Crime Report in Barke PS
ದಿನಾಂಕ 29-08-2023 ರಂದು ಮಧ್ಯಾಹ್ನ 13-30 ಗಂಟೆಗೆ ಮಂಗಳೂರು ನಗರದ ಕೊಡಿಯಲ್ ಬೈಲ್ ಬಳಿ ಯುವಕನೊಬ್ಬನು ಅಮಲಿನಲ್ಲಿದ್ದಂತೆ ಕಂಡು ಬಂದಿದ್ದು ವಿಚಾರಿಸಿದಾಗ ಪ್ರೀತಮ್ ಶೆಟ್ಟಿ ಪ್ರಾಯ: 22 ವರ್ಷ ವಾಸ: ವಿಜಯಲಕ್ಷ್ಮಿ ಕಂಪೌಂಡ್ ಟಿ.ಟಿ. ರೋಡ್ ಕಾರ್ ಸ್ಟ್ರೀಟ್ ಮಂಗಳೂರು ಎಂಬಾತನು ಮಾದಕ ವಸ್ತು ಗಾಂಜಾ ಸೇವನೆ ಮಾಡಿರುವವನನನ್ನು ವಶಕ್ಕೆ ತೆಗೆದುಕೊಂಡು ಏ.ಜೆ ಆಸ್ಪತ್ರೆಯ ವೈಧ್ಯರ ಮುಂದೆ ಹಾಜರುಪಡಿಸಿದಲ್ಲಿ ವೈಧ್ಯರು ಯುವಕನನ್ನು ವೈಧ್ಯಕೀಯ ತಪಾಸಣೆಯನ್ನು ಮಾಡಿ “Tetrahydracannabinoid (Marijuana) POSITIVE” ಎಂಬುದಾಗಿ ದೃಡಪತ್ರವನ್ನು ನೀಡಿದ್ದು, ಆಪಾದಿತನ ವಿರುದ್ದ ಎನ್.ಡಿ.ಪಿ.ಎಸ್ ಕಾಯ್ದೆ 1985 ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದು ಎಂಬಿತ್ಯಾದಿಯಾಗಿರುತ್ತದೆ.
Mangalore East Traffic PS
ಪಿರ್ಯಾದಿದಾರರಾದ ನಿಸಾರ್ ಅಹಮ್ಮದ್ ಎಂಬವರ ಅಕ್ಕನ ಮಗನಾದ ಫಜುಲುಲ್ ರಹಮತ್ (22 ವರ್ಷ) ಎಂಬವರು ದಿನಾಂಕ: 28-08-2023 ರಂದು ಸಮಯ ಸುಮಾರು ರಾತ್ರಿ 23:10 ಗಂಟೆಗೆ ತನ್ನ ಬಾಬ್ತು KA-19-ES-1514 ನೇ ಮೋಟಾರು ಸೈಕಲ್ ನ್ನು ಸವಾರಿ ಮಾಡಿಕೊಂಡು ಯು.ಪಿ ಮಲ್ಯ ರಸ್ತೆಯಲ್ಲಿರುವ ಆರ್ ಟಿ ಓ ಕಛೇರಿ ಎದುರುಗಡೆ ಎಂಬಲ್ಲಿ ಅತೀ ವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಹಂಪ್ಸ್ ನ್ನು ದಾಟಿ ಒಮ್ಮೇಲೆ ಸ್ಕಿಡ್ ಆಗಿ ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದವರನ್ನು ಪಿರ್ಯಾದಿದಾರರು ಹಾಗೂ ಅಲ್ಲಿ ಸೇರಿದ ಸಾರ್ವಜನಿಕರು ಎಬ್ಬಿಸಿ ಉಪಚರಿಸಿ ನೋಡಿದಾಗ ಆತನ ತಲೆಗೆ, ಎದೆಗೆ ಹಾಗೂ ದೇಹದ ಇತರ ಕಡೆಗಳಲ್ಲಿ ಗುದ್ದಿದ ನಮೂನೆಯ ಗಾಯವಾಗಿದ್ದು, ಆತನು ಮಾತನಾಡುತ್ತಿರಲಿಲ್ಲ. ಪಿರ್ಯಾದಿದಾರರು ಮತ್ತು ಅಲ್ಲಿ ಸೇರಿದ ಸಾರ್ವಜನಿಕರು ಚಿಕಿತ್ಸೆಯ ಬಗ್ಗೆ ಯೆನಪೋಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿಯ ವೈದ್ಯರು ಪರೀಕ್ಷಿಸಿ ಒಳರೋಗಿಯನ್ನಾಗಿ ದಾಖಲಿಸಿಕೊಂಡು ಚಿಕಿತ್ಸೆಯನ್ನು ನೀಡಿರುತ್ತಾರೆ. ಈ ಅಪಘಾತಕ್ಕೆ KA-19-ES-1514 ನೇ ಮೋಟಾರು ಸೈಕಲ್ ಸವಾರ ಫಜುಲುಲ್ ರಹಮತ್ ನ ಅತೀ ವೇಗ ಹಾಗೂ ನಿರ್ಲಕ್ಷತನದ ಚಾಲನೆಯೇ ಕಾರಣವಾಗಿರುತ್ತದೆ. ಆದುದರಿಂದ ಆತನ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿಕೆ ಎಂಬಿತ್ಯಾದಿ
