ಅಭಿಪ್ರಾಯ / ಸಲಹೆಗಳು

Crime Report in : Bajpe PS   

ಪಿರ್ಯಾದಿ Ganesh ದಿನಾಂಕ 28.11.2023 ರಂದು KA19 EU9572ನೇ ನಂಬ್ರದ ಮೊಟಾರ್ ಸೈಕಲ್ ನಲ್ಲಿ ಮಂಗಳೂರಿನಿಂದ ಮೂಡಬಿದ್ರೆಯ ತೋಡಾರ್ ಕಡೆಗೆ ಹೋಗುತ್ತಿರುವಾಗ ಸಮಯ ಸುಮಾರು 19.10 ಗಂಟೆಗೆ ಕೈಕಂಬದ ಪೊಂಪೈ ಚರ್ಚ್ ದ್ವಾರ ತಲುಪುತ್ತಿದ್ದಂತೆ KA20 MA7417ನೇ ನಂಬ್ರದ ಕಾರಿನ ಚಾಲಕ ಸಂದೇಶ್ ಪೂಜಾರಿ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಕಾರನ್ನು ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಬೈಕ್ ಸಮೇತ ಡಾಮಾರು ರಸ್ತೆಗೆ ಬಿದ್ದಿರುತ್ತಾರೆ. ಇದರಿಂದ ಪಿರ್ಯಾದಿದಾರರ ಬಲಕಾಲಿನ ಕೋಲು ಕಾಳಿಗೆ ಮತ್ತು ಪಾದದ ಬಳಿ ಮೂಳೆಮುರಿತದ ಗಂಭೀರ ಗಾಯವಾಗಿರುತ್ತದೆ. ಹಾಗೂ ಪಿರ್ಯಾದಿದಾರರ ಬೈಕಿನ ಮುಂಬಾಗ ಹಾಗೂ ಕಾರಿನ ಬಲಬದಿಯ ಮುಂಭಾಗ ಜಖಂಗೊಂಡಿರುತ್ತದೆ. ಗಾಯಗೊಂಡವರನ್ನು ಚಿಕಿತ್ಸೆ ಬಗ್ಗೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಿಸಿರುತ್ತಾರೆ. ಪಿರ್ಯಾದಿದಾರರಿಂದ ಆಸ್ಪತ್ರೆಯಲ್ಲಿ ಹೇಳಿಕೆಯನ್ನು ಪಡೆದು ಠಾಣೆಗೆ ತಂದು ಹಾಜರುಪಡಿಸಿದ್ದನ್ನು ಸ್ವೀಕರಿಸಿಕೊಂಡು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂಬಿತ್ಯಾದಿ.

Traffic South Police Station  

ದಿನಾಂಕ 28-11-2023 ರಂದು ಪಿರ್ಯಾದಿ Mrs SHWETHA ಮಕ್ಕಳಾದ ಸಾನ್ವಿ ಎಂ.ಬಿ, & ಸುಜ್ಞಾನ ಎಂ.ಬಿ ರವರುಗಳು ಶಾಲೆಗೆ ತೆರಳುವರೇ ತಮ್ಮ ವಾಸ್ತವ್ಯದ ಮನೆಯಿಂದ ನಡೆದುಕೊಂಡು ಹೊರಟು ಮನೆಯ ಬಳಿ ಇರುವ ಕೊಲ್ಯ ಶಾರದಾ ಸಭಾಭವನ ಎಂಬಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ-66 ರನ್ನು ಬೆಳಿಗ್ಗೆ ಸುಮಾರು 8.30 ಗಂಟೆಗೆ ದಾಟುತ್ತಿದ್ದಾಗ ತಲಪಾಡಿಕಡೆಯಿಂದ KL-14-AB-2756 ನೇ ಬಜಾಜ ಪಲ್ಸರ್ ಮೋಟಾರ್ ಬೈಕ್ ನ ಸವಾರನು ತನ್ನ ಬೈಕನ್ನು ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಅಪ್ರಾಪ್ತ ಮಕ್ಕಳಾದ  ಸಾನ್ವಿ ಎಂ.ಬಿ(15), & ಸುಜ್ಞಾನ ಎಂ.ಬಿ(9) ರವರುಗಳಿಗೆ ಡಿಕ್ಕಿಪಡಿಸಿದ ಪರಿಣಾಮ ಮಕ್ಕಳು ರಸ್ತೆಗೆ ಬಿದ್ದು ಸಾನ್ವಿ ಯ  ಬಲಕೈಗೆ ತೆರಚಿದ ಗಾಯ, ಮತ್ತು ಸುಜ್ಞಾನ ನಿಗೆ ಗಲ್ಲಕ್ಕೆ ಗುದ್ದಿದ ರಕ್ತ ಗಾಯ & ಹೊಟ್ಟೆಗೆ ತೀವ್ರ ತರದ ಗುದ್ದಿದ ಗಾಯ ಉಂಟಾಗಿದ್ದು, ವಿಚಾರ ತಿಳಿದ ಪಿರ್ಯಾದುದಾರರು ಸ್ಥಳಕ್ಕೆ ತೆರಳಿ ಮಕ್ಕಳನ್ನು ವಾಹನವೊಂದರಲ್ಲಿ ದೇರಳಕಟ್ಟೆ ಯೆನಪೋಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಪರೀಕ್ಷಿಸಿದ ವೈದ್ಯರು ಸುಜ್ಞಾನ ನನ್ನು ಒಳರೋಗಿಯಾಗಿ ದಾಖಲಿಸಿಕೊಂಡು , ಸಾನ್ವಿಗೆ ಹೊರ ರೋಗಿಯಾಗಿ ಚಿಕಿತ್ಸೆ ನೀಡಿದ್ದು, ಅಪಘಾತಪಡಿಸಿದ ಬೈಕ ಚಾಲಕನ ಹೆಸರು ಸಚಿನ ಎನ್ ಎಂಬುದಾಗಿ ತಿಳಿದು ಬಂದಿರುತ್ತಾರೆ.

