ಅಭಿಪ್ರಾಯ / ಸಲಹೆಗಳು

Crime report in Mangalore East Traffic PS

ಪಿರ್ಯಾದಿದಾರರಾದ ಸ್ವಾಮಿ ದೊರೈ ಎಂಬುವರ ದೂರದ ಸಂಬಂಧಿ ರಾಜು ರವರು ನಿನ್ನೆ ದಿನ ದಿನಾಂಕ 29-06-2023 ರಂದು ಮದ್ಯಾಹ್ನ ಮಾರ್ಕೇಟಿಗೆ ಹೋಗುವುದಾಗಿ ತಿಳಿಸಿ ಹೋದವರು ತುಂಬಾ ಸಮಯವಾದರೂ ಬಾರದೇ ಇರುವ ಕಾರಣ ಅವರನ್ನು ಹುಡುಕುತ್ತಾ ಹೋದಾಗ ಸಾರ್ವಜನಿಕರೊಬ್ಬರಿಂದ ರಾಜು ರವರಿಗೆ ಕಂಕನಾಡಿ ಗಣೇಶ್ ಮೆಡಿಕಲ್ ಎದುರು ನಡೆದುಕೊಂಡು ಹೋಗುವಾಗ ಸುಮಾರು 2.45 ಗಂಟೆಗೆ ಮೋಟಾರ್ ಸೈಕಲನ್ನು ನೊಂದಣಿ ಸಂಖ್ಯೆ: KA-19-HJ-7224 ನೇದರ ಸವಾರ ರಾಮಚಂದ್ರ ಎಂಬುವರು ಅಜಾಗರೂಕತೆಯಿಂದ ಚಲಾಯಿಸಿ ಢಿಕ್ಕಿ ಪಡಿಸಿದ್ದು ಢಿಕ್ಕಿಯ ಪರಿಣಾಮ ರಾಜು ರವರ ತಲೆಗೆ ಪೆಟ್ಟಾಗಿ ಅರೆ ಪ್ರಜ್ಞಾವಸ್ಥೆಯಲ್ಲಿದ್ದು ಅಪಘಾತಪಡಿಸಿದ ಮೋಟಾರ್ ಸೈಕಲ್ ಸವಾರ ಚಿಕಿತ್ಸೆಯ ಬಗ್ಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಿರುವುದಾಗಿ ತಿಳಿಸಿದಂತೆ ಪಿರ್ಯಾಧಿದಾರರು ಆಸ್ಪತ್ರೆಗಳಿಗೆ ಭೇಟಿ ನೀಡಿ ವಿಚಾರಿಸುತ್ತಾ ವೆನ್ಲಾಕ್ ಆಸ್ಪತ್ರೆಗೆ ಹೋದಾಗ ಗಣೇಶ್ ಮೆಡಿಕಲ್ಸ್ ಎದುರು ಮಧ್ಯಾಹ್ನ 2-45 ಗಂಟೆಗೆ ರಸ್ತೆ ಅಪಘಾತದಲ್ಲಿ ತಲೆಗೆ ಪೆಟ್ಟಾಗಿರುವ ಬಗ್ಗೆ ಅಪರಿಚಿತ ವ್ಯಕ್ತಿಯನ್ನು ದಾಖಲಿಸಿರುವ ವಿಷಯ ತಿಳಿದು ಗಾಯಾಳುವನ್ನು ನೋಡಿದಾಗ ಗಾಯಾಳು ಅವರ ಸಂಬಂಧಿ ರಾಜು ರವರಾಗಿರುತ್ತಾರೆ, ಆದುದರಿಂದ ಈ ರಸ್ತೆ ಅಪಘಾಥದ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿಕೆ.

