ಅಭಿಪ್ರಾಯ / ಸಲಹೆಗಳು

Crime Report in  Traffic North Police Station     

ದಿನಾಂಕ 30-09-2023 ರಂದು ಪಿರ್ಯಾದಿದಾರರಾದ ಅನಿರುದ್ದ್ ಹಾಗೂ ಅವರ ಇಬ್ಬರೂ ಗೆಳಯರಾದ ಅರ್ಜುನ್ ಕೆ ಮತ್ತು ಮೊಹಮ್ಮದ್ ಫಿಜಾನ್ ರವರು ಅವರ ಮತ್ತೊಬ್ಬ ಗೆಳಯನಾದ ಕಿರಣ್ ಎಂಬಾತನ ಮನೆಯಾದ ಕೊಟ್ಟಾರ್ ಚೌಕಿಗೆ ಹೋಗಿದ್ದವರು ಅಲ್ಲಿಂದ ಹೆಜಮಾಡಿ ದಾಬಾದಲ್ಲಿ ಊಟ ಮಾಡುವ ಸುಲವಾಗಿ ಪಿರ್ಯಾದಿದಾರರು, ಅರ್ಜುನ್ ಕೆ ಮತ್ತು ಮೊಹಮ್ಮದ್ ಫಿಜಾನ್ ರವರು TN-82-Y-1234 ನಂಬ್ರದ ಫಾರ್ಚುನರ್ ಕಾರಿನಲ್ಲಿ ಕೊಟ್ಟಾರ್ ಚೌಕಿಯಿಂದ ಹೆಜಮಾಡಿ ಕಡೆಗೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಹೋಗುತ್ತಾ, ಕಾರನ್ನು ಅರ್ಜುನ್ ಕೆ ರವರು ಚಲಾಯಿಸುತ್ತಿದ್ದು, ಫಿರ್ಯಾದಿದಾರರು ಕಾರಿನ ಎದುರಿನ ಎಡಬದಿಯ ಸೀಟಿನಲ್ಲಿ ಹಾಗೂ ಮೊಹಮ್ಮದ್ ಫಿಜಾನ್ ರವರು ಕಾರಿನ ಹಿಂದಿನ ಸೀಟಿನಲ್ಲಿ ಎಡಬದಿಯ ಕಿಟಿಕಿಯ ಬಳಿ ಕುಳ್ಳಿತಿದ್ದು ಕಾರನು ಅರ್ಜುನ್ ಕೆ ರವರು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗುತ್ತಾ ಹೊಸಬೆಟ್ಟು ಜಂಕ್ಷನ್ ದಾಟಿದ ಬಳಿಕ ಅರ್ಜುನ್ ಕೆ ರವರು ಕಾರನ್ನು ಅಪಾಯಕಾರಿ ರೀತಿಯಲ್ಲಿ ರಸ್ತೆಯ ತೀರಾ ಎಡಬದಿಗೆ ಚಲಾಯಿಸಿಕೊಂಡು ಹೋಗಿ ಬೆಳಿಗ್ಗೆ ಜಾವ ಸುಮಾರು 03:30 ಗಂಟೆಗೆ ಹೊಸಬೆಟ್ಟು ಪೆಟ್ರೋಲ್ ಪಂಪಿನ ಎದುರಿನಲ್ಲಿ NH ರಸ್ತೆಯ ಎಡ ಬದಿಯಲ್ಲಿ ಪಾರ್ಕ್ ಮಾಡಿ ನಿಲ್ಲಿಸಿದ್ದ KA-19-C-9452 ನಂಬ್ರದ ಈಚರ್ ಟಿಪ್ಪರ್ ವಾಹನದ ಹಿಂಭಾಗಕ್ಕೆ ಡಿಕ್ಕಿ ಪಡಿಸಿ, ಡಿಕ್ಕಿಯ ರಭಸಕ್ಕೆ ಕಾರು ಎಡಬದಿಗೆ ಚಲಿಸಿ ಎಡಬದಿಯಲ್ಲಿರುವ ಮರಕ್ಕೆ ಡಿಕ್ಕಿ ಪಡಿಸಿ ಇನ್ನೊಂದು ಮರಕ್ಕೆ ತಾಗಿ ನಿಂತಿದ್ದು, ಡಿಕ್ಕಿ ಪರಿಣಾಮ ಕಾರಿನ ಚಾಲಕನಾದ ಅರ್ಜುನ್ ಕೆ ರವರು ತಲೆಗೆ ಗುದ್ದಿದ ಗಂಭೀರ ಸ್ವರೂಪದ ಒಳಗಾಯ ಆಗಿದ್ದು, ಬಲಕಿವಿಯಲ್ಲಿ ಮತ್ತು ಮೂಗಿನಲ್ಲಿ ರಕ್ತ ಹೊರ ಬಂದು ಸ್ಥಳದಲ್ಲಿಯೇ ಮೃತಪಟ್ಟಿದ್ದು ಅಲ್ಲದೇ ಮೊಹಮ್ಮದ್ ಫಿಜಾನ್ ನಿಗೆ ತಲೆಗೆ ಗಂಭೀರ ಸ್ವರೂಪದ ಒಳಗಾಯ ಆಗಿ ಪ್ರಜಾಹೀನ ಸ್ಥಿತಿಯಲ್ಲಿದ್ದು, ಪಿರ್ಯಾದದಾರರಿಗೆ ಹಣೆಯ ಬಲ ಬದಿಗೆ ಗುದ್ದಿದ ಸಾಮಾನ್ಯ ಸ್ವರೂಪದ ಗಾಯವಾಗಿರುತ್ತದೆ ಎಂಬಿತ್ಯಾದಿ.