Panambur PS
ದಿನಾಂಕ : 28-08-2023 ರಂದು 23-30 ಗಂಟೆಗೆ ಕಸಬಾ ಬೆಂಗ್ರೆಯ ಸೂಪರ್ ಸ್ಟಾರ್ ಮೈದಾನದ ಸಮೀಪ ಯಾವುದೋ ಮಾದಕ ವಸ್ತು ಸೇವನೆ ಮಾಡಿ ಅದರ ನಶೆಯಲ್ಲಿ ಇದ್ದಂತೆ ಕಂಡು ಬಂದ ಮೊಹಮ್ಮದ್ ಸಲ್ಮಾನ್ ಪ್ಯಾರಿಜ್, ವಾಸ. # 2 ನೇ ಮಹಡಿ ತಹಿಬಾ ಟವರ್ಸ್ ಕುದ್ರೋಳಿ ಅಳಕೆ ಮಂಗಳೂರು ಎಂಬವನನ್ನು ವಶಕ್ಕೆ ಪಡೆದುಕೊಂಡಿದ್ದು, ಸದ್ರಿಯವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದಲ್ಲಿ ವೈದ್ಯಾಧಿಕಾರಿಗಳು ಪರೀಕ್ಷಿಸಿ The Urine Sample Tested For The Presence of Tetrahydracannabinoid (Marijuana) is Positive ಎಂದು ವರದಿ ನೀಡಿರುತ್ತಾರೆ. ಆಪಾದಿತನು ಗಾಂಜಾ ಸೇವನೆ ಮಾಡಿರುವುದು ದೃಡಪಟ್ಟಿರುವುದರಿಂದ ಆಪಾದಿತನ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದು ಎಂಬಿತ್ಯಾದಿಯಾಗಿರುತ್ತದೆ.
CEN Crime PS
ದಿನಾಂಕ-27-08-20203 ರಂದು ಪಿರ್ಯಾದಿದಾರರ ಮೊಬೈಲ್ ನಂಬರ್ ನೇದ್ದಕ್ಕೆ 918374917353 ಮೊಬೈಲ್ ನಂಬ್ರದಿಂದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಎಂಬ ಹೆಸರಿನಲ್ಲಿ ಸಂದೇಶ ಬಂದಿದ್ದು, ಸದರಿ ಸಂದೇಶದ ಲಿಂಕ್ ನ್ನು ಒತ್ತಿ ಅದರಲ್ಲಿ ಕೋರಲಾದ ಮಾಹಿತಿಯನ್ನು ತುಂಬಿರುತ್ತಾರೆ ಮರುಕ್ಷಣವೇ ಅಪರಿಚಿತ ವ್ಯಕ್ತಿ 918374917353 ಮೊಬೈಲ್ ನಂಬ್ರದಿಂದ ಕರೆ ಮಾಡಿ ಬ್ಯಾಂಕ್ ಅಧಿಕಾರಿಯೆಂದು ಪರಿಚಯಿಸಿ ಫಿರ್ಯಾದಿದಾರರ ಪಾನ್ ಕಾರ್ಡ್ ಅಪ್ ಡೇಟ್ ಮಾಡುವಂತೆ ಮಾಹಿತಿ ಕೋರಿದ್ದು ಅದರಂತೆ ಫಿರ್ಯಾದಿದಾರರು ಬ್ಯಾಂಕ್ ಅಧಿಕಾರಿಯೆಂದು ನಂಬಿ ಕರೆ ಮಾಡಿದ ವ್ಯಕ್ತಿ ಕೋರಿಕೊಂಡ ಮಾಹಿತಿ ಜೊತೆಗೆ ಓಟಿಪಿಯನ್ನು ಶೇರ್ ಮಾಡಿರುತ್ತಾರೆ ಆ ಬಳಿಕ ಫಿರ್ಯಾದಿದಾರರ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಖಾತೆ ನಂಬ್ರ- ನೇದ್ದರಿಂದ ಹಂತ ಹಂತವಾಗಿ ರೂ-6,21,082/- ಹಣವನ್ನು ಫಿರ್ಯಾದಿದಾರರ ಖಾತೆಯಿಂದ ವರ್ಗಾಯಿಸಿಕೊಂಡು ಮೋಸ ಮಾಡಿರುವುದಾಗಿದೆ ಎಂಬಿತ್ಯಾದಿ.
