ಅಭಿಪ್ರಾಯ / ಸಲಹೆಗಳು

 

 Crime Report in Mangalore West Traffic PS                               

ದಿನಾಂಕ;28-07-2023 ರಂದು ಪಿರ್ಯಾದಿ VENKATESH ದಾರರು ಕೆನರಾ ಬ್ಯಾಂಕ್ ನ ಬಾಬ್ತು KA-20-MC-9800 ನೇ ನಂಬ್ರದ ಕಾರಿನಲ್ಲಿ ಚಾಲಕನಾಗಿದ್ದು ಬ್ಯಾಂಕ್ ನ ಕೆಲಸದ ನಿಮತ್ತ ಗಾಂಧಿನಗರದಿಂದ ಬಲ್ಮಠ ಕಡೆಗೆ ಹೋಗುವರೇ ಪಿ.ವಿ.ಎಸ್ ಜಂಕ್ಷನ್ ಬಳಿ ತಲುಪಿದಾಗ ಸಿಗ್ನಲ್ ಬಿದ್ದ ಕಾರಣ ಕಾರನ್ನು ನಿಲ್ಲಿಸಿದ ಸಮಯ ಸುಮಾರು 9-35 ಗಂಟೆಗೆ ಬೆಸೆಂಟ್ ಕಡೆಯಿಂದ KA-19-AD-1237ನೇ ಬಸ್ಸಿನ ಚಾಲಕ ಮೊಹಮ್ಮದ್ ತೌಸೀಪ್ ರವರು ನಿರ್ಲಕ್ಷತನದಿಂದ ಚಲಾಯಸಿಕೊಂಡು ಬಂದು ಪಿರ್ಯಾದಿದಾರರ ಹಿಂದಿನಿಂದ ನಿಂತಿದ್ದ  KA-19-AB-0025ನೇ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಆ ಕಾರು ಪಿರ್ಯಾದಿದಾರರ ಕಾರಿನ ಹಿಂಬದಿಗೆ ಡಿಕ್ಕಿಯಾಗಿ ಕಾರಿನ ಹಿಂಬದಿ ಜಖಂಗೊಂಡಿರುತ್ತದೆ. ಪಿರ್ಯಾದಿದಾರರ ಹಿಂದಿನಿಂದ KA-19-AB-0025ನೇ ಕಾರಿನ ಮುಂದುಗಡೆ ಹಾಗೂ ಹಿಂದುಗಡೆ ಜಖಂಗೊಂಡಿರುತ್ತದೆ ಎಂಬಿತ್ಯಾದಿ