Moodabidre PS..

ಪಿರ್ಯಾದಿದಾರರಾದ ಇಫ್ರಾನ್ ಅಜೀಜ್ ಉಡುಪಿ ಮೊಹಮ್ಮದ್ ಪ್ರಾಯ: 44 ವರ್ಷ ಎಂಬುವರು 2020 ನೇ ಇಸವಿಯಲ್ಲಿ ಮೂಡಬಿದ್ರೆ ಪರಿಸರದಲ್ಲಿ ಕಲ್ಲುಕೋರೆ ನಡೆಸಲು ಅನುಕೂಲವಾಗುವ ಜಾಗವನ್ನು ಹುಡುಕುತ್ತಿದ್ದ ಸಂದರ್ಭದಲ್ಲಿ ಅನಿಲ್ ಪಿಂಟೋ ಎಂಬುವರು ಪಿರ್ಯಾದಿದಾರರನ್ನು ಸಂಪರ್ಕಿಸಿ ತನ್ನ ಬಾಬ್ತು ಮೂಡಬಿದ್ರೆ ತಾಲೂಕು ಪಾಲಡ್ಕ ಗ್ರಾಮದ ಸರ್ವೆ ನಂಬ್ರ ರಲ್ಲಿ 0.24.75 ಎಕ್ರೆ ಸ್ಥಿರಾಸ್ತಿಯನ್ನು ವಾರ್ಷಿಕ ಲೀಸ್ ಆಧಾರದಲ್ಲಿ ಕಲ್ಲುಕೋರೆ ನಡೆಸಲು ಬಾಡಿಗೆಗೆ ನೀಡುವುದಾಗಿ ತಿಳಿಸಿದ್ದು, ಪಿರ್ಯಾದಿದಾರರು ದಿನಾಂಕ 18-08-2020 ರಂದು ಅನಿಲ್ ಪಿಂಟೋ ರವರ ಮನೆಗೆ ಬೇಟಿ ನೀಡಿ ಮನೆಯಲ್ಲಿದ್ದ ಅನಿಲ್ ಪಿಂಟೋ, ಸಿಂತಿಯಾ ಸೆಲ್ಮಾ ಫೆರ್ನಾಂಡಿಸ್, ಉಲ್ಲಾಸ್ ಫೆರ್ನಾಂಡಿಸ್ ರವರಲ್ಲಿ ಸದ್ರಿ ಸ್ಥಿರಾಸ್ತಿಯು ಕಲ್ಲಿನ ಕೋರೆಗೆ ಪ್ರಶಸ್ತವಾದ ಸ್ಥಳವೇ? ಎಂದು ವಿಚಾರಿಸಿದಾಗ ಆರೋಪಿತರೆಲ್ಲರೂ ಸ್ಥಿರಾಸ್ತಿಯು ಕಲ್ಲು ಕೋರೆ ನಡೆಸಲು ಅತ್ಯುತ್ತಮವಾದ ಸ್ಥಳ ಹಾಗೂ ಸುತ್ತಮುತ್ತಲಿನ ನಿವಾಸಿಗಳು, ಸಂಬಂಧಿಕರು ಮತ್ತು ಆತ್ಮೀಯರಿಂದ ಕಲ್ಲುಕೋರೆ ನಡೆಸಲು ಯಾವುದೇ ಆಕ್ಷೇಪಣೆ ಇರುವುದಿಲ್ಲ ನಿಮಗೆ ಕಲ್ಲುಕೋರೆ ನಡೆಸಲು ಬೇಕಾದ ಎಲ್ಲಾ ದಾಖಲೆಗಳನ್ನು ನಾವೇ ತಯಾರು ಮಾಡಿಕೊಡುತ್ತೇವೆ ಎಂದು ನಂಬಿಸಿ ಸದ್ರಿ ಸ್ಥಿರಾಸ್ತಿಯನ್ನು ಪಿರ್ಯಾದಿದಾರರಿಗೆ ತೋರಿಸಿರುತ್ತಾರೆ. ಆರೋಪಿತರೆಲ್ಲರೂ ಸೇರಿ ಅಪರಾಧಿಕ ಷಡ್ಯಂತರ ರಚಿಸಿ ಅಕ್ರಮ ಹಣ ಗಳಿಸುವ ಉದ್ದೇಶದಿಂದ ದಿನಾಂಕ 20-08-2020 ರಂದು ಪಿರ್ಯಾದಿದಾರರಿಂದ ಸದ್ರಿ ಸ್ಥಿರಾಸ್ತಿಯನ್ನು ವಾರ್ಷಿಕ ಲೀಸ್ ಆಧಾರದಲ್ಲಿ ರೂ 2,80,000/- ಹಣವನ್ನು ಪಡೆದು ನಂಬಿಕೆ ದ್ರೋಹ ಹಾಗೂ ಮೋಸ, ವಂಚನೆ ಎಸಗಿರುತ್ತಾರೆ. ಪಿರ್ಯಾದಿದಾರರು ದಿನಾಂಕ 05-06-2023 ರಂದು ಬೆಳಿಗ್ಗೆ 11.00 ಗಂಟೆಗೆ ಆರೋಪಿತರ ಮನೆಗೆ ಹಣವನ್ನು ಮರಳಿಸುವಂತೆ ಕೇಳಿಕೊಂಡಾಗ ಆರೋಪಿತರಾದ ಅನಿಲ್ ಪಿಂಟೋ ಮತ್ತು ಸಿಂತಿಯಾ ಸೆಲ್ಮಾ ಫೆರ್ನಾಂಡಿಸ್ ರವರು ಪಿರ್ಯಾದಿದಾರರಿಗೆ “ಬ್ಯಾವರ್ಸಿ, ಬೋಳಿಮಗ ಈಗ ಕರಾರಿನ ಅವಧಿ ಮುಗಿದಿದೆ ಹಣ ನೀಡುವುದಿಲ್ಲ, ಏನು ಬೇಕಾದರೂ ಮಾಡು ಪುನಃ ಹಣ ಕೇಳಿ ಮನೆ ಬಾಗಿಲಿಗೆ ಬಂದರೆ ನಿನ್ನನ್ನು ಇಲ್ಲಿಯೇ ಕೊಂದು ನಿನಗೊಂದು ಗತಿ ಕಾಣಿಸುತ್ತೇನೆ” ಎಂದು ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿರುತ್ತಾರೆ ಎಂಬಿತ್ಯಾದಿ.

