ಅಭಿಪ್ರಾಯ / ಸಲಹೆಗಳು

Mangalore Rural PS

ಈ ಪ್ರಕರಣದ ಸಾರಂಶವೇನೆಂದರೆ ದಿನಾಂಕ: 27-12-2023 ರಂದು ಪಿರ್ಯಾದಿದಾರರು ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುತ್ತಾ 09.30 ಗಂಟೆಗೆ ಮಂಗಳೂರು ತಾಲೂಕು ಪಚ್ಚನಾಡಿ ಕ್ರಾಸ್ ಎಂಬಲ್ಲಿ  ಅಮಲು ಪದಾರ್ಥ ಸೇವನೆ  ಮಾಡಿದಂತೆ ಕಂಡು ಬಂದ ಪ್ರಮಿತ್ (27ವ) ವಾಸ: 2 ಯೆನಪೋಯ ಕಂಪೌಂಡ್, ಜಪ್ಪು ಬಪ್ಪಾರ್,  ನಂದಿಗುಡ್ಡೆ, ಕಂಕನಾಡಿ ಪೋಸ್ಟ್ ಮಂಗಳೂರು  ಎಂಬಾತನನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ಆರೋಪಿತನು ಮಾದಕ ವಸ್ತು ಸೇವನೆ ಮಾಡಿದ ಬಗ್ಗೆ ದೃಢಪಟ್ಟಂತೆ ಆರೋಪಿತನ ವಿರುದ್ದ ಸ್ವ ಪಿರ್ಯಾದಿಯಂತೆ ಪ್ರಕರಣ ದಾಖಲಿಸಿರುವುದಾಗಿದೆ ಎಂಬಿತ್ಯಾದಿ ಸಾರಾಂಶವಾಗಿದೆ.

 

Mangalore Rural PS

ಈ ಪ್ರಕರಣದ ಸಾರಂಶವೇನೆಂದರೆ ದಿನಾಂಕ: 27-12-2023 ರಂದು ಪಿರ್ಯಾದಿದಾರರು ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುತ್ತಾ ಬೆಳಿಗ್ಗೆ 10.15 ಗಂಟೆಗೆ ಮಂಗಳೂರು ತಾಲೂಕು ಪಚ್ಚನಾಡಿ ಕ್ರಾಸ್ ಎಂಬಲ್ಲಿ  ಅಮಲು ಪದಾರ್ಥ ಸೇವನೆ  ಮಾಡಿದಂತೆ ಕಂಡು ಬಂದ ರತನ್ ರಾಜ್ (28ವರ್ಷ), ನೆಕ್ಕಿಲತೋಟ, ಕೊಟ್ಟಾರ ಚೌಕಿ, ದೇರೆಬೈಲು ಪೋಸ್ಟ್, ಮಂಗಳೂರು  ಎಂಬಾತನನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ಆರೋಪಿತನು ಮಾದಕ ವಸ್ತು ಸೇವನೆ ಮಾಡಿದ ಬಗ್ಗೆ ದೃಢಪಟ್ಟಂತೆ ಆರೋಪಿತನ ವಿರುದ್ದ ಸ್ವ ಪಿರ್ಯಾದಿಯಂತೆ ಪ್ರಕರಣ ದಾಖಲಿಸಿರುವುದಾಗಿದೆ ಎಂಬಿತ್ಯಾದಿ ಸಾರಾಂಶವಾಗಿದೆ.

 

 Mangalore Rural PS

ಈ ಪ್ರಕರಣದ ಸಾರಂಶವೇನೆಂದರೆ ದಿನಾಂಕ: 27-12-2023 ರಂದು ಪಿರ್ಯಾದಿದಾರರು ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುತ್ತಾ ಬೆಳಿಗ್ಗೆ 10:45 ಗಂಟೆಗೆ ಮಂಗಳೂರು ತಾಲೂಕು ಮಂಗಳಜ್ಯೋತಿ ಜಂಕ್ಷನ್ ಎಂಬಲ್ಲಿ  ಅಮಲು ಪದಾರ್ಥ ಸೇವನೆ  ಮಾಡಿದಂತೆ ಕಂಡು ಬಂದ ರಂಜಿತ್ (31 ವರ್ಷ) ಗ್ರೇಸಿ ಬಾಯಿ ಕಂಪೌಂಡ್, ಬಾರೆಬೈಲು, ಮಂಗಳೂರು (ಹಾಲಿ ವಾಸ: ದಾಮು ಕಾಂಪೌಂಡ್, ಕಲ್ಬಾವಿ ರಸ್ತೆ, ಕೋಡಿಕಲ್, ಮಂಗಳೂರು ಎಂಬಾತನನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ಆರೋಪಿತನು ಮಾದಕ ವಸ್ತು ಸೇವನೆ ಮಾಡಿದ ಬಗ್ಗೆ ದೃಢಪಟ್ಟಂತೆ ಆರೋಪಿತನ ವಿರುದ್ದ ಸ್ವ ಪಿರ್ಯಾದಿಯಂತೆ ಪ್ರಕರಣ ದಾಖಲಿಸಿರುವುದಾಗಿದೆ ಎಂಬಿತ್ಯಾದಿ ಸಾರಾಂಶವಾಗಿದೆ.

