Crime Reported in : Mangalore West Traffic PS
ಪಿರ್ಯಾದಿ HRIYA R BALIGA ಹಾಗೂ ಅವರ ಸಂಬಂಧಿಕರು ಕಾರ್ ಸ್ಟ್ರೀಟ್ ವೆಂಕಟ್ರಮಣ ದೇವಸ್ಥಾನದಲ್ಲಿ ಪ್ರಸಾದ ಸ್ವೀಕರಿಸಲೆಂದು ದಿನಾಂಕ:29-01-2023 ರಂದು 23:30 ಗಂಟೆಯ ಸುಮಾರಿಗೆ ಮನೆಯಿಂದ ಕೆಎ:19:ಎಂಎಲ್:6399ನೇ ಕಾರಿನಲ್ಲಿ ಹೊರಟು ಕಾರನ್ನು ಪಿರ್ಯಾದುದಾರರ ತಾಯಿ ಶ್ರೀಮತಿ ರಮ್ಯಾ ಬಾಳಿಗಾರವರು ಚಲಾಯಿಸುತ್ತಿದ್ದು, ಮಣ್ಣಗುಡ್ಡ-ಕುದ್ರೋಳಿ-ಕಾರ್ ಸ್ಟ್ರೀಟ್ ರಸ್ತೆಯಲ್ಲಿ ಬರುತ್ತಾ ಸಮಯ ಸುಮಾರು 23:50 ಗಂಟೆಯ ವೇಳೆಗೆ ನ್ಯೂಚಿತ್ರಾ ಜಂಕ್ಷನ್ ತಲುಪುವಾಗ ಶರಣ್ ಎಂಬವರು ಡೊಂಗರಕೇರಿ ಕಡೆಯಿಂದ ನ್ಯೂಚಿತ್ರಾ ಜಂಕ್ಷನ್ ಕಡೆಗೆ ತಾನು ಸವಾರಿ ಮಾಡುತ್ತಿದ್ದ ಕೆಎಲ್:09:ಎಯು:6430ನೇ ಮೋಟಾರು ಸೈಕಲ್ಲನ್ನು ತೀರಾ ನಿರ್ಲಕ್ಷ್ಯತನ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಪಿರ್ಯಾದುದಾರರ ತಾಯಿಯವರು ಚಲಾಯಿಸುತ್ತಿದ್ದ ಕಾರಿನ ಮುಂದಿನ ಎಡಬದಿಯ ಚಕ್ರದ ಮೇಲ್ಬದಿಗೆ ಡಿಕ್ಕಿಯಾದ ಪರಿಣಾಮ ಶರಣ್ ರವರ ಮುಖದಲ್ಲಿ ಮೂಳೆ ಮುರಿತ ಹಾಗೂ ರಕ್ತ ಗಾಯ, ತಲೆಗೆ ಗುದ್ದಿದ ನಮೂನೆಯ ಗಾಯ ಮತ್ತು ಬಲಕೈಯ ಕೋಲು ಕೈಗೆ ಮೂಳೆ ಮುರಿತ, ಎರಡೂ ಕೈಯ ಬೆರಳುಗಳಿಗೆ ಜಖಂ ಆಗಿದ್ದು, ಗಾಯಾಳು ಕೊಡಿಯಾಲಬೈಲು ಯನಪೋಯಾ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುತ್ತಾರೆ ಮತ್ತು ಎರಡೂ ವಾಹನಗಳು ಕೂಡಾ ಜಖಂಗೊಂಡಿರುತ್ತದೆ ಎಂಬಿತ್ಯಾದಿ.
Crime Reported in : Mangalore South PS
ಪಿರ್ಯಾದಿ ಮುಡಿಪು ಜಂಕ್ಷನ್ ನಲ್ಲಿರುವ ತಾಜ್ ಬುಕ್ ಸ್ಟಾಲ್ ಎಂಬ ಅಂಗಡಿಗೆ ಬಂದಿದ್ದ ಓರ್ವ ಅಪರಿಚಿತ ವ್ಯಕ್ತಿಯು ತನ್ನ ಬಳಿ ಸೌದಿ ಅರೇಬಿಯಾ ದೇಶದ ಕರೆನ್ಸಿ ಇದ್ದು ಅದನ್ನು ಕಡಿಮೆ ಬೆಲೆಗೆ ಕೊಡುತ್ತೇನೆಂದು ಪಿರ್ಯಾದಿದಾರರಿಗೆ ನಂಬಿಸಿದ್ದು, ದಿನಾಂಕ 29-01-2023 ರಂದು ಆ ಅಪರಿಚಿತ ವ್ಯಕ್ತಿಯು ಪಿರ್ಯಾದಿದಾರರಿಗೆ ಕರೆ ಮಾಡಿ ರೂ. 