Urva PS

ಪಿರ್ಯಾಧಿ K YOGEESH ACHARYA ದಾರರ ಮಗಳಾದ ಕುII ಅರ್ಚನಾರವರು ದಿನಾಂಕ 29-09-2023 ರಂದು ಬೆಳಿಗ್ಗೆ 09:30 ಗಂಟೆಗೆ ಕಾರ್ ಸ್ಟ್ರೀಟ್ ಗೆ ಕಂಪ್ಯೂಟರ್ ಕಲಿಯಲೆಂದು ತೆರಲಿದ್ದು, ಕಂಪ್ಯೂಟರ್ ಕ್ಲಾಸ್ ಮುಗಿದು ಅರ್ಚಾನಾರವರು ಮನೆಗೆ ವಾಪಸ್ಸು ಬಾರದೇ ಕಾಣೆಯಾಗಿರುವುದಾಗಿದೆ ಎಂಬಿತ್ಯಾದಿ.

(ಕಾಣೆಯಾದವರ ವಿವರ- ಹೆಸರು:ಅರ್ಚನಾ, ಪ್ರಾಯ 19 ವರ್ಷ,ಎತ್ತರ :5.2 ಅಡಿ, ಗೋಧಿ ಮೈ ಬಣ್ಣ, ಧರಿಸಿದ ಉಡುಪು: ಕೆಂಪು ಬಣ್ಣದ ಕುರ್ತ ಮತ್ತು ಬೂಧು ಬಣ್ಣದ ಪ್ಯಾಂಟು).

