ಅಭಿಪ್ರಾಯ / ಸಲಹೆಗಳು

ದೈನಂದಿನ ಅಪರಾಧ ವರದಿ 

CEN Crime PS

ಈ ಪ್ರಕರಣದ ಸಾರಾಂಶವೇನೆಂದರೆ ದಿನಾಂಕ 28-02-2024 ರಂದು ಸೆನ್ ಕ್ರೈಂ ಪೊಲೀಸ್ ಉಪ-ನಿರೀಕ್ಷಕರಾದ ಶ್ರೀ.ಮಾರುತಿ ರವರಿಗೆ ಬಂದ ಮಾಹಿತಿಯಂತೆ ಮಂಗಳೂರು ನಗರದ ಸೆಂಟ್ರಲ್ ಮಾರುಕಟ್ಟೆ ಬಳಿ ಪಿ.ಗೋಪಿನಾಥ್ ಭಂಡಾರ್ಕರ್ (29) ವರ್ಷ ತಂದೆ:ಪಿ.ಜಯಪ್ರಕಾಶ್ ವಾಸ: ಫ್ಲಾಟ್ ನಂ.24-2/194/1.ಶ್ವೇತಾ ಶಿಲ್ಪ,ಅಪಾರ್ಟ್ಮೆಂಟ್, ವೈದ್ಯಾನಥ್ ನಗರ, ಅತ್ತಾವರ, ಮಂಗಳೂರು ನಗರ ಯಾವುದೋ ಅಮಲು ವಸ್ತುವನ್ನು ಸೇವಿಸಿ ನಶೆ ಹೊಂದಿ ಮಂಗಳೂರು ನಗರದ ಸೆಂಟ್ರಲ್ ಮಾರುಕಟ್ಟೆ ಬಳಿ ನಡೆದಾಡುವಂತಹ ಸಾರ್ವಜನಿಕರಿಗೆ  ತೊಂದರೆ ಆಗುವ ರೀತಿಯಲ್ಲಿ ವರ್ತಿಸುತ್ತಿರುವುದಾಗಿ ತಿಳಿಸಿದ್ದು ಮುಂದಿನ ಕ್ರಮ ಬಗ್ಗೆ ಆತನನ್ನು ಮಂಗಳೂರು ನಗರದ ಕುಂಟಿಕಾನದಲ್ಲಿರುವ ಎ.ಜೆ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯಾಧಿಕಾರಿಯವರು ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದಲ್ಲಿ ಆಪಾದಿತನು  ಮಾದಕ ವಸ್ತು ಸೇವನೆ ಮಾಡಿದ ಬಗ್ಗೆ ನೀಡಿದ ವೈದ್ಯಕೀಯ ಧೃಢಪತ್ರ ನೀಡಿರುವುದರಿಂದ ಆತನ ಮೇಲೆ ಕಾನೂನು ಕ್ರಮ ಕೈಗೊಂಡಿರುವುದಾಗಿದೆ ಎಂಬಿತ್ಯಾದಿ

Mangalore North PS

ದಿನಾಂಕ: 28-02-2024 ರಂದು ಮಾದಕ ದ್ಯವ್ಯ  ವ್ಯಸನ ಮತ್ತು ಮಾರಾಟವನ್ನು ತಡೆಗಟ್ಟುವ ಮತ್ತು ನಿಯಂತ್ರಿಸುವ ನಿಟ್ಟಿನಲ್ಲಿ ಮಂಗಳೂರು ನಗರ ಪೊಲೀಸ್ ಕೇಂದ್ರ ಉಪವಿಭಾಗದ ವತಿಯಿಂದ ರಚಿತವಾಗಿರುವ Anti Drug Team ತಂಡದ ಅಧಿಕಾರಿ ಪ್ರದೀಪ್ ಟಿ ಆರ್ ಪಿಎಸ್ಐ ಮಂಗಳೂರು ಉತ್ತರ ಪೊಲೀಸ್ ಠಾಣೆ ಇವರು ರೌಂಡ್ಯ ಕರ್ತವ್ಯ ದಲ್ಲಿರುವ ಸಮಯ ಮಧ್ಯಾಹ್ನ 12.40 ಗಂಟೆಗೆ ಮಾರ್ಕೆಟ್ ಬಳಿ ತಲುಪಿದಾಗ ಆದರ್ಶ ಬಿ ಎ ಪ್ರಾಯ: 22 ವರ್ಷ ತಂದೆ: ಎ.ವಿ.ಬೇಬಿ ಜೋಶಫ್ ವಾಸ: ಅಯಾಂಗುಡ್ಡೆಗಾಂಧಿಬಜಾರ್,ನೇರಿಯಾ ಬೆಳ್ತಂಗಡಿ ತಾಲೂಕದಕ ಜಿಲ್ಲೆ  ಎಂಬಾತನು ಅಮಲು ಪದಾರ್ಥ ಸೇವಿಸಿದ ಹಾಗೆ ತೂರಾಡುತ್ತಿದ್ದು ಮುಂದಿನ ಕ್ರಮದ ಬಗ್ಗೆ ವೈದ್ಯಕೀಯ ಪರೀಕ್ಷೆ ಬಗ್ಗೆ ಮಂಗಳೂರು ಕುಂಟಿಕಾನದ ಎ ಜೆ ಆಸ್ಪತ್ರೆಗೆ ಹಾಜರುಪಡಿಸಿದ್ದು, ಎ ಜೆ ಆಸ್ಪತ್ರೆಯ ವೈದ್ಯರು ಆತನನ್ನು ಪರೀಕ್ಷಿಸಿದಲಿ ಆದರ್ಶ ಬಿ ಎ ಎಂಬಾತನು, Tetrahydracannabinoid, (Marijuana) ಎಂಬ ಮಾದಕ ದ್ರವ್ಯವನ್ನು ಸೇವನೆ ಮಾಡಿರುವುದಾಗಿ ದೃಢ ಪತ್ರವನ್ನು ನೀಡಿರುತ್ತಾರೆ ಈತನ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಕೋರಿಕೆ ಎಂಬಿತ್ಯಾದಿ.

Traffic South Police

ಈ ಪ್ರಕರಣದ ಸಾರಾಂಶವೆನೇಂದರೆ ಪಿರ್ಯಾದಿ Avvamma ಇವರು ದಿನಾಂಕ 26-02-2024 ರಂದು ತನ್ನ ಅಕ್ಕನ ಮನೆಯಾದ ಉಳಾಯಿಬೆಟ್ಟುವಿಗೆ ಬಂದು ವಾಪಸ್ಸು ತನ್ನ ಮನೆ ವೇಣೂರಿಗೆ ಹೋಗುವರೇ ಸುಮಾರು ಸಮಯ 12.30 ಗಂಟೆಗೆ ಸಂಬಂಧಿ ಸಮೀರನ KA 19 HL 8322 ನೇ ಸ್ಕೂಟರ್ ನಲ್ಲಿ ಹಿಂಬದಿ ಸವಾರಳಾಗಿ ಹೋಗುತ್ತಿದ್ದಾಗ ಸ್ಕೂಟರ್ ಸವಾರನು ತನ್ನ ಸ್ಕೂಟರನ್ನು ಉಳಾಯಿಬೆಟ್ಟುವಿನ ಮುಖ್ಯರಸ್ತೆಯಲ್ಲಿ ಅತೀ ವೇಗ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ ಪಿರ್ಯಾದಿದಾರರು ಆಯಾ ತಪ್ಪಿ ರಸ್ತೆಗೆ ಬಿದ್ದುದ್ದರಿಂದ ಪಿರ್ಯಾದಿದಾರರ ಎಡ ಕಣ್ಣಿನ ಕೆಳಗಡೆ ಗುದ್ದಿದ ರಕ್ತಗಾಯ, ತಲೆಯ ಎಡಬಾಗಕ್ಕೆ ಗುದ್ದಿದ ಗಾಯವಾಗಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಈ ದಿನ 28-02-2024 ರಂದು ಪಂಪವೆಲ್ ನ ಇಂಡಿಯಾನಾ ಆಸ್ಪತ್ರೆಗೆ ದಾಖಲಾಗಿರುತ್ತಾರೆ ಎಂಬಿತ್ಯಾದಿ

 

