ಅಭಿಪ್ರಾಯ / ಸಲಹೆಗಳು

Kankanady Town PS 

ದೂರಿನಲ್ಲಿ ಉಲ್ಲೇಖಿಸಿರುವ ಸ್ಥಿರಾಸ್ಥಿಯ ಸ್ಥಳವು ಪದವು ಗ್ರಾಮದ ಸರ್ವೆ ನಂಬ್ರ:71/.10 ಸೆಂಟ್ಸ್ ವಿಸ್ತೀರ್ಣ ಹೊಂದಿದ್ದು ಸದ್ರಿ ಸ್ಥಿರಾಸ್ಥಿಯು 1 ನೇ ಆರೋಪಿಯವರು ಗೋವಿಂದ ರಾವ್ ಎಂಬುವರಿಂದ ಕ್ರಯ ಚೀಟಿ ಮುಖೇನ ದಿನಾಂಕ:31-12-1974 ದಾಖಲೆಯ ನೋಂದಣಿ ಸಂಖ್ಯೆ 1199/1974-75 ರಂತೆ ಮಂಗಳೂರು ನಗರದ ಉಪನೋಂದಣಿ ಅಧಿಕಾರಿಯವರ ಕಛೇರಿಯಲ್ಲಿ ನಮೂದಾಗಿ ಖರೀದಿಸಿರುವುದಾಗಿದೆ. ದೂರಿನಲ್ಲಿ ನಮೂದಿಸಿರುವ ಫಿರ್ಯಾದಿ Keshavananda Nayak ತಂದೆ ಮತ್ತು ತಾಯಿಯು ಸದ್ರಿ ಸ್ಥಿರಾಸ್ತಿಯ ಕ್ರಯ ಚೀಟಿ ಮುಖೇನ ದಿನಾಂಕ:28-02-1975 ರಂದು ದಾಖಲೆ ಸಂಖ್ಯೆ 1502/1974-75 ರಂತೆ ನೋದಾಯಿಸಿ ಖರೀದಿ ಮಾಡಿರುತ್ತಾರೆ. ಪಿರ್ಯಾದಿದಾರರ ತಂದೆ ತಾಯಿ ಯಾವುದೇ ವಿಲ್ ನಮೂನೆ ಮಾಡದೇ ಮರಣ ಹೊಂದಿದ್ದರಿಂದ  ಫಿರ್ಯಾದಿದಾರರು ಪ್ರಫುಲ್ಲಾ ಕಿಣಿ ,ಚಂದ್ರಾಹಾಸ್ ನಾಯಕ್ ,ವೈಜಯಂತಿ ,ಮೋಹನ ನಾಯಕ್ ಎಲ್ಲರೂ ಸ್ಥಿರಾಸ್ಥಿಯಲ್ಲಿ ಸ್ವಾಧೀನತೆ ಹೊಂದಿ ಉಪಯೋಗಿಸುತ್ತಿರುವುದುದಾಗಿದೆ. ಸದ್ರಿ ಖಾಲಿ ಸ್ಥಳದ ಕುರಿತಾಗಿ ರೆವಿನ್ಯೂ ದಾಖಲೆಗಳಲ್ಲಿ ಸದ್ರಿಯವರ ಹೆಸರಿದ್ದು  ಸದ್ರಿಯವರು ಬೇರೆ ಬೇರೆ ಕಡೆಗಳಲ್ಲಿ ವಾಸಿಸುತ್ತಿದ್ದರು ಹಿಗಿರುತ್ತಾ ತಮ್ಮಗಳಿಗೆ ಆರ್ಥಿಕ ತೊಂದರೆ ಉಂಟಾಗಿದ್ದುದರಿಂದ ಸದ್ರಿ ಖಾಲಿ ಸ್ಥಳ  ಮಾರಾಟ ಮಾಡಲು ಮುಂದಾಗಿ ಸ್ಥಳಕ್ಕೆ ಬಂದು ನೋಡಿದಾಗ ಆರೋಪಿ Nagappa Maistry , Appi, Mohini, Anil, Sunil, Prasad, Mallika,  Karunakara Alva, Vasanthi K Alva, Vrunda Alva, Raghavendra Prabhu, Subramanya Bhat.

