ಅಭಿಪ್ರಾಯ / ಸಲಹೆಗಳು

ದೈನಂದಿನ ಅಪರಾಧ ವರದಿ 

Traffic North Police Station                                 

ಈ ಪ್ರಕರಣದ ಸಂಕ್ಷಿಪ್ತ ಸಾರಾಂಶವೇನೆಂದರೆ, ದಿನಾಂಕ 27.03.2024 ರಂದು ಬೆಳಿಗ್ಗೆ ಸಮಯ ಸುಮಾರು 08:30 ಗಂಟೆಗೆ ಕಿನ್ನಿಗೋಳಿ ಚರ್ಚ್ ಬಳಿ ನೀಲಿ ಬಣ್ಣದ ಸ್ಕೂಟರ್ ನಂಬ್ರ KA-19-HD-8744 ನೇಯದನ್ನು ಅದರ ಸವಾರ ಜೋಯೆಲ್ ಪಿಂಟೋ ಎಂಬವರು ಸ್ಕೂಟರಿನ ಹಿಂಬದಿಯಲ್ಲಿ ಜೊಯ್ಡನ್ ಪಿಂಟೋ(4.5 ವರ್ಷ) ಎಂಬ ಬಾಲಕನನ್ನು  ಸಹಸವಾರನಾಗಿ ಕುಳ್ಳಿರಿಕೊಂಡು ಕಿನ್ನಿಗೋಳಿ ಪೇಟೆ ಕಡೆಯಿಂದ ಸ್ಕೂಟರನ್ನು ದುಡುಕುತನ ಹಾಗೂ ನಿರ್ಲಕ್ಷತನದಿಂದ ಸವಾರಿ ಮಾಡಿಕೊಂಡು ಬಂದು ಎದುರಿನಲ್ಲಿ ಲೋಕನಾಥ ಎಂಬವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ ಮೋಟಾರ್ ಸೈಕಲ್  ನಂಬ್ರ  KA-19-U-2567 ನೇಯದಕ್ಕೆ ಡಿಕ್ಕಿ ಪಡಿಸಿದ ಪರಿಣಾಮ ಎರಡೂ ವಾಹನ ಸವಾರರು ತಮ್ಮ ತಮ್ಮ ವಾಹನಗಳ ಸಮೇತ ರಸ್ತೆಗೆ ಬಿದ್ದ ಪರಿಣಾಮ ಲೋಕನಾಥರವರ ಎಡಭುಜದ ಬಳಿ ಮೂಳೆ ಮುರಿತದ ಗಾಯ, ಸ್ಕೂಟರ್ ಸವಾರ ಜೊಯೆಲ್ ಪಿಂಟೋರವರ ಭುಜಕ್ಕೆ ಗುದ್ದಿದ ಗಾಯ, ಹಾಗೂ ಸ್ಕೂಟರ್ ಸಹಸವಾರ  ಜೋಯ್ಡನ್ ಪಿಂಟೋರವರಿಗೆ ತರಚಿದ ಗಾಯವಾಗಿದ್ದು, ಗಾಯಾಳುಗಳು ಕಿನ್ನಿಗೋಳಿ ಕನ್ಸೆಟ್ಟಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತಾರೆ.  ಎಂಬಿತ್ಯಾದಿ

 

