Feedback / Suggestions

CEN Crime PS Mangaluru City

ಪಿರ್ಯಾದಿದಾರರು ಡೆಂಟಲ್  ಟೆಕ್ನಾಲಾಜಿ ವ್ಯಾಸಂಗ ಡಿಕೊಂಡಿರುವುದಾಗಿದೆ.ದಿನಾಂಕ 01-03-2023 ರಂದು ಯಾರೋ ಅಪರಿಚಿತ ವ್ಯಕ್ತಿ ಪಿರ್ಯಾದಿದಾರರ ವಾಟ್ಸಪ್  ನಂಬ್ರ  ನೇ ದಕ್ಕೆ ಲಿಂಕ್ ಅನ್ನು ಕಳುಹಿಸಿ  ಪಿರ್ಯಾದಿದಾರರು ಸದ್ರಿ ಲಿಂಕ್ ಮೇಲೆ ಕ್ಲಿಕ್ ಮಾಡಿರುತ್ತಾರೆ ಆ ಬಳಿಕ ದಿನಾಂಕ 03-03-2023 ರಿಂದ 04-03-2023ರ ವರೆಗೆ ಪಿರ್ಯಾದಿದಾರರ ಎಸ್.ಬಿ.ಐ ಖಾತೆ ಸಂಖ್ಯೆ  ನೇದರಿಂದ ಹಂತ ಹಂತ ವಾಗಿ ಒಟ್ಟು 1,11,500/- ರೂ ಗಳು ಕಡಿತಗೊಂಡಿರುತ್ತದೆ. ಇದರ ಬಗ್ಗೆ ಪಿರ್ಯಾದಿದಾರರು ತಮ್ಮ ಬ್ಯಾಂಕಿನಲ್ಲಿ ವಿಚಾರಿಸಿದಾಗ ಅಪರಿಚಿತ ವ್ಯಕ್ತಿಯ ಇಂಡಸ್ ಸಿಂದ್  ಬ್ಯಾಂಕ್ ಸಿಕಾರ್ ಜಿಲ್ಲೆ ರಾಜಾಸ್ಥಾನ್  ಲಚ್ ಮಾಂಗ್ ಶಾಖೆ ಖಾತೆ ಸಂಖ್ಯೆ 252601081997 ನೇದಕ್ಕೆ ವರ್ಗಾವಣೆ ಯಾಗಿರುವುದು ಕಂಡು ಬಂದಿರುತ್ತದೆ. ಪಿರ್ಯಾದಿದಾರರು ತಮ್ಮ ಮೊದಲನೇ ಸೆಮಿಸ್ಟರ್ ಪರೀಕ್ಷೆಯಲ್ಲಿ  ನಿರತರಾಗಿದ್ದು ಕಾರಣ ದೂರು ನೀಡಲು ವಿಳಂಬವಾಗಿದ್ದು ಈ ದಿನ ಠಾಣೆಗೆ ಹಾಜರಾಗಿ ತಮ್ಮ ಎಸ್.ಬಿ.ಐ ಖಾತೆಯಿಂದ ಹಣ ವರ್ಗಾಯಿಸಿಕೊಂಡ ಅಪರಿಚಿತ ವ್ಯಕ್ತಿಯ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಎಂಬಿತ್ಯಾದಿ..