Mangalore Rural PS                     

ದಿನಾಂಕ: 30-06-2023 ರಂದು ಮಧ್ಯಾಹ್ನ 12.30 ಗಂಟೆಗೆ ಮಂಗಳೂರು ತಾಲೂಕು ಅಡ್ಯಾರ್ ಕಟ್ಟೆ ಎಂಬಲ್ಲಿ  ಸಾರ್ವಜನಿಕ ಸ್ಥಳದಲ್ಲಿ  ಮಾದಕ ವಸ್ತುವಾದ ಗಾಂಜ ಸೇವನೆ ಮಾಡುತ್ತಿದ್ದ  ಮಹಮ್ಮದ್ ಮುನಾಜ್ (20) ವಾಸ-2-18 ಅಡ್ಯಾರ್ ಮಸೀದಿ ಹತ್ತಿರ ಅಡ್ಯಾರ್ ಕಟ್ಟೆ, ಅಡ್ಯಾರ್ ಅಂಚೆ ಮತ್ತು ಗ್ರಾಮ ಎಂಬಾತನನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ಆರೋಪಿತನು ಗಾಂಜಾ ಸೇವನೆ ಮಾಡಿದ ಬಗ್ಗೆ ದೃಢಪಟ್ಟಂತೆ ಆರೋಪಿತನ ವಿರುದ್ದ ಸ್ವ ಪಿರ್ಯಾದಿಯಂತೆ ಪ್ರಕರಣ ದಾಖಲಿಸಿರುವುದಾಗಿದೆ ಎಂಬಿತ್ಯಾದಿ ಸಾರಾಂಶವಾಗಿದೆ.

