ಅಭಿಪ್ರಾಯ / ಸಲಹೆಗಳು

Crime Report in : Mangalore West Traffic PS             

ಪಿರ್ಯಾದಿ SHIVAPRASAD ದಾರರು ದಿನಾಂಕ;29-11-2023ರಂದು ಕೆಲಸದಲ್ಲಿರುವ ಸಮಯ   ಪಿರ್ಯಾದಿದಾರರ  ಅತ್ತೆಯವರಾದ ವನಿತರವರು ದೂರವಾಣಿ ಕರೆ ಮಾಡಿ, ಪಿರ್ಯಾದಿದಾರರ ಮಾವನವರಾದ ಕುಮಾರೇಶ್ ರವರಿಗೆ ಲೇಡಿಹಿಲ್ ಜಂಕ್ಷನ್ ಸಮೀಪ ನಿಂತಿರುವಾಗ ಸಮಯ ಸುಮಾರು ಬೆಳಿಗ್ಗೆ 8.45 ಗಂಟೆಗೆ KA-52-A-0302 ನೇ ಬಸ್ಸನ್ನು ಅದರ ಚಾಲಕ ಜನಾರ್ಧನರವರು ಸಾರ್ವಜನಿಕ ರಸ್ತೆಯಲ್ಲಿ ನಿರ್ಲಕ್ಯತನ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ತಾಗಿಸಿದ ಪರಿಣಾಮ ಪಿರ್ಯಾದಿದಾರರ ಮಾವನವರು ರಸ್ತೆಗೆ ಬಿದ್ದು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದವರನ್ನು ಆಸ್ಪತ್ರೆಗೆ ದಾಖಲಿಸಿದ ಬಗ್ಗೆ ಮಾಹಿತಿ ತಿಳಿಸಿದ್ದು, ಪಿರ್ಯಾದಿದಾರರು ಯೇನಪೋಯಾ ದೇರಳಕಟ್ಟೆ ಆಸ್ಪತ್ರೆಗೆ ಹೋಗಿ ನೋಡಲಾಗಿ ಪಿರ್ಯಾದಿದಾರರ ಮಾವನವರು ಮಾತನಾಡುವ ಸ್ಥಿತಿಯಲ್ಲಿ ಇಲ್ಲದೇ ಇದ್ದು, ಚಿಕಿತ್ಸೆಯ ಬಗ್ಗೆ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ.

Mangalore West Traffic PS               

ಪಿರ್ಯಾದಿ SHARADA NAIK ದಾರರು  ದಿನಾಂಕ 16-11-2023 ರಂದು ಕೆಲಸದ ನಿಮಿತ್ತ ಮಂಗಳೂರು ತಾಲೂಕು ಕಛೇರಿಗೆ ಬಂದವರು ಕೆಲಸ ಮುಗಿಸಿ ರಾಮ್ ಮೋಹನ್ ರೈ ರವರ ಬಾಬ್ತು  KA-19-EK-7901 ನೇ ಸ್ಕೂಟರ್ ನ್ನು ಚಲಾಯಿಸಿಕೊಂಡು ಮನೆ ಕಡೆಗೆ ತೆರಳುವರೇ ಸಮಯ ಸುಮಾರು ಸಂಜೆ 4.10 ಗಂಟೆಗೆ ಕ್ಲಾಕ್ ಟವರ್ ವೃತ್ತ ತಲುಪುತ್ತಿದ್ದಂತೇ  ಲೇಡಿಗೋಷನ್ ಕಡೆಯಿಂದ KA-19-MG-5313 ನೇ ನಂಬ್ರದ ಕಾರೊಂದನ್ನು ಅದರ ಚಾಲಕ  ಅಬೂಬಕ್ಕರ್ ಸಿದ್ದಿಕ್ ರವರು  ಸಾರ್ವಜನಿಕ ರಸ್ತೆಯಲ್ಲಿ ನಿರ್ಲಕ್ಷ್ಯತನ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಚಲಾಯಿಸುತ್ತಿದ್ದ ಸ್ಕೂಟರ್  ಹಿಂಬದಿಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದಿದ್ದು, ಇದರಿಂದ ಪಿರ್ಯಾದಿದಾರರ ಎಡಗೈ, ಭುಜ ಕಾಲು ಕಣ್ಣಿನ ಮೇಲ್ಭಾಗಳಿಗೆ ರಕ್ತಗಾಯವಾಗಿದ್ದವರನ್ನು ಕಾರು ಚಾಲಕ ಮತ್ತು ಸಾರ್ವಜನಿಕರು ಉಪಚರಿಸಿದ್ದು ನಗರದ ತಾರಾ ಕ್ಲಿನಿಕ್ ಗೆ ದಾಖಲಿಸಿರುತ್ತಾರೆ. ಸದ್ರಿ ಅಪಘಾತದಿಂದ ಪಿರ್ಯಾದಿದಾರರ ಸ್ಕೂಟರ್ ಜಖಂಗೊಂಡಿರುತ್ತದೆ.

