ಅಭಿಪ್ರಾಯ / ಸಲಹೆಗಳು

Crime Report in Barke PS

ದಿನಾಂಕ 31-08-2023 ರಂದು ಮಧ್ಯಾಹ್ನ 12-30 ಗಂಟೆಗೆ ಮಂಗಳೂರು ನಗರದ ಲೇಡಿಹಿಲ್ ನ ಹೊಟೇಲ್ ಸಿ ವ್ಯೂವ್ ಬಳಿ ಅಮಲಿನಲ್ಲಿದ್ದಂತೆ ಕಂಡು ಬಂದ ಯುವಕನನ್ನು ವಿಚಾರಿಸಿದಾಗ ಉದಿತ್ ಪ್ರಾಯ: 24 ವರ್ಷ ವಾಸ: # 4 ಹೆಚ್, 58 ಎ, 2 ಮೈನ್ 8 ನೇ ಕ್ರಾಸ್  ಲ್ಯಾಂಡ್ ಲಿಂಕ್ಸ್ ಟೌನ್ ಶೀಪ್ ದೇರೆಬೈಲ್ ಕೊಂಚಾಡಿ ಮಂಗಳೂರು ಎಂಬವನಾಗಿದ್ದು   ಗಾಂಜಾ ಸೇವನೆ ಮಾಡಿರುವುದಾಗಿ ಕಂಡುಬಂದಿರುವ ಮೇರೆಗೆ  ಏ.ಜೆ ಆಸ್ಪತ್ರೆಯ ವೈಧ್ಯರ ಮುಂದೆ ಹಾಜರುಪಡಿಸಿದಲ್ಲಿ ವೈದ್ಯರು “Tetrahydracannabinoid (Marijuana) POSITIVE”  ಎಂಬುದಾಗಿ ದೃಡಪತ್ರವನ್ನು ನೀಡಿದ್ದು, ಆಪಾದಿತನ ವಿರುದ್ದ ಎನ್.ಡಿ.ಪಿ.ಎಸ್ ಕಾಯ್ದೆ  ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುವುದು ಎಂಬಿತ್ಯಾದಿಯಾಗಿರುತ್ತದೆ.

Mangalore East Traffic PS                    

ಪಿರ್ಯಾದಿದಾರರಾದ ನಸಿಕಾ ಶಾ, ಪ್ರಾಯ-40 ವರ್ಷ ಎಂಬವರು ಈ ದಿನ ದಿನಾಂಕ: 31-08-2023 ರಂದು ಸಮಯ ಸುಮಾರು 12:50 ಗಂಟೆಗೆ ರೆಡ್ ಕ್ಯಾಮಲ್ ಇಸ್ಲಾಮಿಕ್ ಶಾಲೆಯ ಬಸ್ಸು ನೊಂದಾಣಿ ನಂಬ್ರ: KA-51-B-7040 ನೇಯದರಲ್ಲಿ ಚಾಲಕ ಇಬ್ರಾಹಿಂ ರವರು ಚಲಾಯಿಸುತ್ತಿದ್ದು, ಪಿರ್ಯಾದಿದಾರರು ಶಾಲಾ ಮಕ್ಕಳೊಂದಿಗೆ ಪ್ರಯಾಣಿಸುತ್ತಾ ಬಿಕರ್ನಕಟ್ಟೆಗೆ ಬಂದು ಅಲ್ಲಿಂದ ದತ್ತನಗರದಲ್ಲಿ ಇಳಿಯಲಿದ್ದ ಪಿರ್ಯಾದಿದಾರರ ಶಾಲೆಯ ವಿದ್ಯಾರ್ಥಿಯೊಬ್ಬಳನ್ನು ಬಿಟ್ಟು ಬಿಕರ್ನಕಟ್ಟೆ ರಾ.ಹೆ 73 ನೇದನ್ನು ತಲುಪುತ್ತಿದ್ದಂತೆ ನಂತೂರು ಕಡೆಯಿಂದ KA-25-D-7943 ನೇ ಲಾರಿಯ ಚಾಲಕ ಸಾಜಿ ಎಂಬಾತನು ತನ್ನ ಬಾಬ್ತು ಲಾರಿಯನ್ನು  ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಪ್ರಯಾಣಿಸುತ್ತಿದ್ದ ಬಸ್ಸಿಗೆ ಡಿಕ್ಕಿಪಡಿಸಿದ ಪರಿಣಾಮ ಬಸ್ಸಿನ ಬಲಭಾಗವು ಜಖಂಗೊಂಡಿದ್ದು, ಬಸ್ಸಿನಲ್ಲಿದ್ದ ಪಿರ್ಯಾದಿದಾರರ ತಲೆಯ ಬಲಬದಿಗೆ ರಕ್ತಗಾಯ, ಬಲಕೈಯ ಮೊಣಗಂಟಿಗೆ ಗುದ್ದಿದ ರೀತಿಯ ಗಾಯವಾಗಿದ್ದು, LKG ವಿದ್ಯಾರ್ಥಿನಿ ಖತೀಜಾ, (2 ವರ್ಷ) ರವರಿಗೆ ತಲೆಗೆ ತರಚಿದ ರೀತಿಯ ಗಾಯವಾಗಿದ್ದು, ಪಿರ್ಯಾದಿದಾರರು ಚಿಕಿತ್ಸೆಯ ಬಗ್ಗೆ ಕೊಡಿಯಾಲಬೈಲ್  ಯೆನಪೋಯ ಆಸ್ಪತ್ರೆಗೆ ಹೋಗಿ ಚಿಕಿತ್ಸೆಯನ್ನು ಪಡೆದುಕೊಂಡಿದ್ದು, ಈ ಅಪಘಾತದಿಂದ ಬಸ್ಸಿನಲ್ಲಿದ್ದ ಉಳಿದ ಪ್ರಯಾಣಿಕರಿಗೆ ಗಾಯವುಂಟಾಗಿರುವುದಿಲ್ಲ. ಆದುದರಿಂದ ಸದ್ರಿ ಅಪಘಾತಕ್ಕೆ ಕಾರಣವಾಗಿರುವ  KA-25-D-7943 ನೇ ಲಾರಿಯ ಚಾಲಕ ಸಾಜಿ ರವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಎಂಬಿತ್ಯಾದಿ

