ಅಭಿಪ್ರಾಯ / ಸಲಹೆಗಳು

 

Crime Reported in Mangalore East Traffic PS

ಪಿರ್ಯಾದಿ ಶರಣ್ ರಾಜ್ ಕೆ.ಆರ್ (38 ವರ್ಷ) ರವರು ಅವರ ಅಣ್ಣ ರಾಘವೇಂದ್ರ ಕೆ.ಆರ್. (40 ವರ್ಷ) ಎಂಬುವರಿಗೆ ರಸ್ತೆ ಅಪಘಾತವಾದ ವಿಷಯ ತಿಳಿದು ಆಸ್ಪತ್ರೆಗೆ ಹೋಗಿ ವಿಚಾರಿಸಲಾಗಿ ರಾಘವೇಂದ್ರ ಕೆ.ಆರ್. ರವರು  ದಿನಾಂಕ 28/05/2023 ರಂದು  ತಮ್ಮ ಮೋಟಾರ್ ಸೈಕಲ್ ನೊಂದಣಿ ಸಂಖ್ಯೆಿ: KA-19-HK-2853 ನೇಯದನ್ನು ಚಲಾಯಿಸಿಕೊಂಡು ಕೋರ್ಟ್ ರೋಡ್ ಕಡೆಯಿಂದ ಬಂಟ್ಸ್ ಹಾಸ್ಟೇಲ್ ಕಡೆಗೆ ಬರುತ್ತಿರುವಾಗ ಸಮಯ ಮಧ್ಯಾಹ್ನ ಸುಮಾರು 01-35 ಗಂಟೆಗೆ ರಾಧಾ ಮೆಡಿಕಲ್ಸ್ ಎದುರು ತಲುಪುತ್ತಿದ್ದಂತೆ ಬಂಟ್ಸ್ ಹಾಸ್ಟೇಲ್ ಕಡೆಯಿಂದ ಪಿ.ವಿ.ಎಸ್ ಕಡೆಗೆ ಹೋಗುತ್ತಿದ್ದ ಮೋಟಾರ್ ಸೈಕಲ್ ನೊಂದಣಿ ಸಂಖ್ಯೆ: KA-19-HL-4269 ನೇಯದನ್ನು ಅದರ ಸವಾರ ಶ್ರೀಕಾಂತ್ ಭಟ್ ಎಂಬಾತನು ತನ್ನ ಮುಂಭಾಗದಲ್ಲಿ ಪಿ.ವಿ.ಎಸ್ ಕಡೆಗೆ ಹೋಗುತ್ತಿದ್ದ ವಾಹನವೊಂದನ್ನು ಬಲಗಡೆಯಿಂದ ಓವರ್ ಟೇಕ್ ಮಾಡುವ ಭರದಲ್ಲಿ ದುಡುಕುತನ, ನಿರ್ಲಕ್ಷ್ಯತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾಗಿ ಚಲಾಯಿಸಿ ರಾಘವೇಂದ್ರ ಕೆ.ಆರ್. ರವರ ಮೋಟಾರ್ ಸೈಕಲಿಗೆ ಢಿಕ್ಕಿ ಪಡಿಸಿರುತ್ತಾನೆ, ಈ ಢಿಕ್ಕಿ ಪರಿಣಾಮ ಇಬ್ಬರೂ ಸವಾರರು ರಸ್ತೆಗೆ ಬಿದ್ದು ಗಾಯಗೊಂಡಿದ್ದು ರಾಘವೇಂದ್ರ ಕೆ.ಆರ್. ರವರಿಗೆ ತಲೆಗೆ ಪೆಟ್ಟಾಗಿ ಪ್ರಜ್ಞಾಹೀನರಾಗಿರುತ್ತಾರೆ, ಕೂಡಲೇ ಅಲ್ಲಿದ್ದ ಸಾರ್ವಜನಿಕರು ಚಿಕಿತ್ಸೆಗಾಗಿ ಕೆ.ಎಂ.ಸಿ (ಅಂಬೇಡ್ಕರ್ ವೃತ್ತ) ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ಪರೀಕ್ಷಿಸಿದ ವೈದ್ಯರು ರಾಘವೇಂದ್ರ ಕೆ.ಆರ್, ರವರಿಗೆ ತಲೆಗೆ ಪೆಟ್ಟಾಗಿ ಪ್ರಜ್ಞಾಹೀನರಾಗಿರುವುದರಿಂದ ಮುಂದಿನ ಚಿಕಿತ್ಸೆಗಾಗಿ ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ, ಆದುದರಿಂದ ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿಕೆ ಎಂಬಿತ್ಯಾದಿ.

