ಅಭಿಪ್ರಾಯ / ಸಲಹೆಗಳು

Mangalore East Traffic PS                 

ಪಿರ್ಯಾದಿದಾರರು ನಿನ್ನೆ ದಿನ ದಿನಾಂಕ: 28/12/2023 ರಂದು ತನ್ನ ತಂದೆಯವರ ಬಾಬ್ತು KA-19-EL-6719 ನೇ ಸ್ಕೂಟರನಲ್ಲಿ ನನ್ನ ತಾಯಿ ಶ್ರೀಮತಿ ನಜೀಮಾ ರವರನ್ನು ಸಹಸವಾಳನ್ನಾಗಿ ಕುಳ್ಳಿರಿಸಿಕೊಂಡು ಕ್ಲಾಕ್ ಟವರ್ ರಸ್ತೆಯಿಂದಾಗಿ ಸ್ಕೂಟರನ್ನು ಸವಾರಿ ಮಾಡಿಕೊಂಡು ಹೋಗುತ್ತಾ ಯುಪಿ ಮಲ್ಯ ರಸ್ತೆಯ ಟೌನ್ ಹಾಲ್ ಎದುರುಗಡೆ ಬಂದು ತಲುಪುತ್ತಿದ್ದಂತೆ ಸಮಯ ಸುಮಾರು 18:45 ಗಂಟೆಗೆ ಎ.ಬಿ ಶೆಟ್ಟಿ ರಸ್ತೆ ಕಡೆಯಿಂದ ಕ್ಲಾಕ್ ಟವರ್ ಕಡೆಗೆ ಏಕಮುಖ ರಸ್ತೆಯ ವಿರುದ್ಧವಾಗಿ KA-19-EC-5663 ನೊಂದಣಿ ನಂಬ್ರದ ಸ್ಕೂಟರನ್ನು ಅದರ ಸವಾರ ಜೂಲಿಯನ್ ಲೋಬೋ ಎಂಬುವರು ನಿರ್ಲಕ್ಷತನ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಸ್ಕೂಟರಿಗೆ ಡಿಕ್ಕಿಪಡಿಸಿದ್ದು, ಈ ಢಿಕ್ಕಿಯ ಪರಿಣಾಮ ಪಿರ್ಯಾದಿದಾರರು ಮತ್ತು ಅವರ ತಾಯಿ ರಸ್ತೆಗೆ ಬಿದ್ದು, ಗಾಯಗೊಂಡವರನ್ನು ಸಾರ್ವಜನಿಕರು ಚಿಕಿತ್ಸೆಯ ಬಗ್ಗೆ ಅಟೋ ರಿಕ್ಷಾವೊಂದರಲ್ಲಿ ವೆನ್ ಲಾಕ್ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು, ಅಲ್ಲಿಯ ವೈದ್ಯರು ಪರೀಕ್ಷಿಸಿ ಚಿಕಿತ್ಸೆಯನ್ನು ನೀಡಿರುತ್ತಾರೆ ಎಂಬಿತ್ಯಾದಿ.

 

