ಅಭಿಪ್ರಾಯ / ಸಲಹೆಗಳು

Crime Report in  Traffic North Police Station                                  

 ಪಿರ್ಯಾದಿ GANGADHARA ದಾರರು ದಿನಾಂಕ: 27-10-2023 ರಂದು ತನ್ನ ಬಾಬ್ತು KA-19-EU-2803 ನಂಬ್ರದ ಮೋಟಾರ್ ಸೈಕಲಿನಲ್ಲಿ ಬೈಕಂಪಾಡಿ ಇಂಡಸ್ಟ್ರಿಯಲ್ ಏರಿಯಾ ಕಡೆಯಿಂದ ದೀಪಕ್ ಪೆಟ್ರೋಲ್ ಪಂಪ್ ಕಡೆಗೆ ಸವಾರಿ ಮಾಡಿಕೊಂಡು ಬಂದು ಪಣಂಬೂರು ಪೊಲೀಸ್ ಸ್ಟೇಷನ್ ಹತ್ತಿರ ಒಳ ರಸ್ತೆಗೆ ಹೋಗಲು ನಿದಾನವಾಗಿ ತಿರುಗಿಸುತ್ತಿದ್ದ ಸಮಯ ಸುಮಾರು 3:20 ಗಂಟೆಗೆ ಪಿರ್ಯಾದಿದಾರರ ಹಿಂದಿನಿಂದ KA-70-H-2199 ನಂಬ್ರದ ಮೋಟಾರ್ ಸೈಕಲನ್ನು ಅದರ ಸವಾರ ಶಾಹಿದ್ ಅಫ್ರೀದ್ ಎಂಬವರು ದುಡಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮೋಟಾರ್ ಸೈಕಲಿಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರ ಮತ್ತು ಮೋಟಾರ್ ಸೈಕಲ್ ಸವಾರ ಮೋಟಾರ್ ಸೈಕಲ್ ಸಮೇತ ಕಾಂಕ್ರೀಟ್ ರಸ್ತೆಗೆ ಬಿದ್ದು ಪಿರ್ಯಾದಿದಾರರ ಬಲ ಕಾಲಿನ ಕೋಲು ಕಾಲಿಗೆ ಮೂಳೆ ಮುರಿತದ ಗಾಯವಾಗಿದ್ದು ಅಲ್ಲದೆ ಅಪಘಾತ ಪಡಿಸಿದ ಮೋಟಾರ್ ಸೈಕಲ್ ಸವಾರರಿಗೆ ಎಡ ಭುಜಕ್ಕೆ ಮೂಳೆ ಮುರಿತದ ಗಾಯ ಎರಡೂ ಕಾಲು ಮತ್ತು ಕೈಗೆ ತರಚಿದ ರೀತಿಯ ಗಾಯವಾಗಿರುತ್ತದೆ ಎಂಬಿತ್ಯಾದಿ.        

Bajpe PS

ದಿನಾಂಕ 27.10.2023 ರಂದು ಸಮಯ ಸುಮಾರು 15.00 ಗಂಟೆಗೆ ಪಿರ್ಯಾದಿ Sheedhara ದಾರರು KA19 EE3615 ನೇ ನಂಬ್ರದ ಬೈಕ್ ನಲ್ಲಿ ಪಿರ್ಯಾದಿದಾರರ ಹೆಂಡತಿಯ ತಮ್ಮನಾದ ಸುನೀಲ್ ಕುಮಾರ್ ಎಂಬವರನ್ನು ಸಹಸವಾರನಾಗಿ ಕೂರಿಸಿಕೊಂಡು ಕಟೀಲ್ ಪೋಸ್ಟ್ ಆಫೀಸ್ ನಿಂದ ಮನೆಯ ಕಡೆಗೆ ಬರುತ್ತಿರುವಾಗ ಮಲ್ಲಿಗೆ ಅಂಗಡಿ ಕ್ರಾಸ್ ಬಳಿ ತಲುಪುತ್ತಿದ್ದಂತೆ ತಿರುವಿನಲ್ಲಿ ಹಿಂಬದಿಯಿಂದ ಟಿಪ್ಪರ್ ಲಾರಿ ಚಾಲಕನು ಲಾರಿಯನ್ನು ನಿರ್ಲಕ್ಷ್ಯದಿಂದ ಒಮ್ಮೆಲೆ ತಿರುಗಿಸಿದ ಪರಿಣಾಮ  ಸುನೀಲ್ ರವರ ಎಡಕಾಲಿನ ಮೇಲೆ ಟಿಪ್ಪರ್ ಲಾರಿಯ ಟೈರ್ ಹರಿದು ಹೋಗಿದ್ದು, ಟಿಪ್ಪರ್ ಲಾರಿ ಚಾಲಕನು ಅಪಘಾತ ಪಡಿಸಿ ಟಿಪ್ಪರನ್ನು ನಿಲ್ಲಿಸದೇ ಪರಾರಿಯಾಗಿದ್ದು, ಟಿಪ್ಪರ್ ಲಾರಿ ನಂಬ್ರ ನೋಡಲು ಸಾಧ್ಯವಾಘಿರುವುದಿಲ್ಲ. ಈ ಅಪಘಾತದಿಂದ ಮೋಟಾರ್ ಸೈಕಲ್ ಬಲಬದಿಯ ಹ್ಯಾಂಡಲ್ (ಬ್ರೇಕ್) ಹಾಗೂ ಮುಂಬದಿಯ ಚಕ್ರದ ಮಡ್ ಗಾಡ್ ತುಂಡರಿದು ಹೋಗಿದ್ದು, ಸುನೀಲ್ ರವರಿಗೆ ಎಡಕಾಲಿನ ಪಾದದ ಗಂಟು ಬಳಿಯ ಮೂಳೆ ಮುರಿತದ ಗಂಭೀರ ಗಾಯ ಹಾಗೂ ಪಾದದ ಮೇಲಿನ ಹಾಗೂ ಕೆಳಪಾದದ ಚರ್ಮ ಕಿತ್ತು ಹೋದ ಗಾಯವಾಗಿರುತ್ತದೆ. ಆದುದರಿಂದ ಆರೋಪಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಎಂಬಿತ್ಯಾದಿ.

