ಅಭಿಪ್ರಾಯ / ಸಲಹೆಗಳು

Crime Reports: CEN Crime PS Mangaluru City

ದಿನಾಂಕ: 04/02/2023 ರಂದು ಸಂಜೆ 04.00 ಗಂಟೆಯಿಂದ 4:30 ಗಂಟೆಯ ಮದ್ಯಾವಧಿಯಲ್ಲಿ ಪಿರ್ಯಾದಿ  ಮೊಬೈಲ್ ಸಂಖ್ಯೆ:  ನೇಯದಕ್ಕೆ 9827709747 ನೇ ನಂಬ್ರದಿಂದ ಪಿರ್ಯಾದಿದಾರರ  ಕೆನರಾ ಬ್ಯಾಂಕ್ ಖಾತೆಯ ಕೆವೈಸಿ ಅಪ್ಡೇಟ್ ಆಗದೆ ಇದ್ದು ಖಾತೆ ಸ್ಥಗಿತಗೊಳ್ಳುವುದಾಗಿ ತಿಳಿಸಿ ಕಸ್ಟಮರ್ ಕೇರ್ ಸಂಖ್ಯೆ: 9003430354 ನ್ನು ಸಂಪರ್ಕಿಸಬೇಕೆಂದು ಸಂದೇಶ ಬಂದಿರುತ್ತದೆ. ಪಿರ್ಯಾದಿದಾರರ ವಿಚಲಿತನಾಗಿ ಸದ್ರಿ ಕಸ್ಟಮರ್ ಕೇರ್ ಸಂಖ್ಯೆಗೆ ಕರೆ ಮಾಡಿದ್ದು ಕರೆಯನ್ನು ಸ್ವೀಕರಿಸಿದ ಅಪರಿಚಿತ ವ್ಯಕ್ತಿಯು  ಪಿರ್ಯಾದಿದಾರರ ಬ್ಯಾಂಕ್ ಖಾತೆ ಸಂಖ್ಯೆ, ಹೆಸರು, ವಿಳಾಸವನ್ನು ಆತನೇ ತಿಳಿಸಿದ್ದರಿಂದ ನಾನು ಆತನು ಬ್ಯಾಂಕ್ ಅಧಿಕಾರಿ ಆಗಿರಬಹುದೆಂದು ನಂಬಿ ಕೆ.ವೈ.ಸಿ ಅಪ್ಡೇಟ್ ಮಾಡುವ ಬಗ್ಗೆ ನನ್ನ ಮೊಬೈಲ್ ಗೆ ಸ್ವೀಕೃತವಾದ ಒಟಿಪಿ ಯನ್ನು ತಿಳಿಸುವಂತೆ ಆತನು ಪಿರ್ಯಾದಿದಾರರ ಕೇಳಿಕೊಂಡಿದ್ದು ಅದರಂತೆ ನಾನು ಮೊಬೈಲ್ ಗೆ ಸ್ವೀಕೃತವಾದ  ಎಲ್ಲಾ ಒಟಿಪಿ ಗಳನ್ನು ಆತನಿಗೆ ತಿಳಿಸಿರುತ್ತೇನೆ, ನಂತರ ನಾನು ಕರೆಯನ್ನು ಮುಕ್ತಾಯಗೊಳಿಸಿ, ಮೊಬೈಲ್ ಪರಿಶೀಲಿಸಿದಲ್ಲಿ ನನ್ನ ಖಾತೆಯಿಂದ ಹಂತ ಹಂತವಾಗಿ ಒಟ್ಟು ರೂ 2,50,000/- ಕಡಿತಗೊಂಡಿರುದು ತಿಳಿದು ಬಂದಿರುತ್ತದೆ. ಈ ಬಗ್ಗೆ ಕೂಡಲೇ ಕೆನರಾ ಬ್ಯಾಂಕ್ ಗ್ರಾಹಕ ಸೇವಾ ಕೆಂದ್ರಕ್ಕೆ ಕರೆ ಮಾಡಿ ದೂರು ದಾಖಲಿಸಿ ಪಿರ್ಯಾದಿದಾರರ ಖಾತೆಯನ್ನು ಸ್ಥಗಿತಗೊಳಿಸಿರುತ್ತೇನೆ. ಆದುದರಿಂದ ನನಗೆ ಮೋಸ ಮಾಡುವ ಉದ್ದೇಶದಿಂದ  ಬ್ಯಾಂಕ್ ಅಧಿಕಾರಿಯ ಹೆಸರಿನಲ್ಲಿ ಕರೆಮಾಡಿ ನನ್ನ ಬ್ಯಾಂಕ್ ಖಾತೆ ವಿವರಗಳನ್ನು ಪಡೆದುಕೊಂಡು ನನ್ನ ಕೆನರಾ ಬ್ಯಾಂಕ್ ಖಾತೆ ನೇಯದರಿಂದ ಅನಧಿಕೃತವಾಗಿ ರೂ 2,50,000/- ವರ್ಗಾಯಿಸಿಕೊಂಡು ಮೋಸ ಮಾಡಿದ ಅಪರಿಚಿತ ವ್ಯಕ್ತಿಯ ವಿರುದ್ಧ ಸೂಕ್ತ ಕಾನೂನುಕ್ರಮ ಕೈಗೊಳ್ಳಬೇಕಾಗಿ ವಿನಂತಿ. ಎಂಬಿತ್ಯಾದಿ