Mangalore North PS

ಈ ಪ್ರಕರಣದ ಸಂಕ್ಷೀಪ್ತ ಸಾರಾಂಶವೇನೆಂದರೆ, ದಿನಾಂಕ 27-12-2023 ರಂದು ಎಂದಿನಂತೆ ಪಿರ್ಯಾದಿದಾರರು   ಹಂಪನಕಟ್ಟೆ ವೈನ್ ಗೇಟ್ ವೈನ್ ಶಾಫ್ ಗೆ ಕೆಲಸಕ್ಕೆ ಬಂದಿದ್ದು, ರಾತ್ರಿ 9-00 ಗಂಟೆ ಸಮಯ  ಗಿರಾಕಿಯೊಬ್ಬರು ವೈನ್ ಶಾಫ್ ನ ಒಳಗಡೆ ಬಂದು ನಿಮ್ಮ ವೈನ್ ಶಾಫ್ ನ ಹಿಂಬದಿ ಪ್ಲವರ್ ಮಾರ್ಕೇಟ್ ಬಳಿ  ಒಬ್ಬ ವ್ಯಕ್ತಿ ಬಿದ್ದುಕೊಂಡಿದ್ದು, ಆತನ ತಲೆಯಿಂದ ತುಂಬಾ ರಕ್ತ ಹೋಗುತ್ತಿದೆ ಎಂದು ತಿಳಿಸಿದ್ದು,  ಈ ವಿಚಾರವನ್ನು ಕೇಳಿ  ವೈನ್ ಶಾಫ್ ನ ಹಿಂಬದಿಯ ಬಾಗಿಲಿನ ಮೂಲಕ ಹೊರಗಡೆ ಬಂದು ನೋಡಿದಾಗ ಒಬ್ಬ 50 ವರ್ಷ ಪ್ರಾಯದ  ಕೆಂಪು  ಗೆರೆಯ ಶರ್ಟ್ ಧರಿಸಿದ ವ್ಯಕ್ತಿಯೊಬ್ಬರು ಅಂಗಾತನೆ ಬಿದ್ದುಕೊಂಡಿದ್ದು, ಹತ್ತಿರ ಹೋಗಿ ನೋಡಿದಾಗ  ಪಿರ್ಯಾದಿದಾರರ  ವೈನ್ ಶಾಫ್ ಗೆ ಪ್ರತಿ ದಿನ ಸಂಜೆ ವೇಳೆಯಲ್ಲಿ  ಮದ್ಯಪಾನ  ಮಾಡಲು ಬರುವ ವ್ಯಕ್ತಿ ಕಲ್ಲಡ್ಕದ ಜಯರಾಮ್ ಎಂಬುದಾಗಿ ತಿಳಿದು ಬಂದಿದ್ದು, ಜಯರಾಮ್ ರವರ ತಲೆಯ ಭಾಗದಿಂದ  ರಕ್ತ ಸ್ರಾವವಾಗುತ್ತಿದ್ದನ್ನು ಕಂಡು  ಪಿರ್ಯಾದಿದಾರರು  ಕೂಡಲೇ  108 ಅಂಬುಲೆನ್ಸ್ ಗೆ ಕರೆ ಮಾಡಿ, ಅವರು  ಮತ್ತು ಪಕ್ಕದ ಶೇಷ್ಮ ಲಾಡ್ಜ್ ನ ಪ್ರಶಾಂತ್ ಮತ್ತಿತರು ಸೇರಿ ಅಂಬುಲೇನ್ಸ್ ನಲ್ಲಿ  ಚಿಕಿತ್ಸೆ ಬಗ್ಗೆ ವೆನ್ಲಾಕ್ ಆಸ್ಪತ್ರೆಗೆ  ಕಳುಹಿಸಿಕೊಟ್ಟಿದ್ದು  ಈ  ದಿನ ವಿಚಾರ ತಿಳಿಯಲಾಗಿ  ದಿನಾಂಕ 27-12-2023 ರಂದು ರಾತ್ರಿ ಸುಮಾರು 8-00 ಗಂಟೆಯಿಂದ ರಾತ್ರಿ 8-45 ಗಂಟೆ ಮಧ್ಯಾವಧಿಯಲ್ಲಿ ಜಯರಾಮ್ ಎಂಬವರು  ಮಂಗಳೂರು ನಗರದ  ಹಂಪನಕಟ್ಟೆ ಪ್ಲವರ್ ಮಾರ್ಕೇಟ್ ನ  ಹೂವು ಮಾರಾಟ ಮಾಡುವ ಕಟ್ಟೆಯ ಮೇಲೆ ಕುಳಿತುಕೊಂಡಿದ್ದ ಸಮಯ  ಜಯರಾಮ್ ಎಂಬವರು  ಅಪರಿಚಿತ ಹೆಂಗಸು ಮತ್ತು ಗಂಡಸು ನಡೆದುಕೊಂಡು ಹೋಗುತ್ತಿದ್ದಾಗ,ಅವರ ಪೈಕಿ  ಅಪರಿಚಿತ ಹೆಂಗಸಿಗೆ  ಅಶ್ಲೀಲವಾಗಿ  ವರ್ತಿಸಿದ್ದರಿಂದ ಕುಪಿತಗೊಂಡು  ಆ ಅಪರಿಚಿತ ಹೆಂಗಸು ಮತ್ತು ಗಂಡಸು ಸೇರಿ, ಕೈಯಿಂದ ಬಲವಾಗಿ ಹೊಡೆದು ನಂತರ ಜಯರಾಮ್ ರವರನ್ನು  ಹಿಡಿದು ಬಲವಾಗಿ ನೆಲಕ್ಕೆ ಎಳೆದು ಹಾಕಿ, ಜಯರಾಮನ ತಲೆಯ ಭಾಗಕ್ಕೆ ಗಂಭೀರ ಗಾಯಗೊಳಿಸಿ ಕೊಲೆ ಮಾಡಿರುವುದಾಗಿದೆ ಎಂಬುದಾಗಿ ಪಿರ್ಯಾದಿದಾರರಿಗೆ ಈ ದಿನ ವಿಚಾರ ತಿಳಿದು ಬಂದ ಕಾರಣ ಪಿರ್ಯಾದಿದಾರರು ಪೊಲೀಸ್ ಠಾಣೆಗೆ ಹಾಜರಾಗಿ  ಅಪರಿಚಿತ ಹೆಂಗಸು ಮತ್ತು ಗಂಡಸಿನ ವಿರುದ್ದ ಸೂಕ್ತ ಕ್ರಮಕ್ಕಾಗಿ ಈ ದೂರನ್ನು ನೀಡಿರುವುದಾಗಿದೆ ಎಂಬಿತ್ಯಾದಿ.

