ಅಭಿಪ್ರಾಯ / ಸಲಹೆಗಳು

ದೈನಂದಿನ ಅಪರಾಧ ವರದಿ

Mangalore West Traffic PS                

ಈ ಪ್ರಕರಣದ ಸಾರಾಂಶವೇನೆಂದರೆ ಪಿರ್ಯಾದಿ TEJAS ಇವರು ಮಂಗಳೂರು ನಗರ ಬಲ್ಮಠದಲ್ಲಿರುವ GOLD FINCH SHERLOCK PUB ನಲ್ಲಿ ಕೆಲಸ ಮಾಡಿಕೊಂಡಿದ್ದು ದಿನಾಂಕ;28-02-2024ರಂದು ಸ್ನೇಹಿತನ ಬಾಬ್ತು ಕೆ ಎ-19-ಈಕೆ-0262ನೇ ದ್ವಿಚಕ್ರವಾಹನವನ್ನು ಹಂಪನಕಟ್ಟೆ ಕಡೆಯಿಂದ ಎಲ್ ಹೆಚ್ ಹೆಚ್ ಮಾರ್ಗವಾಗಿ ಸಾರ್ವಜನಿಕ ರಸ್ತೆಯಲ್ಲಿ ಜ್ಯೋತಿ ಸರ್ಕಲ್ ಕಡೆಗೆ ಹೋಗುತ್ತಿರುವಾಗ ಸಮಯ ಸುಮಾರು  ಸಂಜೆ 06;00 ಗಂಟೆಗೆ ಸೇಂಟ್ ಅಲೋಶಿಯಸ್ ಕಾಲೇಜಿನ ಮೂರನೇ ಗೇಟಿನ ಬಳಿ ತಲುಪುತ್ತಿದಂತೆ, ಒಳಗಡೆ ರಸ್ತೆಯಿಂದ ಮುಖ್ಯರಸ್ತೆಗೆ ಕೆ ಎ-19-ಹೆಚ್ ಎಲ್-0888ನೇ ದ್ವಿಚಕ್ರ ವಾಹನ ಸವಾರ ವರುಣ್ ಎಂಬುವವರು ನಿರ್ಲಕ್ಷತನ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಚಲಾಯಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಪಡಿಸಿ ಪರಿಣಾಮ ಪಿರ್ಯಾದಿದಾರರು ದ್ವಿಚಕ್ರ ವಾಹನ ಸಮೇತ ರಸ್ತೆಗೆ  ಬಿದ್ದು ಎಡಭುಜದ ಬಳಿ ಮೂಳೆ ಮುರಿತದ ಗಾಯವಾಗಿರುತ್ತದೆ ಎಂಬಿತ್ಯಾದಿ.

 

Mangalore East Traffic PS                 

ಈ ಪ್ರಕರಣದ ಸಾರಾಂಶವೆನೆಂದರೆ, ಪಿರ್ಯಾದಿದಾರರಾದ ಶ್ರೀಮತಿ: ನಸೀಮಾ ರವರ ತಮ್ಮನಾದ ಹಫೀಝುದ್ದೀನ್ ರವರು ನಿನ್ನೆ ದಿನಾಂಕ: 28-02-2024 ರಂದು KA-19-EW-1439 ನಂಬ್ರದ ಮೋಟಾರು ಸೈಕಲಿನಲ್ಲಿ ಫ್ಲಡ್ ಲೈಟ್ ಮ್ಯಾಚ್ ನೋಡುವ ಸಲುವಾಗಿ ಸುರತ್ಕಲಿಗೆ ಹೋಗಿದ್ದವರು ಅಲ್ಲಿಂದ ವಾಪಾಸ್ ತನ್ನ ಮನೆಯ ಕಡೆಗೆ ಅದೇ ಮೋಟಾರ್ ಸೈಕಲಿನಲ್ಲಿ  ಬರುತ್ತಾ ಈ ದಿನ ದಿನಾಂಕ: 29-02-2024 ರಂದು ಬೆಳಗಿನ ಜಾವ ಸಮಯ ಸುಮಾರು 02:40 ಗಂಟೆಗೆ KPT ಜಂಕ್ಷನ್ ಸಮೀಪ ತಲುಪುತ್ತಿದ್ದಂತೆ  ಅವರ ಮೋಟಾರು ಸೈಕಲಿನ ಹಿಂದಿನಿಂದ ಅಂದರೆ ಕೊಟ್ಟಾರ ಚೌಕಿ ಕಡೆಯಿಂದ KA-19-ML-9003 ನಂಬ್ರದ ಕಾರನ್ನು ಅದರ ಚಾಲಕನಾದ ಹರ್ಷವರ್ಧನ್ ರೆಡ್ಡಿ ಎಂಬಾತನು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಹಫೀಝುದ್ದೀನ್ ರವರು ಸವಾರಿ ಮಾಡಿಕೊಂಡು ಬರುತ್ತಿದ್ದ ಮೋಟಾರ್ ಸೈಕಲಿನ  ಹಿಂಭಾಗಕ್ಕೆ ಢಿಕ್ಕಿ ಪಡಿಸಿದ ಪರಿಣಾಮ ಹಫೀಝುದ್ದೀನ್ ರವರ ಹೊಟ್ಟೆಯ ಒಳಭಾಗದಲ್ಲಿ ಗುದ್ದಿದ ಗಂಭೀರ ಸ್ವರೂಪದ ಒಳಗಾಯವಾಗಿದ್ದು,  ಮೇಲ್ತುಟಿ ಮತ್ತು ಕೆಳ ತುಟಿ ಮತ್ತು ಬಲಕೆನ್ನೆ ಊದಿಕೊಂಡಿದ್ದು, ಎರಡೂ ಕೈಗಳಿಗೆ ಅಲ್ಲಲ್ಲಿ ತರಚಿದ ಗಾಯವಾಗಿ ಚಿಕಿತ್ಸೆ ಬಗ್ಗೆ ಎ.ಜೆ. ಆಸ್ಪತ್ರೆಯಲ್ಲಿ ಒಳರೋಗಿಯಾಗಿ  ದಾಖಲಾಗಿರುವುದಾಗಿದೆ ಎಂಬಿತ್ಯಾದಿ