4 ಲಕ್ಷ ಹಣವನ್ನು ರೆಡಿ ಮಾಡಿ ಮಂಗಳೂರಿಗೆ ತಂದು ಕರೆ ಮಾಡುವಂತೆ ತಿಳಿಸಿದಂತೆ ಪಿರ್ಯಾದಿದಾರರು ದಿನಾಂಕ 30-01-2023 ರಂದು ಅಪರಿಚಿತ ವ್ಯಕ್ತಿಯ 9667864940 ನಂಬರಿಗೆ ಕರೆ ಮಾಡಿದಾಗ ಪಿರ್ಯಾದಿದಾರರನ್ನು ಸ್ಟೇಟ್ ಬ್ಯಾಂಕ್ ಸರ್ವೀಸ್ ಬಸ್ ನಿಲ್ದಾಣಕ್ಕೆ ಹೋಗುವ ಮೈದಾನದ ಬಳಿ ಇರುವ ಮೆಸ್ಕಾಂ ಕಛೇರಿ ಮುಂಭಾಗದ ರಸ್ತೆಯಲ್ಲಿ ಆತನಿಗೆ ಕಾಯುವಂತೆ ತಿಳಿಸಿದ್ದದು, ಅದರಂತೆ ಪಿರ್ಯಾದಿದಾರರು ಆ ಅಪರಿಚಿತ ವ್ಯಕ್ತಿಗೆ ಕಾಯುತ್ತಾ ನಿಂತುಕೊಂಡಿದ್ದಾಗ ಸಮಯ 11:40 ಗಂಟೆಗೆ ಆ ಅಪರಿಚಿತ ವ್ಯಕ್ತಿಯು ಪಿರ್ಯಾದಿದಾರರ ಬಳಿಗೆ ಬಂದು ಆತನ ಕೈಯಲ್ಲಿದ್ದ ಒಂದು ಪ್ಲಾಸ್ಟಿಕ್ ಕಟ್ಟನ್ನು ಪಿರ್ಯಾದಿದಾರರಿಗೆ ಕೊಟ್ಟು ಪಿರ್ಯಾದಿದಾರರಿಂದ ರೂ. 4 ಲಕ್ಷ ಹಣ ಪಡೆದಿರುತ್ತಾರೆ. ಪಿರ್ಯಾದಿದಾರರು ಆ ಪ್ಲಾಸ್ಟಿಕ್ ಕಟ್ಟನ್ನು ತೆರೆದು ಪರಿಶೀಲಿಸಿದಾಗ ಅದರಲ್ಲಿ ಕಾಗದಗಳನ್ನು ಮಡಚಿ ಒಂದರ ಮೇಲೆ ಒಂದರಂತೆ ನೋಟಿನಂತೆ ಇಟ್ಟಿರುವುದು ಕಂಡು ಬಂದಿರುತ್ತದೆ. ಪಿರ್ಯಾದಿದಾರರಿಂದ ರೂ. 4 ಲಕ್ಷ ಹಣ ಪಡೆದ ಅಪರಿಚಿತ ವ್ಯಕ್ತಿ ಸ್ಥಳದಿಂದ ಓಡಿ ಹೋಗಿರುತ್ತಾನೆ. ಪಿರ್ಯಾದಿದಾರರಿಗೆ ಸೌದಿ ಅರೇಬಿಯಾ ದೇಶದ ಕರೆನ್ಸಿ ಕೊಡುವುದಾಗಿ ನಂಬಿಸಿ ಪಿರ್ಯಾದಿದಾರರಿಂದ ರೂ. 4 ಲಕ್ಷ ಹಣ ಪಡೆದು ವಂಚಿಸಿರುವುದಾಗಿದೆ ಎಂಬಿತ್ಯಾದಿಯಾಗಿರುತ್ತದೆ
Crime Reported in : Traffic South Police Station
ದಿನಾಂಕ 29-01-2023 ರಂದು ಕಾರು ನಂಬ್ರ KL-14-AA-5976 ನೇದರಲ್ಲಿ ಅಹ್ಮದ್ ರಿಫಾಯಿ ಸಯ್ಯದ್ ಚಾಲಕನಾಗಿ ಹಾಗೂ ಚಾಲಕನ ಪಕ್ಕದ ಸೀಟಿನಲ್ಲಿ ಅಹ್ಮದುಲ್ಲಾ ಬಶಾರ್ ಹಾಗೂ ಹಿಂಬದಿಯ ಸೀಟಿನಲ್ಲಿ ಪಿರ್ಯಾದಿದಾರರಾದ ರೇವತಿ ಎಸ್ ಹಾಗೂ ಅವರ ಸ್ನೇಹಿತೆ ಫಾತೀಮಾ ಸಹ ಪ್ರಯಾಣಿಕರಾಗಿ ಕುಳಿತುಕೊಂಡು ಚಹಾ ಕುಡಿಯಲೆಂದು ಬಂಟ್ಸ್ ಹಾಸ್ಟೇಲ್ ನಿಂದ ತಲಪಾಡಿ ಕಡೆಗೆ ಕಾರಿನಲ್ಲಿ ಹೋಗುತ್ತಿರುವಾಗ ಕಾರು ಚಾಲಕ ಅಹ್ಮದ್ ರಿಫಾಯಿ ಸಯ್ಯದ್ ಕಾರನ್ನು ಅತೀ ವೇಗ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗುತ್ತಾ ಸಮಯ ಸುಮಾರು ರಾತ್ರಿ 8-15 ಗಂಟೆಗೆ ಕೊಲ್ಯ ಮಾರಿಕಾಂಬ ದೇವಸ್ಥಾನ ಬಳಿ ತಲುಪಿದಾಗ ಕಾರು ವೇಗವಾಗಿದ್ದರಿಂದ ಚಾಲಕ ಅಹ್ಮದ್ ರಿಫಾಯಿ ಸಯ್ಯದ್ ನ ಕೈಯಿಂದ ನಿಯಂತ್ರಣ ತಪ್ಪಿ ರಸ್ತೆ ಮಧ್ಯೆದ ಡಿವೈಡರ್ ಮೇಲೆ ಹತ್ತಿ ಡಿವೈಡರ್ ಮೇಲಿರುವ ಕಬ್ಬಿಣದ ದಾರಿ ದೀಪದ ಕಂಬಕ್ಕೆ ಡಿಕ್ಕಿಯಾಗಿ ನಂತರ ಕಾರು ಪಲ್ಟಿಯಾಗುತ್ತಾ ತಲಪಾಡಿ ಕಡೆಯಿಂದ ಮಂಗಳೂರು ಕಡೆಗೆ ಹಾದು ಹೋಗಿರುವ ರಸ್ತೆಗೆ ಹೋಗಿ ಬಿದ್ದು ಪಿರ್ಯಾದಿದಾರರಿಗೆ ಬೆನ್ನು ಮೂಳೆ ಹಾಗೂ ಎದೆಗೂಡಿಗೆ ಮೂಳೆ ಮುರಿತದ ಗಾಯ ಮತ್ತು ತಲೆಗೆ ಗುದ್ದಿದ ಗಾಯ ಹಾಗೂ ಕಾರು ಚಾಲಕ ಅಹ್ಮದ್ ರಿಫಾಯಿ ಸಯ್ಯದ್ ಗೆ ತಲೆಗೆ ಗಂಭೀರ ಸ್ವರೂಪದ ಗಾಯ ಹಾಗೂ ಸಹ ಪ್ರಯಾಣಿಕರಾದ ಅಹ್ಮದುಲ್ ಬಶಾರ್ ಮತ್ತು ಫಾತೀಮಾಳಿಗೆ ಗಂಭೀರ ಸ್ವರೂಪದ ಗಾಯವಾಗಿದ್ದು ನಂತರ ಅಲ್ಲಿ ಸೇರಿದ ಜನರು ಅಹ್ಮದ್ ರಿಫಾಯಿ ಸಯ್ಯದ್ ಹಾಗೂ ಅಹ್ಮದುಲ್ ಬಶಾರ್ ನನ್ನು ಚಿಕಿತ್ಸೆ ಬಗ್ಗೆ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿನ ವೈದ್ಯರು ಅಹ್ಮದ್ ರಿಫಾಯಿ ಸಯ್ಯದ್ ನನ್ನು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದು ಹಾಗೂ ಇನ್ನೊಂದಿಷ್ಟು ಜನರು ಪಿರ್ಯಾದಿದಾರರನ್ನು ಚಿಕಿತ್ಸೆ ಬಗ್ಗೆ ಇಂಡಿಯಾನ ಆಸ್ಪತ್ರೆಗೆ ಹಾಗೂ ಇನ್ನೂ ಕೆಲವರು ಫಾತೀಮಾಳನ್ನು ಎ.ಜೆ.ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿರುತ್ತಾರೆ. ಹಾಗೂ ಅಪಘಾತದಿಂದ ದಾರಿ ದೀಪದ ಕಂಬ ರಸ್ತೆಗೆ ಉರುಳಿ ಬಿದ್ದಿರುತ್ತದೆ ಎಂಬಿತ್ಯಾದಿ.
Crime Reported in :Surathkal PS
ಪಿರ್ಯಾದಿ Sanath Kumar ಮುಕ್ಕದ ಮಹಾಲಕ್ಷ್ಮಿ ಕಾಂಪ್ಲೆಕ್ಸ್ ನಲ್ಲಿ ಡೆಲವರಿ ಮಿಲಿಟೆಡ್ ಕಂಪನಿಯಲ್ಲಿ ಟಿಮ್ ಲೀಡರ್ ಕೆಲಸ ಮಾಡಿಕೊಂಡಿದ್ದು ಸದ್ರಿ ಕಛೇರಿಯಲ್ಲಿ ಅನ್ ಲೈನ್ ಮೂಲಕ ಬುಕ್ಕಿಂಗ್ ಆದ ಪಾರ್ಸಲ್ ಗಳನ್ನು ಹಾಗೂ ಗ್ರಾಹಕರಿಂದ ಪಡೆದ ಹಣವನ್ನು ಆ ಕಛೇರಿ ಒಳಗಿನ ಅಲ್ ಮೇರಾ ಲಾಕರ್ ನಲ್ಲಿ ಇಟ್ಟು ನಿನ್ನೆ ದಿನಾಂಕ 29-01-2023 ರಂದು ಸಂಜೆ 6:30 ಗಂಟೆಗೆ ಕಛೇರಿಯನ್ನು ಬಂದ್ ಮಾಡಿ ಶೆಟ್ಟರ್ ಗೆ ಬೀಗ ಹಾಕಿ ಹೋಗಿದ್ದು, ದಿನಾಂಕ 30-01-2023 ರಂದು ಬೆಳಿಗ್ಗೆ ಪಿರ್ಯಾದಿದಾರರ ಸಿಬ್ಬಂದಿಗಳು ಬಂದು ನೋಡಿದಾಗ ಶೆಟ್ಟರ್ ನಲ್ಲಿ ಬೀಗ ಇಲ್ಲದಿರುವುದನ್ನು ಕಂಡು ಶೆಟ್ಟರ್ ಎತ್ತಿ ನೋಡಿದಾಗ ಕಛೇರಿಯಲ್ಲಿ ಸಾಮಾನುಗಳು ಚೆಲ್ಲಾಪಿಲ್ಲಿಯಾಗಿದ್ದು ಲಾಕರ್ ಓಡೆದು ಅದರಲ್ಲಿದ್ದ ಸುಮಾರು 3,25,566/- ರೂ ನಗದು ಹಣ ಹಾಗೂ ಗ್ರಾಹಕರಿಗೆ ಡೆಲವರಿ ಆಗದೇ ಹಿಂದಿರುಗಿಸಲು ಪ್ಲಾಸ್ಟಿಕ್ ಗೋಣಿ ಚೀಲದಲ್ಲಿದ್ದ ಒಟ್ಟು 19 ಸಾಮಗ್ರಿಗಳು ಇಲ್ಲದೆ ಇದ್ದು ಯಾರೋ ಕಳ್ಳರು ಕಚೇರಿಯ ಬೀಗವನ್ನು ಓಡೆದು ಕಳ್ಳತನ ಮಾಡಿ ಹೋಗಿದ್ದಾಗಿರುತ್ತದೆ, ಕಳ್ಳತನವಾದ ಸಾಮಾಗ್ರಿಗಳ ಒಟ್ಟು ಮೌಲ್ಯ 3,37,566/- ರೂ ಆಗಿದ್ದು, ಈ ಬಗ್ಗೆ ಕಾನೂನು ಕ್ರಮ ಜರಗಿಸುವರೇ ಎಂಬಿತ್ಯಾದಿಯಾಗಿರುತ್ತದೆ.
