ಅಭಿಪ್ರಾಯ / ಸಲಹೆಗಳು

Crime Report in Mangalore East Traffic PS                                  

ಪಿರ್ಯಾದಿದಾರರಾದ ಪ್ರೀತಮ್ ಪ್ರಸಾದ್ ರವರು ದಿನಾಂಕ; 26/08/2023 ರಂದು ಸಂಜೆ ತಮ್ಮ ಮೋಟಾರ್ ಸೈಕಲ್ ನೊಂದಣಿ ಸಂಖ್ಯೆ: KA-19-EG-8440 ನೇಯದರಲ್ಲಿ ರಕ್ಷಿತಾ ಶೆಟ್ಟಿ ಎಂಬುವರನ್ನು ಹಿಂಬದಿ ಸವಾರೆಯನ್ನಾಗಿ ಕುಳ್ಳರಿಸಿಕೊಂಡು ಮಂಗಳಾದೇವಿ ಕಡೆಯಿಂದ ಪಾಂಡೇಶ್ವರ ಮಾರ್ಗವಾಗಿ ಹಂಪನಕಟ್ಟೆ ಮಾರ್ಕೇಟ್ ಕಡೆಗೆ ಬರುತ್ತಿದ್ದಾಗ ಸಮಯ ಸುಮಾರು 6-40 ಗಂಟೆಗೆ ನೆಹರೂ ಜಂಕ್ಷನ್ನಿನ ಎಸ್.ಪಿ. ಕಛೇರಿ ಗೇಟ್ ಎದುರು ತಲುಪುತ್ತಿದ್ದಂತೆ ಸದ್ರಿ ಜಂಕ್ಷನ್ನಿಗೆ ಪೋಸ್ಟ್ ಆಫೀಸ್ ಕಡೆಯಿಂದ ಬಂದು ಸೇರುವ ಸಾರ್ವಜನಿಕ ರಸ್ತೆಯಲ್ಲಿ ಕಾರು ನೊಂದಣಿ ಸಂಖ್ಯೆ: KL-14-X-3546 ನೇಯದನ್ನು ಅದರ ಚಾಲಕ ರಿಜ್ವಾನ್ ಎಂಬಾತನು ಅಪಾಯಕಾರಿಯಾಗಿ ಚಲಾಯಿಸುತ್ತಾ ಬೈಕನ್ನು ಎಡಭಾಗದಿಂದ ಓವರ್ ಟೇಕ್ ಮಾಡುವ ಗಡಿಬಿಡಿಯಲ್ಲಿ ಅಜಾಗರೂಕತೆಯಿಂದ ಚಲಾಯಿಸಿ ಬೈಕಿಗೆ ಢಿಕ್ಕಿ ಪಡಿಸಿದ್ದು ಪಿರ್ಯಾದಿದಾರರು ಬೈಕನ್ನು ನಿಯಂತ್ರಿಸುತ್ತಾ ಮುಂದೆ ಹೋದಾಗ ಮತ್ತೋಮ್ಮ ಬೈಕಿಗೆ ಢಿಕ್ಕಿ ಪಡಿಸಿದ್ದು ಇದರಿಂದ ಬೈಕ್ ಸವಾರರು ರಸ್ತೆಗೆ ಬಿದ್ದು ಪಿರ್ಯಾದಿದಾರರಿಗೆ ಬಲ ಪಾದಕ್ಕೆ ಎಡ ಕಾಲಿನ ತೊಡೆಗೆ ಗುದ್ದಿದ ರೀತಿಯ ಗಾಯ ಹಾಗೂ ರಕ್ಷಿತಾ ರವರಿಗೆ ಕೈಕಾಲುಗಳಿಗೆ ತರಚಿದ ಮತ್ತು ಗುದ್ದಿದ ರೀತಿಯ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಪರೀಕ್ಷಿಸಿದ ವೈದ್ಯರು ರಕ್ಷೀತಾರವರ ಎಡಕೈ ಬೆರಳಿಗೆ ಮೂಳೆ ಮುರಿತವುಂಟಾಗಿರುವುದಾಗಿ ತಿಳಿಸಿರುತ್ತಾರೆ ಎಂಬಿತ್ಯಾದಿ.

