ಅಭಿಪ್ರಾಯ / ಸಲಹೆಗಳು

Crime Report in  Barke PS

ಪಿರ್ಯಾದಿದಾರಾದ ರತೀಶ್ ಬಿ.ಎನ್ ರವರು 2020-21 ರಲ್ಲಿ ಮಹೇಶ್ ಫೌಂಡೇಶನ್ ಎಂಬ ಸಂಸ್ಥೆಯನ್ನು ಪ್ರಾರಂಭಿಸಿದ್ದು ಸದ್ರಿ ಸಂಸ್ಥೆಯನ್ನು ಮಂಗಳೂರಿನ ಮಠದಕಣಿಯಲ್ಲಿರುವ Global Multi Speciality Hospital Pvt Ltd ಕಟ್ಟಡದಲ್ಲಿ ತಿಂಗಳಿಗೆ 10 ಲಕ್ಷ ಬಾಡಿಗೆ ಮತ್ತು 40 ಲಕ್ಷ ಮುಂಗಡ ಠೇವಣಿ ಇಟ್ಟು ಪ್ರಾರಂಭಿಸಿರುತ್ತಾರೆ. ಸದ್ರಿ Global Multi Speciality Hospital Pvt Ltd ನ್ನು ರಾಮ್ ಮೋಹನ್ ರೈ ಎನ್ನುವವರು ಫಿರ್ಯಾಧಿದಾರರಿಗೆ ದಿನಾಂಕ: 30-09-2021 ರಂದು ಬಾಡಿಗೆ ಕರಾರಿನಂತೆ 30 ವರ್ಷಗಳಿಗೆ ಬಾಡಿಗೆ ಕೊಟ್ಟಿದ್ದು ಸದ್ರಿ ರಾಮ್ ಮೋಹನ್ ರೈ ಯವರು ಗುರದೇವ ಎಜುಕೇಶನ್ ಫೌಂಡೇಶನ್ ಎಂಬ ಸಂಸ್ಥೆ ನಡೆಸುತ್ತಿದ್ದು ಸದ್ರಿ Global Multi Speciality Hospital Pvt Ltd ಕಟ್ಟಡದ ಮಾಲೀಕರು ತಾನೇ ಎಂದು ಫಿರ್ಯಾಧಿದಾರರನ್ನು ನಂಬಿಸಿ, ಮೋಸ ಮತ್ತು ವಂಚನೆಗೈಯುವ ಉದ್ದೇಶದಿಂದ ಸುಳ್ಳು ಬಾಡಿಗೆ ಕರಾರು ಪತ್ರವನ್ನು ಒಂದು ತಿಂಗಳ ಒಳಗಡೆ ನೋಂದಾಣಿ ಮಾಡಿಕೊಡುವುದಾಗಿ ತಿಳಿಸಿ ಷರತ್ತು ಬರೆದು ಫಿರ್ಯಾಧಿದಾರರನ್ನು ನಂಬಿಸಿ ಸದ್ರಿ ಸುಳ್ಳು ಬಾಡಿಗೆ ಕರಾರು ಪತ್ರದಂತೆ ರಾಮ್ ಮೋಹನ್ ರೈ ರವರಿಗೆ ತಿಂಗಳಿಗೆ ರೂ. 10 ಲಕ್ಷದಂತೆ ಒಟ್ಟು 70.16 ಲಕ್ಷ ರೂಪಾಯಿ ಬಾಡಿಗೆಯ ರೂಪದಲ್ಲಿ ಫಿರ್ಯಾಧಿದಾರರು ನೀಡಿರುತ್ತಾರೆ. ಸದ್ರಿ ಕಟ್ಟಡದ ಮಾಲಿಕತ್ವದ ಡಾ. ಸುಶೀಲ್ ಜತ್ತಣ್ಣ ಮತ್ತು ಸುದರಾಮ್ ರೈ ರವರ ಹೆಸರಿನಲ್ಲಿ ಇದ್ದು ರಾಮ್ ಮೋಹನ್ ರೈ ರವರು ನಿಜವಾದ ಮಾಲೀಕರಲ್ಲ ಎಂದು ಗೊತ್ತಿದ್ದರೂ ಫಿರ್ಯಾ‍ಧಿರಾರಿಗೆ ಮೋಸ ಮತ್ತು ವಂಚನೆ ಗೈದು ದುರ್ಲಾಭಗೊಳಿಸುವ ಉದ್ದೇಶದಿಂದು ಸುಳ್ಳು ಬಾಡಿಗೆ ಕರಾರು ಪತ್ರ ಮಾಡಿ ಫಿರ್ಯಾಧಿದಾರರಿಂದ 40 ಲಕ್ಷ ರೂಪಾಯಿ ಮುಂಗಡ ಠೇವಣಿ ಮತ್ತು ತಿಂಗಳಿಗೆ ರೂ. 10 ಲಕ್ಷದಂತೆ  ಬಾಡಿಗೆ ಹಣ ಪಡೆದು ಫಿರ್ಯಾಧಿದಾರರಿಗೆ ರೂ. 70.16 ಲಕ್ಷ ರೂಪಾಯಿಯನ್ನು ವಂಚಿಸಿರುತ್ತಾರೆ. ಈ ರೀತಿ ರಾಮ್ ಮೋಹನ್ ರೈ ರವರು ಒಟ್ಟು ರೂ. 1,14,10,000/- ಹಣವನ್ನು ವಂಚನೆ ಮಾಡಿರುವುದಾಗಿದೆಂಬಿತ್ಯಾದಿ ಸಾರಾಂಶ

