ಅಭಿಪ್ರಾಯ / ಸಲಹೆಗಳು

Crime Reported in : Mangalore Rural PS                                  

ಪಿರ್ಯಾದಿ Shri Sandeep ಉಸ್ತುವಾರಿ ನೋಡಿಕೊಳ್ಳುತ್ತಿರುವ ಜಿ.ಟಿ.ಎಲ್ ಇನ್ಪ್ರಾಸ್ಟ್ರಕ್ಚರ್ ಕಂಪನಿ ಲಿಮಿಟೆಡ್ ನವ ಮುಂಬೈ ಕೈಗಾರಿಕಾ ವಲಯದಲ್ಲಿ ಕಾರ್ಯಾಚರಿಸುತ್ತಿದ್ದು, ಅದರ ಶಾಖೆಯು ಬೆಂಗಳೂರಿನಲ್ಲಿದ್ದು, ಸದ್ರಿ ಕಂಪನಿಯವರು ಮೊಬೈಲ್ ಟವರ್ ನಿರ್ಮಾಣ ಮಾಡುವ ಸಲುವಾಗಿ ಮಂಗಳೂರು ತಾಲೂಕು ಅಡ್ಯಾರ್ ಗ್ರಾಮದ ಆರ್ ಕೆ ಕಂಪೌಂಡಿನಲ್ಲಿರುವ ಆನಂದ ಟ್ರೇಡರ್ಸ್ ಎಂಬಲ್ಲಿ ಮೊಬೈಲ್ ಟವರ್ ನಿರ್ಮಾಣಕ್ಕೆ ಬೇಕಾದ ಸುಮಾರು ರೂ:30,16,415-00 ಮೌಲ್ಯದ ಸೊತ್ತುಗಳನ್ನು ತಂದು ಹಾಕಿದ್ದು, ಕೋವಿಡ್-2019 ಸಾಂಕ್ರಾಮಿಕ ರೋಗ ಉಲ್ಬಣಾವಸ್ಥೆಯಲ್ಲಿದ್ದ ಸಮಯ ಸರಕಾರ ಲಾಕ್ ಡೌನ್ ಹೇರಿದ್ದರಿಂದ ಪಿರ್ಯಾದಿದಾರರಿಗೆ ಮೊಬೈಲ್ ಟವರ್ ನಿರ್ಮಾಣ ಮಾಡಬೇಕಾದ ಸ್ಥಳಕ್ಕೆ ನಿರಂತರವಾಗಿ ಭೇಟಿ ನೀಡಲು ಅನಾನುಕೂಲವಾಗಿದ್ದು, ಕಳೆದ 2022 ನೇ ಸಾಲಿನ ಜನವರಿ ಮತ್ತು ಏಪ್ರಿಲ್ ತಿಂಗಳಿನಲ್ಲಿ ಮೊಬೈಲ್ ಟವರ್ ನಿರ್ಮಾಣ ಮಾಡಬೇಕಾದ ಸ್ಥಳಕ್ಕೆ ಪರಿವೀಕ್ಷಣೆಯ ಬಗ್ಗೆ ಭೇಟಿ ನೀಡಿದಾಗ ಮೊಬೈಲ್ ಟವರ್ ನಿರ್ಮಾಣ ಮಾಡಲು ತಂದು ಹಾಕಿದ್ದ ಸೊತ್ತುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುವುದು ಎಂಬಿತ್ಯಾದಿ.