Mangalore East PS                     

ಪಿರ್ಯಾದಿದಾರರಾದ  ಧನುಷ್ ಆರ್ (33) ರವರು ದಿನಾಂಕ: 10-07-2023 ರಂಧು ತನ್ನ ಬಾಬ್ತು ಕೆಎ-02-ಜೆ.ಎಲ್-9366 ನೇ ಕೆಟಿಎಮ್ ಆರ್ ಸಿ 200 ಮೋಟರ್ ಬೈಕ್ ನಲ್ಲಿ ಗೆಳೆಯರನ್ನು ಭೇಟಿಯಾಗಲು  ರಾತ್ರಿ ಸಮಯ ಸುಮಾರು 09-30 ಗಂಟೆಗೆ ಸಹ್ಯಾದ್ರಿ ಅಡ್ಯಾರ್ ಗುಲಾಬಿ ಪಿ ಜಿ ಯಿಂದ ಹೊರಟು ಕಂಕನಾಡಿ ಓಲ್ಡ್ ರೋಡ್ ನಲ್ಲಿರುವ ಕೃತಿ ರೆಸಿಡೆನ್ಸಿ ಅಪಾರ್ಟ್ ಮೆಂಟ್ ನ ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕ್ ಮಾಡಿ ತನ್ನ ಗೆಳೆಯರ ರೂಮ್ ಗೆ ಹೋಗಿದ್ದು. ವಾಪಾಸ್ಸು ಅಪಾರ್ಟ್ ಮೆಂಟ್ ನ ಪಾರ್ಕಿಂಗ್ ಜಾಗಕ್ಕೆ ರಾತ್ರಿ ಸಮಯ 11-30 ಗಂಟೆಗೆ ಬಂದು ನೋಡಿದಾಗ ಮೋಟರ್ ಬೈಕ್ ಇಲ್ಲದೇ ಇದ್ದು. ಈ ಮೋಟರ್ ಬೈಕ್ನ್ನು ರಾತ್ರಿ 10-30 ಗಂಟೆಯಿಂದ 11-30 ಗಂಟೆಯ ಮಧ್ಯೆ ಯಾರೋ ಕಳ್ಳರು ಕಳವು ಮಾಡಿ ಕೊಂಡು ಹೋಗಿದ್ದು, ಇದರ ಅಂದಾಜು ಮೌಲ್ಯ ರೂ: 100000/- ಆಗಬಹುದು. ಇದರ ಚಾಸಿಸ್ ನಂ: MD2JYC4F4GC058094 ಇಂಜಿನ್ ನಂಬರ್:  690667989, : ಕಪ್ಪು ಬಣ್ಣ, ಮಾಡೆಲ್: 2016,  ಪಿರ್ಯಾದಿದಾರರು ಕಳವಾದ ತನ್ನ ಮೋಟರ್ ಬೈಕ್ ನ್ನು ನಗರ ಎಲ್ಲಾ ಕಡೆ ಹುಡುಕಾಡಿ, ಸಿಗದ ಕಾರಣ ದೂರು ನೀಡಿರುವುದಾಗಿದೆ ಎಂಬಿತ್ಯಾದಿ.