Mangalore East Traffic PS                                              

ಪಿರ್ಯಾದಿ ದಾರರಾದ ವಿಠಲ ಎಂಬುವರು ದಿನಾಂಕ 26-07-2023 ರಂದು ಅವರ ಅಕ್ಕನ ಮಗನಾದ ಹರೀಶ್ ಎಂಬುವರೊಂದಿಗೆ ಕೆಲಸದ ನಿಮಿತ್ತ ಶಿವಭಾಗ್ ಎಂಬಲ್ಲಿಗೆ ಹೋಗುವರೇ ಸ್ಟೇಟ್ ಬ್ಯಾಂಕ್ ಕಡೆಗೆ ಹೋಗುವಾ KA-51-AD-8668 ನೊಂದಣಿ ನಂಬ್ರದ ನಿರ್ಮಲ ಎಂಬ ಹೆಸರಿನ ಖಾಸಗಿ ಬಸ್ಸಿನಲ್ಲಿ ಕುಲಶೇಖರ ಬಸ್ ನಿಲ್ದಾಣದಿಂದ ಪ್ರಯಾಣಿಸಿಕೊಂಡು ಹೋಗುತ್ತಾ ಬೆಳಿಗ್ಗೆ ಸಮಯ ಸುಮಾರು 8.30 ಗಂಟೆಗೆ  ಬಸ್ಸು ನಂತೂರು ಕಡೆಯಿಂದ ಶಿವಭಾಗ್ ಕಡೆಗೆ ಹೊರಟಿದ್ದಾಗ ಪಿರ್ಯಾದಿದಾರರು ಹಾಗೂ ಅವರ ಅಕ್ಕನ ಮಗ ಹರೀಶ್ ರವರು ತಾವು ಇಳಿದುಕೊಳ್ಳುವ ನಿಲ್ದಾಣ ಸಮೀಪಿಸುತ್ತಿದ್ದ ಕಾರಣ ಕುಳಿತಿದ್ದ ಸೀಟಿನಿಂದ ಎದ್ದು, ಬಸ್ಸಿನ ಹಿಂಭಾಗಿಲ ಬಳಿಗೆ ಬರುತ್ತಿದ್ದಾಗ  ಸದ್ರಿ ಬಸ್ಸಿನ ಚಾಲಕನು ಜಿಮ್ಮಿಸ್ ಸುಪರ್ ಮಾರ್ಟ್ ಎದುರು ತೆರೆದ ಡಿವೈಡರ್ ಬಳಿ ಇರುವ ಹಂಪ್ಸ್ ನಲ್ಲಿ ಬಸ್ಸನ್ನು ನಿಧಾಸಗೊಳಿಸದೇ ಅಜಾಗರೂಕತೆಯಿಂದ ಚಲಾಯಿಸಿದ್ದರಿಂದ ಬಸ್ಸಿನ ಬಾಗಿಲ ಬಳಿಗೆ ಬರುತ್ತಿದ್ದ ಹರೀಶ್ ರವರು ಮೆಟ್ಟಿಲುಗಳ ಮೂಲಕ ರಸ್ತೆಗೆ ಬಿದ್ದು, ತಲೆಗೆ ರಕ್ತಗಾಯವಾಗಿದ್ದು, ವೆನ್ಲಾಕ್ ಆಸ್ಪತ್ರೆಯಲ್ಲಿ ಹೊರ ರೋಗಿಯಾಗಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ. ಈ ಬಗ್ಗೆ ಬಸ್ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿಕೆ ಎಂಬಿತ್ಯಾದಿ.

 

Traffic North Police Station          

ದಿನಾಂಕ 27-07-2023 ರಂದು ಪಿರ್ಯಾದಿ Sumana Devadiga ದಾರರ ಗಂಡನಾದ ಸುರೇಶ ದೇವಾಡಿಗ (43) ರವರು ಎಂದಿನಂತೆ ಕೆಲಸ ಮುಗಿಸಿಕೊಂಡು ಅವರ ಬಾಬ್ತು KA-19-W-7139 ನಂಬ್ರದ ಮೋಟಾರ್ ಸೈಕಲ್ ನಲ್ಲಿ ಕಿನ್ನಿಗೊಳಿಯಿಂದ ಕವತ್ತಾರುನಲ್ಲಿರುವ ಮನೆ ಕಡೆಗೆ ಬರುತ್ತಿರುವಾಗ ಜೂರಾಗಿ ಮಳೆ ಬರುತ್ತಿದ್ದ ಕಾರಣ ಸಮಯ ಸುಮಾರು ರಾತ್ರಿ 11-00 ಗಂಟೆಗೆ ಕವತ್ತಾರು ಕ್ರಾಸ್ ನಲ್ಲಿ ಒಮ್ಮಲೇ ಮೋಟಾರ್ ಸೈಕಲ್ ಸ್ಕೀಡ್ ಆಗಿ ರಸ್ತೆಗೆ ಬಿದ್ದ ಪರಿಣಾಮ ಅವರ ಎರಡು ಕಾಲು ಬೆರಳುಗಳಿಗೆ ಮತ್ತು ಎರಡು ಕೈ ಬೆರಳುಗಳಿಗೆ ರಕ್ತ ಗಾಯವಾಗಿದ್ದು, ಮುಖಕ್ಕೆ ಮತ್ತು ಹಣೆಗೆ ಗುದ್ದಿದ ರಕ್ತಗಾಯವಾಗಿರುತ್ತದೆ. ಅಲ್ಲಿದ್ದ ಪರಿಚಯಸ್ಥರೊಬ್ಬರು ಚಿಕಿತ್ಸೆಯ ಬಗ್ಗೆ ಕಾನ್ಸೇಟ್ ಆಸ್ಪತ್ರೆಗೆ ದಾಖಲಿಸಿದ್ದು, ಈ ದಿನ ದಿನಾಂಕ 28-07-2023 ರಂದು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಕುಂಟಿಕಾನ್ ಎ.ಜೆ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಿಸಿರುತ್ತಾರೆ ಎಂಬಿತ್ಯಾದಿ.

