ಅಭಿಪ್ರಾಯ / ಸಲಹೆಗಳು

Crime Reported in : Mangalore East Traffic PS                   

ದಿನಾಂಕ 26-01-2023 ರಂದು ಪಿರ್ಯಾದಿ ABDULLA ತನ್ನ ಬಾಬ್ತು ಸ್ಕೂಟರ್ ನಂಬ್ರ KA-19-HC-9015 ನೇದನ್ನು ಚಲಾಯಿಸಿಕೊಂಡು ಪಿರ್ಯಾದುದಾರರ ಹೆಂಡತಿ ಮೊಹಬಿ ರವರನ್ನು ಸಹಸವಾರೆಯನ್ನಾಗಿ ಕುಳ್ಳಿರಿಸಿಕೊಂಡು ತನ್ನ ಮನೆಯಾದ ಮಿತ್ತಮೊಗರು ಕಡೆಯಿಂದ PVS ಕಡೆ ಹೊರಟು ಮಿಲಾಗ್ರಿಸ್ ಕ್ರಾಸ್  ರೋಡ್ ಮಾರ್ಗವಾಗಿ ಅರವಿಂದ ಜಂಕ್ಷನ್   ತಲುಪಿ LHH ರಸ್ತೆಗೆ ಸಂಪರ್ಕಿಸುವ ತಿರುವು ರಸ್ತೆಯನ್ನು ತಲುಪುತ್ತಿದ್ದಂತೆ ಸಮಯ ಸಂಜೆ 7:45 ಗಂಟೆಗೆ ಎದುರುಗಡೆಯಿಂದ, ಅಂದರೆ ಬಾವುಟಗುಡ್ಡ ಕಡೆಯಿಂದ ವಿರುದ್ದ ದಿಕ್ಕಿನಲ್ಲಿ KA-02-AF-0529 ನೇ ನಂಬ್ರದ ಕಾರನ್ನು ಅದರ ಚಾಲಕ ಶರತ್ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷತನದಿಂದ ಅಪಾಯಕಾರಿಯಾಗಿ ಅರವಿಂದ ಜಂಕ್ಷನ್ ಕಡೆಗೆ ಹೊಗುವ ಭರದಲ್ಲಿ ಪಿರ್ಯಾದುದಾರರ ಸ್ಕೂಟರ್ ಗೆ ಢಿಕ್ಕಿ ಪಡಿಸಿರುತ್ತಾರೆ. ಢಿಕ್ಕಿಯ ಪರಿಣಾಮ ಪಿರ್ಯಾದುದಾರರು ಹಾಗೂ ಅವರ ಹೆಂಡತಿ ಇಬ್ಬರು ಸಹ ಸ್ಕೂಟರ್ ಸಮೇತ ರಸ್ತೆಗೆ ಬಿದ್ದಿದ್ದು ಕಾರ ಚಾಲಕ ಅವರನ್ನು ಎಬ್ಬಿಸಿ, ಉಪಚರಿಸಿ, ಚಿಕಿತ್ಸೆ ಬಗ್ಗೆ  KMC ಆಸ್ಪತ್ರೆಗೆ ದಾಖಲಿಸಿರುತ್ತಾರೆ. ಸದ್ರಿ ಅಪಘಾತದಿಂದ ಪಿರ್ಯಾದುದಾರರ ಮೂಗಿಗೆ, ಬೆನ್ನಿಗೆ ತರಚಿದ ಗಾಯಗಳಾಗಿದ್ದು ಪಿರ್ಯಾದುದಾರರ ಹೆಂಡತಿಯ ತಲೆಗೆ ಚರ್ಮಹರಿದ ಗಾಯ, ಸೊಂಟಕ್ಕೆ ಗುದ್ದಿದ ಗಾಯವಾಗಿರುತ್ತದೆ, ಎಂಬಿತ್ಯಾದಿ.

Crime Reported in : Ullal PS

ದಿನಾಂಕ 27-01-2023 ರಂದು  ಮದ್ಯಾಹ್ನ 12-00 ಗಂಟೆಗೆ ಪಿ.ಎಸ್.ಐ ಪ್ರದೀಪ್ ಟಿ.ಆರ್‌. ಠಾಣೆಯಲ್ಲಿರುವಾಗ  ಉಳ್ಳಾಲ ಮೊಗವೀರ ಪಟ್ನದ ಬಳಿ ರಸ್ತೆಯ ಮೇಲೆ ಕೊಳೆತು ನಾರುವ ಮೀನಿನ  ಎಣ್ಣೆಯನ್ನು  ಚೆಲ್ಲಿಕೊಂಡು ಹೋಗುತ್ತಿದ್ದ  ಕೆ.ಎ-21-ಬಿ-7763 ನೇ ಟ್ಯಾಂಕರ್ ಲಾರಿಯನ್ನು  ಸಾರ್ವಜನಿಕರು  ತಡೆದು ನಿಲ್ಲಿಸಿ  ಗಲಾಟೆ ಮಾಡುತ್ತಿದ್ದಾರೆ ಎಂಬುದಾಗಿ  ಬಂದ ಮಾಹಿತಿಯಂತೆ ಸ್ಥಳಕ್ಕೆ ಮದ್ಯಾಹ್ನ 12-15 ಗಂಟೆಗೆ ಉಳ್ಳಾಲ ಮೊಗವೀರ ಪಟ್ನಕ್ಕೆ ತಲುಪಿ  ಪರಿಶೀಲಿಸಿದಲ್ಲಿ  ಸ್ಥಳದಲ್ಲಿ ಕೆ.ಎ-21-ಬಿ-7763 ನೇ ಟ್ಯಾಂಕರ್ ಲಾರಿ ಹಾಗೂ  ರಸ್ತೆಯ ಮೇಲೆ ಕೊಳೆತು ನಾರುವ ಮೀನಿನ  ಎಣ್ಣೆಯನ್ನು  ಚೆಲ್ಲಿರುವುದು ಕಂಡು ಬಂದಿರುತ್ತದೆ,   ಸದ್ರಿ ವಾಹನವನ್ನು  ಪರಿಶೀಲನೆ ಮಾಡಲಾಗಿ ಅವೈಜ್ಞಾನಿಕವಾಗಿ ಟ್ಯಾಂಕರ್ ಲಾರಿಯಲ್ಲಿ ಕೊಳೆತ ಮೀನಿನ ಎಣ್ಣೆಯನ್ನು ತುಂಬಿಸಿರುವುದು ಕಂಡು ಬರುತ್ತದೆ,  ಸ್ಥಳದಲ್ಲಿದ್ದ  ಟ್ಯಾಂಕರ್ ಲಾರಿಯ ಚಾಲಕನ ಹೆಸರು ಕೇಳಲಾಗಿ  ಹೆಸರು ಚೆನ್ನ ಬಸಪ್ಪ ಎಂಬುದಾಗಿಯೂ ವಾಹನದ ಮಾಲಕನ ಹೆಸರು ಕೇಳಿದಲ್ಲಿ ಅವರ ಹೆಸರು ಕೆ.ಮೋನಪ್ಪ ಮೂಲ್ಯ ಎಂಬುದಾಗಿಯೂ ತಿಳಿದು ಬಂದಿರುತ್ತದೆ, ಮುಂದಿನ ಕ್ರಮದ ಬಗ್ಗೆ ಟ್ಯಾಂಕರ್ ಲಾರಿ ಮತ್ತು  ಚಾಲಕನನ್ನು ವಶಕ್ಕೆ ಪಡೆದು ವಾಹನವನ್ನು  ಠಾಣಾ ಆವರಣಕ್ಕೆ ತಂದು  ನಿಲ್ಲಿಸಿ  ಕೆ.ಎ-21-ಬಿ-7763 ನೇ ಟ್ಯಾಂಕರ್ ಲಾರಿಯ ಚಾಲಕ ಚೆನ್ನಬಸಪ್ಪ ಮತ್ತು ಮಾಲಕ ಮೋನಪ್ಪ ಮೂಲ್ಯ ಎಂಬವರುಗಳ ವಿರುದ್ದ ಸ್ವ ಪಿರ್ಯಾದಿಯಂತೆ ಪ್ರಕರಣ ದಾಖಲಿಸಿಕೊಂಡಿರುವುದಾಗಿದೆ ಎಂಬಿತ್ಯಾದಿ

