ಅಭಿಪ್ರಾಯ / ಸಲಹೆಗಳು

Crime Report in  Traffic North Police Station     

ದಿನಾಂಕ 29-10-2023 ರಂದು ಮಧ್ಯಾಹ್ನ ಪಿರ್ಯಾದಿ Sunil Kulai ದಾರರು ಕುಳಾಯಿಯ ವರ್ಜದುಂಬಿ ಹೋಟೆಲ್ ಗೆ ಚಹಾ ಕುಡಿಯಲು ಹೋಗಿದ್ದು, ಅದೇ ವೇಳೆ ವಿಶ್ವಾಸ ಕಿರಣ ಡಿಸೋಜಾ ರವರು ಅವರ ಬಾಬ್ತು KA-19-HB-4258 ನಂಬ್ರದ ಸ್ಕೂಟರಿನಲ್ಲಿ ರಾ.ಹೆ 66 ರ ಕಾಟ್ಟಿಪಳ್ಳದಿಂದ ಮಂಗಳೂರು ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಾ ಕುಳಾಯಿ ವರ್ಜದುಂಬಿ ಹೋಟೆಲ್ ಬಳಿ ಸಮೀಪಿಸುತ್ತಿದ್ದಂತೆ ಮಧ್ಯಾಹ್ನ ಸಮಯ ಸುಮಾರು 3:15 ಗಂಟೆಗೆ ಸುರತ್ಕಲ್ ಕಡೆಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ T.M.T ಎಂಬ ಹೆಸರಿನ ಬಸ್ಸಿನ ಹಿಂಭಾಗಕ್ಕೆ ಡಿಕ್ಕಿ ಪಡಿಸಿದ ಪರಿಣಾಮ ಸ್ಕೂಟರ್ ಸಮೇತ ಸ್ಕೂಟರ್ ಸವಾರ ರಸ್ತೆಗೆ ಬಿದ್ದು, ಸವಾರ ವಿಶ್ವಾಸ್ ಕಿರಣ ಡಿಸೋಜಾ ರವರಿಗೆ ಮುಖದ ಬಳಿ ರಕ್ತಗಾಯವಾಗಿದ್ದು,ದೇಹದ ಇತರೆ ಕಡೆಗಳಲ್ಲಿ ತರಚಿದ ಗಾಯವಾಗಿದ್ದು, ಚಿಕಿತ್ಸೆಯ ಬಗ್ಗೆ ಎ.ಜೆ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ ಎಂಬಿತ್ಯಾದಿ.                                     

Konaje PS

ದಿನಾಂಕ 30-10-2023 ರಂದು ಪಿರ್ಯಾದಿ Puneet Gaonkar ದಾರರು ಸಿಬ್ಬಂದಿಗಳ ಜೊತೆಯಲ್ಲಿ ಕೆಎ19-ಜಿ0619 ನೇ ಇಲಾಖಾ ವಾಹನದಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ ಬೆಳಿಗ್ಗೆ 09-00 ಗಂಟೆಗೆ ಪಾವೂರು ಗ್ರಾಮದ ಅಕ್ಷರ ನಗರ ತಲುಪುವಾಗ ಎದುರುಗಡೆಯಿಂದ ಬರುತ್ತಿದ್ದ ಟಿಪ್ಪರ್ ಲಾರಿಯ ಚಾಲಕ ಪೊಲೀಸ್ ವಾಹನ ಬರುವುದನ್ನು  ಕಂಡು ಲಾರಿಯನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿ ಓಡಿ ಪರಾರಿಯಾಗಿರುತ್ತಾನೆ. ಸದ್ರಿ ಲಾರಿಯಲ್ಲಿ ಸುಮಾರು 2 ಯುನಿಟಿನಷ್ಟು ಮರಳು ಪತ್ತೆಯಾಗಿದ್ದು, ಸದ್ರಿ ಮರಳನ್ನು ಯಾವುದೇ ಪರವಾನಿಗೆ ಇಲ್ಲದೇ  ಎಲ್ಲಿಂದಲೋ ನದಿ ತೀರದಿಂದ ಕಳವು ಮಾಡಿಕೊಂಡು ಬಂದು ಲಾರಿಯಲ್ಲಿ ತುಂಬಿಸಿ ಆಕ್ರಮವಾಗಿ ಸಾಗಾಟ ಮಾಡುತ್ತಿರುವುದು ಎಂಬಿತ್ಯಾದಿಯಾಗಿರುತ್ತದೆ. ಲಾರಿಯಲ್ಲಿದ್ದ ಮರಳಿನ ಅಂದಾಜು ಮೌಲ್ಯ ರೂ 1,500/- ಆಗಬಹುದು.

