ಅಭಿಪ್ರಾಯ / ಸಲಹೆಗಳು

Traffic South Police Station                        

ದಿನಾಂಕ 29/03/2024 ರಂದು  ಫಿರ್ಯಾದಿ Mohammed Safwan ಇವರ  ದೊಡ್ಡಪ್ಪನಾದ ಅಬ್ದುಲ್ ಬಶೀರ್ ರವರು  ರಾತ್ರಿ ಸುಮಾರು 9.00 ಗಂಟೆಗೆ ಕಲ್ಲಾಪು ನ ಬ್ಲಾಕ್ ಸುಗರ್ ಹೋಟೇಲ್ ಬಳಿ ರಾಷ್ಟ್ರೀಯ ಹೆದ್ದಾರಿಯ ರಸ್ತೆ ಮಧ್ಯದ ಡಿವೈಡರ್ ಕಡೆಯಿಂದ ಬ್ಯ್ಲಾಕ್  ಸುಗರ್ ಹೊಟೇಲ್ ಕಡೆಗೆ ತೊಕ್ಕೋಟ್ಟು ಕಡೆಯಿಂದ ಪಂಪ್ ವೆಲ್ ಕಡೆಗೆ ಹೋಗುವ ರಾಷ್ಟ್ರೀಯ ಹೆದ್ದಾರಿ 66ರ ಏಕ ಮುಖ ರಸ್ತೆಯನ್ನು ದಾಟುತ್ತಿರುವಾಗ ತೊಕ್ಕೋಟು ಕಡೆಯಿಂದ KL-14-Z-4761 ನೇ ನಂಬ್ರದ ಮೋಟಾರ್ ಸೈಕಲ್ ನಲ್ಲಿ ಅದರ ಸವಾರನಾದ ರಾಮ್ ರಾಜ್ ,(30)  ತಂದೆ: ಮುನ್ನಾಲಾಲ್ ಎಂಬಾತನು ಸಹಸವಾರರಾಗಿ ಸೂರಜ್ ( 28), ಅಜಯ್ (26)  ಹಾಗೂ ರಾಮ್ ರಾಜ್ ( 23)   ಎಂಬವರನ್ನು ಕುಳ್ಳಿರಿಸಿಕೊಂಡು ಮೋಟಾರ್ ಸೈಕಲ್ ನ್ನು ತೊಕ್ಕೋಟು ಕಡೆಯಿಂದ ಪಂಪ್ ವೆಲ್ ಕಡೆಗೆ ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ರಸ್ತೆ ದಾಟುತ್ತಿದ್ದ ಅಬ್ದುಲ್ ಬಶೀರ್ ರವರಿಗೆ ಡಿಕ್ಕಿ ಹೊಡೆದ ಪರಿಣಾಮ ಫಿರ್ಯಾದಿದಾರರ ದೊಡ್ಡಪ್ಪನಾದ ಅಬ್ದುಲ್ ಬಶೀರ್ ಹಾಗೂ ಮೋಟಾರ್ ಸೈಕಲ್ ಸವಾರ ಹಾಗೂ ಮೋಟಾರ್ ಸೈಕಲ್ ಸಹ ಸವಾರರು ಡಾಮಾರು ರಸ್ತೆಗೆ ಬಿದ್ದು ಗಾಯಗೊಂಡಿರುವುದಾಗಿ ತಿಳಿಸಿದರು, ಅಪಘಾತ ಪಡಿಸಿದ ಮೋಟಾರ್ ಸೈಕಲ್ ಸವಾರನಾದ  ರಾಮ್ ರಾಜ್ ನು ಇಂಡಿಯಾನಾ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಆತನಿಗೆ ಮುಖ, ಎದೆ, ಎಡಕೈ , ಸೊಂಟಕ್ಕೆ ಕಾಲಿಗೆ ಗಾಯವಾಗಿರುತ್ತದೆ, ಮೋಟಾರ್ ಸೈಕಲಿನ ಸಹಸವಾರರಿಗೆ ಕೂಡ ಸಣ್ಣ ಪುಟ್ಟ ತರಚಿದ ಗಾಯವಾಗಿರುತ್ತದೆ ಎಂಬಿತ್ಯಾದಿ,

