ಅಭಿಪ್ರಾಯ / ಸಲಹೆಗಳು

Crime Report in CEN Crime PS

ಪಿರ್ಯಾದಿದಾರರ ಮೊಬೈಲ್ ನಂಬ್ರದ ವಾಟ್ಸಾಫ್ ಖಾತೆಗೆ ದಿನಾಂಕ 26-08-2023 ರಂದು ಯಾರೋ ಅಪರಿಚಿತರ ವ್ಯಕ್ತಿಯ +62815-2958-1740 ನಂಬ್ರದಿಂದ ಅಕ್ಯುಯೇ್ ಮೀಡಿಯಾ ಕಂಪೆನಿ (Acuate Media Company) ಯ ಪ್ರತಿನಿಧಿಯೆಂದು ಪಾರ್ಟ್ ಟೈಂ ಜಾಬ್ ಬಗ್ಗೆ ಸಂದೇಶ ಕಳುಹಿಸಿ, ಬಳಿಕ ಆನ್ ಲೈನ್ ಮೂಲಕ ಪ್ರತಿದಿನ 2-3 ಸಾವಿರ ಸಂಪಾದನೆ ಮಾಡಬಹುದು ಎಂದು ಫಿರ್ಯಾದುದಾರರನ್ನು ನಂಬಿಸಿ  ಫಿರ್ಯಾದುದಾರರಿಗೆ ಕಾರ್ಯ ಯೋಜನೆ (Task) ಮೂಲಕ ಮೊದಲಿಗೆ ರೂಪಾಯಿ 1,000/- ದಿಂದ 3000/- ತೊಡಗಿಸಿದಾಗ, ಮೊದಲು ಫಿರ್ಯಾದುದಾರರ ಕೆನರಾ ಬ್ಯಾಂಕ್ ಖಾತೆ ನಂಬ್ರ:  ನೇದಕ್ಕೆ ಅಷ್ಟೇ ಹಣವನ್ನು ಹಿಂತಿರುಗಿಸಿದ್ದರು. ಇದನ್ನು ನಂಬಿದ ಫಿರ್ಯಾದುದಾರರು ದಿನಾಂಕ 27-08-2023ರಂದು ಕ್ರಮವಾಗಿ ರೂಪಾಯಿ 3,000/-, 20,000/- ಮತ್ತು 20,000/- ದಂತೆ ಫೆಟಿಯಮ್ ಮೂಲಕ ಕಳುಹಿಸಿದ್ದರು. ನಂತರ ಆರೋಪಿಗಳು ಟಾಸ್ಕ್ ಕಂಪ್ಲೀಟ್ ಮಾಡಲು ಇನ್ನೂ ರೂಪಾಯಿ 65,000/-  ವನ್ನು ಕಳುಹಿಸಬೇಕು ಎಂದು ಒತ್ತಾಯಿಸಿದ ಕಾರಣ ಬಿಫುಲ್ ಎಂಟರ್ ಪ್ರೈಸೆಸ್ ಎಂಬ ಖಾತೆಗೆ ಗೂಗಲ್ ಫೇ ಮೂಲಕ ಕಳುಸಿದ್ದರು.  ನಂತರ ಇದೇ ಟಾಸ್ಕ್ ನ್ನು ಮುಂದುವರಿಸಲು ಆರೋಪಿಯು ಪಂಜಾಬ್ ನ್ಯಾಷನಲ್ ಬ್ಯಾಂಕ್ Account No. 4720002100002750 ನೇದಕ್ಕೆ ರೂಪಾಯಿ 50,000/-,  2918002100186930 ನೇದಕ್ಕೆ ರೂಪಾಯಿ 50,000/- ಮತ್ತು ಐಸಿಐಸಿಐ ಬ್ಯಾಂಕ್ ಖಾತೆ ನಂಬ್ರ: 724705500132 ನೇದಕ್ಕೆ ರೂಪಾಯಿ 50,000/-,  243305003137 ನೇದಕ್ಕೆ ರೂಪಾಯಿ 25,000/- ಮತ್ತು ಧೀರಜ್ ಎಂಟರ್ ಪ್ರೈಸೆನ್ ಎಂಬಾತನ ಪಂಜಾಬ್ ನ್ಯಾಷನಲ್ ಬ್ಯಾಂಕ್ ಖಾತೆ ನಂಬ್ರ: 0030002100098300 ನೇದಕ್ಕೆ ರೂಪಾಯಿ 3,00,000/- ಹಾಗೂ ಗುರುನಾನಕ್ ಎಂಟರ್ ಪ್ರೈಸೆಸ್ ಎಂಬ ಯೆಸ್ ಬ್ಯಾಂಕ್ ಖಾತೆ ನಂಬ್ರ: 042463400002592 ನೇದಕ್ಕೆ ರೂಪಾಯಿ 5,00,000/- ಹೀಗೆ ಒಟ್ಟು ರೂಪಾಯಿ 10,88,000/- ಹಣವನ್ನು ಫಿರ್ಯಾದುದಾರರಿಂದ ದಿನಾಂಕ 26-08-2023 ರಿಂದ 28-08-2023ರ ವರೆಗೆ ಪಿರ್ಯಾದಿದಾರರ  ಬ್ಯಾಂಕ್ ಖಾತೆ ನೇದರಿಂದ ಆರೋಪಿತರ ವಿವಿಧ ಬ್ಯಾಂಕ್ ಖಾತೆಗಳಿಗೆ  ವರ್ಗಾಯಿಸಿಕೊಂಡು ಮೋಸ, ವಂಚನೆ ಮಾಡಿರುವುದಾಗಿದೆ ಎಂಬಿತ್ಯಾದಿ 