Ullal PS         

ಫಿರ್ಯಾದಿದಾರರಾದ ತಮ್ಮ ರವರಿಗೆ ದಿನಾಂಕ.15-6-2023 ರಂದು +17697596699 ನೇ ನಂಬರ್ನಿಂದ ವಾಟ್ಸಾಪ್ ಮುಖೇನ ಅಮೆಜಾನ್ ಕಂಪೆನಿಯಲ್ಲಿ ಬಿಸಿನೆಸ್ ಒಪ್ಪಂದಕ್ಕಾಗಿ  ಬಂದಿರುವ ಮೆಸೇಜ್ನಲ್ಲಿ  ಶೇಕಡಾವಾರು ಲಾಭ ನೀಡುವ ಬಗ್ಗೆ ಪ್ರತಿಪಾದಿಸಿ ಅಮೆಜಾನ್ನಲ್ಲಿ ಸಾಮಾಗ್ರಿಗಳನ್ನು ಖರೀದಿಸುವುದಾಗಿಯೂ, ಆ ಖರೀದಿಯ ಮೂರು ಸ್ಕ್ರೀನ್ಶಾಟ್ ಕಳಿಸಿದರೆ ಒಂದಕ್ಕೆ 150 ರಂತೆ ಕೊಡುವುದಾಗಿ ತಿಳಿಸಿ, ಅಬ್ದುಲ್ ರಹಿಮಾನ್ ರವರ ಖಾತೆಗೆ ರೂ.450/ ಜಮಾ ಮಾಡಿದಾಗ, ಕಂಪೆನಿಯವರು ತಿಳಿಸಿದಂತೆ ಅಬ್ದುಲ್ ರಹಿಮಾನ್ ರವರು ಅವರ ಖಾತೆಗೆ ರೂ.1,000/ ಜಮಾ ಮಾಡಿದಕ್ಕೆ ರೂ.1,150/ ಜಮಾ ಮಾಡಿರುತ್ತಾರೆ.  ನಂತರ ಬ್ಯುಸಿನೆಸ್ ಕಂಪೆನಿಯ ಅಡ್ಮಿನ್ ಜೊತೆಗೆ ಐದು ಜನ ಶೇರುದಾರರ ಗ್ರೂಪ್ ಒಂದನ್ನು ಟೆಲಿಗ್ರಾಂನಲ್ಲಿ ರಚಿಸಿ, ಗ್ರೂಪ್ ಸದಸ್ಯರಿಗೆ ನಾಲ್ಕು ಟಾಸ್ಕನ್ನು ಕೊಡುವುದಾಗಿಯೂ, ಟಾಸ್ಕ್ನ ಕೊನೆಯಲ್ಲಿ ಬಡ್ಡಿ ಮತ್ತು ಅಸಲು ಸಮೇತ ಎಲ್ಲಾ ಹಣವನ್ನು ಹಿಂತಿರುಗಿಸುವುದಾಗಿ ಗ್ರೂಪ್ ಅಡ್ಮಿನ್ ತಿಳಿಸಿದಂತೆ ಮೊದಲ ಟಾಸ್ಕ್ ಆಗಿ 3,000/ ವನ್ನು UPI/ID banishkumar@paytm(UPI REF NO:353222001436) ಎಂಬ ಖಾತೆಗೆ, ಎರಡನೇ ಟಾಸ್ಕ್ ನಲ್ಲಿ ರೂ.60,000/- ವನ್ನು DEVBHOOMI CORPORATION ಎಂಬವರ ಖಾತೆ ನಂ.1051102100000445(IMPS REF No. 316709923575 ಎಂಬ ಹೆಸರಿನ PANJAB NATIONAL BANK ಎಂಬ ಖಾತೆಗೆ, ನಂತರದ ಟಾಸ್ಕ್ ಆಗಿ ರೂ.90,000/- ವನ್ನು CHUNA BHATTI ಎಂಬವರ ICICI Account No. 326705000703 (IMPS) REF No.353300882202) ಎಂಬ ಖಾತೆಗೆ, ಕೊನೆಯ ಟಾಸ್ಕ್ಗೆ ರೂ.2,00,000/- CHUNA BHATTI ಎಂಬವರ ICICI Account No. 326705000703 (IMPS) REF No.316710963904) ಎಂಬ ಖಾತೆಗೆ ಕಳುಹಿಸಿದ್ದು, ಆದರೆ ಹಣ ಬಾರದೇ ಇದ್ದಾಗ ಅಡ್ಮಿನ್ ರವರನ್ನು ಸಂಪರ್ಕಿಸಿದಾಗ ಟಾಸ್ಕ್ ತಪ್ಪಾಗಿರುವುದರಿಂದ ರೂ.10 ಲಕ್ಷ ಜಮಾ ಮಾಡಬೇಕೆಂದು, ಇಲ್ಲವಾದರೆ ಪುನಃ ಆರಂಭದಿಂದ ಟಾಸ್ಕ್ ಪುನರಾಂಭಿಸಬೇಕೆಂದು ತಿಳಿಸಿದಂತೆ ಮೊದಲ ಟಾಸ್ಕ್ ಆಗಿ ರೂ.50,000/- + 50,000/-+40,000/-  ಗಳನ್ನು DEVBHOOMI CORPORATION ಅವರು PANJAB NATIONAL BANK ACC No. 1051102100000445 ಕ್ಕೆ ಮತ್ತು 2ನೇ ಟಾಸ್ಕ್ ಗೆ ರೂ.70,000/- ಗಳನ್ನು DYD SERVICES PRIVATE LIMITED ಅವರ ICICI BANK ACC No.025405005026 (IMPS REF No. 316813096012 ಎಂಬ ಖಾತೆಗೆ ಜಮಾ ಮಾಡಿದ್ದು, ಈ ವಂಚನೆಯ ಗುಂಪಿನಲ್ಲಿ ಪಾಲುದಾರನಂತೆ ನಟಿಸಿ ಭಾಗಿಯಾದ ಮೂರು ಸದಸ್ಯರು ಈ ವಂಚನೆಯ ಸಂಘದ ಪೂರ್ವಯೋಚಿತ ಸದಸ್ಯರಾಗಿದ್ದು, ಈ ವ್ಯವಹಾರಕ್ಕೆ ಫಿರ್ಯಾದಿದಾರರ ಸಹೋದರ ಒಟ್ಟು ರೂ.5,63,000/- ವನ್ನು ಇವರ ಖಾತೆ ನಿಂದ ಕಳುಹಿಸಿಕೊಟ್ಟಿರುತ್ತಾರೆ. ಮೂರನೇ ಟಾಸ್ಕಿಗೆ ರೂ.30,000/- ವರ್ಗಾವಣೆ ಮಾಡಬೇಕಾಗಿರುವುದರಿಂದ ಪಿರ್ಯಾದಿ ಸಹೋದರನ ಖಾತೆಯಿಂದ ಹಣ ಕಲಿಸುವ ಮಿತಿ ಮೀರಿದ್ದರಿಂದ ಆತನ ಸ್ನೇಹಿತನ ಖಾತೆ ನಂ. ರಿಂದ ರೂ.25,000/- ವನ್ನು IMPS ಮುಖಾಂತರವೂ ರೂ,5,000/- ಗಳನ್ನು UPI ಮುಖಾಂತರವೂ UPI ID-8466047467@PAYTM(UTR No.316834406455) ಗೆ ಕಳುಹಿಸಿಕೊಟ್ಟಿರುತ್ತಾರೆ. ಅಮೆಜಾನ್ ಕಂಪೆನಿಯ ಹೆಸರಿನಲ್ಲಿ ವ್ಯವಹಾರಕ್ಕಾಗಿ ಪಿರ್ಯಾದಿ ಹಾಗೂ ಅವರ  ಸ್ನೇಹಿತ ರಿಂದ ಹಣವನ್ನು ಪಡೆದುಕೊಂಡು ಮೋಸ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ದಾಖಲಾದ ಪ್ರಕರಣದ ಸಾರಾಂಶ.

 

ಇತ್ತೀಚಿನ ನವೀಕರಣ​ : 21-08-2023 02:21 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080