 

Mangalore East Traffic PS

ಈ ಪ್ರಕರಣದ ಸಾರಾಂಶವೇನೆಂದರೆ, ಪಿರ್ಯಾದಿದಾರರ ಮಗನಾದ ಎಂ.ಪಿ ಮೋಹಿತ್, ಪ್ರಾಯ-12 ವರ್ಷ ಎಂಬಾತನು ಸರ್ಕಾರಿ ಹಿರಿಯ ಬಾಲಕರ ಪ್ರಾಥಾಮಿಕ ಶಾಲೆ ಮೇಲುಕೋಟೆ ಹಾಸನ ಎಂಬಲ್ಲಿಂದ ಶಾಲಾ ಶೈಕ್ಷಣಿಕ ಪ್ರವಾಸಕ್ಕೆಂದು ಶಿಕ್ಷಕರೊಂದಿಗೆ ಮಂಗಳೂರಿಗೆ ಬಂದಿದ್ದು, ದಿನಾಂಕ: 22-12-2023 ರಂದು ಕದ್ರಿ ದೇವಸ್ಥಾನದಲ್ಲಿ ಮದ್ಯಾಹ್ನ ಊಟ ಮುಗಿಸಿ ಕೈ ಕೈ ಹಿಡಿದುಕೊಂಡು ಶಿಕ್ಷಕರು ಹಾಗೂ ಇತರ ಮಕ್ಕಳೊಂದಿಗೆ ರಸ್ತೆಯ ಬದಿಯಲ್ಲಿ ಬಸ್ಸು ಹತ್ತಲು ನಡೆದುಕೊಂಡು ಹೋಗುತ್ತಾ ಕದ್ರಿ ದೇವಸ್ಥಾನ ರಸ್ತೆಯಲ್ಲಿರುವ ಮೋರ್ ಸೂಪರ್ ಮಾರ್ಕೆಟ್ ಎದುರುಗಡೆ ನರ್ಸರಿಯ ಬಳಿಯಲ್ಲಿ ತಲುಪುವಾಗ 13:40 ಗಂಟೆಗೆ ಕದ್ರಿ ದೇವಸ್ಥಾನ ಕಡೆಯಿಂದ KA-19-MN-3231 ನೇ ಕಾರನ್ನು ಅದರ ಚಾಲಕನು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಎಂ.ಪಿ ಮೋಹಿತ್ ರವರಿಗೆ ಡಿಕ್ಕಿಪಡಿಸಿದ ಪರಿಣಾಮ ಬಲಕಾಲಿನ ಹಿಮ್ಮಡಿಗೆ ಗುದ್ದಿದ ಹಾಗೂ ರಕ್ತಗಾಯವಾಗಿರುತ್ತದೆ. ಜೊತೆಗಿದ್ದ ಶಿಕ್ಷಕರು ಚಿಕಿತ್ಸೆಯ ಬಗ್ಗೆ ವೆನ್ ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಯನ್ನು ಕೊಡಿಸಿ ಅಲ್ಲಿಂದ ಕಾರೊಂದರಲ್ಲಿ ಹಾಸನಕ್ಕೆ ಕರೆದುಕೊಂಡು ಹೋಗಿರುತ್ತಾರೆ. ಅಪಘಾತಪಡಿಸಿದ KA-19-MN-3231 ನೇ ಚಾಲಕನು ಕಾರನ್ನು ಅಪಘಾತ ಸ್ಥಳದಲ್ಲಿ ನಿಲ್ಲಿಸಿದೇ ಆಸ್ಪತ್ರೆಗೂ ಕರೆದುಕೊಂಡು ಹೋಗದೇ ಪರಾರಿಯಾಗಿರುತ್ತಾರೆ ಎಂಬಿತ್ಯಾದಿ.

 

Mangalore Rural PS

ಈ ಪ್ರಕರಣದ ಸಾರಂಶವೇನೆಂದರೆ ದಿನಾಂಕ: 27-12-2023 ರಂದು ಪಿರ್ಯಾದಿದಾರರು ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುತ್ತಾ ಬೆಳಿಗ್ಗೆ 12:15 ಗಂಟೆಗೆ ಮಂಗಳೂರು ತಾಲೂಕು ಮಂಗಳಜ್ಯೋತಿ ಜಂಕ್ಷನ್ ಎಂಬಲ್ಲಿ  ಅಮಲು ಪದಾರ್ಥ ಸೇವನೆ  ಮಾಡಿದಂತೆ ಕಂಡು ಬಂದ ರಮಿತ್ ರಾಜ (43 ವರ್ಷ) ವಾಸ: ರಾಜಪ್ಪ ಕಾಂಪೌಂಡ್ ಎನ್ ಜಿ ರೋಡ್, ಅತ್ತಾವರ  ಮಂಗಳೂರು  ಎಂಬಾತನನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ಆರೋಪಿತನು ಮಾದಕ ವಸ್ತು ಸೇವನೆ ಮಾಡಿದ ಬಗ್ಗೆ ದೃಢಪಟ್ಟಂತೆ ಆರೋಪಿತನ ವಿರುದ್ದ ಸ್ವ ಪಿರ್ಯಾದಿಯಂತೆ ಪ್ರಕರಣ ದಾಖಲಿಸಿರುವುದಾಗಿದೆ ಎಂಬಿತ್ಯಾದಿ ಸಾರಾಂಶವಾಗಿದೆ. (ಮೂಲ ಪಿರ್ಯಾದಿಯನ್ನು ಲಗ್ತಿಕರಿಸಿದೆ)

 

Mangalore East Traffic PS

 ಪ್ರಕರಣದ ಸಾರಾಂಶವೇನೆಂದರೆ, ಪಿರ್ಯಾದಿದಾರರಾದ ಡಿ. ದ್ಯಾನ್ (22 ವರ್ಷ) ರವರು ನಿನ್ನೆ ದಿನ ದಿನಾಂಕ 26-12-2023 ರಂದು ತನ್ನ ಬಾಬ್ತು KA-19-EJ-2803 ನೊಂದಣಿ ನಂಬ್ರದ ಮೋಟಾರ್ ಸೈಕಲನ್ನು ಬಾಳೆಬೈಲ್ ಕ್ರಾಸ್ ಕಡೆಯಿಂದ  ಎ.ಜೆ. ಆಸ್ಪತ್ರೆ ಕಡೆಗೆ ಸಾಗಿರುವ ಸರ್ವೀಸ್ ರಸ್ತೆಯಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಾ  ಸಂಜೆ ಸಮಯ ಸುಮಾರು 4.50 ಗಂಟೆಗೆ ಸರ್ವೀಸ್ ರಸ್ತೆಯಲ್ಲಿ ಇರುವ ಬಸ್ ನಿಲ್ದಾಣದ ಎದುರು ಬಂದು ತಲುಪುತ್ತಿದ್ದಂತೆ ಕುಂಟಿಕಾನ ಕಡೆಯಿಂದ KA-19-HF-7685 ನೊಂದಣಿ ನಂಬ್ರದ ಬುಲೆಟ್ ಬೈಕನ್ನು ಅದರ ಸವಾರ ಮೊಹಮ್ಮದ್ ತಾಹ ಹುಸೈನ್ ಎಂಬುವರು ತನ್ನ ಮುಂದೆ ಚಲಿಸುತ್ತಿದ್ದ ಲಾರಿಯೊಂದನ್ನು ಬಲಗಡೆಯಿಂದ ಓವರ್ ಟೇಕ್ ಮಾಡಿ ನಿರ್ಲಕ್ಷ್ಯತನದಿಂದ ರಸ್ತೆಯ ತೀರಾ ಬಲ ಬದಿಗೆ ಸವಾರಿ ಮಾಡಿಕೊಂಡು ಬಂದು ಪಿರ್ಯಾದಿದಾರರ ಮೋಟಾರ್ ಸೈಕಲಿಗೆ ಢಿಕ್ಕಿ ಹೊಡೆದ ಪರಿಣಾಮ ಎರಡೂ  ವಾಹನ ಸಮೇತ ಇಬ್ಬರೂ ರಸ್ತೆಗೆ ಬಿದ್ದಿದ್ದು, ಅಪಘಾತದಲ್ಲಿ ಪಿರ್ಯಾದಿದಾರರ ಬಲ ಕಾಲಿನ ನಾಲ್ಕನೆ ಬೆರಳು ತುಂಡಾಗಿದ್ದು, ಐದನೇ ಬೆರಳಿಗೆ ಮೂಳೆ ಮುರಿತದ ಗಾಯ, ಹೆಬ್ಬೆರಳಿಗೆ ರಕ್ತಗಾಯ, ಬಲ ಕಾಲಿನ ಮೊಣಗಂಟಿನ ಬಳಿ , ಬಲಕೈ ಕೋಲು ಕೈ ಬಳಿ ತರಚಿದ ಗಾಯವಾದವರನ್ನು ಸಾರ್ವಜನಿಕರು ಎ.ಜೆ. ಆಸ್ಪತ್ರೆಗೆ ಚಿಕಿತ್ಸೆಯ ಬಗ್ಗೆ ಕರೆದುಕೊಂಡು ಹೋಗಿದ್ದು, ಪರೀಕ್ಷಿಸಿದ ಅಲ್ಲಿನ ವೈದ್ಯರು ಒಳರೋಗಿಯನ್ನಾಗಿ ದಾಖಲಿಸಿಕೊಂಡು ಚಿಕಿತ್ಸೆ ನೀಡುತ್ತಿದ್ದು, ಅಪಘಾತಪಡಿಸಿದ ಮೋಟಾರ್ ಸೈಕಲ್ ಸವಾರ ಹೊರ ರೋಗಿಯಾಗಿ ಚಿಕಿತ್ಸೆ ಪಡೆದು ತೆರಳಿರುತ್ತಾನೆ.  ಅಪಘಾತಪಡಿಸಿದ ಮೋಟಾರ್ ಸೈಕಲ್ ಸವಾರ ಮೊದಲಿಗೆ ಚಿಕಿತ್ಸಾ ವೆಚ್ಚವನ್ನು ನೀಡುವುದಾಗಿ ತಿಳಿಸಿದ್ದು, ನಂತರ ನಿರಾಕರಿಸಿದ್ದರಿಂದ ತನ್ನ ಮನೆಯವರೊಂದಿಗೆ ಚರ್ಚಿಸಿ ಈ ದಿನ ತಡವಾಗಿ ದೂರು ನೀಡುತ್ತಿರುವುದಾಗಿದೆ ಎಂಬಿತ್ಯಾದಿ.

