Crime Reported in : Mangalore East Traffic PS
ಪಿರ್ಯಾದಿದಾರರಾದ ವಿನೋದ್ ದಿನಾಂಕ: 01/10/2022 ರಂದು ನಂತೂರು ಜಂಕ್ಷನ್ನಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಕೆ.ಪಿ.ಟಿ ಕಡೆಯಿಂದ ಖಾಸಗಿ ಬಸ್ ನೊಂದಣಿ ಸಂಖ್ಯೆ: KA-20-AA-7910 ನೇಯದನ್ನು ಅದರ ಚಾಲಕನು ದುಡುಕುತನ, ನಿರ್ಲಕ್ಷ್ಯತನದಿಂದ ಅಪಾಯಕಾರಿಯಾಗಿ ಚಲಾಯಿಸಿಕೊಂಡು ಬಂದು ವೃತ್ತ ಬಳಸಿ ಶಿವಭಾಗ್ ಕಡೆಗೆ ಹೋಗುವ ಭರದಲ್ಲಿ ರಸ್ತೆ ಬದಿಯ ಡಿವೈಡರ್ ಬಳಿ ನಿಂತುಕೊಂಡಿದ್ದ ಪಿರ್ಯಾದಿದಾರರ ಹಿಂಭಾಗಕ್ಕೆ ಢಿಕ್ಕಿಪಡಿಸಿದ ಪರಿಣಾಮ ಪಿರ್ಯಾದಿದಾರರು ಮುಂದಕ್ಕೆ ಎಸೆಯಲ್ಪಟ್ಟು ರಸ್ತೆಗೆ ಬಿದ್ದಿದ್ದು ಇದರಿಂದ ಪಿರ್ಯಾದಿದಾರರ ಎರಡೂ ಮುಂಗೈಗಳಿಗೆ ತರಚಿದ ಗಾಯಗಳು ಹಾಗೂ ಎದೆಗೆ, ಸೊಂಟಕ್ಕೆ, ಗುದ್ದಿದ ರೀತಿಯ ಒಳಪೆಟ್ಟಾದ ಗಾಯಗಳಾಗಿದ್ದು ಅಲ್ಲದೇ ಪಿರ್ಯಾದಿದಾರರ ವಾಚ್, ಮೊಬೈಲ್ ಫೋನ್ ಜಖಂಗೊಂಡಿದ್ದು ಸಾರ್ಜಜನಿಕರು ಸ್ಥಳದಲ್ಲಿ ಉಪಚರಿಸಿ ಚಿಕಿತ್ಸೆ ಬಗ್ಗೆ ಫಾದರ್ ಮುಲ್ಲರ್ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುತ್ತಾರೆ, ಆದುದರಿಂದ ಈ ರಸ್ತೆ ಅಪಘಾತದ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿಕೆ ಎಂಬಿತ್ಯಾದಿ.
Crime Reported in : Konaje PS
ಮಂಗಳೂರು ನಗರ ಅಪರಾಧ ಪತ್ತೆ ವಿಭಾಗದ ಪೊಲೀಸ್ ಉಪ ನಿರೀಕ್ಷಕರಾದ ರಾಜೇಂದ್ರ ಬಿ ರವರು ಈ ದಿನ ದಿನಾಂಕ 30.09.2022 ರಂದು ಕರ್ತವ್ಯದಲ್ಲಿರುವಾಗ ರಾತ್ರಿ ಸುಮಾರು 21.00 ಗಂಟೆಗೆ ಕೊಣಾಜೆ ಠಾಣಾ ವ್ಯಾಪ್ತಿಯ ಪಾವೂರು ಗ್ರಾಮದ ಇನೋಳಿ ಕೋರಿಯಾ ಎಂಬಲ್ಲಿ ಅಕ್ರಮವಾಗಿ ಮರಳು ದಾಸ್ತನು ಇರಿಸಿರುವುದು ಕಂಡು ಬಂದಿದ್ದು, ಪಿರ್ಯಾದಿದಾರರು ಸ್ಥಳೀಯರಲ್ಲಿ ವಿಚಾರಿಸಲಾಗಿ ಝಾಹಿದ್ ಮಲಾರ್, ನಾಸೀರ್ ಮಲಾರ್, ಅಬ್ದುಲ್ಲ ಮಲಾರ್, ಇರ್ಫಾನ್ ಮಲಾರ್, ಮಜೀದ್ ಮಲಾರ್, ಅಜ್ಮಲ್ ಮಲಾರ್, ಬದ್ರುದ್ದೀನ್ ಪಾನೆಲ ಹಾಗೂ ಆರ್ ಕೆ ಸಿ ನಝೀರ್ ಪಾನೆಲ ಎಂಬವರು ನೇತ್ರಾವತಿ ನದಿ ಭಾಗದಿಂದ ಮರಳನ್ನು ಕಳ್ಳತನ ಮಾಡಿಕೊಂಡು ಬಂದಿರುವುದಾಗಿ ತಿಳಿದು ಬಂದಿರುತ್ತದೆ. ಯಾವುದೇ ಪರವಾನಿಗೆಯಿಲ್ಲದೇ ನೇತ್ರಾವತಿ ನದಿಯಿಂದ ಮರಳನ್ನು ಕದ್ದು ಸರಕಾರಕ್ಕೆ ಯಾವುದೇ ರಾಜಸ್ವವನ್ನು ಪಾವತಿಸದೇ, ಅಕ್ರಮವಾಗಿ ದಾಸ್ತಾನು ಮಾಡಿದ ಸುಮಾರು 8 ಮರಳಿನ ದಿಬ್ಬಗಳನ್ನು (ಸುಮಾರು 20 ಲೋಡ್ ಗಳಷ್ಟು ಮರಳು) ಪಿರ್ಯಾದಿದಾರರು ವಶಕ್ಕೆ ಪಡೆದು ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ದೂರು ನೀಡಿರುತ್ತಾರೆ ಎಂಬಿತ್ಯಾದಿ
Crime Reported in: Traffic North PS
1)ದಿನಾಂಕ: 30-09-2022 ರಂದು ಪಿರ್ಯಾದಿದಾರರಾದ ಶಿವಾನಂದ ಮತ್ತು ಹೆಚ್. ಕರುಣಾಕರ್ ರಾವ್ ಬೆಳಿಗ್ಗೆ ವಾಕಿಂಗ್ ಹೋದವರು ಕೊಂಚಾಡಿ ಕಡೆಗೆ ಬರುತ್ತಾ ದೇರೆಬೈಲಿನ ತಿಲಕ್ ರೆಸ್ಟೋರೆಂಟ್ ಬಳಿ ತಲುಪುತ್ತಿದ್ದಂತೆ ಕುಂಟಿಕಾನ ಜಂಕ್ಷನ್ ಕಡೆಯಿಂದ KA-19-R-2276 ನಂಬ್ರದ ಸ್ಕೂಟರನ್ನು ಅದರ ಸವಾರ ರಾಹುಲ್ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ವೇಗವಾಗಿ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಬಲಭಾಗದಲ್ಲಿ ನಡೆದುಕೊಂಡು ಬರುತ್ತಿದ್ದ ಕರುಣಾಕರ್ ರಾವ್ ರವರಿಗೆ ರಭಸವಾಗಿ ಡಿಕ್ಕಿ ಹೊಡೆದ ಪರಿಣಾಮ ಕರುಣಾಕರ್ ರಾವ್ ಮತ್ತು ಸ್ಕೂಟರ್ ಸವಾರ ಸ್ಕೂಟರ್ ಸಮೇತ ಕಾಂಕ್ರೀಟ್ ರಸ್ತೆಗೆ ಬಿದ್ದು ಮುಂದಕ್ಕೆ ತಳ್ಳಿಕೊಂಡು ಹೋಗಿರುತ್ತಾರೆ. ಈ ಅಪಘಾತದಿಂದ ಕರುಣಾಕರ್ ರಾವ್ ರವರಿಗೆ ಗಂಭೀರ ಸ್ವರೂಪದ ಗಾಯವಾಗಿ ಚಿಕಿತ್ಸೆಯ ಬಗ್ಗೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಾರಿಮಧ್ಯೆ ಮೃತಪಟ್ಟಿದ್ದು, ಹಾಗೂ ಅಪಘಾತದಿಂದ ಸ್ಕೂಟರ್ ಸವಾರ ರಾಹುಲ್ ನಿಗೂ ಕೂಡ ಗಲ್ಲಕ್ಕೆ, ಮೈ, ಕೈಗೆ ಅಲ್ಲಲ್ಲಿ ಗಾಯಗಳಾಗಿದ್ದು ಎಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ. ಎಂಬಿತ್ಯಾದಿ.