Ullal PS   

ದಿನಾಂಕ: 28-10-2023 ರಂದು ಮದ್ಯಾಹ್ನ ಮಂಗಳೂರು ಸೋಮೇಶ್ವರ ಗ್ರಾಮದ ಕುಂಪಲ ಬೈಪಾಸ್  ಪರಿಸರದ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ಯುವಕನು ಯಾವುದೋ ಮಾದಕ ವಸ್ತು ವನ್ನು ಸೇವಿಸಿ ನಶೆ ಹೊಂದಿ ಸಾರ್ವಜನಿಕ ಸ್ಥಳ ದಲ್ಲಿ ತೊಂದರೆ ಕೊಡುತ್ತಿದ್ದಾನೆ ಎಂಬುದಾಗಿ ಬಾತ್ಮೀದಾರರಿಂದ ಠಾಣೆಗೆ ಮಾಹಿತಿ ಬಂದಂತೆ ಉಳ್ಳಾಲ ಪೊಲೀಸ್ ಠಾಣಾ ಪಿ.ಎಸ್.ಐ ಧನರಾಜ ಎಸ್ ಹಾಗೂ ಸಿಬ್ಬಂದಿಯವರನ್ನು  ಜೊತೆಯಲ್ಲಿ  ಕರೆದುಕೊಂಡು ಮಂಗಳೂರು ಸೋಮೇಶ್ವರ ಗ್ರಾಮದ ಕುಂಪಲ ಬೈಪಾಸ್  ಪರಿಸರದ ಸಾರ್ವಜನಿಕ ಸ್ಥಳ ಎಂಬಲ್ಲಿಗೆ 12-45 ಗಂಟೆಗೆ ತಲುಪಿ ಅಮಲಿನಲ್ಲಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದ ಯುವಕನನ್ನು ವಶಕ್ಕೆ ತೆಗೆದುಕೊಂಡು ವಿಚಾರಿಸಲಾಗಿ ತಾನು ನಿಷೇದಿತ ಮಾದಕ ವಸ್ತು ಸೇವನೆ ಮಾಡಿರುವುದಾಗಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ಆತನ ಹೆಸರು ವಿಳಾಸ ಕೇಳಲಾಗಿ ಮೊಹಮ್ಮದ್ ಸಫ್ವಾನ್ ಬಿ. ಎ.(ಪ್ರಾಯ 21 ವರ್ಷ),  ವಾಸ- ಇಂದಿರಾ ನಗರ  ಹೌಸ್, ಸಜಿಪ ಮುನ್ನೂರು ಗ್ರಾಮ, ಆಲಾಡಿ ಅಂಚೆ, ಬಂಟ್ವಾಳ ತಾಲೂಕು, ದ.ಕ ಜಿಲ್ಲೆ ಎಂಬುದಾಗಿ ತಿಳಿಸಿದ್ದು, ಆತನನ್ನು ಸಿಬ್ಬಂದಿಯವರ ಜೊತೆಯಲ್ಲಿ ದೇರಳಕಟ್ಟೆ ಕೆ ಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ಗೊಳಪಡಿಸಿದಲ್ಲಿ ಮೊಹಮ್ಮದ್ ಸಫ್ವಾನ್ ಬಿ.ಎ. ನು ಕಾನೂನು ಬಾಹಿರವಾದ  ನಿಷೇದಿತ ಮಾದಕ ವಸ್ತು Tetrahydrocannabinol ನ್ನು ಸೇವನೆ ಮಾಡಿರುವುದಾಗಿ ವರದಿ ನೀಡಿದ್ದು, ಈ ದಿನ ಆರೋಪಿಯ ವಿರುಧ್ದ ಪ್ರಕರಣ ದಾಖಲಿಸಲಾಗಿದೆ ಎಂಬಿತ್ಯಾದಿ.

