ಅಭಿಪ್ರಾಯ / ಸಲಹೆಗಳು

Crime Report in  Traffic South Police Station

ದಿನಾಂಕ:28-09-2023 ರಂದು ಫಿರ್ಯಾದಿ NIYANTH KUMAR ದಾರರ ದೊಡ್ಡಮ್ಮನ ಮಗನಾದ ಪ್ರಶಾಂತ್ (43 ವರ್ಷ) ರವರು ರಾತ್ರಿ ಸಮಯ 10:30 ಗಂಟೆಗೆ ಕೋಟೆಕಾರು ಬೀರಿ ಜಂಕ್ಷನ್ ಬಳಿಯ ಕಾರ್ತಿಕ್ ಹೋಟೆಲ್ ನಿಂದ ಊಟವನ್ನು ಪಾರ್ಸೆಲ್ ಪಡೆದುಕೊಂಡು ಹೋಟೆಲ್ ನಿಂದ ಹೊರಟು ನಡೆದುಕೊಂಡು ಕೋಟೆಕಾರು ಬೀರಿ ಜಂಕ್ಷನ್ ಬಳಿ ಬಂದು ಕೋಟೆಕಾರು ಬೀರಿ ಜಂಕ್ಷನ್ ಬಳಿಯ ದ್ವಾರದ ಕಡೆಯಿಂದ ಎದುರಿನ ಉಮಾಪ್ಯಾಲೆಸ್ ಹೋಟೆಲ್ ಕಡೆಗೆ ರಾ.ಹೆ-66 ರ ರಸ್ತೆಯನ್ನು ದಾಟುತ್ತಿರುವ ಸಮಯ ಕಾಸರಗೋಡು ಕಡೆಯಿಂದ ಮಂಗಳೂರು ಕಡೆಗೆ KL-10-AR-0945 ನೇ ನಂಬ್ರದ ಇನೋವಾ ಕಾರನ್ನು ಅದರ ಚಾಲಕ ರಿಝ್ವಾನ್ (25 ವರ್ಷ) ರವರು ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಪ್ರಶಾಂತ್ ರವರಿಗೆ ಡಿಕ್ಕಿ ಪಡಿಸಿದ ಪರಿಣಾಮ ಅವರು ಸಾರ್ವಜನಿಕ ರಸ್ತೆಗೆ ಬಿದ್ದಿರುತ್ತಾರೆ, ಈ ಅಪಘಾತದ ಪರಿಣಾಮ ಪ್ರಶಾಂತ್ ರವರ ಕುತ್ತಿಗೆಯ ಹಿಂಭಾಗಕ್ಕೆ ಮೂಳೆ ಮುರಿತದ ಗಾಯ , ಕುತ್ತಿಗೆಯ ಎಡಭಾಗಕ್ಕೆ ಚರ್ಮ ಹರಿದ ರಕ್ತಗಾಯ, ಎಡಕಾಲಿನ ಕೋಲುಕಾಲಿಗೆ ಮೂಳೆ ಮುರಿತದ ಗಂಭಿರ ಸ್ವರೂಪದ ರಕ್ತಗಾಯ ಹಾಗೂ ಬಲಕಾಲಿನ ಮಂಡಿ ಬಳಿ ಚರ್ಮ ಹರಿದ ರಕ್ತ ಗಾಯವಾಗಿರುತ್ತದೆ, ಕೂಡಲೇ ಅಪಘಾತ ಸ್ಥಳದಲ್ಲಿದ್ದ ಕಿಶೋರ್ (35 ವರ್ಷ) ಹಾಗೂ ಅಪಘಾತಪಡಿಸಿದ ಕಾರಿನ ಚಾಲಕ ಗಾಯಾಳು ಪ್ರಶಾಂತ್ ರವರನ್ನು ಉಪಚರಿಸಿ ಚಿಕಿತ್ಸೆ ಬಗ್ಗೆ ಅಪಘಾತ ಪಡಿಸಿದ ಕಾರಿನಲ್ಲೆ ಫಾದರ್ ಮುಲ್ಲರ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿರುವುದಾಗಿದೆ. ಎಂಬಿತ್ಯಾದಿ

