ಅಭಿಪ್ರಾಯ / ಸಲಹೆಗಳು

Crime Reports: CEN Crime PS Mangaluru City

ಪಿರ್ಯಾದಿದಾರರು ದಿನಾಂಕ 20-02-2023 ರಂದು ತನ್ನ ವಾಸದ ಮನೆಯಲ್ಲಿದ್ದ ಸಮಯ ಫೇಸ್ ಬುಕ್ ನ್ನು ಸ್ಕ್ರೋಲ್ ಮಾಡುವ  ಸಮಯ work from home with Amazon  ಎಂಬುದಾಗಿ ಆಡ್ ಲಿಂಕ್  ಒಂದು ಬಂದಿದ್ದು ಪಿರ್ಯಾದಿದಾರರು  ಸದ್ರಿ ಆಡ್ ನ್ನು ಕ್ಲಿಕ್ ಮಾಡಿದಾಗ ವಾಟ್ಸಪ್ ಪೇಜ್ ಒಂದು ತೆರೆದಿದ್ದು ಅದರ ನಂಬ್ರ 7970831797 ಆಗಿರುತ್ತದೆ. ಸದ್ರಿ ನಂಬ್ರದಿಂದ https://amazon 456.com/index/user/register/invite_code/KPV2RU.html ಎಂಬ ಲಿಂಕ್ ಒಂದನ್ನು ಕಳುಹಿಸಿದ್ದು ಪಿರ್ಯಾದಿದಾರರು ದಿನಾಂಕ 21-02-2023 ಬೆಳಿಗ್ಗೆ 9.00 ಗಂಟೆ ಸಮಯಕ್ಕೆ ಸದ್ರಿ ಲಿಂಕನ್ನು ಕ್ಲಿಕ್ ಮಾಡಿ ರಿಜಿಸ್ಟಾರ್ ಬಗ್ಗೆ ರೂ.200/-ನ್ನು ಅದರಲ್ಲಿಯೇ ಪಾವತಿಸಿರುತ್ತಾರೆ. ನಂತರದಲ್ಲಿ ಟೆಲಿಗ್ರಾಂ ನಲ್ಲಿ ( ಪ್ರೊಫೈಲ್ ಹೆಸರು ತಿಳಿದಿರುವುದಿಲ್ಲ) ಪಿರ್ಯಾದಿದಾರರನ್ನು ಸಂಪರ್ಕಿಸಿದ ಆರೋಪಿತನು ಪಿರ್ಯಾದಿದಾರರಿಗೆ ಹಲವು ಟಾಸ್ಕನ್ನು ನೀಡಿ ಕಮಿಷನ್ ಪಡೆದುಕೊಳ್ಳುವಂತೆ ತಿಳಿಸಿ ಪಿರ್ಯಾದಿದಾರರಿಂದ ರೂ.500/- ನ್ನು ತನ್ನ ಖಾತೆಗೆ ವರ್ಗಾಯಿಸಿದ್ದು  ನಂತರ  ದಿನಾಂಕ 23-02-2023ರವರೆಗೆ ಪಿರ್ಯಾದಿದಾರರಿಗೆ ಟಾಸ್ಕ್ ನೆಪದಲ್ಲಿ ಇನ್ ಕಂ ಟಾಕ್ಸ್, ಕಮಿಷನ್ ಬಗ್ಗೆ ಹೀಗೆ ಹಲವಾರು ಕಾರಣಗಳನ್ನು ತಿಳಿಸಿ ಪಿರ್ಯಾದಿದಾರರ  ಹೆಚ್.ಡಿ.ಎಫ್.ಸಿ ಬ್ಯಾಂಕ್ ಖಾತೆ ಸಂಖ್ಯೆ ನೇ ದರಿಂದ ಹಂತ ಹಂತವಾಗಿ ಒಟ್ಟು ರೂ. 1,45,225/- ತನ್ನ ಖಾತೆಗೆ ವರ್ಗಾಯಿಸಿರುತ್ತಾರೆ ಹೀಗೆ ತನಗೆ work from home with amazon ನಲ್ಲಿ ಟಾಸ್ಕ್ ಅಪ್ ಲೋಡಿಂಗ್ ಕೆಲಸ ಕೊಡಿಸುವುದಾಗಿ ಆಮಿಷವೊಡ್ಡಿ ಪಿರ್ಯಾದಿದಾರರ  ಬ್ಯಾಂಕ್ ಖಾತೆ ಯಿಂದ ಹಂತ ಹಂತವಾಗಿ ಒಟ್ಟು ರೂ. 1,45,225/-ನೇ ದನ್ನು ತನ್ನ ಖಾತೆಗೆ ಅನಧಿಕೃತವಾಗಿ ವರ್ಗಾಯಿಸಿರುವ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವರೇ ಕೋರಿಕೆ ಎಂಬಿತ್ಯಾದಿ.

