ಅಭಿಪ್ರಾಯ / ಸಲಹೆಗಳು

 

Crime Report in Surathkal PS

ದಿನಾಂಕ: 28-07-2023 ರಂದು  ಪಿರ್ಯಾದಿದಾರಿಗೆ ಬಂದ ಮಾಹಿತಿಯ ಮೇರೆಗೆ ಮುಕ್ಕ ಬೋರ್ಬನ್ ಬೇಕರಿಯ ಹಿಂದುಗಡೆ ಇರುವ ಅಮಿನಾ ಪ್ಯಾರಡೈಸ್ ಅಪಾರ್ಟಮೆಂಟ್ ನಲ್ಲಿ ಕೆಲವು ಯುವಕರು ಗಾಂಜಾ ಅಥವಾ ಇನ್ಯಾವುದೋ ಮಾದಕ ವಸ್ತುವನ್ನು ಸೇವಿಸಿ ಬೊಬ್ಬೆ ಹಾಕುತ್ತಾ ನೆರೆಕೆರೆಯವರಿಗೆ ತೊಂದರೆವುಂಟು ಮಾಡುತ್ತಿರುವ ಬಗ್ಗೆ ಸಂಜೆ ಸುಮಾರು 19.15 ಗಂಟೆಗೆ ಈ ಮೇಲ್ಕಾಣಿಸಿದ ಅಮಿನಾ ಪ್ಯಾರಡೈಸ್ ಅಪಾರ್ಟಮೆಂಟ್ ಗೆ ಹೋಗಿ ಸದ್ರಿ ಅಪಾರ್ಟಮೆಂಟ್ ನ 3ನೇ ಮಹಡಿಗೆ ತಲುಪಿದಾಗ ಪ್ಯಾಸೇಜ್ ನಲ್ಲಿ ಕೆಲವು ಯುವಕರು ಅನುಮಾನಾಸ್ಪದ ರೀತಿಯಲ್ಲಿ ವರ್ತಿಸುವುದನ್ನು ಕಂಡು ಸದ್ರಿ ಯುವಕರ ಕಣ್ಣುಗಳು ನಶೆಯಲ್ಲಿದ್ದಂತೆ ಕಂಡುಬಂದಿದ್ದು ಸದ್ರಿ ಯುವಕರ ಹೆಸರು ವಿಳಾಸದ ಬಗ್ಗೆ ವಿಚಾರಿಸಲಾಗಿ ಅವರುಗಳು ಒಬ್ಬೊಬ್ಬರಾಗಿ 1) ಮೊಹಮ್ಮದ್ ಶಹೀರ್ (22 ವರ್ಷ) 2)ನುಫಿಯಾಸ್ ರೆಹಮಾನ್ (21 ವರ್ಷ) 3)ಆದಂ (22 ವರ್ಷ) 4)ರಝನಾಜ್ ಹುಸೇನ್ (22 ವರ್ಷ) 5)ನಬೀಲ್ ಕೆ.ಪಿ (21 ವರ್ಷ) ಎಂದು ತಿಳಿಸಿದ್ದು ಅವರ ನಡವಳಿಕೆ ಹಾಗೂ ಮಾತನಾಡುವಾಗ ತೊದಲುತ್ತಾ ಮಾತನಾಡುತ್ತಿರುವುದನ್ನು ಗಮನಿಸಿ ಸದ್ರಿ ಯುವಕರು ಮಾದಕವಸ್ತು ಸೇವಿಸಿದಂತೆ ಕಂಡು ಬಂದಿದ್ದು, ಇವರುಗಳನ್ನು ಸಂಜೆ 20.15 ಗಂಟೆಗೆ ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆ ಬಗ್ಗೆ  ಎ.ಜೆ ಆಸ್ಪತ್ರೆಯ ವೈದ್ಯಾಧಿಕಾರಿಯರಿಂದ ಪರೀಕ್ಷೆಗಳೊಪಡಿಸಿದಲ್ಲಿ ಮೊಹಮ್ಮದ್ ಶಾಹೀರ್ ಎಂಬವನು ನಿಷೇದಿತ ಮಾದಕ ವಸ್ತುವಾದ ಗಾಂಜಾವನ್ನು ಸೇವನೆ ಮಾಡಿದ ಬಗ್ಗೆ ವರದಿ ನೀಡಿರುವ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಮಡಿರುವುದು  ಎಂಬಿತ್ಯಾದಿಯಾಗಿರುತ್ತದೆ.