Mangalore North PS                                  

ಪಿರ್ಯಾದಿ MOHAMMED MUDASSIR ದಾರರು ಮಂಗಳೂರು ನಗರದ ಅಜಿಜುದ್ದಿನ್ ರಸ್ತೆಯಲ್ಲಿರುವ ಜ್ಯೋತಿ ಮೋಟಾರ್ಸ್ ಸಂಸ್ಥೆಯ ಟಿ.ವಿ.ಎಸ್ ದ್ವಿ ಚಕ್ರ ಮತ್ತು ತ್ರಿ ಚಕ್ರ ವಾಹನಗಳ ಬಿಡಿ ಭಾಗಗಳ ದಾಸ್ತಾನು ಹಾಗೂ ವ್ಯಾಪಾರ ಮಳಿಗೆಯನ್ನು ಅವರ ತಂದೆಯವರೊಂದಿಗೆ ನಡೆಸಿಕೊಂಡು ಹೋಗುತ್ತಿದ್ದು ದಿನಾಂಕ 26/08/2023 ರಂದು ಎಂದಿನಂತೆ ಸಂಜೆ 06.30 ಗಂಟೆಗೆ ಮಳಿಗೆಯನ್ನು ಮುಚ್ಚಿ ಹೋಗಿರುತ್ತಾರೆ. ದಿನಾಂಕ 27/08/2023 ರಂದು ಭಾನುವಾರ ವಾದ ಕಾರಣ ದಿನಾಂಕ 28/08/2023 ರಂದು ಬೆಳಿಗ್ಗೆ 09.00 ಗಂಟೆಗೆ ಪಿರ್ಯಾದಿದಾರರು ಮಳಿಗೆಯನ್ನು ತೆರೆದು ಒಳಗೆ ಹೋಗಿ ನಗದು ಕೌಂಟರಿಗೆ ಹೋದಾಗ ಕೌಂಟರಿನ ಹಣ ಇಡುವ ಡ್ರಾವರ್ ಬೀಗ ಒಡೆದು ತೆರದ ಸ್ಥಿತಿಯಲ್ಲಿದ್ದನ್ನು ಕಂಡು ಮಳಿಗೆಯ ಮ್ಯಾನೇಜರಾದ ಬಿ.ಎಸ್ ವಿನೋದ್ ರಾವ್ ರವರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದು ನಂತರ  ಅವರು ಸ್ಥಳಕ್ಕೆ ಬಂದ ನಂತರ ಪರಿಶೀಲಿಸಿದಾಗ ನಗದು ಕೌಂಟರಿನಲ್ಲಿದ್ದ 39,370/- ರೂ ನಗದು ಹಣ ಹಾಗೂ ನಗದು ಕೌಂಟರ್ ಪಕ್ಕದಲ್ಲಿದ್ದ ಕಛೇರಿಯ ಡ್ವಾವರ್ ನಲ್ಲಿದ್ದ 04 ಮೊಬೈಲ್ ಫೊನ್ ಹಾಗೂ ಅದರ ಚಾರ್ಜರ್ ಗಳು ಅದೇ ಕಛೇರಿಯಲ್ಲಿ ಅಳವಡಿಸಿದ್ದ ಇಂಟರ್ ನೆಟ್ ಮೊಡೆಮ್ ಕಳುವಾಗಿರುತ್ತದೆ. ನಂತರ ಸಂಪೂರ್ಣ ಮಳಿಗೆಯನ್ನು ಪರಿಶೀಲಿಸಿದಾಗ ಮಳಿಗೆಯ ಎಡಭಾಗದಲ್ಲಿದ್ದ ಬಾಗಿಲಿನ ಪಕ್ಕದ್ದಲ್ಲಿ ತಗಡು ಶೀಟನ್ನು ಯಾರೋ ಕತ್ತರಿಸಿ ತೆಗೆದಿರುವುದು ಕಂಡು ಬಂದಿರುತ್ತದೆ ಆದುದರಿಂದ ಯಾರೋ ಕಳ್ಳರು ಮಳಿಗೆಯ ತಗಡು ಶೀಟನ್ನು ಕತ್ತರಿಸಿ ತೆಗೆದು ಮಳಿಗೆಯಲ್ಲಿದ್ದ ನಗದು ಹಣ 39,370/- ರೂ ,4 ಮೊಬೈಲ್ ಪೋನ್ ಮತ್ತು ಅದರ ಚಾರ್ಜರ್ಗಳು ಹಾಗೂ  ಇಂಟರ್ ನೆಟ್ ಮೊಡೆಮ್ ಅನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಎಂಬಿತ್ಯಾದಿ