 

Traffic North Police

ಈ ಪ್ರಕರಣದ ಸಾರಾಂಶವೇನಂದರೆ, ಈ ದಿನ ದಿನಾಂಕ 29-12-2023 ರಂದು ಪಿರ್ಯಾದಿದಾರರ ಭಾವ ಯತೀಶ್ ರವರು KA-19-EE-8066 ನಂಬ್ರದ ಸ್ಕೂಟರಿನಲ್ಲಿ ಕೂಳೂರಿನಿಂದ ಕೊಟ್ಟಾರ ಚೌಕಿ ಕಡೆಗೆ ಹೋಗುತ್ತಾ ಮಧ್ಯಾಹ್ನ ಸಮಯ ಸುಮಾರು 3:10 ಗಂಟೆಗೆ ಕೋಡಿಕಲ್ ಕ್ರಾಸ್ ಬಳಿ ಇರುವ ತೆರೆದ ಡಿವೈಡರ್ ಜಂಕ್ಷನ್ ದಾಟಿ ಸ್ವಲ್ಪ ಮುಂದೆ ಹೋಗುತ್ತಿದ್ದಂತೆ ಕೂಳೂರು ಕಡೆಯಿಂದ ಕೊಟ್ಟಾರ ಚೌಕಿ ಕಡೆಗೆ ಗ್ಯಾಸ್ ಸಿಲಿಂಡರ್ ಸಾಗಿಸುವ KA-19-AC-5961 ನಂಬ್ರದ ಗೂಡ್ಸ್ ಲಾರಿಯನ್ನು ಅದರ ಚಾಲಕನಾದ Sulaiman Byari ಎಂಬಾತನು ತನ್ನ ಗೂಡ್ಸ್ ಲಾರಿಯನ್ನು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಯತೀಶ್ ರವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ ಸ್ಕೂಟರಿನ ಬಲಭಾಗಕ್ಕೆ ಡಿಕ್ಕಿ ಪಡಿಸಿದ ಪರಿಣಾಮ ಯತೀಶ್ ರವರು ಸ್ಕೂಟರಿನಿಂದ NH-66 ನೇ ಡಾಮಾರು ರಸ್ತೆಗೆ ಬಿದ್ದ ವೇಳೆ ಅಪಘಾತ ಪಡಿಸಿದ ಗೂಡ್ಸ್ ಲಾರಿಯ ಹಿಂದಿನ ಎಡಬದಿಯ ಚಕ್ರ ಯತೀಶ್ ರವರ ಹೆಲ್ಮೆಟ್ ಸಹಿತ ತಲೆಯ ಮೇಲೆ ಚಲಿಸಿದ ಪರಿಣಾಮ ತಲೆಗೆ ಗಂಭೀರ ಸ್ವರೂಪದ ಗಾಯಗೊಂಡು ಯತೀಶ್ ರವರು ಸ್ಥಳದಲ್ಲಿಯೇ ಮೃತಪಟ್ಟಿರುವುದಾಗಿರುತ್ತದೆ ಎಂಬಿತ್ಯಾದಿ