Traffic North Police Station          

ಪಿರ್ಯಾದಿ Abdul Khader ಅಕ್ಕನ ಮಗ ಮೊಹಮ್ಮದ್ ಝಕರಿಯ ಆಶಿಕ್ (18) ಎಂಬವರು ಈ ದಿನ ದಿನಾಂಕ 28-05-2023 ರಂದು ಆತ ಕೆಲಸ ಮಾಡುತ್ತಿದ್ದ ಕೂಳೂರು ರಿಲಯನ್ಸ್ ಪೆಟ್ರೋಲ್ ಪಂಪಿನಿಂದ ಪಿರ್ಯಾದಿದಾರರ ತಮ್ಮ ಮೊಹಮ್ಮದ್ ಎಂಬಾತನ ಬಾಬ್ತು KA-19-HH-2787 ನಂಬ್ರದ ಮೋಟಾರು ಸೈಕಲನ್ನು ಸವಾರಿ ಮಾಡುತ್ತಾ ಆತನ ಮನೆಯಾದ ವಿದ್ಯಾನಗರ ಮಾಯಿಲ ಎಂಬಲ್ಲಿಗೆ ಹೋಗುತ್ತಾ ಮದ್ಯಾಹ್ನ ಸಮಯ ಸುಮಾರು 1:15 ಗಂಟೆಗೆ ಕೃಷ್ಣ ಭಜನಾ ಮಂದಿರದ ಬಳಿ ತಲುಪುತ್ತಿದ್ದಂತೆ ಎದುರುಗಡೆಯಿಂದ ಅಂದರೆ ಮಾಯಿಲ ಕಡೆಯಿಂದ ವಿದ್ಯಾನಗರ ಮುಖ್ಯ ರಸ್ತೆಯ ಕಡೆಗೆ KA-26-B-4416 ನಂಬ್ರದ ಪಿಕಪ್ ವಾಹನವನ್ನು ಅದರ ಚಾಲಕ ತಿಮ್ಮನಗೌಡ ಎಂಬಾತನು ವೇಗವಾಗಿ ದುಡುಕುತನದಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಎಡಬದಿಯಲ್ಲಿ ಹೋಗುತ್ತಿದ್ದ ಮೊಹಮ್ಮದ್ ಝಕರಿಯ ಆಶಿಕ್ ನ ಮೋಟಾರು ಸೈಕಲಿಗೆ ಡಿಕ್ಕಿ ಪಡಿಸಿದ ಪರಿಣಾಮ ಆಶಿಕನು ಮೋಟಾರು ಸೈಕಲಿನ ಸಮೇತ ಡಾಮಾರು ರಸ್ತೆ ಬದಿಯ ಚರಂಡಿಗೆ ಬಿದ್ದು, ಆತನ ಬಲಕಾಲಿನ ಮೊಣಗಂಟಿಗೆ ಮೂಳೆ ಮುರಿತದ ರಕ್ತಗಾಯವಾಗಿದ್ದು ಅಲ್ಲದೇ ಎಡಕೈಯ ಭುಜಕ್ಕೆ ಗುದ್ದಿದ ನೋವಾಗಿದ್ದು ಚಿಕಿತ್ಸೆ ಬಗ್ಗೆ ಮಂಗಳೂರು ತೇಜಸ್ವಿನಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ.

Ullal PS

ದಿನಾಂಕ 28/05/2023 ರಂದು ಸಂಜೆ ಸುಮಾರು 3-00 ಗಂಟೆಯ ಸಮಯಕ್ಕೆ ತಲಪಾಡಿ ಗ್ರಾಮದ ದೇವಿಪುರ ಶ್ರೀ ದುರ್ಗಾಪರಮೇಶ್ವರ ದೇವಸ್ಥಾನದ ಎದುರಿರುವ ಖಾಲಿ ಸ್ಥಳದಲ್ಲಿ ದೇವಿಪುರದ ರವಿ ಹಾಗೂ ಇತರ ಜನರು ಗುಂಪು ಸೇರಿಕೊಂಡು ಹಣವನ್ನು ಪಣವಾಗಿಟ್ಟು “ಕೋಳಿ ಅಂಕದ ಜೂಜಾಟ” ಆಡುತ್ತಿರುವ ಬಗ್ಗೆ ಮಾಹಿತಿಯ ಬಗ್ಗೆ ಪಿರ್ಯಾದಿ ಅಕ್ಬರ್ ಯಡ್ರಾಮಿ, ಸಿ.ಪಿ.ಸಿ ದಾರರು ಖಚಿತಪಡಿಸಿಕೊಳ್ಳಲು ಸ್ಥಳಕ್ಕೆ ಹೋಗಿ ದೂರದಿಂದ ಗಮನಿಸಲಾಗಿ ದೇವಿಪುರ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ಎದುರಿರುವ ಖಾಲಿ ಜಾಗದಲ್ಲಿ 3 ರಿಂದ 4 ಜನ ಸುತ್ತಲೂ ಗುಂಪಾಗಿ “ಕೋಳಿ ಅಂಕದ ಜೂಜಾಟ” ಆಡುತ್ತಿರುವುದನ್ನು ಕಂಡುಬದಿರುತ್ತದೆ. ಆದುದರಿಂದ ಕೂಡಲೇ ಸ್ಥಳಕ್ಕೆ ಧಾಳಿ ನಡೆಸಿ ಕಾನೂನು ಬಾಹೀರವಾಗಿ “ಕೋಳಿ ಅಂಕದ ಜೂಜಾಟ” ಆಡುತ್ತಿರುವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿಕೆ ಎಂಬುದಾಗಿ ನೀಡಿದ ವರದಿಯಂತೆ ಪ್ರಕರಣ ದಾಖಲಿಸಿಕೊಂಡಿರುವುದು ಸಾರಾಂಶ ಎಂಬಿತ್ಯಾದಿ.

Mangalore East PS

ಪಿರ್ಯಾದಿ Sandeep ಕುದ್ಕೋರಿಗುಡ್ಡೆ ಕಂಕನಾಡಿ ಇಲ್ಲಿ ಸಹೋದರರೊಂದಿಗೆ ವಾಸಮಾಡಿಕೊಂಡಿದ್ದು ಚಾಲಕ ವೃತ್ತಿ ಮಾಡಿಕೊಂಡಿರುತ್ತಾರೆ ದಿನಾಂಕ 26-05-2023 ರಂದು ಸಂಜೆ ಸುಮಾರು 06 ಗಂಟೆಯ ಹೊತ್ತಿಗೆ ಕೆಲಸ ಮುಗಿಸಿಕೊಂಡು ಮನೆಗೆ ಬರುತ್ತಿರುವಾಗ ದಾರಿಯಲ್ಲಿ ಜಗದೀಶ್ ಎಂಬಾತನು ಪಿರ್ಯಾದಿದಾರರನ್ನು ತಡೆದು ನಿಲ್ಲಿಸಿ, ನನ್ನ ಮೇಲೆ ಬಾವುಟ ತೆಗೆದ ಬಗ್ಗೆ ದೂರು ನೀಡುತ್ತಿಯಾ, ಎಂದು ಹೇಳಿ ಅವಾಚ್ಯ ಶಬ್ದಗಳಿಂದ ಬೈದು ನಂತರ ಪಿರ್ಯಾದಿದಾರರನ್ನು ಉದ್ದೇಶಿಸಿ ನೀನು ಇನ್ನು ಮುಂದೆ ಕೇಸು ಕೊಟ್ಟರೆ ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಒಡ್ಡಿರುತ್ತಾರೆ ಎಂಬಿತ್ಯಾದಿ.

