ಅಭಿಪ್ರಾಯ / ಸಲಹೆಗಳು

Crime report in Panambur PS       

ಪಿರ್ಯಾದಿ Nijamuddin Musthappa ದಾರರು ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದು ದಿನಾಂಕ 27/06/2023 ರಂದು ಮಂಗಳೂರು ನಗರದ ಕಸಬಾ ಬೆಂಗ್ರೆಯಲ್ಲಿರುವ ಮೊಯುದ್ದೀನ್ ಜುಮ್ಮಾ ಮಸೀದಿಯ ಕಛೇರಿಯಿಂದ ಹೆಂಡತಿಯ ವಿಚಾರದಲ್ಲಿ ಅವಳ ತಾಯಿ ಮಸೀದಿಯಲ್ಲಿ ನೀಡಿದ ದೂರು ವಿಚಾರಣೆ ಮುಗಿಸಿ ಮಸೀದಿಯಿಂದ ರಾತ್ತಿ ಸಮಯ ಸುಮಾರು 07:00 ಗಂಟೆಗೆ ಪಿರ್ಯಾದಿ, ಸಿಯಾಮ್, ಮತ್ತು ಸಲ್ಮಾನ್ ಪಾರೀಸ್ ಹೊರಗಡೆ ಬಂದಾಗ ಆರೋಪಿತರುಗಳಾದ ಸಾಜೀದ್, ಸರ್ಪಾರಾಜ್, ಅಪ್ಪು ಮತ್ತು ತನ್ವೀರ್ ಎಂಬುವವರು ಪಿರ್ಯಾದಿ ಮತ್ತು ಅವರ ಜೊತೆಯಲ್ಲಿದ್ದವರನ್ನು ಆರೋಪಿತರುಗಳು ಅಕ್ರಮ ಕೂಟ ಸೇರಿಕೊಂಡು ಪಿರ್ಯಾದಿಯನ್ನು ಕೊಲೆ ಮಾಡುವ ಉದ್ದೇಶದಿಂದಲೇ ತಡೆದು “ಬೇವರ್ಸಿ, ರಂಡೆ ಮಗ” ಎಂಬಿತ್ಯಾದಿಯಾಗಿ ಅವಾಚ್ಯ ಶಬ್ದಗಳಿಂದ ಬೈದು ಸಾಜೀದನು ತನ್ನ ಕೈಯಲ್ಲಿದ್ದ ಚೂರಿಯಿಂದ ಪಿರ್ಯಾದಿಯ ಬಲತೊಡೆಗೆ ಹಲ್ಲೆ ನಡೆಸಿದ್ದು, ಅಪ್ಪು ಎಂಬಾತನು ಆತನ ಕೈಯಲ್ಲಿದ್ದ ಸ್ರ್ಕೂಡ್ರೈವರ್ ನಿಂದ ಪಿರ್ಯಾದಿಯ ಕುತ್ತಿಗೆಗೆ, ಬಲ ಕಣ್ಣಿನ ಹುಬ್ಬು ಮತ್ತು ತಲೆಗೆ ಚುಚ್ಚಿದ್ದು, ಇದೇ ಸಮಯ ಸರ್ಪಾರಾಜ್ ಕೈಗಳಿಂದ ಪಿರ್ಯಾದಿಗೆ ಹಲ್ಲೆ ನಡೆಸಿದ್ದು ಆರೋಪಿತರುಗಳು ಹಲ್ಲೆ ಮಾಡುವುದನ್ನು  ತಡೆಯಲು ಬಂದ ಸಿಯಾಮ್ ಮತ್ತು ಸಲ್ಮಾನ್ ಪಾರೀಸ್ ರವರಿಗೂ ಆರೋಪಿತರುಗಳು ಕೈಗಳಿಂದ ಹಲ್ಲೆ ನಡೆಸಿದ್ದು, ಪಿರ್ಯಾದಿಯ ಗೆಳೆಯ ಮಸೂದ್ ಈ ಘಟನೆಯನ್ನು ಕಣ್ಣಾರೆ ಕಂಡಿದ್ದು ಗಾಯಗೊಂಡ ಮೂರು ಜನರನ್ನು ಕೂಡಲೇ ವೆನ್ಲಾಕ್ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆ. ಆರೋಪಿತರುಗಳು ಪಿರ್ಯಾದಿಯೊಂದಿರುವ ಆಸ್ತಿಯ ವಿಚಾರದಲ್ಲಿ ಗಲಾಟೆ ಮಾಡಿ ಕೊಲ್ಲುವ ಉದ್ದೇಶದಿಂದ ಹಲ್ಲೆಯನ್ನು ಮಾಡಿದ್ದಲ್ಲದೆ, ಅಲ್ಲೇ ಇದ್ದ ಶ್ರೀಮತಿ. ನಸ್ರಿನಾಳು ಸದ್ರಿ ಆರೋಪಿತರುಗಳಿಗೆ ಈ ಘಟನೆಗೆ ಕುಮ್ಮುಕ್ಕು ನೀಡಿರುತ್ತಾಳೆ ಎಂಬಿತ್ಯಾದಿ ಪಿರ್ಯಾದಿಯಾಗಿದೆ.