 

Kankanady Town PS

ಈ ಪ್ರಕರಣದ ಸಂಕ್ಷೀಪ್ತ ಸಾರಾಂಶವೇನೆಂದರೆ, ಈ ದಿನ ದಿನಾಂಕ 29-12-2023 ರಂದು ಕಂಕನಾಡಿ ನಗರ ಪೊಲೀಸ್ ಠಾಣೆ ಪಿ.ಎಸ್.ಐ (ಕಾ&ಸು-4) ಶಾಂತಪ್ಪ ಜಿ.ಎಮ್ ಆದ ನಾನು ಮೇಲಾಧಿಕಾರಿಗಳ  ಆದೇಶದಂತೆ ಸಿಬ್ಬಂದಿಗಳೊಂದಿಗೆ ಠಾಣಾ  ವ್ಯಾಪ್ತಿಯಲ್ಲಿ ಖಾಸಗಿ ವಾಹನದಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದಾಗ, ಮದ್ಯಾಹ್ನ ಮಂಗಳೂರು ನಗರದ ಪಡೀಲ್ ಜಂಕ್ಷನ್ ಬಳಿ ಸಾರ್ವಜನಿಕ ಸ್ಥಳದಲ್ಲಿ  ಮಾದಕ ವಸ್ತು ಗಾಂಜಾವನ್ನು  ಸೇವನೆ ಮಾಡಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ ಅಂಕಿತ್ ಎಂಬಾತನನ್ನು  ವಶಕ್ಕೆ ಪಡೆದುಕೊಂಡು, ಮಂಗಳೂರು ನಗರದ  ಎ.ಜೆ.ಆಸ್ಪತ್ರೆಯ ವೈಧ್ಯರ ಮುಂದೆ ಪರೀಕ್ಷೆಗೆ ಹಾಜರುಪಡಿಸಿದಾಗ, ಆರೋಪಿ ಅಂಕಿತ್ ನಿಷೇದಿತ ಮಾದಕ ವಸ್ತು ಗಾಂಜಾವನ್ನು ಸೇವನೆ ಮಾಡಿರುವುದು  ವೈಧ್ಯರ ವರದಿಯಿಂದ ದೃಢಪಟ್ಟಿರುತ್ತದೆ , ಆದ್ದರಿಂದ ಆರೋಪಿ ವಿರುದ್ದ ಕಲಂ: 27 (b) ಎನ್.ಡಿ.ಪಿ.ಎಸ್ ಆಕ್ಟ್ ರಂತೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿರುತ್ತೇನೆ, ಎಂಬಿತ್ಯಾದಿಯಾಗಿರುತ್ತದೆ.

 

Kankanady Town PS

ಈ ಪ್ರಕರಣದ ಸಂಕ್ಷೀಪ್ತ ಸಾರಾಂಶವೇನೆಂದರೆ, ಈ ದಿನ ದಿನಾಂಕ 29-12-2023 ರಂದು ಕಂಕನಾಡಿ ನಗರ ಪೊಲೀಸ್ ಠಾಣೆ ಪಿ.ಎಸ್.ಐ (ಕಾ&ಸು-2) ಶಿವ ಕುಮಾರ್ ಆದ ನಾನು ಮೇಲಾಧಿಕಾರಿಗಳ  ಆದೇಶದಂತೆ ಸಿಬ್ಬಂದಿಗಳೊಂದಿಗೆ ಠಾಣಾ  ವ್ಯಾಪ್ತಿಯಲ್ಲಿ ಇಲಾಖಾ ವಾಹನದಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದಾಗ, ಮದ್ಯಾಹ್ನ ಮಂಗಳೂರು ನಗರದ ರಾಜೀವ್ ನಗರ ಮೈದಾನ ಬಳಿ ಸಾರ್ವಜನಿಕ ಸ್ಥಳದಲ್ಲಿ  ಮಾದಕ ವಸ್ತು ಗಾಂಜಾವನ್ನು  ಸೇವನೆ ಮಾಡಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ ಕೀರ್ತಿರಾಜ್ ಎಂಬಾತನನ್ನು  ವಶಕ್ಕೆ ಪಡೆದುಕೊಂಡು, ಮಂಗಳೂರು ನಗರದ  ಎ.ಜೆ.ಆಸ್ಪತ್ರೆಯ ವೈಧ್ಯರ ಮುಂದೆ ಪರೀಕ್ಷೆಗೆ ಹಾಜರುಪಡಿಸಿದಾಗ, ಆರೋಪಿ ಕೀರ್ತಿರಾಜ್ ನಿಷೇದಿತ ಮಾದಕ ವಸ್ತು ಗಾಂಜಾವನ್ನು ಸೇವನೆ ಮಾಡಿರುವುದು ವೈಧ್ಯರ ವರದಿಯಿಂದ ದೃಢಪಟ್ಟಿರುತ್ತದೆ ಆದ್ದರಿಂದ ಆರೋಪಿ ವಿರುದ್ದ ಕಲಂ: 27 (b) ಎನ್.ಡಿ.ಪಿ.ಎಸ್ ಆಕ್ಟ್ ರಂತೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿರುತ್ತೇನೆ, ಎಂಬಿತ್ಯಾದಿಯಾಗಿರುತ್ತ.ದೆ

