ಅಭಿಪ್ರಾಯ / ಸಲಹೆಗಳು

ದೈನಂದಿನ ಅಪರಾಧ ವರದಿ ದಿನಾಂಕ :31-01-2024

Mangalore East Traffic PS

ಈ ಪ್ರಕರಣದ ಸಾರಾಂಶವೇನೆಂದರೆ ಪಿರ್ಯಾದಿದಾರರಾದ ನಾಗೇಶ್ ರವರು ದಿನಾಂಕ 30-01-2024 ರಂದು ಥಾಮಸ್ ಡಿ ಸೋಜಾ ರವರು ಚಲಾಯಿಸಿಕೊಂಡಿದ್ದ ಆಟೋರಿಕ್ಷಾ ನೊಂದಣಿ ಸಂಖ್ಯೆ KA-19-AB-3217 ನೇ ದರಲ್ಲಿ ಪ್ರಯಾಣಿಕರಾಗಿ ಶಿವಭಾಗ್ ಕಡೆಯಿಂದ ನಂತೂರು ಕಡೆಗೆ ಪ್ರಯಾಣಿಸಿಕೊಂಡು ಬರುತ್ತಿದ್ದಾಗ, ಸದ್ರಿ ರಿಕ್ಷಾ ಶಿವಭಾಗ್ ಬಳಿಯ ಬಲ್ಲಾಳ ಗ್ಯಾರೇಜ್ ಎದುರು ಸಂಜೆ ಸಮಯ ಸುಮಾರು 5:30 ಗಂಟೆಗೆ ತಲುಪ್ಪುತ್ತಿದ್ದಂತೆ ಅವರ ಎಡ ಹಿಂಭಾಗದಿಂದ ಬರುತ್ತಿದ್ದ ಬಸ್ಸು ನೋಂದಣಿ ಸಂಖ್ಯೆ KA-51-AF-6079 ನೇ ಯದನ್ನು ಅದರ ಚಾಲಕ ಶಿವರಾಜ್ ಎಂಬುವನು ರಿಕ್ಷಾವನ್ನು ಓವರ್ ಟೇಕ್ ಮಾಡಿ ಮುಂದೆ ಹೋಗುವ ಗಡಿಬಿಡಿಯಲ್ಲಿ ನಿರ್ಲಕ್ಷ್ಯತನದಿಂದ ಚಲಾಯಿಸಿದ್ದರಿಂದ ಬಸ್ಸು ರಿಕ್ಷಾಗೆ ಡಿಕ್ಕಿಯಾಗಿ ರಿಕ್ಷಾ ಚಾಲಕರಾಗಿದ್ದ ಥಾಮಸ್ ಡಿ ಸೋಜಾ ರವರು ರಸ್ತೆಗೆ ಬಿದ್ದು ತಲೆಗೆ ರಕ್ತಗಾಯವಾಗಿ ಪ್ರಜ್ಞಾಹೀನ ಗೊಂಡಿರುತ್ತಾರೆ, ಪ್ರಸ್ತುತ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ, ಎಂಬಿತ್ಯಾದಿ

 

 

Mangalore North PS

 