 

Mangalore East Traffic PS         

 ಈ ಪ್ರಕರಣದ ಸಾರಾಂಶವೇನೆಂದರೆ, ಪಿರ್ಯಾದಿದಾರರಾದ ಎಸ್ ಅರವಿಂದ್, ಪ್ರಾಯ: 20 ವರ್ಷ ರವರು ನಿನ್ನೆ ದಿನ ದಿನಾಂಕ 26/12/2023 ರಂದು ಮೋಟಾರ್ ಸೈಕಲ್ ನೊಂದಣಿ ಸಂಖ್ಯೆ: KA-19-HN-0465 ನೇಯದರಲ್ಲಿ ತಮ್ಮ ಸ್ನೇಹಿತ ಸಾರಂಗ್ ಎಂಬುವರನ್ನು ಹಿಂಬದಿ ಸವಾರರನ್ನಾಗಿ ಕುಳ್ಳರಿಸಿಕೊಂಡು ಬಟ್ಟಗುಡ್ಡೆ ಕಡೆಯಿಂದ ಭಾರತ್ ಬೀಡಿ ಕಡೆಗೆ ಇರುವ ಕದ್ರಿ ಕಂಬ್ಳ ಸಾರ್ವಜನಿಕ ರಸ್ತೆಯಲ್ಲಿ ಚಲಾಯಿಸಿಕೊಂಡು ಹೋಗುತ್ತಿರುವಾಗ ಸಮಯ ಸುಮಾರು ಸಂಜೆ 6-15 ಗಂಟೆಗೆ ಯಮಹಾ ಮ್ಯೂಸಿಕ್ ಸ್ಕ್ವೇರ್ ಶಾಪ್ ಬಳಿ ತಲುಪುತ್ತಿದ್ದಂತೆ ಭಾರತ್ ಬೀಡಿ ಕಡೆಯಿಂದ ಬರುತ್ತಿದ್ದ ಕಾರು ನೊಂದಣಿ ಸಂಖ್ಯೆ: KA-19-MN-6621 ನೇಯದನ್ನು ಅದರ ಚಾಲಕ ಶೇನ್ ವಿನ್ಸೆಂಟ್ ಪಿಂಟೋ ಎಂಬುವರು ಯಾವುದೇ ಮುನ್ಸೂಚನೆಯನ್ನು ನೀಡದೇ ಒಮ್ಮೇಲೆ ಏಕಾಏಕಿಯಾಗಿ ಬಲಕ್ಕೆ ತಿರುಗಿಸಿ ಬೈಕಿಗೆ ಢಿಕ್ಕಿ ಪಡಿಸಿದ್ದ ಪರಿಣಾಮ ಬೈಕು ರಸ್ತೆಗೆ ಬಿದ್ದು ಸವಾರ ಎಸ್ ಅರವಿಂದ ಹಾಗೂ ಹಿಂಬದಿ ಸವಾರ ಸಾರಂಗ್ ರವರು ಗಾಯಗೊಂಡಿದ್ದು ಚಿಕಿತ್ಸೆಗಾಗಿ ಸಿ.ಟಿ ಆಸ್ಪತ್ರೆಗೆ ಹೋದಾಗ ಪರೀಕ್ಷಿಸಿದ ವೈದ್ಯರು ಪಿರ್ಯಾದಿದಾರರ ಎಡಕೈ ಕೋಲುಕೈಗೆ ಮೂಳೆಮುರಿತವಾಗಿರುವುದಾಗಿ ತಿಳಿಸಿರುತ್ತಾರೆ, ಸಾರಂಗ್ ರವರಿಗೆ ಸಣ್ಣಪುಟ್ಟ ತರಚಿದ ಗಾಯಗಳಾಗಿರುತ್ತವೆ, ಪಿರ್ಯಾದಿದಾರರು ಹೆಚ್ಚಿನ ಚಿಕಿತ್ಸೆಗಾಗಿ ಎ.ಜೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ, ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ತಮ್ಮಲ್ಲಿ ಕೋರಿಕೆ ಎಂಬಿತ್ಯಾದಿ

 

Urva PS

 ಈ ಪ್ರಕರಣದ ಸಂಕ್ಷಿಪ್ತ ಸಾರಾಂಶವೇನೆಂದರೆ, ಪಿರ್ಯಾಧಿದಾರರು ಮಂಗಳೂರು ನಗರದ ಬಂದರು ಠಾಣಾ ಪೊಲೀಸ್ ಉಪ ನಿರೀಕ್ಷಕರಾಗಿದ್ದು, ಮೇಲಾಧಿಕಾರಿಯವರ ಆದೇಶದಂತೆ ಮಾದಕ ವಸ್ತು ಸೇವನೆ ಮಾಡುವವರ ಪತ್ತೆ ಬಗ್ಗೆ ವಿಶೇಷ ತಂಡದಲ್ಲಿ ಮಂಗಳೂರು ನಗರ ಕೇಂದ್ರ ಉಪ-ವಿಭಾಗದ ವ್ಯಾಪ್ತಿಯಲ್ಲಿ ಸಿಬ್ಬಂದಿಗಳೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿದ್ದಾಗ  ದಿನಾಂಕ: 27-12-2023 ರಂದು ಸಾಯಂಕಾಲ 16-30 ಗಂಟೆಗೆ ಬಾತ್ಮೀದಾರರ ಖಚಿತ ಮಾಹಿತಿ ಮೇರೆಗೆ ಅನೆಗುಂಡಿ ಬಳಿ ತಲುಪಿದಾಗ ಒಬ್ಬಾತನು ಅಮಲು ಪದಾರ್ಥ ಸೇವಿಸಿದ ಹಾಗೆ ತೂರಾಡುತ್ತಿದ್ದು,  ಆತನನ್ನು  ಕಂಡು ಪಿರ್ಯಾಧಿದಾರರು ಮತ್ತು  ಸಿಬ್ಬಂದಿಗಳು ವಿಚಾರಿಸಿದಾಗ ನಾಲಿಗೆ ತೊದಲುತ್ತಾ  ಆತನ ಹೆಸರು ಶರಣ್ ಸುವರ್ಣ, ಪ್ರಾಯ- 20 ವರ್ಷ, ದೇರೆಬೈದ್ಯರ ಪಾಲ್, ತಲಪಾಡಿ, ದಕ್ಷಿಣ ಕನ್ನಡ ಜಿಲ್ಲೆ ಎಂಬುದಾಗಿ ತಿಳಿಸಿದ್ದು, ಆತನು ಅಮಲು ಪದಾರ್ಥ ಸೇವಿಸಿರುವ ಬಗ್ಗೆ ಕೂಲಂಕುಶವಾಗಿ ವಿಚಾರಿಸಲಾಗಿ, ಆತನು ಗಾಂಜಾ ಸೇವನೆ ಮಾಡಿರುವುದಾಗಿ ತಪ್ಪೋಪ್ಪಿಕೊಂಡ  ಮೇರೆಗೆ  ಆತನನ್ನು ವೈಧ್ಯಕೀಯ ತಪಾಸಣೆಗೆ ಒಳಪಡಿಸಿದ್ದಲ್ಲಿ ಆತನು ಮಾದಕ ವಸ್ತು ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿರುವುದರಿಂದ  ಆತನ ಮೇಲೆ ಮುಂದಿನ ಕಾನೂನು ಕ್ರಮ ಜರುಗಿಸುವಂತೆ ನೀಡಿದ ಪಿರ್ಯಾಧಿ ಮೇರೆಗೆ ದಾಖಲಾದ ಪ್ರಕರಣವಾಗಿರುತ್ತದೆ ಎಂಬಿತ್ಯಾದಿ.