CEN Crime PS

ದಿನಾಂಕ 26-06-2023ರಂದು ಬೆಳಿಗ್ಗೆ 10:24 ಗಂಟೆಗೆ ಯಾರೋ ಅಪರಿಚಿತ ವ್ಯಕ್ತಿ ವಾಟ್ಸಪ್ ನಂಬ್ರ ಯಿಂದ ಪಿರ್ಯಾದಿದಾರರ ದೂರವಾಣಿ ಸಂಖ್ಯೆನೇದಕ್ಕೆ ವಾಟ್ಸಪ್ ಸಂದೇಶ ಕಳುಹಿಸಿ ಆನ್ ಲೈನ್ ಗೂಗಲ್ ರಿವ್ಯು ಟಾಸ್ಕ್ ಕೆಲಸ  ಮಾಡಿದರೆ ಕಮಿಷನ್ ನೀಡುವುದಾಗಿ ತಿಳಿಸಿ ಆನ್ ಲೈನ್ ಗೂಗಲ್ ರಿವ್ಯು ಟಾಸ್ಕ್ ಟೆಲೆಗ್ರಾಂ ಲಿಂಕ್ https://gjfaxd.top/h5/#/ಕಳುಹಿಸಿರುತ್ತಾರೆ.ನಂತರ ಪಿರ್ಯಾದಿದಾರರು ಸದ್ರಿ ಲಿಂಕ್ ಮುಖಾಂತರ ಟೆಲೆಗ್ರಾಂ  ಗ್ರೂಪ್ ಜಾಯಿನ್  ಆಗಿರುತ್ತಾರೆ.ಸದ್ರಿ ಗ್ರೂಪ್ ನಲ್ಲಿ ಗೂಗಲ್ ರಿವ್ಯು ಟಾಸ್ಕ್ ಗಳನ್ನು ಕಳುಹಿಸಿರುತ್ತಾರೆ. ಪಿರ್ಯಾದಿದಾರರು ಸದ್ರಿ ಹತ್ತು ಟಾಸ್ಕ್ ಗಳನ್ನು ಪೂರ್ಣಗೊಳಿಸಿರುತ್ತಾರೆ, ಅಂತೆಯೇ ಒಂದು ಟಾಸ್ಕ್ ಗೆ 25 ರೂ ನಂತೆ ಒಟ್ಟು 250 ರೂ.ಗಳನ್ನು ಪಿರ್ಯಾದಿದಾರರ ಕೆನಾರ ಬ್ಯಾಂಕ್ ಖಾತೆಗೆ ಪಾವತಿಸಿರುತ್ತಾರೆ. ನಂತರ ಪಿರ್ಯಾದಿದಾರರಿಗೆ ಬೇರೆ ಬೇರೆ ರೀತಿಯ ಗೂಗಲ್ ರಿವ್ಯು ಟಾಸ್ಕ್ ಗಳನ್ನು ಕಳುಹಿಸಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಕಮಿಷನ್  ನೀಡುವುದಾಗಿ ತಿಳಿಸಿರುತ್ತಾರೆ.ಅದರಂತೆ ಪಿರ್ಯಾದಿದಾರರು ನಿಜವೆಂದು ನಂಬಿಕೊಂಡು ದಿನಾಂಕ 29-06-2023 ರಂದು ಪಿರ್ಯಾದಿದಾರರು ತಮ್ಮ ಐಸಿಐಸಿ ಬ್ಯಾಂಕ್ ಖಾತೆ ನೇದರಿಂದ ಮೊದಲಿಗೆ 40,000/- ರೂ ಗಳನ್ನು ಅಪರಿಚಿತ ವ್ಯಕ್ತಿಗಳು ಕಳುಹಿಸಿದ ಐಸಿಐಸಿ ಬ್ಯಾಂಕ್ ಖಾತೆ ಸಂಖ್ಯೆ:019005006942. IFSC Code:ICIC0000190 ಪಾವತಿಸಿರುತ್ತಾರೆ. ದಿನಾಂಕ:29-06-2023 16:11 ಗಂಟೆಯಿಂದ  29-06-2023 17:54 ಗಂಟೆಯ ಮಧ್ಯವದಿಯಲ್ಲಿ ಪಿರ್ಯಾದಿದಾರರು ಹೆಚ್ಚಿನ ಲಾಭ ದೋರೆಯುತ್ತದೆ ಎಂದು ನಂಬಿ ತಮ್ಮ ಐಸಿಐಸಿ ಬ್ಯಾಂಕ್ ನಿಂದ ಹಂತ ಹಂತವಾಗಿ 1,60,000/-ರೂ.ಗಳನ್ನು  ತಮ್ಮ ಬ್ಯಾಂಕ್ ಖಾತೆಯಿಂದ ಆರೋಪಿಗಳು ಕಳುಹಿಸಿಕೊಟ್ಟ ಐಸಿಐಸಿ ಬ್ಯಾಂಕ್ ಖಾತೆ ಸಂಖ್ಯೆ:019005006942. IFSC Code:ICIC0000190 ಖಾತೆಗೆ ಪಾವತಿಸಿರುತ್ತಾರೆ. ದಿನಾಂಕ 29-06-2023 ರಂದು  ಇದೇ  ರೀತಿ ಆರೋಪಿತರು ಪಿರ್ಯಾದಿದಾರರಿಂದ ಇನ್ನೂ ಹೆಚ್ಚಿನ ಹಣ ಪಾವತಿಸುವಂತೆ ಹೇಳಿದಾಗ ಪಿರ್ಯಾದಿದಾರರು ಹಣ ಪಾವತಿಸಲು ನಿರಾಕರಿಸಿರುತ್ತಾರೆ,ಈ ರೀತಿಯಾಗಿ ಯಾರೋ ಅಪರಿಚಿತ ವ್ಯಕ್ತಿಗಳು ಪಿರ್ಯಾದಿದಾರರಿಗೆ ಆನ್ ಲೈನ್ ಗೂಗಲ್ ರಿವ್ಯು ಟಾಸ್ಕ್ ನ ಹೆಸರಿನಲ್ಲಿ ಹಂತ ಹಂತವಾಗಿ ಒಟ್ಟು 1,60,000/- ರೂಗಳನ್ನು ಮೋಸದಿದಂದ ಪಾವತಿಸಿಕೊಂಡು ಆನ್ ಲೈನ್ ವಂಚನೆ ಮಾಡಿರುವುದಾಗಿದೆ ಎಂಬಿತ್ಯಾದಿ.

