ಅಭಿಪ್ರಾಯ / ಸಲಹೆಗಳು

Crime Report in  Mangalore Rural PS

ಪಿರ್ಯಾದಿ Mervin Sunil Pinto ದಾರರು ದಿನಾಂಕ:30-10-2023 ರಂದು ಇಲೆಕ್ಟ್ರಿಷಿಯನ್ ಕೆಲಸದ ಬಗ್ಗೆ  ವಾಮಂಜೂರಿಗೆ ಬಂದಿದ್ದು ,ವಾಮಂಜೂರು ಚರ್ಚ ಎದುರು ಇರುವ ಅಂಗಡಿಯ ಹೊರಗಡೆ ತನ್ನ ಬಾಬ್ತು ದ್ವಿಚಕ್ರ KA19-EV-9114 ನೇದನ್ನು  14.15 ಗಂಟೆಗೆ ನಿಲ್ಲಿಸಿ ಅಂಗಡಿ ಒಳಗಡೆ ವಯರಿಂಗ್ ಕೆಲಸಕ್ಕೆ  ಹೋಗಿ ವಾಪಾಸ್ಸು 10 ನಿಮಿಷ ಬಿಟ್ಟು ಬಂದು ನೋಡಿದಾಗ, ದ್ವಿಚಕ್ರ ವಾಹನ ಇಲ್ಲದೇ ಇದ್ದು, ಸದ್ರಿ ವಾಹನವನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಅದೇ ಪರಿಸರದಲ್ಲಿದ್ದ ಸಾರ್ವಜನಿಕರನ್ನು ವಿಚಾರಿಸಿದಾಗ ಯಾರೋ ಒಬ್ಬರು ಸದ್ರಿ ವಾಹನವನ್ನು  ಚಲಾಯಿಸಿಕೊಂಡು ಹೋಗಿರುವುದಾಗಿ ತಿಳಿಸಿರುತ್ತಾರೆ.  ಸದ್ರಿ ಕಳುವಾದ ದ್ವಿಚಕ್ರ ವಾಹನದ ವಿವರ ಈ ಕೆಳಗಿನಂತಿದೆ.

ಸದ್ರಿ ದ್ವಿಚಕ್ರ ವಾಹನವು KA19-EV-9114 ನಂಬ್ರದ ಕಪ್ಪು ಬಣ್ಣದ HONDA AVIATOR ಆಗಿದ್ದು ಇದರ ಇಂಜಿನ್ ನಂಬ್ರ JF21E82044576, ಚಾಸೀಸ್ ನಂಬ್ರ ME4JF21CFH8007360 ಆಗಿರುತ್ತದೆ. ಸದ್ರಿ ವಾಹನವು 2017 ನೇ ಸಾಲಿನದ್ದಾಗಿದ್ದು ಇದರ ಈಗಿನ ಅಂದಾಜು ಮೌಲ್ಯ 25,000/- ರೂ. ಆಗಿರುತ್ತದೆ. ಕಳವಾದ ಸದ್ರಿ ವಾಹನವನ್ನು ಎಲ್ಲಾ ಕಡೆ ಹುಡುಕಾಡಿ, ಪತ್ತೆಯಾಗದೇ ಇದ್ದು, ಕಳವಾದ ವಾಹನವನ್ನು  ಪತ್ತೆ ಮಾಡಿಕೊಡಬೇಕಾಗಿ  ಹಾಗೂ ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕಾಗಿ ದೂರು ನೀಡಿರುವುದಾಗಿದೆ.

   

