ಅಭಿಪ್ರಾಯ / ಸಲಹೆಗಳು

CEN Crime PS

ಶ್ರೀಮತಿ ಪಿ.ಎಸ್.ಪದ್ಮಾವತಿ ಪ್ರಾಯ:35 ವರ್ಷ,  ಸಿನೀಯರ್ ಮ್ಯಾನೇಜರ್ HDFC Bank, Bank House, Bangalore, ಎಂಬವರು ಬ್ಯಾಂಕ್ ವಿಜಿಲೆನ್ಸ್ ಆಪೀಸರ್ ಆಗಿದ್ದು, ಮಂಗಳೂರು ನಗರದ, ಎಂ.ಜಿ ರೋಡ್ ನಲ್ಲಿರುವ ಬ್ಯಾಂಕಿಗೆ  ಮಂಗಳೂರು ನಗರದ, ಬೈಕಂಪಾಡಿ ಇಂಡಸ್ಟ್ರೀಯಲ್ ಎರಿಯಾದಲ್ಲಿರುವ M/S Blue Water Food and Exports Pvt ಎಂಬ ಕಂಪೆನಿಯ [1] ಮ್ಯಾನೇಜಿಂಗ್ ಡೈರೆಕ್ಟರ್ ಶ್ರೀನಿವಾಸ ಭಟ್, [2] ಡೈರೆಕ್ಟರ್ ಶ್ರೀಮತಿ ವೀಣಾ.ಎಸ್.ಭಟ್, [3] ಡೈರೆಕ್ಟರ್ UNJ ನಂಬೂರಿ ಹಾಗೂ ಇತರು ದಿನಾಂಕ:10/10/2015 ರಂದು ಸಾಲಕ್ಕಾಗಿ ಬ್ಯಾಂಕಿಗೆ ಬಂದು ತಮ್ಮ ಕಂಪೆನಿಯ ದಾಖಲಾತಿ ಹಾಗೂ ಬ್ಯಾಂಕ್ ಗ್ಯಾರಂಟಿಯನ್ನು ಬ್ಯಾಂಕಿಗೆ ಪೂರೈಸಿದಂತೆ ಲೋನ್ ಪೂರ್ವದಲ್ಲಿ ಪರಿಶೀಲನೆಯನ್ನು ನಡೆಸಿಕೊಂಡು ದಿನಾಂಕ:20/10/2015 ರಂದು ರೂ.194.83 ಕೋಟಿ ಸಾಲವನ್ನು M/S Blue Water Food and Exports Pvt ಎಂಬ ಕಂಪೆನಿಗೆ ಮಂಜೂರು ಮಾಡಿ ಕಂಪೆನಿಗೆ ಪ್ರತಿ ವರ್ಷ ಸಾಲವನ್ನು ರಿನಿವಲ್ ಮಾಡಿಕೊಂಡು  ಸಾಲ ಮರುಪಾವತಿಸಿಕೊಂಡು ಬಂದಿದ್ದು, ದಿನಾಂಕ:12/07/2021 ರಂದು ಅಡಿಟ್ ಮಾಡುವ ಸಮಯ ಸದ್ರಿ ಕಂಪೆನಿಯವರು ನಮ್ಮ ಬ್ಯಾಂಕ್ ಹಾಗೂ ಸಂಬಂದಿಸಿದ ಪ್ರಾಧೀಕಾರಕ್ಕೆ  ತಿಳಿಸದೆ ಅನುಮತಿ ಪಡೆಯದೇ  ಆರೋಪಿತನ ವಶದಲ್ಲಿದ್ದ ಬ್ಯಾಂಕಿಗೆ ಅಡಮಾನ ಇರಿಸಿದ್ದ ಸ್ಟಾಕನ್ನು ಬ್ಯಾಂಕಿಗೆ ವಂಚಿಸಿ ಅಕ್ರಮ ಲಾಭವನ್ನು ಗಳಿಸುವ ಉದ್ದೇಶದಿಂದ ದಿನಾಂಕ 01-12-2019 ರಿಂದ ದಿನಾಂಕ 31-01-2020 ರ ಮಧ್ಯ ಅವಧಿಯಲ್ಲಿ  ನಾಶಮಾಡಿರುವುದಾಗಿ ತಿಳಿಸಿ ಬ್ಯಾಂಕಿಗೆ ರೂ.88.22 ಕೋಟಿ ನಷ್ಟವನ್ನುಂಟು ಮಾಡಿರುತ್ತಾರೆ ಎಂಬಿತ್ಯಾದಿ ಫಿರ್ಯಾದಿ 