 Crime Reported in :  Mangalore East Traffic PS       

ಪಿರ್ಯಾದಿದಾರರಾದ ಶ್ರೀಮತಿ ರಜನಿ (30 ವರ್ಷ) ರವರು ದಿನಾಂಕ: 30/01/2023 ರಂದು ಸಂಜೆ ಪಳ್ನೀರ್ ನಲ್ಲಿರುವ ಅಂಚಲ್ ಬಟ್ಟೆ ಅಂಗಡಿಯಿಂದ ಕೆಲಸ ಮುಗಿಸಿ ಮನೆಗೆ ಹೊರಟು ಪಳ್ನೀರ್ MFC ಚಾ ಅಂಗಡಿಯ ಎದುರು ಕಂಕನಾಡಿ ಕಡೆಯಿಂದ ಹಂಪನಕಟ್ಟೆ ಕಡೆಗೆ ಹಾದು ಹೋಗಿರುವ ಮದರ್ ತೆರೆಸಾ ರಸ್ತೆಯನ್ನು ದಾಟಿ ರಸ್ತೆಯ ಇನ್ನೊಂದು ಬದಿಗೆ ನಡೆದುಕೊಂಡು ಹೋಗುತ್ತಿರುವಾಗ ಸಮಯ ಸುಮಾರು 18:30 ಗಂಟೆಗೆ ಕಂಕನಾಡಿ ಕಡೆಯಿಂದ ಹಂಪನಕಟ್ಟೆ ಕಡೆಗೆ ಹಾದುಹೋಗಿರುವ ಮದರ್ ತೆರೆಸಾ  ರಸ್ತೆಯಲ್ಲಿ KA-19-EH-6136 ನೇ ನಂಬ್ರದ ಸ್ಕೂಟರನ್ನು ಅದರ ಸವಾರ ಸಂತೋಷ್ ಕುಮಾರ್ ಎಂಬಾತನು ಅತೀ ವೇಗ ಹಾಗೂ ನಿರ್ಲಕ್ಷತನದಿಂದ ರಸ್ತೆಯ ತೀರಾ ಬಲಗಡೆಗೆ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಪಿರ್ಯಾದಿದಾರರಿಗೆ ಡಿಕ್ಕಿಪಡಿಸಿದ ಪರಿಣಾಮ ಪಿರ್ಯಾದಿದಾರರು ನೆಲಕ್ಕೆ ಬಿದ್ದು, ಎಡಕಾಲಿನ ಮೊಣಗಂಟಿಗೆ, ಬಲಕೈಯ ಮಣಿಗಂಟಿಗೆ, ಬಲಗಡೆ ಕಣ್ಣಿನ ಬಳಿ, ಬಲಗಡೆ ಹಣೆಗೆ ಗುದ್ದಿದ  ನಮೂನೆಯ ಗಾಯವಾಗಿದ್ದು, ಚಿಕಿತ್ಸೆಯ ಬಗ್ಗೆ ಪಾಧರ್ ಮುಲ್ಲರ್ಸ್ ಆಸ್ಪತ್ರೆಗೆ ಹೋದಾಗ ಅಲ್ಲಿನ ವೈದ್ಯರು ಪಿರ್ಯಾದಿದಾರರಿಗೆ ಹೊರ ರೋಗಿಯಾಗಿ ಚಿಕಿತ್ಸೆಯನ್ನು ನೀಡಿ ಕಳುಹಿಸಿಕೊಟ್ಟಿರುತ್ತಾರೆ. ಈ ಬಗ್ಗೆ ಅಪಘಾತಪಡಿಸಿದ KA-19-EH-6136 ನೇ ಸ್ಕೂಟರ್ ಸವಾರನ  ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿಕೆ

Crime Reported in :      Traffic South Police Station

ಪಿರ್ಯಾದಿ ಜಾನ್ ವಾಸ್ (67 ವರ್ಷ) ರವರು ನಿನ್ನೆ ದಿನ ದಿನಾಂಕ: 30-01-2023 ರಂದು ಅವರು ಸಂಜೆ ಸಮಯ ಸುಮಾರು 7-00 ಗಂಟೆಗೆ ನಾಗುರಿ ಅಟ್ಟನೆ ಹೋಟೆಲ್ ಬಳಿ ರಸ್ತೆ ದಾಟುತ್ತಿರುವಾಗ ಪಡೀಲ್ ಕಡೆಯಿಂದ ಪಂಪ್ ವೇಲ್ ಕಡೆಗೆ ಮೋಟಾರ್ ಸೈಕಲ್ ನಂಬ್ರ:KA-19-EU-8391 ನೇದನ್ನು ಅದರ ಸವಾರ ಯತೀಶ್ ಕೆ ಎಸ್ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಬಂದು ರಸ್ತೆ ದಾಟುತ್ತಿದ್ದ ಪಿರ್ಯಾದಿದಾರರಿಗೆ ಡಿಕ್ಕಿ ಪಡಿಸಿದ ಪರಿಣಾಮ ಅವರು ರಸ್ತೆಗೆ ಬಿದ್ದು ಅವೆ ಹಣೆಗೆ ಗುದ್ದಿದ ರೀತಿಯ ಮೂಳೆ ಮುರಿತದ ಗಾಯ,ಬಲಗೈಗೆ ಜಜ್ಜಿ ಹೋದ ಗಾಯ,ಬಲಗಾಲಿನ ಹೆಬ್ಬೆರಳಿಗೆ ರಕ್ತಗಾಯ,ಎಡಗಾಲಿನ ಬೆರಳಿಗೆ ತರಚಿದ ಗಾಯ ಹಾಗೂ ಸೊಂಟಕ್ಕೆ ಗುದ್ದಿದ ರೀತಿಯ ಗಾಯವಾಗಿದ್ದು ಹಾಗೂ ಅಪಘಾತ ಪಡಿಸಿದ ಮೋಟಾರ್ ಸೈಕಲ್ ಸವಾರನಿಗೂ ಸಣ್ಣ ಪುಟ್ಟ ಗಾಯಗಳಾಗಿದ್ದು ಅಲ್ಲಿ ಸೇರಿದ ಜನರು ಕೂಡಲೇ ಆಟೋರಿಕ್ಷಾವೊಂದರಲ್ಲಿ ಗಾಯಾಳುಗಳನ್ನು ಚಿಕಿತ್ಸೆ ಬಗ್ಗೆ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿರುತ್ತಾರೆ ಎಂಬಿತ್ಯಾದಿ.

 Crime Reported in : Surathkal PS

ಪಿರ್ಯಾದಿ Kavitha ಸುಮಾರು 02 ವರ್ಷಗಳಿಂದ ಸುರತ್ಕಲ್ ಹೊಸಬೆಟ್ಟು ಎಲ್.ಐ.ಸಿ ಕಛೇರಿಯಲ್ಲಿ ಹೌಸ್ ಕೀಪರ್ ಆಗಿ ಕೆಲಸ ಮಾಡಿಕೊಂಡಿದ್ದು ಸದ್ರಿ ಸ್ವಸ್ತಿಕ್ ಹೌಸ್ ಕೀಪಿಂಗ್ ಗುತ್ತಿಗೆ ಅವಧಿಯು ಮುಗಿದಿರುವುದರಿಂದ ದಿನಾಂಕ 01-01-2023 ರಿಂದ ಪೂಜಾ ಎಜನ್ಸಿಯ ಗುತ್ತಿಗೆ ಅಧಾರದಲ್ಲಿ ದಿನಾಂಕ 05-01-2023ರ  ತನಕ ಕೆಲಸ ಮಾಡುತ್ತಾ ಬಂದಿದ್ದು ಎಲ್.ಐ.ಸಿ ಕಛೇರಿಯ ಮ್ಯಾನೇಜರ್ ಬಾಲಚಂದ್ರ ನಾಯ್ಕ್ ರವರು 2022 ಅಕ್ಟೋಂಬರ್ ನಿಂದ 05-01-2023ರ ತನಕ ಪಿರ್ಯಾದಿದಾರರಿಗೆ ಮಾನಸಿಕ ಹಿಂಸೆ ನೀಡಿ ಅವಾಚ್ಯ ಶಬ್ದಗಳಿಂದ ಬೈದು ಕೆಲಸಕ್ಕೆ ಬಾರದಂತೆ ತೆಡೆಯೊಡ್ಡಿದ್ದು ಗುಮಾಸ್ತೆ ಮೀನಾಕ್ಷಿರವರು ಕೂಡ ಅದೆ ಸಮಯವಾಧಿಯಲ್ಲಿ ಪಿರ್ಯಾದಿಗೆ ಮಾನಸಿಕ ಹಿಂಸೆ ನೀಡಿ ಅವಾಚ್ಯ ಶಬ್ದಗಳಿಂದ ಬೈದು ನೀನು ಕೀಳು ಜಾತಿಯವಳು ನನ್ನನ್ನು ಮತ್ತು ನನ್ನ ಟೇಬಲ್ ನ್ನು ಮುಟ್ಟಬಾರದು ನನಗೆ ಮೈಲಿಗೆ ಯಾಗುತ್ತದ್ದೆ ಎಂದು ನಿಂದಿಸಿದ್ದು ಇವರಿಬ್ಬರ ಕುಮ್ಮಕ್ಕಿನಿಂದ ಪಿರ್ಯಾದಿ ಕೆಲಸ ಮಾಡದಂತೆ ಗುತ್ತಿಗೆ ಏಜನ್ಸಿಗೆ ಒತ್ತಡ ಹಾಕಿದ್ದು ದಿನಾಂಕ 29-11-2022 ರಂದು ಇವರಿಬ್ಬರೂಗಳು ಸೆಕ್ಯೂರಿಟಿ ಶ್ರೀಕಾಂತ್ ಎಂಬವರ ಮುಖಾಂತರ ಪಿರ್ಯಾದಿಯ KA-19-EZ-3660 ನೇ ಸ್ಕೂಟರ್ ನ್ನು ದ್ವಂಸಗೊಳಿದ್ದು ಎಂಬಿತ್ಯಾದಿ