Kankanady Town PS

ಪಿರ್ಯಾದಿ Karthik Sathish Poojari ದಾರರು ಮಂಗಳೂರಿನ ಪಡೀಲ್ ಬಳಿ ಇರುವ ಟೊಯೋಟಾ ಶೋ ರೂಮ್ ನಲ್ಲಿ ಸುಮಾರು ಆರು ತಿಂಗಳಿನಿಂದ ಟೆಕ್ನೀಷಿಯನ್ ಆಗಿ ಕೆಲಸ ಮಾಡಿಕೊಂಡಿದ್ದು ಪಿರ್ಯಾದಿದಾರರ  ಬಳಿ KA-19-EX-4562ನೇ ನಂಬ್ರದ ಹೋಂಡಾ ಡಿಯೋ ಸ್ಕೂಟರ್ ಇದ್ದು, ಇದರಲ್ಲಿ ದಿನ ನಿತ್ಯ ಮನೆಯಿಂದ ಬೆಳಿಗ್ಗೆ 08:30 ಗಂಟೆಗೆ ಕೆಲಸಕ್ಕೆ ಬಂದು ಸಂಜೆ 06:30 ಗಂಟೆಗೆ ಕೆಲಸ ಮುಗಿಸಿ ಮನೆಗೆ ಹೋಗುವುದಾಗಿದೆ. ಪಿರ್ಯಾದಿದಾರರು ಸ್ಕೂಟರನ್ನು ಟೊಯೋಟಾ ಶೋ ರೂಮ್ ಎದುರು ಕಾಂಪೌಂಡ್ ಹೊರಗೆ ಇರುವ ಖಾಲಿ ಜಾಗದಲ್ಲಿ ಪಾರ್ಕ್ ಮಾಡಿ ಕೆಲಸಕ್ಕೆ ಹೋಗುತ್ತಿದ್ದು, ದಿನಾಂಕ: 27.10.2023 ರಂದು ಎಂದಿನಂತೆ ಕೆಲಸಕ್ಕೆ ಬಂದವರು ಬೆಳಿಗ್ಗೆ 08:30 ಗಂಟೆ ಸುಮಾರಿಗೆ ಟೊಯೋಟಾ ಶೋ ರೂಮ್ ಎದುರು ಕಾಂಪೌಂಡ್ ಹೊರಗಡೆ ಖಾಲಿ ಜಾಗದಲ್ಲಿ ನನ್ನ ಸ್ಕೂಟರನ್ನು ಪಾರ್ಕ್ ಮಾಡಿ ಸಂಜೆ 6:30 ಗಂಟೆಗೆ ಕೆಲಸ ಮುಗಿಸಿ ಮನೆಗೆ ಹೋಗುವರೇ ಪಾರ್ಕ್ ಮಾಡಿದ್ದ ಸ್ಕೂಟರ್ ಇರುವ ಸ್ಥಳಕ್ಕೆ ಬಂದಾಗ ನಿಲ್ಲಿಸಿದ ಸ್ಥಳದಲ್ಲಿ ಸ್ಕೂಟರ್ ಇರದೇ ಇರುವುದು ಕಂಡು ಬಂತು. ಸ್ಕೂಟರನ್ನು ಪಾರ್ಕಿಂಗ್ ಮಾಡಿದ ಸ್ಥಳದ ಸುತ್ತಮುತ್ತ ಹುಡುಕಾಡಿದರೂ ಸ್ಕೂಟರ್ ಕಂಡು ಬಂದಿರುವುದಿಲ್ಲ. ಯಾರೋ ಕಳ್ಳರು ದಿನಾಂಕ: 27.10.2023 ರಂದು ಬೆಳಿಗ್ಗೆ 08:30 ಗಂಟೆಯಿಂದ ಸಂಜೆ 6:30 ಗಂಟೆಯ ಮಧ್ಯಾವದಿಯಲ್ಲಿ ಟೊಯೋಟಾ ಶೋ ರೂಮ್ ಎದುರು ಕಾಂಪೌಂಡ್ ಹೊರಗಡೆ ಖಾಲಿ ಜಾಗದಲ್ಲಿ ಲಾಕ್ ಮಾಡಿ ನಿಲ್ಲಿಸಿದ್ದ ನನ್ನ KA-19-EX-4562ನೇ ನಂಬ್ರದ ಸ್ಕೂಟರನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಳ್ಳತನವಾದ ಸ್ಕೂಟರನ್ನು ಈ ದಿನದ ವರೆಗೂ ಪಡೀಲ್ ಮತ್ತು ಇತರ ಕಡೆಗಳಲ್ಲಿ ಹುಡುಕಾಡಿದಲ್ಲಿ ಇದುವರೆಗೂ ಪತ್ತೆಯಾಗದೇ ಇರುವುದರಿಂದ ಈ ದಿನ  ಠಾಣೆಗೆ ಬಂದು ದೂರು ನೀಡುತ್ತಿರುವುದಾಗಿದೆ. ಆದ್ದರಿಂದ ಕಳ್ಳತನವಾದ KA-19-EX-4562ನೇ ನಂಬ್ರದ ಸ್ಕೂಟರನ್ನು ಪತ್ತೆ ಮಾಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂಬಿತ್ಯಾದಿ ಸಾರಾಂಶ.

Konaje PS

ಪಿರ್ಯಾದಿ Rafikದಾರರ ತಂಗಿ ಅಫ್ರಿನಾ ಪ್ರಾಯ (20) ವರ್ಷ ರವರು ದಿನಾಂಕ 30-10-2023 ರಂದು ಸಂಜೆ 3.30 ಗಂಟೆಗೆ ಅಬ್ದುಲ್ ಖಾದರ್ ಎಂಬವರ ಬಿಡಾರ ಮನೆಯಲ್ಲಿ ವಾಸವಾಗಿರುವ ಉಳ್ಳಾಲ ತಾಲೂಕು ಕೊಣಾಜೆ ಗ್ರಾಮದ ನಡುಪದವು ಎಂಬಲ್ಲಿಂದ ಕಾಣೆಯಾಗಿರುತ್ತಾರೆ.