Mangalore East Traffic PS                    

ದಿನಾಂಕ 30-03-2023 ರಂದು ಪಿರ್ಯಾದಿದಾರರಾದ ಜಯ ಪ್ರಕಾಶ್ ರವರು ರಾಧಾ ಮೆಡಿಕಲ್ಸ್ ಗೆ ತೆರಳಿ ಬೆಂದೂರ್ ವೆಲ್ ಜಂಕ್ಷನ್ ಕಡೆಗೆ ನಡೆದುಕೊಂಡು ಬರುತ್ತಿದ್ದಾಗ  ಸಮಯ ಸುಮಾರು 12.00 ಗಂಟೆಗೆ ಕೊಲಾಸೊ ಕಡೆಯಿಂದ ಬೆಂದೂರ್ ವೆಲ್ ಜಂಕ್ಷನ್ ಕಡೆಗೆ KA-19-AA-2282 ನೊಂದಣಿ ನಂಬ್ರದ ರೂಟ್ ನಂಬ್ರ 4 B ಖಾಸಗಿ ಬಸ್ಸಿನಲ್ಲಿ ಪ್ರಯಾಣಿಸಿಕೊಂಡು ಬಂದ ಪ್ರಾಯಸ್ಥ ಮಹಿಳೆಯೊಬ್ಬರು ಬಸ್ಸಿನಿಂದ ಇಳಿದು ಬಸ್ಸಿನ ಎದುರುಗಡೆಯಿಂದ  ಬೆಂದೂರ್ ವೆಲ್ ಜಂಕ್ಷನ್ ಕಡೆಗೆ ರಸ್ತೆಯನ್ನು ದಾಟುತ್ತಿದ್ದಾಗ ಸದ್ರಿ ಬಸ್ಸಿನ ಚಾಲಕ ನಿರ್ಲಕ್ಷ್ಯತನದಿಂದ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಅಪಾಯಕಾರಿಯಾಗಿ ಒಮ್ಮೇಲೆ ಬಸ್ಸನ್ನು ಮುಂದಕ್ಕೆ ಚಲಾಯಿಸಿಕೊಂಡು ರಸ್ತೆ ದಾಟುತ್ತಿದ್ದ ಪ್ರಾಯಸ್ಥ ಮಹಿಳೆಗೆ  ಢಿಕ್ಕಿಹೊಡೆದಾಗ ಸದ್ರಿಯವರು ರಸ್ತೆಯ ಮೇಲೆ ಬಿದ್ದಿದ್ದು, ಅದೇ ವೇಳೆ ಬಸ್ಸಿನ ಮುಂಬದಿ ಬಲ ಬದಿಯ ಚಕ್ರವು ಆಕೆಯ ತಲೆ ಹರಿದು ಹೋಗಿ ಸ್ಥಳದಲ್ಲೇ ಮೃತಪಟ್ಟಿದ್ದು, ಪಿರ್ಯಾದಿದಾರರು ಮೃತಪಟ್ಟ ಮಹಿಳೆಯ ಬಳಿ ಇದ್ದ ಮೊಬೈಲ್ ಫೋನ್ ನಲ್ಲಿದ್ದ ದೂರವಾಣಿ ಸಂಖ್ಯೆಯೊಂದಕ್ಕೆ ಕರೆ ಮಾಡಿದ್ದು, ಕರೆ ಸ್ವೀಕರಿಸಿದ ಜೊಸ್ಸಿ ಎಂಬುವರು ಕರೆ ಸ್ವೀಕರಿಸಿದ್ದು, ಸದ್ರಿಯವರಿಗೆ  ಅಪಘಾತ ಕುರಿತಾಗಿ ಮಾಹಿತಿ ತಿಳಿಸಿದಾಗ ಅಪಘಾತಕ್ಕಿಡಾದ ಮಹಿಳೆಯ ತನ್ನ ತಾಯಿಯಾಗಿದ್ದು, ಹೆಸರು ಶ್ರೀಮತಿ ಐರಿನ್ ಡಿ ಸೋಜಾ (72 ವರ್ಷ) ವಾಸ :ಸೇವಂತಿಗುಡ್ಡೆ ಎಂಬುದಾಗಿದ್ದು, ಸದ್ರಿಯವರು ಬಿಕರ್ನಕಟ್ಟೆಯಲ್ಲಿರುವ ಬಾಲಯೇಸು ಮಂದಿರಕ್ಕೆ ಪೂಜೆಗೆ ಹೋಗಿದ್ದು, ಅಲ್ಲಿಂದ ವಾಪಾಸು ಸೇವಂತಿಗುಡ್ಡೆಯಲ್ಲಿರುವ ಮನೆಗೆ ಬರುವವರಿದ್ದರು ಎಂದು ತಿಳಿಸಿರುತ್ತಾರೆ ಎಂಬಿತ್ಯಾದಿ.