     

Crime Reported in : Mangalore East Traffic PS         

ಪಿರ್ಯಾದಿ ವಿವಿಯನ್ ಕ್ರಾಸ್ತಾ (38 ವರ್ಷ)  ರವರು ದಿನಾಂಕ 30-01-2023 ರಂದು ಸಂಜೆ 7-00 ಗಂಟೆಗೆ ಮನೆಯಲ್ಲಿದ್ದ ವೇಳೆ ಪರಿಚಯದವರೊಬ್ಬರು ಮನೆಗೆ ಬಂದು ಪಿರ್ಯಾದಿದಾರರ ತಂದೆ ಸೆಡ್ರಿಕ್ ಕ್ರಾಸ್ತಾ ರವರಿಗೆ ಶಿವಭಾಗ್ ಜಂಕ್ಷನ್ ಬಳಿ ರಸ್ತೆ ಅಪಘಾತ ಉಂಟಾದ ವಿಷಯವನ್ನು ತಿಳಿಸಿದಂತೆ ಪಿರ್ಯಾದಿದಾರರು ಕೂಡಲೇ ಹೊರಟು ಶಿವಭಾಗ್ ಜಂಕ್ಷನಿಗೆ ತೆರಳಿ ನೋಡಲಾಗಿ ತನ್ನ ತಂದೆಯನ್ನು ಚಿಕಿತ್ಸೆ ಬಗ್ಗೆ ಹತ್ತಿರದ ಎಸ್.ಸಿ.ಎಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿರುವ ವಿಚಾರವನ್ನು ತಿಳಿದು ಆಸ್ಪತ್ರೆಗೆ ತೆರಳಿ ಅಲ್ಲಿದ್ದ ಸಾರ್ವಜನಿಕರಲ್ಲಿ ಅಪಘಾತದ ಬಗ್ಗೆ ವಿಚಾರಿಸಲಾಗಿ ಈದಿನ ದಿನಾಂಕ; ದಿನಾಂಕ 30-01-2023 ರಂದು ಸಂಜೆ 6.45 ಗಂಟೆಗೆ ಪಿರ್ಯಾದಿದಾರರ ತಂದೆ ಸೆಡ್ರಿಕ್ ಕ್ರಾಸ್ತಾ ರವರು ತನ್ನ ಬಾಬ್ತು KA-19-EH-2825 ನೊಂದಣಿ ನಂಬ್ರದ ಸ್ಕೂಟರಿನಲ್ಲಿ ಸವಾರನಾಗಿ ಮಲ್ಲಿಕಟ್ಟೆ ಮಾರ್ಕೇಟ್ ಕಡೆಯಿಂದ ನಂತೂರು ಕಡೆಗೆ ಹಾದು ಹೋಗಿರುವ ಸಾರ್ವಜನಿಕ ಕಾಂಕ್ರೀಟ್ ರಸ್ತೆಯಲ್ಲಿ ಹೋಗುತ್ತಾ ಶಿವಭಾಗ್ ಜಂಕ್ಷನ್ ಬಳಿಗೆ ಬಂದು ತಲುಪುತ್ತಿದ್ದಂತೆ ಒಂದು ನಂಬರ್ ತಿಳಿಯದ ಮೋಟಾರು ಸೈಕಲನ್ನು ಅದರ ಸವಾರ ಸೈಂಟ್ ಆಗ್ನೇಸ್ ಕಡೆಯಿಂದ ಶಿವಭಾಗ್ ಜಂಕ್ಷನ್ ಕಡೆಗೆ ಹಾದು ಹೋಗಿರುವ ಸಾರ್ವಜನಿಕ ರಸ್ತೆಯಲ್ಲಿ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಶಿವಭಾಗ್ ಜಂಕ್ಷನ್ ಬಳಿ ಪಿರ್ಯಾದಿದಾರರ ತಂದೆ ಸವಾರಿ ಮಾಡಿಕೊಂಡು ಹೋಗುತ್ತಿದ್ದ ಸ್ಕೂಟರಿನ ಬಲಬದಿಗೆ ಢಿಕ್ಕಿಪಡಿಸಿದ್ದು, ಢಿಕ್ಕಿಯ ಪರಿಣಾಮ ಪಿರ್ಯಾದಿದಾರರ ತಂದೆ ಸ್ಕೂಟರ್ ಸಮೇತ ಕಾಂಕ್ರೀಟ್ ರಸ್ತೆಗೆ ಬಿದ್ದು ತಲೆಯ ಹಿಂಭಾಗಕ್ಕೆ ಚರ್ಮ ಹರಿದ ರಕ್ತ ಗಾಯ, ಹಣೆಯ ಬಲಬದಿಗೆ ಮತ್ತು ಬಲಕೈಗೆ ತರಚಿದ ರೀತಿಯ ಗಾಯಗಳಾದವರನ್ನು ಚಿಕಿತ್ಸೆ ಬಗ್ಗೆ ಆಸ್ಪತ್ರೆಗೆ ಸಾಗಿಸಿರುವುದಾಗಿ ತಿಳಿದು ಬಂದಿದ್ದು, ಎಸ್.ಸಿ.ಎಸ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುವುದಾಗಿದೆ. ಗಾಯಾಳು  ಸೆಡ್ರಿಕ್ ಕ್ರಾಸ್ತಾ ರವರನ್ನು ಆಸ್ಪತ್ರೆಗೆ ಸಾಗಿಸುವ ಗಡಿಬಿಡಿಯಲ್ಲಿ ಯಾರೂ ಕೂಡಾ ಅಪಘಾತಪಡಿಸಿದ ಮೋಟಾರು ಸೈಕಲಿನ ನೊಂದಣಿ ಸಂಖ್ಯೆಯನ್ನುಗಮನಿಸದೇ ಇದ್ದು, ಈ ಬಗ್ಗೆ ಅಪಘಾತಪಡಿಸಿದ ಮೋಟಾರು ಸೈಕಲ್ ಸವಾರನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿಕೆ.