Surathkal PS

ದಿ. 29-06-2023 ರಂದು ರಾತ್ರಿ 22:10 ಗಂಟೆಗೆ ಪಿರ್ಯಾದಿದಾರರಾದ ಮಹೇಶ್ ಪ್ರಸಾದ್ ಪೊಲೀಸ್ ನಿರೀಕ್ಷಕರಿಗೆ ಠಾಣಾ ಠಾಣಾ ಪಿಸಿ ದಿಲೀಪ್ ರಾಜೇ ಅರಸ್  ಇವರು ಕಾನದ ಗ್ಲೋರಿಯಾ ಕಾಂಪ್ಲೆಕ್ಸ್ ನ ಮನೆಯೊಂದರಲ್ಲಿ ಇಸ್ಪೀಟ್ ಎಲೆಗಳ ಸಹಾಯದಿಂದ ಅದೃಷ್ಟದ ಆಟ ಅಂದರ್ ಬಾಹರ್ ಜೂಜಾಟ  ನಡೆಯುತ್ತಿರುವ ಬಗ್ಗೆ ನೀಡಿದ ಮಾಹಿತಿಯಂತೆ ದಿ. 30-06-2023 ರಂದು 00-05 ಗಂಟೆಗೆ ಕಾನದ ಗ್ಲೋರಿಯಾ ಕಾಂಪ್ಲೆಕ್ಸ್ ನ ಮನೆಯೊಂದರಲ್ಲಿ ನೆಲದ ಮೇಲೆ  ತಮ್ಮ ಸ್ವಂತ ಲಾಭಗೋಸ್ಕರ ಹಣವನ್ನು ಪಣವಾಗಿರಿಸಿ ಇಸ್ಪೀಟ್ ಎಲೆಗಳ ಸಹಾಯದಿಂದ ಅಕ್ರಮವಾಗಿ ಅದೃಷ್ಟದ ಆಟ ಅಂದರ್ ಬಾಹರ್ ಎಂಬ ಹೆಸರಿನ ಜುಗಾರಿ ಆಟವನ್ನು ಆಡುತ್ತಿದ್ದ  1) ರಾಕೇಶ್, 2) ಅಭಿಷೇಕ್, 3) ಮಹಮ್ಮದ್ ಶರೀಫ್, 4) ಕುಶಾಲಪ್ಪ, 5) ಪ್ರವೀಣ @ ಆನಂದ, 6) ಅನೀಷ್ ಹೆಚ್,  ಕರ್ಕೇರಾ 7) ಇಮ್ರಾನ್ ಇವರುಗಳನ್ನು ವಿಚಾರಿಸಲಾಗಿ ಅದೃಷ್ಟದ ಆಟ ಅಂದರ್ ಬಾಹರ್ ಜೂಜಾಟ ಆಡಿದ್ದಾಗಿ ತಪ್ಪೊಪ್ಪಿಕೊಂಡ ಮೇರೆಗೆ ದಸ್ತಗಿರಿಯನ್ನು ಮಾಡಿ ಆರೋಪಿಗಳು ಜುಗಾರಿ ಜೂಜಾಟಕ್ಕೆ ಉಪಯೋಗಿಸಿದ ನೆಲದ ಮೇಲೆ ಇದ್ದ ನಗದು ಹಣ ರೂ 34, 150/-  ರೂ. ( ರೂಪಾಯಿ ಮೂವತ್ತನಾಲ್ಕು ಸಾವಿರ ನೂರ ಐವತ್ತು ಮಾತ್ರ ) ಹಾಗೂ ಇಸ್ಪೀಟ್ ಎಲೆಗಳು-52 ನ್ನು ಸ್ವಾಧೀನಪಡಿಸಲಾಗಿರುತ್ತದೆ. ಮೇಲ್ಕಂಡ ಆರೋಪಿಗಳು ಯಾವುದೇ ಪರವಾನಿಗೆಯನ್ನು ಪಡೆಯದೇ ತಮ್ಮ ಸ್ವಂತ ಲಾಭಗೋಸ್ಕರ ಹಣವನ್ನು ಪಣವಾಗಿರಿಸಿ ಇಸ್ಪೀಟ್ ಎಲೆಗಳ ಸಹಾಯದಿಂದ ಅಕ್ರಮವಾಗಿ ಅಂದರ್ ಬಾಹರ್ ಎಂಬ ಹೆಸರಿನ ಜುಗಾರಿ ಆಟವನ್ನು ಆಡಿದ್ದಾಗಿರುತ್ತದೆ. ಅವರುಗಳ ಮೇಲೆ ಕಾನೂನು ಕ್ರಮ ಜರಗಿಸುವುದು ಎಂಬಿತ್ಯಾದಿಯಾಗಿರುತ್ತದೆ.