Crime Reported in : Mangalore East Traffic PS
ಪಿರ್ಯಾದಿ ಕುಮಾರಿ. ಲಿಫಾಮ್ ರೋಶನಾರ (28 ವರ್ಷ) ರವರು ದಿನಾಂಕ 26-01-2023 ರಂದು ರಾತ್ರಿ 9.00 ಗಂಟೆಗೆ ತನ್ನ ಬಾಬ್ತು KA-19-EC-9599 ನೊಂದಣಿ ನಂಬ್ರದ ಸ್ಕೂಟರಿನಲ್ಲಿ ಸವಾರಳಾಗಿ ತನ್ನ ಮನೆಯಾದ ಗುರುಪುರಕ್ಕೆ ಹೋಗಲು ಬಿಕರ್ನಕಟ್ಟೆ ಕೈಕಂಬ ಕಡೆಯಿಂದ ಕುಲಶೇಖರ ಕಲ್ಪನೆ ಕಡೆಗೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 169ನೇ ಡಾಮಾರು ರಸ್ತೆಯಲ್ಲಿ ಹೋಗುತ್ತಾ ಬಿಕರ್ನಕಟ್ಟೆ ಕೈಕಂಬ ಬಳಿ ಇರುವ ಅಯ್ಯಂಗಾರ್ ಬೇಕರಿ ಎದುರುಗಡೆ ಬಂದು ತಲುಪುತ್ತಿದ್ದಂತೆ ಒಂದು ಬುಲೆಟ್ ಮೋಟಾರು ಸೈಕಲನ್ನು ಅದರ ಸವಾರ ಪಿರ್ಯಾದಿದಾರರು ಸಾಗುವ ದಿಕ್ಕಿನಲ್ಲಿಯೇ ವೇಗವಾಗಿ ಚಲಾಯಿಸಿಕೊಂಡು ಹೋಗುತ್ತಾ ಪಿರ್ಯಾದಿದಾರರ ಸ್ಕೂಟರನ್ನು ಓವರ್ ಟೇಕ್ ಮಾಡು ಭರದಲ್ಲಿ ನಿರ್ಲಕ್ಷ್ಯತನದಿಂದ ಪಿರ್ಯಾದಿದಾರರ ಸ್ಕೂಟರಿನ ಬಲಬದಿಯ ಹ್ಯಾಂಡಲಿಗೆ ತಾಗಿಸಿಕೊಂಡು ಹೋದ ಪರಿಣಾಮ ಪಿರ್ಯಾದಿದಾರರು ಸ್ಕೂಟರ್ ಸಮೇತ ರಾ.ಹೆ 169ನೇ ಡಾಮಾರು ರಸ್ತೆಗೆ ಬೀಳಬೀಳುತ್ತಿದ್ದಂತೆಯೇ ಒಂದು KA-19-D-0034 ನಂಬ್ರದ ಪಿಕ್ ಅಪ್ ವಾಹನವನ್ನು ಅದರ ಚಾಲಕ ಫಝ್ವಾನ್ ಎಂಬಾತನು ಪಿರ್ಯಾದಿದಾರರ ಮುಂದಿನಿಂದ ಅಂದರೆ ಕುಲಶೇಖರ ಕಡೆಯಿಂದ ಬಿಕರ್ನಕಟ್ಟೆ ಕೈಕಂಬ ಕಡೆಗೆ ಹಾದು ಹೋಗಿರುವ ರಸ್ತೆಯಲ್ಲಿ ವೇಗವಾಗಿ ಚಲಾಯಿಸಿಕೊಂಡು ಬಂದು ರಸ್ತೆಯಲ್ಲಿ ಸ್ಕೂಟರಿನೊಂದಿಗೆ ಬಿದ್ದಿದ್ದ ಪಿರ್ಯಾದಿದಾರರಿಗೆ ಮತ್ತು ಸ್ಕೂಟರಿಗೆ ಢಿಕ್ಕಿಪಡಿಸಿದ ಪರಿಣಾಮ ಪಿರ್ಯಾದಿದಾರರ ಎರಡೂ ಬದಿಯ ತೊಡೆ ಸಂಧಿಗೆ ಮೂಳೆ ಮುರಿತದ ಗಂಭೀರ ಸ್ವರೂಪದ ಗಾಯಗಳಾಗಿರುತ್ತದೆ. ಅಪಘಾತಪಡಿಸಿದ ಪಿಕ್ ಅಪ್ ವಾಹನ ಚಾಲಕ ಗಾಯಾಳು ಪಿರ್ಯಾದಿದಾರರನ್ನು ಚಿಕಿತ್ಸೆ ಬಗ್ಗೆ ಹೈಲ್ಯಾಂಡ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದು, ಪಿರ್ಯಾದಿದಾರರು ಪ್ರಸ್ತುತ ಶಸ್ತ್ರ ಚಿಕಿತ್ಸೆಗೊಳಗಾಗಿ ತೀವ್ರ ನಿಗಾ ಘಟಕದಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುವುದಾಗಿದೆ. ಈ ಬಗ್ಗೆ KA-19-D-0034 ನೇ ನಂಬ್ರದ ಪಿಕ್ ಅಪ್ ವಾಹನ ಚಾಲಕ ಫಝ್ವಾನ್ ಮತ್ತು ಅಪರಿಚಿತ ಬುಲೆಟ್ ಮೋಟಾರು ಸೈಕಲ್ ಸವಾರನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿಕೆ ಎಂಬಿತ್ಯಾದಿ.