Crime Reported in : Traffic North Police Station               

ಪಿರ್ಯಾದಿ ಮಂಜುನಾಥ ಆರ್ ಕೆ ರವರು ಸುಮಾರು 6 ವರ್ಷಗಳಿಂದ ಮೂಲ್ಕಿಯ ಕೊಲ್ನಾಡು ಜಂಕ್ಷನ್ ಬಳಿ NH 66ರ ರಸ್ತೆ ಬದಿಯಲ್ಲಿ ಆಧುನಿಕ ಚರ್ಮ ಕುಟೀರ ಮಳಿಗೆಯನ್ನು ನಡೆಸುತ್ತಿದ್ದು, ದಿನಾಂಕ; 21-01-2023 ರಂದು ರಾತ್ರಿ ಸುಮಾರು 10:00 ಘಂಟೆ ಸಮಯಕ್ಕೆ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ KA-19-D-6680 ನಂಬ್ರದ ಮೆರಿಡಿಯನ್ ಕಂಪೆನಿಯ ಬೃಹತ್ ಕಂಟೈನರ್ ಲಾರಿಯನ್ನು ಅದರ ಚಾಲಕನದ ಅಶೋಕ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಕೊಲ್ನಾಡು ಜಂಕ್ಷನ್ ಬಳಿ ಒಮ್ಮೆಲೇ ಬ್ರೇಕ್ ಹಾಕಿದ ಪರಿಣಾಮ ಕಂಟೈನರ್ ಲಾರಿಯು  ರಸ್ತೆಯ ಎಡಬದಿಗೆ ಮುಗುಚಿ ಬಿದ್ದಿದ್ದು, ಮುಗುಚಿ ಬೀಳುವ ವೇಳೆ ಪಿರ್ಯಾದಿದಾರರ ಚರ್ಮ ಕಟೀರದ ಮಳಿಗೆ ಮೇಲೆ ಕೂಡಾ ಬಿದ್ದಿರುತ್ತದೆ ಇದರ ಪರಿಣಾಮ ಪಿರ್ಯಾದಿದಾರರ ಕುಟೀರ ಸಂಪೂರ್ಣ ಹಾನಿಗೊಂಡಿದ್ದು ಪಿರ್ಯಾದಿದಾರರಿಗೆ ಸುಮಾರು 3 ಲಕ್ಷ ರೂಪಾಯಿಯಷ್ಟು ನಷ್ಟ ಸಂಭವಿಸಿದ್ದು, ಈ ಬಗ್ಗೆ ಪಿರ್ಯಾದಿದಾರರು ಮೂಲ್ಕಿ ಪೊಲೀಸ್ ಠಾಣೆಗೆ ದೂರು ನೀಡಿ, ಬಳಿಕ ಅವರ ಸೂಚನೆಯಂತೆ ಈ ದಿನ ತಡವಾಗಿ ಸಂಚಾರ ಠಾಣೆಗೆ ಬಂದು ದೂರು ನೀಡಿರುವುದಾಗಿದೆ ಎಂಬಿತ್ಯಾದಿ.