CEN Crime PS Mangaluru City

ಕಣಚೂರು  ಇನ್ಸಿಟ್ಯೂಟ್ ಆಪ್ ಮೆಡಿಕ್ ಸೈನ್ಸ್ ಕಾಲೇಜ್  ಇವರ ಪರವಾಗಿ ಅದಿಕೃತ ಪ್ರತಿನಿಧಿಯಾಗಿ, ಮುಹಮ್ಮದ್ ನಿಜಾಮ್ , ಪ್ರಾಯ 40 ವರ್ಷ, ತಂದೆ: ಯಾಕುಬ್, ವಾಸ ನಂಬ್ರ: 2-357, ತುಂಬೆ ಬೊಳ್ಳಾರಿ ಹೌಸ್, ತುಂಬೆ ಪೋಸ್ಟ್ ಅಂಡ್ ವಿಲೇಜ್, ಬಂಟ್ವಾಳ ಎಂಬುವರು,  ಪಿರ್ಯಾದುದಾರರಾಗಿರುತ್ತಾರೆ. ಆರೋಪಿಗಳಾದ ಇಪ್ತಿಕಾರ್, ಅಹಮ್ಮದ್, ಶ್ರೀಮತಿ ನೇಹಾ, ಶ್ರೀಮತಿ ಫಾಯಲ್ ಯಶ್, ರಾಹುಲ್, ಸುಪ್ರಿಯಾ, ಮನೋಜ್, ಜಯಂತಿ ಮತ್ತು ಇತರ ಇಬ್ಬರು ಆರೋಪಿಗಳು 2022 ರಲ್ಲಿ  ನೀಟ್ ಎಜುಕೇಷನ್ ಡಿಪಾರ್ಟ್ ಮೆಂಟ್ ನಿಂದ ಪ್ರಕಟವಾದ ಲೀಸ್ಟ್ ನಲ್ಲಿ ಕಣಚೂರು ಕಾಲೇಜಿನಲ್ಲಿ ಮೆಡಿಕಲ್ ಸೀಟ್ ತೆಗೆಸಿಕೊಡುವುದಾಗಿ ಕಣಚೂರು ಕಾಲೇಜಿನ  ಡೀನ್ ರವರ ಮತ್ತು ಕರ್ನಾಟಕ ಎಕ್ಸಾಮಿನೇಷನ್ ಅಥಾರಿಟಿ (ಕೆಇಎ) ಇ ನಕಲಿ ಇ-ಮೇಲ್ ಐಡಿಯನ್ನು  ಸೃಷ್ಟಿಸಿ ಇ-ಮೇಲ್ ಐಡಿ ಸೃಷ್ಟಿಸಿ ಮೆಸೇಜ್ ಕಳುಹಿಸಿ ಮೆಡಿಕಲ್ ಕಾಲೇಜ್ ಸೀಟ್ ಆಕಾಂಕ್ಷಿಗಳಾದ ಚಪ್ಪಗಡ್ಡಿ ಎರುಕು ನಾಯ್ಡು,  ವಿಶಾಖಪಟ್ಟಣಂ, ಆಂದ್ರಪ್ರದೇಶ ಎಂಬವರು ಮತ್ತು ಶಶಿಕಾಂತ್ ದೀಕ್ಷಿತ್, ತಂದೆ: ಕಮಲಾಕರ್ ಜೋಶಿ, ಬೀದರ್ ಕರ್ನಾಟಕ, ಎಂಬವರಿಂದ ಹಣ ಪಡೆದು ಮೋಸ ಮಾಡಿದ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಕ್ರಮವಾಗಿ ಅ.ಕ್ರ. **/2023 ಮತ್ತು ಅ.ಕ್ರ. **/2023 ರಂತೆ ತನಿಖೆಯಲ್ಲಿರುವುದಾಗಿಯೂ, ಸದ್ರಿ ಪ್ರಕರಣ ದಾಖಲಾದ ಬಳಿಕ ಸಾಮಾಜಿಕ ಜಾಲತಾಣ ಮತ್ತು ದಿನಪತ್ರಿಕೆಗಳಲ್ಲಿ ಕಣಚೂರು  ಇನ್ಸಿಟ್ಯೂಟ್ ಆಪ್ ಮೆಡಿಕಲ್  ಸೈನ್ಸ್ ಕಾಲೇಜ್  ಖ್ಯಾತಿಗೆ ಕುಂದುಂಟು ಮಾಡುವ ರೀತಿಯಲ್ಲಿ ಪ್ರಕಟಿಸಿದ ಕಾರಣದಿಂದ ಕಣಚೂರು ಸಂಸ್ಥೆಯ ಬಗ್ಗೆ ಇತರ ವಿದ್ಯಾಸಂಸ್ಥೆಗಳು ಸಂಸ್ಥೆಗಳು  ಪ್ರಶ್ನಾತೀತವಾಗಿ ನೋಡುವಂತಾಗಿದೆ. ಆದುದರಿಂದ ಕಣಚೂರು  ಇನ್ಸಿಟ್ಯೂಟ್ ಆಪ್ ಮೆಡಿಕ್ ಸೈನ್ಸ್ ಕಾಲೇಜ್  ನ ಡೀನ್ ಮತ್ತು ಕರ್ನಾಟಕ ಎಕ್ಸಾಮಿನೇಷನ್ ಅಥಾರಿಟಿ (ಕೆಇಎ) ಇ ನಕಲಿ ಇ-ಮೇಲ್ ಐಡಿಯನ್ನು  ಸೃಷ್ಟಿಸಿದ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ನೀಡಿದ ಖಾಸಗಿ ಫಿರ್ಯಾದು ಆಗಿರುತ್ತದೆ ಎಂಬಿತ್ಯಾದಿ.