ದಿನಾಂಕ: 30-01-2024 ರಂದು  ಮಾದಕ ದ್ಯವ್ಯ ವ್ಯಸನ ಮತ್ತು ಮಾರಾಟವನ್ನು ತಡೆಗಟ್ಟುವ ಮತ್ತು ನಿಯಂತ್ರಿಸುವ ನಿಟ್ಟಿನಲ್ಲಿ ಮಂಗಳೂರು ನಗರ ಪೊಲೀಸ್ ಕೇಂದ್ರ ಉಪವಿಭಾಗದ ವತಿಯಿಂದ ರಚಿತವಾಗಿರುವ Anti Drug Team ತಂಡದ ಅಧಿಕಾರಿ ಪ್ರದೀಪ್ ಟಿ ಆರ್ ಪಿಎಸ್ಐ ಮಂಗಳೂರು ಉತ್ತರ ಪೊಲೀಸ್ ಠಾಣೆ  ರವರು ಸಿಬ್ಬಂದಿಗಳೊಂದಿಗೆ ರೌಂಡ್ಸ ಕರ್ತವ್ಯ ದಲ್ಲಿರುವ ಸಮಯ ಸಂಜೆ ಮಂಗಳೂರು ನಗರದ  ಹಂಪನಕಟ್ಟೆ  ಬಳಿ ತಲುಪಿದಾಗ ಶ್ರೀಕಾಂತ್ ಪಿ ಪ್ರಾಯ: 19 ವರ್ಷ ತಂದೆ: ಅನೀಶ್ ಕೆ.ಪಿ, ವಾಸ:ಪೊಂಹದಮ ಹೌಸ್ ಚೊಂದಮ ,ಎರನಹಳಿ ಪೋಸ್ಟ್ , ತಲಸ್ಸೇರಿ ,ಕಣ್ಣೂರು ಕೇರಳ ಎಂಬಾತನು  ಅಮಲು ಪದಾರ್ಥ ಸೇವಿಸಿದ ಹಾಗೆ ತೂರಾಡುತ್ತಿದ್ದು ವಿಚಾರಿಸಲಾಗಿ ತಾನು ಗಾಂಜಾ ಸೇವನೆ ಮಾಡಿರುವುದಾಗಿ ತಿಳಿಸಿರುತ್ತಾನೆ. ಮುಂದಿನ ಕ್ರಮದ ಬಗ್ಗೆ ವೈದ್ಯಕೀಯ ಪರೀಕ್ಷೆ ಬಗ್ಗೆ ಮಂಗಳೂರು ಕುಂಟಿಕಾನದ ಎ ಜೆ ಆಸ್ಪತ್ರೆಗೆ ಹಾಜರುಪಡಿಸಿದ್ದು, ಎ ಜೆ ಆಸ್ಪತ್ರೆಯ ವೈದ್ಯರು ಆತನನ್ನುಪರೀಕ್ಷಿಸಿದಲ್ಲಿ, ಶ್ರೀಕಾಂತ್ ಪಿ  ಎಂಬಾತನು, Tetrahydracannabinoid, (Marijuana) ಎಂಬ ಮಾದಕ ದ್ರವ್ಯವನ್ನು ಸೇವನೆ ಮಾಡಿರುವುದಾಗಿ ದೃಢ ಪತ್ರವನ್ನು ನೀಡಿರುತ್ತಾರೆ. ಎಂಬಿತ್ಯಾದಿ

 