Mangalore North PS

ಪಿರ್ಯಾದಿ ಮಂಗಳೂರು ಉತ್ತರ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕಿ ವನಜಾಕ್ಷಿ ಕೆ ದಿನಾಂಕ: 27.10.2023 ರಂದು ಸಂಜೆ ಠಾಣಾ ಸರಹದ್ದಿನಲ್ಲಿ ಸಿಬ್ಬಂದಿಗಳೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿರುವಾಗ ಭಾತ್ಮಿದಾರರಿಂದ ಬಂದ ಖಚಿತ ಮಾಹಿತಿಯಂತೆ  ಸಂಜೆ ಸುಮಾರು 19-10 ಗಂಟೆಗೆ ಠಾಣಾ ವ್ಯಾಪ್ತಿಯ ಭಟ್ಕಳ ಬಜಾರ್ ಸಾರ್ವಜನಿಕ ರೋಡ್ ಬಳಿ ಒಬ್ಬಾತನು ಅಮಲುಕೋರನಾಗಿ ತೂರಾಡುತ್ತಿದ್ದು ಆತನನ್ನು ಕಂಡು ವಿಚಾರಿಸಿದಾಗ ಆತನು  ತನ್ನ ಹೆಸರು ಶೇಕ್ ಮಹಮ್ಮದ್ ಹ್ಯಾರಿಸ್ (33), ವಾಸ- ಜುಮ್ಮಾ ಮಸೀದಿ ಹತ್ತಿರ, ಬಟ್ರಕೆರೆ,  ಬಜ್ಪೆ, ಮಂಗಳೂರು ಎಂಬುದಾಗಿ ತಿಳಿಸಿದ್ದು ನಂತರ ಶೇಕ್ ಮಹಮ್ಮದ್ ಹ್ಯಾರಿಸ್ ನನ್ನು ವೈದ್ಯಕೀಯ ಪರೀಕ್ಷೆ ಬಗ್ಗೆ ಮಂಗಳೂರು ಕುಂಟಿಕಾನದಲ್ಲಿರುವ ಎ.ಜೆ ಆಸ್ಪತ್ರೆಗೆ  ಹಾಜರುಪಡಿಸಿದ್ದು,ಎ.ಜೆ ಆಸ್ಪತ್ರೆಯ ವೈದ್ಯರು ಆತನನ್ನು ಪರೀಕ್ಷಿಸಿದಲ್ಲಿ ಶೇಕ್ ಮಹಮ್ಮದ್ ಹ್ಯಾರಿಸ್ ಎಂಬಾತನು Tetrahydracannabinoid (Marijuana) ಎಂಬ ಮಾದಕ ದ್ರವ್ಯ ಸೇವನೆ ಮಾಡಿರುವುದಾಗಿ ತಿಳಿಸಿ ವರದಿಯನ್ನು ನೀಡಿರುತ್ತಾರೆ. ಶೇಕ್ ಮಹಮ್ಮದ್ ಹ್ಯಾರಿಸ್ ನ ವಿರುದ್ದ ಎನ್.ಡಿ.ಪಿ.ಎಸ್. ಕಾಯ್ದೆಯಂತೆ ಪ್ರಕರಣ ದಾಖಲಿಸಿಕೊಂಡಿತ್ತೆನೆ ಎಂಬಿತ್ಯಾದಿ ಸಾರಾಂಶ.

Konaje PS

ದಿನಾಂಕ: 27-10-2023 ರಂದು ಮದ್ಯಾಹ್ನ 14.00 ಗಂಟೆಗೆ  ಉಳ್ಳಾಲ ತಾಲೂಕು ಕುರ್ನಾಡು ಗ್ರಾಮದ ಕಾಯರಗೋಳಿ ಜಂಕ್ಷನ್ ಎಂಬಲ್ಲಿ ವಾಹನ ತಪಾಸಣೆ  ಮಾಡುತ್ತಿರುವಾಗ ಮುಶ್ರಿಪ್ ಸಿ.ಎಮ್ ಪ್ರಾಯ 24 ವರ್ಷ ಎಂಬಾತನನ್ನು ಮುಂದಿನ ಕ್ರಮದ ಬಗ್ಗೆ ಸಂಜೆ 14-45 ಗಂಟೆಗೆ ವೈದ್ಯಕೀಯ ಪರೀಕ್ಷೆಯ ಬಗ್ಗೆ ದೇರಳಕಟ್ಟೆ ಕಣಚೂರು ಆಸ್ಪತ್ರೆಯ ವೈಧ್ಯಾದಿಕಾರಿಯವರ ಮುಂದೆ ಹಾಜರು ಪಡಿಸಿ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಆರೋಪಿಯು Positive for MARIJUANA (THC) ಎಂಬ ಮಾದಕ ವಸ್ತುವನ್ನು ಸೇವನೆ ಮಾಡಿರುವುದು ದೃಡಪಟ್ಟಿರುತ್ತದೆ ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 28-10-2023 07:04 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080