 

CEN Crime PS Mangaluru City

ದಿನಾಂಕ 10-01-2023 ರಂದು ಬೆಳಿಗ್ಗೆ 9.30 ಗಂಟೆಗೆ ಪಿರ್ಯಾದಿದಾರರ ಮೊಬೈಲ್ ಗೆ indeed private limited ನಿಂದ ಸಂದೇಶವೊಂದು ಬಂದಿದ್ದು ಸದ್ರಿ ಸಂದೇಶದಲ್ಲಿ ನಮೂದಾಗಿದ್ದ ವಾಟ್ಸಪ್ ನಂಬ್ರ 9038578480 ನೇ ದಕ್ಕೆ ಪಿರ್ಯಾದಿದಾರರು ಕರೆ ಮಾಡಿದಾಗ ಸದ್ರಿ  ವ್ಯಕ್ತಿಯು ತಾನು Volvo job ನ consultant ಎಂಬುದಾಗಿ ನಂಬಿಸಿ ದಿನಾಂಕ 17-01-2023 ರಂದು ಬೆಳಿಗ್ಗೆ ಸಮಯ ಸುಮಾರು 11.00 ಗಂಟೆಗೆ ಪಿರ್ಯಾದಿದಾರರಿಗೆ  online ನಲ್ಲಿ ಎರಡು ರೌಂಡ್ ನ ಇಂಟರ್ ವ್ಯೂ ಮಾಡಿ ಸಂಜೆಯ ವೇಳೆಗೆ you have been selected for trainee engineer Volvo in production department  ಎಂಬುದಾಗಿ ಕರೆ ಮಾಡಿ ತಿಳಿಸಿದ್ದು ನಂತರ  ಆತನು ತಾನು indeed ನಿಂದ ಕೆಲಸ ಕೊಡಿಸುವುದರಿಂದ ಜಾಬ್ ಕನ್ಸೆಲ್ಟೆನ್ಸಿ ಬಗ್ಗೆ ರೂ. 25000/- ನ್ನು ಪಾವತಿಸಲು ಹೇಳಿದ್ದು ಪಿರ್ಯಾದಿದಾರರು  ಆತನ  ಗೂಗಲ್ ಪೇ ನಂಬ್ರ 9279423287 ನೇ ದಕ್ಕೆ 25000/- ಪಾವತಿಸಿರುತ್ತಾರೆ. ಈ ರೀತಿ  ಸದ್ರಿ ವ್ಯಕ್ತಿಯು Volvo group of company ಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ದಿನಾಂಕ 24-01-2023ರ ವರೆಗೆ  ವಿವಿಧ ಕಾರಣಗಳನ್ನು ತಿಳಿಸಿ ತನ್ನ ಕೆನರಾ ಬ್ಯಾಂಕ್ ಖಾತೆ ಸಂಖ್ಯೆ  ನೇ ದರಿಂದ ಹಂತ ಹಂತವಾಗಿ ಒಟ್ಟು ರೂ. 1,02,250/- ಯನ್ನು ತನ್ನ ಖಾತೆಗೆ ವರ್ಗಾಯಿಸಿದ್ದು  ಇದಾದ ಬಳಿಕ ಸದ್ರಿ ವ್ಯಕ್ತಿಯು ಪಿರ್ಯಾದಿದಾರರಿಂದ ಇನ್ನು ಹೆಚ್ಚಿನ ಹಣವನ್ನು ಪಾವತಿಸುವಂತೆ ಒತ್ತಾಯಿಸುತ್ತಿದ್ದು ಇದರಿಂದ ಸಂಶಯಗೊಂಡ ಪಿರ್ಯಾದಿದಾರರು ತನ್ನ ಸಂಬಂಧಿಕರ ಮುಖೇನ  Volvo ದಲ್ಲಿ ಕೆಲಸ ಮಾಡುವ ವ್ಯಕ್ತಿಗೆ ಕರೆ ಮಾಡಿ ಪರಿಶೀಲಿಸಿದಲ್ಲಿ ಯಾರೋ ಅಪರಿಚಿತರು ತನಗೆ  indeed india private limited   ನಿಂದ VOLVO ದಲ್ಲಿ ಕೆಲಸ ಮಾಡಿಕೊಡುವುದಾಗಿ ಆಮಿಷವೊಡ್ಡಿ  ಪಿರ್ಯಾದಿದಾರರ ಕೆನರಾ ಬ್ಯಾಂಕ್ ಖಾತೆಯಿಂದ ಅನಧಿಕೃತವಾಗಿ ಹಣವನ್ನು ವರ್ಗಾಯಿಸಿರುವುದು ತಿಳಿದು ಬಂತು. ಆದುದರಿಂದ ಸದ್ರಿ ವ್ಯಕ್ತಿಯ   ವಿರುದ್ಧ ಕ್ರಮ ಕೈಗೊಳ್ಳುವರೇ ಕೋರಿಕೆ.

