ಅಭಿಪ್ರಾಯ / ಸಲಹೆಗಳು

CEN Crime PS Mangaluru City

ಫಿರ್ಯಾದಿದಾರರರು ಮಂಗಳೂರು ನಗರದ ಸುರತ್ಕಲ್ ನ NITK ಕಾಲೇಜಿನಲ್ಲಿ 3ನೇ ವರ್ಷದ ಮೆಕಾನಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿ ಯಾಗಿರುತ್ತಾರೆ ಅದೇ ಕಾಲೇಜಿನ 4ನೇ ವರ್ಷದ ವಿದ್ಯಾರ್ಥಿ ಯಶ್ ವರ್ಧನ್ ಜೈನ್ ಅಲಿಯಾಸ್ ವೈವಿಜೆ. ಎಂಬವರು  ಮಾರ್ಚ್ 2022 ರಿಂದ ವಾಟ್ಸಾಪ್ ಗ್ರೂಪಿನ ಮೂಲಕ ಕಾರ್ಯನಿರ್ವಹಿಸುತ್ತಿದ್ದು, ಅಲ್ಲಿ ಅವರು NITK ವಿದ್ಯಾರ್ಥಿಗಳಿಗೆ 1 ವಾರದಲ್ಲಿ 10% ರಂತೆ ಅತ್ಯಧಿಕ ಲಾಭಗಳನ್ನು  ನೀಡುವುದಾಗಿ ಭರವಸೆ ನೀಡಿದರು. ಅಕ್ಟೋಬರ್ ತಿಂಗಳಿನಲ್ಲಿ ಅವರು ಭಾರತದಾದ್ಯಂತ ಜನರನ್ನು ವಂಚಿಸುವ ಸಲುವಾಗಿ "YVJ ಇನ್ವೆಸ್ಟ್ಮೆಂಟ್ ಎಂಟರ್ಪ್ರೈಸ್" ಎಂಬ ಹೆಸರಿನ ಟೆಲಿಗ್ರಾಮ್ ಗ್ರೂಪನ್ನು  ಮಾಡಿದರು. ಅವರ ಗ್ರೂಪ್ ಪ್ರಸ್ತುತ 981 ಸದಸ್ಯರನ್ನು ಹೊಂದಿದೆ, ಹೆಚ್ಚಾಗಿ NITK ವಿದ್ಯಾರ್ಥಿಗಳು ಮತ್ತು ವಿವಿಧ ಕಾಲೇಜಿನ ವಿದ್ಯಾರ್ಥಿಗಳನ್ನು ಒಳಗೊಂಡಿದೆ.ಸದ್ರಿ ವಿಚಾರವನ್ನು ಪಿರ್ಯಾದಿದಾರರು ಸತ್ಯವೆಂದು ನಂಬಿ ತಾವು ಮತ್ತು  ತಮ್ಮ ಸಹಪಾಠಿಗಳು  ಸೇರಿ ದಿನಾಂಕ 26-06-2022 ರಿಂದ 03-01-2023 ರ ವರೆಗೆ  ಹಂತ ಹಂತವಾಗಿ ಒಟ್ಟು 27 ಲಕ್ಷ 96 ಸಾವಿರ ರೂ.