Traffic South Police Station              

ದಿನಾಂಕ 27-08-2023 ರಂದು ಸಮಯ ರಾತ್ರಿ 08.05 ಗಂಟೆಗೆ ಪಿರ್ಯಾದಿ GEETHA ಗೆ ಯಾರೋ ಅಪರಿಚಿತ ವ್ಯಕ್ತಿಯೊಬ್ಬರು ಕರೆ ಮಾಡಿ ಪಿರ್ಯಾದಿಯ ತಮ್ಮ ಕೃಷ್ಣನಿಗೆ ತಿಲಕನಗರದಿಂದ ಸ್ವಲ್ಪ ಮುಂದೆ ಕಾಡು ರಸ್ತೆಯಲ್ಲಿ ನಿನ್ನ ತಮ್ಮನಿಗೆ ರಸ್ತೆ ಅಪಘಾತವಾಗಿದೆ ಎಂದು ತಿಳಿಸಿದ ಮೇರೆಗೆ ಪಿರ್ಯಾದಿ ಆಟೋರಿಕ್ಷಾವೊಂದರಲ್ಲಿ  ಬಂದು ಅಪಘಾತ ಸ್ಥಳದಲ್ಲಿ ನೋಡಲಾಗಿ ಗಾಯಗೊಂಡಿದ್ದ ಪಿರ್ಯಾದಿಯ ತಮ್ಮ ಕೃಷ್ಣನನ್ನು ಅಲ್ಲಿ ಸೇರಿದ್ದ ಜನರು ಉಪಚರಿಸುತ್ತಿದ್ದು, ನಂತರ ತಕ್ಷಣವೇ ಪಿರ್ಯಾದಿ ತನ್ನ ತಮ್ಮ ಕೃಷ್ಣನನ್ನು   ಅದೇ ಆಟೋರಿಕ್ಷಾದಲ್ಲಿ  ದೇರಳಕಟ್ಟೆ ಯೆನಪೋಯಾ ಆಸ್ಪತ್ರೆಗೆ ದಾಖಲಿಸಿದ್ದು, ನಂತರ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಿಸಿದ್ದು, ನಂತರ ಪಿರ್ಯಾದಿಯವರು  ಅಪಾಘಾತದ ಬಗ್ಗೆ ಗಾಯಾಳು ತಮ್ಮನನ್ನು ವಿಚಾರಿಸಲಾಗಿ ಪಿರ್ಯಾದಿ ತಮ್ಮ ದೇರಳಕಟ್ಟೆಯಿಂದ ಕಲ್ಲಾಗುಡ್ಡೆ ಮನೆಗೆ ನಡೆದುಕೊಂಡು ಹೋಗುವ ಸಮಯ  ಅದೇ ಮಾರ್ಗವಾಗಿ ಬರುತ್ತಿದ್ದ ಅಪರಿಚಿತ ದ್ವಿಚಕ್ರ ವಾಹನವನ್ನು ನಿಲ್ಲಿಸಿ ಕಲ್ಲುಗುಟ್ಟೆವರೆಗೆ ಕರೆದುಕೊಂಡು ಹೋಗಲು  ವಿನಂತಿಸಿ ಸಹ ಸವಾರನಾಗಿ ಕುಳಿತು ರಂಜಾಡಿ,ತಿಲಕನಗರ,ಹಾಗೂ ಅಂಬೇಡ್ಕರ್ ನಗರವನ್ನು ದಾಟಿ ಸ್ವಲ್ಪ ಮುಂದಕ್ಕೆ ತಲಪುತ್ತಿದ್ದಂತೆ ಸಮಯ ಸುಮಾರು  ರಾತ್ರಿ 08.00 ಗಂಟೆಗೆ  ಸದ್ರಿ ದ್ವಿಚಕ್ರ ವಾಹನದ ಸವಾರನು ನಿಯಂತ್ರಣ ತಪ್ಪಿ ರಸ್ತೆಯ ತೀರ ಎಡ ಬದಿಗೆ ದ್ವಿಚಕ್ರ ವಾಹನವನ್ನು ಚಲಾಯಿಸಿ ಒಮ್ಮೇಲೆ ಬ್ರೇಕ್ ಹಾಕಿದ  ಪರಿಣಾಮ ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಗೆ ಸುರಿದಿದ್ದ ಗಾಜು,ಕಲ್ಲು,ಟೈಲ್ಸ್ ಚೂರುಗಳ ರಾಶಿಯ ಮೇಲೆ ಸಹಸವಾರ ಕೃಷ್ಣ ಬಿದ್ದು ಬಲಹಣೆಗೆ ಚರ್ಮ ಹರಿದ ತೀವ್ರ ರಕ್ತಗಾಯ,ಬಲಗಣ್ಣಿಗೆ ಚರ್ಮಹರಿದ ಹಾಗೂ ಗುದ್ದಿದ ರಕ್ತಗಾಯ,ಮತ್ತು ಮೇಲ್ದುಟಿಗೆ ಗುದ್ದಿದಂತೆ ಗಾಯಗಳಾಗಿದ್ದು,ಇದಕ್ಕೆ ಕಾರಣನಾದ ಅಪರಿಚಿತ ದ್ವಿಚಕ್ರ ವಾಹನದ ಸವಾರನ ಮೇಲೆ ಸೂಕ್ತ ಕಾನೂನು ಕಮ್ರ ಕೈಗೊಳ್ಳುವಂತೆ ಕೋರಿಕೆ,ಎಂಬಿತ್ಯಾದಿ.

