ಅಭಿಪ್ರಾಯ / ಸಲಹೆಗಳು

Crime Report in  CEN Crime PS

ಪ್ರಕರಣದ ಫಿರ್ಯಾದಿ ಬಿ.ಸಚ್ಚಿದಾನಂದ ಶೆಟ್ಟಿ ಎಂಬಾತನು ಮಂಗಳೂರು ನಗರದ , ಮರೋಳಿಯ ಸೂರ್ಯ ನಾರಾಯಣ ರಸ್ತೆಯಲ್ಲಿರುವ  ಬೊಂಡಾಲ ಎನೆಕ್ಸ್ ಕಟ್ಟಡದಲ್ಲಿ ದುರ್ಗಾ ಪೆಸಿಲಿಟಿ ಪ್ರೈ ಲಿ ಎಂಬ ಕಂಪೆನಿಯ ಮ್ಯಾನೇಜಿಂಗ್ ಡೈರೆಕ್ಟರ್ ಆಗಿದ್ದು, ತನ್ನ ಕಂಪೆನಿಯ ಮುಖಾಂತರ ಕ್ಯಾಟರಿಂಗ್ ಸರ್ವೀಸ್ ಮತ್ತು ಟೆಂಡರ್ ಮೂಲಕ ಪಡೆದ ಸ್ಥಳಗಳಲ್ಲಿ ಕ್ಯಾಂಟೀನ್ , ಕ್ಯಾಪಿಟೇರಿಯಾ ಮತ್ತು ಹಾಸ್ಟೇಲ್ ಮೆಸ್ ನಡೆಸಿಕೊಂಡಿದ್ದು, ದಿನಾಂಕ:01/01/2022 ರಂದು ಬೆಳಗಾವಿ ಜಿಲ್ಲೆಯ Visvesvaraya Technological University ಯಲ್ಲಿ ಪಿಜಿ ಕಲಿಯುತ್ತಿರುವ ಜ್ಞಾನ ಸಂಗಮ ಕ್ಯಾಂಪಸ್ ನ ವಿದ್ಯಾರ್ಥಿಗಳಿಗೆ ದಿನಾಂಕ:01/01/2022 ರಿಂದ ದಿನಾಂಕ:31/12/2022ರ ವರೆಗೆ ಮೆಸ್ ಬಗ್ಗೆ ಯೂನಿರ್ವಸಿಟಿಯಿಂದ ಗುತ್ತಿಗೆ ಪಡೆದುಕೊಂಡು ತಮ್ಮ ಕಂಪೆನಿಯಲ್ಲಿ 15 ವರ್ಷಗಳಿಂದ ಸಿಬ್ಬಂದಿಯಾಗಿರುವ 1ನೇ ಆಪಾದಿತ ಜಗಧೀಶ ಕೃಷ್ಣ ಶೆಟ್ಟಿ ಎಂಬವರನ್ನು ಸದರಿ ಹಾಸ್ಟೇಲ್ ನ ಮೆಸ್ ಗೆ ಮೇನೆಜರ್ ಆಗಿ ನೇಮಿಸಿ ಮೆಸ್ ನ್ನು ನಡೆಸಿಕೊಂಡು ಹೋಗಲು ಸಂಪೂರ್ಣ ಜವಾಬ್ದಾರಿಯನ್ನು ನೀಡಿದಂತೆ 1ನೇ ಆಪಾದಿತ ಮೆಸನ್ನು ನಡೆಸಿಕೊಂಡು 2ನೇ ಆಪಾದಿತೆ ಅಕಿಂತಾ ಅನಂದ ವುಸ್ಲಕರ್ ಎಂಬಾಕೆಯನ್ನು ಅಕೌಂಟೆಂಟ್ ಆಗಿ, 3ನೇ ಆಪಾದಿತ ಬಾಬು ದಳ್ವಾಯಿ ಎಂಬವರನ್ನು ತಾನೇ ನೇಮಿಸಿ ಜೊತೆಯಲ್ಲಿ ಇರಿಸಿಕೊಂಡು ಮೆಸ್ ನಡೆಸಿಕೊಂಡಿದ್ದು, ಮೆಸ್ ಬಿಲ್ಲನ್ನು ನೇರವಾಗಿ ವಿದ್ಯಾರ್ಥಿಯವರಿಂದ ಸಂಗ್ರಹಿಸುವಂತೆ VTU ಯೂನಿರ್ವಸಿಟಿಯಿಂದ ದಿನಾಂಕ:01/07/2022ರಂದು ಆದೇಶಿಸಿದಂತೆ ಫಿರ್ಯಾದಿ ತನ್ನ ಬಾಬ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮಂಗಳೂರು ಶಿವಬಾಗ್ ಬ್ರಾಂಚ್ A/C ನೇದಕ್ಕೆ ಲಿಂಕ್ ಹೊಂದಿರುವ POS & UPI Machine  ನೇದನ್ನು ಪಡೆದುಕೊಂಡು ಬೆಳಗಾವಿ ಜಿಲ್ಲೆಯ ವಿಶ್ವೇಶ್ವರಯ್ಯ ಟೆಕ್ನೀಕಲ್ ಯೂನಿರ್ವನಿಟಿಯಲ್ಲಿರುವ ಜ್ಞಾನ ಸಂಗಮ ಕ್ಯಾಂಪಸ್ ನ ಮೆಸ್ ನಲ್ಲಿ ಆಳವಡಿಸಿವುದನ್ನು 1ನೇ ಆಪಾದಿತ ಬದಲಿಸಿ ತನ್ನ ಬಾಬ್ತು ಮಂಗಳೂರು ನಗರದ ವಾಮಂಜೂರು ಬ್ರಾಂಚ್ ಬ್ಯಾಂಕ್ ಆಫ್ ಬರೋಡ A/C No:74050100001929ನೇದಕ್ಕೆ ಲಿಂಕ್ ಹೋಂದಿರುವ POS Machineನ್ನು ಆಳವಡಿಸಿ ಹಾಗೂ HDFC ಬ್ಯಾಂಕ್ ಲಿಂಕ್ ಹೊಂದಿರುವ UPI ಮುಖಾಂತರ ಆಪಾದಿತ ವಿದ್ಯಾರ್ಥಿಗಳಿಂದ ಸುಮಾರು ರೂ.6,83,175/- ಹಣವನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡಿರುವುದಲ್ಲದೆ 2ನೇ ಆಪಾದಿತೆ ತನ್ನ ಖಾತೆಗೆ ವಿದ್ಯಾರ್ಥಿಗಳಿಂದ ರೂ.10,48,377/- ಹಣವನ್ನು ಮತ್ತು 3ನೇ ಆಪಾದಿತ ತನ್ನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಲಿಂಕ್ ಹೊಂದಿರುವ UPI ಮುಖಾಂತರ ತನ್ನ ಖಾತೆ ರೂ.52,622/- ಹಣವನ್ನು ವರ್ಗಾಯಿಸಿಕೊಂಡು  1 ರಿಂದ 3ನೇ ಆಪಾದಿತರು ಒಟ್ಟು ರೂ.17,84,174/- ಹಣವನ್ನು ತಮ್ಮ ತಮ್ಮ ಖಾತೆಗೆ ವರ್ಗಾಯಿಸಿಕೊಂಡು ಫಿರ್ಯಾದಿಗೆ ವಂಚಿಸಿರುವುದಲ್ಲದೆ  ಮೆಸ್ ನಲ್ಲಿ ಕೆಲಸ ಮಾಡಿಕೊಂಡಿದ್ದ ಕೆಲಸಗಾರರಿಗೆ ಸರಿಯಾಗಿ ವೇತನ ನೀಡದೆ ಹಾಗೂ ಸಾಲವಾಗಿ ವೆಷ್ಣವಿ ಟ್ರೇಡರ್ಸ್ ನಿಂದ ದಿನಸಿ ಸಾಮಾಗ್ರಿಗಳನ್ನು ಪಡೆದಿರುವುದಕ್ಕೆ ಹಣ ಸಂದಾಯ ಮಾಡದೆ ಬಾಕಿ ಇರಿಸಿ ವಿದ್ಯಾರ್ಥಿಗಳಿಂದ ಮೆಸ್ ಬಿಲ್ ಎಂದು ವರ್ಗಾಯಿಸಿದ ಹಣ ಹಾಗೂ ಇತರ ಬಾಕಿ ಸೇರಿ ಒಟ್ಟು ರೂ.30,00,000/- ಲಕ್ಷ ವರೆಗೆ ಫಿರ್ಯಾದಿ ಕಂಪೆನಿಗೆ ನಂಬಿಸಿ ವಂಚಿಸಿ ನಷ್ಟವನ್ನುಂಟು ಮಾಡಿರುವುದಾಗಿದೆ. ಎಂಬಿತ್ಯಾದಿ  