Mulki PS

ದಿನಾಂಕ: 30-03-2023 ರಂದು ಪಿರ್ಯಾದಿದಾರರಾದ ಮುಲ್ಕಿ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ಮಾರುತಿ ಪಿ ರವರು ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುತ್ತಾ 18:20 ಗಂಟೆಗೆ ಪಿರ್ಯಾದಿದಾರರಿಗೆ ಮುಲ್ಕಿಯ ವಿಜಯ ಸನ್ನಿಧಿ ಎಂಬಲ್ಲಿ ಸಾರ್ವಜನಿಕ ರಸ್ತೆಯ ಬದಿಯಲ್ಲಿ ಒರ್ವ ವ್ಯಕ್ತಿಯು ಗಾಂಜಾವನ್ನು ಹೊಗೆ ಬತ್ತಿಯೊಂದಿಗೆ ಸೇದುತ್ತಿರುವುದಾಗಿ ಬಂದ ಖಚಿತ ಮಾಹಿತಿಯಂತೆ ಪಿರ್ಯಾದಿದಾರರು  18:30 ಗಂಟೆಗೆ ಮಾಹಿತಿಯಲ್ಲಿ ತಿಳಿಸಿದ ಸ್ಥಳಕ್ಕೆ ಬಂದಾಗ ಮುಲ್ಕಿಯ ವಿಜಯ ಸನ್ನಿಧಿ ಎಂಬಲ್ಲಿ ಸಾರ್ವಜನಿಕ ರಸ್ತೆಯ ಬದಿಯಲ್ಲಿ ಒರ್ವ ವ್ಯಕ್ತಿಯು ಹೊಗೆಬತ್ತಿ ಸೇದುತ್ತಿರುವುದು ಕಂಡುಬಂದಿದ್ದು, ಆತನನ್ನು ವಿಚಾರಿಸಲಾಗಿ ಆತನು ತನ್ನ ಹೆಸರು ಶ್ರೀನಿವಾಸ ಎಂದು ತಿಳಿಸಿ ಆತನು ತಾನು ಗಾಂಜಾವನ್ನು ಹೊಗೆಬತ್ತಿಯೊಂದಿಗೆ ಸೇದಿರುವುದಾಗಿ ತಪ್ಪೊಪ್ಪಿಕೊಂಡಿದ್ದು ವೈದ್ಯಕೀಯ ತಪಾಸಣೆ ನಡೆಸುವ ಬಗ್ಗೆ ಮಂಗಳೂರು ಎ.ಜೆ. ಆಸ್ಪತ್ರೆಗೆ  ಆರೋಪಿಯನ್ನು ಕಳುಹಿಸಿಕೊಡಲಾಗಿದ್ದು ಆಸ್ಪತ್ರೆಯಲ್ಲಿ ಆರೋಪಿಯನ್ನು ಪರೀಕ್ಷಿಸಿದ ವೈದ್ಯರು ಗಾಂಜಾ ಸೇವನೆ ಮಾಡಿರುವುದಾಗಿ ಪರೀಕ್ಷಾ ವರದಿಯ ದೃಢಪತ್ರವನ್ನು ದಿನಾಂಕ : 31-03-2023 ರಂದು ನೀಡಿದ್ದು, ಈ ಬಗ್ಗೆ ಆರೋಪಿಯ ವಿರುದ್ದ ಕಲಂ:  ಎನ್.ಡಿ.ಪಿ.ಎಸ್ ಕಾಯ್ದೆಯಂತೆ ಪ್ರಕರಣ ದಾಖಲಿಸಿರುವುದಾಗಿ ಎಂಬಿತ್ಯಾದಿಯಾಗಿರುತ್ತದೆ.

 

 Mangalore East PS

 ಮಂಗಳೂರು ಪೂರ್ವ ಪೊಲೀಸ್ ಠಾಣಾ  ಸುರೇಶ್ ಹಾಗೂ ಪಿ.ಸಿ- ರಾಘವೆಂದ್ರ ದಿನಾಂಕ: 31-03-2023 ರಂದು ಬೆಳಿಗ್ಗೆ 07-40 ಗಂಟೆ ಸಮಯಕ್ಕೆ ಇಲಾಖಾ ವಾಹನದಲ್ಲಿ ಮಾರ್ನಿಂಗ್ ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ ಮಂಗಳೂರು ನಗರದ ನಂತೂರು ಜಂಕ್ಷನ್ ಬಳಿಯ ಬಸ್ ಸ್ಟಾಪ್ ನಲ್ಲಿ ಒಬ್ಬನ್ನು ಯಾವುದೋ ಮಾದಕ ವಸ್ತು ಸೇವಿಸಿದಂತೆ ಕಂಡು ಬಂದಿರುವುದರಿಂದ ಮಾದಕ ವಸ್ತು ಸೇವನೆ ಮಾಡಿರುವ ಬಗ್ಗೆ ವೈದ್ಯಕೀಯ ತಪಾಸಣೆಗೆ ಏ.ಜೆ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು, ವೈದ್ಯರು ಪರೀಕ್ಷಿಸಿ Tetrahydracannabinoid (Marijuana) 50 ng per ml POSITIVE ಎಂದು ವರದಿ ನೀಡಿರುತ್ತಾರೆ. ಅದುದರಿಂದ ಈತನ ವಿರುದ್ದ ಮಾದಕ ದ್ರವ್ಯ ಕಾಯ್ದೆ ಅಡಿ ಕಾನೂನು ಕ್ರಮ ಕೈಗೊಂಡಿರುವುದಾಗಿದೆ.

