ಅಭಿಪ್ರಾಯ / ಸಲಹೆಗಳು

Crime report in Traffic North Police Station    

ಪಿರ್ಯಾದಿ Prabhakara ದಾರರು ದಿನಾಂಕ 28.06.2023 ರಂದು ರಾತ್ರಿ ಕರ್ತವ್ಯಕ್ಕೆ ಮನೆಯಿಂದ ತಮ್ಮ ಬಾಬ್ತು ಮೋಟಾರ್ ಸೈಕಲ್ ನಂಬ್ರ KA-19Y-6151 ರಲ್ಲಿ ಹೊರಟು ಕೊಲ್ನಾಡು ಪೆಟ್ರೋಲ್ ಬಂಕಿನಲ್ಲಿ ಪೆಟ್ರೋಲ್ ಹಾಕಿಕೊಂಡು ಹಳೆಯಂಗಡಿ ಮುಲ್ಕಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಹೋಗಿ ರಾತ್ರಿ ಸಮಯ ಸುಮಾರು 7:15 ಗಂಟೆಗೆ ಕಾರ್ನಾಡ್ ಕ್ರಾಸ್ ಬಳಿ ಓಪನ್ ಡಿವೈಡರ್ ನಲ್ಲಿ ಕಿನ್ನಿಗೋಳಿ ಕಡೆಗೆ ಹೋಗಲು ಮೋಟಾರ್ ಸೈಕಲನ್ನು ತಿರುಗಿಸುತ್ತಿದ್ದಂತೆಯೇ ಹಿಂದಿನಿಂದ ಅಂದರೆ ಹಳೆಯಂಗಡಿ ಕಡೆಯಿಂದ ಕಾರು ನಂಬ್ರ KA-01-MD-249ನೇಯದನ್ನು  ಅದರ ಚಾಲಕ ನಿತಿನ್ ಕುಮಾರ್ ಎಂಬವರು ದುಡುಕುತನ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರ ಮೋಟಾರ್ ಸೈಕಲಿಗೆ ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ಫಿರ್ಯಾದಿದಾರರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು, ಫಿರ್ಯಾದಿದಾರರ ಬಲಕಾಲಿನ ಮೊಣಗಂಟಿನ ಬಳಿ ಮೂಳೆ ಮುರಿತದ ಗಾಯ, ಬಲ ಹಣೆಯ ಬಳಿ ಬಲ ಕೈ ಮೊಣಗಂಟಿನ ಬಳಿ ತರಚಿದ ಗಾಯವಾಗಿದ್ದು, ಗಾಯಾಳು ಫಿರ್ಯಾದಿದಾರರು ಚಿಕಿತ್ಸೆ ಬಗ್ಗೆ ಸುರತ್ಕಲ್ ಅಥರ್ವಾ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ  ಎಂಬಿತ್ಯಾದಿ.

                                    

Traffic South Police Station

ಪಿರ್ಯಾದಿದಾರರಾದ ವಿದ್ಯಾಧರ (31 ವರ್ಷ) ರವರು ದಿನಾಂಕ:28-06-2023 ರಂದು ಪದವಿನಂಗಡಿ ವೆಂಕಟರಮಣ ದೇವಸ್ಥಾನದ ಪಕ್ಕದಲ್ಲಿರುವ ಜಿಮ್ ನಲ್ಲಿರುವಾಗ ಸಮಯ ಸುಮಾರು ರಾತ್ರಿ 9:10 ಗಂಟೆಗೆ ಸೌಂಡ್ (ಜೋರಾದ ಶಬ್ದ) ಕೇಳಿದ್ದು ಕೂಡಲೇ ಜಿಮ್ ನ ಕಿಟಕಿಯಿಂದ ನೋಡಿದಾಗ ಸ್ಕೂಟರ್ ವೊಂದರಲ್ಲಿ ಹೊಗೆ ಬಂದುದನ್ನು ನೋಡಿ ಕೂಡಲೇ ಕೆಳಗೆ ಹೋಗಿ ನೋಡಲಾಗಿ KA-19-HM-1828 ನೇದರ ಸ್ಕೂಟರ್ ನಲ್ಲಿ ಚಿರಾಗ್ ರವರು ಸವಾರರಾಗಿ ಹಾಗೂ ಪವನ್ ಎಂಬವರು ಸಹ ಸವಾರರಾಗಿದ್ದ ಸ್ಕೂಟರ್ ಅಪಘಾತವಾಗಿ ಅಚ್ಚುಲ್ ಪೈ ಹಾಲ್ ಎದುರು ಮೇರಿಹಿಲ್ ಕಡೆಯಿಂದ ಬೋಂದೆಲ್ ಕಡೆಗೆ ಹೋಗುವ ರಸ್ತೆಯಲ್ಲಿ ಬಿದ್ದಿದ್ದು ಇಬ್ಬರಿಗೂ ಮುಖಕ್ಕೆ ಹಾಗೂ ತಲೆಗೆ ಗಂಬೀರ ಗಾಯವಾಗಿರುತ್ತದೆ,  ಪಿರ್ಯಾದಿದಾರರು ಕೂಡಲೇ ಚಿಕಿತ್ಸೆ ಬಗ್ಗೆ ರಸ್ತೆಯಲ್ಲಿ ಬಿದ್ದಿದ್ದ ಒಬ್ಬ ಗಾಯಾಳನ್ನು ಕಾರೊಂದರಲ್ಲಿ ಎ,ಜೆ ಆಸ್ಪತ್ರೆಗೆ ಹಾಗೂ ಮತ್ತೊಬ್ಬ ಗಾಯಾಳುವನ್ನು ಬಸ್ ನಲ್ಲಿ ಎ,ಜೆ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು,ನಂತರ ಪಿರ್ಯಾದಿದಾರರು ಆಸ್ಪತ್ರೆಗೆ ತೆರಳಿ ಗಾಯಾಳುಗಳನ್ನು ವಿಚಾರಿಸಿದಾಗ ಇಬ್ಬರು ಮೃತಪಟ್ಟಿರುವುದಾಗಿ ತಿಳಿಸಿರುತ್ತರೆ, ಎಂಬಿತ್ಯಾದಿ.