2) ದಿನಾಂಕ: 30-09-2022 ರಂದು ಪಿರ್ಯಾದಿದಾರ Ananda Shettigar ಹೆಂಡತಿಯ ಅಕ್ಕನ ಗಂಡನಾದ ಜನಾರ್ದನ ಶೆಟ್ಟಿಗಾರ್ ರವರು ಕೆಮ್ಮಾಜೆ ಜಂಕ್ಷನಿ ನಲ್ಲಿ ನಡೆದುಕೊಂಡು ರಸ್ತೆಯ ಆಚೆ ಬದಿಗೆ ದಾಟತ್ತಿದ್ದಾಗ ಬೆಳಿಗ್ಗೆ ಸಮಯ ಮೂಡಬಿದ್ರೆ ಕಡೆಯಿಂದ ಪಿಕಪ್ ವಾಹನ ನಂಬ್ರ KA-19-AC-1700 ನೇಯದನ್ನು ಅದರ ಚಾಲಕನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಮಾನವ ಜೀವಕ್ಕೆ ಅಪಾಯಕಾರಿ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಜನಾರ್ದನ ಶೆಟ್ಟಿಗಾರ್ ರವರಿಗೆ ಡಿಕ್ಕಿ ಹೊಡೆದ ಪರಿಣಾಮ ಅವರು ಡಾಮಾರು ರಸ್ತೆಗೆ ಬಿದ್ದು ಎರಡೂ ಕೈಗಳಿಕೆ, ಎರಡೂ ಕಾಲುಗಳಿಗೆ ಹಾಗೂ ಸೊಂಟದ ಭಾಗದಲ್ಲಿ ಗುದ್ದಿದ ಹಾಗೂ ರಕ್ತ ಗಾಯವಾಗಿದ್ದು ಅಲ್ಲಿದ್ದ ಸ್ಥಳೀಯರು ಅವರನ್ನು ಮೂಡಬಿದ್ರೆಯ ಆಳ್ವಾಸ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಸಿರುವುದಾಗಿಯೂ, ಅಪಘಾತ ಪಡಿಸಿದ ವಾಹನವನ್ನು ಅದರ ಚಾಲಕನು ಸ್ಥಳದಲ್ಲಿ ನಿಲ್ಲಿಸದೇ ಚಲಾಯಿಸಿಕೊಂಡು ಹೋಗಿದ್ದು ವಾಹನ ಚಾಲಕನ ಹೆಸರು ತಿಳಿದು ಬಂದಿರುವುದಿಲ್ಲ ಎಂಬಿತ್ಯಾದಿ
Crime Reported in: Mangalore South PS
ಮಂಗಳೂರು ತಾಲೂಕು ತಹಶೀಲ್ದಾರ್ ಹಾಗೂ ಕಾರ್ಯ ನಿರ್ವಾಹಕ ದಂಡಾಧಿಕಾರಿಯವರ ಕಛೇರಿಯಲ್ಲಿ ಗ್ರಾಮ ಕರಣಿಕರು (ನಿಯೋಜನೆ) ಆಗಿ ಕರ್ತವ್ಯದಲ್ಲಿದ್ದ, ಕು.ಅಲ್ವಿಶಾ ಪ್ರಸಿಲ್ಲಾ ಡಿಸೋಜಾ ರವರು ದಿನಾಂಕ 29-09-2022 ರಂದು ಸಂಜೆ ಕಛೇರಿಯಲ್ಲಿ ಸರಕಾರಿ ಕರ್ತವ್ಯದಲ್ಲಿದ್ದ ಸಮಯ ಅಲ್ಲಿಗೆ ಜಾತಿ ಮತ್ತು ಆದಾಯ ದೃಢಪತ್ರಕ್ಕೆ ಸಂಬಂಧಿಸಿ ಕ್ಲೀವ್ ಚಾರ್ಲ್ಸ್ ನೊರೋನ್ಹಾ ಎಂಬುವರ ಅರ್ಜಿಯ ಕುರಿತು ಓರ್ವ ವ್ಯಕ್ತಿ ಹಾಗೂ ಓರ್ವ ಮಹಿಳೆ ಬಂದವರು ಸದ್ರಿ ಅರ್ಜಿಯ ಕುರಿತು ಕು.