 

Crime Reported in : Kankanady Town PS

ಪಿರ್ಯಾದುದಾರರು S H Abdul Rahiman ಮಂಗಳೂರು ನಗರದ ಕಣ್ಣೂರು ಗ್ರಾಮದಲ್ಲಿ ತಮ್ಮ ಕುಟುಂಬದೊಂದಿಗೆ ವಾಸವಾಗಿದ್ದು, ಕಣ್ಣೂರು ಗ್ರಾಮದ ಯೂಸುಫ್ ನಗರ ಎಂಬಲ್ಲಿ ಮುನಾವರ್ ಎಂಬ ಅಪಾರ್ಟ್ ಮೆಂಟ್ ಹೊಂದಿದ್ದು, ಅಪಾರ್ಟ್‌ಮೆಂಟ್‌ನಲ್ಲಿರುವ ನಂ:3-4 ರ ಫ್ಲ್ಯಾಟ್‌ನ್ನು ಇಕ್ಬಾಲ್ ಎಂಬುವರಿಗೆ ದಿನಾಂಕ 26.07.2018 ರಿಂದ 25.06.2019 ರವರೆಗೆ 11 ತಿಂಗಳ ಅವದಿಗೆ ಲಿಸ್ ಗೆ ನೀಡಿದ್ದು, ಲೀಸ್ ಅವದಿ ಮುಗಿದ ನಂತರವೂ ಸಹ ಪಿರ್ಯಾದುದಾರರ ಅಪಾರ್ಟ್ ಮೆಂಟ್ ನ ನಂ:3-4 ರ ಫ್ಲ್ಯಾಟ್‌ನ್ನು ಇಕ್ಬಾಲ್ ಹಾಗೂ ಅವರ ಕುಟುಂಬದವರೂ ಒತ್ತುವರಿ ಮಾಡಿಕೊಂಡು ಪಿರ್ಯಾದುದಾರರಿಗೆ ತೊಂದರೆ ಕೊಟ್ಟಿರುವುದಾಗಿದೆ. ದಿನಾಂಕ 27.01.2022 ರಂದು ಸುಮಾರು ಬೆಳಗ್ಗೆ 9.15  ಗಂಟೆಗೆ ಪಿರ್ಯಾದುದಾರರು ತಮ್ಮ ಮುನಾವರ್ ಅಪಾರ್ಟ್‌ಮೆಂಟ್‌ಗೆ ಬಾಡಿಗೆದಾರರೊಬ್ಬರಾದ ಶ್ರೀ ಸಂಸುದ್ದೀನ್ ಅವರ II ಮಹಡಿಯಲ್ಲಿರುವ ನೀರಿನ ಪೈಪ್ ಲೈನ್‌ನ ಅಗತ್ಯ ದುರಸ್ತಿಯನ್ನು ಕೈಗೊಳ್ಳಲು ಹೋದಾಗ ಆರೋಪಿಗಳು ಪಿರ್ಯಾದಿದಾರರಿಗೆ ಬ್ಯಾರಿ ಭಾಷೆಯಲ್ಲಿ ಅವಾಚ್ಯ ಭಾಷೆಯಲ್ಲಿ ಬೈದು ಪಿರ್ಯಾದಿದಾರರ ತಲೆ, ಎದೆ, ಬೆನ್ನು, ಮುಖ ಮತ್ತು ಸೊಂಟದ ಮೇಲೆ ಕೈಗಳಿಂದ ಹಲ್ಲೆ ಮಾಡಿ ಕೊಲೆ ಯತ್ನ ಮಾಡಿ ನೆಲಕ್ಕೆ ತಳ್ಳಿ ಕಾಲಿನಿಂದ ಒದ್ದು ಗಾಯಗೊಳಿಸಿದ್ದವರನ್ನು ಪಿರ್ಯಾದುದಾರರ ಮಗ ಆಟೋರಿಕ್ಷಾದಲ್ಲಿ ಹೈಲ್ಯಾಂಡ್ ಆಸ್ಪತ್ರೆಗೆ ದಾಖಲಿಸಿ ಒಳರೋಗಿಯಾಗಿ ದಾಖಲಿಸಿ ಗಾಯಗಳಿಗೆ ಚಿಕಿತ್ಸೆ ಕೊಡಿಸಿರುತ್ತಾರೆ ಎಂಬಿತ್ಯಾದಿ.