Traffic South Police Station              

ದಿನಾಂಕ:27-09-2023 ರಂದು ಫಿರ್ಯಾದಿದಾರರಾದ ಧೀರಜ್ (24 ವರ್ಷ) ಹಾಗೂ ಅವರ ಸಹೋದ್ಯೋಗಿ ಸಚಿನ್ ರವರು ಕುತ್ತಾರ್ ನಿಂದ ಪಿರ್ಯಾದಿದಾರರ ಮನೆಯಾದ ರಾಣಿಪುರ ಚರ್ಚ್ ಹತ್ತಿರ ಹೋಗಲು ಕುತ್ತಾರ್ ಆಟೋ ಪಾರ್ಕ್ ನಿಂದ ಆಟೋ ರಿಕ್ಷಾ ನಂಬ್ರ KA-19-D-4533 ನೇದರಲ್ಲಿ ಪ್ರಯಾಣಿಕರಾಗಿ ಕುಳಿತು ಹೋಗುತ್ತಿರುವಾಗ ಸಮಯ ಸುಮಾರು ರಾತ್ರಿ 8.15 ಕ್ಕೆ ಸುಭಾಶ್ ನಗರದಲ್ಲಿ ನಾಸಿರ್ ರವರ ಅಂಗಡಿ ಇಳಿಜಾರಿನಲ್ಲಿ ತಲುಪಿದಾಗ ತಿರುವಿನಲ್ಲಿ ಸಚಿನ್ ರವರು ಆಟೋರಿಕ್ಷಾದಿಂದ ತನ್ನ ತಲೆ ಹೊರಗೆ ಹಾಕಿ ನೋಡುತ್ತಿರುವಾಗ ಎದುರುಗಡೆ ಅಂದರೆ ರಾಣಿಪುರದಿಂದ ಕುತ್ತಾರು ಕಡೆಗೆ ಸಾರ್ವಜನಿಕ ರಸ್ತೆಯಲ್ಲಿ ಅಪರಿಚಿತ ನಂಬರ್ ತಿಳಿಯದ ಕಾರೊಂದನ್ನು ಅದರ ಚಾಲಕ ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಸಚಿನ್ ರವರ ತಲೆಗೆ ಡಿಕ್ಕಿಪಡಿಸಿ ಸ್ಥಳದಿಂದ ಕಾರನ್ನು ನಿಲ್ಲಿಸದೆ ಕಾರಿನೊಂದಿಗೆ ಪರಾರಿಯಾಗಿರುತ್ತಾನೆ, ಈ ಅಪಘಾತದಿಂದ ಸಚಿನ್ ರವರ ತಲೆಯ ಮುಂಭಾಗ ಹಣೆಗೆ ಗುದ್ದಿದ ರಕ್ತಗಾಯವಾಗಿರುತ್ತದೆ, ಫಿರ್ಯಾದಿದಾರರು ಮತ್ತು ಆಟೋ ರಿಕ್ಷಾ ಚಾಲಕ ಸಮೀರಾ ಗಾಯಾಳುವನ್ನು ಉಪಚರಿಸಿ ಅದೇ ಆಟೋರಿಕ್ಷಾದಲ್ಲಿ ಪ್ರಥಮ ಚಿಕಿತ್ಸೆಗಾಗಿ ಯೆನೆಪೋಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿನ ವೈದ್ಯರು ಗಾಯಾಳುವಾದ ಸಚಿನ್ ರವರನ್ನು ಪರೀಕ್ಷಿಸಿ ಒಳರೋಗಿಯಾಗಿ ದಾಖಲು ಮಾಡಿಕೊಂಡಿರುತ್ತಾರೆ, ಎಂಬಿತ್ಯಾದಿ.