 

 

Mangalore North PS

ಪ್ರದೀಪ್ ಟಿ.ಆರ್ ಪೊಲೀಸ್ ಉಪ ನಿರೀಕ್ಷಕರು ಮಂಗಳೂರು ಉತ್ತರ ಪೊಲೀಸ್ ಠಾಣೆಯವರು ನೀಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ: 27.12.2023 ರಂದು ಸಮಯ ಮದ್ಯಾಹ್ನ 12:00 ಗಂಟೆಗೆ ಮಾದಕ ದ್ರವ್ಯ ವ್ಯಸನ ಮತ್ತು ಮಾರಾಟವನ್ನು ತಡೆಗಟ್ಟುವ ಮತ್ತು ನಿಯಂತ್ರಿಸುವ ನಿಟ್ಟಿನಲ್ಲಿ ಮಂಗಳೂರು ನಗರ ಪೊಲೀಸ್ ಕೇಂದ್ರ ಉಪವಿಭಾಗದ ವತಿಯಿಂದ ರಚಿತವಾಗಿರುವ Anti Drug Team ತಂಡದ ಅಧಿಕಾರಿ ಪ್ರದೀಪ್ ಟಿ ಆರ್ ಪಿ.ಎಸ್.ಐ ಮಂಗಳೂರು ಉತ್ತರ ಪೊಲೀಸ್ ಠಾಣೆ ಆದ ನಾನು Anti Drug Team  ನ ಸಿಬ್ಬಂದಿರವರೊಂದಿಗೆ ರೌಂಡ್ಸ ಕರ್ತವ್ಯ ದಲ್ಲಿರುವ ಸಮಯ ಬಂದ ಖಚಿತ ಮಾಹಿತಿಯ ಮೇರೆಗೆ ಈ ದಿನ ಮದ್ಯಾಹ್ನ 12:30 ಗಂಟೆಗೆ ಮಂಗಳೂರು ನಗರದ  ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯ ಕುದ್ರೋಳಿ ಬಳಿ ತಲುಪಿದಾಗ ಒಬ್ಬಾತನು ಅಮಲು ಪದಾರ್ಥ ಸೇವಿಸಿದ ಹಾಗೆ ತೂರಾಡುತ್ತಿದ್ದು ಆತನನ್ನು ಕಂಡು ವಿಚಾರಿಸಲಾಗಿ ಬಾಯಿಂದ ಗಾಂಜಾ ಸೇವನೆ ಮಾಡಿದ ವಾಸನೆ ಬರುತ್ತಿದ್ದು, ನಾಲಿಗೆ ತೊದಲುತ್ತಾ ತನ್ನ ಹೆಸರು: ಅಕ್ಷಯ್ (27) ತಂದೆ- ಕಿಶೋರ್ ಜೋಗಿ, ವಾಸ-5-31, ಸರ್ಕಾರಿ ಗುಡ್ಡೆ, ಜೋಗಿ ಬ್ರಾಸ್, ಕಾವೂರು, ಮಂಗಳೂರು ಎಂಬುದಾಗಿ ತಿಳಿಸಿದ್ದು. ಅನುಮಾನಗೊಂಡ ಪಿರ್ಯಾದಿದಾರರು ಆತನಲ್ಲಿ ಮುಂದುವರೆದು ಅಮಲು ಪದಾರ್ಥ ಸೇವಿಸಿರುವ ಬಗ್ಗೆ ಕೂಲಂಕುಷವಾಗಿ ವಿಚಾರಿಸಲಾಗಿ ತಾನು ಗಾಂಜಾ ಸೇವನೆ ಮಾಡಿರುವುದಾಗಿ ಒಪ್ಪಿಕೊಂಡಿರುತ್ತಾನೆ. ಸದ್ರಿ ಅಕ್ಷಯ್ ಅವರ ವೈದ್ಯಕೀಯ ಪರೀಕ್ಷೆ ಬಗ್ಗೆ ಎ ಜೆ ಆಸ್ಪತ್ರೆಯ ವೈದ್ಯರು ಆತನನ್ನು ಪರೀಕ್ಷಿಸಿದಲ್ಲಿ, ಅಕ್ಷಯ್ ಎಂಬಾತನು Tetrahydracannabinoid, (Marijuana) ಎಂಬ ಮಾದಕ ದ್ರವ್ಯವನ್ನು ಸೇವನೆ ಮಾಡಿರುವುದಾಗಿ ದೃಢ ಪತ್ರವನ್ನು ನೀಡಿರುತ್ತಾರೆ ಎಂಬಿತ್ಯಾದಿ