ಅಲ್ವಿಶಾ ಪ್ರಸಿಲ್ಲಾ ಡಿಸೋಜಾ ರವರಲ್ಲಿ ವಿಚಾರಿಸಿ ಅವರಿಗೆ ಅವ್ಯಾಷ ಶಬ್ದಗಳಿಂದ ಬೈದು ಟೇಬಲ್ ಮೇಲಿದ್ದ ಕಡತಗಳನ್ನು ಎಳೆದಾಡಿ ಅವುಗಳನ್ನು ಕು.ಅಲ್ವಿಶಾ ಪ್ರಸಿಲ್ಲಾ ಡಿಸೋಜಾ ರವರ ಮೇಲೆ ಎಸೆದು ಮತ್ತು ಅವರಿಗೆ ಸ್ಟೆಪ್ಲರ್ ನಿಂದ ಹೊಡೆದು ಅವರ ಮೈಯನ್ನು ಪರಚಿ ದೈಹಿಕ ಹಲ್ಲೆ ನಡೆಸಿ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಮಾಡಿರುತ್ತಾರೆ, ಎಂಬಿತ್ಯಾದಿಯಾಗಿ ಮಂಗಳೂರು ತಾಲೂಕು ತಹಶೀಲ್ ದಾರರು ಹಾಗೂ ತಾಲೂಕು ಕಾರ್ಯ ನಿರ್ವಾಹಕ ದಂಡಾಧಿಕಾರಿ ರವರು ನೀಡಿದ ಪಿರ್ಯಾದಿಯ ಸಾರಾಂಶವಾಗಿರುತ್ತದೆ
Crime Reported in: Bajpe PS
ಪಿರ್ಯಾದಿದಾರ Kiran Poojary ದಿನಾಂಕ 29.09.2022 ರಂದು ತಮ್ಮ ಸ್ನೇಹಿತರಾದ ಸುಮನ್ ಮತ್ತು ಅಕ್ಷಯ್ ರೊಂದಿಗೆ ಮಂಗಳೂರು ತಾಲೂಕು ಕೊಳಂಬೆ ಗ್ರಾಮದ ಸುಂಕದಕಟ್ಟೆಯಲ್ಲಿರುವ ಅಮ್ಮ ಜನರಲ್ ಸ್ಟೋರ್ ಹತ್ತಿರ ಇದ್ದಾಗ ಪಿರ್ಯಾದಿದಾರರ ಕಾರಿನ ಮುಂದೆ ಬಜಪೆ ಕಡೆಯಿಂದ ಕೈ ಕಂಬದ ಕಡೆಗೆ ವೇಗವಾಗಿ ಹೋಗುತಿದ್ದ ಜೊಸೆಫ್ ಎಂಬ ಹೆಸರಿನ ಬಸ್ಸ್ ನಂ KA51AF7300 ನ್ನು ಅದರ ಚಾಲಕನಾದ ಪುನೀತ್ ತನ್ನ ಮುಂದಿನ ವಾಹನವನ್ನು ಓವರ್ ಟೇಕ್ ಮಾಡಲು ಹೋಗಿ ಬಸ್ಸನ್ನು ಅತೀವೇಗ ಮತ್ತು ಅಜಾಗರುಕತೆಯಿಂದ ತೀರಾ ಬಲಕ್ಕೆ ಚಲಾಯಿಸಿದ್ದರಿಂದ ಕೈಕಂಬ ಕಡೆಯಿಂದ ಬಜಪೆ ಕಡೆಗೆ ಹೋಗುತಿದ್ದ ಬೈಕ್ ಗೆ ಡಿಕ್ಕಿ ಮಾಡಿದ್ದರಿಂದ ಬೈಕ್ ಸವಾರ ರಸ್ತೆಗೆ ಬಿದ್ದನು ನಂತರ ಪಿರ್ಯಾದಿದಾರರು