ಅಭಿಪ್ರಾಯ / ಸಲಹೆಗಳು

Ullal PS

 ಸಾರಾಂಶವೇನೆಂದರೆ ದಿನಾಂಕ; 30-01-2024 ರಂದು ಪಿರ್ಯಾದಿ Sheethal Algur PSI ಇವರು ಠಾಣಾ ಸರಹದ್ದಿನಲ್ಲಿ ಸಿಬ್ಬಂದಿಯವರೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಮದ್ಯಾಹ್ನ ಉಳ್ಳಾಲ ತಾಲೂಕು ತಲಪಾಡಿ ಗ್ರಾಮದ ತಲಪಾಡಿ ಬಸ್ ನಿಲ್ದಾಣದ ಬಳಿ ಸಾರ್ವಜನಿಕ ಸ್ಥಳದಲ್ಲಿ ಮೊಹಮ್ಮದ್‌ ಶಮೀರ್‌ ತಂದೆ ಮೊಹಮ್ಮದ್‌ ಸಜೀರ್‌ ವಾಸ: ಕೆ.ಸಿ.ನಗರ ತಲಪಾಡಿ, ಇವರು ಯಾವುದೋ ನಶೆ ಪದಾರ್ಥವನ್ನು ಸೇವಿಸಿ ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ತೂರಾಡಿ ಕೊಂಡಿದ್ದ  ಇವರನ್ನು ಮುಂದಿನ ಕ್ರಮದ ಬಗ್ಗೆ  ದೇರಳಕಟ್ಟೆ ಕೆ ಎಸ್ ಆಸ್ಪತ್ರೆಗೆ ಕಳುಹಿಸಿ ವೈಧ್ಯರು ತಪಾಸಣೆ ಮಾಡಿದಲ್ಲಿ “Tetrahydrocannabinol” ಸೇವನೆ ಮಾಡಿರುವುದಾಗಿ ವೈಧ್ಯಾಧಿಕಾರಿಯವರ ವರದಿಯನ್ನು ಪಡೆದುಕೊಂಡಿದ್ದು, ಇವನ ವಿರುದ್ದ ಮಾದಕ ವಸ್ತು ಸೇವನೆಯ ಪ್ರಕಾರ ಪ್ರಕರಣವನ್ನು ದಾಖಲಿಸಿಕೊಂಡಿರುವುದಾಗಿದೆ ಎಂಬಿತ್ಯಾದಿ

 

Surathkal PS

ಈ ಪ್ರಕರಣದ ಸಾರಾಂಶವೇನೆಂದರೆ ಪಿರ್ಯಾದಿದಾರರಾದ ಕೇಶವ ಎಂಬವರ ಮಗನಾದ ದೀಕ್ಷಿತ್  ಎಂಬಾತನು ಕಾಟಿಪಳ್ಳದಲ್ಲಿ ITI ವ್ಯಾಸಂಗ ಮಾಡಿ ಸುಮಾರು 2 ತಿಂಗಳಿನಿಂದ ಪ್ರಸ್ತುತ ಕಾನಾದಲ್ಲಿರುವ ಪೆಟ್ರೋಲ್ ಪಂಪ್ ನಲ್ಲಿ ಕೆಲಸ ಮಾಡುತ್ತಿದ್ದು ನಿನ್ನೆ ದಿನ ದಿನಾಂಕ: 29.01.2024 ರಂದು ಬೆಳಿಗ್ಗೆ 8.00 ಗಂಟೆಗೆ ಪ್ಯಾಂಟ್ ಹಾಗೂ ಶರ್ಟ್ ಗಳನ್ನು ಬ್ಯಾಗ್ ನಲ್ಲಿ ತುಂಬಿಸಿಕೊಂಡು ಹೋಗುವುದನ್ನು ಕಂಡ ಆತನ ತಾಯಿ ಈ ಬಗ್ಗೆ ವಿಚಾರಿಸಿದಾಗ ಲ್ಯಾಂಡ್ರಿಗೆ ಕೊಂಡುಹೋಗುವುದಾಗಿ ತಿಳಿಸಿ ಮಧ್ಯಾಹ್ನ ಆದರೂ ಮನೆಗೆ ಬಾರದೇ ಇರುವುದನ್ನು ಕಂಡು ಪಿರ್ಯಾದಿದಾರರು ಆತನಿಗೆ ಪೋನ್ ಮಾಡಿದಾಗ ಆತನ ಪೋನ್ ಸ್ವಿಚ್ ಆಫ್ ಆಗಿದ್ದು ಬಳಿಕ ಆತನ ಬಗ್ಗೆ ಸಂಬಂಧಿಕರಲ್ಲಿ, ಸ್ನೇಹಿತರಲ್ಲಿ ವಿಚಾರಿಸಿದಾಗ ಆತನ ಬಗ್ಗೆ ಯಾವುದೇ ಮಾಹಿತಿ ದೊರಕದೇ ಇದ್ದು ಪಿರ್ಯಾದಿದಾರರ ಮಗ ದೀಕ್ಷಿತ್ ನನ್ನು ಯಾರೋ ಪುಸಲಾಯಿಸಿ ಅಪಹರಿಸಿಕೊಂಡು ಹೋಗಿರಬಹುದಾಗಿ ಸಂಶಯವಿರುತ್ತದೆ ಎಂಬಿತ್ಯಾದಿ

ಚಹರೆ: ಹೆಸರು: ದೀಕ್ಷಿತ್  ಪ್ರಾಯ: 17 ವರ್ಷ ಮೈ ಬಣ್ಣ : ಕಪ್ಪು ಎತ್ತರ : 5.8 ಅಡಿ

 

Konaje PS

ಈ ಪ್ರಕರಣದ ಸಾರಾಂಶವೇನೆಂದರೆ ದಿನಾಂಕ:30-01-2024 ರಂದು ಪಿರ್ಯಾದಿ Puneeth M Gaonkar ಇವರು  ಇಲಾಖಾ ವಾಹನದಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಸಮಯ 11.20 ಗಂಟೆಗೆ ಉಳ್ಳಾಲ ತಾಲೂಕು ಹರೇಕಳ ಗ್ರಾಮದ ಬೈತಾರ್ ಮಸೀದಿಯ ಬಳಿ ಅಮಲು ಪದಾರ್ಥ ಸೇವನೆ ಮಾಡಿ ನಶೆಯಲ್ಲಿದ್ದಂತೆ ಕಂಡು ಬಂದ ಸಾಗರ್, ಪ್ರಾಯ: 30 ವರ್ಷ, ತಂದೆ: ಶೇಖರ, ವಾಸ: ಬೈತಾರ್, ಹರೇಕಳ ಗ್ರಾಮ, ಮತ್ತು ಅಂಚೆ, ಉಳ್ಳಾಲ ತಾಲೂಕು ಎಂಬಾತನನ್ನು ಮುಂದಿನ ಕ್ರಮದ ಬಗ್ಗೆ ಮಂಗಳೂರು ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ವೈಧ್ಯಾದಿಕಾರಿಯವರ ಮುಂದೆ ಹಾಜರು ಪಡಿಸಿ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಆರೋಪಿಯು TETRAHYDROCANNABINOL ಎಂಬ ಗಾಂಜ ಸೇವನೆ ಮಾಡಿರುವುದು ದೃಡಪಟ್ಟಿರುತ್ತದೆ ಎಂಬಿತ್ಯಾದಿ

ಇತ್ತೀಚಿನ ನವೀಕರಣ​ : 30-01-2024 09:54 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080