Bajpe PS

ದಿನಾಂಕ 27.04.2023 ರಂದು ರಾತ್ರಿ ಪಿರ್ಯಾದಿ Vidyadhara D Baikerikar  ತಮ್ಮ ಸಿಬ್ಬಂದಿಯವರರಾದ ಎಎಸ್ಐ ಉಮೇಶ,ಎಎಸ್ಐ ಸಂಜೀವ ಹಾಗೂ ಚಾಲಕರಾದ ಎಹೆಚ್ ಸಿ  ರವರೊಂದಿಗೆ ಇಲಾಖಾ ವಾಹನ ನಂ KA19G513 ನೇದರಲ್ಲಿ ಮಂಗಳೂರು ಉತ್ತರ ಉಪ ವಿಭಾಗದ ವ್ಯಾಪ್ತಿಯಲ್ಲಿ ನೇದರಲ್ಲಿ ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ದಿನಾಂಕ 28.04.2023 ರ ಮುಂಜಾನೆ ಸುಮಾರು 01.00 ಗಂಟೆಗೆ ಮಾನ್ಯ ಪೊಲೀಸ್ ಆಯುಕ್ತರು ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ತೆಂಕುಳಿಪಾಡಿ ಗ್ರಾಮದ ಸಾದೂರು ಎಂಬಲ್ಲಿರುವ ಫಲ್ಗುಣಿ ನದಿಯಲ್ಲಿ ಅಕ್ರಮವಾಗಿ ಮರಳು ತೆಗೆಯುತಿದ್ದಾರೆ ಎಂಬ ಮಾಹಿತಿ ಬಂದಿರುವುದಾಗಿಯೂ ಕೂಡಲೇ ಸ್ಥಳಕ್ಕೆ ಹೋಗಿ ಪರೀಶಿಲಿಸುವಂತೆ ಆದೇಶಿಸಿದ ಮೇರೆಗೆ ಪಿರ್ಯಾದಿದಾರರು ತಮ್ಮ ಸಿಬ್ಬಂದಿಯವರ ಜೊತೆಗೆ ಮುಂಜಾನೆ ಸುಮಾರು 02.30 ಗಂಟೆಗೆ ಸಾದೂರು ಫಲ್ಗುಣಿ ನದಿ ತೀರಕ್ಕೆ ಬಂದಾಗ ನದಿ ತೀರದಲ್ಲಿ KA20AB6197 ಮತ್ತು KA12B1943 ನಂಬ್ರದ ಟಿಪ್ಪರ್ ಲಾರಿಗಳು ನಿಂತಿದ್ದು ,ನದೀ ತೀರದಲ್ಲಿ ಕಬ್ಬಿಣದ ದೋಣಿಗೆ ಮರಳು ತುಂಬಿಸುತಿದ್ದ ಕೆಲಸಗಾರರು ಪೊಲೀಸರನ್ನು ಕಂಡೋಡನೆ ದೋಣಿಯಿಂದ ಹಾರಿ ಪರಾರಿಯಾಗಿರುತ್ತಾರೆ.ಸ್ಥಳದಲ್ಲಿದ್ದ ಸದ್ರಿ ಟಿಪ್ಪರ್ ಲಾರಿಗಳ ಚಾಲಕರ ಹೆಸರು ವಿಳಾಸ ತಿಳಿಯಲಾಗಿ

  1. ಶೇಖ್ ನದೀಮ್ (26),ವಾಸ:ರಮೀರ ಗುತ್ತು ಮನೆ, ಮೀಯಾರ್ ಗ್ರಾಮ, ಕಾರ್ಕಳ
  2. ಮಹಮ್ಮದ್ ಇರ್ಪಾನ್ (23),ವಾಸ:ಮದನಿ ಮಂಜಿಲ್ ನೂರಲ್ ಬೆಟ್ಟು,ಹೊಸಮಾರ್ ಕಾರ್ಕಳ