Mangalore Rural PS

ದಿನಾಂಕ: 30-08-2023 ರಂದು ಪೂರ್ವಾಹ್ನ 11-15 ಗಂಟೆಗೆ ಮಂಗಳೂರು ನೀರುಮಾರ್ಗ ಗ್ರಾಮದ ನೀರುಮಾರ್ಗ ಅಂಚೆ ಕಛೇರಿಯ ಬಳಿಯಿರುವ ಉಡುಪ ಕ್ಲಿನಿಕ್ನ ಮುಂಭಾಗದ ಸಾರ್ವಜನಿಕ ರಸ್ತೆಯ ಬದಿಯಲ್ಲಿ ಆರೋಪಿಗಳಾದ ಮೊಹಮ್ಮದ್ ಶರೀಫ್, ಅಬ್ದುಲ್ ರಹಿಮಾನ್, ಚೇತನ್ ಹಾಗೂ ವಿಕ್ರಮ್ ರವರು ಪರಸ್ಪರ ಕೈ ಕೈ ಮಿಲಾಯಿಸಿಕೊಂಡು ಉರುಡಾಟ ನಡೆಸಿ ಕೈಯಿಂದ ಹೊಡೆದಾಡಿಕೊಂಡು ಸಾರ್ವಜನಿಕ ಶಾಂತಿ ನೆಮ್ಮದಿಗೆ ಭಂಗವುಂಟು ಮಾಡಿರುವವರನ್ನು ವಶಕ್ಕೆ ಪಡೆದುಕೊಂಡು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿರುವುದು ಎಂಬಿತ್ಯಾದಿ.

Moodabidre PS    

ದಿನಾಂಕ 29-08-2023 ರಂದು ಪಿರ್ಯಾದಿದಾರರ ಮೊಬೈಲ್ ನಂಬರ್ ಗೆ ವಾಟ್ಸಾಪ್ ನಲ್ಲಿ 9567969158 ನಂಬರ್ ನಿಂದ Mall- Groupon ಎಂಬ ವೆಬ್ ಸೈಟ್ ನಲ್ಲಿ ಪಾರ್ಟ್ ಟೈಮ್ ಉದ್ಯೋಗದ ಬಗ್ಗೆ ಮಾಹಿತಿ ಬಂದಿದ್ದು, ಅದರಲ್ಲಿ ಟಾಸ್ಕ್ ಗಳನ್ನು ಪೂರ್ತಿಗೊಳಿಸಿ ಹಣವನ್ನು ಪಡೆಯುವ ಬಗ್ಗೆ ತಿಳಿಸಿ, ನಂತರ Telegram app ನಲ್ಲಿ  Meera radish ಎಂಬ ಹೆಸರಿನ app Id- Info-@Arnold352 ನ್ನು ಸಂಪರ್ಕಿಸುವಂತೆ ತಿಳಿಸಿದ್ದು ಅದರಂತೆ ಪಿರ್ಯಾದಿದಾರರು Telegram App ನಲ್ಲಿ 9 ಆರ್ಡರ್ ನ ಟಾಸ್ಕ್ ನ್ನು ಪೂರ್ತಿಗೊಳಿಸುವ ಬಗ್ಗೆ ಹಂತ ಹಂತವಾಗಿ 91,996/- ರೂ ಹಣವನ್ನು ಜಮೆ ಮಾಡಿದ್ದು, ನಂತರ ಆರೋಪಿತರು ಯಾವುದೇ ಹಣವನ್ನು ಪಿರ್ಯಾದಿದಾರರಿಗೆ ವಾಪಾಸು ಜಮೆ ಮಾಡದೇ ಮೋಸ ಮಾಡಿರುವುದಾಗಿರುತ್ತದೆ ಎಂಬಿತ್ಯಾದಿ.