 

Ullal PS   

ಸಾರಾಂಶವೇನೆಂದರೆ ದಿನಾಂಕ: 29-12-2023 ರಂದು ಪಿರ್ಯಾದಿದಾರರಾದ ಶ್ರೀ ಸಂತೋಷ ಕುಮಾರ ಡಿ ರವರು ಹಾಗೂ ಆ್ಯಂಟಿ ಡ್ರಗ್ಸ್ ದಳದ ಡ್ರಗ್ಸ್ ದಳದ ಸಿಬ್ಬಂದಿಯರವರನ್ನು   ಜೊತೆಯಲ್ಲಿ ಕರೆದುಕೊಂಡು ಇಲಾಖಾ ವಾಹನದಲ್ಲಿ ಠಾಣಾ ಸರಹದ್ದಿಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಪೆರ್ಮನ್ನೂರು ಗ್ರಾಮದ ಕಲ್ಲಾಪು ಯುನಿಟಿ ಹಾಲ್ನ ಮೈದಾನದ ಸಾರ್ವಜನಿಕ ಸ್ಥಳದಲ್ಲಿ  ಒರ್ವ ಯುವಕನು ಯಾವುದೋ ಮಾದಕ ವಸ್ತುವನ್ನು ಸೇವಿಸಿ ನಶೆ ಹೊಂದಿ ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ವರ್ತಿಸುತ್ತಿದ್ದವನನ್ನು ಕಂಡು ಪಿರ್ಯಾಧಿದಾರರು ಹಾಗೂ ಸಿಬ್ಬಂದಿಗಳು ಮದ್ಯಾಹ್ನ ಸಮಯಕ್ಕೆ ಆತನ ಬಳಿಗೆ ಹೋಗಿ ಆತ ನನ್ನು ವಶಕ್ಕೆ ತೆಗೆದುಕೊಂಡು ವಿಚಾರಿಸಿ, ಹೆಸರು, ವಿಳಾಸ ಕೇಳಲಾಗಿ ,   ಹೆಸರು ದರ್ಶಿತ್ ಶೆಟ್ಟಿ  ವಾಸ: ಕಂಬ್ಲ ಕೋಡಿ ಹೊಸಮನೆ ಕಣ್ಣೂರು ಗ್ರಾಮ, ಮಂಗಳೂರು ಎಂಬುದಾಗಿ ತಿಳಿಸಿರುತ್ತಾನೆ. ನಂತರ ಆತನನ್ನು ದೇರಳಕಟ್ಟೆ ಕೆ.ಎಸ್ ಹೆಗ್ಡೆ ಆಸ್ಪತ್ರೆ ಯಲ್ಲಿ ವೈದ್ಯಾಧಿಕಾರಿಯವರ ಮುಂದೆ ವೈದ್ಯಕೀಯ ತಪಾಸಣೆಗೆ ಒಳಪಡಿಸಿದಲ್ಲಿ ವೈದ್ಯಾಧಿಕಾರಿಯವರು ಆರೋಪಿಯು ನಿಷೇದಿತ ಮಾದಕವಸ್ತು AMPHETAMINES ಸೇವನೆ ಮಾಡಿರುವುದಾಗಿ ವೈದ್ಯಕೀಯ ದೃಢಪತ್ರ ನೀಡಿದ್ದು, ಆರೋಪಿಯ ವಿರುದ್ಧ ಕಲಂ. 27(ಬಿ) ಎನ್.ಡಿ.ಪಿಎಸ್ ಕಾಯ್ದೆ 1985 ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

