Feedback / Suggestions

Crime Reported in : Mangalore East Traffic PS                                                  

 ದಿನಾಂಕ 01-12-2022 ರಂದು ಪಿರ್ಯಾದಿದಾರರಾದ ಮಹಾದೇವ ಕಲ್ಕೂರ ರವರು ತನ್ನ ಬಾಬ್ತು KA-50-P 5611 ನೊಂದಣಿ ನಂಬ್ರದ ಕಾರಿನಲ್ಲಿ ಸಂಬಂಧಿ ಶರತ್ ಹಾಗೂ ಗೆಳೆಯ ವಿಜಯ್ ರವರೊಂದಿಗೆ ಪಡುಬಿದ್ರೆ ಕಡೆಯಿಂದ  ಮಂಗಳೂರು ಕಡೆಗೆ ರಾ.ಹೆ. 66 ರಲ್ಲಿ ಚಲಾಯಿಸಿಕೊಂಡು ಬರುತ್ತಾ ಬೆಳಿಗ್ಗೆ ಸಮಯ ಸುಮಾರು 10.40 ಗಂಟೆಗೆ ಕುಂಟಿಕಾನ ಪ್ಲೈಓವರ್ ಮೇಲುಗಡೆ ಎ.ಜೆ. ಆಸ್ಪತ್ರೆಯ ಎದುರುಬದಿ ಬಂದು ತಲುಪುತ್ತಿದ್ದಂತೆ  ಪಿರ್ಯಾದಿದಾರರ ಕಾರಿನ ಹಿಂಬದಿಯಿಂದ KA-51-AB-6464  ನಂಬ್ರದ  ಬಸ್ಸನ್ನು ಅದರ ಚಾಲಕ ಹರ್ಷ ಎಂಬಾತನು ಅತೀ ವೇಗ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಕಾರಿನ ಬಲ ಬದಿ ಹಿಂಬದಿಗೆ ಡಿಕ್ಕಿಪಡಿಸಿದ್ದು, ಇದರ ಪರಿಣಾಮ ಕಾರು ಪಿರ್ಯಾದಿದಾರರ ನಿಯಂತ್ರಣ ತಪ್ಪಿ ಡಿಕ್ಕಿಯ ರಭಸಕ್ಕೆ ಮುಂದಕ್ಕೆ ಹೋಗಿ ರಸ್ತೆ ಮಧ್ಯದಲ್ಲಿ ಆಳವಡಿಸಿರುವ ಡಿವೈಡರ್ ಗೆ ಡಿಕ್ಕಿಯಾಗಿದ್ದು, ಕಾರಿನ ಬಲ ಭಾಗದ ಹಿಂಬದಿ, ಎಡಭಾಗದ ಬಂಪರ್, ಬಲ ಭಾಗದ ಹಿಂಬದಿಯ ಡೋರ್ ಹಾಗೂ ಹಿಂಬದಿಯ ಪ್ಯಾನಲ್, ಎಡ ಭಾಗದ ಮುಂದಿನ ಟಯರ್ ಜಖಂಗೊಂಡಿರುತ್ತದೆ. ಈ ಅಪಘಾತದಲ್ಲಿ ಯಾರಿಗೂ ಯಾವುದೇ ರೀತಿಯ  ಗಾಯಗಳಾಗಿರುವುದಿಲ್ಲ ಎಂಬಿತ್ಯಾದಿ.

Mangalore South PS            

ದಿನಾಂಕ 30-11-2022 ರಂದು ರಾತ್ರಿ 20-00 ಗಂಟೆಯಿಂದ ದಿನಾಂಕ 01-12-2022 ರಂದು ಬೆಳಿಗ್ಗೆ 11-00 ಗಂಟೆಯ ಮದ್ಯಾವಧಿಯಲ್ಲಿ ಯಾರೋ ಕಳ್ಳರು ಮಂಗಳೂರು ನಗರದ ಹೊಸ ದಕ್ಕೆಯಲ್ಲಿ ತೆರೆದ ಸ್ಥಳದಲ್ಲಿ ಶೇಖರಣೆ ಮಾಡಿಟ್ಟಿದ್ದ ಪಿರ್ಯಾದುದಾರರ ಪಾಲುದಾರಿಕೆಯ ಸೀಕೋ ಪಿಶರೀಸ್ ಪರ್ಮುಗೆ ಸೇರಿದ 3,000/- ಜಂಬೋ ಪ್ಲಾಸ್ಟೀಕ್ ಬಾಕ್ಸ್ ಗಳ ಪೈಕಿ 100 ಪ್ಲಾಸ್ಟೀಕ್  ಬಾಕ್ಸ್ ಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಕಳವಾದ ಬಾಕ್ಸ್ ನಲ್ಲಿ SECO MAQ ಎಂಬುದಾಗಿ ಇಂಗ್ಲೀಪ್ ನಲ್ಲಿ ಬರೆದಿದ್ದು ಕಳವಾದ ಸೊತ್ತಿನ ಅಂದಾಜು ಮೌಲ್ಯ 70,000/- ರೂಪಾಯಿ ಆಗಬಹುದು ಪಿರ್ಯಾದಿದಾರರು ಬಾಕ್ಸ್ ಗಳನ್ನು ಪರಿಶೀಲನೆ ಮಾಡಿ ತಾಳೆ ನೋಡಿ ಕಳವಾಗಿರುವುದನ್ನು ದೃಡಪಡಿಸಿ ಠಾಣೆಗೆ ಬಂದು ಪಿರ್ಯಾದು ನೀಡಿರುವುದಾಗಿದೆ ಎಂಬಿತ್ಯಾದಿಯಾಗಿರುತ್ತದೆ

 

Last Updated: 01-12-2022 06:36 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : Mangaluru City Police
Designed, Developed and Hosted by: Center for e-Governance - Web Portal, Government of Karnataka © 2024, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080