ಗಳನ್ನು UPI ಮತ್ತು  IMPS ಮೂಲಕ ಆರೋಪಿತನ SBI  ಬ್ಯಾಂಕ್ ಖಾತೆ ಸಂಖ್ಯೆ 38690188197 ನೇದಕ್ಕೆ ಪಾವತಿಸಿರುವುದಾಗಿದೆ.ಆರಂಭದಲ್ಲಿ ಅವರು ಸದಸ್ಯರ ವಿಶ್ವಾಸವನ್ನು ಗಳಿಸಲು ಸುಮಾರು 1 ತಿಂಗಳ ಕಾಲ ಹೂಡಿಕೆಯ ಮೇಲೆ ಲಾಭಾಂಶವನ್ನು ನೀಡಿದರು. ನಂತರ ಅವರು ಯಾವುದೇ ಹೂಡಿಕೆ ಮಾಡಿದ ಹಣವನ್ನಾಗಲಿ ಹಾಗೂ  ಲಾಭಾಂಶವನ್ನಾಗಲಿ ನೀಡುವುದನ್ನು ನಿಲ್ಲಿಸಿದರು. ಈ ವಿಚಾರವಾಗಿ ಪಿರ್ಯಾದಿದಾರರು ಮತ್ತು ಅವನ ಸಹಪಾಠಿಗಳು ಆರೋಪಿತನಲ್ಲಿ ಕೇಳಿದಾಗ ಸಮಂಜಸವಲ್ಲದ ಕಾರಣವನ್ನು ನೀಡಿರುವುದ್ದಲ್ಲದೆ  2023 ಮಾರ್ಚ್ ತಿಂಗಳ ಮೊದಲು ನೀವು ಹೂಡಿಕೆಮಾಡಿದ ಹಿಂತಿರಿಗಿಸುತ್ತೇನೆ ಎಂಬ ಭರವಸೆ ನೀಡಿರುತ್ತಾರೆ. ಈ ರೀತಿಯಾಗಿ ಪಿರ್ಯಾದಿದಾರರು ಮತ್ತು ಆತನ ಸಹ ಪಾಠಿಗಳಿಂದ ಹಣ ಹೂಡಿಕೆ ಮಾಡಿಸಿ ಅತ್ಯದಿಕ ಲಾಭಂಶವನ್ನು ನೀಡುತ್ತೆನೆಂದು ಸುಮಾರು 27 ಲಕ್ಷದ 96 ಸಾವಿರ ರೂ.ಗಳನ್ನು ಹೂಡಿಕೆ ಮಾಡಿಸಿಕೊಂಡು ಮೋಸಮಾಡಿರುವುದಾಗಿದೆ.  ಆದುದ್ದರಿಂದ ಯಶ್ ವರ್ಧನ್ ಜೈನ್  ಎಂಬುವನ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಎಂಬಿತ್ಯಾದಿ..