Moodabidre PS

ದಿನಾಂಕ 29-10-2023 ರಂದು ಪಿರ್ಯಾದಿದಾರರಾದ ಮ.ಹೆಚ್.ಸಿ ಶ್ರೀಮತಿ ಯಶೋಧ ಎಂ ಹಾಗೂ ಹೆಚ್.ಸಿ  ನಾಗರಾಜ್ ರವರಿಗೆ ಹೊಯ್ಸಳ ವಾಹನದಲ್ಲಿ ಗಸ್ತು ಕರ್ತವ್ಯ ನೇಮಿಸಿದ್ದು, ಈ ವಾಹನದ ಚಾಲಕ ಎ.ಪಿ.ಸಿ ನಿಂಗಪ್ಪ ಲಮಾಣಿ ರವರೊಂದಿಗೆ ಠಾಣಾ ವ್ಯಾಪ್ತಿಯಲ್ಲಿ ಗಸ್ತು ಕರ್ತವ್ಯದಲ್ಲಿರುತ್ತಾ, ಸಂಜೆ ಸುಮಾರು 19.05 ಗಂಟೆಗೆ ಮೂಡಬಿದ್ರೆ ಸಮಾಜ ಮಂದಿರದ ರಿಕ್ಷಾ ಪಾರ್ಕ್ ಬಳಿ ಇಬ್ಬರು ವ್ಯಕ್ತಿಗಳು ಸಾರ್ವಜನಿಕ ಸ್ಥಳದಲ್ಲಿ ಒಬ್ಬರಿಗೊಬ್ಬರು ದೂಡಾಡಿಕೊಂಡು ಬೈದಾಡಿಕೊಂಡು ಗಲಾಟೆ ಮಾಡಿಕೊಂಡಿರುತ್ತಾರೆ ಎಂಬುವುದಾಗಿ ಮಾಹಿತಿ ಬಂದ ಮೇರೆಗೆ ಸ್ಥಳಕ್ಕೆ ಧಾವಿಸಿದಾಗ ಆಟೋ ರಿಕ್ಷಾ ಚಾಲಕರಾದ ಮೊಹಮ್ಮದ್ ಶರೀಫ್  ಮತ್ತು ಗೋಪಾಲ ಸುವರ್ಣ ಎಂಬುವರು ದೂಡಾಡಿಕೊಂಡು ಮೊಹಮ್ಮದ್ ಶರೀಫ್ ಎಂಬಾತನು ರಸ್ತೆಯ ಮೇಲೆ ಬಿದ್ದ ಪರಿಣಾಮ ಆತನ ತಲೆಯ ಭಾಗಕ್ಕೆ ಗಾಯವಾಗಿದ್ದು, ಗೋಪಾಲ ಎಂಬಾತನು ಸ್ಥಳದಿಂದ ಓಡಿ ಹೋಗಿರುತ್ತಾನೆ. ಗಾಯಗೊಂಡ ಮೊಹಮ್ಮದ್ ಶರೀಫ್ ನನ್ನು ಪಿರ್ಯಾದಿದಾರರು ಮೂಡಬಿದ್ರೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಚಿಕಿತ್ಸೆಯ ಬಗ್ಗೆ ದಾಖಲಿಸಿರುತ್ತಾರೆ. ಈ ಮೇಲೆ ತಿಳಿಸಿದ ಇಬ್ಬರು ಆರೋಪಿತರು ಸಾರ್ವಜನಿಕ ಸ್ಥಳದಲ್ಲಿ ದೂಡಾಡಿಕೊಂಡು ಸಾರ್ವಜನಿಕ ಶಾಂತಿಯನ್ನು ಕದಡಿದವರಾಗಿರುತ್ತಾರೆ ಎಂಬಿತ್ಯಾದಿ