Mangalore South PS                                     

ಪ್ರಕರಣದ ಪಿರ್ಯಾದಿದಾರರಾಧ ಇಮಾಝ್ ಇಬ್ರಾಹಿಂ ರವರು ಹಾಗೂ ಅವರ ಸಂಬಂಧಿ ಝೀಶಾನ್ ಮೊಹಮ್ಮದ್ ಅಮೀನ್ ರವರು ದಿನಾಂಕ : 28-06-2023 ರಂದು ಅತ್ತಾವರದ ಸ್ಮಾರ್ಟ್ ಬಜಾರ್ ನಿಂದ ಮನೆಗೆ ಸ್ಕೂಟರ್ ನಲ್ಲಿ ಹೋಗುತ್ತಿರುವ ಸಮಯ ಕಾಸಾಗ್ರಾಂಡ್ ಬಳಿಯಲ್ಲಿ ಪಿರ್ಯಾದಿದಾರರ ಸ್ಕೂಟರ್ ನ ಹಿಂಬದಿಯಲ್ಲಿ ನೊಂದಣಿ ಸಂಖ್ಯೆ ಕೆಎ-19-ಎನ್-6044 ಕಾರಿನ ಚಾಲಕ ಪದೇ ಪದೇ ಜೋರಾಗಿ ಹಾರನ್ ಮಾಡಿದ್ದರಿಂದ ಪಿರ್ಯಾದಿದಾರರು ಕಾರು ಚಾಲಕನಿಗೆ ಹಾರನ್ ನಿಲ್ಲಿಸುವಂತೆ ಕೈ ಸನ್ನೆ ಮಾಡಿದ್ದು, ಕಾರು ಚಾಲಕ ಕಾರನ್ನು ಚಲಾಯಿಸಿಕೊಂಡು ವಿಶ್ವಾಸ್ ಅಪಾರ್ಟಮೆಂಟ್ ಬಳಿ ನಿಲ್ಲಿಸಿದ್ದು, ಕಾರಿನ ಚಾಲಕ ಪಿರ್ಯಾದಿದಾರರ ಪರಿಚಯದ ಸಲ್ಮಾನ್ ರವರಲ್ಲಿ ಪಿರ್ಯಾದಿದಾರರು ನೀನು ಯಾಕೆ ಹಾರನ್ ಮಾಡಿದ್ದು ಎಂದು ಕೇಳಿದಾಗ, ಆರೋಪಿ ಸಲ್ಮಾನ್ ಪಿರ್ಯಾದಿದಾರರನ್ನು ಉದ್ದೇಶಿಸಿ “ಬೇವರ್ಶಿ, ರಂಡೆ ಮಗನೇ” ಎಂಬಿತ್ಯಾದಿಯಾಗಿ ಅವಾಚ್ಯ ಶಬ್ದಗಳಿಂದ ಬೈದಾಗ, ಪಿರ್ಯಾದಿದಾರರು ಸಲ್ಮಾನ್ ನಲ್ಲಿ ಸರಿಯಾಗಿ ಮಾತನಾಡು ಎಂದಿರುತ್ತಾರೆ. ಆಗ ಸಲ್ಮಾನ್ , ಪಿರ್ಯಾದಿದಾರರಲ್ಲಿ ನಿನಗೆ ಬುದ್ದಿ ಕಲಿಸದೇ ಬಿಡುವುದಿಲ್ಲ ಎಂದು ಹೇಳಿ ಹೋಗಿದ್ದು, ಪಿರ್ಯಾದಿದಾರರು ಅಲ್ಲಿಯೇ ನಿಂತು ತನ್ನ ತಾಯಿಗೆ ಪೋನ್ ನಲ್ಲಿ ಘಟನೆ ವಿಚಾರ ಮಾತನಾಡುತ್ತಿರುವ ಸಮಯ ಆರೋಪಿ ಸಲ್ಮಾನ್, ನೌಫಾಲ್, ಅಪ್ಪು, ರಶೀದ್ ಹಾಗೂ ಇನ್ನೋರ್ವ ಅಕ್ರಮ ಕೂಟ ಸೇರಿಕೊಂಡು ಪಿರ್ಯಾದಿದಾರರಲ್ಲಿಗೆ ಬಂದು, ಕೈಗಳಿಂದ ಹಾಗೂ ರಾಡ್ ನಿಂದ ಪಿರ್ಯಾದಿದಾರರಿಗೆ ಹಲ್ಲೆ ನಡೆಸಿದ್ದು, ತಡೆಯಲು ಬಂದ ಝೀಶಾನ್ ರವರಿಗೆ ಸಲ್ಮಾನ್ ಚೂರಿಯಿಂದ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿ ಕೃತ್ಯ ನಡೆಸಿರುವುದಾಗಿದೆ ಎಂಬಿತ್ಯಾದಿಯಾಗಿರುತ್ತದೆ