ಎಂಬುದಾಗಿ ತಿಳಿದುಬಂದಿರುತ್ತದೆ ಸದ್ರಿ ಚಾಲಕರಲ್ಲಿ ಸ್ಥಳಕ್ಕೆ ಟಿಪ್ಪರ್ ಲಾರಿಯನ್ನು ನದಿ ತೀರಕ್ಕೆ ತಂದಿರುವುದರ ಬಗ್ಗೆ ವಿಚಾರಿಸಿದಾಗ ಕಾರ್ಮಿಕರು ನದಿಯಿಂದ ಬೋಟ್ ನಲ್ಲಿ ತುಂಬಿಸಿಕೊಂಡು ತರುವ ಮರಳನ್ನು ಖರೀದಿಸಿ ಸಾಗಾಟ ಮಾಡಲು ತಂದಿರುವುದಾಗಿ ತಿಳಿಸಿರುತ್ತಾರೆ.ಸದ್ರಿ ಚಾಲಕರಲ್ಲಿ ಮರಳನ್ನು ತೆಗೆಯಲು ಮತ್ತು ಸಾಗಾಟ ಮಾಡಲು ಪರವಾನಿಗೆ ಇದೆಯೇ ಎಂಬುದರ ಬಗ್ಗೆ ವಿಚಾರಿಸಿದಾಗ ತಮ್ಮ ಬಳಿ ಯಾವುದೇ ಪರವಾನಿಗೆ ಇಲ್ಲ ಎಂಬುದಾಗಿ ತಿಳಿಸಿದಂತೆ ಸ್ಥಳದಲ್ಲಿದ್ದ 2 ಟಿಪ್ಪರ್ ಲಾರಿಗಳು,ಸುಮಾರು 2 ಯುನಿಟ್ ನಷ್ಟು ಮರಳು ತುಂಬಿದ್ದ ಕಬ್ಬಿಣದ ಬೋಟ್,ಈ ಬೋಟ್ ನಲ್ಲಿದ್ದ  ಮರದ ಹಲಗೆ -2,ನೀರಿನ ಕ್ಯಾನ್ -2 ,ಹಾರೆ -2,ಬಿದಿರಿನ ಹುಟ್ಟು -1 ಹಾಗೂ ನದಿ ದಡದಲ್ಲಿ ಸುಮಾರು 50 ಬುಟ್ಟಿಯಷ್ಟು ಮರಳು, ಪ್ಲಾಸ್ಟಿಕ್ ಬುಟ್ಟಿ-10 ,ಕಬ್ಬಿಣದ ಹಾರೆ-4, ಮರದ ಹಲಗೆ-4 ,ಬಿದಿರಿನ ಹುಟ್ಟು -1 ಮತ್ತು TMB ಕೀಪ್ಯಾಡ್ ಮೊಬೈಲ್ ಪೋನ್ -1,REDMI ಮೊಬೈಲ್ ಫೋನ್ ಸೇರಿದಂತೆ ರೂ 31,14,000/-ಮೌಲ್ಯದ  ಎಲ್ಲಾ ಸ್ವತ್ತುಗಳನ್ನು ಮತ್ತು ಲಾರಿ ಚಾಲಕರಿಬ್ಬರನ್ನು  ವಶಕ್ಕೆ ಪಡೆದು ಸೂಕ್ತ ಕ್ರಮಕ್ಕಾಗಿ ಲಿಖಿತ ಪಿರ್ಯಾದಿ ನೀಡಿರುವುದಾಗಿದೆ ಎಂಬಿತ್ಯಾದಿ

Moodabidre PS

ಪಿರ್ಯಾದಿ Dinesh ನೆರೆಕೆರೆಯ ನಿವಾಸಿ ಮತ್ತು ದೂರದ ಸಂಬಂಧಿಯಾಗಿರುವ ಅಶೋಕ್ ಎಂಬಾತನು ದಿನಾಂಕ 22.04.2023 ರಂದು ಪಿರ್ಯಾದಿದಾರರು ಮನೆಯಲ್ಲಿ ಇಲ್ಲದೇ ಇರುವ ಸಮಯದಲ್ಲಿ ಅವರ ಮನೆಗೆ ಬೆಳಿಗ್ಗೆ 10.00 ಗಂಟೆಗೆ ಸುಮಾರಿಗೆ ಬಂದು ಪಿರ್ಯಾದಿದಾರರ ತಂದೆ ಮತ್ತು ತಾಯಿಯವರಿಗೆ ಜಾಗದ ವಿಚಾರದಲ್ಲಿ ಬಾಯಿಗೆ ಬಂದ ಹಾಗೆ ಅವಾಚ್ಯ ಶಬ್ದಗಳಿಂದ ಬೇವರ್ಸಿಗಳೆ, ನಾಯಿಗಳೇ ಎಂದು ಬೈದು ವಾಪಸ್ ಮನೆಗೆ ಹೋಗಿ  ಅದೇ ದಿನ ಸಂಜೆ 04.00 ಗಂಟೆಗೆ ಪಿರ್ಯಾದಿದಾರ ಮನೆಯ ನಾಯಿ ಮತ್ತು ಅಶೋಕ್ ರವರ ಮನೆಯ ನಾಯಿ ಜಗಳವಾಡುತ್ತಿದ್ದಾಗ ಪಿರ್ಯಾದಿದಾರರ ತಂದೆಯವರು ಕೋಲಿನಿಂದ ಬಿಡಿಸಲು ಹೋದಾಗ ಅಶೋಕನು “ನೀನು ಯಾಕೆ ಕೋಲಿನಿಂದ ನಾಯಿಗೆ ಹೊಡೆಯುವುದು” ಎಂದು ಹೇಳಿ ಜಗಳ ತೆಗೆದು ಪಿರ್ಯಾದಿದಾರ ಮನೆಯ ಅಂಗಳಕ್ಕೆ ಅತಿಕ್ರಮಣ ಪ್ರವೇಶ ಮಾಡಿ ಮನೆಯ ಅಂಗಳದಲ್ಲಿದ್ದ ಪಿರ್ಯಾದಿದಾರರ ನಾಯಿಗೆ ಕತ್ತಿಯಿಂದ ಬೆನ್ನಿಗೆ ಮತ್ತು ಸೊಂಟದ ಹತ್ತಿರ ಕಡಿದು ಅಂಗವಿಕಲಗೊಳಿಸಿ ತೊಂದರೆ ನೀಡಿರುತ್ತಾನೆ ಎಂಬಿತ್ಯಾದಿ                                     

