ಅಭಿಪ್ರಾಯ / ಸಲಹೆಗಳು

CEN Crime PS

ಈ ಪ್ರಕರಣದ ಸಾರಾಂಶವೇನೆಂದರೆ ಈ ದಿನ ದಿನಾಂಕ 28-12-20236 ರಂದು ಸೆನ್ ಕ್ರೈಂ ಪೊಲೀಸ್ ಉಪ ನಿರೀಕ್ಷಕರಾದ ಓಂದಾಸ್ ರವರಿಗೆ ಬಂದ ಮಾಹಿತಿಯಂತೆ ಮಂಗಳೂರು ನಗರದ ಮುಕ್ಕ ಜಂಕ್ಷನ್ ಬಳಿ  ಒಬ್ಬಾತನು ಯಾವುದೋ ಅಮಲು ವಸ್ತುವನ್ನು ಸೇವಿಸಿ ನಶೆ ಹೊಂದಿ ಮುಕ್ಕ ಜಂಕ್ಷನ್ ಕುಳಿತುಕೊಂಡ  ಪ್ರಯಾಣಿಕರಿಗೆ ತೊಂದರೆ ಆಗುವ ರೀತಿಯಲ್ಲಿ ವರ್ತಿಸುತ್ತಿರುವುದಾಗಿ ತಿಳಿಸಿದ್ದು ಮಾಹಿತಿ ಬಂದ ಸ್ಥಳವಾದ ಮಂಗಳೂರು ನಗರದ ಮುಕ್ಕ ಜಂಕ್ಷನ್ ಬಳಿ ಹೋದಾಗ ಒಬ್ಬಾತನು ಯಾವುದೋ ಅಮಲು ವಸ್ತುವನ್ನು ಸೇವನೆ ಮಾಡಿದಂತೆ ಕಂಡುಬಂದಿದ್ದು ಸಿಬ್ಬಂದಿಯವರ ಸಹಾಯದಿಂದ ವಶಕ್ಕೆ ಪಡೆದುಕೊಂಡು ವಿಚಾರಿಸಲಾಗಿ ರಂಜಿತ್ (29) ತಂದೆ:ವಾಸುದೇವ ವಾಸ:#2-194,ಇಂದಿರಾ ನಗರ ಮನೆ, ಹಳೆಯಂಗಡಿ,ದ.ಕ.ಜಿಲ್ಲೆ ಎಂಬುದಾಗಿ ತಿಳಿಸಿದ್ದು, ಆತನನ್ನು  ಮಂಗಳೂರು ನಗರದ ಕುಂಟಿಕಾನದಲ್ಲಿರುವ ಎ.ಜೆ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯಾಧಿಕಾರಿಯವರು ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದಲ್ಲಿ ಆಪಾದಿತನು  ಮಾದಕ ವಸ್ತು ಸೇವನೆ ಮಾಡಿದ ಬಗ್ಗೆ ನೀಡಿದ ವೈದ್ಯಕೀಯ ಧೃಢಪತ್ರದೊಂದಿಗೆ ಠಾಣೆಗೆ ತಂದು ಆರೋಪಿತನ ಮೇಲೆ ಕಾನೂನು ಕ್ರಮ ಕೈಗೊಂಡಿರುವುದಾಗಿದೆ ಎಂಬಿತ್ಯಾದಿ.

 

Konaje PS

ಈ ಪ್ರಕರಣದ ಸಾರಾಂಶವೇನೆಂದರೆ ದಿನಾಂಕ:28-12-2023 ರಂದು ಪಿರ್ಯಾದಿದಾರರು ಇಲಾಖಾ ವಾಹನದಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಸಮಯ 14.30 ಗಂಟೆಗೆ ಉಳ್ಳಾಲ ತಾಲೂಕು ಬೆಳ್ಮ ಗ್ರಾಮದ ನಿತ್ಯಾನಂದನಗರ ಎಂಬಲ್ಲಿರುವ ಕರ್ನಾಟಕ ವುಡ್ ಮಿಲ್ ಬಳಿ ಅಮಲು ಪದಾರ್ಥ ಸೇವನೆ ಮಾಡಿ ನಶೆಯಲ್ಲಿದ್ದಂತೆ ಕಂಡು ಬಂದ ಅನೀಶ್ ಭಂಡಾರಿ, ಪ್ರಾಯ: 29 ವರ್ಷ, ತಂದೆ: ದಿ:ಪಟ್ಟಸ್ವಾಮಿ, ವಾಸ: 1-32 ಗಣೇಶ ಕೃಪ ಹೌಸ್, ಗೌರಿ ಶಂಕರ ಟೆಂಪಲ್, ಪಡುಪಣಂಬೂರು, ಮಂಗಳೂರು ಎಂಬಾತನನ್ನು ಮುಂದಿನ ಕ್ರಮದ  ಆತನನ್ನು ಮಂಗಳೂರು ಕೆ,ಎಸ್ ಹೆಗ್ಡೆ ಆಸ್ಪತ್ರೆಯ  ವೈಧ್ಯಾದಿಕಾರಿಯವರ ಮುಂದೆ ಹಾಜರು ಪಡಿಸಿ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಆರೋಪಿಯು COCAINE ಎಂಬ ಮಾದಕ ದ್ರವ್ಯ ಸೇವನೆ ಮಾಡಿರುವುದು ದೃಡಪಟ್ಟಿರುತ್ತದೆ ಎಂಬಿತ್ಯಾದಿ