CEN Crime PS

ದಿನಾಂಕ 28-06-2023 ರಂದು 11-30 ಗಂಟೆಗೆ ಪಿರ್ಯಾದಿದಾರರ ಮೊಬೈಲ್ ನಂಬ್ರ: ನೇದಕ್ಕೆ ಮೊಬೈಲ್ ನಂಬ್ರ: 8961311159 ನೇದರಿಂದ ಪಿರ್ಯಾದಿದಾರರ ಕೆನರಾ ಬ್ಯಾಂಕ್ ಖಾತೆ ಬ್ಲಾಕ್ ಆಗಿರುವುದಾಗಿಯೂ ಕೆವೈಸಿ ಅಪ್ ಡೇಟ್ ಮಾಡಬೇಕೆಂದು ಎಂಬುದಾಗಿ ಸಂದೇಶ  ಬಂದಿರುತ್ತದೆ. ನಂತರ  ಅಪರಿಚಿತ ವ್ಯಕ್ತಿ ಕರೆ ಮಾಡಿ ಫಿರ್ಯಾದಿದಾರರ ಕೆನರಾ ಬ್ಯಾಂಕ್  ಕಸ್ಟಮರ್ ಐಡಿ, ATM ಕಾರ್ಡ್ ವಿವರ ಮತ್ತು ಅಕೌಂಟ್ ವಿವರ ನೀಡುವಂತೆ ತಿಳಿಸಿದ್ದು ಅದರಂತೆ ಕಸ್ಟಮರ್ ಐಡಿ, ATM ಕಾರ್ಡ್ ವಿವರ ಮತ್ತು ಅಕೌಂಟ್ ವಿವರ ಆ ವ್ಯಕ್ತಿಗೆ ತಿಳಿಸಿದ್ದು ನಂತರ ಆ ವ್ಯಕ್ತಿಯು ಫಿರ್ಯಾದಿದಾರರಿಗೆ ಮೊಬೈಲ್ ಗೆ ಸ್ವೀಕೃತವಾದ ಒಟಿಪಿ ಯನ್ನು ಶೇರ್ ಮಾಡುವಂತೆ ತಿಳಿಸಿದಂತೆ ಪಿರ್ಯಾದಿದಾರರು ಆ ಒಟಿಪಿ ಯನ್ನು ಆ ವ್ಯಕ್ತಿಗೆ ತಿಳಿಸಿರುತ್ತಾರೆ. ಪಿರ್ಯಾದಿದಾರರು ಒಟಿಪಿ ನೀಡಿದ ಕೂಡಲೇ ಪಿರ್ಯಾದಿದಾರರ ಕೆನರಾ ಬ್ಯಾಂಕ್ ಖಾತೆ ನಂಬ್ರ: ನೇದರಿಂದ ರೂಪಾಯಿ 44,500/- ಹಣವನ್ನು ಅನಧಿಕೃತವಾಗಿ ವರ್ಗಾವಣೆಯಾಗಿರುತ್ತದೆ. ಅಪರಿಚಿತ ವ್ಯಕ್ತಿಯ ತಾನು ಬ್ಯಾಂಕ್ ಅಧಿಕಾರಿ ಎಂದು ನಂಬಿಸಿ ಒಟಿಪಿ ಯನ್ನು ಪಡೆದುಕೊಂಡು  ಪಿರ್ಯಾದಿದಾರರ ಖಾತೆಯಿಂದ ಹಣ ವರ್ಗಾಯಿಸಿಕೊಂಡು ಮೋಸ ಮಾಡಿರುವುದಾಗಿದೆ ಎಂಬಿತ್ಯಾದಿ 

 

ಇತ್ತೀಚಿನ ನವೀಕರಣ​ : 21-08-2023 02:02 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080