CEN Crime PS

ಫಿರ್ಯಾದಿದಾರರು A-One Steel and Alloys Private Limited ಕಂಪೆನಿಯ ಪರವಾಗಿ  Sohil Dattani President Marketing ಆಗಿದ್ದು, ಫಿರ್ಯಾದಿ ಕಂಪೆನಿಗೆ  ಕೋಡಿಗೆ ಹಳ್ಳಿ ಮೈನ್ ರೋಡ್ ಹೆಬ್ಬಾಳ ಬೆಂಗಳೂರಿನಲ್ಲಿರುವ Balaji Malts Pvt. Ltd ರವರಿಂದ 50,000 metric tonnes Coal-RB2 ನ್ನು ಸರಬರಾಜು ಮಾಡುಬೇಕೆಂದು ಒಪ್ಪಂದವಾಗಿದ್ದು, ಆ ಒಪ್ಪಂದ ಪ್ರಕಾರ 50,000 metric tones Coal-RB2 ನ ವೆಚ್ಚದ ರೂ.60,00,000/- ಹಣ ಹಣವನ್ನು ಈಗಾಗಲೇ ಫಿರ್ಯಾದಿ ಕಂಪೆನಿ Balaji Malts Pvt. Ltd ಕಂಪೆನಿಯವರಿಗೆ ನೀಡಲಾಗಿರುತ್ತದೆ. ಫಿರ್ಯಾದಿ ಕಂಪೆನಿಂದ  ಹಣ ಪಡೆದುಕೊಂಡು ಆಪಾದಿತ ಕಂಪೆನಿಯವರು 50,000 metric tonnes Coal-RB2 ನ್ನು South African ಯಿಂದ ಮಂಗಳೂರಿನಲ್ಲಿರುವ ಪಣಂಬೂರು  Port ಗೆ ತರಿಸಿಕೊಂಡು ತದ ನಂತರ ಆಪಾದಿತ ಕಂಪೆನಿಯವರು ಕೊಟ್ಟ ಡೆಲಿವರಿ ಆರ್ಡರ್ ಪ್ರಕಾರ ಫಿರ್ಯಾದಿ ಕಂಪೆನಿ 40,250.98 MT Coal-RB2 ನ್ನು ಮಂಗಳೂರಿನಲ್ಲಿರುವ ಪಣಂಬೂರು  Port ನಲ್ಲಿರುವ ಗೋಡಾನ್ ನಿಂದ ತೆಗೆದುಕೊಂಡು ಸಂಬಂದಪಟ್ಟವರಿಗೆ ಸರಾಬರಾಜು ಮಾಡಿದ್ದು, ಉಳಿದ 9,749.02 metric tonnes Coal-RB2 ನ್ನು ತೆಗೆದು ಕೊಳ್ಳಲು ಪಣಂಬೂರು  Port ನಲ್ಲಿರುವ ಗೋಡಾನ್ ಹೋದಾಗ ಆಪಾದಿತ ಕಂಪೆನಿಯವರು ಸದರಿ  Coal-RB2 ನ್ನು ಫಿರ್ಯಾದಿದಾರರ ಕಂಪೆನಿಯ ಗಮನಕ್ಕೆ ತಾರದೆ 9,749.02 metric tonnes Coal-RB2 ನ್ನು ಬಳಸಿಕೊಂಡು ಕರಾರನ್ನು ಉಲ್ಲಂಘಿಸಿ ಫಿರ್ಯಾದಿ ಕಂಪೆನಿಗೆ ನಂಬಿಕೆ ದ್ರೋಹ ಎಸಗಿ ವಂಚಿಸಿ ಸುಮಾರು ಅಂದಾಜು ರೂ.9,80,00,000/- ನಷ್ಟವನ್ನುಂಟು ಮಾಡಿರುವುದಾಗಿದೆ ಎಂಬಿತ್ಯಾದಿ