 

2) ಪಿರ್ಯಾದಿ ವಿದೇಶದಲ್ಲಿದ್ದು, ಪ್ರಸ್ತುತ ಊರಿಗೆ ಬಂದಿರುವುದಾಗಿದೆ. ದಿನಾಂಕ 27-03-2023 ರಂದು ಬೆಳಿಗ್ಗೆ 11-15 ಗಂಟೆಗೆ ಯಾರೋ ಅಪರಿಚಿತರ ವ್ಯಕ್ತಿಯ +880-1867-652686 ಮೊಬೈಲ್  ನಂಬ್ರದಿಂದ ಪಿರ್ಯಾದಿದಾರರ ಮೊಬೈಲ್ ವಾಟ್ಸಾಫ್ ಖಾತೆಗೆ ಪಾರ್ಟ್ ಟೈಂ ಜಾಬ್ ಬಗ್ಗೆ ಸಂದೇಶ ಬರುತ್ತದೆ. ನಂತರ ಮೊದಲೇ  ಇದ್ದ ಟೆಲಿಗ್ರಾಂ ಆಪ್ ಗೆ ಮೆಸೇಜ್ ಮಾಡಲು ಪ್ರಾರಂಭಿಸಿದರು. ಅದರಲ್ಲಿ ಪಿರ್ಯಾದಿದಾರರಿಗೆ ಹಣವನ್ನು ಆನ್ ಲೈನ್ ಮೂಲಕ ದ್ವಿಗುಣ ಮಾಡಲು 4 ಟಾಸ್ಕ್ ಮಾಡಲು ತಿಳಿಸಿದ್ದು, ಮೊದಲಿಗೆ ಸದ್ರಿ ವ್ಯಕ್ತಿಯು ಪಿರ್ಯಾದಿದಾರರ ಖಾತೆಗೆ ರೂಪಾಯಿ 150/- ಹಣವನ್ನು ಹಾಕಿದರು. ನಂತರ 28-03-2023 ರಂದು ನನಗೆ ಟಾಸ್ಕ್ 1 ರಲ್ಲಿ ರೂಪಾಯಿ 12,000/- ವನ್ನು ಹಾಕಲು ತಿಳಿಸಿದರು. ಅದರಂತೆ ಪಿರ್ಯಾದಿದಾರರ ಖಾತೆ ಇರುವ ಯೂನಿಯನ್ ಬ್ಯಾಂಕ್ ಖಾತೆ ನಂಬ್ರ: ನೇದರಿಂದ ಗೂಗಲ್ ಪೇ ಮೂಲಕ ಪಾವತ್ತಿಸಿರುತ್ತಾರೆ.  ನಂತರ ಟಾಸ್ಕ್ -2 ರಲ್ಲಿ 40,000/- ಹಾಕಲು ತಿಳಿಸಿದರು. ಅದನ್ನು ಗೂಗಲ್ ಪೇ ಮೂಲಕ ಪಾವತ್ತಿಸಿರುತ್ತಾರೆ. ನಂತರ ಟಾಸ್ಕ್ -3 ರಲ್ಲಿ 1,00,000/- ಹಾಕಲು ತಿಳಿಸಿದರು. ಆಗ ಪಿರ್ಯಾದಿದಾರರು 40,000/- ಪಿರ್ಯಾದಿದಾರರ ಗೂಗಲ್ ಪೇ ಮೂಲಕ ಉಳಿದ 60,000/- ವನ್ನು ಪಿರ್ಯಾದಿದಾರರ ಪರಿಚಯದ ಐಸಿಐಸಿಐ ಖಾತೆ ನಂಬ್ರ: ನೇದರಿಂದ ನೆಟ್ ಬ್ಯಾಂಕಿಂಗ್ ಮೂಲಕ ಪಾವತ್ತಿಸಿರುತ್ತಾರೆ.  ನಂತರ ಅವರು ಕೊನೆಯ ಟಾಸ್ಕ್ ರಲ್ಲಿ 3,50,000/- ಹಾಕಲು ತಿಳಿಸಿದರು. ಆಗ ಪಿರ್ಯಾದಿದಾರರು ದಿನಾಂಕ 28-03-2023 ರಂದು ಮದ್ಯಾಹ್ನ 3-00 ಗಂಟೆಗೆ ಆರೋಪಿತರ ಯಸ್ ಬ್ಯಾಂಕ್ ಖಾತೆ ನಂಬ್ರ:007863400005597 ನೇದಕ್ಕೆ IMPS ಮೂಲಕ ಪಾವತ್ತಿಸಿದ್ದು, ನಂತರ ಆರೋಪಿತರು ಇನ್ನೂ 10 ಲಕ್ಷ ಹಣವನ್ನು ವರ್ಗಾಯಿಸಿದರೆ 17 ಲಕ್ಷ ಸಿಗುವುದಾಗಿ ತಿಳಿಸಿದಾಗ, ಪಿರ್ಯಾದಿದಾರರು ಮೋಸ ಹೋಗಿರುವುದು ತಿಳಿಯಿತು. ಹೀಗೆ ದಿನಾಂಕ 27-03-2023 ರಿಂದ 28-03-2023ರ ವರೆಗೆ ಹಂತ ಹಂತವಾಗಿ ಒಟ್ಟು ರೂಪಾಯಿ 5,02,000/- ಹಣವನ್ನು ಅರೋಪಿಗಳು ಪಿರ್ಯಾದಿದಾರರ ಖಾತೆಯಿಂದ ವರ್ಗಾಯಿಸಿಕೊಂಡು ಮೋಸ, ವಂಚನೆ ಮಾಡಿರುವುದಾಗಿದೆ ಎಂಬಿತ್ಯಾದಿ 

 

