ಅಭಿಪ್ರಾಯ / ಸಲಹೆಗಳು

Crime Report in :Traffic North Police Station                     

ಪಿರ್ಯಾದಿ Halappa ದಾರರ ಮಗ ಶ್ರೀನಿವಾಸ (36) ಎಂಬವರು ದಿನಾಂಕ 27.01.2024 ರಂದು  ಕೊಟ್ಟಾರಚೌಕಿ ಬಳಿ ಆಕಾಶಭವನ ಕಡೆಯಿಂದ ಫ್ಲೈ ಓವರ್ ಕಡೆಗೆ ಉಡುಪಿಯಿಂದ ಮಂಗಳೂರು ಕಡೆಗೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 66 ಅನ್ನು   ಬೆಳಿಗ್ಗೆ ಸಮಯ ಸುಮಾರು 09:35  ಗಂಟೆಗೆ ನಡೆದುಕೊಂಡು ದಾಟುತ್ತಿರುವಾಗ ಕೂಳೂರು ಕಡೆಯಿಂದ ಕಾರು ನಂಬ್ರ KA-19MF-2281 ನೇಯದನ್ನು ಅದರ ಚಾಲಕ ಜಯರಾಮ ಎಂಬವರು ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು  ಬಂದು ಶ್ರೀನಿವಾಸರವರಿಗೆ ಡಿಕ್ಕಿ ಹೊಡೆದ ಪರಿಣಾಮ ಶ್ರೀನಿವಾಸರವರ ಬಲಕಾಲಿನ ಮೊಣಗಂಟಿನ ಬಳಿ ಮೂಳೆ ಮುರಿತದ ಗಾಯ, ಬಲ ದವಡೆಗೆ, ತುಟಿಗೆ, ಎಡಕಾಲಿನ ಹೆಬ್ಬೆರಳಿನ ಬಳಿ ರಕ್ತ ಗಾಯ, ಬಲಕೈ ಮೊಣಗಂಟಿನ ಬಳಿ ತರಚಿದ ರಕ್ತಗಾಯವಾಗಿದ್ದು ಗಾಯಾಳು ಶ್ರೀನಿವಾಸರವರು ಕುಂಟಿಕಾನ ಎ.ಜೆ. ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ವೆನ್ ಲಾಕ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ.

Konaje PS   

ಪಿರ್ಯಾದಿ Hanumanta Bhajantri ದಾರರು ಬೋಳಿಯಾರು ಶೇಖರ ಶೆಟ್ಟಿರವರ ಬಾಡಿಗೆ ಮನೆಯಲ್ಲಿ ತನ್ನ ಹೆಂಡತಿ ಶೋಭಾ  ಮತ್ತು ಮಕ್ಕಳಾದ ಕಾವೇರಿ ಮತ್ತು ಈರಮ್ಮ ಎಂಬವರೊಂದಿಗೆ ವಾಸವಾಗಿದ್ದು, ದಿನಾಂಕ 27-01-2024 ರಂದು ಮಧ್ಯಾಹ್ನ ಸುಮಾರು 12-00 ಗಂಟೆ ಸಮಯಕ್ಕೆ  ಪಿರ್ಯಾದಿದಾರರ ಪತ್ನಿ ಶೋಭಾ (26)ರವರು  ಬಿ.ಸಿ ರೋಡಿಗೆ ಹೋಗಿ ಬರುವುದಾಗಿ ತಿಳಿಸಿ ಮನೆಯಿಂದ ಹೋಗಿದ್ದು, ವಾಪಾಸು ಮನೆಗೆ ಬಾರದೇ ಊರಿಗೆ ಹೋಗದೇ ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆಗಳಲ್ಲಿ  ಹುಡುಕಾಡಿದ್ದು, ಅಲ್ಲದೇ ಊರಿಗೆ ಹೋಗಿರಬಹುದ್ದೆಂದು ತಿಳಿದು ಈ ದಿನ  ಊರಿನ ಸಂಬಂಧಿಕರಲ್ಲಿ, ಸ್ಣೇಹಿತರಲ್ಲಿ ವಿಚಾರಿಸಿದ್ದು, ಪತ್ತೆಯಾಗದೇ ಇದ್ದು, ಈ ದಿನ ಠಾಣೆಗೆ ಬಂದು ತಡವಾಗಿ ದೂರು ನೀಡಿರುವುದಾಗಿದೆ. ಕಾಣೆಯಾದ ಶೋಭಾಳನ್ನು ಪತ್ತೆ ಮಾಡಿಕೊಡಬೇಕಾಗಿ ಎಂಬಿತ್ಯಾದಿಯಾಗಿರುತ್ತದೆ

ಇತ್ತೀಚಿನ ನವೀಕರಣ​ : 29-01-2024 07:59 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080