Mangalore East PS                                   

ಫಿರ್ಯಾದಿ ಅಬ್ದುಲ್ ರಹಿಮಾನ್ ಬಾವಾ ರವರು ತನ್ನ ವ್ಯವಹಾರದ ಸಮಯ ಮಹಾರಾಷ್ಟ್ರದ ಸೋಲಾಪುರದ ಸಿದ್ದೇಶ್ವರ ಟ್ರೆಡರ್ಸ್ ನ ಕುಂಡಲಿಕ್ ಜುಂಬಾರ್ ಖಂಡಾಗಲೆ ಎಂಬ ಮಂಗಳೂರು ಮತ್ತು ಚೆನ್ನೈನಲ್ಲಿ ವ್ಯವಹಾರ ಹೊಂದಿರುವ ನೀರುಳ್ಳಿ ವ್ಯಾಪಾರಿಯನ್ನು ಜನವರಿ 2021 ರಲ್ಲಿ ಪರಿಚಯವಾಗಿ ನಂತರ ಇತರ ಕೃಷಿ ಉತ್ಪನ್ನಗಳ ವ್ಯವಹಾರಗಳ ಮೂಲಕ ಆತ್ಮೀಯರಾಗಿದ್ದು, ನಂತರ ಆರೋಪಿ ಕುಂಡಲಿಕ್ ಜುಂಬಾರ್ ಖಂಡಾಗಲೆ ಫಿರ್ಯಾದುದಾರರಿಗೆ ವಂಚಿಸುವ ಉದ್ದೇಶದಿಂದ ವ್ಯವಹಾರದಲ್ಲಿ ಒಳ್ಳೆಯ ಹೂಡಿಕೆ ಅವಕಾಶ ಇದೆ ಎಂಬುದಾಗಿ ನಂಬಿಸಿ ಮಂಗಳೂರಿಗೆ ಬಂದು ಫಿರ್ಯಾದುದಾರರ ಮೂಲಕ ಮಂಗಳೂರು ಸುತ್ತುಮುತ್ತ ದೇವಸ್ಥಾನಗಳನ್ನು ಸುತ್ತಿ ಫಿರ್ಯಾದುದಾರರನ್ನು ನಂಬಿಸಿ ಆತನ ಮಾಲಿಕತ್ವದ ಸಿದ್ದೇಶ್ವರ ಟ್ರೇಡರ್ಸ್ ಗೆ ಫಿರ್ಯಾದುದಾರರ ಮಂಗಳೂರಿನ ಆಕ್ಸಿಸ್ ಬ್ಯಾಂಕ್ ಖಾತೆ ನಂ.  ದಿಂದ ವಿವಿಧ ದಿನಗಳಲ್ಲಿ ರೂ. 75,00,000/- ವನ್ನು ವರ್ಗಾಯಿಸಿಕೊಂಡು ನಂತರ ವಾಪಾಸು ನೀಡದೆ ವಂಚಿಸಿರುವುದಾಗಿದೆ ಎಂಬಿತ್ಯಾದಿ.

Konaje PS

ಪಿರ್ಯಾದಿ Noushad  M P ದಾರರು 21 ವರ್ಷದ ಹಿಂದೆ  ತಾಸ್ ಲಿಮಾ ಎಂಬಾಕೆಯನ್ನು ಮದುವೆಯಾಗಿ ಆಕೆಯನ್ನು ವಿವಾಹ ವಿಚ್ಚೇದನೆ ಮಾಡಿದ್ದು, ಅವರಿಗೆ 20  ವರ್ಷದ ಫಾತಿಮಾ ನಿಶಾನ ಎಂಬ ಹೆಣ್ಣು ಮಗಳಿದ್ದು ಆಕೆಗೆ 2022 ನೇಯ ಇಸವಿಯಲ್ಲಿ ಮದುವೆ ಮಾಡಿಕೊಡಲಾಗಿದ್ದು, ಫಾತಿಮಾ ನಿಶಾನಳು ಗಂಡನನ್ನು ಬಿಟ್ಟು ತಾಯಿಯ ಮನೆಯಾದ ಉಳ್ಳಾಲದಲ್ಲಿಯೆ ಇರುತ್ತಾಳೆ, ಈ ಮದ್ಯೆ ಪಿರ್ಯಾದಿದಾರರು ಕಾಸರಗೋಡಿನ ಶ್ರೀಮತಿ ನುಸೈಬಾ ಎಂಬಾಕೆಯನ್ನು ಮರು ಮುದುವೆಯಾಗಿರುತ್ತಾರೆ, ಫಾತಿಮಾ ನಿಶಾಳು ಆಕೆಯ ತಾಯಿಯ ಮನೆಗೆ ಹಾಗೂ ಪಿರ್ಯಾದಿದಾರರ ಮನೆಗೆ ಬಂದು ಹೋಗುತ್ತಿದ್ದು, ಆಗಾಗ ಆಕೆಯು ಬೆಂಗಳೂರು ಮಂಗಳೂರು ಕಡೆ ಸುತ್ತಾಡುತ್ತಾ ಇರುತ್ತಾಳೆ,  ಅದರಂತೆ 26-09-2023 ರಂದು ಕೂಡಾ ಸಂಜೆ 5.00 ಗಂಟೆಗೆ ಹೋಗಿ ಪಿರ್ಯಾದಿದಾರರಿಗೆ ಫೋನ್ ಮಾಡಿ ತೊಕ್ಕೊಟ್ಟಿನಲ್ಲಿ ಸಿಗುವುದಾಗಿ ಹೇಳಿ ಪಿರ್ಯಾದಿದಾರಿಗೆ ಸಿಗದೆ ಅಲ್ಲದೆ ಫೋನು ಕೂಡ ಸ್ವಿಚ್ ಆಫ್ ಮಾಡಿ ಕಾಣೆಯಾಗಿರುತ್ತಾಳೆ, ಪಿರ್ಯಾದಿದಾರರು ಎಲ್ಲಾ ಕಡೆ ಹುಡುಕಾಡಿ ಈ ದಿನ ಠಾಣೆಗೆ ಬಂದು ಕಾಣೆಯಾದ ಫಾತಿಮಾ ನಿಶಾಳನ್ನು ಪತ್ತೆಮಾಡಿಕೊಡಬೇಕಾಗಿ ಎಂಬಿತ್ಯಾದಿ

