ಅಭಿಪ್ರಾಯ / ಸಲಹೆಗಳು

ದೈನಂದಿನ ಅಪರಾಧ ವರದಿ 

Mangalore East Traffic PS                                  

ಪಿರ್ಯಾದಿದಾರರಾದ ಸುಧಾಕರ ಮಹಾಬಲ ಪೂಜಾರಿ ಪ್ರಾಯ: 52 ವರ್ಷ ಎಂಬವರು ದಿನಾಂಕ 28-03-2024 ರಂದು AJ  ಆಸ್ಪತ್ರೆಯ ಬಳಿಯಿರುವ ATM ಗೆ ಹೋಗಲು KSRTC ಡಿಪ್ಪೋದ ಎದುರಿನಿಂದ NH ರಸ್ತೆಯನ್ನು ದಾಟಿ AJ ಆಸ್ಪತ್ರೆಯ ಎದುರಿನಲ್ಲಿರುವ ಸರ್ವೀಸ್ ಡಾಮಾರು ರಸ್ತೆಯನ್ನು ದಾಟುತ್ತಿರುವಾಗ ಸಂಜೆ ಸಮಯ ಸುಮಾರು 7:20 ಗಂಟೆಗೆ ಕುಂಟಿಕಾನ ಜಂಕ್ಷನ್ ಕಡೆಯಿಂದ KPT ಕಡೆಯ ಸರ್ವೀಸ್ ಡಾಮಾರು ರಸ್ತೆಯಲ್ಲಿ KA-19-ML-7165 ನಂಬ್ರದ ಕಾರನ್ನು ಅದರ ಚಾಲಕನಾದ ಗುರುಪ್ರಸಾದ್ ಎಂಬಾತನು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಪಿರ್ಯಾದಿದಾರರಿಗೆ ಢಿಕ್ಕಿ ಪಡಿಸಿದ,  ಪರಿಣಾಮ ಪಿರ್ಯಾದಿದಾರರು ಡಾಮಾರು ರಸ್ತೆಗೆ ಬಿದ್ದು, ಎಡಕಾಲು ಮತ್ತು ಎಡಕೈಗೆ ಗಾಯವಾಗಿದ್ದು, AJ ಅಸ್ಪತ್ರೆಯಲ್ಲಿ ಹೊರ ರೋಗಿಯಾಗಿ ಚಿಕಿತ್ಸೆಯನ್ನು ಪಡೆದುಕೊಂಡು ಹೋಗಿದ್ದು, ಬಳಿಕ ಪಿರ್ಯಾದಿದಾರರ ಎಡಕಾಲಿನ ಪಾದದ ಹಿಮ್ಮಡಿ ಬಳಿ ಉಂಟಾದ ಗಾಯವು ಉಲ್ಭಣಗೊಂಡಿದ್ದರಿಂದ ಪಿರ್ಯಾದಿದಾರರು ಪುನಃ AJ ಆಸ್ಪತ್ರೆಗೆ ಹೋಗಿದ್ದು, ಪರೀಕ್ಷಿಸಿದ ವೈದ್ಯರು ಕಾಲಿನ ಹಿಮ್ಮಡಿಗೆ ಶಸ್ತ್ರಚಿಕಿತ್ಸೆ ಮಾಡಬೇಕೆಂದು ತಿಳಿಸಿದ್ದು, ಈ ಬಗ್ಗೆ ಅಪಘಾತಪಡಿಸಿದ ಕಾರು ಚಾಲಕನಿಗೆ ಫೋನ್ ಕರೆ ಮಾಡಿ ಆತನಿಗೆ ವಿಚಾರ ತಿಳಿಸಿದಾಗ ಆತನು ಚಿಕಿತ್ಸಾ ವೆಚ್ಚವನ್ನು ನೀಡಲು ನಿರಾಕರಿಸಿದ್ದರಿಂದ ಈ ದಿನ ತಡವಾಗಿ ದೂರು ನೀಡುತ್ತಿರುವುದಾಗಿದೆ ಎಂಬಿತ್ಯಾದಿ

 