Urva PS    

ಪಿರ್ಯಾದಿ B P  HARISH  KUMAR ಉರ್ವಾ ಮಾರಿಗುಡಿ  ಹತ್ತಿರ,   ಪಿರ್ಯಾದಿದಾರರು  ವಾಣಿಜ್ಯ ಕಟ್ಟಡವನ್ನು ಹೊಂದಿದ್ದು,  ಆರೋಪಿತೆಯು ಪಿರ್ಯಾದಿದಾರರ  ಕಟ್ಟಡದಲ್ಲಿ  ಬಾಡಿಗೆಯಲ್ಲಿದ್ದು, ಸುಮಾರು  ಎರಡುವರೆ  ವರ್ಷಗಳಿಂದ ಪಿರ್ಯಾದಿದಾರರಿಗೆ  ಬಾಡಿಗೆ ಹಣವನ್ನು  ಪಾವತಿಸದೇ ಮೋಸ  ಮಾಡಿದ್ದು,  ಈ  ಬಗ್ಗೆ ಪ್ರಶ್ನಿಸಲು ಹೋದ  ಪಿರ್ಯಾದಿದಾರರ ಮೇಲೆ ಲೈಂಗಿಕ ದೌರ್ಜನ್ಯ  ಎಸಗಿರುವ  ಕುರಿತು  ಸುಳ್ಳು  ಕಥೆ  ಸೃಷ್ಠಿಸಿ  ಅಪ  ಪ್ರಚಾರ  ಮಾಡುವುದಾಗಿ  ಬೆದರಿಕೆ  ಹಾಕಿ  ಈ  ವರೆಗೆ  ಪಿರ್ಯಾದಿದಾರರಿಂದ  ಸುಮಾರು  4500000/-( ನಲವತೈದು ಲಕ್ಷ ರೂಪಾಯಿ ಮಾತ್ರ )   ರೂಪಾಯಿ   ಹಣವನ್ನು  ಪಡೆದುಕೊಂಡಿರುತ್ತಾಳೆ.  ಮುಂದುವರೆದು  ಆರೋಪಿ  ಮತ್ತು  ಆಕೆಯ ಮಗ     ಪಿರ್ಯಾದಿದಾರರ  ಮನೆಗೆ  ಅಕ್ರಮ ಪ್ರವೇಶ  ಮಾಡಿ  ಪಿರ್ಯಾದಿದಾರರಿಗೆ ಮತ್ತು  ಅವರ  ಹೆಂಡತಿಗೆ   ಕೈಗಳಿಂದ ಹಲ್ಲೆ  ನಡೆಸಿ.  ಅವಾಚ್ಯ  ಶಬ್ದಗಳಿಂದ  ಬೈದು  ಪಿರ್ಯಾದಿದಾರರ  ವಿರುದ್ದ  ಲೈಂಗಿಕ ದೌರ್ಜನ್ಯ  ಪ್ರಕರಣವನ್ನು  ದಾಖಲಿಸಿ  ಜೈಲಿಗೆ ಹಾಕುವುದಾಗಿ ಬೆದರಿಕೆ  ಹಾಕಿರುತ್ತಾರೆ  ಎಂಬಿತ್ಯಾದಿ 