ಬೈಕ್ ಸವಾರನ ಬಳಿ ಹೋಗಿ ನೋಡಲಾಗಿ ಆತನನ್ನು ಉಪಚರಿಸಿ ಆತನ ಕಿಸೆಯಲ್ಲಿದ್ದ ಆಧಾರ್ ಕಾರ್ಡ್ ನೋಡಲಾಗಿ ಅವನ ಹೆಸರು ಅಭಿಷೇಕ್ ಕೊಟ್ರೇಶ್ ಜ್ಯೋತಿಬಣ್ಣದ ಹಾವೇರಿ ಜಿಲ್ಲೆ ಎಂಬುದಾಗಿದ್ದು ನಂತರ ಪಿರ್ಯಾದಿದಾರರ ಗಾಯಾಳು ಅಭಿಷೇಕ್ ನನ್ನು ಹತ್ತಿರದ ಫಾಧರ್ ಮುಲ್ಲರ್ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿ ವೈದ್ಯರು ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕತ್ಸೆಯ ಬಗ್ಗೆ ಮಂಗಳೂರಿನ ಕಂಕನಾಡಿಯಲ್ಲಿರುವ ಫಾಧರ್ ಮುಲ್ಲರ್ ಆಸ್ಪತ್ರೆಗೆ ಕಳುಹಿಸಿದ್ದು ಗಾಯಾಳು ಅಭಿಷೇಕ್ ಕೊಟ್ರೇಶ್ ಅದಾಗಲೇ ಮೃತಪಟ್ಟಿರುವುದಾಗಿ ವೈಧ್ಯರು ತಿಳಿಸಿರುತ್ತಾರೆ ಎಂಬಿತ್ಯಾದಿ
Crime Reported in: Ullal PS
ದಿನಾಂಕ 29-09-2022 ರಂದು ಬೆಳಿಗ್ಗೆ ಸಮಯಕ್ಕೆ ಫಿರ್ಯಾದಿದಾರರಾದ ಮಾಸಾಬಿ ರವರು ಅವರ ಗಂಡ ಅನ್ವರ್ ಸಾಬ್ ಖಿಲೆದಾರ್ ರವರ ಚಿಕಿತ್ಸೆ ಬಗ್ಗೆ ಮಗ xxxx (10) ಹಾಗೂ ಮಗಳಾದ xxxxx(10) ಎಂಬವರನ್ನು ಉಳ್ಳಾಲದ ಬಸ್ತಿಪಡ್ಪು ಮನೆಯಲ್ಲಿ ಬಿಟ್ಟು ಮಂಗಳೂರು ನಗರದ ವೆನಲಾಕ್ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದು ವಾಪಾಸು ಸಂಜೆ 05-00 ಗಂಟೆಯ ಸಮಯಕ್ಕೆ ಮನೆಗೆ ಬಂದಾಗ ಮಗಳಾದ xxxxx 10 ವರ್ಷ ಎಂಬುವಳು ಬೆಳಿಗ್ಗೆ 10-30 ಗಂಟೆಯ ಸಮಯಕ್ಕೆ ಹೋರಗಡೆ ಹೋಗಿ ಬರುತ್ತೇನೆ ಎಂದು ಮಗ xxxx ಹತ್ತಿರ ಹೇಳಿ ಹೋದವಳು ಬಾರದೆ, ಕಾಣೆಯಾಗಿದ್ದು ಅಥವಾ ಯಾರೋ ಅಪಹರಣ ಮಾಡಿರಬಹುದಾದ ಬಗ್ಗೆ ಶಂಕೆ ಇದ್ದು, ಮಗಳು xxxxಎಂಬುವಳನ್ನು ಪತ್ತೆ ಮಾಡಿ ಕೊಡಬೇಕಾಗಿ ಎಂಬಿತ್ಯಾದಿಯಾಗಿರುತ್ತದೆ.