Bajpe PS

ಪಿರ್ಯಾದಿದಾರರು ಕೆಲಸ ಮಾಡುವ ಗಂಜಿಮಠ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಡಗುಳಿಪಾಡಿ ಗ್ರಾಮದ ಗಣೇಶ ನಗದರಲ್ಲಿರುವ ಅಂಬೇಡ್ಕರ್ ಭವನವನ್ನು ಸಮಾಜ ಕಲ್ಯಾಣ ಇಲಾಖೆಯಿಂದ 2019 ರಲ್ಲಿ ನಿರ್ಮಿಸಿದ್ದು ಸದ್ರಿ ಅಂಬೇಡ್ಕರ್ ಭವನಕ್ಕೆ ದಿನಾಂಕ 30.01.2023 ರಂದು ಪಿರ್ಯಾದಿದಾರರು ಸಮಾಜ ಕಲ್ಯಾಣ ಇಲಾಖಾ ಅಧಿಕಾರಿಗಳೊಂದಿಗೆ ಪರೀಶಿಲನೆಗೆ ಬೇಟಿ ಕೊಟ್ಟ ಸಂದರ್ಭದಲ್ಲಿ ಭವನದ ಕಿಟಕಿ ಬಾಗಿಲು ಹಾಗೂ ಫ್ಯಾನ್ ಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಕಳುವಾದ ವಸ್ತುಗಳ ಮೌಲ್ಯ ಸುಮಾರು 2ಲಕ್ಷ ರೂ ಆಗಬಹುದಾಗಿದೆ ಎಂಬಿತ್ಯಾದಿ