Mangalore North PS
ಪಿರ್ಯಾದಿ ABHISHEK ದಾರರು ಮಂಗಳೂರಿನ ದೇರಳಕಟ್ಟೆಯಲ್ಲಿರುವ ಮೆಡಿಕಲ್ ಕಾಲೇಜಿನಲ್ಲಿ ಅಟೆಂಡರ್ ಕೆಲಸವನ್ನು ಮಾಡಿಕೊಂಡಿರುವುದಾಗಿದೆ. ಕೆಲಸಕ್ಕೆ ಹೋಗಿ ಬರಲು ಅವರ ತಂದೆಯ ಹೆಸರಿನಲ್ಲಿರುವ KA-19-EC-9145 ನೊಂದಣಿ ನಂಬ್ರದ ಹೀರೋ ಹೋಂಡಾ ದ್ವಿಚಕ್ರ ವಾಹನವನ್ನು ಉಪಯೋಗಿಸುತ್ತಿದ್ದು ದಿನಾಂಕ 09-08-2023 ರಂದು ಪಿರ್ಯಾದಿದಾರರು ಕಾಲೇಜ್ ನ ಕೆಲಸದ ನಿಮಿತ್ತ ಮಂಗಳೂರಿಗೆ ಬಂದು ಬಾಬ್ತು ಹೀರೋ ಹೋಂಡಾ ದ್ವಿಚಕ್ರವನ್ನು ಸೈಂಟ್ ಅಲೋಷಿಯಸ್ ಐಟಿಐ ಕಾಲೇಜಿನ ಎದುರುಗಡೆ ಪಾರ್ಕ್ ಮಾಡಿ ಹೋಗಿದ್ದು ಸಂಜೆ ಸುಮಾರು 4.30 ಗಂಟೆಗೆ ಪಾರ್ಕ್ ಮಾಡಿದ ಸ್ಥಳದ ಬಳಿಗೆ ಬಂದಾಗ ಸದ್ರಿ ಸ್ಥಳದಲ್ಲಿ ದ್ವಿಚಕ್ರ ಅಲ್ಲಿರದೇ ಇದ್ದು ನಂತರ ಎಲ್ಲಾ ಕಡೆ ಹುಡುಕಾಡಿದರೂ ಈ ವರೆಗೂ ಸಿಕ್ಕಿರುವುದಿಲ್ಲ. ಪಿರ್ಯಾದಿದಾರರ KA-19-EC-9145 ನೊಂದಣಿ ನಂಬ್ರದ ಹೀರೋ ಹೋಂಡಾ ದ್ವಿ ಚಕ್ರ ವಾಹನವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವದು ದೃಡಪಟ್ಟಿರುವುದರಿಂದ ದೂರನ್ನು ನೀಡಿರುವುದಾಗಿದೆ ಎಂಬಿತ್ಯಾದಿ ಸಾರಾಂಶ.
