕೆ ದಾಳಿ ಮಾಡಿ, ಕೈಯಲ್ಲಿ ಹಿಡಿದುಕೊಂಡಿದ್ದ ಹಳದಿ ಬಣ್ಣದ ಪ್ಲಾಸ್ಟೀಕ್ ತೊಟ್ಟೆಯಲ್ಲಿ ತುಂಬಿಸಿದ್ದ ಮಾದಕ ವಸ್ತು ಗಾಂಜಾವನ್ನು ಗುಪ್ತವಾಗಿ ಗಿರಾಕಿಗಳಿಗೆ ಮಾರಾಟ ಮಾಡುತ್ತಿದ್ದ ವ್ಯಕ್ತಿ ಹಂಝ ನೀರಾರಿ ಪ್ರಾಯ 43 ವರ್ಷ ವಾಸ : ನೀರಾರಿ ಮನೆ, ಪಾಂಡವರ ಕಲ್ಲು, ಉಳಿ ಗ್ರಾಮ, ಬಂಟ್ವಾಳ ತಾಲೂಕು. ಹಾಲಿ ವಿಳಾಸ : ಮನೆ ನಂಬ್ರ 2-164-4, ಹಮೀದ್ ರವರ ಬಾಡಿಗೆ ಮನೆ, ಪಂಜಾಲ ಹೌಸ್, ಕೆ.ಸಿ ರೋಡ್, ತಲಪಾಡಿ ಗ್ರಾಮ, ಉಳ್ಳಾಲ ತಾಲೂಕು, ಮಂಗಳೂರು ಎಂಬಾತನನ್ನು ವಶಕ್ಕೆ ಪಡೆದು, ಆರೋಪಿ ಹಂಝ ನೀರಾರಿ ಎಂಬಾತನು ಯಾವುದೇ ಪರವಾನಿಗೆ ಮತ್ತು ದಾಖಲಾತಿಗಳನ್ನು ಹೊಂದದೇ ಅಕ್ರಮವಾಗಿ ವಶದಲ್ಲಿರಿಸಿಕೊಂಡಿದ್ದ 100 ಗ್ರಾಂ ಮಾದಕ ವಸ್ತು ಗಾಂಜಾ, ಅಂದಾಜು ಮೌಲ್ಯ ರೂಪಾಯಿ 3,000/-, ಸ್ಥಳಕ್ಕೆ ಬರಲು ಉಪಯೋಗಿಸಿದ KL-14-U-822ನೇ ನಂಬ್ರದ ಬ್ರೌನ್ ಮೆಟಾಲಿಕ್ ಬಣ್ಣದ ಹೊಂಡಾ ಶೈನ್ ಕಂಪೆನಿಯ ಮೋಟಾರ್ ಸೈಕಲ್ ಅಂದಾಜು ಮೌಲ್ಯ ರೂ 40,000/- , ಎಲೆಕ್ಟ್ರಾನಿಕ್ ತೂಕಮಾಪನ-1, ಅಂದಾಜು ಮೌಲ್ಯ ರೂ. 500/-, ಆಕಾಶ ನೀಲಿ ಬಣ್ಣದ ವಿವೋ ಮೊಬೈಲ್ ಫೋನ್ -1, ಅಂದಾಜು ಮೌಲ್ಯ ರೂಪಾಯಿ 6,000/- ಈ ಎಲ್ಲಾ ಸೊತ್ತುಗಳ ಅಂದಾಜು ಮೌಲ್ಯ ರೂಪಾಯಿ 49,500/- ಆಗಬಹುದು. ಆರೋಪಿ ಹಂಝ ನೀರಾರಿ ಎಂಬಾತನು ಯಾವುದೇ ಪರವಾನಿಗೆ ಹಾಗೂ ದಾಖಲಾತಿಗಳನ್ನು ಹೊಂದದೇ ಮಾದಕ ವಸ್ತು ಗಾಂಜಾವನ್ನು ಹಣಕ್ಕಾಗಿ ಗಿರಾಕಿಗಳಿಗೆ ಅಕ್ರಮವಾಗಿ ಮಾರಾಟ ಮಾಡುತ್ತಿದ್ದುದರಿಂದ ಈತನ  ವಿರುದ್ಧ ಸೂಕ್ತ ಕಾನೂನು ಕ್ರಮ ಎಂಬಿತ್ಯಾದಿ

Traffic North Police Station               

ಪಿರ್ಯಾದಿ Smt Reshma ದಾರರ ಗಂಡ ದಿನಾಂಕ 23.11.2023 ರಂದು ಮದ್ಯಾಹ್ನ ಜೋಕಟ್ಟೆಯ ತಮ್ಮ ಮನೆ ಯಿಂದ ಮಗನನ್ನು ಪಣಂಬೂರು ಶಾಲೆಯೊಂದರಿಂದ  ಕರೆತರಲು  ತನ್ನ ಬಾಬ್ತು ಮೋಟಾರ್ ಸೈಕಲ್  ನಂಬ್ರ KA-19-EC-6643 ನೇಯದನ್ನು ಸವಾರಿ ಮಾಡಿಕೊಂಡು ಹೋಗುತ್ತಾ ಮದ್ಯಾಹ್ನ  ಸಮಯ ಸುಮಾರು 2:30 ಗಂಟೆಗೆ ಜೋಕಟ್ಟೆ ಮಾಡಿಲ ಬಳಿ ತಲುಪುತ್ತಿದ್ದಂತೆಯೇ ತನ್ನ  ಎದುರುಗಡೆಯಿಂದ ಹೋಗತ್ತಿದ್ದ KA-19-AD-0135 ನೇ ನಂಬ್ರದ ಟಿಪ್ಪರ್ ಲಾರಿಯನ್ನು ಅದರ ಚಾಲಕ ಕಲಿಲ್ ಉದ್ದಿನ್  ಎಂಬಾತನು ದುಡುಕುತನ ಹಾಗೂ ನಿರ್ಲಕ್ಷತನದಿಂದ ಯಾವುದೇ ಸೂಚನೆಯನ್ನು ನೀಡದೇ ಒಮ್ಮೆಲೇ ಬಲಕ್ಕೆ ತಿರುಗಿಸಿದ ಪರಿಣಾಮ ಟಿಪ್ಪರ್ ಲಾರಿಯ ಮುಂಭಾಗದ ಬಲಬದಿಯ ಭಾಗವು ಪಿರ್ಯಾದಿದಾರರ ಗಂಡನ ಬೈಕಿಗೆ ಡಿಕ್ಕಿಯಾದ ಪರಿಣಾಮ ಕಾಲಿಗೆ ರಕ್ತಗಾಯವಾಗಿ ಗಾಯಳು ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ  ಎಂಬಿತ್ಯಾದಿ

 

 

ಇತ್ತೀಚಿನ ನವೀಕರಣ​ : 27-11-2023 06:41 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080