Traffic North Police

ಈ ಪ್ರಕರಣದ ಸಂಕ್ಷಿಪ್ತ ಸಾರಾಂಶವೇನೆಂದರೆ, ಪಿರ್ಯಾದಿ Shone Raju ಇವರು ದಾರರು ದಿನಾಂಕ 27.02.2024 ರಂದು ತನ್ನ ಸ್ನೇಹಿತರಾದ ಮುಹಮ್ಮದ್ ದಾನೀಶ್, ಅಲ್ತಾಫ್, ಜಸಿನ್ ಫಾಯಿಸ್, ದೇನಿಯಲ್ ಅಬ್ರಾಹಂ ಎಂಬವರೊಂದಿಗೆ ದೇರೆಬೈಲ್ ಕೊಂಚಾಡಿಯ ಕುಂಟಿಕಾನದಲ್ಲಿರುವ ಲಿಕೀಶ್ ಕಿಚನ್ಸ್ ಎಂಬ ಹೊಟೇಲಿಗೆ ಊಟ ಮಾಡಲೆಂದು ಹೋದವರು ಊಟ ಮಾಡಿ ರಾತ್ರಿ ಸಮಯ ಸುಮಾರು 11:30 ಗಂಟೆಗೆ ಸದ್ರಿ  ಹೊಟೇಲಿನ ಮುಂಭಾಗದಲ್ಲಿ ನಿಂತುಕೊಂಡಿರುವಾಗ ಕುಂಟಿಕಾನ ಕಡೆಯಿಂದ ಕಾವೂರು ಕಡೆಗೆ ಆಟೋ ರಿಕ್ಷಾ ನಂಬ್ರ KA-19-AB-5713 ನೇಯದನ್ನು ಅದರ ಚಾಲಕ ದೇವದಾಸ ಎಂಬವರು ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ರಸ್ತೆ ಬದಿಯಲ್ಲಿ ನಿಂತಿದ್ದ ಪಿರ್ಯಾದಿದಾರರಿಗೆ ಮತ್ತು ಮುಹಮ್ಮದ್ ಡಾನೀಶ್ ರವರಿಗೆ ಡಿಕ್ಕಿ ಪಡಿಸಿದ ಪರಿಣಾಮ ಮುಹಮ್ಮದ್ ದಾನೀಶ್ ರವರ ತಲೆಗೆ ಗಾಯವಾಗಿದ್ದು ಅಲ್ಲದೇ ಬಲ ಕೈಗೆ ಗಾಯವಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು ಪಿರ್ಯಾದಿದಾರರ ಬಲಕೈಗೆ ತರಚಿದ ಗಾಯವಾಗಿದ್ದು, ಗಾಯಾಳು ಮುಹಮ್ಮದ್ ದಾನೀಶ್ ರವರನ್ನು  ಚಿಕಿತ್ಸೆಯ ಬಗ್ಗೆ ಕುಂಟಿಕಾನ ಎ.ಜೆ. ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಿಸಿರುತ್ತಾರೆ ಪಿರ್ಯಾದಿದಾರರು ಯಾವುದೇ ಚಿಕಿತ್ಸೆ ಪಡೆದುಕೊಂಡಿರುವುದಿಲ್ಲ ಎಂಬಿತ್ಯಾದಿ

 

Mangalore Rural PS

ಈ ಪ್ರಕರಣದ ಸಾರಾಂಶವೇನೆಂದರೆ, ಫಿರ್ಯಾದಿ Shanthi Almeda ಇವರು ಬೊಂಡಂತಿಲ ಗ್ರಾಮದ ತಾರಿಗುಡ್ಡೆ  ಎಂಬಲ್ಲಿ ಗಂಡ ಮತ್ತು ಮಗನೊಂದಿಗೆ ವಾಸವಾಗಿದ್ದು, ಪಿರ್ಯಾದಾರರ ಗಂಡ ರೋಶನ್ ಅಲ್ಮೇಡಾ (42ವ) ಎಂಬವರು ಬಸ್ ಡ್ರೈವರ್ ಆಗಿ ಕೆಲಸ ಮಾಡಿಕೊಂಡಿದ್ದು, ಆತನಿಗೆ ಶಮೀಮಾ ಎಂಬಾಕೆಯೊಂದಿಗೆ ಸ್ನೇಹವಿದ್ದು, ದಿನಾಂಕ: 27-02-2024 ರಂದು ಬೆಳಿಗ್ಗೆ 11.00 ಗಂಟೆಗೆ ತನ್ನ ಮನೆಯಿಂದ ವಾಮಂಜೂರಿಗೆ ಹೋಗಿ ಬರುತ್ತೇನೆಂದು ಪಿರ್ಯಾದಿದಾರರಲ್ಲಿ ಹೇಳಿ ಹೋದವರು ಈ ವರೆಗೂ ಮನೆಗೆ ಬಾರದೆ ಕಾಣೆಯಾಗಿದ್ದು, ಆತನು ತನ್ನ ಸ್ನೇಹಿತೆಯು ನೆಲೆಸಿರುವ ಮೈಸೂರಿಗೆ ಹೋಗಿರುವ ಬಗ್ಗೆ ಸಂಶಯವಿದ್ದು, ಕಾಣೆಯಾದ ರೋಶನ್ ಅಲ್ಮೆಡಾ ರವರನ್ನು ಪತ್ತೆ ಮಾಡಿಕೊಡಬೇಕಾಗಿ ವಿನಂತಿ ಎಂಬಿತ್ಯಾದಿ