Surathkal PS
ಪಿರ್ಯಾಧಿದಾರರಾದ ಶ್ರಿ ಸನ್ಯಾಸಿ ನಾಯ್ಡು ಬೋರಾ (37) ರವರು ತನ್ನ ಬಾಬ್ತು AP 31 BX 7156 ನಂಬ್ರದ ಬಜಾಜ್ ಪಲ್ಸರ್ ಮೋಟಾರ್ ಸೈಕಲ್ ನ್ನು ದಿನಾಂಕ: 27-08-2023 ರಂದು ಪರ್ನ್ಸ್ ರೆಸಿಡೆನ್ಸಿ ಪಾರ್ಕಿಂಗ್ ಬಳಿ ಪಾರ್ಕ್ ಮಾಡಿ ರೂಂ ಗೆ ಹೊಗಿದ್ದು ಮಾರನೆ ದಿನ ದಿನಾಂಕ: 28-08-2023 ರಂದು ಬೆಳಿಗ್ಗೆ 05.30 ಗಂಟೆಗೆ ಕೆಲಸಕ್ಕೆ ಹೊಗುವರೇ ಪಾರ್ಕಿಂಗ್ ಜಾಗಕ್ಕೆ ಬಂದು ನೋಡುವಾಗ ಫಿರ್ಯಾದುದಾರರ ಬಾಬ್ತು AP 31 BX 7156 ನಂಬ್ರದ ಮೋಟಾರ್ ಸೈಕಲ್ ಪಾರ್ಕ್ ಮಾಡಿದ ಜಾಗದಲ್ಲಿ ಇಲ್ಲದೇ ಇದ್ದು ಸದ್ರಿ ವಾಹನವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿದೆ ಪಿರ್ಯಾದಿದಾರರ ಬಾಬ್ತು ಬಜಾಜ್ ಮೋಟಾರ್ ಸೈಕಲ್ ಪತ್ತೆ ಮಾಡಿ ಕೊಡುವರೇ ಕೋರಿಕೆ ಎಂಬ್ಯಿತ್ಯಾಗಿ.
2 ದಿನಾಂಕ : 28-08-2023 ರಂದು ಪಿರ್ಯಾದಿ Saahul Hameed ದಾರರು ರೂಟ್ ನಂ 45 ಸಿ ನೇ ಬಸ್ಸ್ ಕೆಎ-19-ಸಿ-3365ನೇ ನಂಬ್ರದ ಬಸ್ಸಿನಲ್ಲಿ ನಿರ್ವಾಹಕನಾಗಿ ಸಂಜೆ ಸುಮಾರು 6.44 ಗಂಟೆಗೆ ಸ್ಟೇಟ್ ಬ್ಯಾಂಕಿನಿಂದ ಕಾಟಿಪಳ್ಳ ಕೈಕಂಬ ಕಡೆಗೆ ಹೊರಟು ಬರುತ್ತಿರುವಾಗ ಸಂಜೆ 6.40 ಗಂಟೆಗೆ ಹೊರಟಿದ್ದ ಆರೋಪಿ ರಿಜ್ವಾನ್ ಇವರು ನಿರ್ವಾಹಕನಾಗಿದ್ದ ಬಸ್ಸು ಕೆಎ-19-ಎಎ-0585 ನೇದನ್ನು ಸುರತ್ಕಲ್ ಗೋವಿಂದಾಸ್ ಕಾಲೇಜ್ ಬಸ್ ಸ್ಟಾಂಡ್ ಬಳಿ ಇರುವುದನ್ನು ಕಂಡು ಅದನ್ನು ಓವರ್ ಟೇಕ್ ಮಾಡಿ ಸುರತ್ಕಲ್ ಜಂಕ್ಷನ್ ಬಳಿ ಇರುವ ಬಸ್ಸು ನಿಲ್ದಾಣದಲ್ಲಿ ರಾತ್ರಿ 7.24 ಗಂಟೆ ಸಮಯಕ್ಕೆ ತಂದು ನಿಲ್ಲಿಸಿದಾಗ ಆರೋಪಿ ರಿಜ್ವಾನ್ ನು ಬಸ್ಸನ್ನು ಓವರ್ ಟೇಕ್ ಮಾಡಿ ಮುಂದೆ ಹೋಗಿದ್ದ ಬಗ್ಗೆ ವಿಚಾರಿಸಿ ನೀನು ಕೈಕಂಬಕ್ಕೆ ಬಾ ಎಂದು ಹೇಳಿ ಮುಂದೆ ಹೋಗಿದ್ದು ಮುಂದೆ ಚೊಕ್ಕಬೆಟ್ಟು ಮೆಲ್ಟಿಂಗ್ ಪಾಯಿಂಟ್ ಬಳಿ ಆರೋಪಿ ಉಸ್ಮಾನ್ ನು ಮೋಟಾರ್ ಸೈಕಲ್ ನಲ್ಲಿ ಸವಾರಿ ಮಾಡುತ್ತಾ ಪಿರ್ಯಾದಿದಾರರ ಬಸ್ಸು ಮುಂದೆ ಹೋಗದಂತೆ ತಡೆಯುತ್ತಾ ರಾತ್ರಿ 7.40 ಗಂಟೆಯ ಸಮಯಕ್ಕೆ ಗಣೇಶಪುರ ಸರ್ಕಲ್ ಬಳಿ ಬಸ್ಸು ನಿಲ್ಲಿಸಿದಾಗ ಅಲ್ಲಿಗೆ ಬಂದ ಆರೋಪಿ ರಿಜ್ವಾನ್ ನು ಪಿರ್ಯಾದಿದಾರರನ್ನು ಕೆಳಗೆ ಇಳಿಯುವಂತೆ ಹೇಳಿ ಅದೇ ಸಮಯಕ್ಕೆ ಬಂದ ಉಸ್ಮಾನ್ ನು ಪಿರ್ಯಾದಿದಾರರನ್ನು ಬಸ್ಸಿನಿಂದ ಕೆಳಗೆ ಇಳಿಸಿ ಉಸ್ಮಾನ್ ಕೈಯಲ್ಲಿದ್ದ ಕೀ ಪಂಚ್ ನಿಂದ ಪಿರ್ಯಾದಿದಾರರ ಬಲ ಕಣ್ಣಿನ ಕೆಳಗೆ ಗೀರಿ ಎದೆಗೆ ಕೀ ಪಂಚ್ ನಿಂದ ಹೊಡೆದು ಬೇವರ್ಸಿ ನಿನ್ನ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಲ್ಲದೆ ಆರೋಪಿ ರಫೀಕ್ ನು ಬೇವರ್ಸಿ ಎಂಬಿತ್ಯಾದಿ ಬೈದಿದ್ದು ಅವರಿಂದ ತಪ್ಪಿಸಿಕೊಳ್ಳಲು ಓಡಿದಾಗ ಪಿರ್ಯಾದಿದಾರರನ್ನು ಉದ್ದೇಶಿಸಿ ಬೇವರ್ಸಿ ನಿನ್ನ ತಾಯಿಗೆ ಮಗ ಇಲ್ಲದಂತೆ ಮಾಡುತ್ತೇನೆ ಎಂಬುವುದಾಗಿ ಬೆದರಿಕೆಯನ್ನು ಹಾಕಿದ್ದಾಗಿದೆ ಬಸ್ಸನ್ನು ಓವರ್ ಟೇಕ್ ಮಾಡಿದ್ದಕ್ಕೆ ಈ ಕೃತ್ಯವನ್ನು ಆರೋಪಿಗಳು ಮಾಡಿದ್ದಾಗಿ ಎಂಬಿತ್ಯಾದಿಯಾಗಿರುತ್ತದೆ.