 

Traffic North Police

ಈ ಪ್ರಕರಣದ ಸಾರಾಂಶವೇನಂದರೆ, ಈ ದಿನ ದಿನಾಂಕ 27.12.2023 ರಂದು ಪಿರ್ಯಾದಿದಾರರು KA-19-D-8699 ನಂಬ್ರದ ನವದುರ್ಗಾ ಬಸ್ಸಿನಲ್ಲಿ ನಿರ್ವಾಹಕನಾಗಿ, ಮಂಗಳೂರಿನಿಂದ ಸುರತ್ಕಲ್ ಮಾರ್ಗವಾಗಿ ಕಟೀಲಿಗೆ ಪ್ರಯಾಣಿಕರನ್ನು ಹತ್ತಿಸಿಕೊಂಡು ಹೋಗುತ್ತಾ ಬೆಳಿಗ್ಗೆ ಸಮಯ ಸುಮಾರು 07:50 ಗಂಟೆಗೆ ಮುಕ್ಕಾ ಚೆಕ್ ಪೊಸ್ಟ್ ಬಳಿ ಬಸ್ಸನ್ನು ನಿಲ್ಲಿಸಿ ಪ್ರಯಾಣಿಕರನ್ನು ಇಳಿಸುತ್ತಿರುವಾಗ ಅದೇ ಸಮಯಕ್ಕೆ ಪಿರ್ಯಾದಿದಾರರ ಬಸ್ಸಿನ ಹಿಂದಿನಿಂದ ಅಂದರೇ ಸುರತ್ಕಲ್ ಕಡೆಯಿಂದ KA-51-AC-0445 ನಂಬ್ರದ ಬಸ್ಸನ್ನು ಅದರ ಚಾಲಕ ಸಂತೋಷ ಎಂಬಾತನು ದುಡುಕುತನದಿಂದ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಬಸ್ಸಿನ ಹಿಂಬದಿಗೆ ಡಿಕ್ಕಿ ಪಡಿಸಿದ ಪರಿಣಾಮ ಬಸ್ಸಿನ ಹಿಂಬದಿ ಸೀಟಿನಲ್ಲಿ ಕುಳಿತ್ತಿದ್ದ ಪ್ರಯಾಣಿಕರಾದ ಪ್ರೀತಮ್ ಮತ್ತ ಸೌರವ ರವರು ಮುಗ್ಗರಿಸಿ ಬಿದ್ದು, ಪ್ರೀತಮ್ ರವರಿಗೆ ಬೆನ್ನಿಗೆ ಗುದ್ದಿದ ರೀತಿಯ ನೋವಾಗಿದ್ದು,  ಸೌರವ ರವರಿಗೆ ಬಲ ಕಾಲಿನ ಮೊಣಗಂಟಿನಲ್ಲಿ ಗುದ್ದಿದ ರೀತಿಯ ನೋವಾಗಿರುತ್ತದೆ. ಗಾಯಾಳುಗಳನ್ನು ಮುಕ್ಕಾದ ಶ್ರೀನಿವಾಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತಾರೆ ಎಂಬಿತ್ಯಾದಿ

 

 