 

Mulki PS

ಪಿರ್ಯಾದಿ Smt Sandhya J Karker ಇವರ ಮಗನ ಮದುವೆಯ ಕಾರ್ಯಕ್ರಮವು ದಿನಾಂಕ: 15-02-2024 ರಿಂದ ದಿನಾಂಕ: 19-02-2024 ರವರೆಗೆ ನಡೆದಿದ್ದು, ದಿನಾಂಕ: 19-02-2024 ರಂದು ಪಿರ್ಯದಿದಾರರು ಮದುವೆಯ ಸಮಯ ಧರಿಸಿದ್ದ ಒಂದು ಜೊತೆ ಚಿನ್ನದ ಬಳೆ- 2, ಒಂದು ಜೊತೆ ಚಿನ್ನದ ಕಿವಿಯೋಲೆ- 2 ಯನ್ನು ಪಿರ್ಯಾದಿದಾರರು ಮಲಗುವ ಕೋಣೆಯಲ್ಲಿ ಕಪಾಟಿನ ಲಾಕರ್ನಲ್ಲಿ ಇಟ್ಟಿದ್ದು, ದಿನಾಂಕ:20-02-2024 ರಂದು ಕಪಾಟಿನ ಲಾಕರ್ನಲ್ಲಿಟ್ಟಿದ್ದ ಒಂದು ಜೊತೆ ಚಿನ್ನದ ಬಳೆ-2, ಒಂದು ಜೊತೆ ಚಿನ್ನದ ಕಿವಿಯೋಲೆ -2 ಇವುಗಳ ಪೈಕಿ ಒಂದು ಜೊತೆ ಚಿನ್ನದ ಬಳೆ-2, ಚಿನ್ನದ ಕಿವಿಯೋಲೆ -1 ಕಳವಾಗಿದ್ದು, ಕಪಾಟಿನಲ್ಲಿ ಮತ್ತು ಮನೆಯಲ್ಲಿ ಈವರೆಗೆ ಹುಡುಕಾಡಿದಾಗ ಸಿಕ್ಕಿರುವುದಿಲ್ಲ. ಪಿರ್ಯಾದಿದಾರರು ಇಟ್ಟಿದ್ದ ಚಿನ್ನಭಾರಣವನ್ನು ಯಾರೋ ಕಳ್ಳರು ಕಳವುಮಾಡಿಕೊಂಡು ಹೋಗಿದ್ದು ಕಳವುಮಾಡಿದ ಚಿನ್ನಾಭರಣಗಳ ಅಂದಾಜು ತೂಕ 30 ಗ್ರಾಂ ಆಗಿದ್ದು, ಒಟ್ಟು ಚಿನ್ನಾಭರಣಗಳ ಅಂದಾಜು ಮೌಲ್ಯ 1,93,000/- ರೂ ಆಗಬಹುದು.  ಎಂಬಿತ್ಯಾದಿಯಾಗಿದೆ

 

Konaje PS        

ಈ ಪ್ರಕರಣದ ಸಾರಾಂಶವೆನೇಂದರೆ ಪಿರ್ಯಾದಿ Ahammed Nabeelಇವರು  ದಿನಾಂಕ: 01-03-2024 ರಂದು ರಾತ್ರಿ 12.00 ಗಂಟೆಗೆ ಉಳ್ಳಾಲ ತಾಲೂಕು ಬೆಳ್ಮಾ ಗ್ರಾಮದ ದೇರಳಕಟ್ಟೆ ಮೊರ್ ಸೂಪರ್ ಮಾರ್ಕೆಟ್ ನ ಬಿಲ್ಡಿಂಗ್ ನ ಹಿಂಬದಿಯಲ್ಲಿ ನಿಲ್ಲಿಸಿದ್ದ ಕೆಎಲ್-14-ಎಡಿ-1780 ನೇ ಸ್ಕೂಟರ್ ನ್ನು ದಿನಾಂಕ: 01-03-2024 ರಂದು 02.00 ಗಂಟೆಯ ಮಧ್ಯಾವಧಿಯಲ್ಲಿ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಈ ಬಗ್ಗೆ ಸ್ಥಳೀಯವಾಗಿ ಹುಡುಕಾಡಿ ತಡವಾಗಿ ದೂರು ನೀಡಿರುವುದಾಗಿದೆ. ಕಳವಾದ ಸ್ಕೂಟರ್ ನ ಅಂದಾಜು ಮೌಲ್ಯ 60,000/- ರೂ ಆಗಬಹುದು ಎಂಬಿತ್ಯಾದಿ.