Crime Reported in : Traffic South Police Station

ದಿನಾಂಕ:22-01-2023 ರಂದು ಪಿರ್ಯಾದಿ ಶೇಖರ್ ಪೂಜಾರಿ 52ವರ್ಷ ಅವರ ಸ್ನೇಹಿತನಾದ ಸುನೀಲ್ ಕ್ರಾಸ್ತ ರವರ ಮೋಟಾರ್ ಸೈಕಲ್ ನಂಬ್ರ: KA-19-Q-7652 ನೇದರಲ್ಲಿ ಸುನೀಲ್ ಕ್ರಾಸ್ತ ರವರು ಸವಾರನಾಗಿ ಪಿರ್ಯಾದಿದಾರರನ್ನು ಸಹ ಸವಾರನಾಗಿ ಕುಳ್ಳಿರಿಸಿಕೊಂಡು ಅವರ ಮನೆಯಾದ ಮಲ್ಲೂರು ಕಡೆಯಿಂದ ಪಡು ಕಡೆಗೆ ಬರುತ್ತಿರುವಾಗ ಸಮಯ ಸುಮಾರು ಮಧ್ಯಾಹ್ನ 2-00 ಗಂಟೆಗೆ ಪೆರಿಮಾಯಿ ಬಸ್ಸ್ ನಿಲ್ದಾಣ ತಲುಪಿದಾಗ ಪಿರ್ಯಾದಿದಾರರ ಬೈಕ್ ನ ಎದುರಿನಿಂದ ಅಂದರೆ ಪಡು ಕಡೆಯಿಂದ ಮೋಟಾರ್ ಸೈಕಲ್ ನಂಬ್ರ: KA-19-HB-1790 ನೇದನ್ನು ಅದರ ಸವಾರ ಮುಕೇಶ್ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಸವಾರಿಮಾಡಿಕೊಂಡು ಬರುತ್ತಿರುವಾಗ ಪಿರ್ಯಾದಿದಾರರು ಸವಾರಿ ಮಾಡುತ್ತಿದ್ದ ಮೋಟಾರ್ ಸೈಕಲ್ ಸವಾರ ಸುನೀಲ್ ಕ್ರಾಸ್ತ ರವರು ಮೋಟಾರ್ ಸೈಕಲ್ ನ್ನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಹೋಗಿ ಎರಡು ಮೋಟಾರ್ ಸೈಕಲ್ ಗಳು ಮುಖಾಮುಖಿ ಡಿಕ್ಕಿಯಾಗಿರುತ್ತದೆ ಈ ಅಪಘಾತದ ಪರಿಣಾಮ ಪಿರ್ಯಾದಿದಾರರು ಹಾಗೂ ಸವಾರ ಸುನೀಲ್ ಕ್ರಾಸ್ತನು ಹಾಗೂ ಎದುರಿನಿಂದ ಬಂದ ಮೋಟಾರ್ ಸೈಕಲ್ ಸವಾರ ಮುಕೇಶ್ ರವರು ಮೋಟಾರ್ ಸೈಕಲ್ ಸಮೇತ ಡಾಮಾರು ರಸ್ತೆಗೆ ಬಿದ್ದು ಇದರ ಪರಿಣಾಮ ಪಿರ್ಯಾದಿದಾರರಿಗೆ ಮುಖ ಮತ್ತು ಕೈ ಕಾಲುಗಳಿಗೆ ತರಚಿದ ರಕ್ತ ಗಾಯ ಹಾಗೂ ಸ್ನೇಹಿತ ಸುನಿಲ್ ಕ್ರಾಸ್ತ ರವರಿಗೆ ಬಲಕಾಲಿನ ಪಾದಕ್ಕೆ ಮೂಳೆ ಮುರಿತದ ಗಾಯ ಹಾಗೂ ಎಡಕೈಗೆ ತರಚಿದ ಗಾಯ ಹಾಗೂ ಅಪಘಾತ ಪಡಿಸಿದ ಮೋಟಾರ್ ಸೈಕಲ್ ಸವಾರ ಮುಕೇಶ್ ನಿಗೆ ಸಣ್ಣ ಪುಟ್ಟ ಗಾಯವಾಗಿದ್ದು  ಅಲ್ಲಿ ಸೇರಿದ ಜನರು ಗಾಯಾಳುಗಳನ್ನು ಉಪಚರಿಸಿ ಚಿಕಿತ್ಸೆ ಬಗ್ಗೆ ಆಂಬ್ಯುಲೇನ್ಸ್ ವೊಂದರಲ್ಲಿ ನೀರುಮಾರ್ಗದ ಜಿ ಆರ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಪಿರ್ಯಾದಿದಾರರನ್ನು ಅಲ್ಲಿನ ವೈದ್ಯರು ಪರಿಕ್ಷಿಸಿ ಹೊರ ರೋಗಿಯಾಗಿ ಚಿಕಿತ್ಸೆ ನೀಡಿದ್ದು ಹಾಗೂ ಸುನೀಲ್ ಕ್ರಾಸ್ತ ರವರನ್ನು ಒಳ ರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ ಎಂಬಿತ್ಯಾದಿ.