    

Konaje PS

ಪಿರ್ಯಾದಿದಾರರಾದ ನಗರ ಅಪರಾಧ ವಿಭಾಗ (ಸಿಸಿಬಿ) ಮಂಗಳೂರು ನಗರದ ಪೊಲೀಸ್ ಉಪನಿರೀಕ್ಷಕರಾದ ಶರಣಪ್ಪ ಭಂಡಾರಿರವರಿಗೆ ದಿನಾಂಕ 28-07-2023 ರಂದು ಮಧ್ಯಾಹ್ನ 12-00 ಗಂಟೆಗೆ  ಉಳ್ಳಾಲ ತಾಲೂಕು ಮುಡಿಪು ಕಂಬಳಪದವು ಕೆಐಡಿಬಿ ರಸ್ತೆಯಲ್ಲಿ ಆರ್ ಟಿಓ ಬೃಹತ್ ವಾಹನಗಳ ಚಾಲನಾ ತರಬೇತಿ ಕೇಂದ್ರದ ಹತ್ತಿರ   KA-19-MH-3023 ನೇ ಅಲ್ಟೋ -800 ಕಾರಿನಲ್ಲಿ ವ್ಯಕ್ತಿಯೊಬ್ಬ ಮಾದಕ ವಸ್ತುವಾದ MDMA ನೇದನ್ನು ಆಕ್ರಮವಾಗಿ ವಶದಲ್ಲಿರಿಸಿಕೊಂಡು ಸಾಗಾಟ ಮಾಡಿಕೊಂಡು ಮಾರಾಟ ಮಾಡಲು ಬರುತ್ತಿರುವುದಾಗಿ    ಭಾತ್ಮೀದಾರರಿಂದ ಬಂದ ಮಾಹಿತಿಯಂತೆ ಮಧ್ಯಾಹ್ನ 1-50 ಗಂಟೆಗೆ ದಾಳಿ ಮಾಡಿ ಆರೋಪಿಯನ್ನು  ವಶಕ್ಕೆ ಪಡೆದು  ವಿಚಾರಿಸಿ ಆತನ ವಶದಲ್ಲಿದ್ದ vivo 1935 ಮಾಡೆಲ್ ನ ಮೊಬೈಲ್ ಪೋನ್ ಇದರ ಅಂದಾಜು ಮೌಲ್ಯ 10,000/-, 25 ಗ್ರಾಂ ತೂಕದ ಬಿಳಿ ಬಣ್ಣದ ಹರಳುನಂತಿರುವ MDMA ಮಾದಕ ವಸ್ತು ಇರುವ ಜಿಪ್ ಪ್ಲಾಸ್ಟಿಕ್ ಕವರ್ ಇದರ ಅಂದಾಜು ಮೌಲ್ಯ ರೂ 1,25,000/-,  MDMA ಮಾದಕ ವಸ್ತು ಇಟ್ಟಿದ್ದ HUAWEI ಎಂದು ಬರೆದಿರುವ ಕಪ್ಪು ಬಣ್ಣದ ಪೌಚ್ -1, ಸಿಲ್ವರ್ ಬಣ್ಣದ ಡಿಜಿಟಲ್ ತೂಕ ಮಾಪನ ಇದರ ಅಂದಾಜು ಮೌಲ್ಯ 500/-, ಸಣ್ಣ ಸಣ್ಣ ಖಾಲಿ ಜಿಪ್ ಪ್ಲಾಸ್ಟಿಕ್ ಲಕೋಟೆಗಳು -20  ಮತ್ತು KA19-MH-3023 ನೇ ಗ್ರೇ ಬಣ್ಣದ ಮಾರುತಿ ಅಲ್ಟೋ -800 ಕಾರು ಇದರ ಅಂದಾಂಜು ಮೌಲ್ಯ ರೂ 5,00,000/-ನ್ನು ಮುಂದಿನ ಕ್ರಮದ ಬಗ್ಗೆ ಸ್ವಾಧೀನಪಡಿಸಿಕೊಂಡಿದ್ದು,  ಸ್ವಾಧೀನಪಡಿಸಿದ ಎಲ್ಲಾ ಸೊತ್ತುಗಳ ಒಟ್ಟು ಅಂದಾಜು ಮೌಲ್ಯ ರೂ. 6,35,500/- ಆಗಿರುತ್ತದೆ. ಆರೋಪಿಯಾದ  ಮಹಮ್ಮದ್ ಆರೀಫ್ @ ಆರೀಫ್, ಪ್ರಾಯ:28 ವರ್ಷ,  ವಿಳಾಸ: #3-82-21-1, ನಲಿಕೆದ ಗುಡ್ಡೆ ಹೌಸ್, ಬೋಳಿಯಾರ್, ಉಳ್ಳಾಲ ತಾಲೂಕು ಎಂಬಾತನು  ಮನುಷ್ಯ ಜೀವಕ್ಕೆ ಹಾನಿಕಾರಿಯಾಗಿರುವ ಮನೋದ್ರೇಕಕಾರಿಯಾಗಿರುವ  ಮಾದಕ ದ್ರವ್ಯ  MDMA ವನ್ನು ಆಕ್ರಮವಾಗಿ ಹಣ ಗಳಿಸುವ ಉದ್ದೇಶದಿಂದ ಉಳ್ಳಾಲದ ಬಸ್ತಿಪಡ್ಪುವಿನ ಮೊಹಮ್ಮದ್ ಇಶಾನ್ @ ಇಸು ಎಂಬಾತನಿಂದ ಉಳ್ಳಾಲ ಸೈಯದ್ ಮದನಿ ದರ್ಗಾದ ಬಳಿ  ಯಾವುದೇ ಪರವಾನಿಗೆಯಿಲ್ಲದೆ KA-19-MH-3023 ನೇ ಅಲ್ಟೋ -800 ಕಾರಿನಲ್ಲಿ ಅಕ್ರಮವಾಗಿ ಮಾರಾಟ ಮಾಡಲು  ಉಳ್ಳಾಲ ತಾಲೂಕು ಮುಡಿಪು ಕಂಬಳಪದವು ಕೆಐಡಿಬಿ ರಸ್ತೆಯಲ್ಲಿ ಆರ್ ಟಿಓ ಬೃಹತ್ ವಾಹನಗಳ ಚಾಲನಾ ತರಬೇತಿ ಕೇಂದ್ರದ ಹತ್ತಿರ   ಸಾರ್ವಜನಿಕರಿಗೆ ಹಾಗೂ ಕಾಲೇಜು ವಿಧ್ಯಾರ್ಥಿಗಳಿಗೆ   ಮಾರಾಟ  ಮಾಡಲು ತಂದಿರುವುದು  ಧೃಡಪಟ್ಟಿದ್ದು  ಮುಂದಿನ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಎಂಬಿತ್ಯಾದಿ ಪಿರ್ಯಾದಿ ಸಾರಾಂಶವಾಗಿದೆ