Konaje PS

ಪ್ರಕರಣದ ಸಾರಾಂಶವೆನೆಂದರೆ ಪಿರ್ಯಾದಿ ASIF IQBAL ಇವರ  ಅಣ್ಣನಾದ ಅಬ್ದುಲ್ಲಾ ಎಂಬುವವರು ದಿನಾಂಕ 28-02-2024 ರಂದು  ಸಂಜೆ ಸುಮಾರು 05.30 ಗಂಟೆ ಸಮಯಕ್ಕೆ ತಮ್ಮ ಹೋಟೆಲ್ ಆದ ಅರೇಬಿಯನ್ ಟ್ರೀಟ್ ಎಂಬಲ್ಲಿಗೆ  ಸ್ಕೂಟರಿನಲ್ಲಿ ಬಂದು ಅದರ ಕೀಲಿಯನ್ನು ಹೋಟೆಲಿನ ಕೆಲಸದವರಲ್ಲಿ ಕೊಟ್ಟು ರಾತ್ರಿ 10 ಗಂಟೆಗೆ ಬರುತ್ತೇನೆ ಎಂದು ಹೇಳಿ ಹೋಗಿದ್ದು ನಂತರ ಪಿರ್ಯಾದಿದಾರರು ಸುಮಾರು 09.30 ಗಂಟೆಗೆ ಹೋಟೆಲಿಗೆ ಬಂದಾಗ ವಿಷಯ ತಿಳಿದು ಕರೆ ಮಾಡಲಾಗಿ ಸ್ವೀಚ್ ಆಫ್ ಎಂದು ಬರುತ್ತಿದ್ದು, ಪದೆ ಪದೆ ಕರೆ ಮಾಡಿದರು ಸಂಪರ್ಕಕ್ಕೆ ಬಾರದೇ ಇದ್ದು, ಅನುಮಾನಗೊಂಡು ನೆರೆ ಹೊರೆಯವರಲ್ಲಿ ಸಂಬಂಧಿಕರಲ್ಲಿ  ವಿಚಾರಿಸಲಾಗಿ ಸುಳಿವು ಸಿಗದೇ ಇದ್ದು, ಅವರಿಗೆ ಮದುವೆ ಆಗಿ ಸುಮಾರು 15 ವರ್ಷಗಳಾಗಿದ್ದು ಈ ವರೆಗೂ ಮಕ್ಕಳಾಗದೆ ಇದ್ದು, ಅದರ  ಬತ್ತಡದಿಂದ ಇದೇ ವಿಚಾರಕ್ಕೆ ಬೇಸರಗೊಂಡು ಮನೆಬಿಟ್ಟು ಹೋಗಿರುವ ಸಾಧ್ಯತೆ ಇರುತ್ತದೆ. ಆದುದರಿಂದ ಕಾಣೆಯಾದ ನನ್ನ ಅಣ್ಣನಾದ ಅಬ್ದುಲ್ಲಾ ರವರನ್ನು ಹುಡುಕಿ ಕೊಡಬೇಕಾಗಿ ನೀಡಿದ ದೂರಿನ ಸಾರಾಂಶವಾಗಿದೆ