Surathkal PS

ಈ ಪ್ರಕರಣದ ಸಂಕ್ಷೀಪ್ತ ಸಾರಾಂಶವೇನೆಂದರೆ, ದಿನಾಂಕ 27-12-2023 ರಂದು ಸಂಜೆ 20-30 ಗಂಟೆಗೆ ಪಿರ್ಯಾದಿದಾರರು ಪಿ.ಸಿ. 3075 ನೇ ರವರ ಜೊತೆ ಕೆ.ಎ-19 ಜಿ-551 ನೇದರಲ್ಲಿ ಚಾಲಕರಾಗಿ ಪಿ.ಸಿ. 353 ನೇ ರವರನ್ನು ಜತೆಗೆ ಕರೆದುಕೊಂಡು ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ಕರ್ತವ್ಯದ ಬಗ್ಗೆ ಹೊರಟಿದ್ದು, ಸಂಜೆ ಸುಮಾರು 21-00 ಗಂಟೆಗೆ ಅಗರಮೇಲು  ಬಂಟರ ಬವನದ ಹತ್ತಿರದ ಮೈದಾನದ ಬಳಿ ಇರುವ ಚರಂಡಿ ಕಟ್ಟೆಯ ಮೇಲೆ ಅಪಾದಿತ ಹರ್ಷೀತ್  ಎಂಬಾತನು ಸಿಗರೇಟು ಸೇವನೆ ಮಾಡುತ್ತಿದ್ದುದ್ದನ್ನು ಕಂಡು ವಾಹನ ನಿಲ್ಲಿಸಿದಾಗ ಸದ್ರಿ ವ್ಯಕ್ತಿ  ಸಿಗರೇಟು ತುಂಡನ್ನು ಬಿಸಾಡಿ ಓಡಲು ಪ್ರಯತ್ನಿಸಿದವನನ್ನು ಹಿಡಿದು ವಿಚಾರಿಸಿದಾಗ  ಆತನು ಮಾತನಾಡುವಾಗ ತೊದಲುತ್ತಿದ್ದು,  ಕಣ್ಣುಗಳು ನಶೆಯಲ್ಲಿದ್ದು, ನಡವಳಿಕೆಯಲ್ಲಿ ಮಾದಕ ವಸ್ತು ಸೇವಿಸಿದಂತೆ ಕಂಡು ಬಂದ ಹಿನ್ನಲೆಯಲ್ಲಿ ವಿಚಾರಣೆ ನಡೆಸಿದಾಗ ತಾನು ಸಿಗರೇಟಿನೊಳಗಡೆ ಗಾಂಜಾವನ್ನುಹಾಕಿ ಸೇವನೆ ಮಾಡುತ್ತಿದ್ದುದ್ದಾಗಿ ತಿಳಿಸಿದ ಮೇರೆಗೆ 21.30 ಗಂಟೆಗೆ ವಶಕ್ಕೆ ಪಡೆದು ಗಾಂಜಾ ಸೇವನೆ ಮಾಡಿದ ಬಗ್ಗೆ ಎ.ಜೆ ಆಸ್ಪತ್ರೆಯಿಂದ ತಪಾಸಣೆಗೆ ಒಳಪಡಿಸಿದಲ್ಲಿ  ವೈದ್ಯರು ತಮ್ಮ ವರದಿಯಲ್ಲಿ Tetrahydracannabinoid ( marijuana) POSITIVE ಎಂಬುದಾಗಿ ವರದಿ ನೀಡಿದ್ದು, ಸದ್ರಿ ವರದಿಯ ಅಧಾರದಲ್ಲಿ ಆರೋಪಿತ ಹರ್ಷೀತ್  ಎಂಬಾತನ ವಿರುದ್ದ ಕಲಂ: 27 (ಬಿ) ಎನ್.ಡಿ.ಪಿ.ಎಸ್. ಕಾಯ್ದೆ ಪ್ರಕಾರ ಕ್ರಮ ಕೈಗೊಳ್ಳಲು ವರದಿ ನೀಡಿದ್ದಾಗಿದೆ

ಇತ್ತೀಚಿನ ನವೀಕರಣ​ : 28-12-2023 09:08 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080