Traffic South Police Station          

ದಿನಾಂಕ:29-08-2023 ರಂದು ಪಿರ್ಯಾದಿ ABDUL SALAM ದಾರರ ಬಾಬ್ತು ಸ್ಕೂಟರ್ KA-19-HA-5469 ರಲ್ಲಿ ಪಿರ್ಯಾದಿದಾರರು ರಹೀಮ್ ರವರನ್ನು ಸಹಸವಾರರಾಗಿ ಕುಳ್ಳಿರಿಸಿಕೊಂಡು ಮಂಗಳೂರು ಕಡೆಯಿಂದ ಕಣ್ಣೂರು ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿರುವ ಸಮಯ ಸುಮಾರು ಮಧ್ಯಾಹ್ನ 1.30 ಗಂಟೆಯ ವೇಳೆಗೆ ಪಡೀಲ್ ಕೊಡಕ್ಕಲ್ ಬಳಿ ರಾ.ಹೆದ್ದಾರಿ 73 ರ ಡಾಮರು ರಸ್ತೆ ತಲುಪುತ್ತಿದ್ದಂತೆ ಪಿರ್ಯಾದಿದಾರರ ಹಿಂದಿನಿಂದ ಅಂದರೆ ಮಂಗಳೂರು ಕಡೆಯಿಂದ  ಕಣ್ಣೂರು ಕಡೆಗೆ ಬರುತ್ತಿದ್ದ ಮೋಟಾರ್ ಬೈಕ್ KA-19-EU-1508 ನೇ ಸವಾರ ರಂಜನ್ ಕುಮಾರ್  ಎಂಬಾತನು ಸಹ ಸವಾರಿಯನ್ನು ಕುಳ್ಳಿರಿಸಿಕೊಂಡು ಒಮ್ಮೆಲೆ ದುಡುಕುತನ ಹಾಗೂ ನಿರ್ಲಕ್ಷತನದಿಂದ  ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಸ್ಕೂಟರ್ ನ  ಹಿಂಬದಿಗೆ  ಡಿಕ್ಕಿ ಪಡಿಸಿದ ಪರಿಣಾಮ ಸ್ಕೂಟರ್ ನಲ್ಲಿದ್ದ ಪಿರ್ಯಾದಿದಾರರು ಮತ್ತು ಮೋಟಾರ್ ಬೈಕ್ ನಲ್ಲಿದ್ದ ಸವಾರ ಮತ್ತು ಸಹ ಸವಾರರು ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದಿರುತ್ತಾರೆ. ಈ ಅಪಘಾತದಿಂದ  ಪಿರ್ಯಾದಿದಾರರ ಬಲಕಾಲಿನ ತೊಡೆಗೆ ಗುದ್ದಿದ ಗಾಯವಾಗಿರುತ್ತದೆ ,ಹಾಗೂ ಸಹ ಸವಾರನಾದ ರಹೀಮನಿಗೆ ಸಣ್ಣ-ಪುಟ್ಟ ಗಾಯವಾಗಿರುತ್ತದೆ. ಕೂಡಲೇ  ಸಾರ್ವಜನಿಕರು ಉಪಚರಿಸಿ  ಚಿಕಿತ್ಸೆ ಬಗ್ಗೆ ಆಟೋ ರಿಕ್ಷಾ ಒಂದರಲ್ಲಿ ಮಂಗಳೂರಿನ ಇಂದಿರಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿರುವುದಾಗಿದೆ ಎಂಬಿತ್ಯಾದಿ.