 

2) ಪಿರ್ಯಾದಿ Nasrina ದಾರರು ದಿನಾಂಕ: 27-06-2023 ರಂದು ಸಮಯ ಸಂಜೆ 5-00 ಗಂಟೆಗೆ ಮಸೀದಿ ಜಮಾತ್ ಕಡೆಯವರು ಪಿರ್ಯಾದಿದಾರರು ಮತ್ತು ಅವರ ಮನೆಯವರನ್ನು  ಹಾಗೂ ಪಿರ್ಯಾದಿದಾರರ ಮೊದಲ ಗಂಡ ಆರೋಪಿ ನಿಝಾಮ್ ಮತ್ತು ಆತನ ಮನೆಯವರನ್ನು ಮೊದಲನೇ ವಿವಾಹದ ಸಮಯ ಆರೋಪಿ ನಿಝಾಮ್ ಗೆ ನೀಡಿದ್ದ ಚಿನ್ನಾಭರಣ ಮತ್ತು ಮನೆಯವರ ಹಣ ಹಾಗೂ ಪಿರ್ಯಾದಿದಾರರ ಚಿನ್ನಾಭರಣ ಮಾರಟ ಮಾಡಿ ಖರೀದಿಸಿದ್ದ ಮನೆಯ ವಿಚಾರ ಕುರಿತಂತೆ ಮಾತುಕತೆಗೆ ಕರೆದಿದ್ದು ಮಾತುಕತೆಯಲ್ಲಿ ಒಮ್ಮತ ಆಗದೇ ಎರೆಡೂ ಕಡೆಯವರನ್ನು ಜಮಾತ್ ನವರು ವಾಪಸ್ಸು ಕಳುಹಿಸಿರುತ್ತಾರೆ. ಆದರಂತೆ ಪಿರ್ಯಾದಿದಾರರು ಮತ್ತು ಇತರರು ಮಸೀದಿಯಿಂದ ಹೊರಗೆ ಬಂದಿದ್ದಾಗ ಸಮಯ ಸಂಜೆ ಸುಮಾರು 7-00 ಗಂಟೆಗೆ ಆರೋಪಿಗಳು ಪಿರ್ಯಾದಿದಾರರಿಗೆ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಮಾಡಿ ಆರೋಪಿಗಳ ಪೈಕಿ ನಿಝಾಮ್ ಮತ್ತು ಸಿಯಾಮ್ ರವರು ಪಿರ್ಯಾದಿದಾರರನ್ನು ಎಳೆದು ದೂಡಿಹಾಕಿ ಕೈಗಳಿಂದ ಹೊಟ್ಟೆಗೆ ಗುದ್ದಿ ಹೊಡೆದಿರುತ್ತಾರೆ ಆರೋಪಿತರ ಪೈಕಿ ಪುತ್ತುಮೊಳ್ ಪಿರ್ಯಾದಿದಾರರ ಬುರ್ಕವನ್ನು ಎಳೆದು ಅವಾಚ್ಯವಾಗಿ ನಿಂದಿಸಿ ಆರೋಪಿಗಳೆಲ್ಲರು ಅಕ್ರಮ ಕೂಟ ಸೇರಿ ಹಲ್ಲೆ, ದೊಂಬಿ ಮಾಡಿ, ಮಾನಭಂಗ ಮಾಡಿರುತ್ತಾರೆ ಎಂಬಿತ್ಯಾದಿ. ಪಿರ್ಯಾದಿದಾರರ ಮನೆಯವರಿಂದ ಆರೋಪಿ ನಿಝಾಮ್ ಪಡೆದುಕೊಂಡಿದ ಸಾಲ ಚಿನ್ನಾಭರಣ ಹಾಗೂ ಮನೆಯನ್ನು ಪಿರ್ಯಾದಿದಾರರ ತಂಗಿಯ ಹೆಸರಿಗೆ ಮಾಡಿಕೊಡುವಂತೆ ಪಿರ್ಯಾದಿದಾರರು ಹಾಗೂ ಮನೆಯವರು ಕೇಳಿರುವುದಕ್ಕೆ ಮತ್ತು ಜಮಾತ್ ಗೆ ದೂರು ಕೊಟ್ಟಿದಕ್ಕೆ ಕೋಪದಿಂದ ಈ ಘಟನೆ ನಡೆಸಿರುತ್ತಾರೆ ಎಂಬಿತ್ಯಾದಿ.