Traffic North Police

ಈ ಪ್ರಕರಣದ ಸಂಕ್ಷಿಪ್ತ ಸಾರಾಂಶವೇನೆಂದರೆ, ಪಿರ್ಯಾದಿ Ashish Benedict ಇವರು  ಈ ದಿನ ದಿನಾಂಕ 28-03-2024 ರಂದು ತನ್ನ ಸಂಬಂಧಿಕರ ಬಾಬ್ತು KL-03-K-3763 ನಂಬ್ರದ ಸ್ಪೆಂಡರ್ ಮೋಟಾರ್ ಸೈಕಲಿನಲ್ಲಿ ಪಿರ್ಯಾದಿದಾರರು ಸವಾರರಾಗಿ, ಪಿರ್ಯಾದಿದಾರರ ಸ್ನೇಹಿತ AARON BRIJESH ಎಂಬವರು ಸಹ ಸವಾರರಾಗಿ ಕುಳ್ಳಿತುಕೊಂಡು ಶ್ರೀನಿವಾಸ ಡೆಂಟಲ್ ಕಾಲೇಜಿಗೆ ಹಲ್ಲು ಕ್ಲೀನ್ ಮಾಡಿಸಲು ಹೋದವರು ವಾಪಾಸು ಕಾವೂರಿನ ಪಿರ್ಯಾದಿದಾರರ ರೂಮಿಗೆ ಬರುತ್ತಿದ್ದ ಸಮಯ ಸಂಜೆ 3:30 ಗಂಟೆಗೆ ಪಣಂಬೂರು ಎಂ.ಸಿ.ಎಫ್. ನಿಂದ ಮುಂದೆ ಎನ್ ಎಂ.ಪಿ.ಎ. ಮೂಖ್ಯ ಗೇಟಿನ ಎದುರು ತಲುಪಿದಾಗ ಪಿರ್ಯಾದಿದಾರರ ಹಿಂದಿನಿಂದ ಕೆಂಪು ಬಣ್ಣದ KA-19-MA-3956 ನಂಬ್ರದ ಸ್ವಿಪ್ಟ್ ಕಾರೊಂದನ್ನು ಅದರ ಚಾಲಕ ಯಾಹ್ಯಾ ( YAHYA) ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮೋಟಾರ್ ಸೈಕಲಿನ ಹಿಂಭಾಗಕ್ಕೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ಮತ್ತು AARON BRIJESH  ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು, ಪಿರ್ಯಾದಿದಾರರಿಗೆ ಎರಡೂ ಕಾಲಿನ ಮೊಣಗಂಟಿಗೆ ತರಚಿದ ಗಾಯ, ಬಲ ಕೈಅಂಗೈ ಬಳಿ ತರಚಿದ ರೀತಿಯ ರಕ್ತಗಾಯವಾಗಿದ್ದು AARON BRIJESH ನಿಗೆ ಕಿಬ್ಬೊಟ್ಟೆಗೆ ತರಚಿದ ರೀತಿಯ ಗಾಯ ಹಾಗೂ, ಬಲ ಕಾಲಿನ ಮೊಣಗಂಟಿಗೆ ಗುದ್ದಿದ ರೀತಿಯ ಗಾಯ, ಎಡ ಭುಜಕ್ಕೆ ಗುದ್ದಿದ ರೀತಿಯ ಗಾಯವಾಗಿರುತ್ತದೆ. AARON BRIJESH ರವರು ಚಿಕಿತ್ಸೆಯ ಬಗ್ಗೆ ಎ.ಜೆ. ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ ಎಂಬಿತ್ಯಾದಿ

 