Ullal PS

ಪಿರ್ಯಾದಿ Raveendra Rajeeva Nayak  ಪಂಚಾಯತ್ ಅಭಿವೃದ್ದಿ ಅಧಿಕಾರಿಯಾಗಿರುವ ಮುನ್ನೂರು ಗ್ರಾಮ ಪಂಚಾಯತ್ ನ ವ್ಯಾಪ್ತಿಯ ಭಂಡಾರ ಬೈಲು ಪ್ರದೇಶದಲ್ಲಿ ಘನ ತ್ಯಾಜ್ಯ ಘಟಕ ಕಾರ್ಯ ನಿರ್ವಹಿಸುತ್ತಿರುತ್ತದೆ.  ಸದ್ರಿ ಘಟಕದ ಕೋಣೆಯಲ್ಲಿ ಇರಿಸಿದ್ದ ಸಿಸಿಟಿವಿ ಕ್ಯಾಮರದ ಡಿ.ವಿ.ಆರ್, ಮೋನಿಟರ್, ಯು.ಎಸ್.ಬಿ ಬ್ಯಾಟರಿ, ಎಂಟು ಬೀದಿ ದೀಪ ಟ್ಯೂಬ್ಲೈಟ್, ಐದು ಎಲ್.ಇ.ಡಿ ಬೀದಿ ದೀಪ ಹಾಗೂ ಬೀದಿ ದೀಪ ದುರಸ್ಥಿ , ಪೈಪ್ ಲೈನ್ ದುರಸ್ಥಿಯ ಗುಜರಿ ಸ್ವತ್ತುಗಳನ್ನು  ಇರಿಸಿದ್ದು ದಿನಾಂಕ 22-04-2023 ರ ಸಂಜೆ 5-00 ಗಂಟೆಯಿಂದ ದಿನಾಂಕ 28-04-2023 ರ ಬೆಳಿಗ್ಗೆ 08-00 ಗಂಟೆಯ ಮಧ್ಯಾವಧಿಯಲ್ಲಿ ಯಾರೋ ಕಳ್ಳರು ಘನ ತ್ಯಾಜ್ಯ ಘಟಕದ ಬೀಗವನ್ನು ಹೊಡೆದು ಒಳ ಪ್ರವೇಶಿಸಿ ಸಿಸಿಟಿವಿ ಕ್ಯಾಮರದ ಡಿ.ವಿ.ಆರ್, ಮೋನಿಟರ್, ಯು.ಎಸ್.ಬಿ ಬ್ಯಾಟರಿ, ಎಂಟು ಬೀದಿ ದೀಪ ಟ್ಯೂಬ್ಲೈಟ್, ಐದು ಎಲ್.ಇ.ಡಿ ಬೀದಿ ದೀಪ  ಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ . ಸ್ವತ್ತುಗಳ ಅಂದಾಜು ಮೌಲ್ಯ 35,060/- ಆಗಿರುತ್ತದೆ ಎಂಬಿತ್ಯಾದಿ ಸಾರಾಂಶ.