Traffic South Police Station

 ಪಿರ್ಯಾದಿದಾರರು ದಿನಾಂಕ 27-12-2023 ರಂದು ಜಪ್ಪಿನಮೊಗರು ಬಸ್ಸು ನಿಲ್ದಾಣದಿಂದ ರಾಹೆ 66 ರ ರಸ್ತೆಯ ಎಡಬದಿಯಲ್ಲಿ ಖಾಲಿ ಜಾಗದಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಮಾಸೂನ್ ಟೈಲ್ಸ್ ಅಂಗಡಿಯ  ಬಳಿ ತಲುಪುವಾಗ ಸಮಯ ಸುಮಾರು ಮದ್ಯಾಹ್ನ 12.30 ಗಂಟೆಗೆ  ಪಿರ್ಯಾದಿದಾರರ ಹಿಂದಿನಿಂದ KA19AA7144 ನೇ ದರ ಗೂಡ್ಸ್ ಟೆಂಪೊ ಚಾಲಕ  ರಂಜೀತ್ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಹಿಂಬದಿಗೆ ಡಿಕ್ಕಿಹೊಡೆದು, ಅವರ ಮುಂದೆ ನಡೆದುಕೊಂಡು ಹೋಗುತ್ತಿದ್ದ ಒರ್ವ ಮಹಿಳೆಗೆ ಡಿಕ್ಕಿ ಹೊಡೆದು  ಬಳಿಕ  ಅಲ್ಲೆ ರಸ್ತೆಯ ಬದಿಯ ಖಾಲಿ ಜಾಗದಲ್ಲಿ ನಿಲ್ಲಿಸಿದ್ದ KA19MN8133 ನೇ ಕಾರಿಗೆ ಡಿಕ್ಕಿಪಡಿಸಿದ್ದು, ಅಪಘಾತದ ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದು ತಲೆಯ ಹಿಂಭಾಗಕ್ಕೆ, ಹಣೆಯ ಬಲಭಾಗಕ್ಕೆ, ಮೂಗಿಗೆ ರಕ್ತ ಗಾಯವಾಗಿದ್ದು, ಹಾಗೂ ಬಲ ಭುಜಕ್ಕೆ ಮೂಳೆ ಮುರಿತದ ಗಾಯವಾಗಿದ್ದು ಪಿರ್ಯಾದಿದಾರರು ತೊಕ್ಕೊಟ್ಟಿನ ಸಹಾರ  ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತಾರೆ ಎಂಬಿತ್ಯಾದಿ

 Bajpe PS

ಈ ಪ್ರಕರಣದ ಸಂಕ್ಷಿಪ್ತ ಸಾರಾಂಶವೇನೆಂದರೆ ಪಿರ್ಯಾದಿದಾರರು ನಿನ್ನೆ ದಿನಾಂಕ 26.12.2023 ರಂದು KA19 HP8812 ನ ನಂಬ್ರದ  ಸ್ಕೂಟರ್ ನಲ್ಲಿ ಬಜಪೆ ಕಡೆಯಿಂದ ಕಾವೂರು ಕಡೆಗೆ ಹೋಗುತ್ತಿರುವಾಗ ಕರಂಬಾರಿನಿಂದ ಪೆಟ್ರೋಲ್ ಪಂಪ್ ದಾಟಿ ಸ್ವಲ್ಪ ಮುಂದೆ ರಸ್ತೆಯಲ್ಲಿ ಹೋಗುತ್ತಿರುವಾಗ ಸಮಯ ಸುಮಾರು 12.00 ಗಂಟೆಗೆ ಪಿರ್ಯಾದಿದಾರರ ಹಿಂಬದಿಯಿಂದ ಗ್ರೇ ಬಣ್ಣದ ಸ್ವಿಫ್ಟ್ ಡಿಸೈರ್ ಕಾರಿನ ಚಾಲಕನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಕಾರನ್ನು ಚಲಾಯಿಸಿಕೊಂಡು ಬಂದು ಹಿಂಬದಿಯಿಂದ ಹಾಗೂ ಹ್ಯಾಂಡಲ್ ಗೆ ಡಿಕ್ಕಿ ಮಾಡಿ ಕಾರನ್ನು ನಿಲ್ಲಿಸದೇ ಪರಾರಿಯಾಗಿ ಹೋಗಿರುತ್ತಾರೆ. ಇದರಿಂದ ಪಿರ್ಯಾದಿದಾರರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದಿದ್ದು, ಸೊಂಟದ ಡಿಕ್ಕಿ ಗುದ್ದಿದ ನೋವು ಹಾಗೂ ಬಲಕಾಲಿನ ಮೊಣಿಗಂಟಿಗೆ ತರಚಿದ ಗಾಯವಾಗಿರುತ್ತದೆ. ಗಾಯಗೊಂಡವರನ್ನು ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ದಾಖಲಿಸಿದ್ದು  , ಪಿರ್ಯಾದಿದಾರರಿಂದ  ಆಸ್ಪತ್ರೆಯಲ್ಲಿ  ಹೇಳಿಕೆಯನ್ನು ಪಡೆದುಕೊಂಡು, ಠಾಣೆಗೆ ತಂದು ಹಾಜರುಪಡಿಸಿದ್ದನ್ನು ಸ್ವೀಕರಿಸಿಕೊಂಡು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂಬಿತ್ಯಾದಿ

ಇತ್ತೀಚಿನ ನವೀಕರಣ​ : 27-12-2023 10:19 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080