Traffic South Police Station                

ಈ ಪ್ರಕರಣದ ಸಾರಾಂಶವೇನೆಂದರೆ  ಈ ದಿನ ದಿನಾಂಕ 29-03-2024ರಂದು ಸಮಯ ಸುಮಾರು ರಾತ್ರಿ 09-45 ಗಂಟೆಗೆ ಫಿರ್ಯಾದಿ Giridar  ಇವರು ಚಾಲಕರಾಗಿ ಹಾಗೂ ಅವರ ಹೆಂಡತಿ ಲಲಿತಾ(46) ಮಗಳು ದೀಕ್ಷಾ(19) ಮಗ ಮೋಕ್ಷಿತ(16) ರವರೊಂದಿಗೆ  KA-19 AC-1791 ಆಟೋ ರೀಕ್ಷಾದಲ್ಲಿ ಕುಳ್ಳಿರಿಸಿಕೊಂಡು ಪಂಪ್ವೆಲ್ ಕಡೆಯಿಂದ ತೊಕ್ಕೊಟ್ಟು ಕುತ್ತಾರು ಮಾರ್ಗವಾಗಿ ದೇರಳಕಟ್ಟೆ ಕಡೆಗೆ ಪ್ರಯಾಣಿಸುತ್ತಿದ್ದು  ಯೆನಪೋಯ ಆಸ್ಪತ್ರೆ ಬಳಿಯ ಶಾಗಿಲ್ ಕಟ್ಟಡದ ಎದುರಿನ ಸಾರ್ವಜನಿಕ ರಸ್ತೆಯ ಒಪನ್ ಡಿವೈಡರ್ ಬಳಿ ತಲುಪುತ್ತಿದ್ದಂತೆ ಫಿರ್ಯಾದಿದಾರರ ಹಿಂಬದಿಯಿಂದ ಅಂದರೆ ಕುತ್ತಾರ ಕಡೆಯಿಂದ ದೇರಳಕಟ್ಟೆ ಕಡೆಗೆ KL54 F-9198ನೇದರ ಸವಾರ ಸಹ ಸವಾರನನ್ನು ಕುಳಿರಿಸಿಕೊಂಡು ದುಡುಕುತನ ಹಾಗೂ  ನಿರ್ಲಕ್ಷತನದಿಂದ ಬೈಕ್ ಚಲಾಯಿಸಿ ಫಿರ್ಯಾದಿದಾರರ ಆಟೋ ರೀಕ್ಷಾಗೆ ಹಿಂಬಾಗದ ಬಲ ಬದಿಗೆ ಡಿಕ್ಕಿ ಪಡಿಸಿದ್ದು ಪರಿಣಾಮ ಫಿರ್ಯಾದಿದಾರರ ಆಟೋ ರೀಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಮಗಳು ದೀಕ್ಷಾಗೆ ಬಲಬಾಗದ ಕುತ್ತಿಗೆಗೆ  ಬಲ ಕೈಗೆ ರೀಕ್ಷಾದೊಳಗಿನ ರಾಡ್ ಗುದ್ದಿದ ಪೆಟ್ಟಾಗಿರುತ್ತದೆ ಮತ್ತು ಬೈಕ್ ಸವಾರ ಮುಹಮ್ಮದ್ ರಾಹೀಲ್ ಗೆ ಬಲ ಕಿವಿ, ಬಲ ಕೆನ್ನೆಗೆ ರಕ್ತ ಗಾಯ, ಮೇಲಿನ ಎರಡು ಹಲ್ಲುಗಳು ಮುರಿದಿದ್ದು ಸಹ ಸವಾರಅಜಲ್ ಅಬ್ದುಲ್ಲಾನಿಗೆ ಮೇಲಿನ ಎರಡು ಹಲ್ಲುಗಳು ಮುರಿದ ಗಂಭೀರ ಸ್ವರೂಪದ ಗಾಯವಾಗಿದ್ದು ಕುತ್ತಿಗೆಗೆ, ಬಲ ಕಣ್ಣಿಗೆ ತರಚಿದ ಗಾಯವಾಗಿರುತ್ತದೆ. ಪಿರ್ಯಾದಿದಾರರು ಹಾಗೂ ಸಾರ್ವಜನಿಕರು ಗಾಯಾಳುಗಳನ್ನು ಪಿರ್ಯಾದಿದಾರರ ಆಟೋ ರೀಕ್ಷಾದಲ್ಲಿ ಚಿಕಿತ್ಸೆ ಬಗ್ಗೆ ಯೆನಾಪೋಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಪರೀಕ್ಷಿಸಿದ ವೈದ್ಯರು ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ ಎಂಬಿತ್ಯಾದಿ

 