Traffic South PS

ಫಿರ್ಯಾದಿ ANUSHREE  A  ಇವರು ನೀಡಿದ ದೂರಿನ ಸಾರಾಂಶವೆನೆಂದರೆ ದಿನಾಂಕ-30-01-2024 ರಂದು ಪಿರ್ಯಾದಿದಾರರು ತಮ್ಮ ತಂದೆಯ KA19MD6947 ನೇ ನಂಬ್ರದ  ಕಾರನ್ನು ಪಂಚಕ ಆರ್ ಶೆಟ್ಟಿ ರವರನ್ನು ಕುಳ್ಳಿರಿಸಿಕೊಂಡು ದೇರಳಕಟ್ಟೆ ಕಡೆಯಿಂದ ತೊಕ್ಕಟ್ಟು ಕಡೆಗೆ ಬರುವಾಗ ತೊಕ್ಕಟ್ಟಿನ ವಿನಂಭ್ರ ಬಾರ್ ಬಳಿ ಸಂಜೆ ಸುಮಾರು 05-45 ಗಂಟೆಗೆ ಬ್ಲಾಕ್ ಆಗಿ ನಿಲ್ಲಿಸಿದ್ದು ಹಿಂದುಗಡೆಯಿಂದ ಬಂದ KA20C2819 ನೇ ನಂಬ್ರದ  ಈಚರ್ ಲಾರಿಯನ್ನು ದುಡುಕುತನ ಹಾಗೂ ನಿರ್ಲಕ್ಷತನ ಮತ್ತು ವೇಗವಾಗಿ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರ ಕಾರ್ ಗೆ ಡಿಕ್ಕಿ ಪಡಿಸಿದ್ದು  ಇದರ ಪರಿಣಾಮ ಪಿರ್ಯಾದುದಾರರ ಕಾರು  ಮುಂದೆ ನಿಂತಿದ್ದ KA19 AD 4667 ನೇ ನಂಬ್ರದ ಬೊಲೆರೊ ಪಿಕ ಅಪ್ ವಾಹನಕ್ಕೆ ಡಿಕ್ಕಿಪಡಿಸಿದ್ದು ಎರಡು ವಾಹನಗಳು ಜಖಂಗೊಂಡಿರುತ್ತದೆ. ಪಿರ್ಯಾದಿದಾರರು ಹಾಗೂ  ಬೊಲೆರೊ ಪಿಕ ಅಪ್ ಚಾಲಕನಿಗೆ  ಗುದ್ದಿದ ಗಾಯಗಳಾಗಿರುತ್ತದೆ, ಎಂಬಿತ್ಯಾದಿ.

 

 

Traffic North PS

ಈ ಪ್ರಕರಣದ ಸಾರಾಂಶವೇನೆಂದರೆ, ಪಿರ್ಯಾದಿ Nithesh ಇವರ ನೆರೆಕೆರೆ ನಿವಾಸಿ ಎಲಿಸ್ ಪಿಂಟೋ (85) ರವರು ಈ ದಿನ ದಿನಾಂಕ 31-01-2024 ರಂದು ಎಂದಿನಂತೆ ತಮ್ಮ ಬಾಬ್ತು KA-19-D-0192 ನಂಬ್ರದ ಆಟೋ ರಿಕ್ಷಾದಲ್ಲಿ ಚಾಲಕರಾಗಿ ಕಿನ್ನಿಗೊಳಿ ಕಡೆಯಿಂದ ಗುಡ್ಡೆಅಂಗಡಿ ಕುಡುಂಬುಗಿರಿ ಇಳಿಜಾರು ಮಣ್ಣು ರಸ್ತೆಯಲ್ಲಿ ಚಲಾಯಿಸಿಕೊಂಡು ಹೋಗುತ್ತಾ ದುಡುಕುತನದಿಂದ ಚಲಾಯಿಸಿದ ಪರಿಣಾಮ ಆಟೋ ರಿಕ್ಷಾವು ಎಲಿಸ್ ಪಿಂಟೋ ರವರ ನಿಯಂತ್ರಣ ತಪ್ಪಿ ಮಣ್ಣು ರಸ್ತೆಯ ಎಡ ಬದಿಗೆ ಅಡ್ಡ ಬಿದ್ದಿದ್ದು ಚಾಲಕ ಸೀಟಿನಲ್ಲಿದ್ದ ಎಲಿಸ್ ಪಿಂಟೋ ರವರು ರಸ್ತೆಗೆ ಎಸೆಯಲ್ಪಟ್ಟು ರಿಕ್ಷಾವು ಅವರ ಮೇಲೆ ಮುಗುಚಿ ಬಿದ್ದ ಪರಿಣಾಮ ಎಲಿಸ್ ಪಿಂಟೋ ರವರಿಗೆ ಗಂಭೀರ ಸ್ವರೂಪದ ಗಾಯವಾಗಿದ್ದು ಚಿಕಿತ್ಸೆಯ ಬಗ್ಗೆ ಮುಲ್ಕಿ ಸರಕಾರಿ ಸಮುದಾಯ ಆಸ್ಪತ್ರೆಯಲ್ಲಿ  ಪ್ರಥಮ ಚಿಕಿತ್ಸೆ ಪಡೆದು, ನಂತರ ಮುಕ್ಕಾದ ಶ್ರೀನಿವಾಸ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ.

