ಅಭಿಪ್ರಾಯ / ಸಲಹೆಗಳು

 

 Crime Report in Mangalore East Traffic PS  

ಪಿರ್ಯಾದಿದಾರರಾದ  ಎಸ್.ಜೋಷವಾರವರು ದಿನಾಂಕ 30-07-2023 ರಂದು ರಾತ್ರಿ ತನ್ನ ಬಾಬ್ತು KA-19-HK-8500 ನೇ ನಂಬ್ರದ ಮೊಟಾರು ಸೈಕಲ್ ನಲ್ಲಿ ಸ್ನೇಹಿತ ಸುಮಿತ್ ರವರೊಂದಿಗೆ ಹಾಗೂ KA-19-HJ-2485 ನಂಬ್ರದ ಮೋಟಾರು ಸೈಕಲ್ ನಲ್ಲಿ ಸ್ನೇಹಿತರಾದ ಅಂಕಿತ್ ಜಿ ಮತ್ತು ಆರ್ಯನ್ ರವರು ಸವಾರರಾಗಿ ಸ್ನೇಹಿತ ಆರ್ಯನ್ ನನ್ನು ಆತನ ಮನೆಯಾದ ಕುಲಶೇಕರ ಕೈಕಂಬಕ್ಕೆ ಬಿಟ್ಟುಬರಲು ಹೋಗಿದ್ದು ರಾತ್ರಿ ಸುಮಾರು 10:30 ಗಂಟೆಗೆ ಆರ್ಯನ್ ನನ್ನು ಬಿಟ್ಟು ವಾಪಸ್ಸು ಕೋಡಿಕಲ್ ಕಡೆಗೆ ಹೊರಟು ಕುಲಶೇಕರ ಕೈಕಂಬ ಕಡೆಯಿಂದ ನಂತೂರು ಕಡೆಗೆ ಹಾದು ಹೋಗಿರುವ ರಾ.ಹೆ. 73 ನೇ ಡಾಮಾರು ರಸ್ತೆಯಲ್ಲಿ KA-19-HJ-2485 ನಂಬ್ರ ಮೋಟಾರು ಸೈಕಲನ್ನು ಸ್ನೇಹಿತ ಅಂಕಿತ್ ಜಿ ಒಬ್ಬನೇ ವೇಗವಾಗಿ ಸವಾರಿ ಮಾಡಿಕೊಂಡು ಮುಂದುಗಡೆ ಹೊಗುತ್ತಿದ್ದು, ಪಿರ್ಯಾದಿದಾರರು ಸ್ನೇಹಿತ ಸುಮಿತ್ ನೊಂದಿಗೆ KA-19-HK-8500 ನೇ ನಂಬ್ರದ ಮೊಟಾರು ಸೈಕಲ್ ನಲ್ಲಿ ಆತನ ಹಿಂದಿನಿಂದ ಹೋಗುತ್ತಾ ರಾತ್ರಿ ಸುಮಾರು 10:32 ಗಂಟೆಗೆ ಬಿಕರ್ಣಕಟ್ಟೆಯಲ್ಲಿರುವ ಮಸೀದಿಯ ಎದುರುಗಡೆ ತಲುಪಿದಾಗ ಮಸೀದಿಯ ಎದುರು ಡಾಮಾರು ಕಿತ್ತು ಹೋದ ಸ್ಥಳದಲ್ಲಿ ವೇಗವಾಗಿ ಹೋಗುತ್ತಿದ್ದ ಪಿರ್ಯಾದಿದಾರರ ಸ್ನೇಹಿತ ಅಂಕಿತ್. ಜಿ ಕಂಟ್ರೋಲ್ ತಪ್ಪಿ ಮೋಟಾರ್ ಸೈಕಲ್ ಎಡಕ್ಕು ಬಲಕ್ಕು ಚಲಿಸಿದ್ದು  ಬಳಿಕ ಆತನ ನಿಯಂತ್ರಣಕ್ಕೆ ಬಾರದೇ ರಸ್ತೆಯ ತೀರಾ ಎಡ ಭಾಗಕ್ಕೆ ಚಲಿಸಿ ರಸ್ತೆಯಿಂದ ಕೆಳಗಿಳಿದು ಬಿಕರ್ಣಕಟ್ಟೆಯಲ್ಲಿರುವ ಪ್ರಮೋದ್ ನರ್ಸರಿ ಎದುರುಗಡೆ ರಸ್ತೆ ಬದಿಯಲ್ಲಿ ನಿಲ್ಲಿಸಿದ  KA-19-MC-2052 ನೇ ನಂಬ್ರದ ಓಮ್ನಿ ಕಾರಿನ ಎಡ ಬದಿಯ ಹಿಂಬದಿಗೆ ಡಿಕ್ಕಿಯಾದ ಪರಿಣಾಮ ಸವಾರ ಅಂಕಿತ್ ಜಿ  ಮೋಟಾರು ಸೈಕಲ್ ನಿಂದ ಕೆಳಗೆ ಚರಂಡಿಗೆ ಬಿದ್ದಿದ್ದು ಮೋಟಾರು ಸೈಕಲ್ ಪಲ್ಟಿಯಾಗಿ ಹೋಗಿ ಪ್ರಮೋದ್ ನರ್ಸರಿಯ ಗೇಟಿಗೆ ಡಿಕ್ಕಿಯಾಗಿ ನಿಂತಿರುತ್ತದೆ. ಅಪಘಾತದಲ್ಲಿ ಸವಾರ ಅಂಕಿತ್ ಜಿ ಗೆ ತಲೆಗೆ ಗಂಭೀರ ಸ್ವರೂಪದ ಗಾಯಗೊಂಡವನನ್ನು ಚಿಕಿತ್ಸೆ ಬಗ್ಗೆ ಕಾರೊಂದರಲ್ಲಿ ಫಾದರ್ ಮುಲ್ಲರ್ ಆಸ್ಪತ್ರೆಗೆ ಸಾಗಿಸಲಾಗಿದ್ದು ರಾತ್ರಿ 11:05 ಗಂಟೆಗೆ ಪರೀಕ್ಷಿಸಿದ ವೈದ್ಯರು ಆತನು ಅದಾಗಲೇ ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಅಪಘಾದ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೋಳ್ಳಬೆಕಾಗಿ ಕೋರಿಕೆ.