Bajpe PS

ಪಿರ್ಯಾದಿ Mahammad Asif ದಾರರು ಅವರ ಹೆಂಡತಿ ಹಾಗೂ ಮಗು ಮಹಮ್ಮದ್ ಶಿಸು ಎಂಬವರೊಂದಿಗೆ KA19 HC7710 ನೇ ಸ್ಕೂಟರ್ ನಲ್ಲಿ  ದಿನಾಂಕ 27.08.2023 ರಂದು ಬರುತ್ತಿರುವಾಗ ಎದುರುಗಡೆಯಿಂದ KL07 CT8053 ನೇ ನಂಬ್ರದ ಕಾರು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸಮಯ ಸುಮಾರು 13.30 ಗಂಟೆಗೆ ಮಂಗಳೂರು ತಾಲೂಕು ಬಡಗ ಎಕ್ಕಾರು ಗ್ರಾಮದ ದಡ್ಡಿಯ ಗಡಿಯ ಎಂಬಲ್ಲಿ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದ್ದು, ಪಿರ್ಯಾದಿದಾರರು ಮತ್ತು ಅವರ ಹೆಂಡತಿ ಹಾಗೂ ಮಗು ಸ್ಕೂಟರ್ ನಿಂದ ನೆಲಕ್ಕೆ ಬಿದ್ದಿರುತ್ತಾರೆ. ಇದರಿಂದ ಪಿರ್ಯಾದಿದಾರರಿಗೆ ಬಲಕಾಲಿಗೆ, ಮೊಣಗಂಟಿಗೆ ಗುದ್ದಿದ ಹಾಗೂ ರಕ್ತ ಗಾಯವಾಗಿರುತ್ತದೆ. ಹಾಗೂ ಪಿರ್ಯಾದಿದಾರರ ಹೆಂಡತಿ ರುಕಿಯಾ ರವರಿಗೆ ಬಲಗಾಲಿನ ತೊಡೆಯ ಭಾಗಕ್ಕೆ ಮತ್ತು ಮೊಣಗಂಟಿಗೆ ಗುದ್ದಿದ ಹಾಗೂ ರಕ್ತ ಗಾಯವಾಗಿರುತ್ತದೆ. ಗಾಯಗೊಂಡವರನ್ನು ಕಾರಿನ ಚಾಲಕಿ ಜ್ಯೋತಿ ಎಂಬವರು ಹಾಗೂ ಇತರರು ಉಪಚರಿಸಿರುತ್ತಾರೆ. ನಂತರ ಗಾಯಗೊಂಡವರು ಚಿಕಿತ್ಸೆ ಬಗ್ಗೆ ಮಂಗಳೂರಿನ ಕಂಕನಾಡಿಯಲ್ಲಿರುವ ಯೆನಪೋಯ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ ಎಂಬಿತ್ಯಾದಿ.