Moodabidre PS

ಪಿರ್ಯಾದಿ Mohan Kumar M ದಾರರು ದಿನಾಂಕ 28-09-2023 ರಂದು ಕೆಲಸ ಮುಗಿಸಿ ರಾತ್ರಿ ಸುಮಾರು 7.20 ಗಂಟೆಗೆ ಅಲಂಗಾರಿನಿಂದ ತನ್ನ ಮನೆಯಾದ ಪಡುಮಾರ್ನಾಡು ಸೌಹಾರ್ದ ನಗರದ ಕಡೆಗೆ ಹೋಗುವರೇ ಐಯಂಗಾರ್ ಬೇಕರಿ ದಾಟಿ ಸ್ವಲ್ಪ ಮುಂದೆ ರಸ್ತೆಯ ಬಲ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಎದುರಿನಿಂದ ಅಂದರೆ ಕಾರ್ಕಳ ಕಡೆಯಿಂದ ಮೂಡಬಿದ್ರೆ ಕಡೆಗೆ KA-20-MB-5757 ನೇ ನಂಬ್ರದ ಕಾರನ್ನು ಅದರ ಚಾಲಕನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರಿಗೆ ಡಿಕ್ಕಿಪಡಿಸಿದ ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದು ಕೈಗೆ, ಕಾಲಿಗೆ ಸೊಂಟಕ್ಕೆ ಮತ್ತು ಮುಖಕ್ಕೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಚಿಕಿತ್ಸೆಯ ಬಗ್ಗೆ ಮೂಡಬಿದ್ರೆಯ ಮೌಂಟ್ ರೋಜರಿ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿದೆ. ಅಪಘಾತಪಡಿಸಿದ ಚಾಲಕನು   ಕಾರನ್ನು ನಿಲ್ಲಿಸದೇ ಹೋಗಿರುತ್ತಾನೆ ಎಂಬಿತ್ಯಾದಿ.

Ullal PS       

ದಿನಾಂಕ 29-09-2023 ರಂದು ಆರೋಪಿ ಕಲಂದರ್ ಶಾಫಿ ಎಂಬಾತನು ಉಳ್ಳಾಲ ಠಾಣಾ ಸರಹದ್ದಿನ ಮುನ್ನೂರು ಗ್ರಾಮದ ರಾಣಿಪುರ ಸೈಟಿನಲ್ಲಿ ರಾಶಿ ಹಾಕಿದ್ದ ಮರಳನ್ನು ಕದ್ದು ತೆಗೆದು  ಕೆ ಎಲ್ -56-ಬಿ-4174 ನೇ ನಸು ಕೆಂಪು ಮತ್ತು ಹಳದಿ ಬಣ್ಣದ ಈಚರ್ ವಾಹನದಲ್ಲಿ ಯಾವುದೇ ಪರವಾನಿಗೆ ಯಾ ದಾಖಲಾತಿಗಳನ್ನು ಹೊಂದದೇ ವಾಹನವನ್ನು ಚಲಾಯಿಸಿಕೊಂಡು ಸಾಮಾನ್ಯ ಮರಳನ್ನು ಬೆಳಿಗ್ಗೆ 07-30 ಗಂಟೆಯ ಸಮಯಕ್ಕೆ ಅಕ್ರಮ ಸಾಗಾಟ ಮಾಡಿಕೊಂಡು ಹೋಗುವಾಗ ಮುನ್ನೂರು ಗ್ರಾಮದ ಕುತ್ತಾರು ಜಂಕ್ಷನ್ ನಲ್ಲಿ ಫಿರ್ಯಾದಿದಾರರಾದ ಉಳ್ಳಾಲ ಠಾಣೆಯ ಪಿ ಎಸ್ ಐ ಸಂತೋಷ ಕುಮಾರ್ ಡಿ, ರವರು ರವರು ತನ್ನ ಸಿಬ್ಬಂದಿಯವರ ಸಹಾಯದಿಂದ ಪತ್ತೆ ಮಾಡಿ ಆರೋಪಿಯೊಂದಿಗೆ ಠಾಣೆಗೆ ತಂದಿರುವುದಾಗಿದೆ. ಸದ್ರಿ ಈಚರ್ ವಾಹನದ ಮೌಲ್ಯ ರೂ.3,00,000/- ಮತ್ತು ಸಾಮಾನ್ಯ ಮರಳಿನ ಅಂದಾಜು ಮೌಲ್ಯ ರೂ.4,000/- ಆಗಬಹುದು.