    

CEN Crime PS

2023 ರ ಮೇ ತಿಂಗಳ ಅಂತ್ಯದಲ್ಲಿ ಫಿರ್ಯಾದುದಾರರಿಗೆ ದೀಪಕ್ ಪಾಂಡೆ ಎನ್ನುವ ವ್ಯಕ್ತಿ ಮೊಬೈಲ್ ನಂಬ್ರ:7892710804 ದಿಂದ ಫಿರ್ಯಾದುದಾರರ ಮೊಬೈಲ್ ನೇದಕ್ಕೆ ಕರೆ ಮಾಡಿ ತಾನು, RARE INDIA RESEARCH “INSTITUTE OF AYURVEDA SANSTHAN” ದಿಂದ ಕರೆ ಮಾಡುವುದು  ನಮ್ಮ ಸಂಸ್ಥೆಯು ಸರಕಾರದಿಂದ ಮಾನ್ಯತೆ ಪಡೆದಿದ್ದು, ಭಾರತದಾದ್ಯಂತ ಶಾಖೆಗಳನ್ನು ಹೊಂದಿರುವುದಾಗಿ ತಿಳಿಸಿ, ನಮ್ಮ ಸಂಸ್ಥೆಯು ಮೆಘಾ ಡ್ರಾದ ಕೂಪನ್ ನ್ನು ಕಳುಹಿಸುತ್ತಿರುವುದಾಗಿ ತಿಳಿಸಿದ್ದರು. ಇದಾದ ಬಳಿಕ ದಿನಾಂಕ 10-06-2023 ರಂದು ಫಿರ್ಯಾದುದಾರರ ಹೆಸರಿಗೆ ಒಂದು ಕೊರಿಯರ್ ಸ್ವೀಕೃತವಾಗಿದ್ದು, ಅದರಲ್ಲಿ “AMRIT DHARA AYURVEDA SANSTHAN”  ಎಂಬುದಾಗಿ ಹೆಸರಿದ್ದು ಅದರಲ್ಲಿ ಸ್ಕ್ರಾಚ್ ಕೂಪನ್ ಇದ್ದು, ಹೆಲ್ಪ್ ಲೈನ್ ಎಂದು 9163837565 ಎಂಬ ಮೊಬೈಲ್ ಇತ್ತು. ಸದ್ರಿ ಸ್ಕ್ರಾಚ್ ಕಾರ್ಡ್ ನ್ನು ಸ್ಕ್ರಾಚ್ ಮಾಡಿದಾಗ ಫಿರ್ಯಾದುದಾರರಿಗೆ ರೂಪಾಯಿ 14,99,000/- ಮೌಲ್ಯದ VEHICHLE AD9YC63 ಗೆದ್ದಿರುವುದಾಗಿ ನಮೂದಿಸಿತ್ತು. ಇದನ್ನು ತಿಳಿದ ಫಿರ್ಯಾದುದಾರರು ಹೆಲ್ಪ್ ಲೈನ್ ಎಂದು  ನಮೂದು ಇದ್ದ 9163837565 ನೇದಕ್ಕೆ ಕರೆ ಮಾಡಿದಾಗ ಕರೆ ಸ್ವೀಕರಿಸಿದ ಪಂಕಜ್ ಸಿಂಗ್ ಭದೂರಿಯಾ ಎಂಬ ವ್ಯಕ್ತಿ ಫಿರ್ಯಾದುದಾರರಿಗೆ ಮೊದಲನೆ ಬಹುಮಾನ ಬಂದಿರುವುದಾಗಿ ನಂಬಿಸಿದ್ದು, 0.6%ಪ್ರೈಮರಿ ಫೀಸ್ ಕಟ್ಟಬೇಕೆಂದು ತಿಳಿಸಿದಾಗ ಫಿರ್ಯಾದುದಾರರ ಅವರ ಮಾತನ್ನು ನಂಬಿ ದಿನಾಂಕ 12-06-2023 ರಂದು ರೂಪಾಯಿ 9,000/- ಬಳಿಕ 15,000/- ಮತ್ತು ದಿನಾಂಕ 13-06-20223 ರಂದು 5,600/-  ಮೊತ್ತವನ್ನು ಆರೋಪಿಗಳ ವಿವಿಧ ಬ್ಯಾಂಕ್ ಗಳಿಗೆ ವರ್ಗಾಯಿಸಿದ್ದು, ನಂತರ ಜಿ.ಎಸ್.ಟಿ. ಮತ್ತು ಟಿ.ಡಿ.ಎಸ್. ಕಟ್ಟಬೇಕೆಂದು ಆರೋಪಿಗಳು ತಿಳಿಸಿದಾಗ ಫಿರ್ಯಾದುದಾರರು ಆರೋಪಿಗಳ ಮಾತನ್ನು ನಂಬಿ ಬಳಿಕ 12-06-2023 ರಿಂದ 19-07-2023 ರ ತನಕ ಒಟ್ಟು 90,400/- ಆರೋಪಿಗಳ ಖಾತೆಗೆ ವರ್ಗಾಯಿಸಿದ್ದು, ಆರೋಪಿಗಳು RARE INDIA RESEARCH “INSTITUTE OF AYURVEDA SANSTHAN” ದಿಂದ ಕರೆ ಮಾಡುವುದು   ಎಂದು ನಂಬಿಸಿ ಫಿರ್ಯಾದುದಾರರಿಂದ ಹಣವನ್ನು ವಿವಿಧ ಬ್ಯಾಂಕ್ ಗಳಿಗೆ ವರ್ಗಾಯಿಸಿ ಮೋಸ ವಂಚನೆ ಮಾಡಿರುವುದಾಗಿದೆ ಎಂಬಿತ್ಯಾದಿ

        