 

CEN Crime PS

ಪಿರ್ಯಾದಿದಾರರು ದಿನಾಂಕ 18-03-2023 ರಂದು 02-30 ಗಂಟೆಗೆ ಪಿರ್ಯಾದಿದಾರರ ಇಮೇಲ್ ಗೆ hr@teams-subaru.com ನಿಂದ RECRUTMENT ABROD JOB ಇಂಟ್ರವೀವ್ ಬಂದಿದ್ದು ನಂತರ ಪಿರ್ಯಾದಿದಾರರಿಗೆ   TELEPHONE SKYPE   ಯವರು ಆಫರ್ ಲೆಟರ್ ಅನ್ನು ನೀಡಿ ಮತ್ತು ಠೇವಣಿ ಹಣವನ್ನು ಕೇಳಿ IPA, VISA, PROFILE CHARGES ಗೆ ಪಿರ್ಯಾದಿದಾರರು SBI ACCOUNT ನೇದರಿಂದ ಸದ್ರಿಯವರ UPI ID:financialmanager07@ybl amount  32780/-  and UPI ID:mohd.2963@paytm ಗೆ 46980/- ಹಾಗೂ GLOBAL TECH CONSULTANTS KOTAK MAHINDRA BANK ACCOUNT NO.9147356209 IFSC KKBK0005032 ನೇದಕ್ಕೆ 33000/- ಹಣವನ್ನು  ಪಿರ್ಯಾದಿದಾರರ ಖಾತೆಯಿಂದ  ಒಟ್ಟು 1,12,760/- ಹಣವನ್ನು ಪಾವತಿಸಿದ್ದು  ಆ ಸಮಯ ಪಿರ್ಯಾದಿದಾರರಿಗೆ ತಾನು ಮೋಸ ಹೋಗಿರುವುದು ತಿಳಿದು ಬಂದಿರುವುದಾಗಿಯೂ ಈ ಬಗ್ಗೆ ಅಪರಿಚಿತ ವ್ಯಕ್ತಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ವಿನಂತಿ ಎಂಬಿತ್ಯಾದಿ. 

 