Crime Reported in : Kankanady Town PS   

ಪಿರ್ಯಾದಿ Mohammed Sarfraj 1-191, ಅಡ್ಯಾರ್ ಕಣ್ಣೂರು ಗ್ರಾಮ ಎಂಬಲ್ಲಿ ವಾಸ ಮಾಡಿಕೊಂಡಿದ್ದು, ಟಿಪ್ಪರ್ ಲಾರಿಯಲ್ಲಿ ಜೆಲ್ಲಿ, ಮಣ್ಣು ಸಾಗಾಟ ಮಾಡಿ ಜೀವನ ಮಾಡಿಕೊಂಡಿರುತ್ತೇನೆ. ಪಿರ್ಯಾದುದಾರರಲ್ಲಿ ನೇ ನಂಬ್ರದ ಬಿಳಿ ಬಣ್ಣದ ನೋಕಿಯಾ ಮೊಬೈಲ್ ಪೋನ್ ಇದ್ದು. ದಿನಾಂಕ: 27.01.2023 ರಂದು ಪಿರ್ಯಾದುದಾರರು ವೈಯುಕ್ತಿಕ ಕೆಲಸದ ಬಗ್ಗೆ ಬಸ್ಸಿನಲ್ಲಿ ಪಂಪ್ವೆಲ್ ಜಂಕ್ಷನ್ ಗೆ ಬಂದು ಅಲ್ಲಿಂದ ಉಳ್ಳಾಲ ಕಡೆಗೆ ಹೋಗಲು ಪಂಪ್ವೆಲ್ ಜಂಕ್ಷನ್ ನ ಆಟೋರಿಕ್ಷಾ ನಿಲ್ದಾಣದ ಬಳಿ ಸಂಜೆ ಸಮಯ 5:30 ಗಂಟೆಗೆ ಬಸ್ಸಿಗಾಗಿ ಕಾಯುತ್ತಿದ್ದು. ಈ ಸಮಯ ಪಿರ್ಯಾದುದಾರರ ಮೊಬೈಲ್ ಪೋನಿಗೆ ಕರೆಯೊಂದು ಬಂದು ಮೊಬೈಲನ್ನು ಕಿಸೆಯಿಂದ ತೆಗೆಯುತ್ತಿರುವ ಸಮಯ ಉಳ್ಳಾಲ ಕಡೆಗೆ ಹೋಗುವ 42 ನಂಬ್ರದ ಬಸ್ಸು ಬಂದಿದ್ದು, ಪಿರ್ಯಾದುದಾರರು ಮೊಬೈಲನ್ನು ಕಿಸೆಯಲ್ಲಿ ಇಟ್ಟು ಬಸ್ಸಿಗೆ ಹತ್ತಿದ್ದು. ಬಸ್ಸಿನಲ್ಲಿ ಪಿರ್ಯಾದುದಾರರ ಕಿಸೆಯಲ್ಲಿದ್ದ ಮೊಬೈಲ್ ನ್ನು ತೆಗೆಯಲು ಕಿಸೆಗೆ ಕೈ ಹಾಕಿದಾಗ ಕಿಸೆಯಲ್ಲಿ ಮೊಬೈಲ್ ಪೋನ್ ಇರಲಿಲ್ಲ. ಯಾರೋ ಕಳ್ಳರು ಪಿರ್ಯಾದುದಾರರು ಬಸ್ಸು ಹತ್ತುವ ಸಮಯ ಕಿಸೆಯಲ್ಲಿದ್ದ ಬಿಳಿ ಬಣ್ಣದ ನೋಕಿಯಾ ಕಂಪನಿಯ ಮೊಬೈಲ್ ಪೋನ್ ನನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಕಳ್ಳತನವಾದ ಮೊಬೈಲ್ ಪೋನ್ ಮತ್ತು ಕಳ್ಳರನ್ನು ಪತ್ತೆಮಾಡಿ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿಕೆ. ಕಳ್ಳತನವಾದ ಮೊಬೈಲ್ ಪೋನ್ ನಲ್ಲಿ ನೇ ನಂಬ್ರದ ಬಿ.ಎಸ್.ಎನ್.ಎಲ್ ಸಿಮ್ ಕಾರ್ಡ್ ಇದ್ದು, ಮೊಬೈಲ್ ಪೋನ್ ನ ಅಂದಾಜು ಮೌಲ್ಯ ರೂ. 1000/- ಆಗಬಹುದು. ಎಂಬಿತ್ಯಾದಿ.