 

Mangalore South PS

ಪ್ರಕರಣದ ಸಂಕ್ಷಿಪ್ತ ಸಾರಾಂಶವೇನೆಂದರೆ, ಪ್ರಕರಣದ ಪಿರ್ಯಾದುದಾರರಾದ ರಘು ಎಂಬವರು ಸುಮಾರು 15 ದಿನಗಳ ಹಿಂದೆ ಮಂಗಳೂರಿಗೆ ಕೆಲಸದ ಬಗ್ಗೆ ಬಂದಿದ್ದು, ನಿನ್ನೆ ದಿನ ದಿನಾಂಕ: 28-03-2024 ರಂದು ಕೂಲಿ ಕೆಲಸ ಮುಗಿಸಿ ದಕ್ಷಿಣ ದಕ್ಕೆಯ ಬಳಿ ಹೋಗುತ್ತಿದ್ದ ಸಮಯ ಲೀಡ್ಸ್ ಬಾರ್ ಬಳಿ ತಲುಪಿದಾಗ ರಾತ್ರಿ ಸುಮಾರು 9:00 ಗಂಟೆಗೆ ಯಾರೋ ಇಬ್ಬರೂ ವ್ಯಕ್ತಿಗಳು ಪಿರ್ಯಾದುದಾರರ ಮೇಲೆ ವಿನಾಕಾರಣ ಜಗಳ ತೆಗೆದು ಒಬ್ಬ ವ್ಯಕ್ತಿ ಕೈಯಿಂದ ಹಾಗೂ ಮತ್ತೊಬ್ಬ ವ್ಯಕ್ತಿ ಅಲ್ಲಿಯೇ ಬಿದ್ದಿದ್ದ ರೀಪ್ ನಿಂದ ತೆಲೆಗೆ, ಕೈ ಹಾಗೂ ಕಾಲಿಗೆ ಹಲ್ಲೆ ಮಾಡಿರುತ್ತಾನೆ, ಹಲ್ಲೆಯಿಂದ ಪಿರ್ಯಾದುದಾರರ ತಲೆಗೆ ರಕ್ತಗಾಯ, ಎರಡೂ ಕೈಗಳಿಗೆ ಗುದ್ದಿದ ಗಾಯ ಹಾಗೂ ಎಡ ಕಾಲಿಗೆ ತರಚಿದ ಗಾಯವಾಗಿರುತ್ತದೆ ನಂತರ ಅಲ್ಲಿ ಸೇರಿದ್ದ ಜನರ ಸಹಾಯದಿಂದ 108 ಅಂಬ್ಯೂಲೆನ್ಸ್ ನಲ್ಲಿ ಚಿಕಿತ್ಸೆಯ ಬಗ್ಗೆ ವೆನ್ಲಾಕ್ ಆಸ್ಪತ್ರಗೆ ಕಳುಹಿಸಿಕೊಟ್ಟಿದ್ದು, ವೆನ್ಲಾಕ್ ಆಸ್ಪತ್ರೆಯಲ್ಲಿ ಪರೀಕ್ಷಿಸಿದ ವೈಧ್ಯರು ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿಯಾಗಿರುತ್ತದೆ

ಇತ್ತೀಚಿನ ನವೀಕರಣ​ : 31-03-2024 04:42 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080