Crime Reports: CEN Crime PS Mangaluru City

ಪಿರ್ಯಾದಿ ರಾಮ ಮೋಹನ ರೈ  ಗುರುದೇವ ಎಜುಕೇಶನ್ ಫೌಂಡೇಶನ್ (ರಿ) ನೋಂದಾಯಿತ ಸಂಸ್ಥೆಯ ಅಧ್ಯಕ್ಷರಾಗಿದ್ದು, ಮಂಗಳೂರು ನಗರದ ಬೋಳೂರು ಗ್ರಾಮದ ಮಠದಕಣಿ 3ನೇ ಕ್ರಾಸ್ ನಲ್ಲಿರುವ ಡೋರ್ ನಂಬ್ರ:. 7-4-461/7ಗ್ಲೋಬಲ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಕಟ್ಟಡವನ್ನು ದಿನಾಂಕ:03-09-2021 ರಿಂದ ಮಹೇಶ್ ಫೌಂಡೇಶನ್ ರವರಿಗೆ ಕರಾರಿನಂತೆ ಬಾಡಿಗೆಗೆ ನೀಡಿದಂತೆ 1ನೇ ಆರೋಪಿ ಮಹೇಶ್ ಫೌಂಡೇಶನ್ ಎಂಬ ಟ್ರಸ್ಟ್ನ ವ್ಯವಸ್ಥಾಪಕ ಟ್ರಸ್ಟಿ ಮತ್ತು ಆರೋಪಿ 2 ರಿಂದ 5 SHRI NARAYANA B, SACHIDANANDA KUMAR , MRS RENU PARAG OLA, MRS PRAJNA VIRAJ SHETTY, ರವರು ಮಹೇಶ್ ಫೌಂಡೇಶನ್ನ ಟ್ರಸ್ಟಿಗಳು ಹಾಗೂ. ಆರೋಪಿ ನಂ.6 PRASHANTH ಮಹೇಶ್ ಫೌಂಡೇಶನ್ನ ವ್ಯವಸ್ಥಾಪಕರು ಕಟ್ಟಡದಲ್ಲಿ ಮಹೇಶ್ ಫೌಂಡೇಶನ್ ಟ್ರಸ್ಟ್ ಸಂಸ್ಥೆಯು ಕೂಡ ವಿದ್ಯಾಸಂಸ್ಥೆಯನ್ನು ನಡೆಸುತ್ತಿದ್ದರು. ಫಿರ್ಯಾದಿ ಸದ್ರಿ ಕಟ್ಟಡದಲ್ಲಿ ಶೋನಾ ಪಿಯು ಕಾಲೇಜು ಎಂಬ ಹೆಸರಿನ ಹೊಸ ಪಿಯು ಕಾಲೇಜು ಪ್ರಾರಂಭಿಸಲು, ಸಂಬಂದಪಟ್ಟ ಇಲಾಖೆಯಿಂದ ದಿನಾಂಕ: 14-05-2022 ರಂದು ಅನುಮತಿ ಪಡೆದಿರುವ ವಿಚಾರ ತಿಳಿದ ಆರೋಪಿತರೆಲ್ಲಾ ಸೇರಿ ನಕಲಿ ಮೊಹರು ಹಾಗೂ ದಾಖಲೆಗಳನ್ನು ಸೃಷ್ಟಿಸಿ, ಪಿರ್ಯಾದಿಯ ಪೋರ್ಜರಿ ಸಹಿ ಮಾಡಿ ಶೋನಾ ಪಿಯು ಕಾಲೇಜು ಹೆಸರನ್ನು ಮಂಗಳೂರು ಮಹೇಶ್ ಪಿಯು ಕಾಲೇಜು” ಎಂದು ಬದಲಾಯಿಸಲು ನಿರ್ದೇಶಕರು, ಪದವಿ ಪೂರ್ವ ಶಿಕ್ಷಣ ಇಲಾಖೆ, ಬೆಂಗಳೂರು ಇವರಿಗೆ ಅನಧಿಕೃತವಾಗಿ ಪಿರ್ಯಾದಿ ಹೆಸರಿನಲ್ಲಿ ಅರ್ಜಿ ಸಲ್ಲಿಸಿದಂತೆ ನಕಲಿ ದಾಖಲೆಯ ಆಧಾರದಲ್ಲಿ ಫಿರ್ಯಾದಿ ಕಾಲೇಜಿನ ಹೆಸರನ್ನು “ಶೋನಾ ಪಿಯು ಕಾಲೇಜು” ನಿಂದ “ಮಂಗಳೂರು ಮಹೇಶ್ ಪಿಯು ಕಾಲೇಜು” ಎಂದು ಬದಲಾಯಿಸಿದ ಆಧಾರದಲ್ಲಿ ಆರೋಪಿತರು ನೂರಾರು ವಿದ್ಯಾರ್ಥಿಗಳನ್ನು ಅನಧಿಕೃತವಾಗಿ ಕಾಲೇಜಿಗೆ ಸೇರ್ಪಡೆಗೊಳಿಸಿ ಸದ್ರಿ ವಿದ್ಯಾರ್ಥಿಗಳಿಂದ ಲಕ್ಷಾಂತರ ಶುಲ್ಕ ಪಡೆದುಕೊಂಡು ಫಿರ್ಯಾದಿ ಸಂಸ್ಥೆಯ ಪ್ರತಿಷ್ಟೆ ಹಾಗೂ ಹೆಸರು ಹಾಳು ಗೆಡವಿ ರೂ. 1 ಕೋಟಿಗೂ ಹೆಚ್ಚು ಮೊತ್ತದ ಬಾಡಿಗೆ ಹಣ ಬಾಕಿ ಇರಿಸಿ ಫಿರ್ಯಾದಿ ಸಂಸ್ಥೆಯ ಫಿಠೋಪಕರಣಗಳು ನಾಶ ಮಾಡಿ ಫಿರ್ಯಾದಿಗೆ ಅಪರಾಧಿಕ ನಂಬಿಕೆ ದ್ರೋಹ ಎಸಗಿ ವಂಚಿಸಿರುವುದಾಗಿದೆ ಎಂಬಿತ್ಯಾದಿ.