Barke PS

ದಿನಾಂಕ 29-07-2023 ರಂದು 19-00 ಗಂಟೆಗೆ ಬೋಳೂರು ಗ್ರಾಮದ ನ್ಯಾಷನಲ್ ಬೋಳೂರು ಬಳಿಯಿರುವ ಮಯೂರ ಮೈದಾನ ಎಂಬಲ್ಲಿ ನಿಷೇಧಿತ ಮಾದಕ ವಸ್ತು ಗಾಂಜಾವನ್ನು ಬಂದರು ಮತ್ತು ಅಳಕೆ ನಿವಾಸಿಗಳಾದ ಗಣೇಶ್ ಮತ್ತು ರಾಹುಲ್ ಗಟ್ಟಿ ಎಂಬುವರು ಅಂದಾಜು 2 ಕೆ.ಜಿಗಿಂತಲೂ ಹೆಚ್ಚು ಮಾದಕ ವಸ್ತು ಗಾಂಜಾವನ್ನು ಖರೀದಿಸಿಕೊಂಡು ಮಂಗಳೂರಿನ ಯುವಕ/ಯುವತಿಯರಿಗೆ ಮತ್ತು ಸಾರ್ವಜನಿಕರಿಗೆ ಮಾರಾಟ ಮಾಡಿ ಹಣಗಳಿಸುವ ಉದ್ದೇಶದಿಂದ ಆಟೋ ರಿಕ್ಷಾ ವಾಹನ ಸಂಖ್ಯೆ ಕೆಎ19 ಎಎ2906 ನೇದರಲ್ಲಿ ಮಾರಾಟ ಮಾಡುತ್ತಿರುವುದಾಗಿ ಮಾಹಿತಿ ಯಂತೆ ಬೋಳೂರು ಬಳಿಯಿರುವ ಮಯೂರ ಮೈದಾನದಲ್ಲಿ ಕೆಎ19 ಎಎ2906 ನೇ ನೊಂದಣಿ ಸಂಖ್ಯೆಯ ಆಟೋ ರಿಕ್ಷಾದಲ್ಲಿ ಇದ್ದ ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಿಸಲಾಗಿ  ರಾಹುಲ್ ಗಟ್ಟಿ (25) ವಾಸ: ಕಮಲಾ ನಿವಾಸ ಭೋಜರಾವ್ ಲೇನ್, ಡೊಂಗರಕೇರಿ ಮಂಗಳೂರು ಮತ್ತು ಗಣೇಶ್ ಪ್ರಾಯ 28 ವರ್ಷ ವಾಸ: ಸೂರಜ್ & ಡೈಮಂಡ್ ಅಪಾರ್ಟಮೆಂಟ್, ಭಾರತ್ ಬೀಡಿ ಕಾಂಪ್ಲೆಕ್ಸ್ ಹತ್ತಿರ, ಅಜುಜೀದ್ದಿನ್ ರಸ್ತೆ, ಮಂಗಳೂರು ಎಂಬುದಾಗಿದ್ದು  ಆರೋಪಿಗಳ ವಶದಲ್ಲಿದ್ದ 1). 2.ಕೆ.ಜಿ 33 ಗ್ರಾಂ ತೂಕದ  ನಿಷೇದಿತ ಮಾದಕ ವಸ್ತು ಗಾಂಜಾ ಇರುವ ಬಿಳಿ ಬಣ್ಣದ ಪ್ಲಾಸ್ಟಿಕ್ ತೊಟ್ಟೆ 2) ತೂಕ ಮಾಪನ, 3) ಕಪ್ಪು ಬಣ್ಣದ ಟ್ರಾಕಿಂಗ್ ಬ್ಯಾಗ್, 4). ಒಪೋ ಕಂಪನಿಯ ಮೊಬೈಲ್ ಪೋನ್ -01 5). 100 ಗ್ರಾಂ ತೂಕವಿರುವ ಗಾಂಜಾ 6). ರೇಡ್ ಮಿ ಕಂಪನಿಯ ಮೊಬೈಲ್ ಪೋನ್ -1 7). ಕೆಎ19 ಎಎ2906 ನೋಂದಣಿ ಸಂಖ್ಯೆಯ ಆಟೋ ರಿಕ್ಷಾ ಗಳನ್ನು ವಶಕ್ಕೆ ಪಡೆದು ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಮಡಿರುವುದು ಎಂಬಿತ್ಯಾದಿ.

 