Crime Reported in : Mangalore East Traffic PS
ದಿನಾಂಕ: 29-01-2023 ರಂದು ಪಿರ್ಯಾದಿ ಕಾರ್ತಿಕ್ ರವರು ಸಂಜೆ ಅವರ ಬಾಬ್ತು KA-19-MF-6671 ನೋಂದಣಿ ನಂಬ್ರದ ಕಾರಿನಲ್ಲಿ ಕಂಕನಾಡಿ ಕರಾವಳಿ ಸರ್ಕಲ್ ಕಡೆಯಿಂದ ಪಂಪ್ ವೆಲ್ ಜಂಕ್ಷನ್ ಕಡೆಗೆ ಬರುತ್ತ ಸಂಜೆ ಸಮಯ ಸುಮಾರು 4:00 ಗಂಟೆಗೆ ಪಂಪುವೆಲ್ ಬಳಿ ಇರುವ ಇಂದಿರಾ ಕ್ಯಾಂಟೀನ್ ಎದುರುಗಡೆ ಬಂದು ತಲುಪಿದ ವೇಳೆ ಪಂಪ್ ವೆಲ್ ಜಂಕ್ಷನ್ ಬಳಿ ರಸ್ತೆ ಕಾಮಗಾರಿ ನಡೆಯುತ್ತಿರುವ ಪ್ರದೇಶದಲ್ಲಿ ಮೋಟಾರು ಸೈಕಲೊಂದು ಅಪಘಾತಕ್ಕೊಳಗಾಗಿ ಬಿದ್ದುಕೊಂಡಿದ್ದನ್ನು ಕಂಡು ಪಿರ್ಯಾದಿದಾರರು ಅಪಘಾತ ಸ್ಥಳಕ್ಕೆ ಹೋಗಿ ಅಲ್ಲಿ ಸೇರಿದ್ದ ಸಾರ್ವಜನಿಕರಿಂದ ಅಪಘಾತದ ಬಗ್ಗೆ ತಿಳಿದುಕೊಳ್ಳಲಾಗಿ KA-19-EB-0251 ನೋಂದಣಿ ನಂಬ್ರದ ಮೋಟಾರು ಸೈಕಲನ್ನು ಅದರ ಸವಾರ ರಾಜೇಶ್ ಕೆ ಎಂಬವರು ಜಯರಾಜ್ ಎಂಬವರನ್ನು ಸಹಸವಾರನಾಗಿ ಕುಳ್ಳಿರಿಸಿಕೊಂಡು ಕರಾವಳಿ ಕಡೆಯಿಂದ ಪಂಪ್ ವೆಲ್ ಕಡೆಗೆ ಹಾದು ಹೋಗಿರುವ ಕಂಕನಾಡಿ ಬೈಪಾಸ್ ರಸ್ತೆಯಲ್ಲಿ ಇಂದಿರಾ ಕ್ಯಾಂಟೀನ್ ಎದುರುಗಡೆ ಇರುವ ಹಂಪ್ಸ್ ದಾಟಿ ಸ್ವಲ್ಪ ಮುಂದೆ ಹೋಗುತ್ತ ರಸ್ತೆ ಕಾಮಗಾರಿ ನಡೆಯುವ ಪ್ರದೇಶಕ್ಕೆ ಸಂಜೆ ಸಮಯ ಸುಮಾರು 4:00 ಗಂಟೆಗೆ ಬಂದು ತಲುಪುತ್ತಿದ್ದಂತೆ ಬೈಕ್ ಸವಾರ ಒಮ್ಮೇಲೆ ನಿರ್ಲಕ್ಷ್ಯತನದಿಂದ ಬ್ರೇಕ್ ಹಾಕಿದ ಪರಿಣಾಮ ಬೈಕ್ ಸ್ಕಿಡ್ ಆಗಿ ರಸ್ತೆ ಕಾಮಗಾರಿ ನಡೆಯುವಲ್ಲಿ ಇರಿಸಿರುವ ಬ್ಯಾರಿಕೇಡ್ ಗೆ ಢಿಕ್ಕಿಯಾಗಿ ಬೈಕ್ ಸವಾರ ಹಾಗೂ ಸಹ ಸವಾರ ಇಬ್ಬರೂ ರಸ್ತೆಗೆ ಬಿದ್ದಿದ್ದು, ಸಹ ಸವಾರ ಜಯರಾಜ್ ಎಂಬವರಿಗೆ ತಲೆಯ ಒಳ ಭಾಗಕ್ಕೆ ತೀವ್ರ ತರಹದ ರಕ್ತ ಹೆಪ್ಪುಗಟ್ಟಿದ ಗಾಯ, ಎಡ ಭುಜದ ಬಳಿ ಮೂಳೆ ಮುರಿತದ ಗಂಭೀರ ಸ್ವರೂಪದ ಗಾಯ ಹಾಗೂ ಸವಾರ ರಾಜೇಶ್ ಕೆ ರವರಿಗೆ ಎದೆಗೆ ಗುದ್ದಿದ ರೀತಿಯ ಗಾಯವಾದವರನ್ನು ಸಾರ್ವಜನಿಕರು ಆಟೋರಿಕ್ಷಾವೊಂದರಲ್ಲಿ ಚಿಕಿತ್ಸೆಯ ಬಗ್ಗೆ ಇಂಡಿಯಾನ ಆಸ್ಪತ್ರೆಗೆ ಸಾಗಿಸಿದ್ದು ಸಹಸವಾರ ಜಯರಾಜ್ ರವರು ಒಳರೋಗಿಯಾಗಿ ಚಿಕಿತ್ಸೆಯಲ್ಲಿರುವುದಾಗಿದೆ. ಈ ಅಪಘಾತಕ್ಕೆ ಕಾರಣನಾದ ಬೈಕ್ ಸವಾರ ರಾಜೇಶ್ .ಕೆ ಎಂಬಾತನ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿದೆ ಎಂಬಿತ್ಯಾದಿ.
Crime Reported in : Mangalore South PS
ದಿನಾಂಕ 27-01-2023 ರಂದು ಮದ್ಯಾಹ್ನ 12-22 ಗಂಟೆಯಿಂದ 13-18 ಗಂಟೆಯ ಮದ್ಯಾವದಿಯಲ್ಲಿ ಮಂಗಳೂರು ನಗರದ ಅಜುಜುದ್ದೀನ್ ರಸ್ತೆಯಲ್ಲಿರುವ ಹಾಜಿ ಕ್ರೈನ್ ರವರ ಬಾಬ್ತು ನಾಜ್ ಪ್ಲಾಜ್ ಕಟ್ಟಡದ ನೆಲ ಅಂತಸ್ತಿನಲ್ಲಿರುವ ಎಂ. ಎ. ಎಂಟರ್ ಪೈಸನ್ಸ್ ಎಂಬ ಹೆಸರಿನ ಹಾರ್ಡ್ ವೇರ್ ಅಂಗಡಿಯ ಬಾಗಿಲನ್ನು ಮೂಲತ ಬೆಂಗ್ರೆಯನಾದ ಹಾಲಿ ಅಮ್ಮೆಮಾರ್ ಕಡೆಯವನಾದ ಅನ್ಸರ್ ಎಂಬಾತನು ತೆರೆದು ಪಿರ್ಯಾದುದಾರರ ಅಂಗಡಿಯೊಳಗಡೆ ಪ್ರವೇಶಿಸಿ ಅಂಗಡಿಯೊಳಗಡೆ ಕ್ಯಾಶ್ ಕೌಂಟರ್ ನ್ನು ಬಲತ್ಕಾರವಾಗಿ ಮೀಟಿ ತೆರೆದು ಅದಲ್ಲಿದ್ದ ನಗದು ಹಣ 39580/- ರೂಪಾಯಿ ಹಾಗೂ ಅದರ ಒಟ್ಟಿಗೆ ಇಟ್ಟಿದ್ದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಗೆ ಸಂಬಂಧಿಸಿದ ಚೆಕ್ ಹಾಳೆ ಸಹಿತ ಕಳವು ಮಾಡಿಕೊಂಡು ಹೋಗಿದ್ದು ಪಿರ್ಯಾದಿದಾರರು ತನ್ನ ಅಂಗಡಿಗೆ ಅಳವಡಿಸಿದ ಸಿ. ಸಿ. ಕ್ಯಾಮರಾವನ್ನು ಪರಿಶೀಲಿಸಿ ಠಾಣೆಗೆ ಬಂದು ಪಿರ್ಯಾದು ನೀಡಿರುವುದಾಗಿದೆ.