2) ದಿನಾಂಕ 26-06-2023ರಂದು ಬೆಳಿಗ್ಗೆ 09:00 ಗಂಟೆಗೆ ಯಾರೋ ಅಪರಿಚಿತ ವ್ಯಕ್ತಿ ವಾಟ್ಸಪ್ ನಂಬ್ರ+1(782)605-1473ನೇದರಿಂದ ಪಿರ್ಯಾದಿದಾರರ ದೂರವಾಣಿ ಸಂಖ್ಯೆ- ನೇದಕ್ಕೆ ವಾಟ್ಸಪ್ ಸಂದೇಶ ಕಳುಹಿಸಿ ಸದ್ರಿ ಸಂದೇಶದಲ್ಲಿ Dentsu India Advertising pvt Ltd.ಯಿಂದ ಎಂದು ಪರಿಚಯಿಸಿಕೊಂಡು ಆನ್ ಲೈನ್ ಗೂಗಲ್ ರಿವ್ಯು ಟಾಸ್ಕ್  ಕೆಲಸ  ಮಾಡಿದರೆ ಕಮಿಷನ್ ನೀಡುವುದಾಗಿ ತಿಳಿಸಿ ಆನ್ ಲೈನ್ ಗೂಗಲ್ ರಿವ್ಯು ಟಾಸ್ಕ್ ಗಳನ್ನು ಟೆಲೆಗ್ರಾಂ ಲಿಂಕ್ ಮೂಲಕ ಕಳುಹಿಸಿರುತ್ತಾರೆ.ನಂತರ ಪಿರ್ಯಾದಿದಾರರು ಸದ್ರಿ ಲಿಂಕ್ ಮುಖಾಂತರ ಟೆಲೆಗ್ರಾಂ ಗ್ರೂಪ್ ಜಾಯಿನ್ ಆಗಿ. ಪಿರ್ಯಾದಿದಾರರು ಸದ್ರಿ ಎರಡು ಗೂಗಲ್ ರಿವ್ಯು ಟಾಸ್ಕ್ ಗಳನ್ನು ಪೂರ್ಣಗೊಳಿಸಿರುತ್ತಾರೆ, ಒಟ್ಟು 210 ರೂ.ಗಳನ್ನು ಪಿರ್ಯಾದಿದಾರರ ಎಕ್ಸಿಸ್ ಬ್ಯಾಂಕ್ ಖಾತೆಗೆ ಪಾವತಿಸಿರುತ್ತಾರೆ. ನಂತರ ಪಿರ್ಯಾದಿದಾರರಿಗೆ ಬೇರೆ ಬೇರೆ ರೀತಿಯ ಗೂಗಲ್ ರಿವ್ಯು ಟಾಸ್ಕ್ ಗಳನ್ನು ಕಳುಹಿಸಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಕಮಿಷನ್ ನೀಡುವುದಾಗಿ ತಿಳಿಸಿರುತ್ತಾರೆ.ಅದರಂತೆ ಪಿರ್ಯಾದಿದಾರರು ನಿಜವೆಂದು ನಂಬಿಕೊಂಡು ದಿನಾಂಕ: 26/06/2023ರಂದು ಬೆಳಿಗ್ಗೆ 09:00 ಗಂಟೆಯಿಂದ ದಿನಾಂಕ: 26/06/2023 20:00 ಗಂಟೆಯ ಮಧ್ಯಾವಧಿಯಲ್ಲಿ ಪಿರ್ಯಾದಿದಾರರು ತಮ್ಮ ಎಕ್ಸಿಸ್ ಬ್ಯಾಂಕ್ ಖಾತೆ ಸಂಖ್ಯೆ: ನೇದಿಂದ 50,000/- ರೂ,ಗಳನ್ನು ಹಾಗೂ ಐಸಿಐಸಿಐ ಬ್ಯಾಂಕ್ ಖಾತೆ ಸಂಖ್ಯೆ. ನೇದಿಂದ 3,58,000/- ರೂ.ಗಳನ್ನು.ಅಪರಿಚಿತ ವ್ಯಕ್ತಿ ಕಳುಹಿಸಿಕೊಟ್ಟ ಐಸಿಐಸಿಐ ಬ್ಯಾಂಕ್ ಖಾತೆ ಸಂಖ್ಯೆ 106105020836 IFSC: ICIC00010ನೇದಕ್ಕೆ ಹಂತ ಹಂತವಾಗಿ ಒಟ್ಟು 4,08,000/- ರೂ.ಗಳನ್ನು ಪಾವತಿಸಿರುತ್ತಾರೆ.ಈ ರೀತಿ ಪಿರ್ಯಾದಿದಾರರಿಂದ ಇನ್ನೂ ಹೆಚ್ಚಿನ ಹಣ ಪಾವತಿಸುವಂತೆ ಹೇಳಿದಾಗ ಪಿರ್ಯಾದಿದಾರರು ಹಣ ಪಾವತಿಸಲು ನಿರಾಕರಿಸಿರುತ್ತಾರೆ, ಯಾರೋ ಅಪರಿಚಿತ ವ್ಯಕ್ತಿಗಳು ಪಿರ್ಯಾದಿದಾರರಿಗೆ ಆನ್ ಲೈನ್ ಗೂಗಲ್ ರಿವ್ಯು ಟಾಸ್ಕ್ ನ ಹೆಸರಿನಲ್ಲಿ ಹಂತ ಹಂತವಾಗಿ ಒಟ್ಟು 4,08,000/- ರೂಗಳನ್ನು ಮೋಸದಿದಂದ ಪಾವತಿಸಿಕೊಂಡು ಆನ್ ಲೈನ್ ವಂಚನೆ ಮಾಡಿರುವುದಾಗಿದೆ ಎಂಬಿತ್ಯಾದಿ.

 

 

ಇತ್ತೀಚಿನ ನವೀಕರಣ​ : 21-08-2023 02:01 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080