Mangalore South PS

ಪ್ರಕರಣದ ಪಿರ್ಯಾದುದಾರರಾದ ಶ್ರೀಮತಿ. ರುಕಿಯಾಬಿ ಮೂಡಂಬೈಲ್  (Ruchiyabi Moodambail) ಪ್ರಾಯ 57 ವರ್ಷ, ಗಂಡ: ಮೊಹಮ್ಮದ್ ಆಲಿ ಮಾತ್ರಾ ವಾಸ: ಚೆರ್ಪಲ್ ಸೇರಿ,  ಪಾಲಕ್ಕಾಡ್, ಜಿಲ್ಲೆ, ಕೇರಳ ರಾಜ್ಯ  ಎಂಬವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ಪಿರ್ಯಾದಿ ಏನೆಂದರೆ, 2015 ರಲ್ಲಿ ಆಶ್ರಫ್ ಹಸನ್, ಮತ್ತು ಮೊಹಮ್ಮದ್ ಸಲಾಂ ಎಂಬವರು ಪಿರ್ಯಾದುದಾರರನ್ನು ಮತ್ತು ಪಿರ್ಯಾದುದಾರರ ಪತಿಯನ್ನು ಸಂಪರ್ಕಿಸಿ, ತಾವಿಬ್ಬರು ಪ್ಲಾಟ್, ಮನೆ, ಕಟ್ಟಡ ಇತ್ಯಾದಿ ನಿರ್ಮಾಣ ಮಾಡುವ AIMAN INFRAPROJECTS (M) Pvt. Ltd Mangaluru ಎಂಬ ಸಂಸ್ಥೆಯ ಪಾರ್ಟನರ್ ಆಗಿರುತ್ತೇವೆ ಎಂದು ಪರಿಚಯಿಸಿಕೊಂಡಿರುತ್ತಾರೆ.  