Mangalore East Traffic PS                

 ದಿನಾಂಕ: 29-08-2023 ರಂದು 14-20 ಗಂಟೆಗೆ ಪಿರ್ಯಾದಿ TAJODDIN ದಾರರು ನಂತೂರು ಜಂಕ್ಷನಿನಲ್ಲಿ ಸಂಚಾರ ನಿಯಂತ್ರಣ ಕರ್ತವ್ಯದಲ್ಲಿದ್ದ ವೇಳೆ ಪದವು ಕಡೆಯಿಂದ ಪಂಪುವೆಲ್ ಕಡೆಗೆ ಮತ್ತು ಶಿವಭಾಗ್ ಕಡೆಗೆ ಚಲಿಸಿಕೊಂಡಿದ್ದ ವಾಹನಗಳ ಪೈಕಿ ಒಂದು KA-19-C-9191 ನಂಬ್ರದ ಅರಸು ಎಂಬ ಹೆಸರಿನ ರೂಟ್ ನಂಬ್ರ 15J ನೇ ಖಾಸಗೀ ಸಿಟಿ ಬಸ್ಸನ್ನು ಅದರ ಚಾಲಕ ಶಿವಾನಂದ ಎಂ ಪಾಟೀಲ್ ಎಂಬಾತನು ನಂತೂರು ಜಂಕ್ಷನಿನಲ್ಲಿ ಸರ್ಕಲನ್ನು ಸುತ್ತುವರಿದು ಶಿವಭಾಗ್ ಕಡೆಗೆ ಹೋಗುವ ವೇಳೆ ಬಸ್ಸನ್ನು ಸರ್ಕಲಿನಲ್ಲಿ ನಿಧಾನಗೊಳಿಸದೇ ನಿರ್ಲಕ್ಷ್ಯತನದಿಂದ ಒಮ್ಮೆಲೇ ಬಹಳ ವೇಗವಾಗಿ ಚಲಾಯಿಸಿಕೊಂಡು ಹೋದ ಪರಿಣಾಮ ಬಸ್ಸಿನ ಫೂಟ್ ಬೋರ್ಡ್ ಮೆಟ್ಟಿಲಿನಲ್ಲಿದ್ದ ಅದರ ಕಂಡಕ್ಟರ್ ಈರಯ್ಯ ಎಂಬಾತನು ಹಿಡಿತ ತಪ್ಪಿ ಹೊರಗೆ ಎಸೆಯಲ್ಪಟ್ಟು ಪಂಪುವೆಲ್ ಕಡೆಯಿಂದ ಪದವು ಕಡೆಗೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 66ನೇ ಡಾಮಾರು ರಸ್ತೆಗೆ ಬಿದ್ದು ತಲೆಗೆ ಗಂಭೀರ ಸ್ವರೂಪದ ರಕ್ತಗಾಯವಾದವನನ್ನು ಎ.ಜೆ ಆಸ್ಪತ್ರೆಗೆ ಸಾಗಿಸಲ್ಪಟ್ಟು ಒಳರೋಗಿಯಾಗಿ ಚಿಕಿತ್ಸೆಯಲ್ಲಿರುವುದಾಗಿದೆ. ಈ ಬಗ್ಗೆ ಬಸ್ಸು ಚಾಲಕ ಶಿವಾನಂದ ಎಂ ಪಾಟೀಲ್ ಎಂಬಾತನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿಕೆ ಎಂಬಿತ್ಯಾದಿಯಾಗಿರುತ್ತದೆ.

Mangalore East PS                          

ಪಿರ್ಯಾದಿದಾರರಾದ  ತಮನ್ನ (19) ರವರು ದಿನಾಂಕ: 06-05-2023 ರಂದು ತನ್ನ ಬಾಬ್ತು ಕೆಎ-19-ಹೆಚ್.ಎಲ್-2028 ನೇ ಡಿಯೋ ಸ್ಕೂಟರ್ ಅಳಕೆಯಲ್ಲಿರುವ ಗ್ರೀಲ್ ಹೌಸ್ ಟೈಬಲ್ ಟವರ್ ಹೌಸ್ ಅಪಾರ್ಟ್ ಮೆಂಟ್ ನ ಪಾರ್ಕಿಂಗ್ ಸ್ಥಳದಲ್ಲಿ ಬೆಳಗ್ಗೆ 10:30 ಗಂಟೆಗೆ  ನಿಲ್ಲಿಸಿ ಮದುವೆಗೆ ಚಿಕ್ಕಮಗಳೂರಿಗೆ ಹೋಗಿದ್ದು ದಿನಾಂಕ 07-05-2023 ರಂದು ರಾತ್ರಿ 9 ಗಂಟೆಗೆ ಬಂದು ನೋಡಿದಾಗ ಪಾರ್ಕಿಂಗ್ ಜಾಗದಲ್ಲಿ ಸ್ಕೂಟರ್ ಇರದೇ ಇದ್ದು ಈ ಸ್ಕೂಟರ್ ನ್ನು ದಿನಾಂಕ 06-05-2023 ರಂದು ಬೆಳಗ್ಗೆ 10:30 ಗಂಟೆಯಿಂದ ದಿನಾಂಕ 07-05-2023 ರಂದು ರಾತ್ರಿ 9 ಗಂಟೆಯ ಮಧ್ಯೆ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಇದರ ಅಂದಾಜು ಮೌಲ್ಯ 30,000/- ಆಗಬಹುದು. ಇದರ ಚಾಸಿಸ್ ನಂ: ME4JF983GNW099579 ಇಂಜಿನ್ ನಂ: JF98EW0199031  ಡಾರ್ಕ್ ಗ್ರೇ ಬಣ್ಣ, ಮಾಡೆಲ್ : 2020 ಸ್ಕೂಟರ್ ಆಗಿದ್ದು ಪಿರ್ಯಾದಿದಾರರು ಕಳವಾದ ತನ್ನ ಸ್ಕೂಟರ್ ನ್ನು ನಗರ ಎಲ್ಲಾ ಕಡೆ ಹುಡುಕಾಡಿ, ಸಿಗದ ಕಾರಣ ದೂರು ನೀಡಿರುವುದಾಗಿದೆ ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 30-08-2023 06:59 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080