Barke PS

ಪಿರ್ಯಾದಿದಾರರಾದ ಶ್ರೀ ರತ್ನಾಕರ ಪುತ್ರನ್ ಎಂಬುವರು ತನ್ನ ಸ್ವಂತ ಮನೆಯಲ್ಲಿ ನೀರಿನ ವ್ಯತ್ಯಯ ಇರುವುದರಿಂದ ತನ್ನ ಮಗಳ ಮನೆಯಲ್ಲಿ ಸುಮಾರು 11 ತಿಂಗಳಿಂದ ವಾಸ್ತವ್ಯವಿದ್ದು, ತನ್ನ ಸ್ವಂತ ಮನೆಯಾದ ಬೋಳೂರಿನ ಹಿಂದೂಸ್ಥಾನ್ ಫ್ಯಾಕ್ಟರಿ ಬಳಿಯಿರುವ ಮನೆಗೆ ಪ್ರತಿದಿನ ಬಂದು ಮನೆಯನ್ನು ಸ್ವಚ್ಚ ಮಾಡಿ ಬೀಗ ಹಾಕಿಕೊಂಡು ಹೋಗುತ್ತಿದ್ದರು. ದಿನಾಂಕ:28-09-2023 ಬೆಳಿಗ್ಗೆ ಸಮಯ ಸುಮಾರು 11-00 ಗಂಟೆಗೆ ಪಿರ್ಯಾದಿದಾರರು ತನ್ನ ಸ್ವಂತ ಮನೆಗೆ ಬಂದು ಮನೆಗೆಲಸ ಮುಗಿಸಿ ಸಂಜೆ 6-00 ಗಂಟೆಗೆ ಮನೆಗೆ ಬೀಗ ಹಾಕಿ ಅವರ ಮಗಳ ಮನೆಯಿರುವ ಅಶೋಕನಗರಕ್ಕೆ ಹೋಗಿರುತ್ತಾರೆ. ನಂತರ ಸಮಯ ಸಂಜೆ ಸುಮಾರು 7-00 ಗಂಟೆಗೆ ಪಿರ್ಯಾದಿದಾರರ ಮನೆಯ ಹಿಂಬದಿಯಲ್ಲಿ ವಾಸವಿರುವ ವಸಂತ ರವರು ಪೋನ್ ಕರೆ ಮಾಡಿ ಪಿರ್ಯಾದಿದಾರರಿಗೆ“ನಿಮ್ಮ ಮನೆಯ ಬಾಗಿಲು ತೆರೆದಿದ್ದು, ಇನ್ ವೆಂಟರ್ ಬ್ಯಾಟರಿ ಹೊರಗೆ ಬಿದ್ದಿರುತ್ತದೆ ಎಂದು ತಿಳಿಸಿದಂತೆ ಪಿರ್ಯಾದಿದಾರರು ಕೂಡಲೇ ಅವರ ಸ್ವಂತ ಮನೆಗೆ ಬಂದು ನೋಡಿದಾಗ ಯಾರೋ ಕೀಡಿಗೇಡಿಗಳು ಪಿರ್ಯಾದಿದಾರರು ಮನೆಯಲ್ಲಿ ಇಲ್ಲದ ಸಮಯ ಸಂಜೆ 6-00 ಗಂಟೆಯಿಂದ 7-00 ಗಂಟೆಯ ಮಧ್ಯೆದಲ್ಲಿ ಮನೆಯ ಬಾಗಿಲನ್ನು ಯಾವುದೋ ಸಾಮಾಗ್ರಿಯಿಂದ ಮನೆಯ ಬಾಗಿಲಿನ ಬೀಗವನ್ನು ಒಡೆದು ಮನೆಯ ಒಳಗೆ ಪ್ರವೇಶಿಸಿ ಮನೆಯೊಳಗಿರುವ ವಸ್ತಗಳನ್ನು ಹಾನಿಗೊಳಿಸುವ ಉದ್ದೇಶದಿಂದ ಮನೆಯಲ್ಲಿದ್ದ ಟಿ.ವಿ, ಗಡಿಯಾರ, ದಿನ ಬಳಕೆಯ ವಸ್ತುಗಳಾದ ಗಾಜಿನ ಗ್ಲಾಸ್ ಗಳನ್ನು ಹುಡಿ ಮಾಡಿ, ಸುಮಾರು ರೂ. 30,000/-  ನಷ್ಟ ಉಂಟು ಮಾಡಿರುತ್ತಾರೆ ಎಂಬಿತ್ಯಾದಿ ಸಾರಾಂಶವಾಗಿರುತ್ತದೆ.