Bajpe PS

ದಿನಾಂಕ 31-03-2023 ರಂದು ಬೆಳಗ್ಗೆ  10-30 ಗಂಟೆಗೆ ಠಾಣಾ ವ್ಯಾಪ್ತಿಯ ಕಂದಾವರ ಗ್ರಾಮದ ಅದ್ಯಪಾಡಿ ದ್ವಾರದ ಬಳಿಗೆ ಎಂಬಲ್ಲಿ ಯುವಕನೊಬ್ಬ ಸೀಗರೇಟ್ ಸೇದುತ್ತಿರವುದು ಕಂಡು ಬಂದಿದ್ದು ವಿಚಾರಿಸಿದಾಗ ಸದ್ರಿಯವನ ಹೆಸರು  ಮೊಹಮ್ಮದ್ ಸೈಫ್  (22)   ವಾಸ:- ಜುಮ್ಮ ಮಸೀದಿ ಬಳಿ ಗುರುಕಂಬ್ಳ ಅಂಚೆ ಮೂಡುಪೆರೆರಾ ಗ್ರಾಮ ಮಂಗಳೂರು  ತಾಲೂಕು ದ.ಕ ಜಿಲ್ಲೆ  ಎಂದು ತಿಳಿಸಿದ್ದು ಸದ್ರಿಯವನನ್ನು ವಶಕ್ಕೆ ಪಡೆದು ತಜ್ಞ ವೈದ್ಯರಲ್ಲಿ ಕಳುಹಿಸಿಕೊಟ್ಟಲ್ಲಿ ವೈದ್ಯರು ಸದ್ರಿಯವರನ್ನು ಪರೀಕ್ಷೆಗೆ ಒಳಪಡಿಸಿ ಗಾಂಜಾ ಸೇವನೆ ಮಾಡಿರುವ ಬಗ್ಗೆ ದೃಡ ಪತ್ರ ನೀಡಿರುತ್ತಾರೆ. ಆದ್ದರಿಂದ ಗಾಂಜಾ ಸೇವನೆ ಮಾಡುತ್ತಿದ್ದ ಆಪಾಧಿತನ ವಿರುದ್ದ NDPS ಕಾಯ್ದೆ 1985 ಪ್ರಕಾರ ಕಾನೂನು ಕ್ರಮ ಕೈಗೊಂಡಿರುವುದಾಗಿದೆ ಎಂಬಿತ್ಯಾದಿಯಾಗಿರುತ್ತದೆ.

Mangalore North PS                                      

ದಿನಾಂಕ: 31-03-2023 ರಂದು ಬೆಳಿಗ್ಗೆ ಲೋವರ್ ಕಾರ್ಸ್ಟ್ರೀಟ್ , ಅಳಕೆ , ಕುದ್ರೋಳಿ ಕರ್ಬಲಾ ರೋಡ್ ಬಳಿ ಬೆಳಿಗ್ಗೆ ಸುಮಾರು 10-45 ಗಂಟೆಗೆ ಅನೀಶ್ ಅಶ್ರಫ್, ಪ್ರಾಯ 25 ವರ್ಷ,  ವಾಸ: ಹೋಟೆಲ್ ಇಂಪಿರಿಯಲ್ ರೋಡ್, ನಿಯರ್ ಎಫ್.ಆರ್. ಚಿಕನ್ ಸ್ಟಾಲ್ , ಕರ್ಬಲಾ ರೋಡ್, ಕುದ್ರೋಳಿ, ಮಂಗಳೂರು  ಎಂಬಾತನು ಗಾಂಜಾ ಸೇವನೆ ಮಾಡಿದ್ದು  ವೈದ್ಯಕೀಯ ಪರೀಕ್ಷೆ ಬಗ್ಗೆ ಮಂಗಳೂರು ಕುಂಟಿಕಾನದಲ್ಲಿರುವ ಎ.ಜೆ. ಆಸ್ಪತ್ರೆಗೆ ಸಿಬ್ಬಂದಿಗಳ  ಭದ್ರಿಕೆಯಲ್ಲಿ ಕೋರಿಕೆ ಪತ್ರದೊಂದಿಗೆ ಹಾಜರುಪಡಿಸಿದಲ್ಲಿ, ಎ.ಜೆ. ಆಸ್ಪತ್ರೆಯ ವೈದ್ಯರು ಆತನನ್ನು ಪರೀಕ್ಷಿಸಿದಲ್ಲಿ ಅನೀಶ್ ಅಶ್ರಫ್ ಎಂಬಾತನು Tetrahydracannabinoid (Marijuana) ಎಂಬ ಮಾದಕ ದ್ರವ್ಯಗಳನ್ನು ಸೇವನೆ ಮಾಡಿರುವುದಾಗಿ ತಿಳಿಸಿ ಮದ್ಯಾಹ್ನ 12-15 ಗಂಟೆಗೆ ವರದಿಯನ್ನು ನೀಡಿರುವ ಮೇರೆಗೆ  ಎನ್.ಡಿ.ಪಿ.ಎಸ್. ಕಾಯ್ದೆ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದು ಎಂಬಿತ್ಯಾದಿ.