Surathkal PS

ಫಿರ್ಯಾದಿದಾರರಾದ ಶಶೀಂದ್ರ ಶೆಟ್ಟಿ, ಪ್ರಾಯ 69 ವರ್ಷ, ತಂದೆ: ದಿ. ದೂಮಣ್ಣ ಶೆಟ್ಟಿ, ವಾಸ: ಪಂಚರತ್ನ, ಆಚಾರ್ಯ ಕಾಲನಿ, ಅಭಯ ಮಾರ್ಬಲ್ಸ್ ಎದರು, ಹೊಸಬೆಟ್ಟು, ಮಂಗಳೂರು ತಾಲೂಕು ರವರು ತನ್ನ ಪತ್ನಿಯೊಂದಿಗೆ ದಿನಾಂಕ: 22-06-2023 ರಂದು ತಮ್ಮ ಸಂಬಂಧಿಕರ ಮದುವೆ ಕಾರ್ಯಕ್ರಮಕ್ಕೆಂದು ತಡಂಬೈಲ್ನಲ್ಲಿರುವ ಸಂಬಂಧಿಕರ ಮನೆಗೆಂದು ಹೋದ ಸಮಯ ಪಿರ್ಯಾದಿದಾರರ ಮಗ ಯತಿರಾಜ್ ಶೆಟ್ಟಿ (36) ಎಂಬಾತನು ಹೊಸಬೆಟ್ಟುವಿನಲ್ಲಿರುವ ಪಿರ್ಯಾದಿದಾರರ ಮನೆಯಲ್ಲಿಯೇ ಇದ್ದು, ದಿನಾಂಕ: 27-06-2023 ರಂದು ಫಿರ್ಯಾದಿದಾರರು ಮದುವೆ ಕಾರ್ಯಕ್ರಮ ಮುಗಿಸಿ ಅವರ ಪತ್ನಿಯೊಂದಿಗೆ ವಾಪಾಸು ಹೊಸಬೆಟ್ಟುವಿನ ಅವರ ಮನೆಗೆ ಬಂದಾಗ ಅವರ ಮಗ ಯತಿರಾಜ್ನು ಮನೆಯಲ್ಲಿ ಇಲ್ಲದೇ ಕಾಣೆಯಾಗಿದ್ದು, ಈ ಬಗ್ಗೆ ಸಂಬAಧಿಕರಲ್ಲಿ, ಆತನ ಸ್ನೇಹಿತರಲ್ಲಿ, ನೆರೆಕರೆಯವರಲ್ಲಿ ವಿಚಾರಿಸಿದಾಗ ಯಾವುದೇ ಮಾಹಿತಿ ದೊರಕದೇ ಇರುವುದರಿಂದ ಠಾಣೆಗೆ ಬಂದು ದೂರು ನೀಡಿರುವುದಾಗಿದೆ, ಎಂಬಿತ್ಯಾದಿ.

                                      

ಇತ್ತೀಚಿನ ನವೀಕರಣ​ : 21-08-2023 02:03 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080