Traffic South Police

ಈ ಪ್ರಕರಣದ ಸಾರಾಂಶವೇನೆಂದರೆ ಪಿರ್ಯಾದಿ ಶ್ರೀನಿವಾಸ (32) ರವರು ಸುಮಾರು 6 ವರ್ಷಗಳಿಂದ  ಕೆಂಪು ಕಲ್ಲಿನ ಲೋಡರ್ ಆಗಿ ಕೆಲಸಮಾಡುತ್ತಿದ್ದ ಮಹ್ಮಮದ್ ಹನೀಪ್ ಎಂಬವರ ಮಾಲಿಕತ್ವದ KL-58-C-2502 ನೇ ಇಚೇರ್ ಲಾರಿಯಲ್ಲಿ  ನಿನ್ನೆ ದಿನಾಂಕ:27-03-2024 ರಂದು ಸಂಜೆ 4.00 ಗಂಟೆ ಸುಮಾರಿಗೆ  ನೆತ್ತಿಲ ಪದವು ಎಂಬಲ್ಲಿ ಪಿರ್ಯಾದಿದಾರರು ಮತ್ತು ವಿನೋದ ಎಂಬವರು ಕೆಂಪು ಕಲ್ಲನ್ನು ಲೋಡ ಮಾಡಿಕೊಂಡು ಲಾರಿ ಚಾಲಕನಾದ ಮಹಮ್ಮದ್ ಹನೀಫ್  ರವರರೊಂದಿಗೆ  ದೇರಳಕಟ್ಟೆ ಮೂಲಕ ರೆಂಜಾಡಿಗೆ ಹೋಗುವರೇ ರೆಂಜಾಡಿ ಇಳಿಜಾರು ರಸ್ತೆಯಲ್ಲಿ ಲಾರಿ  ಚಲಾಯಿಸಿಕೊಂಡು ಹೋಗುತ್ತಿದ್ದ ಸಮಯ ಸಂಜೆ 5.30 ಗಂಟೆ ಸುಮಾರಿಗೆ  ಚಾಲಕನ ನಿಯಂತ್ರಣ ತಪ್ಪಿ ಲಾರಿಯು ಕಾಂಕ್ರೇಟ್ ರಸ್ತೆಯ ತೀರ ಎಡಬದಿಗೆ ಚಲಿಸಿ ರಸ್ತೆಯ ಅಂಚಿನಲ್ಲಿದ್ದ ದೊಡ್ಡ ಕಲ್ಲಿನ ಬಂಡೆಗೆ ಬಡಿದು ನಿಂತಿದ್ದು ಈ ಅಪಘಾತದಿಂದ ಲಾರಿಯ ಎದುರು ಕ್ಯಾಬಿನ್ ನಲ್ಲಿ ಎಡ ಡೋರ್ ಬದಿಗೆ  ಕುಳಿತ್ತಿದ್ದ ಪಿರ್ಯದಾದಾರರ ಎಡಕಾಲಿನ ಕೋಲು ಕಾಲಿಗೆ ಮೂಳೆಮುರಿತದ ಗಾಯವಾಗಿರುತ್ತದೆ.ಕೂಡಲೇಲಾರಿ ಚಾಲಕ ಮತ್ತು ಪಿರ್ಯಾದಿದಾರರ ಜೊತೆಯಲ್ಲಿದ್ದ ವಿನೋದ್ ರವರು ಆಟೋರಿಕ್ಷಾವೊಂದರಲ್ಲಿ ಚಿಕಿತ್ಸೆ ಬಗ್ಗೆ ದೇರಳಕಟ್ಟೆ ಕಣಚೂರು ಆಸ್ಪತ್ರೆಗೆ ಕರೆದುಕೊಂಡು ಹೋಗಿದವರನ್ನು ಪರೀಕ್ಷಿಸಿದ ವೈದ್ಯರು ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ.ಈ ಅಪಘಾತಕ್ಕೆ ಲಾರಿ ಚಾಲಕ ಮಹಮ್ಮದ್ ಹನೀಫ್ ರವರ  ದುಡುಕುತನ ಹಾಗೂ ನಿರ್ಲಕ್ಷತನ  ಕಾರಣವಾಗಿರುತ್ತದೆ  ಎಂಬಿತ್ಯಾಧಿ

 

Konaje PS        

ಈ ಪ್ರಕರಣದ ಸಾರಾಂಶವೇನೆಂದರೆ ದಿನಾಂಕ:28-03-2024 ರಂದು ಪಿರ್ಯಾದಿ Nagaraj S ಇವರು  ರೌಂಡ್ಸ್ ಕರ್ತವ್ಯದಲ್ಲಿರುವಾಗ ಸಮಯ ಉಳ್ಳಾಲ ತಾಲೂಕು ಕೊಣಾಜೆ ಗ್ರಾಮದ ಅಸೈಗೋಳಿ ಮೈದಾನದ ಬಳಿ ತಲುಪಿದಾಗ ಓರ್ವ ಯುವಕನು ಅಮಲು ಪದಾರ್ಥ ಸೇವನೆ ಮಾಡಿ ನಶೆಯಲ್ಲಿದ್ದಂತೆ ಕಂಡು ಬಂದ ಮಧು ಕಿರಣ್, ಪ್ರಾಯ: 30 ವರ್ಷ, ತಂದೆ: ರಾಮನಾಥ್, ವಾಸ: #22-55/29, ಸುಂದರಿ ಕಂಪೌಂಡ್, ಓವರ್ ಬ್ರೀಡ್ಜ್ ಹತ್ತಿರ, ಉಳ್ಳಾಲ, ಮಂಗಳೂರು ಎಂಬಾತನನ್ನು ಮುಂದಿನ ಕ್ರಮದ ಬಗ್ಗೆ ಮಂಗಳೂರು ಕೆ ಎಸ್ ಹೆಗ್ಡೆ ಆಸ್ಪತ್ರೆಯ ವೈಧ್ಯಾದಿಕಾರಿಯವರ ಮುಂದೆ ಹಾಜರು ಪಡಿಸಿ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಆರೋಪಿ TETRAHYDROCANNABINOL ಎಂಬ ಮಾದಕ ವಸ್ತುವನ್ನು ಸೇವನೆ ಮಾಡಿರುವುದು ದೃಡಪಟ್ಟಿರುತ್ತದೆ ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 30-03-2024 08:31 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080