 Konaje PS

ಈ ಪ್ರಕರಣ ಸಂಕ್ಷಿಪ್ತ ಸಾರಾಂಶವೇನೆಂದರೆ ಪಿರ್ಯಾದಿ Chethan ಇವರ  ತಂಗಿ ಚೈತ್ರ (30) ರವರು ಸುಮಾರು 10 ವರ್ಷಗಳಿಂದ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದವರು ನಿನ್ನೆ ದಿನ ದಿನಾಂಕ 29-03-2024 ರಂದು ಬೆಳಿಗ್ಗೆ 11.30 ಗಂಟೆಗೆ ತನ್ನ ಗಂಡನ ಮನೆಯಾದ ಅಡ್ಯಾರ್ ಪದವಿನಿಂದ ತನ್ನ ಒಂದು ವರ್ಷದ ಮಗು ದಿಯಾಂಶ್ ನನ್ನು ಕರೆದುಕೊಂಡು ಕಾಣೆಯಾಗಿರುತ್ತಾರೆ. ಈ ವಿಷಯ ತಿಳಿದ ಆಕೆಯ ಗಂಡ ನಾಗರಾಜ್, ಪಿರ್ಯದುದಾರರು ಮತ್ತು ಅವರ ಸ್ನೇಹಿತರು ಎಲ್ಲಾಕಡೆ ಹುಡುಕಾಡುತ್ತಿದ್ದಾಗ, ಹರೇಕಳ ಗ್ರಾಮದ ನೇತ್ರಾವತಿ ನದಿ ಬಳಿ ಓರ್ವ ಮಹಿಳೆ ಮಗುವಿನೊಂದಿಗೆ ಸುತ್ತಾಡುತ್ತಿರುವುದಾಗಿ ವಿಷಯ ತಿಳಿದು ರಾತ್ರಿ ಸುಮಾರು  8.30 ಗಂಟೆಗೆ  ಅಲ್ಲಿಗೆ ಬಂದಾಗ ಚೈತ್ರಾಳ ಮತ್ತು ಮಗುವಿನ ಮೃತ ದೇಹವನ್ನು ಪಾವೂರು ಗ್ರಾಮದ ಅಜಿರುಳ್ಯ ಎಂಬಲ್ಲಿ ಸ್ಥಳೀಯರು ನೇತ್ರಾವತಿ ನದಿ ಕಿನಾರೆಯಲ್ಲಿ ದೋಣಿಯಲ್ಲಿ ಇರಿಸಿರುವುದಾಗಿರುತ್ತದೆ. ಮೃತ ಚೈತ್ರಳು ತನಗಿರುವ ಮಾನಸಿಕ ಖಾಯಿಲೆಯ ಕಾರಣದಿಂದ ತನ್ನ ಮಗುವನ್ನು ನದಿ ನೀರಿಗೆ ಬಿಸಾಡಿ ಅಥವಾ ಮುಳುಗಿಸಿ ಕೊಲೆ ಮಾಡಿ,  ತಾನೂ ಕೂಡಾ ನದಿಗೆ ಹಾರಿ ಆತ್ಮ ಹತ್ಯೆ ಮಾಡಿಕೊಂಡಿರುವುದು ಎಂಬಿತ್ಯಾದಿಯಾಗಿರುತ್ತದೆ

 

Mangalore South PS

ಈ ಪ್ರಕರಣದ ಸಂಕ್ಷೀಪ್ತ ಸಾರಾಂಶವೇನೆಂದರೆ, ಮಾಧಕ ದ್ರವ್ಯ ವ್ಯಸನ ಮತ್ತು ಮಾರಾಟವನ್ನು ತಡೆಗಟ್ಟುವ ಹಾಗೂ ನಿಯಂತ್ರಿಸುವ ನಿಟ್ಟಿನಲ್ಲಿ ಮಂಗಳೂರು ನಗರದ ಕೇಂದ್ರ ಉಪ ವಿಭಾಗದ ವತಿಯಿಂದ ರಚಿತವಾಗಿರುವ Anti drug Team ನ  ಅಧಿಕಾರಿ ಮಂಗಳೂರು ಉತ್ತರ ಪೊಲೀಸ್ ಠಾಣೆಯ ಪಿಎಸ್ಐ ಪ್ರದೀಪ್ ಟಿ.ಆರ್ ರವರು ತಮ್ಮ ಸಿಬ್ಬಂದಿಯವರೊಂದಿಗೆ   ರೌಂಡ್ಸ್ ಕರ್ತವ್ಯದಲ್ಲಿರುವಾಗ ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯ ಸ್ಟೇಟ್ ಬ್ಯಾಂಕ್ ಬಳಿ ಮುಹಮ್ಮದ್ ಮುಬಶಿರ್ ಪ್ರಾಯ 21 ವರ್ಷ ತಂದೆ: ಫಸಲುದ್ದೀನ್ ವಾಸ ವಲವಿಲ ಹೌಸ್, ಮುತುವಲ್ಲುರ್ , ಮಲಪುರಂ, ಕೇರಳ ಎಂಬಾತನು ಅಮಲು ಪದಾರ್ಥ ಸೇವಿಸಿದ ಹಾಗೆ ತೂರಾಡುತ್ತಿದ್ದು ಆತನನ್ನು  ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಗಾಂಜಾ ಸೇವನೆ ಮಾಡಿರುವುದು ದೃಡಪಟ್ಟಿದ್ದರಿಂದ  ಆರೋಪಿತನ ವಿರುದ್ದ ಕಲಂ 27 (B) NDPS ಆಕ್ಟ್ ರಂತೆ ಪ್ರಕರಣ ದಾಖಲಿಸಿಕೊಳ್ಳಲು ವರದಿಯೊಂದಿಗೆ ಹಾಜರುಪಡಿಸಿರುತ್ತಾರೆ ಎಂಬಿತ್ಯಾದಿಯಾಗಿರುತ್ತದೆ.

ಇತ್ತೀಚಿನ ನವೀಕರಣ​ : 31-03-2024 04:41 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080