Mangalore East PS

ಪಿರ್ಯಾದಿ Dany Antony Paul,  ಪಿರ್ಯಾದಿದಾರರ ಅತ್ತಿಗೆ ಅನಿಟಾ ಡೋರಿನ್ ಎಂಬುವವರು ಶಿವಭಾಗ್ ರಸ್ತೆಯ ಇಎಸ್ಐ ಆಸ್ಪತ್ರೆಯ ಹತ್ತಿರ 10 ಸೆನ್ಸ್ ಜಾಗ ಮತ್ತು ಮನೆ  ಯನ್ನು 2014 ರಲ್ಲಿ ಖರೀದಿಸಿರುತ್ತಾರೆ ಪಿರ್ಯಾದಿದಾರರ ಅತ್ತಿಗೆಯು ಕುಟುಂಬ ಸಮೇತರಾಗಿ ಬೆಂಗಳೂರಿನಲ್ಲಿ ವಾಸವಾಗಿದ್ದು ಮನೆಯನ್ನು ನೋಡಿಕೊಳ್ಳಲು ಪಿರ್ಯಾದಿದಾರರಿಗೆ ಜಿಪಿಎ ಯನ್ನು ಮಾಡಿಕೊಟ್ಟಿರುತ್ತಾರೆ ಹೀಗಿರುವಾಗ ಮನೆಯ ಮೊದಲ ಮಾಲೀಕರಾದ ಶ್ರೀಮತಿ ಪ್ರಶೋಭಾ ರವರು ಈ ಮನೆ ನನಗೆ ಸೇರಿದ್ದು ಎಂದು ಪದೇ ಪದೇ ತೊಂದರೆ ನೀಡುತ್ತಿದ್ದು ದಿನಾಂಕ 27-05-2023 ರಂದು ಬೆಳಿಗ್ಗೆ 06: ಗಂಟೆಗೆ ಪ್ರಶೋಭಾ, ಮಗಳು ಪ್ರತ್ವಿ ಹಾಗೂ ಮಗ ವೈಶಾಕ್ ಹಾಗೂ ಎರಡು ಹೆಂಗಸರು ಹಾಗೂ ಒಬ್ಬ ಗಂಡಸು ಅಕ್ರಮವಾಗಿ ಕಾಂಪೌಂಡ್ ಗೋಡೆಯನ್ನು ಒಡೆದು ಮೆಟಲ್ ಶಿಟನ್ನು ಒಡೆದು ಹಾಕಿ ನನ್ನ ಮನೆಯ ದು ರೊಮಿನ ಬೀಗವನ್ನು ಒಡೆದು ಹಾಕಿ ಅದರಿಲಿದ್ದು ಸಿಸಿ ಟಿವಿ ಕ್ಯಾಮೆರ ಇದರ ಡಿವಿಆರ್ ಹಾಗು ವೈಪೈ ನ ರೊಟರ್ ನ್ನು ತೆಗೆದುಕೊಂಡು ಹೋಗಿರುತ್ತಾರೆ ಹಾಗೂ ಸಿಸಿ ಟಿವಿಯ ವೈರುಗಳನ್ನು ತುಂಡು ಮಾಡಿರುತ್ತಾರೆ ಈ ಬಗ್ಗೆ ನನ್ನ ಒಡೆತನದಲ್ಲಿರುವ ಮನೆಗೆ ಅಕ್ರಮ ಪ್ರವೇಶ ಮಾಡಿ ಮನೆಯ ಬೀಗ ಒಡೆದು ಒಳಗೆ ಪ್ರವೇಶಿಸಿ ಸೊತ್ತನ್ನು ನಾಶ ಮಾಡಿರುತ್ತಾರೆ ಎಂಬಿತ್ಯಾದಿ.