    

Surathkal PS

ದಿ: 31-03-2023 ರಂದು  ಪ್ರದೀಪ್ ಟಿ ಆರ್ ಪಿ ಎಸ್ ಐ ( ಕಾನೂನು ಮತ್ತು ಸುವ್ಯವಸ್ಥೆ-1) ರವರು ಠಾಣಾ ರೌಡಿ ಹಾಳೆ  ಹೊಂದಿರುವವರನ್ನು ಚೆಕ್ ಮಾಡಿ ಅವರ ಚಲನವಲನಗಳ ಬಗ್ಗೆ ನಿಗಾವಿರಿಸಿ ಸಾರ್ವಜನಿಕರಿಗೆ  ಮತದಾನಕ್ಕೆ ತೊಂದರೆಯಾಗದಂತೆ ಕಾನೂನು ಸುವ್ಯವಸ್ಥೆ ಬಗ್ಗೆ ಕೋಡಿಕೆರೆ ಕಡೆಗೆ ಹೋಗಿ ಅಲ್ಲಿನ ವಾಸಿ  ಲೋಕೇಶ್ ಕೋಡಿಕೆರೆ @ ಲೋಕು ಈತನ ಮನೆ ಬಳಿಗೆ ಬೆಳಿಗ್ಗೆ 10:00 ಗಂಟೆಗೆ ಹೋಗಿದ್ದು ಸದ್ರಿ ಮನೆಯಲ್ಲಿದ್ದ ಲೋಕೇಶ್ ಕೋಡಿಕೆರೆ @ ಲೋಕು ಈತನನ್ನು ಹೊರ ಕರೆದು ವಿಚಾರಣೆ ನಡೆಸಿದ ಸಮಯ ನಶೆಯಲ್ಲಿದ್ದು,  ಅಮಲಿನರುವಂತೆ ಆತನ ವರ್ತನೆ ಇತ್ತು, ಸಂಶಯಗೊಂಡು ವಿಚಾರಿಸಿದಾಗ ದಿ: 30-03-2023 ರಂದು ಸಂಜೆ ಮನೆಯ ಬಳಿ ರಸ್ತೆಯಲ್ಲಿ ಸೀಗರೇಟ್ ಬತ್ತಿಯೊಂದಿಗೆ  ಗಾಂಜಾ ಎಂಬ ಮಾದಕ ವಸ್ತುವನ್ನು ಸೇವನೆ ಮಾಡಿದ್ದಾಗಿ ತಿಳಿಸಿದಂತೆ  ಎ.ಜೆ ಆಸ್ಪತ್ರೆಗೆ ಕಳುಹಿಸಿಕೊಟ್ಟಲ್ಲಿ ಅಲ್ಲಿನ ವೈದ್ಯಾಧಿಕಾರಿಯವರು ಪರೀಕ್ಷಿಸಿ “ Tetrahydracannabinoid : POSITIVE, The drug one step screen test panel (Urine) is an immunoassay based on the principle of competitive binding” ಎಂಬುದಾಗಿ ನೀಡಿದ ವರದಿಯನ್ನು ಸ್ವೀಕರಿಸಿ ಆರೋಪಿ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದು ಎಂಬಿತ್ಯಾದಿ.