Ullal PS

ದಿನಾಂಕ.29-2-2024 ರಂದು 17:15  ಗಂಟೆಯ ಸಮಯಕ್ಕೆ  ಪಿರ್ಯಾದಿದಾರರಾದ ಉಳ್ಳಾಲ ಠಾಣಾ ಪಿಎಸ್ಐ  ಸಂತೋಶ್ ಕುಮಾರ್. ರವರು ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಉಳ್ಳಾಲ ಗ್ರಾಮದ ಕೋಟೆಪುರ ಪರಿಸರದ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಚೇತನ್  ಎಂಬಾತನು ನಿಷೇದಿತ ಮಾದಕ ವಸ್ತುವನ್ನು ಸೇವಿಸಿಕೊಂಡು ಸಾರ್ವಜನಿಕರಿಗೆ ತೊಂದರೆ ಆಗುವ ರೀತಿಯಲ್ಲಿ ವರ್ತಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದು. ಸಿಬ್ಬಂದಿಗಳ ಜೊತೆಯಲ್ಲಿ  ಸ್ಥಳಕ್ಕೆ ಹೋಗಿ  ಕೃತ್ಯವನ್ನು ಪತ್ತೆ ಮಾಡಿ. ಆರೋಪಿಯನ್ನು  ದೇರಳಕಟ್ಟೆ ಜಸ್ಟೀಸ್ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ವೈದ್ಯಾಧಿಕಾರಿಯವರ ಮುಂದೆ ತಪಾಸಣೆಗೆ ಒಳಪಡಿಸಿದಾಗ ಆರೋಪಿ ಚೇತನ್ ನು Tetrahydrocannabinol (A Derivative Of Cannabis) ಸೇವನೆ ಮಾಡಿರುವುದಾಗಿ ವೈದ್ಯಾಧಿಕಾರಿಯವರು ಅಭಿಪ್ರಾಯದೊಂದಿಗೆ ನೀಡಿದ  ದೃಢಪತ್ರವನ್ನು(ಟೊಕ್ಸಿಕೋಲಜಿ ಎನಲೈಸಿಸ್ ರಿಪೋರ್ಟ್) ಪಡೆದು ಆರೋಪಿ ಚೇತನ್ ನ ವಿರುದ್ಧ ದಾಖಲಿಸಿದ ಪ್ರಕರಣದ ಸಾರಾಂಶ ವಾಗಿರುತ್ತದೆ

Kankanady Town PS

ಈ ಪ್ರಕರಣದ ಸಂಕ್ಷೀಪ್ತ ಸಾರಾಂಶವೇನೆಂದರೆ,  ಮಂಗಳೂರು ನಗರದ ಮರೋಳಿ ಕೆ.ಇ.ಬಿ ಬಳಿ ಮಾದಕ   ವಸ್ತು ಗಾಂಜಾವನ್ನು ಸೇವನೆ ಮಾಡಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ ಆರೋಪಿ, ಮೊಹಮ್ಮದ್ ಫರ್ಹಾನ್ , ಪ್ರಾಯ: 23 ವರ್ಷ  ಎಂಬಾತನನ್ನು, ಮುಂದಿನ ಕ್ರಮದ ಬಗ್ಗೆ ಮಂಗಳೂರು ದೇರಳಕಟ್ಟೆ ಕೆ.ಎಸ್ ಹೆಗ್ಡೆ ಆಸ್ಪತ್ರೆಯ ವೈದ್ಯಾಧಿಕಾರಿಯವರ ಮುಂದೆ ಹಾಜರುಪಡಿಸಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ, ಆರೋಪಿಯು ನಿಷೇದಿತ ಮಾದಕ ವಸ್ತು ಗಾಂಜಾ ಸೇವನೆ ನಡೆಸಿರುವುದು ದೃಢಪಟ್ಟಿರುವುದರಿಂದ ಆರೋಪಿಯ ವಿರುದ್ದ ಕಲಂ-27 (ಬಿ) ಎನ್.ಡಿ.ಪಿ.ಎಸ್ ಆಕ್ಟ್ ರಂತೆ ಪ್ರಕರಣ  ದಾಖಲಿಸಿಕೊಂಡಿರುವುದಾಗಿದೆ

ಇತ್ತೀಚಿನ ನವೀಕರಣ​ : 01-03-2024 11:18 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080