                               

Crime Reported in : Kankanady Town PS

ಪಿರ್ಯಾದುದಾರರು Obili Riyaz ಮಂಗಳೂರಿನ ಶಕ್ತಿನಗರದ ರಾಷ್ಟ್ರೀಕೃತ ಬ್ಯಾಂಕ್ ಆದ ಕೆನರಾ ಬ್ಯಾಂಕ್ ನ ಮ್ಯಾನೇಜರ್ ಆಗಿದ್ದು, ಮಂಗಳೂರಿನ ಶಕ್ತಿನಗರದಲ್ಲಿ ಗ್ರಾಹಕರ ಅನುಕೂಲಕ್ಕಾಗಿ ಎ.ಟಿಎಂ ಸೇವೆಯನ್ನು ನೀಡುತ್ತಿರುವುದಾಗಿದೆ. 2022 ರ ಅಕ್ಟೋಬರ್ ತಿಂಗಳಲ್ಲಿ ಯಾರೋ ವಂಚಕರು ಶಕ್ತಿನಗರದ ಕೆನರಾ ಬ್ಯಾಂಕ್ ನ ಎ.ಟಿ.ಎಂ ನಲ್ಲಿ ಮತ್ತೊಂದು ಬ್ಯಾಂಕ್ ನ ಎ.ಟಿ.ಎಂ ಕಾರ್ಡ್ ಬಳಸಿ ಎಟಿಎಂ ಅನ್ನು ಟ್ಯಾಂಪರಿಂಗ್ ಮಾಡುವ ಮೂಲಕ ನೆಟ್ವರ್ಕ್/ಪವರ್ ಕೇಬಲ್ ಕತ್ತರಿಸುವ ಮೂಲಕ ಅಥವಾ ಎ.ಟಿ.ಎಂ ಅನ್ನು ಸೂಪರ್ ವೈಸರ್ ಮೋಡ್ ಗೆ ತರುವ ಮೂಲಕ ನಗದು ಹಿಂಪಡೆಯುವಿಕೆಯನ್ನು ಮಾಡಿ ಸುಮಾರು 1,09,000/- ಹಣವನ್ನು ಹಿಂಪಡೆದು ಬ್ಯಾಂಕಿಗೆ ವಂಚನೆ ಮಾಡುರುವುದಾಗಿದೆ ಎಂಬಿತ್ಯಾದಿ.

