ಅಭಿಪ್ರಾಯ / ಸಲಹೆಗಳು

Crime Reported in Mangalore East Traffic PS                 

ಪಿರ್ಯಾದಿದಾರರಾದ ಅಮೃತ್ ಉಚ್ಚಿಲ್ ರವರು ದಿನಾಂಕ: 31/08/2022 ರಂದು ಬೆಳಿಗ್ಗೆ ತಮ್ಮ ಸ್ಕೂಟರ್ ನೊಂದಣಿ ಸಂಖ್ಯೆ: KA-19-HF-3432 ನೇಯದನ್ನು ಚಲಾಯಿಸಿಕೊಂಡು ಬಲ್ಮಠ ರಸ್ತೆಯ ಮೂಲಕ ಅಂಬೇಡ್ಕರ್ ವೃತ್ತ ಬಳಸಿ ಬಂಟ್ಸ್ ಹಾಸ್ಟೇಲ್ ಕಡೆಗೆ ಹೋಗುತ್ತಿರುವಾಗ ಸಮಯ ಸುಮಾರು ಬೆಳಿಗ್ಗೆ 9-15 ಗಂಟೆಗೆ ಅಂಬೇಡ್ಕರ್ ವೃತ್ತ ತಲುಪಿ ಬಂಟ್ಸ್ ಹಾಸ್ಟೇಲ್ ಕಡೆಗೆ ಸ್ವಲ್ಪ ದೂರ ತಲುಪುತ್ತಿದ್ದಂತೆ ಅವರ ಹಿಂದುಗಡೆಯಿಂದ ವಾಟರ್ ಟ್ಯಾಂಕರ್ ಲಾರಿ ನೊಂದಣಿ ಸಂಖ್ಯೆ: KA-19-AD-2595 ನೇಯದನ್ನು ಅದರ ಚಾಲಕನು ಸದ್ರಿ ಸಾರ್ವಜನಿಕ ರಸ್ತೆಯಲ್ಲಿ ಚಲಾಯಿಸಿಕೊಂಡು ಬರುತ್ತಾ ಪಿರ್ಯಾದಿದಾರರ ಸ್ಕೂಟರನ್ನು ಎಡಭಾಗದಿಂದ ಓವರ್ ಟೇಕ್ ಮಾಡುವ ವೇಳೆ ದುಡುಕುತನ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ ಸದ್ರಿ ಲಾರಿಯ ಬಲ ಹಿಂಭಾಗದ ಚಕ್ರವು ಸ್ಕೂಟರಿಗೆ ಡಿಕ್ಕಿಯಾಗಿ ಪಿರ್ಯಾದಿದಾರರು ಸ್ಕೂಟರ್ ಸಮೇತ ಎಡಕ್ಕೆ ವಾಲಿ ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದಿದಾರರ ಎಡ ಭುಜದಲ್ಲಿ ಮೂಳೆ ಡಿಸ್ ಲೋಕೆಟ್ ಹಾಗೂ ಎಡಕೈ ಕೋಲು ಕೈಯಲ್ಲಿ ಗುದ್ದಿದ ರೀತಿಯ ಹಾಗೂ ಕೈಗಳಿಗೆ ತರಚಿದ ಗಾಯಗಳಾಗಿರುತ್ತವೆ, ಈ ಬಗ್ಗೆ ಪಿರ್ಯಾದಿದಾರರು ಅಥೇನಾ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ಫಾದರ್ ಮುಲ್ಲರ್ ಆಸ್ಪತ್ರೆಗೆ ಬಂದಿರುವುದಾಗಿದೆ ಆದುದರಿಂದ ಈ ರಸ್ತೆ ಅಪಘಾತಪಡಿಸಿದ ಲಾರಿ ಚಾಲಕನ ಮೇಲೆ ಸೂಕ್ತ ಕಾನೂನೂ ಕ್ರಮ ಕೈಗೊಳ್ಳುವಂತೆ ಕೋರಿಕೆ.

Crime Reported in Moodabidre PS

ದಿನಾಂಕ: 30-08-2022 ರಂದು ರಾತ್ರಿ 10-30 ಗಂಟೆಯ ಸಮಯ ಮೂಡಬಿದ್ರೆ ತಾಲೂಕು ಬಡಗ ಮಿಜಾರು ಗ್ರಾಮದ ಅಶ್ವತ್ಥಪುರ ಬೆರಿಂಜೆ ಗುಡ್ಡೆ ಎಂಬಲ್ಲಿರುವ ಪಿರ್ಯಾದು SMT KAMALA ದಾರರ ಮನೆಯಲ್ಲಿ ಪಿರ್ಯಾದುದಾರರು ಹಾಗೂ ಅವರ ನೆರೆಮನೆಯ ನಿವಾಸಿ ಪದ್ಮಾವತಿ ಎಂಬವರು ಇರುವಾಗ ಇಬ್ಬರು ಅಪರಿಚಿತ ವ್ಯಕ್ತಿಗಳು ಬಾಗಿಲನ್ನು ದೂಡಿ ಒಳಗೆ ಬಂದು ಪಿರ್ಯಾದುದಾರರಿಗೆ ಹಾಗೂ ಪದ್ಮಾವತಿಯವರಿಗೆ ಹೆದರಿಸಿ ಪಿರ್ಯಾದುದಾರರ ಕುತ್ತಿಗೆಗೆ ಕೈ ಹಾಕಿ ಪಿರ್ಯಾದುದಾರರ ಕುತ್ತಿಗೆಯಲ್ಲಿದ್ದ ಬಂಗಾರದ ಕರಿಮಣಿ ಸರವನ್ನು ಹಾಗೂ ಕೈಯಲ್ಲಿದ್ದ ಎರಡು ಬಂಗಾರದ ಕೈ ಬಳೆಗಳನ್ನು ಬಲಕತ್ಕಾರವಾಗಿ ಎಳೆದು ಕಸಿದುಕೊಂಡು ಹೋಗಿರುತ್ತಾರೆ. ಕರಿಮಣಿ ಸರ ಹಾಗೂ ಬಂಗಾರದ ಬಳೆಗಳ ಒಟ್ಟು ಮೌಲ್ಯ 1 ಲಕ್ಷದ 50 ಸಾವಿರ ಆಗಬಹುದು ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 31-08-2022 06:33 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080