Mulki PS

ದಿನಾಂಕ 29-03-2023 ರಂದು  ಬೆಳಗ್ಗೆ 10-30  ಗಂಟೆಯ ಸಮಯಕ್ಕೆ ಮುಲ್ಕಿ ಪೊಲೀಸ್ ಠಾಣಾ ಪೊಲೀಸ್ ಉಪ ನಿರಕ್ಷಕರಾದ ವಿನಾಯಕ ತೋರಗಲ್  ಮತ್ತು  ಸಿಬ್ಬಂದಿಗಳಿಗೆ ಮಂಗಳೂರು ತಾಲೂಕು ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ  ಕಿನ್ನಿಗೋಳಿ ರಾಮ ರೆಸ್ಟೋರೆಂಟ್ ಬಳಿ ಸಾರ್ಜಜನಿಕ ಸ್ಥಳದಲ್ಲಿ ವ್ಯಕ್ತಿಯೊಬ್ಬರು ಸಾರ್ವಜನಿಕರಿಂದ ಹಣವನ್ನು ಪಡೆದುಕೊಂಡು ಮಟ್ಕಾ ದಂಧೆಯನ್ನು ಮಾಡುತ್ತಿದ್ದಾರೆಂದು, ದೊರೆತ ಖಚಿತ ಮಾಹಿತಿಯಂತೆ ಸಿಬ್ಬಂದಿಗಳೊಂದಿಗೆ  10-45 ಗಂಟೆಗೆ ಮುಲ್ಕಿ ತಾಲೂಕು ತಾಳಿಪಾಡಿ ಗ್ರಾಮದ ಕಿನ್ನಿಗೋಳಿಯ ರಾಮ ರೆಸ್ಟೋರೆಂಟ್ ಬಳಿ ತಲುಪಿದಾಗ ಕಿನ್ನಿಗೋಳಿಯಿಂದ ಮುಲ್ಕಿ ಕಡೆಗೆ ಹಾದು ಹೋಗುವ ರಾಜ್ಯ ಹೆದ್ದಾರಿ ರಸ್ತೆಯ ಬದಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಓರ್ವ ವ್ಯಕ್ತಿಯು ಒಂದು ಚೀಟಿಯಲ್ಲಿ ಬರೆಯುತ್ತಾ ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸುತ್ತಿರುವುದು ಕಂಡು ಪಿರ್ಯಾದಿದಾರರು ಹಾಗೂ ಸಿಬ್ಬಂದಿಗಳು ಕೂಡಲೆ ದಾಳಿ ಮಾಡಿ ಆತನನ್ನು ಸುತ್ತುವರಿದು ಹಿಡಿದಿಟ್ಟು ಆತನ ಹೆಸರು ವಿಳಾಸ ಕೇಳಲಾಗಿ ಆತನು ತನ್ನ ಹೆಸರು ಜಗದೀಶ ಶೆಟ್ಟಿಗಾರ ಪ್ರಾಯ: 42 ವರ್ಷ ವಾಸ: ಕೆರೆಕಾಡು ಮನೆ, ಬೆಳ್ಳಾಯೂರು ಗ್ರಾಮ, ಕೆಂಚನಕೆರೆ, ಮುಲ್ಕಿ ತಾಲೂಕು  ಎಂಬುದಾಗಿ ತಿಳಿಸಿದ್ದು, ಈತನು ಸುಲಭದಲ್ಲಿ ಹಣವನ್ನು ಗಳಿಸುವ ಉದ್ಧೇಶದಿಂದ ಸಾರ್ಜನಿಕರಿಂದ ಹಣವನ್ನು ಸಂಗ್ರಹಿಸಿ ಅದೃಷ್ಠದ ಆಟವಾದ ಮಟ್ಕಾ ದಂಧೆಯನ್ನು ನಡೆಸುತ್ತಿರುವುದಾಗಿ ಒಪ್ಪಿಕೊಂಡಿರುತ್ತಾನೆ. ಆತನಿಂದ ಮಟ್ಕಾ ಮಟ್ಕಾ ಜೂಜಾಟಕ್ಕೆ ಸಂಬಂಧಿಸಿದ ಈ ಕೆಳಕಂಡ ಸೊತ್ತುಗಳಾದ 1] ಮಟ್ಕಾ ಜೂಜಾಟಕ್ಕೆ ನಂಬ್ರವನ್ನು ಬರೆದ ಚೀಟಿ-01, 2] ಮಟ್ಕಾ ಸಂಖ್ಯೆ ಬರೆಯಲು ಉಪಯೋಗಿಸಿದ ಬಾಲ್ ಪಾಯಿಂಟ್ ಪೆನ್, 3] ಮಟ್ಕಾ ಜೂಜಾಟಕ್ಕೆ ಸಂಗ್ರಹಿಸಿದ ನಗದು ಹಣ 520/- ರೂಪಾಯಿ ನೇದನ್ನು ಸ್ವಾಧೀನಪಡಿಸಿಕೊಂಡು ಮುಂದಿನ ಕ್ರಮದ ಬಗ್ಗೆ ಆರೋಪಿ ಮತ್ತು ಸ್ವಾಧೀನಪಡಿಸಿದ ಸೊತ್ತನ್ನು ವರದಿಯೊಂದಿಗೆ ಮುಲ್ಕಿ ಠಾಣೆಗೆ ಹಾಜರು ಪಡಿಸಿರುವುದಾಗಿದೆ ಎಂಬಿತ್ಯಾದಿ

ಇತ್ತೀಚಿನ ನವೀಕರಣ​ : 21-08-2023 12:22 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080