Mangalore South PS                                 

ಪಿರ್ಯಾದಿ Deepak Kumar ದಾರರ  ಅಣ್ಣನಾದ ಕೃಷ್ಣಬೈಠಾ ಪ್ರಾಯ 42 ವರ್ಷ ಎಂಬುವವರು ದಿನಾಂಕ 21-08-2023 ರಂದು ಸಮಯ ಸಂಜೆ 18-30 ಗಂಟೆಗೆ ಉಡುಪಿಯಿಂದ  ಮಂಗಳೂರು ಸರ್ವಿಸ್ ಬಸ್ ನಿಲ್ದಾಣಕ್ಕೆ ಹೋಗಿ ಬರುವುದಾಗಿ ಆತನ ಹೆಂಡತಿ ಕಲಾವತಿ ದೇವಿ ಎಂಬುವವರಿಗೆ ಕರೆ ಮಾಡಿ ತಿಳಿಸಿದ್ದು ನಂತರ 20-00 ಗಂಟೆಗೆ ಕೃಷ್ಣಬೈಠಾ ಎಂಬುವವರಿಗೆ ಆತನ ಹೆಂಡತಿ  ಪುನ ಕರೆ ಮಾಡಿದಾಗ ಸ್ವಿಚ್ ಆಫ್ ಆಗಿರುತ್ತದೆ ನಂತರ ಪಿರ್ಯಾದುದಾರರಿಗೆ ನಡೆದ ಘಟನೆಯನ್ನು ಪಿರ್ಯಾದಿದಾರರಿಗೆ ವಿವರಿಸಿದಾಗ ಪಿರ್ಯಾದಿದಾರರು ಮಂಗಳೂರು ನಗರದ ಎಲ್ಲ ಕಡೆ ಹುಡಿಕಾಡಿದರು ಯಾವುದೇ ಮಾಹಿತಿ ಸಿಗದೆ ಇರುವ ಕಾರಣ ಕೃಷ್ಣಾಬೈಠಾ  ಎಂಬುವವರ ಕಾಣೆಯಾದ ಬಗ್ಗೆ ತಡವಾಗಿ ದೂರು  ನೀಡಿರತ್ತಾರೆ ಆದ್ದರಿಂದ  ಕೃಷ್ಣಾಬೈಠಾ  ಎಂಬುವವರ ಕಾಣೆಯಾಗಿರುವುತ್ತಾರೆ ಎಂಬಿತ್ಯಾದಿ.    

Mangalore North PS                 

ಪಿರ್ಯಾದು ABDUL RAVOOF ದಾರರು  ಜೆ.ಎಂ 2 ನೇ ಅಡ್ಡ ರಸ್ತೆ, ಬಂದರ್ ಮಂಗಳೂರು ಎಂಬಲ್ಲಿ ವ್ಯಾಪಾರ ಮಾಡಿಕೊಂಡು ಪತ್ನಿ ಫಾತಿಮತ್ ಸಫ್ರತ್ (28), ರವರೊಂದಿಗೆ ವಾಸವಾಗಿರುವುದಾಗಿದೆ. ಪಿರ್ಯಾದುದಾರರು ದಿನಾಂಕ 26-08-2023 ರಂದು ಎಂದಿನಂತೆ ದೊಡ್ಡ ಮಗಳು ಹಿಬಾ ಳನ್ನು ಸಾಯಂಕಾಲ 04.00 ಗಂಟೆಗೆ ಮದ್ರಸಕ್ಕೆ ಬಿಟ್ಟು ನಂತರ ಕಛೇರಿಗೆ ತೆರಳಿರುತ್ತಾರೆ. ಹಿಬಾಳು ಸಾಯಂಕಾಲ 06.30 ಗಂಟೆಗೆ ಮದ್ರಸದಿಂದ ಮನೆಗೆ ಬಂದಾಗ, ತಾಯಿಯು ಮನೆಯಲ್ಲಿ ಕಾಣದೆ ಇದ್ದಾಗ ತಾಯಿ ಮತ್ತು ತಂಗಿಯನ್ನು ಎಲ್ಲಾ ಕಡೆ ಹುಡುಕಾಡಿ ನಂತರ ಪಿರ್ಯಾದುದಾರರಿಗೆ ಫೋನು ಕರೆ ಮಾಡಿ ಅಮ್ಮ ಮತ್ತು ತಂಗಿ ಮನೆಯಲ್ಲಿಲ್ಲವಾಗಿ ತಿಳಿಸಿರುತ್ತಾಳೆ. ನಂತರ ಪಿರ್ಯಾದುದಾರರು ಮನೆಗೆ ತೆರಳಿ ಮನೆಯಲ್ಲೆಲ್ಲಾ ಹುಡುಕಿ, ನೆರೆಮನೆಯವರನ್ನೆಲ್ಲಾ ವಿಚಾರಿಸಲಾಗಿ ಈ ವರೆಗೂ ಪತ್ತೆಯಾಗಿರುವುದಿಲ್ಲ. ಆದ್ದರಿಂದ ಪಿರ್ಯಾದುದಾರರ ಪತ್ನಿ ಫಾತಿಮತ್ ಸಫ್ರತ್(28) ಮತ್ತು ಮಗಳು (2) ರವರನ್ನು ಪತ್ತೆ ಮಾಡಿ ಕೊಡಬೇಕಾಗಿ ಕೋರಿಕೆ ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 28-08-2023 07:42 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080