 

Moodabidre PS    

ಈ ಪ್ರಕರಣದ ಸಾರಾಂಶವೇನೆಂದರೆ, ಪಿರ್ಯಾದಿದಾರರಾದ ರವಿ ರವರು ದಿನಾಂಕ 28-01-2024 ರಂದು ತನ್ನ ಪರಿಚಯದ ಸತೀಶ್ ಮತ್ತು ಅವರ ಕುಟುಂಬದವರೊಂದಿಗೆ ತನ್ನ ಬಾಬ್ತು KA 04 AA 9077 ನೇ ಕಾರಿನಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಳಸದಿಂದ ಮೂಡಬಿದ್ರೆಗೆ ಬಾಡಿಗೆಗೆ ಬಂದಿದ್ದು, ಮೂಡಬಿದ್ರೆಯಲ್ಲಿ ಮನೆಯ ಒಕ್ಕಲು ಕಾರ್ಯಕ್ರಮ ಮುಗಿಸಿಕೊಂಡು ವಾಪಾಸ್ ಕಳಸದ ಕಡೆಗೆ ಹೋಗುತ್ತಿರುವಾಗ ಮೂಡಬಿದ್ರೆಯ ಕೆಸರುಗದ್ದೆ ಎಂಬಲ್ಲಿಗೆ ರಾತ್ರಿ ಸಮಯ ಸುಮಾರು 09.30 ಗಂಟೆಗೆ ತಲುಪುತ್ತಿದ್ದಂತೆ KA 19 MN 4919 ನೇ ಕಾರನ್ನು ಅದರ ಚಾಲಕ ನವೀನ್ ಎಂಬಾತನು ಅತಿಯಾಗಿ ಮದ್ಯಪಾನ ಮಾಡಿ ಅತೀವೇಗ ಮತ್ತು ಅಜಾಗರೂಕತೆಯಿಂದ ಎದುರಿನಿಂದ ಒನ್-ವೇ ನಲ್ಲಿ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರಿನ ಬಲ ಬದಿಯ ಹೆಡ್ ಲೈಟ್ ಭಾಗದಲ್ಲಿ ಜಖಂ ಆಗಿರುತ್ತದೆ ಹಾಗೂ ಕಾರಿನಲ್ಲಿದ್ದ ಅನಿತ ಮತ್ತು ಅವರ ಮಗ ವರ್ಷಿತ್ ಎಂಬುವರಿಗೆ ಗಾಯದ ನೋವುಗಳಾಗಿರುತ್ತದೆ ಎಂಬಿತ್ಯಾದಿ

 

Mangalore South PS

ಪ್ರಕರಣದ ಪಿರ್ಯಾದುದಾರರಾದ ವಿಜಯಲಕ್ಷ್ಮೀ ಎಸ್. ರವರು ಮಂಗಳೂರು ನಗರದ ಕೋಟಿ-ಚೆನ್ನಯ್ಯ ಸರ್ಕಲ್ ಬಳಿಯಲ್ಲಿ KA 19 AE 0605 ನೊಂದಣಿ ಸಂಖ್ಯೆಯ ಟೆಂಪೋ ರಿಕ್ಷಾದಲ್ಲಿ ಮೀನು ಮಾರಾಟ ಮಾಡುತ್ತಿದ್ದು ದಿನಾಂಕ 26-01-2024 ರಂದು ಮದ್ಯಾಹ್ನ 15-00 ಗಂಟೆಯಿಂದ ಸಂಜೆ 19-00 ಗಂಟೆಯ ಮದ್ಯಾವದಿಯಲ್ಲಿ ಯಾರೋ ಕಳ್ಳರು ಪಿರ್ಯಾದುದಾರರು ಮೀನು ಮಾರಾಟ ಮಾಡುವ ಅಟೋ ರಿಕ್ಷಾದ ಸೀಟ್ ನಲ್ಲಿ ಇಟ್ಟಿದ್ದ ನಗದು ಹಣ 20000/- ರೂಪಾಯಿ ಇದ್ದ ಕಪ್ಪು ಬಣ್ಣದ ಬ್ಯಾಗ್ ನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ

 

Moodabidre PS

ಈ ಪ್ರಕರಣದ ಸಾರಾಂಶವೇನೆಂದರೆ, ಪಿರ್ಯಾದಿದಾರರಾದ ರತ್ನಾಕರರವರು ದಿನಾಂಕ 31-01-2024 ರಂದು ಬೆಳಿಗ್ಗೆ ತನ್ನ ಬಾಬ್ತು KA-19-EK-8232 ನಂಬ್ರದ ಸ್ಕೂಟರಿನಲ್ಲಿ ತನ್ನ ಜೊತೆ ಕೆಲಸ ಮಾಡುವ ರತ್ನಾಕರ ಎಂಬವರನ್ನು ಸಹ ಸವಾರನನ್ನಾಗಿ ಕುಳ್ಳಿರಿಸಿಕೊಂಡು ಧರೆಗುಡ್ಡೆ ಕಡೆಯಿಂದ ಕೆಲ್ಲಪುತ್ತಿಗೆ ಕಡೆಗೆ ಹೋಗುತ್ತಾ ಸಮಯ ಸುಮಾರು 8.30 ಗಂಟೆಗೆ ಧರೆಗುಡ್ಡೆ ಗ್ರಾಮದ ಸಂಗಬೆಟ್ಟು ಎಂಬಲ್ಲಿಗೆ ತಲುಪುತ್ತಿದ್ದಂತೆ ಕೆಲ್ಲಪುತ್ತಿಗೆ ಕಡೆಯಿಂದ ಸಂಗಬೆಟ್ಟು ಕಡೆಗೆ KA-01-MJ-7666 ನಂಬ್ರದ ಬೋರ್ವೆಲ್ ಲಾರಿಯನ್ನು ಅದರ ಚಾಲಕ ಕರಪ್ಪು ಸ್ವಾಮಿ ಎಂಬಾತನು ಅತೀ ವೇಗ ಹಾಗು ಅಜಾ ಗರೂಕತೆಯಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿ ಕೊಂಡು ಬಂದು ಪಿರ್ಯಾ ಧಿದಾರರಿದ್ದ ಸ್ಕೂಟರಿಗೆ ಡಿಕ್ಕಿ ಪಡಿಸಿದ ಪರಿಣಾಮ ಸ್ಕೂಟರಿನಲ್ಲಿದ್ದ ಇಬ್ಬರೂ ರಸ್ತೆಗೆ ಎಸೆಯಲ್ಪಟ್ಟು ಪಿರ್ಯಾ‍ಧಿದಾರರಿಗೆ ಬಲ ಕಾಲಿನ ಪಾದಕ್ಕೆ ಗಂಭೀರ ರೀತಿಯ ಸೀಳು ಗಾಯ ಮತ್ತು ಸ್ಕೂಟರಿನ ಸಹ ಸವಾರ ರತ್ನಾಕರ ಎಂಬವರಿಗೆ ಬಲ ಕಾಲಿಗೆ, ಬಲ ಕೈಗೆ ಸಾಮಾನ್ಯ ಸ್ವರೂಪದ ಗಾಯವುಂಟಾಗಿ ಚಿಕಿತ್ಸೆಯ ಬಗ್ಗೆ ಮೌಂಟ್ ರೋಸಾರಿಯೋ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ ಎಂಬಿತ್ಯಾದಿ

 

ಇತ್ತೀಚಿನ ನವೀಕರಣ​ : 31-01-2024 09:14 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080