CEN Crime PS Mangaluru City

ಪಿರ್ಯಾದಿ  ದಿನಾಂಕ 19-04-2023 ಮಧ್ಯಾಹ್ನ 12.00 ಗಂಟೆಗೆ 9233673183  ನೇ ನಂಬ್ರದಿಂದ ಪಿರ್ಯಾದಿದಾರರಿಗೆ ಕರೆಯೊಂದು ಬಂದಿದ್ದು ಪಿರ್ಯಾದಿದಾರರು ಕೆಲಸದಲ್ಲಿದ್ದ ಕಾರಣ ಕರೆಯನ್ನು ಸ್ವೀಕರಿಸದೇ ಇದ್ದು ಬಳಿಕ ಎರಡು ದಿನಗಳ ನಂತರ  ದಿನಾಂಕ 21-04-2023 ರಂದು  ಮಧ್ಯಾಹ್ನ ಸಮಯ ಸುಮಾರು 1.00 ಗಂಟೆಗೆ ಪಿರ್ಯಾದಿದಾರರು ಸದ್ರಿ 9233673183  ನೇ ನಂಬ್ರಕ್ಕೆ ಕರೆ ಮಾತನಾಡಿದಲ್ಲಿ  ಕರೆಯನ್ನು ಸ್ವೀಕರಿಸಿದ ವ್ಯಕ್ತಿಯು ತಾನು  ಕೋಟಾಕ್ ಮಹೀಂದ್ರ ಬ್ಯಾಂಕ್ ನಿಂದ ಮಾತನಾಡುತ್ತಿರುವುದಾಗಿ ತಿಳಿಸಿ ಹೊಸ  ಕ್ರೆಡಿಟ್ ಕಾರ್ಡ್ ನ ಆಕ್ಟಿವೇಷನ್ ಬಗ್ಗೆ ಕರೆ ಮಾಡಿರುವುದಾಗಿ ನಂಬಿಸಿ ಪಿರ್ಯಾದಿದಾರರಿಂದ ಕೋಟಾಕ್ ಮಹೀಂದ್ರ ಆಪ್ ಡೌನ್ ಲೋಡ್ ಮಾಡಿಸಿ ನಂತರ ಓ.ಟಿ.ಪಿ ವಿವರ ಪಡಕೊಂಡು  ಪಿರ್ಯಾದಿದಾರರ ಕೋಟಾಕ್ ಮಹೀಂದ್ರ  ಕ್ರೆಡಿಟ್ ಕಾರ್ಡ್ ನಂಬ್ರ ನೇದರಿಂದ ಹಂತ ಹಂತವಾಗಿ  ಒಟ್ಟು 1,50,081/- ತನ್ನ ಖಾತೆಗೆ ವರ್ಗಾಯಿಸಿರುತ್ತಾರೆ. ಈ ರೀತಿ ಯಾರೋ ಅಪರಿಚಿತರು ಕೋಟಾಕ್ ಮಹೀಂದ್ರ ಬ್ಯಾಂಕಿನಿಂದ ಕರೆ ಮಾಡಿರುವುದಾಗಿ ತಿಳಿಸಿ ಕ್ರೆಡಿಟ್ ಕಾರ್ಡ್ ನ್ನು activation ಮಾಡುವ ಸಲುವಾಗಿ ಪಿರ್ಯಾದಿದಾರರಿಂದ  ಓ.ಟಿ.ಪಿ ವಿವರವನ್ನು ಪಡೆದು ಪಿರ್ಯಾದಿದಾರರ ಕ್ರೆಡಿಟ್ ಕಾರ್ಡ್ ನಿಂದ ರೂ. 1,50,081/- ನ್ನು ತನ್ನ ಖಾತೆಗೆ ವರ್ಗಾಯಿಸಿರುವ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವರೇ ಕೋರಿಕೆ.

 