Panambur PS    

ಪಿರ್ಯಾದಿ IBRAHIM SHAMSHEER ಬೆಂಗ್ರೆಯಲ್ಲಿ ಮೀನುಗಾರಿಕಾ ದೋಣೆಯನ್ನು ಹೊಂದಿದ್ದು ದಿನಾಂಕ 27-04-2023 ರಂದು ಸಂಜೆ ಸುಮಾರು 6-15 ಗಂಟೆಗೆ ಕೆಲಸ ಮುಗಿಸಿ ಮನೆಗೆ ಹೋಗಲು ತನ್ನ ಗೆಳೆಯ ಹಾರೀಸ್ ಎಂಬಾತನಿಗೆ ಸಂಬಂದಿಸಿದ ಇಂಡಿಕಾ ಕಾರಿನಲ್ಲಿ ಬಂದು ಬೆಂಗ್ರೆ ಕಸ್ಬಾದಲ್ಲಿ ಸಲಿಂ ಅಂಗಡಿಯ ಬಳಿ ರಸ್ತೆಯಲ್ಲಿ ಕಾರು ನಿಲ್ಲಿಸಿ ತನ್ನ ಮೊಬೈಲ್ ನೋಡುತ್ತಿದ್ದೆನು. ಆ  ಸಮಯ ಕಸ್ಬಾ ಬೆಂಗ್ರೆಯ ನಿವಾಸಿ ತನ್ನ ಪರಿಚಯದ ನೌಶಾದ್ ಎಂಬಾತನು ಆತನ ಕೈಯಲ್ಲಿದ್ದ ಕಬ್ಬಿಣದ ರಾಡಿನೊಂದಿಗೆ ತನ್ನ ಕಾರಿನ ಎದುರು ಬಂದು ತನ್ನನ್ನು ಗುರಾಯಿಸಿ ನೋಡುತ್ತಿದ್ದನು. ತಾನು ಆತನು ಈ ರೀತಿ ಯಾಕೆ ಗುರಾಯಿಸುತ್ತೀಯಾ ಎಂದು ವಿಚಾರಿಸುವ ಬಗ್ಗೆ ಕಾರಿನಿಂದ ಇಳಿದು ಹೊರಗೆ ಬಂದಾಗ ಆತನು ಕಾರಿನ ಬಾನೆಟಿಗೆ ಕೈಯಿಂದ ಗುದ್ದಿದನು. ತಾನು ನೌಶಾದನಲ್ಲಿ ಯಾಕೆ ತನ್ನ ಕಾರಿಗೆ ಗುದ್ದಿದ್ದಿ ಎಂದು ಕೇಳಿದಾಗ ಆತನು ತನಗೆ ಬ್ಯಾವರ್ಸಿ ಸೂಳೆಮಗ ನೀನು ಪ್ರಶ್ನೆ ಮಾಡುತ್ತೀಯಾ ಬೆಂಗ್ರೆಯಲ್ಲಿ ನಾನೇ ರಾಜ ನೀನು ನನ್ನನ್ನು ಕೇಳಲಿಕ್ಕೆ ಯಾರು, ನಾನು ಹೇಳಿದಂತೆ ನೀನು ಕೇಳಬೇಕು ಎಂದು ಬ್ಯಾರಿ ಭಾಷೆಯಲ್ಲಿ ಬೈಯ್ದ ಆತನ ಕೈಯಲ್ಲಿದ್ದ ಕಬ್ಬಿಣದ ರಾಡಿನಿಂದ ಕಾರಿನ ಹಿಂಭಾಗದ ಗಾಜಿಗೆ ಹೊಡೆದನು. ಆಗ ಅಲ್ಲೇ ಇದ್ದ ಪಿರ್ಯಾದಿ ಅದನ್ನು ತಡೆಯಲು ಹೋದಾಗ ನನ್ನನ್ನು ತಡೆಯುತ್ತೀಯಾ ನಿನ್ನನ್ನು ಮುಗಿಸದೇ ಬಿಡುವುದಿಲ್ಲ ಎಂದು ನನ್ನ ತಲೆಗೆ ಕಬ್ಬಿಣದ ರಾಡಿನಿಂದ ಹೊಡೆದು ಕೊಲೆ ಮಾಡಲು ಯತ್ನಿಸಿದ್ದು, ನಾನು ಆತನ ಹಲ್ಲೆಯಿಂದ ತಪ್ಪಿಸಿದೆನು. ಆಗ ಆತನ ಏಟು ನನ್ನ ಕಾರಿನ ಹಿಂದಿನ ಗಾಜಿಗೆ ಬಿದ್ದಿದ್ದರಿಂದ ಕಾರಿನ ಹಿಂದಿನ  ಗಾಜುಗಳು ಹುಡಿಯಾಗಿರುತ್ತದೆ. ನಂತರ ಪಿರ್ಯಾದಿ ತಪ್ಪಿಸಿ ಕಾರಿನ ಎಡಭಾಗಕ್ಕೆ ಬಂದಾಗ ಮತ್ತೆ ತನಗೆ ಕಬ್ಬಿಣದ ರಾಡ್ ನಿಂದ ಹಲ್ಲೆ ನಡೆಸಿದ್ದು, ತಾನು ಆತನ ಹಲ್ಲೆಯಿಂದ ತಪ್ಪಿಸಲು ತನ್ನ ಕೈಯನ್ನು ಅಡ್ಡ ಇಟ್ಟೆನು. ಆತನ ಹಲ್ಲೆಯಿಂದಾಗಿ ತನ್ನ ಬಲ ಕೈಗೆ ಮತ್ತು ತನ್ನ ತಲೆಗೆ ಗುದ್ದಿದ ಗಾಯ ಆಗಿದ್ದು, ನಂತರ ಆತನು ತನ್ನ ಕಾರಿನ ಎಡ ಬದಿಯ ಸೈಡ್ ಮಿರರನ್ನು ಸಹಾ ಕಬ್ಬಿಣದ ರಾಡ್ ನಿಂದ ಹಾನಿಗೊಳಿಸಿರುತ್ತಾನೆ.  ಈ ಸಮಯ ಗಲಾಟೆಯನ್ನು ಬಿಡಿಸಲು ಹಲವು ಸಾರ್ವಜನಿಕರು ಸಹಾಯಕ್ಕೆ ಬಂದರು. ಅವರಲ್ಲಿ ತನ್ನ ಪರಿಚಯದ ಇಮ್ರಾನ್ ಮತ್ತು ಹಾರೀಸ್ ಮತ್ತು ಇತರರು ಇದ್ದರು ಅ ಸಮಯ ಹೊಯ್ಸಳ ವಾಹನದ ಪೊಲೀಸರು ಸ್ಥಳಕ್ಕೆ ಬಂದಿದ್ದು, ತನಗೆ ಠಾಣೆಗೆ ಹೋಗಿ ದೂರು ನೀಡುವಂತೆ ತಿಳಿಸಿ ನೌಶಾದ್ ನನ್ನು ಹೊಯ್ಸಳ ವಾಹನದಲ್ಲಿ ಕರೆದುಕೊಂಡು ಹೋಗಿರುತ್ತಾರೆ. ನೌಶಾದನು ಬೆಂಗ್ರೆಯಲ್ಲಿ ಆತನೇ ರಾಜನಂತೆ ವರ್ತಿಸುತ್ತಿದ್ದು, ನಾವು ಆತನು ಹೇಳಿದಂತೆ ಕೇಳಬೇಕು ಎಂಬ ಉದ್ದೇಶದಿಂದ  ತನಗೆ ಅವಾಚ್ಯ ಶಬ್ದಗಳಿಂದ ಬೈಯ್ದು, ಕಬ್ಬಿಣದ ರಾಡ್ ನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಕೊಲೆ ಮಾಡಲು ಪ್ರಯತ್ನಿಸಿ ತನ್ನ ಗೆಳೆಯನಿಗೆ ಸಂಬಂಧಿಸಿದ ಕಾರನ್ನು ಹಾನಿಗೊಳಿಸಿ ಸುಮಾರು ರೂ. 10,000/- ನಷ್ಟ ಉಂಟುಮಾಡಿರುತ್ತಾನೆ. ಆದುದರಿಂದ ಸದ್ರಿ ನೌಶಾದ್ ಎಂಬಾತನ ವಿರುದ್ಧ ಸೂಕ್ತ ಕಾನೂನುಕ್ರಮ ಜರುಗಿಸಬೇಕಾಗಿ ಎಂಬಿತ್ಯಾದಿ

 

 

ಇತ್ತೀಚಿನ ನವೀಕರಣ​ : 21-08-2023 12:43 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080