Crime Reported in : Kankanady Town PS
ಪಿರ್ಯಾದಿ ಉದಯ್ ಕೇಶವ್ ರವರು ಹಾರ್ಡ್ ವೇರ್ ಅಂಗಡಿ ವ್ಯವಹಾರ ಮಾಡಿಕೊಂಡಿದ್ದು ದಿನಾಂಕ 28-01-2023 ಸಂಜೆ 4.30 ಗಂಟೆಯಿಂದ 29-01-2023 ರ 12.30 ಗಂಟೆಯಿಂದ ಮದ್ಯಾವಧಿಯಲ್ಲಿ ಶಕ್ತಿನಗರ ಕಾರ್ಮಿಕ ಕಾಲೋನಿ ರಸ್ತೆ ಕೆ.ಹೆಚ್ ಬಿ ಬಡಾವಣೆಯ ಮನೆಯಿಂದ ಪೂಜಾ ಕಾರ್ಯಕ್ರಮದ ಬಗ್ಗೆ ಕುಂಬ್ಳೆಗೆ ತೆರಳಿದ್ದ ಸಮಯ ಯಾರೋ ಕಳ್ಳರು ಪಿರ್ಯಾದಿದಾರರ ಮನೆಯ ಮೇಲಿನ ಮಹಡಿಯ ಬಾಲ್ಕನಿಯ ಬಾಗಿಲನ್ನು ಸುತ್ತಿಗೆಯಿಂದ ಹೊಡೆದು ಒಳಪ್ರವೇಶಿಸಿ ನೆಲ ಅಂತಸ್ತಿನ ಕೊಣೆಯ ಸ್ಟೀಲ್ ಕಪಾಟ್ ಲಾಕರನ್ನು ಮುರಿದು ರೂ 2,50,000/- ನಗದು ಹಣವನ್ನು ಹಾಗೂ ಇನ್ನೊಂದು ಕೊಣೆಯ ಲಾಕರ್ ನ್ನು ಮುರಿದು ರೂ 60,000/- ಮೌಲ್ಯದ ಎರಡು ಕರಿಮಣಿ ಸರ, ರೂ 36,000/- ಮೌಲ್ಯದ ಮೂರು ಜೊತೆ ಬೆಂಡೋಲೆ, ರೂ 1500/- ಲೇಡಿಸ್ ವಾಚ್ ನ್ನು ಕಳವು ಮಾಡಿದ್ದು ಕಳವು ಮಾಡಿದ ನಗದು ಮತ್ತು ಸೊತ್ತುಗಳ ಒಟ್ಟು ಮೌಲ್ಯ ರೂ 3,47,500/- ಆಗಬಹುದು ಎಂಬಿತ್ಯಾದಿ
Crime Reported in : Kankanady Town PS
ದಿನಾಂಕ:29-01-2023 ರಂದು ಪ್ರಕರಣದ ಪಿರ್ಯಾದಿ ವಿನ್ಸೆಂಟ್ ಅಶೋಕ್ ಲೋಬೋ ರವರು ಪಿ.ಸಿ. ದಿನೇಶ್ ರಾಠೋಡ್ ರವರ ಜೊತೆ ಸಮವಸ್ತ್ರದಲ್ಲಿ ಮಂಗಳೂರು ನಗರದ ಮರೋಳಿ ಸೂರ್ಯ ನಾರಾಯಣ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವದ ಬಂದೋಬಸ್ತ್ ಕರ್ತವ್ಯದಲ್ಲಿರುವ ಸಮಯ 21-30 ಗಂಟೆ ಸುಮಾರಿಗೆ ಆರೋಪಿ ಅಚಲ್ ವಿ.ಸಿ. ಕೆಎ-19-EL-7679 ಡಿಯೋ ಸ್ಕೂಟರ್ ನ್ನು ದೇವಸ್ಥಾನದ ಬಳಿಯ ಸಾರ್ವಜನಿಕ ರಸ್ತೆಯ ಬದಿಯಲ್ಲಿ ಸಾರ್ವಜನಿಕರಿಗೆ ಹಾಗೂ ವಾಹನ ಸಂಚಾರಕ್ಕೆ ಅಡ್ಡಿಯಾಗುವಂತೆ ನಿಲ್ಲಿಸಿದಾಗ, ಪಿರ್ಯಾದಿದಾರರು ಇದರಿಂದ ಜಾತ್ರೋತ್ಸವ್ಕಕೆ ಬರುವ ಸಾರ್ವಜನಿಕರಿಗೆ ಹಾಗೂ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ತೊಂದರೆಯಾಗುತ್ತಿದೆ ಸ್ವಲ್ಪ ಮುಂದೆ ಹೋಗಿ ವಾಹನವನ್ನು ನಿಲ್ಲಿಸುವಂತೆ ಹೇಳಿರುತ್ತಾರೆ. ಆರೋಪಿಯು ಪಿರ್ಯಾದಿದಾರರಲ್ಲಿ, “ ರಸ್ತೆ ಬದಿಯಲ್ಲಿ ಸ್ಕೂಟರ್ ನ್ನು ನಿಲ್ಲಿಸದಂತೆ ಹೇಳಲು ನೀನು ಯಾರು ? ನಿನಗೆ ಎಷ್ಟು ಕೆಲಸವಿದೆ ಅದನ್ನು ನೀನು ಮಾಡು, ನಾನು ಸ್ಕೂಟರ್ ನ್ನು ತೆಗೆಯುವುದೇ ಇಲ್ಲ. ನೀನು ಏನು ಮಾಡುತ್ತಿಯೋ ಅದನ್ನು ಮಾಡು” ಎಂದು ಏರು ಧ್ವನಿಯಲ್ಲಿ ಪಿರ್ಯಾದಿದಾರಲ್ಲಿ ಹೇಳಿ, ಕೀಯನ್ನು ಸ್ಕೂಟರ್ ನಲ್ಲಿಯೇ ಬಿಟ್ಟು ಅಲ್ಲಿಂದ ಹೋಗಿರುತ್ತಾರೆ. ಆರೋಪಿಯು ಸ್ಕೂಟರ್ ನ್ನು ನಿಲ್ಲಿಸಿರುವುದರಿಂದ ಇತರ ವಾಹನ ಹಾಗೂ ಜನ ಸಂಚಾರಕ್ಕೆ ತೊಂದರೆಯಾಗುತ್ತಿದ್ದುದರಿಂದ ಪಿರ್ಯಾದಿದಾರರು ಸ್ಕೂಟರ್ ನ್ನು ಸ್ವಲ್ಪ ಮುಂದೆ ಹೋಗಿ ಇಟ್ಟಾಗ, ಆರೋಪಿಯು ಪಿರ್ಯಾದಿದಾರರನ್ನು ಉದ್ದೇಶಿಸಿ, ನನ್ನ ಸ್ಕೂಟರ್ ನ್ನು ಅಲ್ಲಿಂದ ತೆಗೆಯಲು ನೀನು ಯಾರು? ಎಂದು ಹೇಳಿ, ಪಿರ್ಯಾದಿದಾರರ ಸಮವಸ್ತ್ರದ ಭುಜದ ಪಟ್ಟಿಯನ್ನು ಹಿಡಿದು, ಎಳೆದು ಕರ್ತವ್ಯಕ್ಕೆ ಅಡ್ಡಿಪಡಿಸಿ, ಪಿರ್ಯಾದಿದಾರರ ಎಡ ಕೆನ್ನೆಗೆ, ಎಡ ಕುತ್ತಿಗೆಗೆ ಹಾಗೂ ಎದೆಯ ಎಡಭಾಗಕ್ಕೆ ಹಲ್ಲೆ ನಡೆಸಿರುವುದಾಗಿದೆ. ಎಂಬಿತ್ಯಾದಿಯಾಗಿರುತ್ತದೆ.
Crime Reported in :Traffic South Police Station
ಪಿರ್ಯಾದಿ ವೆಂಕಟರಾಮಣ ಉಪಾಧ್ಯಾಯ (55 ವರ್ಷ) ರವರು ದಿನಾಂಕ: 29-01-2023 ರಂದು ಕೆಲಸದ ನಿಮಿತ್ತ ಮೋಟಾರ್ ಸೈಕಲ್ ನಂಬ್ರ:KA-21-W-6606 ನೇದರಲ್ಲಿ ಸವಾರಿ ಮಾಡಿಕೊಂಡು ಬಿಸಿ ರೋಡ್ ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿರುವಾಗ ಸಮಯ ಸುಮಾರು ಮಧ್ಯಾಹ್ನ 03-30 ಗಂಟೆಗೆ ರಾ.ಹೆ-73 ರ ರಸ್ತೆಯಲ್ಲಿ ಅಡ್ಯಾರ್ ಗ್ರೀನ್ ವ್ಯಾಲ್ಯೂ ನರ್ಸರಿ ಎದುರು ರಸ್ತೆಯಲ್ಲಿ ತಲುಪುತ್ತಿದ್ದಂತೆ ಅದೇ ರಸ್ತೆಯಲ್ಲಿ ಪಿರ್ಯಾದಿದಾರರ ಹಿಂದಿನಿಂದ ಬರುತ್ತಿದ್ದ ಕಾರು ನಂಬ್ರ: KA-19-MF-6948 ನೇದನ್ನು ಅದರ ಚಾಲಕಿ ವಿಶಾಲಾಕ್ಷಿ ಕೆ ಎಂಬುವರು ಕಾರನ್ನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮೋಟಾರ್ ಸೈಕಲ್ ನ ಹಿಂಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಅವರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ಪಿರ್ಯಾದಿದಾರರ ತಲೆಗೆ ಮತ್ತು ಮುಖಕ್ಕೆ ಗುದ್ದಿದ ರೀತಿಯ ರಕ್ತ ಗಾಯ,ಎಡಭುಜ್ಕಕೆ ಮತ್ತು ಬೆನ್ನಿಗೆ ಗುದ್ದಿದ ರೀತಿಯ ಮೂಳೆ ಮುರಿತದ ಗಾಯ,ಎರಡು ಕೈ ಮತ್ತು ಕಾಲುಗಳಿಗೆ ಗುದ್ದಿದ ರೀತಿಯ ಮತ್ತು ತರಚಿದ ರಕ್ತ ಗಾಯ ಹಾಗೂ ಎದೆಗೆ ಮೂಳೆಮುರಿತದ ಗಾಯವಾಗಿದ್ದು ಅಲ್ಲಿ ಸೇರಿದ ಜನರು ಆಟೋರಿಕ್ಷಾವೊಂದರಲ್ಲಿ ಚಿಕಿತ್ಸೆ ಬಗ್ಗೆ ಫಸ್ಟ್ ನ್ಯೂರೋ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಅಲ್ಲಿನ ವೈದ್ಯರು ಪರೀಕ್ಷಿಸಿ ಒಳ ರೋಗಿಯಾಗಿ ದಾಖಲಿಸಿರುತ್ತಾರೆ ಹಾಗೂ ಅಪಘಾತ ಸಮಯ ಅಪಘಾತ ಪಡಿಸಿದ ಕಾರಿನ ಚಾಲಕಿ ವಿಶಾಲಾಕ್ಷಿ ಕೆ ಎಂಬುವರು ಕಾರು ಸಮೇತ ಅಪಘಾತ ಸ್ಥಳದಿಂದ ಪರಾರಿಯಾಗಿರುತ್ತಾರೆ ಎಂಬಿತ್ಯಾದಿ.