ಅಭಿಪ್ರಾಯ / ಸಲಹೆಗಳು

Crime Reported in :  Traffic North Police Station       

ದಿನಾಂಕ 29-08-2022 ರಂದು ಪಿರ್ಯಾದಿ Jehangir Pervez ಅವರ ಬಾಬ್ತು DL-3C-AA-1714 ನಂಬ್ರದ ಕಾರನ್ನು ಮಂಗಳೂರಿನಿಂದ ಬೈಕಂಪಾಡಿ ಕಡೆಗೆ ಚಲಾಯಿಸಿಕೊಂಡು ಬರುತ್ತಾ ಪಣಂಬೂರು ಸಿಗ್ನಲಿನಲ್ಲಿ ಮುಂದಕ್ಕೆ ಹೋಗುತ್ತಿದ್ದಂತೆ ಬೆಳಿಗ್ಗೆ ಸುಮಾರು 11:20 ಗಂಟೆಗೆ  ಪಿರ್ಯಾದಿದಾರರ ಕಾರಿನ ಬಲಬದಿಯಿಂದ KA-19-AB-9663 ನಂಬ್ರದ 407 ಗೂಡ್ಸ್ ವಾಹನವನ್ನು ( 407 ಟ್ರೈಲರ್ )  ಅದರ ಚಾಲಕನಾದ ವಿಷ್ಣು ಪ್ರಸಾದ್ ಎಂಬಾತನು ನಿಲರ್ಕ್ಷ್ಯತನದಿಂದ ತಾನು ಹೋಗುತ್ತಿದ್ದ ಲೇನ್ (ಪಥ) ತಪ್ಪಿಸಿ, ಮುಂದಕ್ಕೆ ಹೋಗುತ್ತಾ ಪಿರ್ಯಾದಿ ದಾರರ ಕಾರಿನ ಎದುರಿನ ಬಲಬದಿಗೆ ಹಾಗೂ ಹಿಂಬದಿಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರ ಕಾರಿನ ಬಲಬದಿ ಮುಂಭಾಗ ಮತ್ತು ಹಿಂಭಾಗ ಜಖಂ ಗೊಳಿಸಿರುತ್ತಾರೆ ಎಂಬಿತ್ಯಾದಿ

Crime Reported in :Konaje PS

ದಿನಾಂಕ 28.08.2022 ರಂದು ಪಿರ್ಯಾದಿ Sharanappa Bhandari ದಾರರು  ಸಿಬ್ಬಂದಿಗಳೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿರುವಾಗ ಸುಮಾರು 09.45 ಗಂಟೆಗೆ ಬಂಟ್ವಾಳ ತಾಲೂಕು ಪಜೀರು ಗ್ರಾಮದ ಅರ್ಕಾನ ಮಸೀದಿ ಬಳಿ ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುತ್ತಿದ್ದ ಆರೋಪಿ ಮಹಮ್ಮದ್ ರಿಯಾಜ್ ಉಮ್ಮರ್(35) ನನ್ನು ವಿಚಾರಿಸಿದಾಗ ಆರೋಪಿತನು ಮಾದಕ ವಸ್ತುವನ್ನು ಸೇವನೆ ಮಾಡುತ್ತಿದ್ದುದಾಗಿ ತಪ್ಪೊಪ್ಪಿಕೊಂಡ ಮೇರೆಗೆ ಆರೋಪಿಯನ್ನು ಮುಂದಿನ ಕ್ರಮದ ಬಗ್ಗೆ ವಶಕ್ಕೆ ಪಡೆದುಕೊಂಡು THC ವೈದ್ಯಕೀಯ ಪರೀಕ್ಷೆ ನಡೆಸಿದಾಗ ಗಾಂಜಾ ಎಂಬ ಮಾದಕ ವಸ್ತು ಸೇವನೆ ಮಾಡಿದ ಬಗ್ಗೆ ದೃಢಪಟ್ಟ ಮೇರೆಗೆ ಕಾನೂನು ಕ್ರಮಕೈಗೊಳ್ಳಲಾಗಿದೆ ಎಂಬಿತ್ಯಾದಿ.

Crime Reported in :Traffic South Police Station      

ದಿನಾಂಕ:28-08-2022 ರಂದು ಪಿರ್ಯಾದಿ K A MAHAMMOD ದಾರರು ಅವರ ಬಾಬ್ತು ಕಾರು ನಂಬ್ರ:KA-12-P-4102 ನೇದರಲ್ಲಿ ಪಿರ್ಯಾದಿದಾರರು ಚಾಲಕರಾಗಿ ಅವರ ಸ್ನೇಹಿತ ಫೆಲಿಕ್ಸ್ ಪಿಂಟೋ ರವರನ್ನು ಸಹ ಪ್ರಯಾಣಿಕರಾಗಿ ಕುಳ್ಳಿರಿಸಿಕೊಂಡು ಬಿಸಿ ರೋಡ್ ಕಡೆಗೆ ತೊಕ್ಕೊಟ್ಟು ಮಾರ್ಗವಾಗಿ ಕಾರನ್ನು ಚಲಾಯಿಸಿಕೊಂಡು ಹೋಗುತ್ತಿರುವಾಗ ಸಮಯ ಸುಮಾರು ಮದ್ಯಾಹ್ನ: 1-00 ಗಂಟೆಗೆ ತೊಕ್ಕೊಟ್ಟು ಪ್ಲೈ ಓವರ್ ಕೆಳಗಿನಿಂದ ದೇರಳಕಟ್ಟೆ ಕಡೆಗೆ ಹೋಗುತ್ತಿರುವಾಗ ಕಲ್ಲಾಪು ಕಡೆಯಿಂದ ದೇರಳಕಟ್ಟೆ ಕಡೆಗೆ ಬರುತ್ತಿದ್ದ ಬಸ್ಸು ನಂಬ್ರ:KA-19-D-4653 ನೇದರ ಚಾಲಕ ಮಹ್ಮದ್ ಸಲೀಂ ಎಂಬಾತನು ಬಸ್ಸನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಕಾರಿನ ಎಡಬದಿಗೆ ಡಿಕ್ಕಿ ಪಡಿಸಿದ ಪರಿಣಾಮ ಅವರ ಕಾರಿನ ಎಡಬದಿ ಸಂಪೂರ್ಣ ಜಖಂಗೊಂಡಿದ್ದು ಹಾಗೂ ಅಪಘಾತ ಪಡಿಸಿದ ಬಸ್ಸಿನ ಮುಂಭಾಗದ ಬಂಪರ್ ಕೂಡ ಜಖಂಗೊಂಡಿರುತ್ತದೆ.ಎಂಬಿತ್ಯಾದಿ

 

ಇತ್ತೀಚಿನ ನವೀಕರಣ​ : 29-08-2022 07:28 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080