Ullal PS   

ಫಿರ್ಯಾದಿ Aysha ದಾರರ ಮಾಲಕತ್ವದ ಕೆಎ-19-ಎಂಎಂ-7395 ನೇ ರೆನಾಲ್ಟ್ ಕಂಪೆನಿಯ ಟ್ರೈಬರ್ ಕಾರನ್ನು 10 ದಿನಗಳ ಮಟ್ಟಿಗೆ ಮದುವೆ ಸಮಾರಂಭಕ್ಕೆಂದು ನಂಬಿಸಿ ಸಿನಾನ್ ಎಂಬಾತನು ದಿನಾಂಕ. 15-6-2023 ರಂದು ತೆಗೆದುಕೊಂಡು ಹೋಗಿ ನಂತರ ಅವರ ಮದುವೆ ಕಾರ್ಯಕ್ರಮ ಮುಗಿಯದ ಕಾರಣ ಹಾಗೂ ಅವರ ಬಂಧುಬಳಗದವರನ್ನು ಕರೆದುಕೊಂಡು ಹೋಗಲು ಇನ್ನೊಂದು ಕಾರಿನ ಅವಶ್ಯಕತೆ ಇರುವುದರಿಂದ ಫಿರ್ಯಾದಿದಾರರ ಮಾಲಕತ್ವದ ಕೆಎ-49-ಎಂ-1334 ನೇ ನಂಬ್ರದ ಇನ್ನೋವಾ ಕಾರನ್ನು ದಿನಾಂಕ. 2-7-2023 ರಂದು ಸಿನಾನ್ ತೆಗೆದುಕೊಂಡು ಹೋದ ನಂತರ ಕಾರನ್ನು ವಾಪಾಸು ತಂದು ಕೊಡದೇ ಇದ್ದಾಗ ಫಿರ್ಯಾದಿದಾರರು ಸಿನಾನ್ನ ಮೊಬೈಲ್ ನಂಬ್ರ 9008659407 ನೇಯದಕ್ಕೆ ಕರೆ ಮಾಡಿ ಕಾರನ್ನು ತಂದು ಕೊಡುವಂತೆ ಹೇಳಿದಾಗ ಸಿನಾನ್ ಫಿರ್ಯಾದಿದಾರರಿಂದ ಕೊಂಡು ಹೋದ ಕಾರನ್ನು ಮುಸ್ತಾಫನಿಗೆ ಕೊಟ್ಟಿದ್ದು, ಮುಸ್ತಾಫನು ಮನು ಎಂಬಾತನಿಗೆ ಕೊಟ್ಟಿರುವುದಾಗಿಯೂ. ಕಾರಿನ ದಾಖಲಾತಿಗಳನ್ನು ಅವರುಗಳ ಹೆಸರಿನಲ್ಲಿ ಮಾಡಿರುತ್ತಾರೆ, ಅವರುಗಳಿಂದ ಕಾರನ್ನು ತಂದು ಕೊಡುವುದಾಗಿ ಹೇಳಿದರೂ ತಂದು ಕೊಡದೇ ಸತಾಯಿಸಿದಾಗ ಕಾರು ತಂದು ಕೊಡದಿದ್ದರೆ ಪೊಲೀಸ್ ಸ್ಟೇಶನ್ನಲ್ಲಿ ಫಿರ್ಯಾದಿ ನೀಡುವುದಾಗಿ ಹೇಳಿದಾಗ ಪೊಲೀಸ್ ಸ್ಟೇಶನ್ಗೆ ಹೋದರೆ ನನಗೆ ಏನು ಮಾಡಬೇಕೆಂದು ಗೊತ್ತು, ನನಗೆ ಪ್ರಬಲ ವ್ಯಕ್ತಿಗಳ ಪರಿಚಯ ಇರುತ್ತದೆ. ನಿನ್ನ ಎರಡೂ ಕಾರುಗಳನ್ನು ಕಾನೂನು ಬಾಹಿರ ಚಟುವಟಿಕೆಗೆ ಉಪಯೋಗಿಸಿ ನಿನ್ನನ್ನು ಏನಾದರೂ ಮಾಡಿ ತೊಂದರೆ ಮಾಡುತ್ತೇವೆ ಎಂದು ಹೆದರಿಸಿ ಬೆದರಿಸಿ ಹೋಗಿರುವುದರಿಂದ ಸದ್ರಿಯವರುಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಫಿರ್ಯಾದಿದಾರರು ನೀಡಿದ ದೂರಿನ ಮೇರೆಗೆ ದಾಖಲಾದ ಪ್ರಕರಣದ ಸಾರಾಂಶ.

 

ಇತ್ತೀಚಿನ ನವೀಕರಣ​ : 31-08-2023 06:05 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080