3) ಪಿರ್ಯಾದಿ R Vigneshದಾರರ ಸ್ನೇಹಿತನಾದ ಸತೀಶ್ ರವರು MRPL ಟೌನ ಶಿಪ್ ನ ಕ್ವಾಟ್ರಸ್ ನಂ HN-185 ನಲ್ಲಿ ವಾಸವಾಗಿದ್ದು ದಿನಾಂಕ 21-08-2023 ರಂದು ಆತನ ಊರಾದ ಚೆನೈಗೆ ಹೋಗಿದ್ದಾಗಿರುತ್ತದೆ, ದಿನಾಂಕ 28-08-2023 ರಂದು ಪಿರ್ಯಾದಿದಾರರು MRPL ನಲ್ಲಿ ಕೆಲಸದಲ್ಲಿರುವಾಗ ಬೆಳಿಗ್ಗೆ 07:00 ಗಂಟೆಗೆ MRPL ಭದ್ರತಾ ಸಿಬ್ಬಂದಿಯವರು ಪೋನ್ ಮಾಡಿ ಸತೀಶನ ಮನೆಯಲ್ಲಿ ಕಳ್ಳತನವಾದ ಬಗ್ಗೆ ಮಾಹಿತಿ ನೀಡಿದಂತೆ ಬಂದು ನೋಡಿದಾಗ ಸದ್ರಿ ಮನೆಯ ಬಾಗಿಲು ಓಡೆದು ಬೀರು ಓಪನ್ ಆಗಿದ್ದು ಸದ್ರಿ ಬೀರುವಿನಲ್ಲಿ ಇಟ್ಟಿದ್ದ ಲ್ಯಾಪ್ ಟ್ಯಾಪ್, ಬೆಳ್ಳಿಯ ತಂಬಿಗೆ, ಬೆಳ್ಳಿಯ ಬ್ರಾಸ್ ಲೈಟ್, ಬೆಳ್ಳಿಯ ಡಾಲರ್, ಬೆಳ್ಳಿಯ ಚೈನ್, ಬೆಳ್ಳಿಯ ಉಂಗುರಗಳು ಕಳವಾಗಿರುವುದಾಗಿದೆ, ದಿನಾಂಕ 27-08-2023 ರಂದು ರಾತ್ರಿಯ ಸಮಯದಲ್ಲಿ ಮೇಲ್ಕಾಣಿಸಿದ ಸತೀಶನ ವ್ಯಾಸ್ತವ್ಯದ ಮನೆ ಹಾಗೂ ಅಲ್ಲಿ ಇತರ ಮನೆಗಳಲ್ಲಿ ಕೂಡ ಕಳ್ಳರು ಬೀಗ ಓಡೆದು ಕಳ್ಳತನ ಮಾಡಿರುವುದಾಗಿದೆ ಎಂಬಿತ್ಯಾದಿ.
Kankanady Town PS
ದಿನಾಂಕ:28-08-2023 ರಂದು ಯಾರೋ ಆರೋಪಿಗಳು ಮಂಗಳೂರು ಮಹಾ ನಗರ ಪಾಲಿಕೆಯಿಂದ ಪೂರ್ವಾನುಮತಿಯನ್ನು ಪಡೆಯದೇ “ಮೊಸರು ಕುಡಿಕೆಯ ಪ್ರಯುಕ್ತ ಬನ್ನೂರು ಕುರಿ ಮಾಂಸ ಸಿಗುತ್ತದೆ, ಸ್ಥಳ: ಪಡೀಲ್ ರೈಲ್ವೇ ಗೇಟ್ ಹತ್ತಿರ, ದಿನಾಂಕ:07-09-2023 ನೇ ಗುರುವಾರ, ಎಂಬಿತ್ಯಾದಿಯಾಗಿರುವ ಬ್ಯಾನರ್ ಗಳನ್ನು ಅನಧಿಕೃತವಾಗಿ ಮಂಗಳೂರು ನಗರದ ಬಜಾಲ್ ಕ್ರಾಸ್ ನಲ್ಲಿ ಪಾಳುಬಿದ್ದಿರುವ ಗೂಡಂಗಡಿಗೆ, ಬಜಾಲ್ ರೈಲ್ವೇ ಅಂಡರ್ ಪಾಸ್ ಬಳಿ ದರ್ಬಾರ್ ಹಿಲ್ ಕಡೆಗೆ ಹೋಗುವ ರಸ್ತೆಯ ಬಳಿ ವಿದ್ಯುತ್ ಕಂಬಕ್ಕೆ, ಫೈಸಲ್ ನಗರಕ್ಕೆ ಹೋಗುವ ಕ್ರಾಸ್ ರೋಡ್ ನ ಬಳಿ ಪಾಳು ಬಿದ್ದಿರುವ ಗೂಡಂಗಡಿಗೆ ಹಾಗೂ ವೀರನಗರ ಕೃಷ್ಣ ಭಜನಾ ಮಂದಿರದ ಬಸ್ಸು ತಂಗುದಾಣಕ್ಕೆ ಕಟ್ಟಿ ಸಾರ್ವಜನಿಕ ಸ್ಥಳದ ಮೂಲ ಸ್ವರೂಪವನ್ನು ವಿರೂಪಗೊಳಿಸಿರುವುದಾಗಿದೆ ಎಂಬಿತ್ಯಾದಿಯಾಗಿರುತ್ತದೆ.