Surathkal PS

ದಿನಾಂಕ 29-03-2023 ರಂದು ಠಾಣಾ ಸಿಬ್ಬಂದಿ ಶ್ರೀ ದಿಲೀಪ್ ಮತ್ತು ಸಿಬ್ಬಂದಿ ಹೆಚ್ ಸಿ ಶ್ರೀ ರಮೇಶ್ ರವರು ನೀಡಿದ ಖಚಿತ ಮಾಹಿತಿಯಂತೆ ಮಂಗಳುರು ತಾಲೂಕು ಕಾಟಿಪಳ್ಳ ಗ್ರಾಮದ 2ನೇ ಬ್ಲಾಕ್ ಸಂಶುದ್ದಿನ್ ವೃತ್ತದ ಬಳಿ ಸಮಯ 11-45 ಗಂಟೆಗೆ ಬಂದು ಸುಮಾರು 100 ಮೀಟರ್ ದೂರ ಬಳಿ ಅಂದರೆ ಕಾಟಿಪಳ್ಳ ಕಡೆಗೆ ಜೀಪನ್ನು ನಿಲ್ಲಿಸಿ ಬಸ್ಸು ತಂಗುದಾಣದ ಬಳಿ ಮೂಲೆಯಲ್ಲಿ ಒಬ್ಬಾತ ವ್ಯಕ್ತಿಯು ಕೈಯಲ್ಲಿ ಒಂದು ಪುಸ್ತಕವನ್ನು ಹಾಗೂ ಕೆಲವು ಚೀಟಿಗಳನ್ನು ಇಟ್ಟುಕೊಂಡು ಪೆನ್ ನಿಂದ ಅಲ್ಲಿಗೆ ಬರುತ್ತಿದ್ದ ಕೂಲಿಯಾಳುಗಳಿಗೆ ಹೇಳಿದ ನಂಬ್ರವನ್ನು ಪೆನ್ ನಿಮದ ಚೀಟಿಯಲ್ಲಿ ಬರೆದು ವೀಟಿಯನ್ನು ಕೂಲಿಯಾಳುಗಳಿಗೆ ಕೊಟ್ಟು ಮತ್ತು ಅದೇ ನಂಬ್ರವನ್ನು ಪುಸ್ತಕದಲ್ಲಿ ಬರೆದು ಕೂಲಿಯಾಳುಗಳಿಂದ ಹಣವನ್ನು ಸಂಗ್ರಹಿಸಿ ಮಟ್ಕಾ ಎಂಬ ನಸೀಬಿನ ಜೂಜಾಟವನ್ನು ಆಡುತ್ತಿರುವುದನ್ನು ಖಚಿತ ಪಡಿಸಿಕೊಂಡು ಸದ್ರಿ ಸ್ಥಳಕ್ಕೆ ತೆರಳಿ ಆತನನ್ನು ಸುತ್ತುವರೆದು ವಿಚಾರಿಸಿಕೊಂಡಾಗ ಇಲ್ಲಿಗೆ ಬರುವ ಕೂಲಿಯಾಳುಗಳಿಗೆ ಮೂರು ಅಂಕೆಯಲ್ಲಿ ಬೇರೆ ಬೇರೆ ನಂಬ್ರಗಳನ್ನು ಬರೆದು ಈ ಪೇಪರ್ ನಲ್ಲಿ ಬರೆದುಕೊಂಡು ಕೂಲಿಯಾಳುಗಳಿಗೆ ಒಂದು ಚೀಟಿಯಲ್ಲಿ ಅದೇ ಅಂಕೆಗಳನ್ನು ಬರೆದುಕೊಂಡು. ನಾಳೆಯ ಕೇರಳ ಲಾಟರಿಯಲ್ಲಿ ಯಾವ ಮೂರು ನಂಬ್ರಗಳು ಬರುತ್ತದೋ ಆ ನಂಬ್ರ ಬಂದವರಿಗೆ ಅವರು ಕಟ್ಟಿದ ದುಡ್ಡಿನಲ್ಲಿ ಮೂರು ಪಟ್ಟು ಹಣವನ್ನು ಕೊಡುತ್ತೇನೆ. ಬಾಕಿ ಒಳಿದ ಚೀಟಿಗಳ ಹಣವು ನನಗೆ ಸಿಗುತ್ತದೆ. ಎಂದು ತಿಳಿದ್ದು ನಂತರ ಆತನಲ್ಲಿ ವಿಚಾರಿಸಿಕೊಂಡಾಗ ಆತನ ಹೆಸರು ವಿಳಾಸ ಕೇಳಲಾಗಿ ನಝೀರ್ ಪ್ರಾಯ 42 ವರ್ಷ ವಾಸ: ನೂರುಲ್ಲಾ ಇಂಗ್ಲೀಷ್ ಶಾಲೆಯ ಬಳಿ, ಕಾಟಿಪಳ್ಳ, ಸುರತ್ಕಲ್ ಎಂದು ತಿಳಿದ್ದು ಆರೋಪಿಯು  ಹಾಜರುಪಡಿಸಿದ ಒಟ್ಟು ಮೊತ್ತ 1220/- ಇದ್ದು ಈ ಹಣವನ್ನು ಮಟ್ಕಾ ಎಂಬ ಓ ಸಿ ಜೂಜಾಟದಿಂದ ಸಂಪಾದಿಸಿದ ಹಣವಾಗಿರುವುದಾಗಿ ಮೊಬೈಲ್ ಪೋನನ್ನು ತೋರಿಸಿ ಸದ್ರಿ ಪೋನಿಂದ ಮಟ್ಕಕ್ಕೆ ಸಂಬಂಧಿಸಿದ ಮಾಹಿತಿಯನ್ನು ಪ್ರೇಮ್ ರಾಜ್ ಗೆ ರವಾನಿಸುತ್ತಿದ್ದೆನೆ ಎಂದು ತಿಳಿಸಿರುತ್ತಾರೆ ಹಾಗೂ ಆರೋಪಿತನ ವಶದಲ್ಲಿದ್ದ ಒಟ್ಟು ಮೊತ್ತ 1220/- ಹಾಗೂ ಖಾಲಿ ಚೀಟಿಗಳು, ನಂಬ್ರ ಬರೆದಿರುವ ಪುಸ್ತಕ, ಪೆನ್, ವಿವೋ ಮೊಬೈಲ್ (ಅಂದಾಜು ಮೌಲ್ಯ 3000/-) ಗಳನ್ನು ಪಂಚರುಗಳ ಸಮಕ್ಷಮ ಸ್ವಾಧೀನಪಡಿಸಿಕೊಂಡು ಹಾಗೂ ಆರೋಪಿ ನಝೀರ್ ನನ್ನು ವಶಪಡೆದುಕೊಂಡಿರುವುದಾಗಿದೆ ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 21-08-2023 12:23 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080