Crime Reported in :Traffic South Police Station  

ದಿನಾಂಕ: 27-01-2023 ರಂದು ಪಿರ್ಯಾದಿ ಹರ್ಷಿತ 16 ವರ್ಷ ರವರು ಊಟ ಮಾಡಲೆಂದು ಕುಡುಪು ದೇವಸ್ಥಾನಕ್ಕೆ ಹೋಗಲು ಕಾಲೇಜಿನಿಂದ ಪಿರ್ಯಾದಿದಾರರು ಅವರ ತಂಗಿ ಹರ್ಷಿಣಿ ಹಾಗೂ ಅವರ ಸ್ನೇಹಿತೆರಾದ ನಯನ ಮತ್ತು ಅನನ್ಮಿತಾ ರವರು ಒಟ್ಟಿಗೆ ಸೇರಿ ಕುಡುಪು ದೇವಸ್ಥಾನ ಕಡೆಗೆ ರಾ ಹೆ 169 ರ ರಸ್ತೆಯ ಎಡಬದಿಯಲ್ಲಿರುವ ಕಚ್ಚಾ ಮಣ್ಣು ರಸ್ತೆಯಲ್ಲಿ  ನಡೆದುಕೊಂಡು ಹೋಗುತ್ತಿರುವಾಗ ಸಮಯ ಸುಮಾರು ಮಧ್ಯಾಹ್ನ 01-15 ಗಂಟೆಗೆ ಮಂಗಳಜ್ಯೋತಿ ಹತ್ತಿರ ತಲುಪಿದಾಗ ಪಿರ್ಯಾದಿದಾರರ ಹಿಂದಿನಿಂದ ಅಂದರೆ ವಾಮಂಜೂರು ಕಡೆಯಿಂದ ಕುಡುಪು ದೇವಸ್ಥಾನದ ಕಡೆಗೆ ಬರುತ್ತಿದ್ದ ಬೈಕ್ ನಂಬ್ರ:KA-19-HH-0247 ನೇದನ್ನು ಅದರ ಸವಾರ ಧನುಷ್ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಬಂದು ರಸ್ತೆ ಎಡಬದಿಯ ಕಚ್ಚಾ ಮಣ್ಣು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಿರ್ಯಾದಿದಾರರ ತಂಗಿ ಹರ್ಷಿಣಿ ,ಸ್ನೇಹಿತೆಯರಾದ ನಯನಾ ಹಾಗೂ ಅನನ್ಮಿತಾ ರವರಿಗೆ ಬೈಕ್ ಡಿಕ್ಕಿ ಪಡಿಸಿದ ಪರಿಣಾಮ ಅವರು ಮೂರು ಜನ ಹಾಗೂ ಬೈಕ್ ಸವಾರ ಕೂಡಾ ಕಚ್ಚಾ ಮಣ್ಣು ರಸ್ತೆಗೆ ಬಿದ್ದು ಹರ್ಷಿಣಿಗೆ ತಲೆಗೆ ಹಾಗೂ ಕಾಲಿಗೆ ರಕ್ತಗಾಯ ಮತ್ತು ನಯನಳಿಗೆ ಎಡಗೈ ಭುಜಕ್ಕೆ ಮೂಳೆ ಮುರಿತದ ಗಾಯ ಹಾಗೂ ಕಾಲು,ಮುಖಕ್ಕೆ ತರಚಿದ ರಕ್ತಗಾಯ,ಅನನ್ಮಿತಾಳಿಗೆ ಸೊಂಟಕ್ಕೆ ಗುದ್ದಿದ ಗಾಯ ಹಾಗೂ ಎಡಗಾಲಿನ ಹೆಬ್ಬೆರಳಿಗೆ ರಕ್ತ ಗಾಯವಾಗಿದ್ದು ಬೈಕ್ ಸವಾರನಿಗೆ ಸಣ್ಣ ಪುಟ್ಟ ಗಾಯವಾಗಿದ್ದು ಎ ಜೆ ಆಸ್ಪತ್ರೆಗೆ ಒಳ ರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ ಎಂಬಿತ್ಯಾದಿ

ಇತ್ತೀಚಿನ ನವೀಕರಣ​ : 28-01-2023 10:54 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080