Traffic North Police Station                                                      

ದಿನಾಂಕ:26-05-2023 ರಂದು ಪಿರ್ಯಾದಿ Jayanthi M Kanchan ಅವರ ಅಕ್ಕನ ಮಗಳಾದ ಪ್ರಮಿಳಾ ಯೋಗೇಶ್ ರವರ ಮಗ ತೇಜಸ್ ( 9 ತಿಂಗಳು ) ಎಂಬವರಿಗೆ ಹುಷಾರಿಲ್ಲದ ಕಾರಣ ಚಿಕಿತ್ಸೆಯ ಬಗ್ಗೆ ಮಂಗಳೂರಿನ ಏ.ಜೆ ಆಸ್ಪತ್ರೆಗೆ KA-19-AD-6172 ನಂಬ್ರದ ಆಟೋ ರಿಕ್ಷಾದಲ್ಲಿ ಪಿರ್ಯಾದಿದಾರರು ಹಾಗೂ ಅವರ ಅಣ್ಣ ಯಾಧವ ಎನ್ ಶ್ರೀಯಾನ್ ಮತ್ತು ಪ್ರಮೀಳಾ ಯೋಗೇಶ್ ಹಾಗೂ ಮಗು ತೇಜಸ್ ರವರನ್ನು ಕರೆದುಕೊಂಡು ಹೋಗುವಾಗ ರಾತ್ರಿ ಸಮಯ ಸುಮಾರು 11:30 ಗಂಟೆಗೆ ಬೈಕಂಪಾಡಿ ಜಂಕ್ಷನ್ ತಲುಪುತ್ತಿದ್ದಂತೆ ಆಟೋ ರಿಕ್ಷಾದ ಎಡಭಾಗದಲ್ಲಿ ಮಂಗಳೂರು ಕಡೆಗೆ ಹೋಗುತ್ತಿದ್ದ ಮೋಟಾರ್ ಸೈಕಲನ್ನು ಅದರ ಸವಾರನು ಸೂಚನೆ ನೀಡದೇ ಬಲಕ್ಕೆ ತಿರುಗಿಸಿದ ಪರಿಣಾಮ ಆಟೋ ರಿಕ್ಷಾವನ್ನು ಚಲಾಯಿಸುತಿದ್ದ ಕುಸುಮಾಕರ್ ಕರ್ಕೇರಾ ರವರು ನಿರ್ಲಕ್ಷ್ಯತನದಿಂದ ಒಮ್ಮೇಲೆ ಬ್ರೇಕ್ ಹಾಕಿದ ಪರಿಣಾಮ ಆಟೋ ರಿಕ್ಷಾ ಎಡಭಾಗಕ್ಕೆ ಮಗುಚಿ ಬಿದ್ದ್ದು ಆಟೋ ರಿಕ್ಷಾದಲ್ಲಿದ್ದ ಯಾಧವ ಎನ್ ಶ್ರೀಯಾನ್ ರವರಿಗೆ ಕುತ್ತಿಗೆಯ ಹಿಂಭಾಗಕ್ಕೆ ಗುದ್ದಿದ ರೀತಿಯ ಒಳಗಾಯ, ಕೈ ಕಾಲುಗಳಿಗೆ ತರಚಿದ ಗಾಯ ಮತ್ತು ಮಗು ತೇಜಸ್ ನ ತಲೆಗೆ ಸಣ್ಣ ಗಾಯ ಹಾಗೂ ಪಿರ್ಯಾದಿದಾರರ ಎಡಕೈಗೆ ಹಾಗೂ ಎಡಕಾಲಿನ ಮಂಡಿಗೆ ತರಚಿದ ಗಾಯವಾಗಿರುತ್ತದೆ. ಪ್ರಮೀಳಾ ಯೋಗೇಶ ರವರಿಗೆ ಯಾವುದೇ ರೀತಿಯ ಗಾಯಗಳಾಗಿರುವುದಿಲ್ಲ. ಆಟೋರಿಕ್ಷಾದ ಚಾಲಕ ಕುಸುಮಾಕರ್ ಕರ್ಕೇರಾ ರವರಿಗೆ ಎಡಕಾಲಿನ ಮಣಿಗಂಟು, ಪಾದದಲ್ಲಿ ತರಚಿದ ರೀತಿಯ ಗಾಯವಾಗಿದ್ದು ಕಾರೊಂದರಲ್ಲಿ ಚಿಕಿತ್ಸೆಯ ಬಗ್ಗೆ ಮಂಗಳೂರಿನ ಏ.ಜೆ ಆಸ್ಪತ್ರೆಗೆ ಹೋಗಿರುತ್ತಾರೆ. ಅಪಘಾತಕ್ಕೆ ಕಾರಣನಾದ KA-19-AD-6172 ನಂಬ್ರದ ಆಟೋ ರಿಕ್ಷಾ ಚಾಲಕನ ಮೇಲೆ ಕುಸುಮಾಕರ್ ಕರ್ಕೇರಾ ಎಂಬವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕಾಗಿ ಎಂಬಿತ್ಯಾಧಿ.

 

 

 

ಇತ್ತೀಚಿನ ನವೀಕರಣ​ : 21-08-2023 01:02 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080