     2015 ರಲ್ಲಿ ಆಶ್ರಫ್ ಹಸನ್, ಮತ್ತು ಮೊಹಮ್ಮದ್ ಸಲಾಂ ಪಿರ್ಯಾದುದಾರರನ್ನು ನಂಬಿಸಿ AIMAN INFRAPROJECTS (M) Pvt. Ltd Mangaluru ಸಂಸ್ಥೆಯು ಮಂಗಳೂರು ನಗರದ, ತೋಟಾ ಗ್ರಾಮದ ಜೆಪ್ಪು, ಶಾದಿ ಮಹಲ್ ಬಳಿ ಸರ್ವೆ ನಂಬ್ರ /IP ರಲ್ಲಿ AICON DREAM ZONE ಎಂಬ ಭವ್ಯವಾದ ಅಪಾರ್ಟ್ ಮೆಂಟ್ ನ್ನು ನಿರ್ಮಾಣ ಮಾಡುತ್ತಿದ್ದು, ಸದ್ರಿ ಅಪಾರ್ಟ್ ಮೆಂಟ್ ನ 1 ನೇ ಮಹಡಿಯಲ್ಲಿರುವ ಪ್ಲಾಟ್ ನಂಬ್ರ 104 ನ್ನು 31,75,500 ರೂಪಾಯಿಗೆ ಮಾರಾಟ ಮಾಡುತ್ತಿದ್ದು, ಸದ್ರಿ ಕಟ್ಟಡದ ಕಾಮಗಾರಿಯು 2017 ರಲ್ಲಿ ಸಂಪೂರ್ಣಗಳಿಸಲಾಗುವುದು ಎಂಬುದಾಗಿ ತಿಳಿಸಿರುತ್ತಾರೆ. ಆರೋಪಿತ ಮಾತನ್ನು ನಂಬಿ ಪಿರ್ಯಾದುದಾರರು ಸದ್ರಿ ಪ್ಲಾಟ್ ನ್ನು ಖರೀಸುವುದಾಗಿ ಆರೋಪಿತರಲ್ಲಿ ತಿಳಿಸಿದಂತೆ, ಆರೋಪಿತರಾದ ಆಶ್ರಫ್ ಹಸನ್, ಮತ್ತು ಮೊಹಮ್ಮದ್ ಸಲಾಂ ರವರು ಪಿರ್ಯಾದುದಾರರಿಗೆ AICON DREAM ZONE ಅಪಾರ್ಟ್ ಮೆಂಟ್ ನ ಪ್ರೊಜೆಕ್ಟ್ ಬಗ್ಗೆ ಮತ್ತು ಕಟ್ಟಡ ನಿರ್ಮಾಣದ ಸ್ಥಳವೆಂದು ಯಾವುದೋ ಸ್ಥಳವನ್ನು ತೋರಿಸಿದ್ದು, ಆರೋಪಿತರ ಮಾತನ್ನು ನಂಬಿ ಪಿರ್ಯಾದುದಾರರು  ಆರೋಪಿತರು ನಿರ್ಮಿಸುತ್ತಿರುವ  AIMAN AICON DREAM ZONE ಅಪಾರ್ಟ್ ಮೆಂಟ್ 1 ನೇ  ಮಹಡಿಯ ಪ್ಲಾಟ್ ನಂಬ್ರ 104 ನ್ನು ಖರೀದಿಸುವುದೆಮದು ಆರೋಪಿತರಿಗೆ 20 ಲಕ್ಷ ಹಣವನ್ನು ಚಕ್ ಮೂಲಕ ಮತ್ತು 10 ಲಕ್ಷ ಹಣವನ್ನು ನಗದಾಗಿ ಹೀಗೆ ಒಟ್ಟು 30 ಲಕ್ಷ ಹಣವನ್ನು ದಿನಾಂಕ 15/07/2015 ರಿಂದ  21/11/2016 ರ ಮಧ್ಯಾವದಿಯಲ್ಲಿ ನೀಡಿ, ಅಗ್ರಿಮೆಂಟ್ ಅಫ್ ಸೇಲ್ ನ್ನು ಮಾಡಿಕೊಂಡಿರುತ್ತಾರೆ. ಆರೋಪಿತರು ತಿಳಿಸಿದಂತೆ 2017 ರಲ್ಲಿ AICON DREAM ZONE ಅಪಾರ್ಟ್ ಮೆಂಟ್ ಪೂರ್ಣಗೊಳಿಸದೇ ಇದ್ದುದರಿಂದ ಪಿರ್ಯಾದುದಾರರು ಆರೋಪಿತರನ್ನು ಸಂಪರ್ಕಿಸಿದಾಗ ಯಾವುದೋ ಸುಳ್ಳು ನೆಪ ಹೇಳಿ, ಪಿರ್ಯಾದುದಾರರಿಗೆ ನೀಡಬೇಕಾದ ಹಣವನ್ನು ವಾಪಾಸು ಮಾಡುವುದಾಗಿ ತಿಳಿಸಿ  ದಿನಾಂಕ 01/06/2018, ದಿನಾಂಕ 01/08/2018 ಮತ್ತು ದಿನಾಂಕ 01/10/2018 ರಂದು ಚಕ್ ನಂಬ್ರ 535900, 535899, 535898 ರಂತೆ 10 ಲಕ್ಷದ ತಲಾ ಮೂರು ಚಕ್ ಗಳನ್ನು ಪಿರ್ಯಾದುದಾರರಿಗೆ ನೀಡಿದ್ದು, ಪಿರ್ಯಾದುದಾರರು ಸದ್ರಿ ಚಕ್ ಗಳನ್ನು ಕ್ಲೀಯರೆನ್ಸ್ ಗಾಗಿ ಬ್ಯಾಂಕ್ ಜಮೆ ಮಾಡಿದಾಗ ಸದ್ರಿ ಚಕ್ ಗಳು Funds Insufficient” ಎಂದು ಅಮಾನ್ಯಗೊಂಡಿರುತ್ತವೆ. ಪಿರ್ಯಾದುದಾರರು ಹಣವನ್ನು ವಾಪಾಸು ನೀಡುವಂತೆ ಆರೋಪಿತರಲ್ಲಿ ಕೇಳಿದಾಗ ಆರೋಪಿತರು ಪಿರ್ಯಾದುದಾರರಿಗೆ ಬೆದರಿಕೆಯನ್ನು ಹಾಕಿದ್ದು, ಹೀಗೆ ಆರೋಪಿತರು ಪಿರ್ಯಾದುದಾರರಿಗೆ ಹೊಸದಾಗಿ ನಿರ್ಮಾಣಗೊಳ್ಳುತ್ತಿರುವ ಅಪಾರ್ಟ್ ಮೆಂಟ್ ನಲ್ಲಿ ಪ್ಲಾಟ್ ನೀಡುವುದಾಗಿ ನಂಬಿಸಿ, ಪಿರ್ಯಾದುದಾರರಿಂದ ಒಟ್ಟು 30 ಲಕ್ಷ ಹಣವನ್ನು ಪಡೆದುಕೊಂಡು, ಅಪಾರ್ಟ್ ಮೆಂಟ್ ನಿರ್ಮಿಸದೇ, ಪ್ಲಾಟ್ ನ್ನೂ ನೀಡದೇ ಹಣವನ್ನು ವಾಪಾಸು ನೀಡದೇ ನಂಬಿಸಿ ಮೋಸ ಮಾಡಿರುತ್ತಾರೆ ಎಂಬಿತ್ಯಾದಿಯಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 30-11-2023 02:06 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080