Kankanady Town PS

ಪಿರ್ಯಾದು Mrs Umavathi ದಾರರು ತನ್ನ ಕುಟುಂಬದೊಂದಿಗೆ ಬ್ರಹ್ಮರಾಂಬಿಕ ನಿಲಯ, 5ನೇ ಅಡ್ಡರಸ್ತೆ, ಪ್ರಶಾಂತಿ ನಗರ ಎಂಬಲ್ಲಿ ತನ್ನ ಇಬ್ಬರು ಗಂಡು ಮಕ್ಕಳೊಂದಿಗೆ ವಾಸ ಮಾಡಿಕೊಂಡಿರುತ್ತಾರೆ. ಪಿರ್ಯಾದುದಾರರ ಮಗ ಪ್ರಣಾಮ್ (30) ರವರು ಸುಮಾರು ಮೂರು ವರ್ಷಗಳಿಂದ ಕೆಲಸಕ್ಕೆ ಹೋಗದೆ ಮನೆಯಲ್ಲಿ ಇರುವುದಾಗಿದೆ. ದಿನಾಂಕ:27.10.2023 ರಂದು ಸಂಜೆ 06:20 ಗಂಟೆಗೆ ಪಿರ್ಯಾದುದಾರರು ಶಾಲೆ ಕರ್ತವ್ಯ  ಮುಗಿಸಿ ಮನೆಗ ಬಂದಾಗ ಮನೆಯಲ್ಲಿ ಅವರ ದೊಡ್ಡ ಮಗ ಪ್ರಣಾಮ್ ಇರಲಿಲ್ಲ ಆತನ ಮೊಬೈಲ್ ಪೋನ್ ಕೂಡಾ ಮನೆಯಲ್ಲಿ ಇತ್ತು. ನಂತರ, ಅಕ್ಕ-ಪಕ್ಕದಲ್ಲಿ ವಿಚಾರಿಸಿದಾಗ ಯಾವುದೇ ಮಾಹಿತಿ ದೊರೆತಿರುವುದಿಲ್ಲ, ಹಾಗೂ ಅವನ ಬಗ್ಗೆ ಸ್ನೇಹಿತರಲ್ಲಿ, ಪರಿಚಯದವರಲ್ಲಿ, ಸಂಬಂದಿಕರಲ್ಲಿ, ಈ ತನಕ ವಿಚಾರಿಸಿದ್ದಲ್ಲಿ ಯಾವುದೇ ಮಾಹಿತಿ ದೊರೆತಿರುವುದಿಲ್ಲ, ಆತನನ್ನು ಎಲ್ಲಾ ಕಡೆಗಳಲ್ಲಿ ಹುಡುಕಾಡಿ ಪತ್ತೆಯಾಗದೆ ಇರುವುದರಿಂದ ಠಾಣೆಗೆ ದೂರು ನೀಡುತ್ತಿರುವುದಾಗಿದೆ. ಆದುದರಿಂದ ಕಾಣೆಯಾದ  ಪ್ರಣಾಮ್ ರವರನ್ನು ಪತ್ತೆ ಮಾಡಿಕೊಡಬೇಕಾಗಿ ತಮ್ಮಲ್ಲಿ ವಿನಂತಿ ಎಂಬಿತ್ಯಾದಿ.

ಚಹರೆ/ಗುರುತು:

ಹೆಸರು: ಪ್ರಣಾಮ್

ಪ್ರಾಯ: 30 ವರ್ಷ

ಎಣ್ಣೆ-ಕಪ್ಪು ಮೈಬಣ್ಣ, ಕೋಲು ಮುಖ, ಸಪೂರ ಶರೀರ.

 