Urva PS       

ದಿನಾಂಕ 28.11.2023 ರಂದು 12-30 ಗಂಟೆಗೆ  ಚಿಲಿಂಬಿ  ಮೋರ್   ಸೂಪರ್   ಮಾರ್ಕೆಟ್  ಹತ್ತಿರ    ರಸ್ತೆ  ಬದಿಯಲ್ಲಿ  ಪ್ರೂಟ್ಸ್  ವ್ಯಾಪಾರ  ಮಾಡುವಲ್ಲಿ  ಯುವಕನೋರ್ವನು  ಅಕ್ರಮಣಕಾರಿ  ರೀತಿಯಲ್ಲಿ  ವರ್ತಿಸುತ್ತಿರು  ಬಗ್ಗೆ   ಮಾಹಿತಿ  ಬಂದ  ಮೇರೆಗೆ  ಪಿರ್ಯಾದಿದಾರರು  ಸದ್ರಿ  ಸ್ಥಳಕ್ಕೆ  ಸಿಬ್ಬಂದಿಗಳೊಂದಿಗೆ  ಹೋದಾಗ   ಅಲ್ಲಿ  ಓರ್ವ  ಯುವಕನು ಇದ್ದು ಯಾವುದೇ  ಅಮಲು  ಪದಾರ್ಥ  ಸೇವನೆ  ಮಾಡಿದ  ರೀತಿಯಲ್ಲಿದ್ದವನನ್ನು  ಠಾಣಗೆ  ಕರೆ  ತಂದು  ವಿಚಾರಿಸಿದಲ್ಲಿ ಮೊಹಮ್ಮದ್  ಸಲ್ಮಾನ್   ಪ್ರಾಯ  21  ವರ್ಷ  ವಾಸ:    ಎಂ  ಜೆ  ಎಂ  24  ಕಸಬ  ಬೇಂಗ್ರೇ  ಮಂಗಳೂರು  ಪ್ರಸ್ತುತ  ವಾಸ: ತೈಬಾ  ಟವರ್ಸ್  ಅಳಕೆ  ಮಂಗಳೂರು  ಎಂಬುದಾಗಿ  ತಿಳಿಸಿದ್ದು  ಆತನ್ನು   ಆತನು ಗಾಂಜಾ ಸೇವನೆ ಮಾಡಿರುವ ಮೇರೆಗೆ ಕುಂಟಿಕಾನ ಎ ಜೆ  ಆಸ್ಪತ್ರೆಯ  ವೈಧ್ಯಾಧಿಕಾರಿಯವರಲ್ಲಿ ಪರೀಕ್ಷೆಗೊಳಪಡಿಸಿದ್ದು, ವೈದ್ಯರು ಈತನ ಬಾಬ್ತು ಡ್ರಗ್ ಸ್ಕ್ರೀನಿಂಗ್ ಟೆಸ್ಟ್ ವರದಿಯಲ್ಲಿ OPINION : Tetraydracannabinoid :  POSITIVE  ಎಂಬುದಾಗಿ ಅಭಿಪ್ರಾಯ ನೀಡಿದ್ದು, ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿರುವುದರಿಂದ ಈತನ ಮೇಲೆ ಕಾನೂನು ಕ್ರಮ ಕೈಗೊಂಡಿರುವುದಾಗಿದೆ. ಎಂಬಿತ್ಯಾದಿ.