Bajpe PS

ಮಂಗಳೂರು ತಾಲೂಕು ಕೆಂಜಾರು ಗ್ರಾಮದಲ್ಲಿರುವ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಂಗಳೂರು ಪ್ರಾದೇಶಿಕ ವಿಭಾಗವಾದ Wrapafella Outlet ನಲ್ಲಿ ಆಕಾಶ್ ಪಾಂಡೆ ಎಂಬವರು ಅಸಿಸ್ಟಂಟ್ ಮ್ಯಾನೆಜರ್ ಆಗಿ ಕೆಲಸ ಮಾಡಿಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಹಣಕಾಸು ಮತ್ತು ಇತರ ವ್ಯವಹಾರವನ್ನು ನೋಡಿಕೊಳ್ಳುತ್ತಿದ್ದರು. ಆಗಸ್ಟ್ ತಿಂಗಳಿನಲ್ಲಿ ಸಂಗ್ರಹವಾದ ಹಣವನ್ನು ಕಂಪನಿ ಅಕೌಂಟ್ ಗೆ ಜಮಾ ಮಾಡಿದ್ದು, 56,000 ರೂಪಾಯಿ ಹಣವನ್ನು ಬಾಕಿ ಉಳಿಸಿಕೊಂಡಿರುತ್ತಾರೆ. ಸದ್ರಿ ಹಣವನ್ನು ಸ್ವಂತ ಖಾತೆಗೆ ಜಮಾ ಮಾಡಿಕೊಂಡಿರುತ್ತಾರೆ. ಹಾಗೂ ದಿನಾಂಕ 01.09.2023 ರಿಂದ 06.09.2023 ರವರೆಗೆ ಕಂಪನಿ ಕ್ಯಾಶ್ ಸೇಲ್ಸ್ ನಲ್ಲಿ ಸಂಗ್ರಹವಾದ  ಸಂಗ್ರಹಿಸಿದ ಹಣ  62690 ರೂಪಾಯಿ ಹಣವನ್ನು ಕೂಡ ಕಂಪನಿ ಅಂಕೌಂಟ್ ಗೆ ಜಮಾ ಮಾಡದೇ ವಂಚಿಸಿರುತ್ತಾರೆ ಆರೋಪಿ ಆಕಾಶ್ ಪಾಂಡೆ ರವರು Wrapafella Outlet ನೌಕರಾಗಿದ್ದು, ಕಂಪನಿಯಲ್ಲಿ ಸಂಗ್ರಹವಾದ ಹಣವನ್ನು ಕಂಪನಿ ಅಂಕೌಂಟ್ ಗೆ ಜಮಾ ಮಾಡದೇ ಒಟ್ಟು 1,18,690 ರೂಪಾಯಿ ಹಣವನ್ನು ವಂಚನೆ ಮಾಡಿರುತ್ತಾರೆ.

 

ಇತ್ತೀಚಿನ ನವೀಕರಣ​ : 30-09-2023 05:28 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080