Surathkal PS

ದಿನಾಂಕ: 29-10-2023 ರಂದು ಪಿರ್ಯಾದಿದಾರರಾದ ಮಹಮ್ಮದ್ ಮಫೀಜ್ ಎಂಬವರು ಕೃಷ್ಣಾಪುರದಲ್ಲಿರುವ ತಂದೆಯವರ ಬಾಬ್ತು ಮಫೀಜ್ ಜನರಲ್ ಸ್ಟೋರ್ ನಿಂದ ಕೆಎ-19-ಹೆಚ್ ಕೆ 8732ನೇ ಸ್ಕೂಟರ್ ನಲ್ಲಿ ಮನೆಯ ಕಡೆಗೆ ಬರುತ್ತಿರುವಾಗ ಬೆಳಿಗ್ಗೆ ಸುಮಾರು 11-30 ಗಂಟೆ ಸಮಯಕ್ಕೆ ಕಾಟಿಪಳ್ಳ 3ನೇ ಬ್ಲಾಕ್ ನ ಎಸ್ ಎಸ್ ಕಾರ್ ವಾಶ್ ನ ಎದುರು ರಸ್ತೆಯಲ್ಲಿ ತಲುಪುತ್ತಿದ್ದಂತೆ ಪಿರ್ಯಾದಿದಾರರ ಪರಿಚಿತರಾದ ಬಿ ಎಂ ಶರೀಫ್ ರವರು ತನ್ನ ಬಾಬ್ತು ಸ್ಕೂಟರ್ ನಲ್ಲಿ ಬಂದು ಪಿರ್ಯಾದಿದಾರರನ್ನು ಗುರಾಯಿಸಿ, ತನ್ನ ಸ್ಕೂಟರ್ ನ್ನು ಪಿರ್ಯಾದಿದಾರರ ಸ್ಕೂಟರ್ ಗೆ ಅಡ್ಡವಾಗಿ ನಿಲ್ಲಿಸಿ, ಪಿರ್ಯಾದಿದಾರರಿಗೆ ಅವಾಚ್ಯ ಶಬ್ದಗಳಿಂದ ಬೈದು ಅವರು ಧರಿಸಿದ್ದ ಹೆಲ್ಮೆಟ್ ನಿಂದ ಪಿರ್ಯಾದಿದಾರರ ಬೆನ್ನಿಗೆ ಹೊಡೆದಿದ್ದು, ಅಷ್ಟರಲ್ಲಿ ಇನ್ನೊಂದು ಸ್ಕೂಟರ್ ನಲ್ಲಿ ಬಂದ ಶರೀಫ್ ರವರ ಮಗ ಹಕೀಮ್ ನು ಕೂಡ ಪಿರ್ಯಾದಿದಾರರಿಗೆ ಅವಾಚ್ಯ ಶಬ್ದಗಳಿಂದ ಬೈದು ಕುತ್ತಿಗೆಯನ್ನು ಹಿಡಿದು ಕೈಯಿಂದ ಹಲ್ಲೆ ಮಾಡಿರುವುದಲ್ಲದೇ ಜೀವ ಬೆದರಿಕೆ ಹಾಕಿರುವುದಾಗಿದೆ, ಈ ಹಿಂದೆ ಹಕೀಮ್ ಮತ್ತು ಇತರರು ಮಹಮ್ಮದ್ ಮಫೀಜ್ ಹಾಗೂ ಸಂಬಂಧಿಕರ ಮೇಲೆ ಹಲ್ಲೆ ನಡೆಸಿದ ಬಗ್ಗೆ ಪ್ರಕರಣ ದಾಖಲಾಗಿದ್ದು ಇದೇ ದ್ವೇಷದಿಂದ ಬಿ ಎಂ ಶರೀಫ್ ಹಾಗೂ ಹಕೀಮ್ ರವರು ಪಿರ್ಯಾದಿದಾರರ ಮೇಲೆ ಹಲ್ಲೆ ನಡೆಸಿರುವುದಾಗಿದೆ ಎಂಬಿತ್ಯಾದಿ.