Mangalore Rural PS                                         

ದಿನಾಂಕ: 28/09/2023  ರಂದು ಮದ್ಯಾಹ್ನ 2-00 ಗಂಟೆಗೆ,  ಮಂಗಳೂರು ಅಡ್ಯಾರ್ ಗ್ರಾಮದ ಸೋಮನಾಥ ಕಟ್ಟೆ  ಎಂಬಲ್ಲಿ ಆರೋಪಿಗಳು  ಯಾರಿಗೋ ಹಲ್ಲೆ ನಡೆಸುವ ಉದ್ದೇಶದಿಂದ  ತಲವಾರು ಮತ್ತು ಚೂರಿಯನ್ನು ವಶದಲ್ಲಿಟ್ಟುಕೊಂಡು ಸಂಚು ರೂಪಿಸುತ್ತಿರುವುದಾಗಿ ಮಾಹಿತಿ ಮೇರೆಗೆ  ಸಿಸಿಬಿ ಘಟಕದ ಅಧಿಕಾರಿ ಸಿಬ್ಬಂದಿಗಳು  ಮದ್ಯಾಹ್ನ 3-00 ಗಂಟೆಗೆ ಸೋಮನಾಥ ಕಟ್ಟೆ ಎಂಬಲ್ಲಿಗೆ ತಲಪಿದಾಗ  ಪಿಕ್ ಅಪ್ ವಾಹನ  -ಕೆಎಲ್- 14- ಎಬಿ- 7212 ಮತ್ತು ಸ್ಕೂಟರ್ ನಲ್ಲಿದ್ದ  ಆರೋಪಿಗಳು  ಯಾವುದೋ ಬೇ ವಾರಂಟು ಕೃತ್ಯ ನಡೆಸಲು ಸಂಚು ರೂಪಿಸುತ್ತಿರುವಂತೆ ಕಂಡು ಬಂದಿದ್ದರಿಂದ  ಮದ್ಯಾಹ್ನ 3-05 ಗಂಟೆಗೆ  ಸದ್ರಿ ಸ್ಥಳಕ್ಕೆ ಧಾಳಿ ನಡೆಸಿದಾಗ  ಕುಟ್ಟ ಇಮ್ರಾನ್  ಮತ್ತು  ಇಬ್ಬರು  ಸ್ಕೂಟರಿನಲ್ಲಿ ಪರಾರಿಯಾಗಿದ್ದು,  ಪಿಕ್ ಅಪ್ ವಾಹನದಲ್ಲಿದ್ದ ಹಳೆಆರೋಪಿಗಳಾದ ತಸ್ಲೀಂ ಮತ್ತು ಹೈದರಾಲಿ ಎಂಬವರನ್ನು ವಶಕ್ಕೆ  ಪಡೆದುಕೊಂಡು ವಿಚಾರಿಸಲಾಗಿ ಅಮ್ಮೆಮ್ಮಾರ್ ನ ಮನ್ಸೂರ್ ಎಂಬವನಿಂದ ತಮಗೆ ಈ ಹಿಂದೆ ಅವಮಾನವಾಗಿದ್ದರಿಂದ ಹಾಗೂ ಆತನು  ಅಡ್ಯಾರ್ ಕಡೆಗೆ ಬರುವ ಮಾಹಿತಿ ಇದ್ದಿದ್ದರಿಂದ  ಅವನಿಗೆ ಗತಿ ಕಾಣಿಸುವ ಸಲುವಾಗಿ ಆತನಿಗೆ ಹಲ್ಲೆ  ನಡೆಸಲು  ಚೂರಿ ಮತ್ತು ತಲವಾರುಗಳೊಂದಿಗೆ ಬಂದು ಮನ್ಸೂರ್ ನನ್ನು ಕಾಯುತ್ತಿದ್ದು, ಓಡಿ ಹೋದವರ  ಹೆಸರು ಇಮ್ರಾನ್, ಸಿಯಾಜ್ , ಫಜಲ್  ಎಂಬುದಾಗಿ ತಿಳಿಸಿ, ತಪ್ಪೊಪ್ಪಿಕೊಂಡ ಮೇರೆಗೆ ಸದ್ರಿ ಆರೋಪಿಗಳನ್ನು ಮದ್ಯಾಹ್ನ 3-15 ಗಂಟೆಗೆ ದಸ್ತಗಿರಿ ಮಾಡಿ , ಆರೋಪಿ ತಸ್ಲೀಂ  ಎಂಬಾತನು  ತನ್ನಲ್ಲಿದ್ದ  ಹಸಿರು ಬಣ್ಣದ  1+ ಮೊಬೈಲ್ ಫೋನ್ , ಕೆಂಪುಬಣ್ಣದ ಹಿಡಿ ಇರುವ  ಬಟನ್ ಚೂರಿ,  310 ರೂಪಾಯಿ ನಗದು ಇದ್ದ ಕಪ್ಪುಬಣ್ಣದ ಪರ್ಸ್ೊ   ಮತ್ತು  ಪಿಕ್ ಅಪ್ ವಾಹನದಲ್ಲಿದ್ದ 02 ತಲವಾರುಗಳನ್ನು ಮತ್ತು ಆರೋಪಿ ಹೈದರಾಲಿ  ಹಾಜರುಪಡಿಸಿದ ಕಪ್ಪುಬಣ್ಣದ  KECHAODA  ಕಂಪೆನಿಯ  ಮೊಬೈಲ್  ಫೋನ್ ಹಾಜರುಪಡಿಸಿದ ಮೇರೆಗೆ ಸದ್ರಿ ಸದ್ರಿ ಸೊತ್ತುಗಳನ್ನು ಹಾಗೂ ಕೃತ್ಯ ನಡೆಸುವರೇ ಬಂದಿದ್ದ  ಮಹೀಂದ್ರಾ  ಪಿಕ್ ಅಪ್ ವಾಹನ ನಂಬ್ರ: ಕೆ ಎಲ್- 14- ಎಬಿ- 7212 ನೇಯದನ್ನು  ಸ್ವಾಧೀನ ಪಡಿಸಿದ್ದು, ಸದ್ರಿ ಆರೋಪಿಗಳ  ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವರೇ ಕೋರಿಕೆ ಎಂಬಿತ್ಯಾದಿ ಫಿರ್ಯಾ ದಿ ಸಾರಾಂಶವಾಗಿರುತ್ತದೆ.

ಇತ್ತೀಚಿನ ನವೀಕರಣ​ : 29-09-2023 04:53 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080