 

Ullal PS

ಸಾರಾಂಶವೇನೆಂದರೆ ದಿನಾಂಕ: 29-12-2023 ರಂದು ಪಿರ್ಯಾದಿದಾರರಾದ ಶ್ರೀ ಸಂತೋಷ ಕುಮಾರ ಡಿ ರವರು ಹಾಗೂ ಸಹಾಯಕ ಪೊಲೀಸ್ ಆಯುಕ್ತರು ದಕ್ಷಿಣ ಉಪ ವಿಭಾಗ ಮಂಗಳೂರು ನಗರ ಆ್ಯಂಟಿ ಡ್ರಗ್ಸ್ ದಳದ ಸಿಬ್ಬಂದಿಯರವರನ್ನು  ಜೊತೆಯಲ್ಲಿ ಕರೆದುಕೊಂಡು ಇಲಾಖಾ ವಾಹನದಲ್ಲಿ ಠಾಣಾ ಸರಹದ್ದಿಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಪೆರಮನ್ನೂರು ಗ್ರಾಮದ ತೊಕ್ಕೊಟ್ಟು ಬಸ್ ಸ್ಟ್ಯಾಂಡ್ ಬಳಿಯ ಮೈದಾನದ ಸಾರ್ವಜನಿಕ ಸ್ಥಳದಲ್ಲಿ  ಒರ್ವ ಯುವಕನು ಯಾವುದೋ ಮಾದಕ ವಸ್ತುವನ್ನು ಸೇವಿಸಿ ನಶೆ ಹೊಂದಿ ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ವರ್ತಿಸುತ್ತಿದ್ದವನನ್ನು ಕಂಡು ಪಿರ್ಯಾಧಿದಾರರು ಹಾಗೂ ಸಿಬ್ಬಂದಿಗಳು ಮದ್ಯಾಹ್ನ ಸಮಯಕ್ಕೆ ಆತನ ಬಳಿಗೆ ಹೋಗಿ ಆತ ನನ್ನು ವಶಕ್ಕೆ ತೆಗೆದುಕೊಂಡು ವಿಚಾರಿಸಿ, ಹೆಸರು, ವಿಳಾಸ ಕೇಳಲಾಗಿ  ತನ್ನ  ಹೆಸರು ಶಿವರಾಜ  ವಾಸ: ಕೊಂಡಾಣ ಮಾಡೂರು ಗ್ರಾಮ, ಮಂಗಳೂರು ಎಂಬುದಾಗಿ ತಿಳಿಸಿರುತ್ತಾನೆ. ನಂತರ ಆತನನ್ನು ಸಿಬ್ಬಂದಿಯರ ಭದ್ರಿಕೆಯಲ್ಲಿ ದೇರಳಕಟ್ಟೆ ಕೆ.ಎಸ್ ಹೆಗ್ಡೆ ಆಸ್ಪತ್ರೆ ಯಲ್ಲಿ ವೈದ್ಯಾಧಿಕಾರಿಯವರ ಮುಂದೆ ವೈದ್ಯಕೀಯ ತಪಾಸಣೆಗೆ ಒಳಪಡಿಸಿದಲ್ಲಿ ವೈದ್ಯಾಧಿಕಾರಿಯವರು ಆರೋಪಿಯು ನಿಷೇದಿತ ಮಾದಕವಸ್ತು “TETRAHYDROCANNABINOL” ಸೇವನೆ ಮಾಡಿರುವುದಾಗಿ ವೈದ್ಯಕೀಯ ದೃಢಪತ್ರ ನೀಡಿದ್ದು, ಆರೋಪಿಯ ವಿರುದ್ಧ ಕಲಂ. 27(ಬಿ) ಎನ್.ಡಿ.ಪಿಎಸ್ ಕಾಯ್ದೆ 1985 ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಇತ್ತೀಚಿನ ನವೀಕರಣ​ : 29-12-2023 10:07 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080