 ಅತಿಕ್ರಮ ಕಟ್ಟಡ ನಿರ್ಮಿಸಿದ್ದು ಈ ಬಗ್ಗೆ ಮಂಗಳೂರು ನಗರದ ಉಪ-ನೋಂದಣಿ ಕಛೇರಿಯಲ್ಲಿ ದಸ್ತವೇಜುಗಳನ್ನು ನಕಲು ಮಾಡಿ ಕ್ರಯ ಚೀಟಿ ಮಾಡಿಕೊಂಡು ವಂಚಿಸಿರುವುದಾಗಿ ಎಂಬಿತ್ಯಾದಿಯಾಗಿರುತ್ತದೆ

Kankanady Town PS

ಪಿರ್ಯಾದಿ Vijesh Kumar ಬೊಕ್ಕಪಟ್ಣ, ಬೇಂಗ್ರೆಯವರಾಗಿದ್ದು, ದಿನಾಂಕ: 12.02.2023 ರಂದು ಸಂಜೆ ಸುಮಾರು 6:30 ಗಂಟೆ ಸಮಯಕ್ಕೆ ತಮ್ಮ ಬಾಬ್ತು KA-19-ET-6861 ನೇ ನಂಬ್ರದ ರಾಯಲ್ ಎನ್ ಫೀಲ್ಡ್ ಬುಲೆಟ್ ಮೋಟಾರ್ ಸೈಕಲ್ಲಿನಲ್ಲಿ ಯೆಯ್ಯಾಡಿ ಯಲ್ಲಿರುವ ಬಾಂದೋಟ್ಟು ಬಬ್ಬುಸ್ವಾಮೀ ದೈವಸ್ಥಾನಕ್ಕೆ ಹೋಗಿ ಬುಲೆಟ್ ಮೋಟಾರ್ ಸೈಕಲ್ಲನ್ನು ದೈವಸ್ಥಾನದ ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕ್ ಮಾಡಿ, ದೈವಸ್ಥಾನಕ್ಕೆ ಹೋಗಿ ದರ್ಶನ ಮಾಡಿ ವಾಪಾಸ್ಸು ಸಂಜೆ ಸುಮಾರು 7:20 ಗಂಟೆ ಸುಮಾರಿಗೆ ಪಾರ್ಕಿಂಗ್ ಸ್ಥಳಕ್ಕೆ ಬಂದಾಗ ಪಾರ್ಕ್ ಮಾಡಿದ್ದ ಬುಲೆಟ್ ಮೋಟಾರ್ ಸೈಕಲ್ ಸ್ಥಳದಲ್ಲಿ ಕಾಣಿಸದೇ ಇದ್ದು, ಪಾರ್ಕ್ ಮಾಡಿದ ಸ್ಥಳದ ಸುತ್ತಮುತ್ತ ಎಲ್ಲಾ  ಕಡೆ ಹುಡುಕಾಡಿದರೂ ಕಂಡು ಬಂದಿರುವುದಿಲ್ಲ. ಯಾರೋ ಕಳ್ಳರು ದಿನಾಂಕ: 12.02.2023 ರಂದು ಸಂಜೆ 6:30 ಗಂಟೆಯಿಂದ ಸಂಜೆ 7:20 ಗಂಟೆಯ ಮದ್ಯಾವಧಿಯಲ್ಲಿ ಮೋಟಾರ್ ಸೈಕಲ್ ನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಳವಾದ ಮೋಟಾರ್ ಸೈಕಲ್ ಬಗ್ಗೆ ಮಂಗಳೂರು ನಗರದ ಎಲ್ಲಾ ಕಡೆ ಹುಡುಕಾಡಿದಲ್ಲಿ ಇದುವರೆಗೂ ಪತ್ತೆಯಾಗದೇ ಇರುವುದರಿಂದ ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿರುವುದಾಗಿದೆ. ಕಳ್ಳತನವಾದ ಬುಲೆಟ್ ಮೋಟಾರ್ ಸೈಕಲ್ಲಿನ ಅಂದಾಜು ಮೌಲ್ಯ ರೂ 90,000/- ಆಗಬಹುದು. ಎಂಬಿತ್ಯಾದಿ.