Mangalore South PS                    

ದಿನಾಂಕ 31-03-2023 ರಂದು   ಬೆಳಿಗ್ಗೆ  9-50 ಗಂಟೆ ಸುಮಾರಿಗೆ ಮಂಗಳೂರು ನಗರದ ಮಾರ್ಗನ್ಸ್ ಗೇಟ್ ಭಾರತ್ ಮೈದಾನದ  ಬಳಿಯಲ್ಲಿ ಆರೋಪಿ ಅಮಿತ್ ರಾಜ್ ಶೆಟ್ಟಿ, ಪ್ರಾಯ 33 ವರ್ಷ, ವಿಳಾಸ : ರಾಮ ಆಳ್ವ ಕಂಪೌಂಡ್, ಎಮ್ಮೆಕೆರೆ, ಬೋಳಾರ, ಮಂಗಳೂರು ಎಂಬಾತನು ಮಾದಕ ವಸ್ತು ಗಾಂಜಾ ಸೇವನೆ ಮಾಡಿಕೊಂಡು ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದವನನ್ನು,  ಬೆಳಿಗ್ಗೆ  10-00 ಗಂಟೆಗೆ ವಶಕ್ಕೆ ಪಡೆದುಕೊಂಡು ಮಂಗಳೂರು ನಗರದ ಎ.ಜೆ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯ ವೈದ್ಯಾಧಿಕಾರಿಯವರ ಮುಂದೆ  ವೈದಕೀಯ ಪರೀಕ್ಷೆ ಬಗ್ಗೆ ಹಾಜರುಪಡಿಸಿದ್ದು, ಆರೋಪಿಯು ಗಾಂಜಾ ಸೇವನೆ ಮಾಡಿರುವುದು ದೃಡಪಟ್ಟಿರುತ್ತದೆ. ಈ ಬಗ್ಗೆ ಆರೋಪಿ ವಿರುದ್ದ ಎನ್.ಡಿ.ಪಿ.ಎಸ್ ಆಕ್ಟ್ ರಂತೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿರುವುದಾಗಿದೆ, ಎಂಬಿತ್ಯಾದಿಯಾಗಿರುತ್ತದೆ.

Barke PS

ಮೊಹಿದ್ದೀನ್ ಸಿರಾಜ್ ಪ್ರಾಯ 44 ವರ್ಷ ಎಂಬವರು ಮಂಗಳೂರು ಲಾಲ್ ಭಾಗ್ ಸಾಯಿಬೀನ್ ಕಾಂಪ್ಲೇಕ್ಸ್ ನ ನೆಲ ಅಂತಸ್ತಿನಲ್ಲಿರುವ DO IT ಎಂಬ ಶಾಪ್ ನಲ್ಲಿ 85% ಪ್ರತಿಶತ ಅದರ ಸೇವನೆಯಿಂದ ಆಗುವ ದುಷ್ಪರಿಣಾಮದ ಚಿತ್ರವನ್ನು ಪ್ರದರ್ಶಿಸದೇ ಇರುವ ವಿದೇಶಿ ಹಾಗೂ ಸ್ವದೇಶಿ ಸಿಗರೇಟ್ ಗಳನ್ನು ಮಾರಾಟ ಮಾಡಲು ಯಾವುದೇ ಪರವಾಣಿಗೆ ಹೊಂದದೇ ತಮ್ಮ ಅಂಗಡಿಯಲ್ಲಿ ಆಕ್ರಮ ಲಾಭಗಳಿಸುವ ಉದ್ದೇಶದಿಂದ ಶೇಖರಿಸಿಟ್ಟಿದ್ದನ್ನು ಪಿರ್ಯಾದಿದಾರರಾದ ಮನೋಹರ ಪ್ರಸಾದ್ ಪಿ ರವರು ಮೇಲಾಧಿಕಾರಿಗಳ ಜ್ಞಾಪನದಂತೆ ಸಿಬ್ಬಂದಿಗಳ ಜೊತೆಯಲ್ಲಿ ದಾಳಿ ನಡೆಸಿ ಒಟ್ಟು 6,280 ವಿವಿಧ ಕಂಪೆನಿಯ ಸಿಗರೇಟ್ ವಿದೇಶಿ/ಸ್ವದೇಶಿ ಸಿಗರೇಟ್ ಗಳನ್ನು ಮಹಜರು ಮುಖಾಂತರ ಸ್ವಾಧೀನಪಡಿಸಿಕೊಂಡು ವರದಿಯೊಂದಿಯೊಂದಿಗೆ ಠಾಣೆಗೆ ಬಂದು ನೀಡಿದ ಪಿರ್ಯಾದಿಯನ್ನು ಸ್ವೀಕರಿಸಿ Cotpa act  ರಂತೆ ಪ್ರಕರಣ ದಾಖಲಿಸಿಕೊಂಡಿರುವುದಾಗಿದೆ ಎಂಬಿತ್ಯಾದಿ.

Last Updated: 21-08-2023 12:23 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : Mangaluru City Police
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080