CEN Crime PS Mangaluru City

ಪಿರ್ಯಾದಿ  ದಿನಾಂಕ 03-03-2023 ರಂದು ಪಿರ್ಯಾದಿದಾರರಿಗೆ  ವಾಟ್ಸಪ್ ನಂಬ್ರ +22956390518 ನೇ ದರಿಂದ ಕರೆಯೊಂದು ಬಂದಿದು ಕರೆಯಲ್ಲಿ ಮಾತನಾಡಿದ ವ್ಯಕ್ತಿಯು ತನ್ನ ಹೆಸರು  ಜೋಸೆಫ್ ಫೆಡ್ರಿಕ್ಸನ್ ಎಂಬುದಾಗಿಯೂ ತಾನು ಸ್ಕಾಟ್ಲೆಂಡ್ ನಿಂದ ಮಾತನಾಡುತ್ತಿರುವುದಾಗಿ ತಿಳಿಸಿ ತಾನು ಪಿರ್ಯಾದಿದಾರರ ಬಯಸುತ್ತೇನೆಂದು ತಿಳಿಸಿ  ನಂತರ ಪಿರ್ಯಾದಿದಾರರೊಂದಿಗೆ  ವಾಟ್ಸಪ್ ನಲ್ಲಿ ಮೆಸೆಜ್ ಮಾಡಿಕೊಂಡಿದ್ದರು.  ದಿನಾಂಕ 11-03-2023 ಜೋಸೆಫ್ ಫೆಡ್ರಿಕ್ಸನ್ .ರವರು ಪಿರ್ಯಾದಿದಾರರಿಗೆ ಮೆಸೆಜ್ ಮಾಡಿ ಉಡುಗೊರೆಗಳನ್ನು ಕಳುಹಿಸುವುದಾಗಿ ತಿಳಿಸಿದ್ದು    ದಿನಾಂಕ 14-03-2023 ರಂದು ಮಧ್ಯಾಹ್ನದ ಸಮಯ 9233678116ನೇ ನಂಬ್ರದಿಂದ ಕರೆಯೊಂದು ಬಂದಿದ್ದು ಜೋಸೆಫ್ ಫೆಡ್ರಿಕ್ಸನ್  ಕಳುಹಿಸಿ ಗಿಫ್ಟ್  ಏರ್ ಪೋರ್ಟಲ್ಲ ಹಿಡಿದಿಟ್ಟ್ಟಿದ್ದಾರೆ ಅದನ್ನು ಬಿಡಿಸಲು ಪಿರ್ಯಾದಿದಾರರು ಪೆನಾಲ್ಟಿಯಾಗಿ ರೂ. 40000/- ವನ್ನು ತನ್ನ ಕೆನರಾ ಬ್ಯಾಂಕ್ ಖಾತೆ ಸಂಖ್ಯೆ ನೇ ದಕ್ಕೆ ಕಳುಹಿಸಬೇಕೆಂದು ತಿಳಿಸಿದಂತೆ ಪಿರ್ಯಾದಿದಾರರು ದಿನಾಂಕ 15-03-2023 ರಂದು ರೂ 40000/- ವನ್ನು  neft ಮೂಲಕ ಸದ್ರಿ ಖಾತೆಗೆ ಪಾವತಿಸಿರುತ್ತಾರೆ. ನಂತರ ಇಂದಿನವರೆಗು ಜೋಸೆಫ್ ಫೆಡ್ರಿಕ್ಸನ್ ಎಂಬಾತನು ಪಿರ್ಯಾದಿದಾರರಿಗೆ ಮೆಸೆಜ್ ಮಾಡಿ ಹೆಚ್ಚಿನ ಹಣ ಕಳುಹಿಸಬೇಕೆಂದು ಒತ್ತಾಯಿಸುತ್ತಿರುವುದಾಗಿದೆ. ಈ ರೀತಿ ತನಗೆ ಗಿಫ್ಟ್ ಕಳುಹಿಸುತ್ತೇನೆ ಎಂದು ಆಮಿಷವೊಡ್ಡಿ ತನ್ನನ್ನು ನಂಬಿಸಿ ತನ್ನ   ಹಂತ ಹಂತವಾಗಿ ಒಟ್ಟು ರೂ. 4,50,000/- ನ್ನು ಅನಧಿಕೃತವಾಗಿ ತನ್ನ ಹಲವು ಖಾತೆಗಳಿಗೆ ವರ್ಗಾಯಿಸಿದ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವರೇ ಕೋರಿಕೆ.

 

ಇತ್ತೀಚಿನ ನವೀಕರಣ​ : 21-08-2023 12:44 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080