Traffic North Police Station               

ದಿನಾಂಕ 27-09-2023 ರಂದು ಪಿರ್ಯಾದಿ Harish K ದಾರರ ಭಾವ ಕಿಶೋರ್ ರವರು ಶ್ರೀನಿವಾಸ ಆಸ್ಪತ್ರೆಯ ಮುಖ್ಯ ದ್ವಾರದ ಎದುರಿನ NH 66 ನೇ ರಸ್ತೆಯ ಮಧ್ಯದ ಡಿವೈಡರ್ ಗೆ ಡಿಕ್ಕಿ ಹೊಡೆದು ಗಾಯಗೊಂಡು ಪ್ರಜ್ಞಾ ಹೀನ ಸ್ಥಿತಿಯಲ್ಲಿ ಮುಕ್ಕಾ ಶ್ರೀನಿವಾಸ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಗ್ಗೆ ಪೋನ್ ಮುಖಾಂತರ ಬಂದ ಮಾಹಿತಿ ತಿಳಿದು ಆಸ್ಪತ್ರೆಗೆ ತೆರಳಿ ನೋಡಲಾಗಿ ಭಾವ ಕಿಶೋರ್ ರವರ ಮೂಗಿನಲ್ಲಿ ರಕ್ತ ಹೊರ ಬರುತ್ತಿದ್ದು ಮುಖದ ಬಲ ಬದಿ ಹಾಗೂ ಕೆನ್ನೆಯ ಎಡ ಬದಿ ಚರ್ಮ ತರಚಿ ಕೊಂಡಿತ್ತು. ಅಪಘಾತದ  ಬಗ್ಗೆ ತಿಳಿಯಲಾಗಿ ಭಾವ ಕಿಶೋರ್ ರವರು ರಾತ್ರಿ ಸಮಯ ಸುಮಾರು 8.00 ಗಂಟೆ ಗೆ KA-19-EL-5460 ನಂಬ್ರದ ಮೋಟಾರ್ ಸೈಕಲ್ ನ್ನು ಮುಕ್ಕಾ ಚೆಕ್ ಪೋಸ್ಟ್ ಕಡೆಯಿಂದ NITK ಕಡೆಗೆ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಸವಾರಿ ಮಾಡುತ್ತಾ ಶ್ರೀನಿವಾಸ ಆಸ್ಪತ್ರೆಯ ಮುಖ್ಯ ದ್ವಾರದ ಎದುರಿನ NH 66 ನೇ ರಸ್ತೆಯ ಮಧ್ಯದ ಡಿವೈಡರ್ ಅಂಚಿಗೆ ಡಿಕ್ಕಿ ಪಡಿಸಿದ್ದು ಇದರ ಪರಿಣಾಮ ಪಿರ್ಯಾದಿದಾರರ ಭಾವ ಕಿಶೋರ್ ರವರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ಗಾಯಗೊಂಡು ಪ್ರಜ್ಞಾ ಹೀನ ಸ್ಥಿತಿಯಲ್ಲಿ , ಒಳ ರೋಗಿಯಾಗಿ ಚಿಕಿತ್ಸೆ ಬಗ್ಗೆ ಮುಕ್ಕಾದ ಶ್ರೀನಿವಾಸ ಆಸ್ಪತ್ರೆಗೆ ದಾಖಲಾಗಿರುತ್ತಾರೆ ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 28-09-2023 02:32 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080