Traffic North Police Station                       

 ದಿನಾಂಕ 27-11-2023 ರಂದು ಪಿರ್ಯಾದಿ Vinyash Y K ದಾರರಾದ  ತನ್ನ ಬಾಬ್ತು Yamaha ಕಂಪನಿಯ MT15 Black Colour ನೊಂದಾವಣಿ ನಂಬರ್ ಪ್ಲೇಟ್ ಆಗದ ಹೊಸ ಬೈಕಿನಲ್ಲಿ ಸವಾರರಾಗಿ ಹಾಗೂ ಪಿರ್ಯಾದಿದಾರರ ಗೆಳಯನಾದ ಕೌಶೀಕ್ ಎಂಬುವವರನ್ನು ಸಹ ಸವಾರನಾಗಿ ಕುಳ್ಳಿರಿಸಿಕೊಂಡು ಮನೆಯಿಂದ ಮಂಗಳೂರು ಕಡೆಗೆ ಹೋಗುತ್ತಾ ರಾ.ಹೆ 66 ರ ಹೊನ್ನಕಟ್ಟೆ ಜಂಕ್ಷನ್ ಹತ್ತಿರ ತಲುಪುತ್ತಿದ್ದಂತೆ ಸಮಯ ಸುಮಾರು ರಾತ್ರಿ 10:15 ಗಂಟೆಗೆ ಮಂಗಳೂರು ಕಡೆಯಿಂದ KA-19-MF-3880 ನಂಬ್ರದ ಕಾರನ್ನು ಅದರ ಚಾಲಕ ಅರುಣ್ ಕುಮಾರ ಎಂಬಾತನು ಹೊನ್ನಕಟ್ಟೆ ಜಂಕ್ಷಿನಿನ ಓಪನ್ ಡಿವೈಡರ್ ಹತ್ತಿರ ಯಾವುದೇ ಸೂಚನೆ ನೀಡದೇ ಒಮ್ಮಲೇ ಕುಳಾಯಿಗುಡ್ಡೆ ಕಡೆಗೆ ತಿರಿಗಿಸಿದ ಪರಿಣಾಮ ಪಿರ್ಯಾದಿದಾರರ ಬೈಕಿನ ಮುಂಭಾಗಕ್ಕೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ಹಾಗೂ ಸಹಸವಾರ ಕೌಶಿಕ್ ರವರು ಬೈಕ್ ಸಮೇತ ಡಾಮಾರು ರಸ್ತೆಗೆ ಬಿದ್ದು, ಪಿರ್ಯಾದಿದಾರರಿಗೆ ಬಲ ಕಣ್ಣಿನ ಹುಬ್ಬಿನ ಮೇಲೆ ರಕ್ತಗಾಯವಾಗಿದ್ದು, ಎಡಕೈ ರಿಸ್ಟ್ನ ಹತ್ತಿರ ಮೂಳೆ ಮುರಿತದ ರಕ್ತಗಾಯವಾಗಿದ್ದು, ಸಹ ಸವಾರ ಕೌಶಿಕ್ ರವರಿಗೆ ಬಲ ಬದಿಯ ಹಣೆಯ ಮೇಲೆ ಗುದ್ದಿದ ಗಂಭೀರ ರಕ್ತಗಾಯವಾಗಿದ್ದು, ಡಿಕ್ಕಿ ಪಡಿಸಿದ ಕಾರಿನಲ್ಲಿಯೇ ಚಿಕಿತ್ಸೆ ಬಗ್ಗೆ ಎ.ಜೆ ಆಸ್ಪತ್ರೆಯಲ್ಲಿ ಒಳರೋಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ.

Konaje PS

ಪಿರ್ಯಾದಿ Abhishek ದಾರರು ದಿನಾಂಕ: 28-11-2023 ರಂದು ಮಾನ್ಯ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವಿಶೇಷ ಕಾರ್ಯ ನಿರ್ವಾಹಕ ದಂಡಾಧಿಕಾರಿಯವರ ಆದೇಶ ಸಂಖ್ಯೆ: 210/ಎಸ್.ಇ.ಎಮ್/ಮಂ.ನ/2023 ರಲ್ಲಿ ಸಮನ್ಸ್ ಜ್ಯಾರಿಯ ಬಗ್ಗೆ ತೆರಳಿ ಎದ್ರಿದಾರನಾದ ಮುಬಾರಕ್ ರಫೀ ಎಂಬಾತನಿಗೆ ಸಮನ್ಸ್ ಜ್ಯಾರಿ ಮಾಡಿ ನಂತರ ಠಾಣೆಗೆ ಬರುತ್ತಿದ್ದಾಗ ಸಮಯ ಸುಮಾರು 10.45 ಗಂಟೆಗೆ ಕೊಣಾಜೆ ಪದವು ಎಂಬಲ್ಲಿ ಮುಬಾರಕ್ ರಫೀ ಎಂಬಾತನು ಪಿರ್ಯಾದಿದಾರರನ್ನು ಹಿಂಬಾಲಿಸಿಕೊಂಡು ಬಂದು ತಡೆದು ನಿಲ್ಲಿಸಿ ಶರ್ಟಿನ  ಎಡ ಕಿಸೆಯಲ್ಲಿದ್ದ ಸದ್ರಿ ಸಮನ್ಸ್ ನ ಸ್ವೀಕೃತಿ ಪ್ರತಿಯನ್ನು ಕಿತ್ತುಕೊಂಡು ಬಾಯಿಯಲ್ಲಿ ಹಾಕಿ ಅಗೆದು ನೆಲಕ್ಕೆ ಹಾಕಿ ಕಾಲಿನಿಂದ ಹಿಸುಕಿರುತ್ತಾನೆ. ಪಿರ್ಯಾದಿದಾರರಿಗೆ “ಬ್ಯಾವರ್ಸಿ ನೀನು ಕಿತ್ತು ಹೋಗಿರುವ ಪೊಲೀಸ್ ಎಂದು  ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿದಲ್ಲದೇ ಕಾಲರ್ ಹಿಡಿದು ತಳ್ಳಿ ತಾನು ಬಂದಿದ್ದ ಬೈಕ್ ನಂ: KA-19-EW-3232 ನೇದರಲ್ಲಿ ಹೋಗಿರುತ್ತಾನೆ ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 28-11-2023 07:18 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080