Panambur PS

ದಿನಾಂಕ: 30-07-2023 ರಂದು 17-00 ಗಂಟೆಗೆ ಮೀನಕಳಿಯಾ ಕ್ರಾಸ್ ಕಡೆಯಿಂದ ಪಣಂಬೂರು ಬೀಚ್ ಕಡೆಗೆ ಹೋಗುವ  ರಸ್ತೆ ಬಳಿ ಯಾವುದೋ ಮಾದಕ ವಸ್ತು ಸೇವನೆ ಮಾಡಿ ಅದರ ನಶೆಯಲ್ಲಿ ಇದ್ದಂತೆ ಕಂಡು ಬಂದ ಚೇತನ್ ಪುತ್ರನ್  ಪ್ರಾಯ 19 ವರ್ಷ, ವಾಸ: ಶೆಟ್ಟಿ ಐಸ್ ಕ್ರೀಮ್ ಹತ್ತಿರ, ಕುಚಿಗುಡ್ಡೆ, ಕುಳಾಯ್, ಸುರತ್ಕಲ್, ಮಂಗಳೂರು ಎಂಬಾತನನ್ನು ವಶಕ್ಕೆ ಪಡೆದುಕೊಂಡಿದ್ದು, ಸದ್ರಿಯವರು ಆತನನ್ನು ವೈದ್ಯಕೀಯ ತಪಾಸಣೆಗೆ ಗುರಿಪಡಿಸಿ ಮಾದಕ ವಸ್ತುಗಳನ್ನು/ ದ್ರವ್ಯಗಳನ್ನು ಸೇವನೆ ಮಾಡಿರುವರೇ ಎಂಬುದರ ಬಗ್ಗೆ ಅಭಿಪ್ರಾಯ ವರದಿ ಪಡೆಯಲು  ವೈದ್ಯಾಧಿಕಾರಿಗಳು ಎ.ಜೆ.ಆಸ್ಪತ್ರೆ,  ಮಂಗಳೂರುರವರ  ಬಳಿ ಕಳುಹಿಸಿಕೊಟ್ಟಿದ್ದು,  ವೈದ್ಯಾಧಿಕಾರಿಗಳು ಪರೀಕ್ಷಿಸಿ The Urine Sample Tested For The Presence of Tetrahydracannabinoid ( Marijuana) is Positive ಎಂದು ವರದಿ ನೀಡಿರುತ್ತಾರೆ. ಆಪಾದಿತ ಗಾಂಜಾ ಸೇವನೆ ಮಾಡಿರುವುದು ದೃಡ ಪಟ್ಟಿರುವುದರಿಂದ ಸದ್ರಿಯವನ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದು ಎಂಬಿತ್ಯಾದಿಯಾಗಿರುತ್ತದೆ.

 

 

 

Surathkal PS

ದಿನಾಂಕ 30-07-2023 ರಂದು ಪಿರ್ಯಾದಿದಾರರಾದ ಸುರತ್ಕಲ್ ಠಾಣಾ ಪಿಸಿ ಮಂಜುನಾಥ್ ವೈ ಬಿ ರವರು ಠಾಣಾ ಹಗಲು ಬೀಟ್ ಬಗ್ಗೆ ಕಳವಾರು ಗ್ರಾಮಕ್ಕೆ ತೆರಳಿದ್ದು ಮದ್ಯಾಹ್ನ 14.30 ಗಂಟೆಗೆ ಕಳವಾರು ಗ್ರಾಮದ ಕಳವಾರು ಚರ್ಚ್ ಮುಂಭಾಗದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಸದ್ರಿ ರಸ್ತೆಯ ಬಲ ಬದಿಯಲ್ಲಿರುವ ಖಾಲಿದ್ ಎಂಬವರ ಅಂಗಡಿಯ ಬಳಿ ಪರಿಚಿತ ರೌಡಿಶೀಟರ್ ಧನರಾಜನು ಕೈಯಲ್ಲಿ ಚಾಕುವಿನಂತೆ ತೋರುವ ವಸ್ತುವನ್ನು ಕೈಯಲ್ಲಿ ಹಿಡಿದುಕೊಂಡಿದ್ದು ರಿಯಾಜ್ @ ಘಂಟೆ ರಿಯಾಜ್ ಎಂಬವನು ಒಡೆದ ಸೋಡಾ ಬಾಟಲಿಯನ್ನು ಹಿಡಿದುಕೊಂಡು ಪರಸ್ಪರ ಒಬ್ಬರನ್ನೊಬ್ಬರು ನಿಂದಿಸುತ್ತಾ ಬೈದಾಡಿಕೊಂಡು ದೂಡಾಡಿಕೊಂಡಿರುವುದನ್ನು ಕಂಡು ಹತ್ತಿರ ಹೋಗಿ ಹಿಡಿಯಲು ಹೋದಾಗ ಅವರಿಬ್ಬರೂ ತಪ್ಪಿಸಿಕೊಂಡು ಓಡಿ ಹೋಗಿರುವುದಾಗಿದೆ ಆರೋಪಿಗಳಿಬ್ಬರೂ. ಸಾರ್ವಜನಿಕರು ಹೆಚ್ಚಾಗಿ ಓಡಾಡುವ ಜನನಿಬೀಡ ರಸ್ತೆಯಲ್ಲಿ ಸಾರ್ವಜನಿಕ ಶಾಂತಿ ಸುವ್ಯವಸ್ಥೆಗೆ ಧಕ್ಕೆಯಾಗುವ ರೀತಿಯಲ್ಲಿ ಪರಸ್ಪರ ಹೊಡೆದಾಡಿಕೊಂಡಿದ್ದರಿಂದ ಅವರುಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವರೇ ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 21-08-2023 02:23 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080