    

Barke PS

ದಿನಾಂಕ 28-07-2023 ರಂದು 20-00 ಗಂಟೆಗೆ ಮಂಗಳೂರು  ನಗರದ ನೆಹರು ಅವೆನ್ಯೂ ರಸ್ತೆಯ ಬದಿಯಲ್ಲಿ ಕಿಶನ್ ಪೂಜಾರಿ ಪ್ರಾಯ 20 ವರ್ಷ ವಾಸ: 3-566-ಕಾಶಿಮಠ, ಸೆರಾಜೆ ರಸ್ತೆ, ವಿಟ್ಲ ಕಸಬಾ, ಬಂಟ್ವಾಳ ತಾಲೂಕು ಎಂಬಾತನು ಅಮಲು ಪದಾರ್ಥ ಸೇವಿಸಿ ನಶಯಯಲ್ಲಿರುವವನ್ನು ವಶಕ್ಕೆ ಪಡೆದು ವಿಚಾರಿಸಿದಲ್ಲಿ ಮಾದಕವಸ್ತು ಗಾಂಜಾ ಸೇವನೆ ಮಾಡಿರುವುದಾಗಿ ಆತನು ಒಪ್ಪಿಕೊಂಡಿರುತ್ತಾನೆ. ಈ ಬಗ್ಗೆ ಖಚಿತ ಪಡಿಸುವರೇ ಮಂಗಳೂರು ಏ.ಜೆ ಆಸ್ಪತ್ರೆಯ ವೈಧ್ಯರ ಮುಂದೆ ತಪಾಸಣೆಗೊಳಪಡಿಸಿದಲ್ಲಿ  ವೈದ್ಯರು “Tetrahydracannabinoid (Marijuana) POSITIVE”  ಎಂಬುದಾಗಿ ದೃಡಪತ್ರವನ್ನು ನೀಡಿದ್ದು, ಆಪಾದಿತನ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದು   ಎಂಬಿತ್ಯಾದಿಯಾಗಿರುತ್ತದೆ.