2) ಪಿರ್ಯಾದು SUMAN ದಾರರು ತನ್ನ ಕುಟುಂಬದೊಂದಿಗೆ ಕಾಫಿ ಕ್ವೀವರಿಂಗ್ ಸೆಂಟರ್ ಹತ್ತಿರ, ಬೈರಾಪುರ ಗ್ರಾಮ, ಚಿಕ್ಕಮಗಳುರು ತಾಲ್ಲೂಕು ಎಂಬಲ್ಲಿ ವಾಸ ಮಾಡಿಕೊಂಡಿರುತ್ತಾರೆ. ದಿನಾಂಕ:27.10.2023 ರಂದು ಪಿರ್ಯಾದುದಾರರು ಮತ್ತು ಅವರ ಸ್ನೇಹಿತ ಪ್ರಸನ್ನ ಕುಮಾರ್ ಎಸ್.ಬಿ. (35) ರವರು ಸೇರಿಕೊಂಡು ಅವರ ತರಕಾರಿ ವ್ಯಾಪಾರದ ಹಣವನ್ನು ಸಂಗ್ರಹಿಸಲು ಅವರ ಬಾಬ್ತು KA-18-MA-2260 ನಂಬ್ರದ I20 ಕಾರಿನಲ್ಲಿ ತಮ್ಮ ಊರಿನಿಂದ ಹೊರಟು ರಾತ್ರಿ 07:00 ಗಂಟೆಗೆ ಮಂಗಳೂರಿಗೆ ಬಂದು ತಲುಪಿ ಸೆಂಟ್ರಲ್ ಮಾರ್ಕೆಟ್ ಬಳಿ ಲಾಡ್ಜ್ ಮಾಡಿ ದಿನಾಂಕ: 28.10.2023, 29.10.2023 ಎರಡು ದಿನ ಅಲ್ಲಿಯೇ ಉಳಿದುಕೊಂಡು ದಿನಾಂಕ:30.10.2023 ರಂದು 09:00 ಗಂಟೆಗೆ ಪ್ರಸನ್ ರವರ ಬಾಬ್ತು ಕಾರಿನಲ್ಲಿ ಮಂಗಳೂರಿನಿಂದ ಹೊರಟು ನೇತ್ರಾವತಿ ಗ್ಲೋಬಲ್ ಮಾರ್ಕೆಟಿಗೆ ಬಂದು ಅಲ್ಲಿಂದ ತರಕಾರಿ ವ್ಯಾಪಾರ ಮಾಡಿದ ಹಣವನ್ನು ಸಂಗ್ರಹಿಸಿಕೊಂಡು ಪ್ರಸನ್ ರವರ ಸಂಭಂದಿಯೊಬ್ಬರು ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಬಗ್ಗೆ ದಾಖಲಾಗಿದ್ದು, ಅವರ ಯೋಗಕ್ಷೇಮ ವಿಚಾರಿಸಿಕೊಂಡು ಹೊಗಲು ಇಬ್ಬರು ಆಸ್ಪತ್ರೆಗೆ ಬಂದಿದ್ದು, ಪಿರ್ಯಾದುದಾರರನ್ನು ಆಸ್ಪತ್ರೆಯ ಬಳಿ ಕಾರಿನಿಂದ ಇಳಿಸಿ ಕಾರನ್ನು ಪಾರ್ಕ್ ಮಾಡಿ ಬರುತ್ತೇನೆಂದು ಹೇಳಿ ಹೋದವರು, ಸುಮಾರು ಸಮಯದ ಬಳಿಕ ಪಿರ್ಯಾದುದಾರರ ಮೊಬೈಲ್ ಗೆ ಪ್ರಸನ್ ರವರ ಪತ್ನಿ ಶ್ವೇತಾ ರವರು ಪೋನ್ ಮಾಡಿ  ಗಂಡ ನೇತ್ರಾವತಿ ನದಿಯ ಬಳಿ ನನ್ನ ಗಂಡನ ಕಾರು ಇದೆ ನೀವು ಕೂಡಲೇ ಅಲ್ಲಿಗೆ ಹೋಗಿ ನೋಡಿ ಎಂದು ತಿಳಿಸಿದಂತೆ ಕೂಡಲೇ ಆಸ್ಪತ್ರೆ ಬಳಿಯಿಂದ ಅಟೋ ಮುಖಾಂತರ ನೇತ್ರಾವತಿ ಸಂಕದ ಬಳಿ ಹೋಗಿ ನೋಡಲಾಗಿ ಅವರ ಕಾರು ಮಾತ್ರ ಇದ್ದು, ಪ್ರಸನ್ ಕುಮಾರ್ ರವರು ಇರಲಿಲ್ಲ, ನಂತರ ಅಲ್ಲಿದ್ದ ಜನರಲ್ಲಿ ವಿಚಾರಿಸಲಾಗಿ ಯಾರೋ ಒಬ್ಬರು ನೀರಿನಲ್ಲಿ ಹಾರಿರಬಹುದು ಎಂಬುದಾಗಿ ಸಂಶಯ ವ್ಯಕ್ತಪಡಿಸಿರುತ್ತಾರೆ. ಆದುದರಿಂದ ಕಾಣೆಯಾದ ಪ್ರಸನ್ ಕುಮಾರ್ ರವರನ್ನು ಪತ್ತೆ ಮಾಡಿಕೊಡಬೇಕಾಗಿ ತಮ್ಮಲ್ಲಿ ವಿನಂತಿ ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 31-10-2023 03:15 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080