Ullal PS

ದಿನಾಂಕ. 28-11-2023 ರಂದು ರಾತ್ರಿ 8:23 ಗಂಟೆಯ ಸಮಯಕ್ಕೆ ತಲಪಾಡಿ ಗ್ರಾಮದ ತಲಪಾಡಿ ಟೋಲ್ಗೇಟ್ ಬಳಿ ಟೋಲ್ಗೇಟ್ ಚಾರ್ಜ್ ಪಾವತಿ ಮಾಡಲು ಫಿರ್ಯಾದಿ ಅಬ್ದುಲ್ ಕರೀಂ ರವರು ತಾನು ಚಲಾಯಿಸುತ್ತಿದ್ದ ಕೆಎ-19-ಎಂಕೆ-9917 ನೇ ಐ20 ಕಾರನ್ನು ಸರದಿ ಸಾಲಿನಲ್ಲಿ ನಿಲ್ಲಿಸಿಕೊಂಡು ಇವರ ಸರದಿ ಬರುವಾಗ ಇವರ ಕಾರಿನ ಫಾಸ್ಟ್ ಟ್ಯಾಗ್ನಿಂದ ಹಣ ಕಡಿತಗೊಂಡರೂ ಟೋಲ್ಗೇಟ್ನ ಗೇಟ್ ತೆರೆಯದೇ ಇದ್ದಾಗ ಫಿರ್ಯಾದಿದಾರರ ಕಾರನ್ನು ಹಿಂದೆ ಚಲಾಯಿಸುವಂತೆ ಟೋಲ್ಗೇಟ್ನ ಸಿಬ್ಬಂದಿಯವರು ಫಿರ್ಯಾದಿದಾರರಿಗೆ ತಿಳಿಸಿದಾಗ ಫಿರ್ಯಾದಿದಾರರು ಅವರಲ್ಲಿ ಕಾರಿನ ಫಾಸ್ಟ್ಟ್ಯಾಗ್ ಹಣ ಕಡಿತಗೊಂಡಿದೆಯಲ್ಲ, ಯಾಕೆ ಕಾರನ್ನು ಹಿಂದೆ ತರಬೇಕು ಎಂದು ಹೇಳಿದಾಗ ಆತನು ಫಿರ್ಯಾದಿದಾರರನ್ನು ಉದ್ದೇಶಿಸಿ ಬೇವಾರ್ಸಿ ನೀನು ಹಿಂದೆ ಬಾ ಎಂದು ಅವಾಚ್ಯಶಬ್ದಗಳಿಂದ ಬೈದಾಗ ಫಿರ್ಯಾದಿದಾರರು ಅವರಲ್ಲಿ ನೀನು ಆ ರೀತಿ ಕೆಟ್ಟ ಭಾಷೆಯಿಂದ ಯಾಕೆ ಬೈಯುವುದು, ಆ ಮಾತನ್ನು ಹಿಂದೆ ತೆಗೆ, ಆ ರೀತಿ ಬೈಯ್ಯಬೇಡ ಎಂದು ಹೇಳಿದಾಗ ಆತನು ಫಿರ್ಯಾದಿದಾರರನ್ನು ಉದ್ದೇಶಿಸಿ ನಾನು ಅದೇ ರೀತಿ ಬೈಯುವುದು, ನೀನು ಏನು ಮಾಡುತ್ತೀ, ತಾಕತ್ತಿದ್ದರೆ ಮಾಡು ಎಂದು ಹೆದರಿಸಿ, ಫಿರ್ಯಾದಿದಾರರ ಕಾರನ್ನು ಅಕ್ರಮವಾಗಿ ತಡೆದು ನಿಲ್ಲಿಸಿ ಹಲ್ಲೆ ಮಾಡಲು ಪ್ರಯತ್ನ ಪಟ್ಟಿರುವುದರಿಂದ ಸದ್ರಿ ಟೋಲ್ಗೇಟ್ನ ಮೆನೇಜರ್ ಮತ್ತು ಸಿಬ್ಬಂದಿಯವರ ವಿರುದ್ಧ ಸೂಕ್ತ ಕ್ರಮಕ್ಕಾಗಿ ನೀಡಿದ ದೂರಿನ ಮೇರೆಗೆ ದಾಖಲಾದ ಸಾರಾಂಶ.

 

ಇತ್ತೀಚಿನ ನವೀಕರಣ​ : 29-11-2023 05:26 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080