    

Panambur PS

ದಿನಾಂಕ : 28-07-2023 ರಂದು 16-45 ಗಂಟೆಗೆ ಬೆಂಗ್ರೆ ಗ್ರಾಮದ ಕಸ್ಬಾ ಬೆಂಗ್ರೆ ಡಾ; ಯಾಸೀನ್ ಕ್ಲಿನಿಕ್ ಗೆ ಹೋಗುವ ರಸ್ತೆ ಬಳಿ ಯಾವುದೋ ಮಾದಕ ವಸ್ತು ಸೇವನೆ ಮಾಡಿ ಅದರ ನಶೆಯಲ್ಲಿ ಇದ್ದಂತೆ ಕಂಡು ಬಂದ ಮೊಹಮ್ಮದ್ ಆವಿಶ್ ಪ್ರಾಯ 25 ವರ್ಷ,  ವಾಸ: ಮುಪ್ಸಿನಾ ಮಂಜಿಲ್, ಡಾ; ಯಾಸೀನ್ ಕ್ಲಿನಿಕ್ ಬಳಿ, ಕಸ್ಬಾ ಬೆಂಗ್ರೆ, ಬೆಂಗರೆ ಗ್ರಾಮ, ಮಂಗಳೂರು ಎಂಬಾತನನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆ ಬಗ್ಗೆ ಎ.ಜೆ ಆಸ್ಪತ್ರೆಯ ವೈದ್ಯಾದಿಕಾರಿಯವರಿಂದ ತಪಾಸಣೆಗೊಳಪಡಿಸಿದಲ್ಲಿ  ವೈದ್ಯಾಧಿಕಾರಿಗಳು ಪರೀಕ್ಷಿಸಿ The Urine Sample Tested For The Presence of Tetrahydracannabinoid ( Marijuana) is Positive ಎಂದು ವರದಿ ನೀಡಿರುತ್ತಾರೆ. ಆಪಾದಿತನಾದ ಮೊಹಮ್ಮದ್ ಆವಿಶ್ ಗಾಂಜಾ ಸೇವನೆ ಮಾಡಿರುವುದು ದೃಡ ಪಟ್ಟಿರುವುದರಿಂದ ಸದ್ರಿಯವನ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದು ಎಂಬಿತ್ಯಾದಿ.

 

Traffic North Police Station          

ದಿನಾಂಕ 27-07-2023 ರಂದು ಪಿರ್ಯಾದಿ Sumana Devadiga ದಾರರ ಗಂಡನಾದ ಸುರೇಶ ದೇವಾಡಿಗ (43) ರವರು ಎಂದಿನಂತೆ ಕೆಲಸ ಮುಗಿಸಿಕೊಂಡು ಅವರ ಬಾಬ್ತು KA-19-W-7139 ನಂಬ್ರದ ಮೋಟಾರ್ ಸೈಕಲ್ ನಲ್ಲಿ ಕಿನ್ನಿಗೊಳಿಯಿಂದ ಕವತ್ತಾರುನಲ್ಲಿರುವ ಮನೆ ಕಡೆಗೆ ಬರುತ್ತಿರುವಾಗ ಜೂರಾಗಿ ಮಳೆ ಬರುತ್ತಿದ್ದ ಕಾರಣ ಸಮಯ ಸುಮಾರು ರಾತ್ರಿ 11-00 ಗಂಟೆಗೆ ಕವತ್ತಾರು ಕ್ರಾಸ್ ನಲ್ಲಿ ಒಮ್ಮಲೇ ಮೋಟಾರ್ ಸೈಕಲ್ ಸ್ಕೀಡ್ ಆಗಿ ರಸ್ತೆಗೆ ಬಿದ್ದ ಪರಿಣಾಮ ಅವರ ಎರಡು ಕಾಲು ಬೆರಳುಗಳಿಗೆ ಮತ್ತು ಎರಡು ಕೈ ಬೆರಳುಗಳಿಗೆ ರಕ್ತ ಗಾಯವಾಗಿದ್ದು, ಮುಖಕ್ಕೆ ಮತ್ತು ಹಣೆಗೆ ಗುದ್ದಿದ ರಕ್ತಗಾಯವಾಗಿರುತ್ತದೆ. ಅಲ್ಲಿದ್ದ ಪರಿಚಯಸ್ಥರೊಬ್ಬರು ಚಿಕಿತ್ಸೆಯ ಬಗ್ಗೆ ಕಾನ್ಸೇಟ್ ಆಸ್ಪತ್ರೆಗೆ ದಾಖಲಿಸಿದ್ದು, ಈ ದಿನ ದಿನಾಂಕ 28-07-2023 ರಂದು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಕುಂಟಿಕಾನ್ ಎ.ಜೆ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಿಸಿರುತ್ತಾರೆ ಎಂಬಿತ್ಯಾದಿ.

          

 

ಇತ್ತೀಚಿನ ನವೀಕರಣ​ : 21-08-2023 02:22 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080