Mangalore East Traffic PS        

ದಿನಾಂಕ 28-10-2023 ರಂದು ಪಿರ್ಯಾದಿದಾರರಾದ ಪ್ರವೀಣ ರವರು ತನ್ನ ಹೆಂಡತಿ ಸೌಮ್ಯರವರ ಜೊತೆಯಲ್ಲಿ ಅತ್ತೆಗೆ ಹಳೆ ಕಂಕನಾಡಿ ರಸ್ತೆಯಲ್ಲಿರುವ ಯೆನಪೋಯ ಆಸ್ಪತ್ರೆಗೆ ಚಿಕಿತ್ಸೆ ಕೊಡಿಸಲೆಂದು ಕರೆದುಕೊಂಡು ಬಂದಿದ್ದು, ಅತ್ತೆಗೆ ಚಿಕಿತ್ಸೆ ಕೊಡಿಸಿದ ಬಳಿಕ ಅವರನ್ನು ಮನೆಗೆ ಕಳುಹಿಸಿಕೊಟ್ಟು ಪಿರ್ಯಾದಿದಾರರಿಗೆ ವೆಲೆನ್ಸಿಯಾದಲ್ಲಿ ಬೇರೆ ಕೆಲಸವಿದ್ದುದರಿಂದ ತನ್ನ ಹೆಂಡತಿ ಸೌಮ್ಯರವರಿಗೆ ಯೆನಪೋಯ ಆಸ್ಪತ್ರೆಯಲ್ಲಿಯೇ ಕುಳಿತುಕೊಳ್ಳುವಂತೆ ತಿಳಿಸಿ ಹೋಗಿದ್ದು, ಪಿರ್ಯಾದಿದಾರರು ಕೆಲಸ ಮುಗಿಸಿ ವಾಪಾಸ್ ಆಸ್ಪತ್ರೆಯ ಬಳಿ ಬಂದು ತನ್ನ ಹೆಂಡತಿ ಸೌಮ್ಯಳಿಗೆ ಹೊರಗೆ ಬರುವಂತೆ ತಿಳಿಸಿದಾಗ ಸೌಮ್ಯರವರು ಯೆನಪೋಯ ಆಸ್ಪತ್ರೆ ಕಡೆಯಿಂದ  ಪಿರ್ಯಾದಿದಾರರ ಕಡೆಗೆ ರಸ್ತೆಯ್ನು ದಾಟಿಕೊಂಡು ಬರುತ್ತಿದ್ದಾಗ  ಸಂಜೆ ಸಮಯ ಸುಮಾರು 4.00 ಗಂಟೆಗೆ  ಕಂಕನಾಡಿ ಕಡೆಯಿಂದ ಪಂಪ್ ವೆಲ್ ಕಡೆಗೆ ಹಾದು ಹೋಗಿರುವ ರಸ್ತೆಯಲ್ಲಿ KA-47-M-1830 ನೊಂದಣಿ ನಂಬ್ರದ ಕಾರನ್ನು ಅದರ ಚಾಲಕ ನಿರ್ಲಕ್ಷ್ಯತನದಿಂದ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಪಿರ್ಯಾದಿದಾರರ ಹೆಂಡತಿ ಸೌಮ್ಯರವರಿಗೆ ಢಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಬಿದ್ದು, ಎಡಕಾಲು ಮೊಣಗಂಟಿಗೆ ಬಲವಾದ ಗುದ್ದಿದ ಗಾಯವಾಗಿದ್ದು, ಪಿರ್ಯಾದಿದಾರರು ಆಟೋರಿಕ್ಷಾ ಒಂದರಲ್ಲಿ ತೇಜಸ್ವಿನಿ ಅಸ್ಪತ್ರೆಗೆ ಕರೆದುಕೊಂಡು ಹೋದಾಗ ಪರೀಕ್ಷಿಸಿದ ಅಲ್ಲಿನ ವೈದ್ಯರು ಸೌಮ್ಯರವರ ಎಡಕಾಲಿನ ಮೊಣಕಾಲಿನಲ್ಲಿ ಮೂಳೆ ಮುರಿತದ ಗಾಯವಾಗಿರುವುದಾಗಿ ತಿಳಿಸಿರುತ್ತಾರೆ. ಪಿರ್ಯಾದಿದಾರರು ಗಾಯಾಳುವನ್ನು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ವೈದ್ಯರು ಒಳರೋಗಿಯಾಗಿ ದಾಖಲಿಸಿಕೊಂಡು ಚಿಕಿತ್ಸೆ ನೀಡುತ್ತಿರುವುದಾಗಿದೆ ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 30-10-2023 04:10 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080