Moodabidre PS    

ಮೂಡಬಿದ್ರೆ ತಾಲೂಕಿನ ಇರುವೈಲು ಕೊನ್ನೆ ಪದವು ಎಂಬಲ್ಲಿರುವ ವಿಜಯ ಬಾರ್ & ರೆಸ್ಟೋರೆಂಟ್ ನಲ್ಲಿ ಕ್ಯಾಶಿಯರ್ ಆಗಿ ಕೆಲಸ ಮಾಡಿಕೊಂಡಿದ್ದ ಅನುಪ್ ಶೆಟ್ಟಿ ಎಂಬಾತನು ದಿನಾಂಕ 25/02/2023 ರಂದು ಮಧ್ಯಾಹ್ನ ಕರ್ತವ್ಯದಲ್ಲಿರುವ ಸಮಯ ಸುಮಾರು 3.೦೦ ಗಂಟೆಗೆ ಕ್ಯಾಶ್ ಡ್ರಾವರ್ ನಲ್ಲಿದ್ದ 150000/- ರೂ ನಗದು ಹಣವನ್ನು ಕಳ್ಳತನ ಮಾಡಿಕೊಂಡು ಬಾರ್ ನ ಹೊರಗಡೆ ನಿಲ್ಲಿಸಿದ್ದ ಕೆ.ಎ-19-ಹೆಚ್.ಜಿ-1617 ನೇ ನಂಬ್ರದ  ಡಿಯೋ ಸ್ಕೂಟರ್ ನೊಂದಿಗೆ ಹೋಗಿರುತ್ತಾನೆ ಎಂಬುದಾಗಿ ಬಾರಿನಲ್ಲಿ ಮತ್ತೋರ್ವ ಕ್ಯಾಶಿಯರ್ ಆಗಿ ಕೆಲಸ ಮಾಡುವ ಚಂದ್ರಶೇಖರ್ ಎಂಬವರು ಮಧ್ಯಾಹ್ನ 3.30 ಗಂಟೆಗೆ ದೂರವಾಣಿ ಕರೆ ಮಾಡಿ ತಿಳಿಸಿದ ಮೇರೆಗೆ ಪಿರ್ಯಾದು Raveendra U ದಾರರು ಬಾರಿಗೆ ಬಂದು ವಿಚಾರಣೆ ನಡೆಸಿದಾಗ ಆರೋಪಿ ಅನುಪ್ ಶೆಟ್ಟಿ ತೆಗೆದುಕೊಂಡು ಹೋದ ಕೆ.ಎ-19-ಹೆಚ್.ಜಿ-1617 ನೇ ನಂಬ್ರದ  ಡಿಯೋ ಸ್ಕೂಟರ್ ಬಾರಿನ ಪಕ್ಕದಲ್ಲಿ ಮೀನು ವ್ಯಾಪಾರ ಮಾಡುವ ರಕ್ಷಿತ್ ಎಂಬವರಿಗೆ ಸೇರಿರುವುದಾಗಿ ತಿಳಿದುಬಂದಿರುತ್ತದೆ. ಆರೋಪಿಯು ಕಳವು ಮಾಡಿದ ಹಣ ಮತ್ತು ಸ್ಕೂಟರ್ ನೊಂದಿಗೆ ಮರಳಿ ಬರುವುದಾಗಿ ಭಾವಿಸಿ ಪಿರ್ಯಾದುದಾರರು ಈ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡಿರುವುದಾಗಿ ಎಂಬಿತ್ಯಾದಿ.

Ullal PS

ಪಿರ್ಯಾದಿ Anuradha ಕರ್ತವ್ಯ ನಿರ್ವಹಿಸುತ್ತಿರುವ ಮಂಗಳೂರು ಕಾಲೇಜ್ ಆಫ್ ನರ್ಸಿಂಗ್ ಉಳ್ಳಾಲ ಇಲ್ಲಿ 2ನೇ ವರ್ಷದ GNM  ವಿಧ್ಯಾರ್ಥಿನಿಯಾಗಿ,  ಹಾಸ್ಟೆಲ್ ನಲ್ಲಿದ್ದ ಕೇರಳ ರಾಜ್ಯದ ಕುಮಾರಿ ಅಖಿಲಾ ಪಿ ಎಸ್ (19) ರವರು ದಿನಾಂಕ 26/02/2023 ರ ರಾತ್ರಿ 10-30 ಗಂಟೆಗೆ ಮಲಗಿದವರು  ದಿನಾಂಕ 27/02/2023 ರಂದು ಬೆಳಿಗ್ಗೆ ಕಾಣೆಯಾಗಿರುವುದಾಗಿ ಸಹಪಾಠಿಗಳು ತಿಳಿಸಿದಂತೆ ಹಾಸ್ಟೆಲ್ ನ ಸಿಸಿಟಿವಿ ಯ ಫೂಟೋಜ್ ಪರಿಶೀಲಿಸಿದ್ದಲ್ಲಿ ಬೆಳಿಗ್ಗೆ 6.40 ಗಂಟೆಗೆ ಹಾಸ್ಟೆಲ್ ನಿಂದ ಹೂರಗೆ ಹೋಗುವುದು ಕಂಡು ಬಂದಿದ್ದು, ಬಳಿಕ ಹುಡುಕಾಡಿದಲ್ಲಿ ಪತ್ತೆಯಾಗದೇ ಇದ್ದ, ಕಾಣೆಯಾಗಿರುವುದಾಗಿ ನೀಡಿದ ದೂರಿನ ಸಾರಾಂಶವಾಗಿರುತ್ತದೆ.

 

 

ಇತ್ತೀಚಿನ ನವೀಕರಣ​ : 28-02-2023 07:50 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080