ಕಾಣೆಯಾದವರ ಚಹರೆ:

ಹೆಸರು: ರೋಶನ್ ಅಲ್ಮೆಡಾ  (42 ವರ್ಷ)ಎತ್ತರ: 5.5 ಅಡಿ, ಎಣ್ಣೆ ಕಪ್ಪು ಮೈ ಬಣ್ಣ, ಸಾಧಾರಣ ಶರೀರ, ದುಂಡು ಮುಖ, ತಲೆಯ ಮುಂಭಾಗದಲ್ಲಿ ಕೂದಲು ಇರುವುದಿಲ್ಲ. ಕಪ್ಪು ಕೂದಲು ವಿದ್ಯಾಭ್ಯಾಸ: 3 ನೇ ತರಗತಿ, ಮಾತನಾಡುವ ಭಾಷೆ: ಕನ್ನಡ, ಕೊಂಕಣಿ,ತುಳು ಮಾತನಾಡುತ್ತಾನೆ ಧರಿಸಿದ ಉಡುಪು: ಕಪ್ಪು ಬಣ್ಣದ ಪ್ಯಾಂಟ್, ಕಪ್ಪು ಬಣ್ಣದ ಮೇಲೆ ಬಿಳಿ ಹೂಗಳಿರುವ ತುಂಬು ತೋಳಿನ ಶರ್ಟ್.

 

Mangalore East PS

PADMANABHA POOJAR ಪ್ರಕರಣದ ಸಾರಾಂಶವೆನೆಂದರೆ ಪಿರ್ಯಾದಿದಾರರಾದ  ಪದ್ಮನಾಭ ಪೂಜಾರಿ  ಎಂಬುವರು  ದಿನಾಂಕ: 26-02-2024 ರಂದು ಬೆಳ್ಳಗ್ಗೆ 05:45 ಗಂಟೆಗೆ ಅವರ ಬಾಬ್ತು ಕೆಎ-19-ಈವಿ-0225 ನೇ ನೊಂದಣಿ ಸಂಖ್ಯೆಯ SUZUKI ACCESS ಸ್ಕೂಟರ್ ನ್ನು ಮಂಗಳೂರು ನಗರದ ಕದ್ರಿ ದೇವಸ್ಥಾನದ ಮುಂಭಾಗದ ಬಲ ಭಾಗದಲ್ಲಿ ಇರುವ ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕಿಂಗ್ ಮಾಡಿ ದೇವಸ್ಥಾನದ ಒಳಗೆ ಹೋಗಿ ಪೂಜೆ ಮುಗಿಸಿಕೊಂಡು ವಾಪಾಸ್ಸು ಸಮಯ ಸುಮಾರು 07:15 ಗಂಟೆಗೆ ಬಂದು ಪಾರ್ಕಿಂಗ್ ಮಾಡಿದ ಜಾಗಕ್ಕೆ ಬಂದು ನೋಡಿದಾಗ ಸ್ಕೂಟರ್  ಇಲ್ಲದೇ ಇದ್ದು, ಈ ಸ್ಕೂಟರ್ ನ್ನು ದಿ.26-02-2024 ರಂದು ಬೆಳಿಗ್ಗೆ 05.45  ಗಂಟೆಯಿಂದ ಬೆಳಿಗ್ಗೆ 07.15 ಗಂಟೆಯ ಮಧ್ಯೆ ಯಾರೋ ಕಳ್ಳರು ಕಳವು ಮಾಡಿ ಕೊಂಡು ಹೋಗಿದ್ದು, ಇದರ ಅಂದಾಜು ಮೌಲ್ಯ ರೂ: 25,000/- ಆಗಬಹುದು. ಇದರ ಚಾಸಿಸ್ ನಂ: MB8DP11ACH8356117 ಇಂಜಿನ್ ನಂಬರ್:AF211249241, ನೀಲಿ ಬಣ್ಣ, ಮಾಡೆಲ್: 2017 ಆಗಿದ್ದು,  ಪಿರ್ಯಾದಿದಾರರು ಕಳವಾದ ತನ್ನ ಸ್ಕೂಟರ್ ನ್ನು ನಗರ ಎಲ್ಲಾ ಕಡೆ ಹುಡುಕಾಡಿ, ಸಿಗದ ಕಾರಣ ತಡವಾಗಿ ಬಂದು ದೂರು ನೀಡಿರುವುದಾಗಿದೆ ಎಂಬಿತ್ಯಾದಿ

ಇತ್ತೀಚಿನ ನವೀಕರಣ​ : 01-03-2024 11:12 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080