                   

 

Crime Reported in : Traffic South Police Station

ಪಿರ್ಯಾದಿ SHIHABUDDEEN C H  ಮಾವನಾದ ಅಬೂಬಕ್ಕರ್ ರವರು ಈ ದಿನ ದಿನಾಂಕ:30-01-2023 ರಂದು ರಾ.ಹೆ-66 ಕಲ್ಲಾಪುವಿನ ಯನಿಟಿ ಹಾಲ್ ಎದುರು ರಸ್ತೆ ಬದಿಯಲ್ಲಿ ನಿಂತಿರುವಾಗ ಸಮಯ ಸುಮಾರು ಮದ್ಯಾಹ್ನ 01:10 ಗಂಟೆಗೆತೊಕ್ಕೊಟ್ಟು ಓವರ್ ಬ್ರಿಡ್ಜ್ ನಿಂದ ಮಂಗಳೂರು ಕಡೆಗೆ ಬಸಪ್ಪ ಕಂದರಿ ಎಂಬಾತನು ಬೈಕನ್ನು ತೀರಾ ನಿರ್ಲಕ್ಷತನದಿಂದ ಹಾಗೂ ದುಡುಕುತನದಿಂದ ಸವಾರಿ ಮಾಡಿಕೊಂಡು ಬಂದು ಅಬೂಬಕ್ಕರ್ ರವರಿಗೆ ಡಿಕ್ಕಿ ಪಡಿಸಿದ ಪರಿಣಾಮ ಅವರು ಡಾಮಾರು ರಸ್ತೆಗೆ ಬಿದ್ದು ತಲೆಗೆ, ಸೊಂಟಕ್ಕೆ, ಕಾಲಿಗೆ, ಗಾಯವಾಗಿದ್ದು ಕೂಡಲೇ ಚಿಕಿತ್ಸೆ ಬಗ್ಗೆ ಪಿರ್ಯಾದಿದಾರರು ಅದೇ ರಸ್ತೆಯಲ್ಲಿ ಹೋಗುತ್ತಿದ್ದ ಆಂಬುಲೆನ್ಸ್ ನಲ್ಲಿ ಗಾಯಗೊಂಡಿರುವ ಅಬೂಬಕ್ಕರ್ ರವರನ್ನು ಮತ್ತು ಅಪಘಾತ ಪಡಿಸಿದ ಬೈಕ್ ಸವಾರ ಬಸಪ್ಪ ಕಂದರಿರವರನ್ನು ಮಂಗಳೂರಿನ ಯುನಿಟಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿರುವುದಾಗಿದೆ, ಎಂಬಿತ್ಯಾದಿ

Crime Reported in : Kavoor PS

ದಿನಾಂಕ 23-12-2022ರಂದು ಪಿರ್ಯಾದುದಾರರಾದ  ರೇಖಾ (41)ಗಂಡ-ಅಶೋಕ ವಾಸ- ಬೇಡಿಕರ್ ಮನೆ ಡೋರ್ ನಂಬ್ರ-1/134,ದೇವಿನಗರ ಕುಂಜತ್ತ್ ಬೈಲು ಮಂಗಳೂರು ಎಂಬುವವರು 10 ವರ್ಷಗಳ  ಹಿಂದೆ ನನ್ನ ಮನೆ ನೆರಕರೆಯವರಾದ ಜೀವನ್ ಮದ್ಯೆ ಮನೆ ಜಾಗದ ವಿಷಯದಲ್ಲಿ ಗಲಾಟೆಯಾಗಿದ್ದು  ಈ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿ ಇರುತ್ತದೆ. ದಿನಾಂಕ 23-12-2022 ರಂದು ಸುಮಾರು ರಾತ್ರಿ  09.00 ಗಂಟೆಗೆ ಜೀವನ್ ಎಂಬವವರು  ಕುಡಿದು ಬಂದು ಮನೆ ಮುಂದೆ ಹಾಕಿದ ಡೋರ್ ನಂಬ್ರದ ಫಲಕವನ್ನು ಕಿತ್ತು ಹಾಕಿ ನಷ್ಟವನ್ನು ಉಂಟು ಮಾಡಿ ಅವ್ಯಾಚ್ಯ ಶಬ್ಧಗಳಿಂದ ಬೈದು ಜೀವ ಬೆದರಿಕೆ ಹಾಕಿ ತೊಂದರೆ ನೀಡಿದ ಜೀವನ್ ನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಎಂಬಿತ್ಯಾದಿ

ಇತ್ತೀಚಿನ ನವೀಕರಣ​ : 31-01-2023 06:51 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080